ಅಜಾಗರೂಕ ಚಾಲನೆ ಕೇಸ್: ಲ್ಯಾಂಬೋರ್ಗಿನಿಯಲ್ಲೇ ತೆರಳಿ ರಸ್ತೆ ಕ್ಲೀನ್ ಮಾಡಿ ಬರ್ತೀರಾ?; ಅರ್ಜಿದಾರರಿಗೆ ಕೋರ್ಟ್ ಪ್ರಶ್ನೆ
ಬೆಂಗಳೂರು, ಏಪ್ರಿಲ್ 10: ಮೈಸೂರು ರಸ್ತೆಯಲ್ಲಿ ಲ್ಯಾಂಬೋರ್ಗಿನಿ ಕಾರು ಅಜಾಗರೂಕ ಚಾಲನೆ ಕೇಸ್ ಸಂಬಂಧ ಪ್ರಕರಣ ರದ್ದು ಕೋರಿ ಕಾರು ಚಲಾಯಿಸಿದ್ದ ವ್ಯಕ್ತಿ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ಸಮುದಾಯ ಸೇವೆ ಮಾಡುವ ಷರತ್ತಿನಡಿ ಕೇಸ್ ರದ್ದುಪಡಿಸುವುದಾಗಿ ಮೌಖಿಕವಾಗಿ ಸೂಚಿಸಿದೆ. ಬಿ.ಆರ್.ಚಿರಂತ್ ಎಂಬವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ವೇಳೆ, ಪಶ್ಚಾತ್ತಾಪ ರೂಪದಲ್ಲಿ ಸಮುದಾಯ ಸೇವೆ ಮಾಡುವುದಾಗಿ ವಕೀಲರ ಪ್ರಸ್ತಾವಿಸಿದ್ದರು. ಹೊಸ ಕಾನೂನಿನಲ್ಲಿ ಇದಕ್ಕೆ ಅವಕಾಶವಿದೆ ಎಂದು ವಾದಿಸಿದ್ದರು. ಅರ್ಜಿದಾರರ ಪರ ವಾದ ಆಲಿಸಿದ ನ್ಯಾ.ಎಂ.ನಾಗಪ್ರಸನ್ನ ಅವರಿದ್ದ…