Headlines

ಜೋಂಬಿ ಡ್ರಗ್ಸ್ ಕೇಸ್​​: ವಿಡಿಯೋ ಹಂಚಿಕೊಂಡ ನಟ ಸೇರಿ ಹಲವರಿಗೆ ಸಂಕಷ್ಟ

ಬೆಂಗಳೂರು, ಏಪ್ರಿಲ್​ 10: ಬೆಂಗಳೂರಿನಲ್ಲಿ ವೈರಲ್​ ಜೋಂಬಿ ಡ್ರಗ್ಸ್ (Zombie Drugs Rumours) ಕೇಸ್​​ ಬೆನ್ನತ್ತಿದ್ದ ಪೊಲೀಸರು ತನಿಖೆ ನಡೆಸಿ ಜೋಂಬಿ ಡ್ರಗ್ಸ್ ಎನ್ನುವುದೇ ಇಲ್ಲಾ ಎಂಬ ಅಸಲಿ ಸತ್ಯವನ್ನು ಹೊರಗೆಳೆದಿದ್ದಾರೆ. ಅಷ್ಟೇ ಅಲ್ಲದೆ ವಿಡಿಯೋ ವೈರಲ್​ ಮಾಡಿದ್ದ ವ್ಯಕ್ತಿಯನ್ನು ಬಂಧಿಸಿದ್ದಾರೆ. ಸದ್ಯ ಪ್ರಕರಣ ರಾಜ್ಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಈ ಬಗ್ಗೆ ಗೃಹ ಸಚಿವ ಡಾ. ಜಿ ಪರಮೇಶ್ವರ್​​ ಕೂಡ ಮಾತನಾಡಿದ್ದಾರೆ. ಇನ್ನು ಈ ಕುರಿತಾಗಿ ವಿಡಿಯೋ ಹಂಚಿಕೊಂಡಿದ್ದ ದೊಡ್ಡ ದೊಡ್ಡ ವ್ಯಕ್ತಿಗಳಿಂದ ಹಿಡಿದು ಎಲ್ಲರಿಗೂ…

Read More

ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ನಿಖಿಲ್ ಕುಮಾರಸ್ವಾಮಿ ಅಚ್ಚರಿ ಮಾತು

ಬೆಂಗಳೂರು, (ಏಪ್ರಿಲ್ 10): ಜೆಡಿಎಸ್ (JDS) ಯುವಕ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಅವರಿಗೆ ಕ್ಷೇತ್ರದ್ದೇ ದೊಡ್ಡ ತಲೆನೋವಾಗಿದೆ. ಕೇವಲ ನಿಖಿಲ್ ಕುಮಾರಸ್ವಾಮಿಗೆ ಮಾತ್ರವಲ್ಲ ಅಭಿಮಾನಿಗಳು ಹಾಗೂ ಕಾರ್ಯಕರ್ತರಲ್ಲೂ ಕ್ಷೇತ್ರದ ಗೊಂದಲ ಸೃಷ್ಟಿಸಿದೆ. ಯಾಕಂದ್ರೆ ಮಂಡ್ಯ ಲೋಕಸಭೆಯಲ್ಲಿ ಸೋತರು. ರಾಮನಗರ ವಿಧಾನಸಭೆ ಹಾಗೂ ಚನ್ನಪಟ್ಟಣ ಉಪಚುನಾವಣೆಯಲ್ಲೂ ಸಹ ನಿಖಿಲ್ ಪರಾಭವಗೊಂಡಿದ್ದಾರೆ. ಹೀಗಾಗಿ ಮುಂಬರುವ ಚುನಾವಣೆಯಲ್ಲಿ ಯಾವ ಕ್ಷೇತ್ರದಿಂದ ಸ್ಪರ್ಧೆ ಮಾಡಬೇಕೆನ್ನುವುದೇ ನಿಖಿಲ್​​ ಅವರನ್ನ ಗೊಂದಲಕ್ಕೀಡು ಮಾಡಿದೆ. ಇನ್ನು ಈ ಬಗ್ಗೆ ಬೆಂಗಳೂರಿನಲ್ಲಿಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ…

Read More

ರಜಾರೋಷವಾಗಿ ಬೈಕ್‌ನಲ್ಲಿ ಬಂದು ಯುವತಿಯ ಬೆನ್ನು ಸವರಿದ ಕಾಮಪಿಶಾಚಿ: ಇಲ್ಲಿ ಮಹಿಳೆಯರಿಗೆ ರಕ್ಷಣೆಯಿಲ್ಲವೇ?

ಜೈಪುರ, ಏ.10: ರಾಜಸ್ಥಾನದ ರಾಜಧಾನಿ ಜೈಪುರದಲ್ಲಿ ಮಹಿಳೆಯರ ಸುರಕ್ಷತೆಯನ್ನು ಅಣಕಿಸುವಂತಹ ಘಟನೆಯೊಂದು ನಡೆದಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಸಂಚಲನ ಮೂಡಿಸಿದೆ. ಚಲಿಸುವ ರಸ್ತೆಯಲ್ಲೇ ಯುವತಿಯೊಬ್ಬರ ಜೊತೆ ದುಷ್ಕರ್ಮಿಗಳು ಅಸಭ್ಯವಾಗಿ ವರ್ತಿಸಿರುವ ದೃಶ್ಯಗಳು ಹರಿದಾಡುತ್ತಿದ್ದು, ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವೈರಲ್ ಆಗಿರುವ ವಿಡಿಯೋದಲ್ಲಿ, ಬ್ಯುಸಿ ರಸ್ತೆಯಲ್ಲೇ ಯುವತಿಗೆ ಕೆಲವರು ಕಿರುಕುಳ ನೀಡುತ್ತಿರುವುದು ಕಂಡುಬಂದಿದೆ. ಈ ಘಟನೆಯು ಕೇವಲ ಮಹಿಳೆಯರ ಸುರಕ್ಷತೆಯ ಪ್ರಶ್ನೆಯನ್ನಷ್ಟೇ ಅಲ್ಲದೆ, ಅಂತಹ ಸಮಯದಲ್ಲಿ ನೆರವಿಗೆ ಬಾರದ ಜನರ ಮನಸ್ಥಿತಿಯನ್ನೂ ಪ್ರಶ್ನಿಸುವಂತೆ ಮಾಡಿದೆ. ಸಾರ್ವಜನಿಕ…

Read More

ಧಾರವಾಡದಲ್ಲಿ ಉದ್ಯೋಗಾಕಾಂಕ್ಷಿಗಳ ಹೋರಾಟಕ್ಕೆ ಕೋರ್ಟ್​​ ಗ್ರೀನ್​​ ಸಿಗ್ನಲ್​​: ಷರತ್ತು ಅನ್ವಯ

ಧಾರವಾಡ, ಏಪ್ರಿಲ್​​ 10: ರಾಜ್ಯದಲ್ಲಿ ಖಾಲಿ ಇರುವ ಸರ್ಕಾರಿ ಹುದ್ದೆಗಳ ಭರ್ತಿಗೆ ಆಗ್ರಹಿಸಿ ಉದ್ಯೋಗಾಕಾಂಕ್ಷಿಗಳ ಹೋರಾಟಕ್ಕೆ ಹೈಕೋರ್ಟ್​​ನ ಧಾರವಾಡ ವಿಭಾಗೀಯ ಪೀಠ ಕೆಲ ಷರತ್ತುಗಳನ್ನು ವಿಧಿಸಿ ಗ್ರೀನ್​​ ಸಿಗ್ನಲ್​​ ನೀಡಿದೆ. ಏಪ್ರಿಲ್​​ 08ರಂದು ಡಿಸಿ ಕಚೇರಿ ಬಳಿ ಅನಿರ್ದಿಷ್ಟಾವಧಿ ಹೋರಾಟ ನಡೆಸಲು ಅಖಿಲ ಕರ್ನಾಟಕ ವಿದ್ಯಾರ್ಥಿಗಳ ಸಂಘ ಮುಂದಾಗಿತ್ತು. ಆದರೆ ವಿದ್ಯಾರ್ಥಿಗಳ ಸಂಘದಿಂದ ಕರೆ ನೀಡಲಾಗಿರುವ ಹೋರಾಟಕ್ಕೆ ಧಾರವಾಡ ಪೊಲೀಸರು ಅನುಮತಿ ನಿರಾಕರಿಸಿದ್ದರು. ಈ ಹಿನ್ನೆಲೆ ಕೋರ್ಟ್​​ ಮೊರೆ ಹೋಗಲಾಗಿತ್ತು. ಸಂಘಟನೆ ಸಲ್ಲಿಸಿದ್ದ ಅರ್ಜಿಯನ್ನು ಇಂದು ವಿಚಾರಣೆ…

Read More

ತಂತ್ರಜ್ಞಾನದ ಮೂಲಕ 3 ಕೋಟಿ ರೂ ಮೌಲ್ಯದ ಮೊಬೈಲ್​​ಗಳನ್ನ ಪತ್ತೆ ಮಾಡಿದ ವಿಜಯಪುರ ಪೊಲೀಸ್

ವಿಜಯಪುರ, ಏಪ್ರಿಲ್​ 10: ಇತ್ತೀಚೆಗೆ ಮೊಬೈಲ್ ಕಳ್ಳತನ (Lost Mobiles) ಪ್ರಕರಣಗಳು ಹೆಚ್ಚುತ್ತಿವೆ. ಬೆಲೆ ಬಾಳುವ ಮೊಬೈಲ್ ಕಳ್ಳತನ ಪತ್ತೆಗೆ ಕೇಂದ್ರ ಸರ್ಕಾರ ನೂತನ ಸಾಫ್ಟ್‌ವೇರ್​ಗಳನ್ನು ಬಿಡುಗಡೆ ಮಾಡಿದೆ. ಸಿಇಐಆರ್ ಸಾಫ್ಟ್‌ವೇರ್ ಮೂಲಕ ಜಿಲ್ಲಾ ಪೊಲೀಸರು ಕಳೆದ ಆರು ತಿಂಗಳಲ್ಲಿ ಕಳ್ಳತನವಾಗಿದ್ದ 3 ಕೋಟಿ ರೂ ಬೆಲೆ ಬಾಳುವ ಮೊಬೈಲ್​ಗಳನ್ನು ಪತ್ತೆ ಮಾಡಿ ಮಾಲೀಕರಿಗೆ ನೀಡಿದ್ದಾರೆ. ಪೊಲೀಸರ ಕಾರ್ಯಕ್ಕೆ ಜನರು ಮೆಚ್ಚಿಗೆ ವ್ಯಕ್ತಪಡಿಸಿದ್ದಾರೆ. ಕಳ್ಳತನವಾಗಿದ್ದ ಮೊಬೈಲ್‌ಗಳನ್ನು ಪತ್ತೆ ಮಾಡಿ, ಮಾಲೀಕರಿಗೆ ಹಸ್ತಾಂತರ ಮಾಡುವ ಮೂಲಕ ವಿಜಯಪುರ ಜಿಲ್ಲಾ…

Read More

ಲವ್ ಜಿಹಾದ್ ಪ್ರಕರಣಗಳಿಗೂ ಜಿಮ್​​ಗೂ ನಂಟು?: ಸಭೆ ನಡೆಸಿ ಖಾಕಿ ಖಡಕ್​​ ಕ್ಲಾಸ್​​; ಏನೆಲ್ಲ ಎಚ್ಚರಿಕೆ?

ಹುಬ್ಬಳ್ಳಿ, ಏಪ್ರಿಲ್​​ 10: ಇತ್ತೀಚೆಗೆ ಹುಬ್ಬಳ್ಳಿ-ಧಾರವಾಡದಲ್ಲಿ ಕೇಳಿಬರುತ್ತಿರುವ ಲವ್ ಜಿಹಾದ್ ಪ್ರಕರಣಗಳಿಗೂ ಜಿಮ್​​ಗೂ ನಂಟಿದೆ ಎಂಬ ಗಂಭೀರ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಜಿಮ್ ಮಾಲೀಕರು ಮತ್ತು ಟ್ರೈನರ್​​ಗಳ ಜೊತೆ ಪೊಲೀಸ್ ಅಧಿಕಾರಿಗಳು ಸಭೆ ನಡೆಸಿದ್ದು, ಕೆಲ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂಬ ಸೂಚನೆ ನೀಡಿದ್ದಾರೆ. ಮತ್ತೊಂದಡೆ ಯಾರಾದರೂ ಜಿಮ್​​ಗಳಲ್ಲಿ ಬೇರೆ ಕೆಲಸ ಮಾಡಿದ್ರೆ ಅವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಿ ಎಂಬ ಆಗ್ರಹ ಮಾಲೀಕರಿಂದಲೂ ವ್ಯಕ್ತವಾಗಿದೆ. ಲವ್ ಜಿಹಾದ್ ಆರೋಪ ಹೊಂದಿರೋ ಸಮೀರ್ ಮುಲ್ಲಾಜಿಮ್ ಟ್ರೈನರ್…

Read More

ರಣವೀರ್ ಸಿಂಗ್, ಆದಿತ್ಯ ಧರ್ ಮೇಲೆ ಕೆಟ್ಟ ದೃಷ್ಟಿ: ಪರಿಹಾರ ಸೂಚಿಸಿದ ಸಂದೀಪ್ ರೆಡ್ಡಿ ವಂಗ

ನೇರ ಮಾತುಗಳಿಗೆ ಹೆಸರಾಗಿರುವ ನಿರ್ದೇಶಕ ಸಂದೀಪ್ ರೆಡ್ಡಿ ವಂಗ (Sandeep Reddy Vanga), ಈಗ ಆದಿತ್ಯ ಧರ್ ನಿರ್ದೇಶನದ ಮತ್ತು ರಣವೀರ್ ಸಿಂಗ್ ನಟನೆಯ ‘ಧುರಂಧರ್: ದಿ ರಿವೆಂಜ್’ (Dhurandhar: The Revenge) ಚಿತ್ರದ ಪರವಾಗಿ ಬ್ಯಾಟ್ ಬೀಸಿದ್ದಾರೆ. ಇತ್ತೀಚೆಗೆ ಹೈದರಾಬಾದ್‌ನ ಅಲ್ಲು ಸಿನಿಮಾದಲ್ಲಿ ಪ್ರಭಾಸ್ ಜೊತೆ ಸೇರಿ ಅವರು ಈ ಸಿನಿಮಾವನ್ನು ವೀಕ್ಷಿಸಿದರು. ಬಳಿಕ ಸೋಶಿಯಲ್ ಮೀಡಿಯಾದಲ್ಲಿ ಸುದೀರ್ಘ ಪೋಸ್ಟ್ ಹಂಚಿಕೊಂಡಿದ್ದಾರೆ. ‘ಧುರಂಧರ್ 2’ ಬಗ್ಗೆ ಅವರು ಭರಪೂರ ಮೆಚ್ಚುಗೆ ಸೂಚಿಸಿದ್ದಾರೆ. ಅಲ್ಲದೇ ರಣವೀರ್ ಸಿಂಗ್…

Read More

2000 ಅಡಿ ಆಳದ ಪ್ರಪಾತ, ದೊಡ್ಡ ಗಿಡ-ಮರಗಳು: ಶ್ರೀನಂದಾ ಬಿದ್ದ ಸ್ಥಳ ಭಯಾನಕವಾಗಿದೆ

ಚಿಕ್ಕಮಗಳೂರು, (ಏಪ್ರಿಲ್ 10): ಪ್ರವಾಸಕ್ಕೆ ಬಂದಿದ್ದ ಕೇರಳ ಮೂಲದ ಮೂಲದ ಬಾಲಕಿ ಶ್ರೀನಂದಾ (Srinanda) ಮೃತದೇಹ ಪತ್ತೆಯಾಗಿದೆ. ಮೂರು ದಿನದ ಬಳಿಕ ಚಿಕ್ಕಮಗಳೂರಿನ (Chikkamagaluru) ಚಂದ್ರದ್ರೋಣ ಪರ್ವತ ಶ್ರೇಣಿಯ ಮಾಣಿಕ್ಯಧಾರಾ ಜಲಪಾತದ ಶ್ರೀನಂದಾ ಶವ ಪತ್ತೆಯಾಗಿದೆ. ಇನ್ನು ಶ್ರೀನಂದಾ ಮೃತದೇಹ ಸಿಕ್ಕ ಸ್ಥಳ ನೋಡಿದ್ರೆ ಕೈ ಕಾಲು ನಡುಗುತ್ತವೆ. ಹೌದು… ಆಕೆ ಬಿದ್ದ ಜಾಗ ಅಷ್ಟೊಂದು ಭಯಾನಕವಾಗಿದೆ. ದೊಡ್ಡ ದೊಡ್ಡ ಗಿಡ ಮರಳು, ಬೃಹತ್ ಆಕಾದರ ಕಲ್ಲು ಬಂಡೆಯ ಸುಮಾರು 2000 ಅಡಿ ಆಳಕ್ಕೆ ಶ್ರೀನಂದಾ ಬಿದ್ದಿದ್ದಾಳೆ….

Read More

Optical Illusion: ಕಳ್ಳಿ ಸಸ್ಯಗಳ ನಡುವೆ ಅಡಗಿರುವ ಜಿಂಕೆಯನ್ನು ಕಂಡು ಹಿಡಿಯಬಲ್ಲಿರಾ

ಇತ್ತೀಚಿನ ದಿನಗಳಲ್ಲಿ ಆಪ್ಟಿಕಲ್‌ ಇಲ್ಯೂಷನ್ (Optical Illusion) ಸೇರಿದಂತೆ ಕಠಿಣ ಸವಾಲಿನ ಒಗಟಿನ ಚಿತ್ರಗಳು ಸಾಕಷ್ಟು ಜನಪ್ರಿಯವಾಗಿವೆ. ಮೆದುಳಿಗೆ ಕೆಲಸ ನೀಡುವ ಇಂತಹ ಒಗಟಿನ ಚಿತ್ರವನ್ನು ಬಿಡಿಸುವುದರಲ್ಲಿರುವ ಖುಷಿಯೇ ಬೇರೆ. ಇದು ನಿಮ್ಮ ಮೆದುಳಿಗೆ ವ್ಯಾಯಾಮವನ್ನು ನೀಡುತ್ತವೆ. ಇದೀಗ ನಿಮ್ಮ ಕಣ್ಣಿನ ತೀಕ್ಷ್ಣತೆಯನ್ನು ಪರೀಕ್ಷಿಸಲು ಇದೊಂದು ಒಳ್ಳೆಯ ಸಮಯ. ಕಳ್ಳಿ ಸಸ್ಯಗಳ ನಡುವೆ ಜಿಂಕೆಯೊಂದು ಅಡಗಿ ಕುಳಿತಿದ್ದು, ಈ ಪ್ರಾಣಿಯನ್ನು ಹದಿನೈದು ಸೆಕೆಂಡುಗಳ ಒಳಗೆ ಗುರುತಿಸಬೇಕು. ಜಿಂಕೆಯನ್ನು ಪತ್ತೆ ಹಚ್ಚಿ ಈ ಒಗಟು ಬಿಡಿಸಿದರೆ ನೀವು ಜಾಣರು…

Read More

ಕಾಡುಪ್ರಾಣಿಗಳ ಜೀವ ತೆಗೆಯುತ್ತಿವೆ ವಾಹನಗಳು; ಮಧ್ಯಪ್ರದೇಶದಲ್ಲಿ 14 ತಿಂಗಳಲ್ಲಿ 149 ಚಿರತೆಗಳು ಸಾವು

ಭೋಪಾಲ್, ಏಪ್ರಿಲ್ 10: ಕಾಡುಪ್ರಾಣಿಗಳ ಪಾಲಿಗೆ ಮನುಷ್ಯರು ಯಮಕಿಂಕರರಾಗುತ್ತಿದ್ದಾರೆ. ಇತ್ತೀಚೆಗೆ ಅಭಯಾರಣ್ಯದ ರಸ್ತೆಯೊಂದರಲ್ಲಿ ಚಿರತೆ ನಡೆದುಕೊಂಡು ಹೋಗುವಾಗ ಅದರ ಪಕ್ಕದವರೆಗೂ ಸಾಲುಗಟ್ಟಿ ವಾಹನಗಳನ್ನು ನಿಲ್ಲಿಸಿಕೊಂಡು ಫೋಟೋ ಕ್ಲಿಕ್ಕಿಸುತ್ತಾ, ಆ ಚಿರತೆಗೆ (Leopard) ಹೋಗಲು ದಾರಿಯನ್ನೂ ಬಿಡದೆ ಗೊಂದಲವನ್ನುಂಟುಮಾಡುತ್ತಿದ್ದ ವಿಡಿಯೋ ವೈರಲ್ ಆಗಿತ್ತು. ಕಾಡುಪ್ರಾಣಿಗಳ ಖಾಸಗಿತನಕ್ಕೆ ಸಫಾರಿಯ ಹೆಸರಿನಲ್ಲಿ ಯಾವ ರೀತಿ ತೊಂದರೆ ಮಾಡಲಾಗುತ್ತಿದೆ ಎಂಬ ಕುರಿತು ಸಾಕಷ್ಟು ಚರ್ಚೆಗಳಿಗೂ ಈ ವಿಡಿಯೋ ಕಾರಣವಾಗಿತ್ತು. ಇದೀಗ ಮಾಹಿತಿ ಹಕ್ಕಿನಡಿ ಪಡೆದ ಮಾಹಿತಿಯ ಪ್ರಕಾರ ಮಧ್ಯಪ್ರದೇಶದಲ್ಲಿ ಕಳೆದ 14 ತಿಂಗಳಲ್ಲಿ…

Read More