ಬಣ್ಣದ ಲೋಕಕ್ಕೆ ಕಾಲಿಟ್ಟ ಬಳಿಕ ಓದಿನ ಬಗ್ಗೆ ಗಮನ ಹರಿಸೋದು ಎಂದರೆ ಅದು ದೊಡ್ಡ ಚಾಲೆಂಜ್. ಈ ಚಾಲೆಂಜ್ ಅನ್ನು ಅಂಕಿತಾ ಜಯರಾಮ್ ಅವರು ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ದ್ವಿತೀಯ ಪಿಯುಸಿಯಲ್ಲಿ ಅಂಕಿತಾ ಅವರು ಶೇ. 97 ಅಂಕ ಪಡೆದು ಸಾಧನೆ ಮಾಡಿದ್ದಾರೆ. ಹಾಗಾದರೆ ಯಾವ ವಿಷಯಕ್ಕೆ ಎಷ್ಟು ಪಡೆದುಕೊಂಡಿದ್ದಾರೆ? ಆ ಬಗ್ಗೆ ಇಲ್ಲಿದೆ ವಿವರ.
ಅಂಕಿತಾ ಜಯರಾಮ್ ಅವರು ಕಿರುತೆರೆ ಬಾಲ ನಟಿಯಾಗಿ ಬಣ್ಣದ ಲೋಕಕ್ಕೆ ಕಾಲಿಟ್ಟರು. ‘ಭೂಮಿಗೆ ಬಂದ ಭಗವಂತ’ ಧಾರಾವಾಹಿಯಲ್ಲಿ ಕಥಾ ನಾಯಕನ ಮಗಳ ಪಾತ್ರದಲ್ಲಿ ಕಾಣಿಸಿದರು. ಅವರು ‘ಕಾಗದ’,‘ರುದ್ರ ಅವತಾರ’ ರೀತಿಯ ಕೆಲ ಸಿನಿಮಾಗಳಲ್ಲೂ ನಟಿಸಿದ್ದಾರೆ. ಈಗ ಜೀ ಕನ್ನಡದ ‘ಕರ್ಣ’ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಅಂಕಿತಾ ಜಯರಾಮ್ ಅವರು ದ್ವಿತೀಯ ಪಿಯುಸಿಯಲ್ಲಿ ಸಾಧನೆ ಮಾಡಿದ್ದಾರೆ.
ಏಪ್ರಿಲ್ 9ರಂದು ದ್ವಿತೀಯ ಪಿಯುಸಿ ಫಲಿತಾಂಶ ಬಂದಿದೆ. ಅಂಕಿತಾ ಅವರು ಕಾಮರ್ಸ್ ಓದಿದ್ದಾರೆ. ಅವರು ಕನ್ನಡದಲ್ಲಿ 97, ಇಂಗ್ಲಿಷ್ನಲ್ಲಿ 94, ಬಿಸ್ನೆಸ್ ಸ್ಟಡೀಸ್ನಲ್ಲಿ 98, ಅಕೌಂಟೆನ್ಸಿಯಲ್ಲಿ 96, ಸ್ಟಾಟ್ಸ್ನಲ್ಲಿ 100ಕ್ಕೆ ನೂರು ಹಾಗೂ ಕಂಪ್ಯೂಟರ್ ಸೈನ್ಸ್ ಅಲ್ಲಿ 94 ಅಂಕ ಪಡೆದಿದ್ದಾರೆ. ಈ ಮೂಲಕ ಅವರ ಪರ್ಸಂಟೇಜ್ 97 ಆಗಿದೆ.
ಅಂಕಿತಾ ಜಯರಾಮ್ ಅವರಿಗೆ ಎಲ್ಲರೂ ಅಭಿನಂದನೆ ತಿಳಿಸುತ್ತಿದ್ದಾರೆ. ನಟನೆಯ ಜೊತೆ ಜೊತೆಗೆ ಅವರು ಶಿಕ್ಷಣದಲ್ಲೂ ಉತ್ತಮವಾಗಿ ಸಾಧನೆ ಮಾಡಿರುವುದು ಅವರ ಕುಟುಂಬದವರ ಖುಷಿ ತಂದಿದೆ.
ಅಂಕಿತಾ ಅವರು ‘ಕರ್ಣ’ ಧಾರಾವಾಹಿಯಲ್ಲಿ ಇತ್ತೀಚೆಗೆ ಎಂಟ್ರಿ ಕೊಟ್ಟಿದ್ದಾರೆ. ಅವರ ಪಾತ್ರ ಯಾವ ರೀತಿಯಲ್ಲಿ ಸಾಗುತ್ತದೆ ಎನ್ನುವ ಕತೂಹಲ ಮೂಡಿದೆ.
ಮೈಸೂರು, ಏಪ್ರಿಲ್ 10: ಸಮಾಜದಲ್ಲಿ ವಿಶೇಷ ಚೇತನರಿಗೆ (Specially Abled) ಸೌಲಭ್ಯಗಳ ಜೊತೆ ಗೌರವವನ್ನೂ ನೀಡಲಾಗುತ್ತದೆ. ಎಲ್ಲರಂತಲ್ಲದ ಅವರನ್ನು ಕರುಣೆಯಿಂದಲೇ ನೋಡಲಾಗುತ್ತದೆ. ಅಂಗವೈಕಲ್ಯ ಹೊಂದಿದವರು ಇನ್ನೇನು ಅಪರಾಧ ಮಾಡಲು ಸಾಧ್ಯ ಎಂದು ಯೋಚಿಸುವವರನ್ನು ಬೆಚ್ಚಿಬೀಳಿಸುವ ಘಟನೆ ಜಿಲ್ಲೆಯ ನಂಜನಗೂಡು (Nanjanagudu) ತಾಲೂಕಿನ ದೇವಿರಮ್ಮನಹಳ್ಳಿಯಲ್ಲಿ ನಡೆದಿದೆ. ಮಾನವನ ವಿಕೃತ ಮನೋಭಾವಕ್ಕೆ ಅಂಗವೈಕಲ್ಯ ಅಡ್ಡಿಯಾಗುವುದಿಲ್ಲ ಎಂಬುದು ಈ ಪ್ರಕರಣದಲ್ಲಿ ಸಾಭೀತಾಗಿದೆ.
ಸ್ನೇಹಿತನ ಮಡದಿಯನ್ನೇ ಮದುವೆಯಾಗಲು ಬಯಸಿದ್ದ
ಸ್ವಾಮಿ ಮತ್ತು ಆತನ ಪತ್ನಿ ಸವಿತಾ ಇಬ್ಬರೂ ವಿಶೇಷ ಚೇತನರು. ಕಿವಿ ಕೇಳುವುದಿಲ್ಲ, ಮಾತು ಬರುವುದಿಲ್ಲ. ಆದರೂ ಸಂಸಾರ ಸಾಗಿಸುತ್ತಿದ್ದರು. ಆದರೆ ಸ್ವಾಮಿ ಕಳೆದ ಫೆಬ್ರವರಿ 12 ರಿಂದ ಕಾಣೆಯಾಗಿದ್ದ. ಈ ಬಗ್ಗೆ ಸವಿತಾ ಮಾರ್ಚ್ 4 ರಂದು ನಂಜನಗೂಡು ಗ್ರಾಮಾಂತರ ಠಾಣೆಯಲ್ಲಿ ದೂರು ನೀಡಿದ್ದಳು. ದಂಪತಿ ಅಂಗವಿಕಲರಾದ ಕಾರಣ ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ಆರಂಭಿಸಿದ್ದರು. ಸ್ವಾಮಿಯನ್ನು ಹತ್ಯೆ ಮಾಡಲಾಗಿದ್ದು, ಕೊಲೆ ಮಾಡಿದವರೂ ಸಹ ವಿಕಲಚೇತನರೆ ಎಂಬ ಸತ್ಯ ಪೊಲೀಸರನ್ನೇ ದಂಗಾಗಿಸಿದೆ.
ಸ್ವಾಮಿಯ ಸ್ನೇಹಿತ ಶ್ರೀನಿವಾಸ್ ಸಹ ಮಾತು ಬರದ, ಕಿವಿ ಕೇಳದ ವ್ಯಕ್ತಿ. ಇಬ್ಬರೂ ಕಾಲೇಜಿನಲ್ಲಿ ಒಟ್ಟಿಗೆ ಓದಿದವರು. ಹೀಗಿರುವಾಗ ಸ್ವಾಮಿಯ ಪತ್ನಿಯ ಮೇಲೆ ಶ್ರೀನಿವಾಸ್ ಕಣ್ಣು ಬಿದ್ದಿತ್ತು. ಹೇಗಾದರೂ ಆಕೆಯನ್ನು ಮದುವೆಯಾಗಲೇಬೇಕೆಂದು ಆತ ನಿರ್ಧಾರ ಮಾಡಿಕೊಂಡಿದ್ದ. ಆಕೆಯ ಜೊತೆ ನಿರಂತರವಾಗಿ ವೀಡಿಯೋ ಕಾಲ್ ಸಂಭಾಷಣೆಯನ್ನೂ ನಡೆಸುತ್ತಿದ್ದ ಆತ, ಅಗತ್ಯವಿದ್ದಾಗ ಹಣ ಸಹಾಯವನ್ನೂ ಮಾಡಿದ್ದ ಎನ್ನಲಾಗಿದೆ.
ಆರೋಪಿಯ ಬಂಧನ
ಫೆಬ್ರವರಿ 12ರಂದು ಕುಣಿಗಲ್ ತಾಲೂಕಿನ ಅಮೃತ್ತೂರಿಗೆ ಹಣ ಕೊಡುತ್ತೇನೆ ಎಂದು ಸ್ವಾಮಿಯನ್ನು ಕರೆಸಿದ್ದ ಆರೋಪಿ, ಆತನಿಗೆ ಮದ್ಯ ಕುಡಿಸಿ ಕೊಲೆ ಮಾಡಿದ್ದಾನೆ. ನಂತರ ಶವವನ್ನು ಬಾವಿಗೆ ಎಸೆದು ಸಾಕ್ಷ್ಯ ನಾಶಪಡಿಸಲು ಯತ್ನಿಸಿದ್ದಾನೆ. ಪೊಲೀಸರು ವಾಕ್ ಮತ್ತು ಶ್ರಾವಣ ತಜ್ಞರ ಸಹಾಯದಿಂದ ವಿಡಿಯೋ ಕಾಲ್ ಮಾಹಿತಿ ಸಂಗ್ರಹಿಸಿ ಆರೋಪಿಯನ್ನು ಬಂಧಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಿದ್ದು, ಮತ್ತೊಬ್ಬ ಆರೋಪಿಗಾಗಿ ಹುಡುಕಾಟ ಮುಂದುವರಿದಿದೆ.
ಬಾಲಿವುಡ್ ನಟ ರಣವೀರ್ ಸಿಂಗ್ (Ranveer Singh) ಅಭಿನಯದ ‘ಧುರಂಧರ್ 2’ ಸಿನಿಮಾ ದೊಡ್ಡ ಹಿಟ್ ಆಗಿದೆ. ಸತತ ಸೋಲಿನಿಂದ ಕಂಗೆಟ್ಟಿದ್ದ ರಣ್ವೀರ್ ಸಿಂಗ್ಗೆ ‘ಧುರಂಧರ್’ ಸರಣಿ ದೊಡ್ಡ ಗೆಲುವು ನೀಡಿದೆ, ಮಾತ್ರವಲ್ಲದೆ ತಾವೊಬ್ಬ ಸ್ಟಾರ್ ನಟ ಎಂಬುದನ್ನು ರಣ್ವೀರ್ ಮತ್ತೆ ಬಾಲಿವುಡ್ಗೆ ಸಾರಿ ಹೇಳಿದ್ದಾರೆ. ಸಿನಿಮಾನಲ್ಲಿ ರಣ್ವೀರ್ ನಟನೆಯ ಬಗ್ಗೆ ಬಹಳ ಮೆಚ್ಚುಗೆ ವ್ಯಕ್ತವಾಗಿದೆ. ಅದರಲ್ಲೂ ‘ಧುರಂಧರ್ 2’ ಕ್ಲೈಮ್ಯಾಕ್ಸ್ ವೇಳೆ ಸಾಕಷ್ಟು ದೈಹಿಕ ನೋವು ಅನುಭವಿಸಿ ನಟಿಸಿದ ರೀತಿಯ ಬಗ್ಗೆ ಅತೀವ ಮೆಚ್ಚುಗೆ ವ್ಯಕ್ತವಾಗಿದೆ. ಆದರೆ ಇದು ರಣ್ವೀರ್ ಸಿಂಗ್ಗೆ ಹೊಸದೇನೂ ಅಲ್ಲ. ನಟನೆ ಆರಂಭಿಸಿದಾಗಿನಿಂದಲೂ ಆ ಡೆಡಿಕೇಷನ್, ಪಾತ್ರದ ಬಗೆಗಿನ ನಿಷ್ಠೆ ಹಾಗೆಯೇ ಇದೆ. ಇದನ್ನು ಉದಾಹರಣೆ ಸಹಿತವಾಗಿ ನಿರ್ದೇಶಕ ಅನುರಾಗ್ ಕಶ್ಯಪ್ ವಿವರಿಸಿದ್ದಾರೆ.
ರಣ್ವೀರ್ ಸಿಂಗ್ ನಾಯಕನಾಗಿ ನಟಿಸಿದ ಎರಡನೇ ಸಿನಿಮಾ ‘ಲುಟೇರ’ 2013 ರಲ್ಲಿ ಬಿಡುಗಡೆ ಆಗಿತ್ತು. ಸಿನಿಮಾ ನಿರ್ದೇಶಿಸಿದ್ದು ವಿಕ್ರಮಾದಿತ್ಯ ಮೋಟ್ವಾನಿ, ನಿರ್ಮಾಣ ಮಾಡಿದ್ದು ಅನುರಾಗ್ ಕಶ್ಯಪ್. ಇದೀಗ ಅನುರಾಗ್ ಕಶ್ಯಪ್ ಅವರು ತೆಲುಗಿನ ‘ಡಕೈತ್’ ಸಿನಿಮಾನಲ್ಲಿ ನಟಿಸಿದ್ದು, ಸಿನಿಮಾದ ಪ್ರಚಾರದ ವೇಳೆ ‘ಧುರಂಧರ್’ ಬಗ್ಗೆ ಮಾತನಾಡುತ್ತಾ, ರಣ್ವೀರ್ ಸಿಂಗ್ ಅವರ ಡೆಡಿಕೇಶನ್ ಎಂಥಹದ್ದು ಎಂದು ಹೇಳಿದ್ದಾರೆ.
‘ಲುಟೇರಾ’ ಚಿತ್ರದ ಕ್ಲೈಮ್ಯಾಕ್ಸ್ ದೃಶ್ಯದಲ್ಲಿ ರಣವೀರ್ ಅವರ ಪಾತ್ರಕ್ಕೆ ಗುಂಡು ತಗಲುತ್ತದೆ. ಆ ಗುಂಡೇಟಿನ ನೈಜ ನೋವನ್ನು ಅನುಭವಿಸಲು ಮತ್ತು ಅದನ್ನು ತೆರೆಯ ಮೇಲೆ ಸರಿಯಾಗಿ ಬಿಂಬಿಸಲು ರಣವೀರ್ ಯಾರಿಗೂ ಹೇಳದಂತೆ ತಮ್ಮ ಹೊಟ್ಟೆಗೆ ಒಂದು ಕ್ಲಿಪ್ ಅನ್ನು ಜೋರಾಗಿ ಚುಚ್ಚಿಕೊಂಡಿದ್ದರಂತೆ. ‘ಅವರು ನಟನೆಯಲ್ಲಿ ಎಷ್ಟು ಮಗ್ನರಾಗಿದ್ದರೆಂದರೆ, ಆ ಕ್ಲಿಪ್‌ನಿಂದಾದ ಗಾಯದ ತೀವ್ರತೆಯಿಂದಾಗಿ ನಾವು ಅವರನ್ನು ಆಸ್ಪತ್ರೆಗೆ ಕರೆದೊಯ್ಯಬೇಕಾಯಿತು. ತಮಗೆ ನೋವಾಗುತ್ತಿದ್ದರೂ ಅವರು ಯಾರೊಂದಿಗೂ ಹಂಚಿಕೊಳ್ಳಲಿಲ್ಲ. ಅವರಿಗೆ ಅಲ್ಲಿಂದ ಕದಲಲು ಸಾಧ್ಯವಾಗದಿದ್ದಾಗ ಮಾತ್ರ ನಮಗೆ ವಿಷಯ ತಿಳಿಯಿತು ಎಂದು ಅನುರಾಗ್ ಕಶ್ಯಪ್ ಹೇಳಿದ್ದಾರೆ.
‘ಧುರಂಧರ್’ ದೊಡ್ಡ ಸಿನಿಮಾ ‘ಲುಟೇರ’, ‘ಧುರಂಧರ್’ ಅಷ್ಟು ದೊಡ್ಡ ಸಿನಿಮಾ ಅಲ್ಲ, ಅಷ್ಟು ಕಲೆಕ್ಷನ್ ಸಹ ಮಾಡಲಿಲ್ಲ ಆದರೆ ರಣ್ವೀರ್ ಸಿಂಗ್ ಅವರ ಪಾತ್ರದ ನಿಷ್ಠೆ ಬದಲಾಗುವುದಿಲ್ಲ. ಅವರು ಆಗಲೂ ಹಾಗೆಯೇ ಇದ್ದರು. ಅವರು ತಮ್ಮ ಪಾತ್ರಕ್ಕಾಗಿ ಏನು ಬೇಕಾದರೂ ಮಾಡಲು ತಯಾರಾಗಿಬಿಡುತ್ತಾರೆ’ ಎಂದಿದ್ದಾರೆ ಅನುರಾಗ್ ಕಶ್ಯಪ್.
ರಣವೀರ್ ಸಿಂಗ್ ಅಭಿನಯದ ‘ಧುರಂಧರ್’ ಕಳೆದ ವರ್ಷ ಬಿಡುಗಡೆ ಆಗಿ 1300 ಕೋಟಿ ಮೊತ್ತ ಕಲೆ ಹಾಕಿತ್ತು. ಅದರ ಮುಂದುವರಿದ ಭಾಗ ‘ಧುರಂಧರ್: ದಿ ರಿವೆಂಜ್’ (ಮಾರ್ಚ್ 19 ರಂದು ಬಿಡುಗಡೆ) ಈಗಾಗಲೇ 1600 ಕೋಟಿ ರೂ.ಗಳಿಗೂ ಅಧಿಕ ಗಳಿಕೆ ಮಾಡಿ ಬಾಕ್ಸ್ ಆಫೀಸ್‌ನಲ್ಲಿ ಹೊಸ ದಾಖಲೆ ಬರೆದಿವೆ. ಆದಿತ್ಯ ಧರ್ ನಿರ್ದೇಶನದ ಈ ಚಿತ್ರದಲ್ಲಿ ಅರ್ಜುನ್ ರಾಂಪಾಲ್, ಸಂಜಯ್ ದತ್ ಮತ್ತು ಆರ್ ಮಾಧವನ್ ಕೂಡ ನಟಿಸಿದ್ದಾರೆ.
ಬೆಂಗಳೂರು, ಏ.10: ಬೆಂಗಳೂರಿನಲ್ಲಿ ದಿನನಿತ್ಯ ಎಲ್‌ಪಿಜಿ ಗ್ಯಾಸ್ ಬಗ್ಗೆ ಒಂದೊಂದು ಗೊಂದಲವಾಗಿತ್ತು. ಹೊಟೇಲ್, ಹಲವಾರು ರೆಸ್ಟೋರೆಂಟ್‌ಗಳು ತುಂಬಾ ಸಂಕಷ್ಟಕ್ಕೆ ಒಳಗಾಗಿತ್ತು. ಜನರಿಗೆ ರುಚಿರುಚಿಯಾದ ತಿಂಡಿ, ಊಟಗಳನ್ನು ಮಾಡಲಾಗುತ್ತಿಲ್ಲ ಎಂಬ ಕೊರಗು ಕೂಡ ಅವರನ್ನು ಕಾಡುತ್ತಿತ್ತು. ಇದೀಗ ಕೇಂದ್ರ ಬೆಂಗಳೂರು ಹೊಟೇಲ್, ರೆಸ್ಟೋರೆಂಟ್‌ಗಳಿಗೆ ಬಿಗ್ ಗುಡ್ ನ್ಯೂಸ್ವೊಂದನ್ನು ನೀಡಿದೆ. ಕೇಂದ್ರ ಸರ್ಕಾರವು ತಮ್ಮ ಎಲ್‌ಪಿಜಿ ಅವಶ್ಯಕತೆಗಳಲ್ಲಿ 70% ವರೆಗೆ ಪುನಃಸ್ಥಾಪಿಸುವುದಾಗಿ ಘೋಷಿಸಿದೆ ಇದರಿಂದ ಹೊಟೇಲ್ ಉದ್ಯಮಕ್ಕೆ ಬೂಸ್ಟ್ ನೀಡಿದಂತಾಗಿದೆ. ನಗರದಲ್ಲಿ ಹಲವಾರು ರೆಸ್ಟೋರೆಂಟ್‌ಗಳು ಮತ್ತು ತಿನಿಸುಗಳು ತಾತ್ಕಾಲಿಕವಾಗಿ ಮುಚ್ಚಲ್ಪಟ್ಟ ಹಿನ್ನೆಲೆಯಲ್ಲಿ ಈ ಕ್ರಮವನ್ನು ಕೇಂದ್ರ ಸರ್ಕಾರ ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ ಎಂದು ಹೇಳಲಾಗಿದೆ.
ಕೇಂದ್ರವು ವಾಣಿಜ್ಯ ಮತ್ತು ಕೈಗಾರಿಕಾ ಬಳಕೆದಾರರಿಗಿಂತ ದೇಶೀಯ ಗೃಹೋಪಯೋಗಿ ಪೂರೈಕೆಗೆ ಆದ್ಯತೆ ನೀಡಿದ ನಂತರ ಈ ಬಿಕ್ಕಟ್ಟು ಶುರುವಾಗಿತ್ತು. ಆತಿಥ್ಯ ಮತ್ತು ಉತ್ಪಾದನಾ ವಲಯಗಳಾದ್ಯಂತದ ವ್ಯವಹಾರಗಳು ಕಾರ್ಯನಿರ್ವಹಿಸಲು ಹೆಣಗಾಡುತ್ತಿದ್ದವು. ಇದಿಗ ದೇಶಾದ್ಯಂತದ ಕೈಗಾರಿಕಾ ಘಟಕಗಳಿಗೆ ಎಲ್‌ಪಿಜಿಯನ್ನು ನೀಡುವ ಮೂಲಕ ಎರಡು ಮಹತ್ವದ ಕ್ರಮಗಳನ್ನು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಈ ವಾರ ಘೋಷಿಸಿದೆ. ಒಂದು ಅಡುಗೆ ಅನಿಲ ಪಡೆಯಲು ಕಷ್ಟಪಡುವ ವಲಸೆ ಕಾರ್ಮಿಕರಿಗೆ, ಎರಡನೇಯದ್ದು ಹೊಟೇಲ್, ರೆಸ್ಟೋರೆಂಟ್‌ಗಳಿಗೆ ನೀಡಲು ಮುಂದಾಗಿದೆ.
ಕೈಗಾರಿಕಾ ಘಟಕಗಳು ಈಗ ತಮ್ಮ ಎಲ್‌ಪಿಜಿ ಅವಶ್ಯಕತೆಗಳಲ್ಲಿ 70% ವರೆಗೆ ಪಡೆಯಲಿವೆ ಎಂದು ಸಚಿವಾಲಯ ಬುಧವಾರ ಘೋಷಿಸಿತು, ಇಂಧನ ಪೂರೈಕೆ ಒತ್ತಡವನ್ನು ಕಡಿಮೆ ಮಾಡಲು ಮತ್ತು ಉತ್ಪಾದನೆಯನ್ನು ಸರಾಗವಾಗಿ ನಡೆಸಲು ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ. ಇನ್ನು ಕೇಂದ್ರ ಸರ್ಕಾರ ನೀಡಿರುವ ಈ ನಿರ್ದೇಶನವು ಔಷಧಗಳು, ಆಹಾರ ಸಂಸ್ಕರಣೆ, ಪಾಲಿಮರ್‌ಗಳು, ಕೃಷಿ, ಪ್ಯಾಕೇಜಿಂಗ್, ಬಣ್ಣ, ಉಕ್ಕು, ಲೋಹಗಳು, ಸೆರಾಮಿಕ್ಸ್, ಗಾಜು, ಫೌಂಡರೀಸ್, ಫೋರ್ಜಿಂಗ್, ಯುರೇನಿಯಂ, ಭಾರ ನೀರು, ಬೀಜಗಳು, ಏರೋಸಾಲ್ ತಯಾರಿಕೆ ಮತ್ತು ಇನ್ನೂ ಹೆಚ್ಚಿನವುಗಳನ್ನು ಒಳಗೊಂಡಿದೆ.
ಸಚಿವಾಲಯದ ಸುತ್ತೋಲೆಯ ಪ್ರಕಾರ, ಕೈಗಾರಿಕಾ ಘಟಕಗಳು ಈಗ ಮಾರ್ಚ್ 2026 ರ ಪೂರ್ವದ ಬೃಹತ್ ದೇಶೀಯವಲ್ಲದ LPG ಬಳಕೆಯ ಮಟ್ಟಗಳಲ್ಲಿ 70% ವರೆಗೆ ಪಡೆಯಬಹುದು, ಇದು ದಿನಕ್ಕೆ ಒಟ್ಟಾರೆ ವಲಯ ಮಿತಿ 0.2 TMT ಗೆ ಒಳಪಟ್ಟಿರುತ್ತದೆ. ನೈಸರ್ಗಿಕ ಅನಿಲವು ಪರ್ಯಾಯವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗದ ವಿಶೇಷ ಉದ್ದೇಶಗಳಿಗಾಗಿ LPG ಬಳಸುವ ಘಟಕಗಳಿಗೆ ಆದ್ಯತೆ ನೀಡುವುದಾಗಿ ಸಚಿವಾಲಯ ಹೇಳಿದೆ. ಇದರ ಜತೆಗೆ ದೇಶಾದ್ಯಂತ ವಲಸೆ ಕಾರ್ಮಿಕರಿಗೂ ಹೆಚ್ಚಿನ ಅಡುಗೆ ಎಲ್ಪಿಜಿಗಳನ್ನು ಮುಂದಾಗಿದೆ. 5 ಕೆಜಿ ಎಲ್‌ಪಿಜಿ ಸಿಲಿಂಡರ್‌ಗಳ ಪೂರೈಕೆಯನ್ನು ಮಾಡಬೇಕು ಎಂದು ಹೇಳಿದೆ. ಸಣ್ಣ ಸಿಲಿಂಡರ್‌ಗಳು ಉಚಿತ ವ್ಯಾಪಾರ LPG (FTL) ವರ್ಗದ ಅಡಿಯಲ್ಲಿ ಬರುತ್ತವೆ ಮತ್ತು LPG ವಿತರಣಾ ಏಜೆನ್ಸಿಗಳು, ಆಯ್ದ ಪೆಟ್ರೋಲ್ ಪಂಪ್‌ಗಳು ಮತ್ತು ಚಿಲ್ಲರೆ ಮಾರಾಟ ಮಳಿಗೆಗಳಲ್ಲಿ ಖರೀದಿಗೆ ಲಭ್ಯವಿದೆ. ಗ್ರಾಹಕರು ಒಂದನ್ನು ಖರೀದಿಸಲು ಸರ್ಕಾರ ನೀಡುವ ಯಾವುದೇ ಗುರುತಿನ ಚೀಟಿಯನ್ನು ತೋರಿಸಿದರೆ ಸಾಕು ಎಂದು ಹೇಳಿದೆ.
ಇಂಡೇನ್ ಎಫ್‌ಟಿಎಲ್ ಸಿಲಿಂಡರ್‌ನ ಬೆಲೆ 1,505 ರೂ., ನಂತರದ ಪ್ರತಿ ರೀಫಿಲ್ ಬೆಲೆ 630 ರೂ.. ಎಚ್‌ಪಿ ಎಫ್‌ಟಿಎಲ್ ಸಿಲಿಂಡರ್‌ಗಳ ಬೆಲೆ 1,519 ರೂ., ರೀಫಿಲ್‌ಗಳು 631 ರೂ.ಗೆ ಲಭ್ಯವಿದೆ.
ಪಾಟ್ನಾ, ಏಪ್ರಿಲ್ 10: ಕಾನೂನು ಕೈಗೆತ್ತಿಕೊಂಡರೆ ಆಗುವ ಅನಾಹುತಕ್ಕೆ ಬಿಹಾರದ ಅರಾರಿಯಾ ಜಿಲ್ಲೆಯ ಫೋರ್ಬ್ಸ್‌ಗಂಜ್ ಸಾಕ್ಷಿಯಾಗಿದೆ. ಗುರುವಾರ ಇಲ್ಲಿ ನಡೆದ ಅವಳಿ ಕೊಲೆ(Murder)ಗಳು ಕೇವಲ ಕ್ರೌರ್ಯದ ಪರಾಕಾಷ್ಠೆಯಲ್ಲ, ಬದಲಿಗೆ ಕಾನೂನು ಸುವ್ಯವಸ್ಥೆಯ ವೈಫಲ್ಯದ ಪ್ರತಿಬಿಂಬದಂತಿದೆ. ಘಟನೆಯ ಆರಂಭವಾಗಿದ್ದು ಒಂದು ಸಣ್ಣ ಪಾರ್ಕಿಂಗ್ ವಿವಾದದಿಂದ. ರಸ್ತೆಬದಿಯ ವ್ಯಾಪಾರಿ ರವಿ ಚೌಹಾಣ್ ಹಾಗೂ ಪಿಕಪ್ ಚಾಲಕ ಅಲಿ ಹುಸೇನ್ ನಡುವೆ ವಾಹನ ನಿಲ್ಲಿಸುವ ವಿಚಾರವಾಗಿ ಮಾತಿನ ಚಕಮಕಿ ನಡೆದಿದೆ. ‘ಈ ಸಣ್ಣ ಜಗಳ ವಿಕೋಪಕ್ಕೆ ತಿರುಗಿದಾಗ, ರವಿ ಚೌಹಾಣ್ ಅತ್ಯಂತ ಕ್ರೂರವಾಗಿ ಅಲಿ ಹುಸೇನ್ ಮೇಲೆ ಹಲ್ಲೆ ನಡೆಸಿ, ನೂರಾರು ಜನರ ಮುಂದೆಯೇ ಆತನ ಶಿರಚ್ಛೇದ ಮಾಡಿದ್ದಾನೆ.
ಅಷ್ಟಕ್ಕೇ ನಿಲ್ಲದ ಹಂತಕ, ಕತ್ತರಿಸಿದ ತಲೆಯನ್ನು ಹಿಡಿದು ರಸ್ತೆಯಲ್ಲಿ ಮೆರವಣಿಗೆ ಮಾಡಿ ಅಟ್ಟಹಾಸ ಮೆರೆದಿದ್ದಾನೆ. ನಂತರ ಶವವನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾನೆ. ಈ ಘೋರ ಕೃತ್ಯದ ಸುದ್ದಿ ತಿಳಿಯುತ್ತಿದ್ದಂತೆಯೇ ಅಲಿ ಹುಸೇನ್ ಸಂಬಂಧಿಕರು ಮತ್ತು ಸ್ಥಳೀಯರು ಆಕ್ರೋಶಗೊಂಡರು. ಚೌಹಾಣ್ ಅಡಗಿದ್ದ ಜಾಗಕ್ಕೆ ನುಗ್ಗಿದ ಜನಸಮೂಹ, ಆತನನ್ನು ಎಳೆದೊಯ್ದು ಅದೇ ಅಪರಾಧ ನಡೆದ ಸ್ಥಳಕ್ಕೆ ತಂದಿದೆ. ಪೊಲೀಸರು ಸ್ಥಳದಲ್ಲಿದ್ದರೂ ಸಹ, ಕೋಪಗೊಂಡ ಗುಂಪು ಯಾರ ಮಾತನ್ನೂ ಕೇಳುವ ಸ್ಥಿತಿಯಲ್ಲಿರಲಿಲ್ಲ.
ಪೊಲೀಸರ ಕಣ್ಣೆದುರೇ ರವಿ ಚೌಹಾಣ್ ಮೇಲೆ ಕೋಲು ಮತ್ತು ಕಬ್ಬಿಣದ ರಾಡ್‌ಗಳಿಂದ ಭೀಕರವಾಗಿ ಹಲ್ಲೆ ನಡೆಸಲಾಗಿದೆ. ರಕ್ತಪಿಪಾಸುಗಳಂತೆ ವರ್ತಿಸಿದ ಗುಂಪು ಆತನನ್ನು ಅಲ್ಲಿಯೇ ಹೊಡೆದು ಕೊಂದಿದೆ.
ಒಂದೇ ದಿನ ನಡೆದ ಈ ಎರಡು ಭೀಕರ ಕೊಲೆಗಳಿಂದಾಗಿ ಇಡೀ ಪ್ರದೇಶ ಸ್ಮಶಾನ ಸದೃಶವಾಗಿದೆ. ಪೊಲೀಸರು ಮತ್ತು ಸಾರ್ವಜನಿಕರ ನಡುವೆ ತೀವ್ರ ಮಾತಿನ ಚಕಮಕಿ ನಡೆದಿದ್ದು, ಪರಿಸ್ಥಿತಿ ಕೈಮೀರುತ್ತಿರುವುದನ್ನು ಕಂಡು ಹೆಚ್ಚಿನ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿದೆ.
ಇಡೀ ಪ್ರದೇಶದಲ್ಲಿ ಗಸ್ತು ಚುರುಕುಗೊಳಿಸಲಾಗಿದ್ದು, ಎರಡು ಕಡೆಯ ಹತ್ಯೆಗಳ ಬಗ್ಗೆ ತನಿಖೆ ಆರಂಭಿಸಲಾಗಿದೆ. ಒಂದು ಸಣ್ಣ ಪಾರ್ಕಿಂಗ್ ವಿವಾದವು ಎರಡು ಕುಟುಂಬಗಳನ್ನು ಬೀದಿಪಾಲು ಮಾಡಿದ್ದು, ಇಡೀ ಜಿಲ್ಲೆಯನ್ನು ಆತಂಕದ ಸುಳಿಯಲ್ಲಿ ಸಿಲುಕಿಸಿದೆ.
ಬೆಂಗಳೂರು, ಏಪ್ರಿಲ್ 10: ಮನೆ ಮುಂಭಾಗ ನಿಲ್ಲಿಸಿದ್ದ ಬೈಕನ್ನು ಕಳ್ಳನೊಬ್ಬ ಹಾಡಹಗಲೇ ಹೊತ್ತೊಯ್ದಿರುವ ಘಟನೆ ಬೆಂಗಳೂರಿನ ಲಕ್ಕಸಂದ್ರದಲ್ಲಿ ನಡೆದಿದೆ. ಮಾಲೀಕರು ಮಾಡಿದ ಒಂದು ಸಣ್ಣ ನಿರ್ಲಕ್ಷ್ಯ ಕಳ್ಳನಿಗೆ ವರದಾನವಾಗಿ ಪರಿಣಮಿಸಿದ್ದು, ಬೈಕ್ ಕಳ್ಳತನದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಲಕ್ಕಸಂದ್ರದ 16ನೇ ಕ್ರಾಸ್ ಬಳಿ ಏಪ್ರಿಲ್ 9 ರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಈ ಘಟನೆ ಸಂಭವಿಸಿದೆ. ನಿವಾಸಿಯೊಬ್ಬರು ಸುಜುಕಿ ಆಕ್ಸೆಸ್ 125 ಬೈಕ್ ಅನ್ನು ಮನೆ ಮುಂದೆ ನಿಲ್ಲಿಸಿದ್ದರು. ಆದರೆ, ಮರೆತು ಬೈಕ್‌ನಲ್ಲಿಯೇ ಕೀ ಬಿಟ್ಟು ಹೋಗಿದ್ದರು. ಇದನ್ನು ಗಮನಿಸಿದ ಕಳ್ಳ, ಯಾರೂ ಇಲ್ಲದ ಸಮಯ ನೋಡಿ ನಿರಾಯಾಸವಾಗಿ ಬೈಕ್ ಸ್ಟಾರ್ಟ್ ಮಾಡಿ ಪರಾರಿಯಾಗಿದ್ದಾನೆ.
ಬೈಕ್ ಕಳುವಾಗಿರುವುದನ್ನು ಕಂಡು ಆತಂಕಕ್ಕೊಳಗಾದ ಮಾಲೀಕರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಕಳ್ಳತನ ಬೆಳಕಿಗೆ ಬಂದಿದೆ. ಈ ಸಂಬಂಧ ಆಡುಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸಿಸಿಟಿವಿ ಆಧಾರದ ಮೇಲೆ ಕಳ್ಳನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿಕ್ಲಿಕ್ ಮಾಡಿ
ಸಿನಿಮಾ (Cinema) ಅಥವಾ ಧಾರಾವಾಹಿ ನಟನೆಯಲ್ಲಿ ಬ್ಯುಸಿಯಾದವರು ಓದಿಗೆ ತಿಲಾಂಜಲಿ ಇಡುವವರೇ ಹೆಚ್ಚು. ಮೊದಲೆಲ್ಲ ನಟಿಯರು ಸಿನಿಮಾ ಅವಕಾಶ ಸಿಕ್ಕರೆ ಓದನ್ನೇ ನಿಲ್ಲಿಸಿಬಿಡುತ್ತಿದ್ದರು, ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಸಿನಿಮಾ ರಂಗದಲ್ಲಿ ಉತ್ತಮ ಶಿಕ್ಷಿತರು ಹೆಚ್ಚಾಗುತ್ತಿದ್ದಾರೆ, ಅದರಲ್ಲೂ ಶಿಕ್ಷಿತ ನಟಿಯರ ಸಂಖ್ಯೆ ಹೆಚ್ಚಾಗುತ್ತಿದೆ. ನಿನ್ನೆ (ಏಪ್ರಿಲ್ 09) ದ್ವಿತೀಯ ಪಿಯುಸಿ ಫಲಿತಾಂಶ ಹೊರಬಿದ್ದಿದ್ದು, ಕನ್ನಡ ಸಿನಿಮಾ ಮತ್ತು ಕಿರುತೆರೆಯಲ್ಲಿ ಜನಪ್ರಿಯವಾಗಿರುವ ನಟಿ ಅಂಕಿತಾ ಜಯರಾಮ್, ತಮ್ಮ ದ್ವಿತೀಯ ಪಿಯುಸಿ ಅಂಕಗಳ ಮಾಹಿತಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
‘ಯುವರಾಜ’, ‘ಯಜಮಾನ’ ಸೇರಿದಂತೆ ಇನ್ನೂ ಕೆಲ ಕನ್ನಡ ಸಿನಿಮಾಗಳಲ್ಲಿ ಮತ್ತು ಕೆಲವು ಕನ್ನಡ ಧಾರಾವಾಹಿಗಳಲ್ಲಿಯೂ ನಟಿಸಿರುವ ಅಂಕಿತಾ ಜಯರಾಮ್ ಅವರು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತ್ಯುತ್ತಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಅವರು ದ್ವಿತೀಯ ಪಿಯು ಪರೀಕ್ಷೆಯಲ್ಲಿ 97% ಅಂಕಗಳನ್ನು ಗಳಿಸಿಕೊಂಡಿದ್ದಾರೆ.
ಬಾಲನಟಿಯಾಗಿ ಚಿತ್ರರಂಗ ಪ್ರವೇಶಿಸಿದ ಅಂಕಿತಾ ಜಯರಾಮ್, ದರ್ಶನ್ ಜೊತೆ ‘ಕ್ರಾಂತಿ’, ಪುನೀತ್ ರಾಜ್‌ಕುಮಾರ್ ಜೊತೆಗೆ ‘ಯುವರಾಜ’, ಡಾಲಿ ನಟನೆಯ ‘ರತ್ನನ್ ಪ್ರಪಂಚ’, ಶಿವರಾಜ್ ಕುಮಾರ್ ಜೊತೆಗೆ ‘ವೇದ’, ‘ಶೋಕಿವಾ’, ಶ್ರೀಮುರಳಿಯ ‘ಭರಾಟೆ’ ಇನ್ನೂ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ‘ಭೂಮಿಗೆ ಬಂದ ಭಗವಂತ’ ಧಾರಾವಾಹಿ ಪ್ರಸ್ತುತ ‘ಕರ್ಣ’ ಧಾರಾವಾಹಿಯ ರಿಯಾ ಪಾತ್ರದಲ್ಲಿ ನಟಿಸುತ್ತಿದ್ದಾರೆ. ‘ಕಾಗದ’ ಸಿನಿಮಾದ ಮೂಲಕ ನಾಯಕಿಯಾಗಿಯೂ ಗುರುತಿಸಿಕೊಂಡಿದ್ದಾರೆ. ಅಂಕಿತಾ ಮೊದಲಿನಿಂದಲೂ ಒಳ್ಳೆಯ ವಿದ್ಯಾರ್ಥಿನಿ ಈ ಮೊದಲು ಎಸ್ಎಸ್ಎಲ್ಸಿಯಲ್ಲೂ ಅವರು 95% ಅಂಕ ಗಳಿಸಿ ಸಾಧನೆ ಮಾಡಿದ್ದರು.
ತಮ್ಮ ದ್ವಿತೀಯ ಪಿಯುಸಿ ಫಲಿತಾಂಶವನ್ನು ಫೇಸ್ಬುಕ್ನಲ್ಲಿ ಹಂಚಿಕೊಂಡಿರುವ ನಟಿ ಅಂಕಿತಾ, “ಮಗಳಿಂದ ಅಪ್ಪನಿಗೆ ಹುಟ್ಟುಹಬ್ಬದ ಕಾಣಿಕೆ ಇದು. ಕಂಡ ಕನಸು ನನಸಾದ ಸುದಿನ. ಭಗವಂತ, ಗುರು ರಾಯರ ಆಶೀರ್ವಾದ ಹಾಗೂ ನಿಮ್ಮೆಲ್ಲರ ಹಾರೈಕೆಯಿಂದ ಈ ಸಾಧನೆ ಮಾಡಲು ಸಾಧ್ಯವಾಯಿತು” ಎಂದಿದ್ದಾರೆ. ಅಂಕಿತಾ ಬೆಂಗಳೂರಿನ ಎಸ್‌ಎಸ್‌ಎಂಆರ್‌ವಿ (SSMRV) ಕಾಲೇಜಿನಲ್ಲಿ ಕಾಮರ್ಸ್ ವಿಭಾಗದಲ್ಲಿ ವಿದ್ಯಾಭ್ಯಾಸ ಮಾಡಿದ್ದಾರೆ. ಸ್ಟಾಟಿಸ್ಟಿಕ್ಸ್ (Statistics) ನಲ್ಲಿ 100ಕ್ಕೆ 100 ಅಂಕ ಪಡೆದಿದ್ದಾರೆ. ಬಿಸಿನೆಸ್ ಸ್ಟಡೀಸ್ ನಲ್ಲಿ 98, ಕನ್ನಡದಲ್ಲಿ 97, ಅಕೌಂಟೆನ್ಸಿ ಯಲ್ಲಿ 96, ಇಂಗ್ಲಿಷ್ 94 ಅಂಕ ಮತ್ತು ಕಂಪ್ಯೂಟರ್ ಸೈನ್ಸ್ 94 ಅಂಕಗಳನ್ನು ಪಡೆದುಕೊಂಡಿದ್ದಾರೆ.
ಹುಬ್ಬಳ್ಳಿ, ಏಪ್ರಿಲ್ 10: ಹಜರತ್ ನಿಜಾಮುದ್ದೀನ್ ಹಾಗೂ ಯಶವಂತಪುರ ಮಧ್ಯೆ ಸಂಚರಿಸುವ ಕರ್ನಾಟಕ ಸಂಪರ್ಕ ಕ್ರಾಂತಿ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ: 12650) ರೈಲಿನಲ್ಲಿ ಯುವಕರಿಬ್ಬರು ಬಹಿರಂಗವಾಗಿ ಗಾಂಜಾ ಸೇವನೆ ಮಾಡಿದ್ದಾರೆ. ರಾತ್ರಿ ಪ್ರಯಾಣದ ವೇಳೆ ಸಿಗರೇಟ್‌ನಲ್ಲಿ ಗಾಂಜಾ ಸೇರಿಸಿ ಸೇದುತ್ತಾ ಸಹಪ್ರಯಾಣಿಕರಿಗೆ ಕಿರಿಕಿರಿ ಉಂಟುಮಾಡಿದ್ದಾರೆ. ಸಾರ್ವಜನಿಕರ ಭಯವಿಲ್ಲದೆ ಅಟ್ಟಹಾಸ ಮೆರೆದ ಈ ಯುವಕರ ಕೃತ್ಯವನ್ನು ಪ್ರಯಾಣಿಕರು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದು, ವಿಡಿಯೋ ಈಗ ವೈರಲ್ ಆಗಿದೆ. ರೈಲ್ವೆ ಪೊಲೀಸರು ಇವರನ್ನು ಪತ್ತೆಹಚ್ಚಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿಕ್ಲಿಕ್ ಮಾಡಿ
ಬೆಂಗಳೂರು, ಏಪ್ರಿಲ್ 10: ಭಾರತೀಯ ಹವಾಮಾನ ಇಲಾಖೆ (IMD) ನೀಡಿರುವ ಇತ್ತೀಚಿನ ಮುನ್ಸೂಚನೆಯಂತೆ, ಉತ್ತರ ಕರ್ನಾಟಕದ ಬಾಗಲಕೋಟೆ, ಬೆಳಗಾವಿ, ರಾಯಚೂರು, ಕೊಪ್ಪಳ, ಬಳ್ಳಾರಿ, ಧಾರವಾಡ ಮತ್ತು ಗದಗ ಜಿಲ್ಲೆಗಳಲ್ಲಿ ಉಷ್ಣ ಅಲೆ (Heat Wave) ಮುಂದುವರಿಯಲಿದೆ. ವಿಜಯನಗರ, ಕಲಬುರಗಿ, ಯಾದಗಿರಿ ಮತ್ತು ಹಾವೇರಿಯಲ್ಲಿಯೂ ಬಿಸಿಲಿನ ಝಳ ಹೆಚ್ಚಾಗಲಿದೆ. ರಾಜ್ಯದಾದ್ಯಂತ ಮುಂದಿನ 5 ದಿನಗಳವರೆಗೆ ಗರಿಷ್ಠ ತಾಪಮಾನದಲ್ಲಿ ಯಾವುದೇ ದೊಡ್ಡ ಮಟ್ಟದ ಇಳಿಕೆ ಕಂಡುಬರುವುದಿಲ್ಲ. ಬದಲಿಗೆ ಹಂತ ಹಂತವಾಗಿ 2 ಡಿಗ್ರಿ ಸೆಲ್ಶಿಯಸ್ನಿಂದ 3 ಡಿಗ್ರಿ ಸೆಲ್ಶಿಯಸ್ ವರೆಗೆ ತಾಪಮಾನ ಏರಿಕೆಯಾಗುವ ಸಾಧ್ಯತೆಯಿದೆ.
ಮಧ್ಯ ಕರ್ನಾಟಕ ಭಾಗವಾದ ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿ ಬಿಸಿಲು ಮತ್ತು ಆರ್ದ್ರತೆಯಿಂದ ಕೂಡಿದ ವಾತಾವರಣ ಇರಲಿದೆ. ಬಾಗಲಕೋಟೆ, ರಾಯಚೂರು, ಬೆಳಗಾವಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಹಗಲಿನಲ್ಲಿ ಉಷ್ಣ ಅಲೆ ಮಾತ್ರವಲ್ಲದೆ, ರಾತ್ರಿಯ ಅವಧಿಯಲ್ಲೂ ಸಾಮಾನ್ಯಕ್ಕಿಂತ ಹೆಚ್ಚಿನ ತಾಪಮಾನ ದಾಖಲಾಗುವ ಸಾಧ್ಯತೆಯಿದೆ.
ಉಷ್ಣ ಅಲೆ ಮತ್ತು ಮುನ್ನೆಚ್ಚರಿಕೆ
ಉತ್ತರ ಒಳನಾಡಿನ ಜಿಲ್ಲೆಗಳಾದ ಕಲಬುರಗಿ, ವಿಜಯಪುರ ಮತ್ತು ಬಾಗಲಕೋಟೆಯಲ್ಲಿ ಗರಿಷ್ಠ ತಾಪಮಾನವು 40 ಡಿಗ್ರಿ ಸೆಲ್ಶಿಯಸ್ನಿಂದ 42 ಡಿಗ್ರಿ ಸೆಲ್ಶಿಯಸ್ ವರೆಗೆ ದಾಖಲಾಗುವ ಸಾಧ್ಯತೆಯಿದೆ. ಹೀಗಾಗಿ ಮಧ್ಯಾಹ್ನದ ಸಮಯದಲ್ಲಿ ಸಾರ್ವಜನಿಕರು ಹೊರಗೆ ಹೋಗುವಾಗ ಎಚ್ಚರಿಕೆ ವಹಿಸಬೇಕು.
ಹಲವೆಡೆ ಮಳೆ ಸಾಧ್ಯತೆ
ಮತ್ತೊಂದೆಡೆ, ಬಿಸಿಲಿನ ಬೇಗೆಯಿಂದ ಕಂಗೆಟ್ಟಿರುವ ವಿವಿಧ ಜಿಲ್ಲೆಗಳಲ್ಲಿ ಮುಂದಿನ ಮೂರು ದಿನಗಳ ಕಾಲ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದ್ದು, ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.
ಉಷ್ಣಾಘಾತದಿಂದ ಬಚಾವಾಗಲು ಇಲ್ಲಿದೆ ಟಿಪ್ಸ್
ಉಷ್ಣ ಅಲೆ ಹಾಗೂ ಉಷ್ಣಾಘಾತದಿಂದ (ಹೀಟ್ ಸ್ಟ್ರೋಕ್) ರಕ್ಷಿಸಿಕೊಳ್ಳಲು ಆರೋಗ್ಯ ಇಲಾಖೆ ಕೆಲವು ಸಲಹೆ ಸೂಚನೆಗಳನ್ನು ನೀಡಿದೆ. ಅವುಗಳು ಹೀಗಿವೆ;
ಮಧ್ಯಾಹ್ನ 12 ರಿಂದ 4 ಗಂಟೆಯವರೆಗೆ ಸೂರ್ಯನ ಬೆಳಕಿಗೆ ನೇರ ಮೈಯೊಡ್ಡುವುದನ್ನು ಆದಷ್ಟು ತಪ್ಪಿಸಿ.
ನಿಯಮಿತವಾಗಿ ನೀರು ಕುಡಿಯಿರಿ. ಎಳನೀರು, ಮಜ್ಜಿಗೆ ಅಥವಾ ಮನೆಯಲ್ಲಿ ತಯಾರಿಸಿದ ಹಣ್ಣಿನ ರಸಗಳನ್ನು ಸೇವಿಸಿ.
ತಿಳಿ ಬಣ್ಣದ, ಸಡಿಲವಾದ ಹತ್ತಿ ಬಟ್ಟೆಗಳನ್ನು ಧರಿಸಿ. ಹೊರಗೆ ಹೋಗುವಾಗ ಛತ್ರಿ ಅಥವಾ ಟೋಪಿಯನ್ನು ಬಳಸಿ.
ಕೆಫೀನ್ (ಕಾಫಿ/ಟೀ) ಮತ್ತು ಹೆಚ್ಚಿನ ಸಕ್ಕರೆಯುಕ್ತ ಪಾನೀಯಗಳ ಸೇವನೆ ಕಡಿಮೆ ಮಾಡಿ, ಇವು ದೇಹವನ್ನು ನಿರ್ಜಲೀಕರಣಗೊಳಿಸುತ್ತವೆ.
ಬೆಂಗಳೂರು ಸೇರಿ ಹಲವು ಜಿಲ್ಲೆಗಳಿಗೆ ಮಳೆ ಮುನ್ಸೂಚನೆ
ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಕೇಂದ್ರ (KSNDMC) ನೀಡಿರುವ ಮಾಹಿತಿಯಂತೆ, ದಕ್ಷಿಣ ಒಳನಾಡಿನ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮೈಸೂರು, ಮಂಡ್ಯ, ಕೊಡಗು ಮತ್ತು ಹಾಸನ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಮಲೆನಾಡಿನ ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಇರುವುದರಿಂದ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಿಸಿದೆ. ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ಸಮುದ್ರದ ಅಲೆಗಳ ಅಬ್ಬರ ಹೆಚ್ಚಿರಲಿದೆ ಎಂದು ಮುನ್ಸೂಚನೆ ನೀಡಲಾಗಿದೆ.
ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡದಲ್ಲೂ ಸಣ್ಣ ಪ್ರಮಾಣದ ಮಳೆಯಾಗುವ ಸಾಧ್ಯತೆ ಇದೆ. ಜೊತೆಗೆ ದಾವಣಗೆರೆ ಮತ್ತು ಚಿತ್ರದುರ್ಗದಲ್ಲಿ ಬಿಸಿಯಾದ ಗಾಳಿ ಇರಲಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿಕ್ಲಿಕ್ ಮಾಡಿ
ಭಾರತ ಚಿತ್ರರಂಗದಲ್ಲಿ (Indian Cinema) ಹಲವಾರು ಸೂಪರ್ ಸ್ಟಾರ್ ನಟರುಗಳಿದ್ದಾರೆ ಆದರೆ ಎಲ್ಲರಿಗಿಂತಲೂ ಭಿನ್ನ ಮತ್ತು ವರ್ಸಟೈಲ್ ಸೂಪರ್ ಸ್ಟಾರ್ ಮಲಯಾಳಂನ ಮಮ್ಮುಟಿ. 74 ವರ್ಷ ವಯಸ್ಸಿನಲ್ಲಿ ಅವರು ವರ್ಷಕ್ಕೆ ಮೂರು-ನಾಲ್ಕು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಅದೂ ಒಂದಕ್ಕಿಂತಲೂ ಒಂದು ಭಿನ್ನ ರೀತಿಯ ಪಾತ್ರಗಳು, ಪ್ರಯೋಗಾತ್ಮಕ ಸಿನಿಮಾಗಳು. ಸೀರಿಯಲ್ ಕಿಲ್ಲರ್, ಸಲಿಂಗಿ, ರಾಕ್ಷಸ, ಮಗಳಿಗಾಗಿ ಪುರುಷ ಲೈಂಗಿಕ ಸಂಗಾತಿ ಹುಡುಕುವ ತಂದೆ ಹೀಗೆ ಒಂದಕ್ಕಿಂತಲೂ ಒಂದು ಭಿನ್ನ ಮತ್ತು ಇತರೆ ಸ್ಟಾರ್ ನಟರು ಕತೆ ಕೇಳಲು ಸಹ ಒಪ್ಪದಂಥಹಾ ಸಿನಿಮಾಗಳಲ್ಲಿ ಮಮ್ಮುಟಿ ನಟಿಸುತ್ತಿದ್ದಾರೆ.
ಇದೀಗ ‘ಪೇಟ್ರಿಯಾಟ್’ ಹೆಸರಿನ ಆಕ್ಷನ್ ಥ್ರಿಲ್ಲರ್ ಸಿನಿಮಾನಲ್ಲಿ ಮಮ್ಮುಟಿ ನಟಿಸಿದ್ದು, ಸಿನಿಮಾದ ಪ್ರಚಾರದ ವೇಳೆ ತಮ್ಮ ಪುತ್ರ, ಪ್ಯಾನ್ ಇಂಡಿಯಾ ಸ್ಟಾರ್ ನಟ ದುಲ್ಕರ್ ಸಲ್ಮಾನ್ ಮೇಲೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ‘ನನ್ನ ಮಗ ನನಗೆ ಮೋಸ ಮಾಡಿದ್ದಾನೆ’ ಎಂದಿದ್ದಾರೆ.
ಡೊಮಿನಿಕ್ ಅರುಣ್ ನಿರ್ದೇಶನದ ಸೂಪರ್ ಹೀರೋ ಚಿತ್ರ ‘ಲೋಕಃ ಚಾಪ್ಟರ್ 1: ಚಂದ್ರ’ ಕಳೆದ ವರ್ಷ ಬಿಡುಗಡೆಯಾಗಿ ಬ್ಲಾಕ್ ಬಸ್ಟರ್ ಆಗಿತ್ತು. ಕಲ್ಯಾಣಿ ಪ್ರಿಯದರ್ಶನ್, ನಸ್ಲೆನ್ ಮತ್ತು ಸ್ಯಾಂಡಿ ಅಭಿನಯದ ಈ ಚಿತ್ರವನ್ನು ಮಮ್ಮುಟಿಯ ಪುತ್ರ, ನಟ ದುಲ್ಕರ್ ಸಲ್ಮಾನ್ ನಿರ್ಮಿಸಿದ್ದರು. ಈ ಚಿತ್ರದಲ್ಲಿ ಮಮ್ಮುಟ್ಟಿ ಅವರು ‘ಮೂತನ್’ ಎಂಬ ಪಾತ್ರಕ್ಕೆ ಧ್ವನಿ ನೀಡಿದ್ದರು. ಇತ್ತೀಚಿನ ಸಂದರ್ಶನವೊಂದರಲ್ಲಿ ಮಮ್ಮುಟ್ಟಿ ಈ ಚಿತ್ರದ ಬಗ್ಗೆ ಕೆಲವು ಕುತೂಹಲಕಾರಿ ವಿಷಯಗಳನ್ನು ಹಂಚಿಕೊಂಡಿದ್ದಾರೆ.
ಈ ಚಿತ್ರದಲ್ಲಿ ತಾವು ಇರುವುದೇ ತಮಗೆ ತಿಳಿದಿರಲಿಲ್ಲ ಎಂದು ಮಮ್ಮುಟ್ಟಿ ಹಾಸ್ಯಮಯವಾಗಿ ಹೇಳಿದ್ದಾರೆ. ‘ಆರಂಭದಲ್ಲಿ ದುಲ್ಕರ್ ಬರಲಿಲ್ಲ, ಬದಲಿಗೆ ಅವನ ಮ್ಯಾನೇಜರ್ ಮತ್ತು ಗೆಳೆಯ ಬಂದು ಕೇವಲ ಒಂದು ಧ್ವನಿ ನೀಡುವಂತೆ ಕೇಳಿದರು. ನಾನು ಬೇಡ ಎಂದು ಹೇಳಿದ್ದೆ, ಅಷ್ಟನ್ನೇ ಅವರು ರೆಕಾರ್ಡ್ ಮಾಡಿಕೊಂಡರು. ಚಿತ್ರ ಬಿಡುಗಡೆಯಾದಾಗ ಮಾತ್ರ ಅಲ್ಲಿರುವುದು ನಾನೇ ಮತ್ತು ಅಲ್ಲಿ ಕಂಡ ಕೈ ಕೂಡ ನನ್ನದೇ ಎಂದು ಹೇಳಿದರು. ನಿಜ ಹೇಳಬೇಕೆಂದರೆ ಅವರು ನನಗೆ ಮೋಸ ಮಾಡಿ ಆ ಪಾತ್ರ ಮಾಡಿಸಿದ್ದಾರೆ’ ಎಂದು ಮಮ್ಮುಟ್ಟಿ ವಿವರಿಸಿದ್ದಾರೆ.
ಚಿತ್ರದ ಎರಡನೇ ಭಾಗದಲ್ಲಿ ನಟಿಸಲು ಮಮ್ಮುಟ್ಟಿಯವರನ್ನು ಒಪ್ಪಿಸುವುದು ಕಷ್ಟ ಎಂದು ದುಲ್ಕರ್ ಹಿಂದೆ ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಮಮ್ಮುಟ್ಟಿ, “ನಾನು ಸೀಕ್ವೆಲ್‌ನಲ್ಲಿ ನಟಿಸಲು ಒಪ್ಪುವುದು ಮಾತ್ರವಲ್ಲ, ನನ್ನ ಸಂಭಾವನೆಯ ಬಗ್ಗೆಯೂ ಅವರನ್ನು ಒಪ್ಪಿಸಬೇಕಾಗುತ್ತದೆ. ಅವರು ಸಂಭಾವನೆ ನೀಡಲು ಸಿದ್ಧರಿದ್ದರೆ ಮಾತ್ರ ನಾನು ನಟಿಸುತ್ತೇನೆ’ ಎಂದು ತಮಾಷೆಯಾಗಿ ಹೇಳಿದ್ದಾರೆ.
ಸಂದರ್ಶನದ ವೇಳೆ ವ್ಯಾಂಪೈರ್ ಪಾತ್ರ ಮಾಡುವ ಬಗ್ಗೆ ಕೇಳಿದಾಗ, ಮಮ್ಮುಟ್ಟಿ ನಗುತ್ತಾ ಅದು ‘ಸಸ್ಪೆನ್ಸ್’ ಎಂದು ಹೇಳಿದ್ದಾರೆ. ‘ಲೋಕಃ’ ಚಿತ್ರದಲ್ಲಿ ಕಲ್ಯಾಣಿ ಪ್ರಿಯದರ್ಶನ್ ‘ಯಕ್ಷಿಣಿ’ ಪಾತ್ರ ಮಾಡಿದ್ದರು. ಚಿತ್ರದ ಅಂತ್ಯದಲ್ಲಿ ಟೊವಿನೋ ಥಾಮಸ್, ದುಲ್ಕರ್ ಸಲ್ಮಾನ್ ಮತ್ತು ಮಮ್ಮುಟ್ಟಿ (ಧ್ವನಿ ಮಾತ್ರ) ಅವರ ಪಾತ್ರಗಳನ್ನು ಪರಿಚಯಿಸಿ ಸೀಕ್ವೆಲ್‌ನ ಸುಳಿವು ನೀಡಲಾಗಿತ್ತು. ಈ ಚಿತ್ರ ಜಾಗತಿಕವಾಗಿ ಸುಮಾರು 300 ಕೋಟಿ ರೂಪಾಯಿ ಗಳಿಕೆ ಮಾಡಿದೆ.
ಮಮ್ಮುಟ್ಟಿ ಅವರು ‘ಪೇಟ್ರಿಯಾಟ್’ ಸಿನಿಮಾನಲ್ಲಿ ನಟಿಸಿದ್ದು, ಸಿನಿಮಾನಲ್ಲಿ ಮಮ್ಮುಟಿಯ ಜೊತೆಗೆ ಮಲಯಾಳಂನ ಮತ್ತೊಬ್ಬ ಸೂಪರ್ ಸ್ಟಾರ್ ಮೋಹನ್ ಲಾಲ್, ಫಹಾದ್ ಫಾಸಿಲ್ ಮತ್ತು ನಯನತಾರಾ ಸಹ ನಟಿಸಿದ್ದಾರೆ. ಸಿನಿಮಾ ಮೇ 1ರಂದು ಬಿಡುಗಡೆ ಆಗಲಿದೆ. ಹಲವಾರು ವರ್ಷಗಳ ಬಳಿಕ ಮಮ್ಮುಟಿ ಮತ್ತು ಮೋಹನ್ಲಾಲ್ ಒಟ್ಟಿಗೆ ನಟಿಸಿದ್ದಾರೆ.