Headlines

RCB v/s RR: ತವರಿನಿಂದ ಹೊರಗೆ ಆರ್​ಸಿಬಿಗೆ ಮೊದಲ ಪಂದ್ಯ, ಹೇಗಿದೆ ಉಭಯ ತಂಡಗಳ ಬಲಾಬಲ? ಇಲ್ಲಿದೆ ಫುಲ್ ಡಿಟೇಲ್ಸ್

ಐಪಿಎಲ್ 2026 ರಲ್ಲಿ ಇಂದು (ಏಪ್ರಿಲ್ 10) ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ರಾಜಸ್ಥಾನ್ ರಾಯಲ್ಸ್ (RR) ಮುಖಾಮುಖಿಯಾಗುತ್ತಿದ್ದು, ಈ ಋತುವಿನ ಹೈ-ವೋಲ್ಟೇಜ್ ಪಂದ್ಯಗಳಲ್ಲಿ ಇದೂ ಒಂದಾಗಲಿದೆ. ಆರ್‌ಆರ್ ಇದುವರೆಗಿನ ಮೂರು ಪಂದ್ಯಗಳನ್ನು ಗೆದ್ದು ಅಗ್ರಸ್ಥಾನದಲ್ಲಿದ್ದರೆ, ಆರ್‌ಸಿಬಿ ಆಡಿರುವ ಎರಡು ಪಂದ್ಯಗಳನ್ನು ಗೆದ್ದು ಉತ್ತಮ ಫಾರ್ಮ್​ನಲ್ಲಿದೆ. ಆರ್‌ಆರ್ ತಂಡ ಯಶಸ್ವಿ ಜೈಸ್ವಾಲ್ ಮತ್ತು ವೈಭವ್ ಸೂರ್ಯವಂಶಿ ಅವರಂತಹ ಯುವ ಆರಂಭಿಕ ಆಟಗಾರರಿಂದ ಪ್ರಬಲ ಪ್ರದರ್ಶನವನ್ನು ನೀಡಿದೆ. ಮುಂಬೈ ಇಂಡಿಯನ್ಸ್ ವಿರುದ್ಧ 11 ಓವರ್​ಗಳಲ್ಲಿ 150 ರನ್…

Read More

ಸಿನಿಮಾ ಆಗಲಿದೆ ಇಮ್ಮಡಿ ಪುಲಿಕೇಶಿ ಜೀವನ-ಸಾಧನೆ: ಸಿನಿಮಾ ಹೆಸರೇನು?

ಬಾಲಿವುಡ್​​ನಲ್ಲಿ (Bollywood) ಒಂದರ ಹಿಂದೊಂದು ಐತಿಹಾಸಿಕ ಸಿನಿಮಾಗಳು, ಜೀವನ ಆಧರಿತ ಬಯೋಪಿಕ್ ಸಿನಿಮಾಗಳು ನಿರ್ಮಾಣ ಆಗುತ್ತಲೇ ಇರುತ್ತವೆ. ಅದರಲ್ಲೂ ಇತ್ತೀಚೆಗೆ ಐತಿಹಾಸಿಕ ಮಹತ್ವವುಳ್ಳ ರಾಜರ, ಮಹಾರಾಜರ ಕತೆಗಳು ಸಿನಿಮಾಗಳಾಗುತ್ತಿವೆ. ಆದರೆ ಈ ಪದ್ಧತಿ ದಕ್ಷಿಣದಲ್ಲಿ ವಿಶೇಷವಾಗಿ ಕನ್ನಡದಲ್ಲಿ ಬಹಳ ವಿರಳ. ಎಲ್ಲೋ ಅಲ್ಲೊಂದು ಇಲ್ಲೊಂದು ಐತಿಹಾಸಿಕ ಸಿನಿಮಾಗಳು ಸೆಟ್ಟೇರುತ್ತವೆಯಷ್ಟೆ. ಅದರಲ್ಲೂ ರಾಜ-ಮಹಾರಾಜರ ಜೀವನ ಆಧರಿಸಿದ ಸಿನಿಮಾಗಳಂತೂ ಬಹಳ ವಿರಳ. ಆದರೆ ಇದೀಗ ಕನ್ನಡದ ದೊರೆ ಇಮ್ಮಡಿ ಪುಲಿಕೇಶಿ ಜೀವನ, ಸಾಹಸ, ಸಾಧನೆ ಕುರಿತು ಹೇಳುವ ಕನ್ನಡ ಸಿನಿಮಾ…

Read More

ಹಾರ್ಮುಜ್ ಜಲಸಂಧಿಯಲ್ಲಿ ಇರಾನ್ ದಬ್ಬಾಳಿಕೆ: ಟ್ಯಾಂಕರ್ ಶುಲ್ಕದ ವಿರುದ್ಧ ಗುಡುಗಿದ ಡೊನಾಲ್ಡ್ ಟ್ರಂಪ್

ವಾಷಿಂಗ್ಟನ್, ಏಪ್ರಿಲ್ 10: ಜಾಗತಿಕ ತೈಲ ಮಾರುಕಟ್ಟೆಯ ಜೀವನಾಡಿಯಂತಿರುವ ಹಾರ್ಮುಜ್ ಜಲಸಂಧಿ(Hormuz Strait)ಯ ಸುತ್ತ ಈಗ ರಾಜತಾಂತ್ರಿಕ ಸಮರ ತಾರಕಕ್ಕೇರಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಇರಾನ್ ನಡುವಿನ ಈ ಸಂಘರ್ಷವು ವಿಶ್ವದ ಆರ್ಥಿಕತೆಯ ಮೇಲೆ ಆತಂಕದ ನೆರಳು ಮೂಡಿಸಿದೆ. ಅಮೆರಿಕ ಮತ್ತು ಇರಾನ್ ನಡುವೆ ಏರ್ಪಟ್ಟಿರುವ ಎರಡು ವಾರಗಳ ಕದನ ವಿರಾಮದ ಒಪ್ಪಂದವು ಜಾರಿಗೆ ಬಂದ ಬೆನ್ನಲ್ಲೇ ಹೊಸ ವಿವಾದವೊಂದು ಸ್ಫೋಟಗೊಂಡಿದೆ. ಹಾರ್ಮುಜ್ ಜಲಸಂಧಿಯ ಮೂಲಕ ಹಾದುಹೋಗುವ ತೈಲ ಟ್ಯಾಂಕರ್‌ಗಳ ಮೇಲೆ ಇರಾನ್ ಶುಲ್ಕ…

Read More

Bengaluru Air Quality: ಉಡುಪಿ, ಶಿವಮೊಗ್ಗದ ವಾಯು ಗುಣಮಟ್ಟದಲ್ಲಿ ಸುಧಾರಣೆ

ಬೆಂಗಳೂರು, ಏಪ್ರಿಲ್ 10: ಕಳೆದ ಹಲವು ದಿನಗಳಿಂದ ಬೆಂಗಳೂರು ಸೆರಿದಂತೆ ರಾಜ್ಯದ ವಿವಿಧೆಡೆ ವಾಯು ಗುಣಮಟ್ಟ (Bengaluru Air Quality) ಸುಧಾರಿಸುತ್ತಿದೆ. ಇಷ್ಟು ದಿನ ಉಸಿರಾಟಕ್ಕೂ ಮಾರಕವಾಗಿದ್ದ ಗಾಳಿಯು ಇಂದು ಒಳ್ಳೆಯ ಗುಣಮಟ್ಟದಲ್ಲಿರುವುದು ಸ್ವಲ್ಪಮಟ್ಟಿಗೆ ಆತಂಕವನ್ನು ಕಡಿಮೆಯಾಗಿಸಿದೆ. ಆದರೂ ವಾಯು ಗುಣಮಟ್ಟ ಎಲ್​ಲೆಡೆಯೂ ಅನಾರೋಗ್ಯಕರ ಮಟ್ಟದಲ್ಲಿಯೆ ಇದೆ ಎಂದು ತಜ್ಞರು ತಿಳಿಸಿದ್ದಾರೆ. ಉಡುಪಿ, ಮಂಗಳೂರು ಸೇರಿದಂತೆ ಇಂದು ಹಲವೆಡೆ ವಾಯು ಗುಣಮಟ್ಟ ಸುಧಾರಿಸಿದೆ. ಕೆಲ ದಿನಗಳ ಹಿಂದೆಯಷ್ಟೇ ತೀವ್ರ ಕಳಪೆ ಮಟ್ಟಕ್ಕೆ ಇಳಿದಿದ್ದ ಬೆಂಗಳೂರಿನ ಏರ್ ಕ್ವಾಲಿಟಿ ಇಂದು…

Read More

ಮಹತ್ವದ ಘಟ್ಟದಲ್ಲಿ ‘ಆಸೆ’ ಧಾರಾವಾಹಿ; ರೋಹಿಣಿಯೇ ಕ್ರಿಶ್ ತಾಯಿ ಅಂತ ಎಲ್ಲರಿಗೂ ತಿಳಿಯುವ ಸಮಯ

ಸ್ಟಾರ್ ಸುವರ್ಣದ ‘ಆಸೆ’ ಧಾರಾವಾಹಿ ಪ್ರೇಕ್ಷಕರನ್ನು ಸೆಳೆದುಕೊಳ್ಳುತ್ತಿದೆ ಎಂದರೂ ತಪ್ಪಾಗಲಿಕ್ಕಿಲ್ಲ. ಈ ಧಾರಾವಾಗೆ ದೊಡ್ಡ ಅಭಿಮಾನಿ ಬಳಗ ಇದ್ದಿರೋದು ಗೊತ್ತೇ ಇದೆ. ಈಗ ‘ಆಸೆ’ ಧಾರಾವಾಹಿಯು ಒಂದು ಮಹತ್ವದ ಘಟ್ಟ ತಲುಪಿದೆ. ಈ ಧಾರಾವಾಹಿಯಲ್ಲಿ ಕ್ರಿಶ್ ಸೂರ್ಯನ ಮಗ ಎಂಬುದು ನಾಯಕಿ ಮೀನಾಗೆ ಗೊತ್ತಾಗಿ ಹೋಗಿದೆ. ಈ ವಿಷಯವನ್ನು ಮನೆಯ ಎಲ್ಲರಿಗೂ ಹೇಳುವಂತೆ ಆಕೆ ಒತ್ತಡ ಹೇರುವುದನ್ನು ನೀವು ಧಾರಾವಾಹಿಯಲ್ಲಿ ಕಾಣಬಹುದು. ‘ಆಸೆ’ ಧಾರಾವಾಹಿಯಲ್ಲಿ ರೋಹಿಣಿ ಪತಿಗೆ ಹಾಗೂ ಕುಟುಂಬಕ್ಕೆ ಮೋಸ ಮಾಡುತ್ತಲೇ ಬರುತ್ತಿದ್ದಾಳೆ. ಈ ವಿಷಯದಲ್ಲಿ…

Read More

Horoscope Today: ಇಂದು ಈ ರಾಶಿಯವರು ಆರೋಗ್ಯದ ಕಡೆ ಹೆಚ್ಚಿನ ಗಮನ ಕೊಡಿ

ಟಿವಿ9​​ ಡಿಜಿಟಲ್ ವಾಹಿನಿಯಲ್ಲಿ ಪ್ರಸಾರವಾದ ದಿನಭವಿಷ್ಯ ಕಾರ್ಯಕ್ರಮದಲ್ಲಿ ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು ಏಪ್ರಿಲ್ 10, ಶುಕ್ರವಾರದ ದ್ವಾದಶ ರಾಶಿಗಳ ಫಲಾಫಲಗಳನ್ನು ವಿವರಿಸಿದ್ದಾರೆ. ಈ ದಿನ ಪರಾಭವ ನಾಮ ಸಂವತ್ಸರ, ಉತ್ತರಾಯಣ, ಚೈತ್ರ ಮಾಸ, ವಸಂತ ಋತು, ಕೃಷ್ಣ ಪಕ್ಷ, ನವಮಿ ತಿಥಿಯಾಗಿದೆ. ಇಂದು ಡಾ. ಬಸವರಾಜ ಗುರೂಜಿಯವರು ಪ್ರತಿ ರಾಶಿಯವರಿಗೂ ಆರೋಗ್ಯ, ಆರ್ಥಿಕ ಸ್ಥಿತಿ, ಉದ್ಯೋಗ, ವ್ಯಾಪಾರ, ಕುಟುಂಬ ಮತ್ತು ವೈಯಕ್ತಿಕ ಸಂಬಂಧಗಳ ಕುರಿತು ವಿವರವಾದ ಸಲಹೆಗಳನ್ನು ನೀಡಿದ್ದಾರೆ.     Source…

Read More

‘ಸ್ಪಿರಿಟ್’ ಬಳಿಕ ಮತ್ತೊಬ್ಬ ಸ್ಟಾರ್ ನಟನ ಜೊತೆ ಸಂದೀಪ್ ರೆಡ್ಡಿ ಸಿನಿಮಾ

ಸಂದೀಪ್ ರೆಡ್ಡಿ ವಂಗಾ (Sandeep Reddy Vanga), ಪ್ರಸ್ತುತ ಭಾರತದ ಯಶಸ್ವಿ ಮತ್ತು ಬೇಡಿಕೆಯ ನಿರ್ದೇಶಕರಲ್ಲಿ ಒಬ್ಬರು. ‘ಅನಿಮಲ್’ ಸಿನಿಮಾದ ಯಶಸ್ವಿನ ಬಳಿಕ ಸಂದೀಪ್ ರೆಡ್ಡಿ ಇದೀಗ ಪ್ರಭಾಸ್ ಜೊತೆಗೆ ಕೆಲಸ ಮಾಡುತ್ತಿದ್ದು, ಪ್ರಭಾಸ್ ಅವರಿಗಾಗಿ ‘ಸ್ಪಿರಿಟ್’ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ‘ಸ್ಪಿರಿಟ್’ ಸಿನಿಮಾದ ಬಳಿಕ ಸಂದೀಪ್ ರೆಡ್ಡಿ ವಂಗಾ ಮತ್ತೊಬ್ಬ ಸ್ಟಾರ್ ನಟನೊಟ್ಟಿಗೆ ಕೆಲಸ ಮಾಡಲು ತಯಾರಾಗಿದ್ದು, ಈಗಾಗಲೇ ಮಾತುಕತೆ ಸಹ ಚಾಲ್ತಿಯಲ್ಲಿದೆ. ಪ್ರಭಾಸ್ ಜೊತೆಗೆ ‘ಸ್ಪಿರಿಟ್’ ಸಿನಿಮಾದ ಬಳಿಕ ಸಂದೀಪ್ ರೆಡ್ಡಿ ವಂಗಾ, ಅಲ್ಲು…

Read More

ಹೆಂಡತಿಯ ಒಂದು ಕ್ಷಣದ ಸಿಟ್ಟಿಗೆ ಪತಿ ಬಲಿ: ಶವದ ಪಕ್ಕದಲ್ಲೇ ರಾತ್ರಿ ಕಳೆದ ಪತ್ನಿ

ಗುಜರಾತ್, ಏಪ್ರಿಲ್ 10: ಗುಜರಾತ್‌ನ ನರ್ಮದಾ ಜಿಲ್ಲೆಯಲ್ಲಿ ನಡೆದ ಈ ಘಟನೆಯು ಕೌಟುಂಬಿಕ ಕಲಹವು ಎಷ್ಟು ಭೀಕರ ರೂಪ ಪಡೆದುಕೊಳ್ಳಬಹುದು ಎಂಬುದಕ್ಕೆ ಕನ್ನಡಿಯಾಗಿದೆ. ಆ ಕ್ಷಣದ ಸಿಟ್ಟು ಮತ್ತು ಆನಂತರದ ಮೌನ ಎರಡೂ ಈ ಘಟನೆಯಲ್ಲಿದೆ. ಪ್ರೀತಿ ಮತ್ತು ವಿಶ್ವಾಸದಿಂದ ಇರಬೇಕಾದ ದಂಪತಿ ನಡುವೆ ನಡೆದ ಸಣ್ಣ ಜಗಳವೊಂದು ಅಂತಿಮವಾಗಿ ಕೊಲೆ(Murder)ಯಲ್ಲಿ ಅಂತ್ಯವಾಗಿದೆ. ಗುಜರಾತ್‌ನ ನರ್ಮದಾ ಜಿಲ್ಲೆಯಲ್ಲಿ ನಡೆದ ಈ ಭೀಕರ ಘಟನೆಯು ಸ್ಥಳೀಯರನ್ನು ಬೆಚ್ಚಿಬೀಳಿಸಿದೆ. ದಾರಿಯುದ್ದಕ್ಕೂ ನಡೆದ ಜಗಳ ಘಟನೆಯ ದಿನ ಪತಿ ಮತ್ತು ಪತ್ನಿ…

Read More

Daily Devotional: ಕಾಲಾಷ್ಟಮಿಯನ್ನು ಯಾಕೆ ಆಚರಿಸಬೇಕು?

ಟಿವಿ9​​ ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ಕಾಲಾಷ್ಟಮಿಯನ್ನು ಯಾಕೆ ಆಚರಿಸಬೇಕು ಎಂದು ಡಾ.ಬಸವರಾಜ ಗುರೂಜಿ ವಿವರಿಸಿದ್ದಾರೆ. ಕಾಲಾಷ್ಟಮಿಯು ಮಹತ್ತರವಾದ ಪ್ರಭಾವವನ್ನು ಬೀರುವ, ಪರಿವರ್ತನೆ ಮತ್ತು ಅದೃಷ್ಟವನ್ನು ತರುವ, ಸಂಕಟಗಳನ್ನು ದೂರಮಾಡುವ ವಿಶೇಷ ಪರ್ವಕಾಲವಾಗಿದೆ. ಪ್ರತಿ ತಿಂಗಳ ಕೃಷ್ಣ ಪಕ್ಷದ ಅಷ್ಟಮಿ ತಿಥಿಯನ್ನು ಕಾಲಾಷ್ಟಮಿ ಎಂದು ಕರೆಯಲಾಗುತ್ತದೆ. ಈ ದಿನದಂದು ಶಿವನ ಉಗ್ರ ರೂಪವಾದ ಕಾಲಭೈರವನನ್ನು ಆರಾಧಿಸಲಾಗುತ್ತದೆ. ಕಾಲಭೈರವನು ಕಾಲದ ಅಧಿಪತಿಯಾಗಿದ್ದು, ಅತ್ಯಂತ ಬೇಗ ಫಲಿತಾಂಶಗಳನ್ನು ನೀಡುವ ಶಕ್ತಿಯನ್ನು ಹೊಂದಿದ್ದಾನೆ. ಮನೆ ಕಟ್ಟುವ ಕನಸು, ವಿವಾಹ, ಮಕ್ಕಳ ಪ್ರಾಪ್ತಿ, ಆರೋಗ್ಯ…

Read More

ಇವಿಎಂನಲ್ಲಿ ಭದ್ರವಾಯ್ತು ಮಿನಿ ಕದನದ ಅಭ್ಯರ್ಥಿಗಳ ಭವಿಷ್ಯ! ದಾವಣಗೆರೆ ದಕ್ಷಿಣದಲ್ಲಿ ಗೆಲ್ಲೋದ್ಯಾರು? ಬಾಗಲ‘ಕೋಟೆ’ ಯಾರಿಗೆ?

ಬೆಂಗಳೂರು, ಏಪ್ರಿಲ್ 10: ರಾಜ್ಯದ ಕುತೂಹಲ ಕೆರಳಿಸಿದ್ದ ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ (Karnataka Bypolls 2026) ಮತದಾನ ಗುರುವಾರ ಮುಕ್ತಾಯಗೊಂಡಿದೆ. ಕಳೆದ 15 ದಿನಗಳಿಂದ ನಡೆದ ಅಬ್ಬರದ ಪ್ರಚಾರಕ್ಕೆ ತೆರೆಬಿದ್ದಿದ್ದು, ಮತದಾನವೂ ಮುಗಿದಿದೆ. ಮತದಾರ ಪ್ರಭು ತನ್ನ ನಿರ್ಧಾರವನ್ನು ಮತಯಂತ್ರದಲ್ಲಿ ದಾಖಲಿಸಿದ್ದಾಗಿದೆ. ಎರಡೂ ಕ್ಷೇತ್ರಗಳಲ್ಲಿ ಬಹುತೇಕ ಸಮಾನ ಪ್ರಮಾಣದ ಮತದಾನವಾಗಿದೆ. ಅಭ್ಯರ್ಥಿಗಳ ಭವಿಷ್ಯ ಇವಿಎಂನಲ್ಲಿ ಭದ್ರವಾಗಿದೆ. ಮತದಾನದ ಶೇಕಡಾವಾರು ವಿವರ ದಾವಣಗೆರೆ ದಕ್ಷಿಣ: ಶೇ 68.55 ರಷ್ಟು ಮತದಾನ ದಾಖಲಾಗಿದೆ. ಬಾಗಲಕೋಟೆ:…

Read More