ಬಂಟ್ವಾಳ: ಮಗಳ ಜೊತೆಗೇ ತಾಯಿ ಕೂಡ ಪಿಯುಸಿ ಪಾಸ್! ಪತ್ನಿಯ ಕನಸಿಗೆ ಸೇತುವೆಯಾದ ಪತಿ
ಬಂಟ್ವಾಳ, ಏ.10: ನೆನ್ನೆ (ಏ.9) ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದೆ. ಜಿಲ್ಲಾವಾರು ಫಲಿತಾಂಶದಲ್ಲಿ ಉಡುಪಿ ಪ್ರಥಮ ಸ್ಥಾನ ಹಾಗೂ ದಕ್ಷಿಣ ಕನ್ನಡ ದ್ವಿತೀಯ ಬಂದಿದೆ. ದಕ್ಷಿಣ ಕನ್ನಡ ಈ ಹಿಂದೆ ಮೊದಲ ಸ್ಥಾನವನ್ನು ಪಡೆದುಕೊಂಡಿತ್ತು. ಇದೀಗ ಇದರ ನಡುವೆ ಒಂದು ಅಪರೂಪದ ಸಾಧನೆಯೊಂದು ವೈರಲ್ ಆಗಿದೆ. ಅಮ್ಮ ಮತ್ತು ಮಗಳು ಇಬ್ಬರು ಪರೀಕ್ಷೆ ಬರೆದು ಪಾಸ್ ಆಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕೈಕಂಬದ ತಾಯಿ ಮತ್ತು ಮಗಳು ಏಕಕಾಲದಲ್ಲಿ ಉತ್ತೀರ್ಣರಾಗುವ ಮೂಲಕ ಜಿಲ್ಲೆಯ ಗಮನ…