Category Archives: Blog

Your blog category

Video: ಬಸ್ಸಿನಲ್ಲಿ ನಿದ್ದೆಗೆ ಜಾರಿದ್ದ ವೇಳೆ ಯುವತಿಯ ಎದೆ ಮೇಲೆ ಕೈ ಇಟ್ಟ ಯುವಕ – Kannada News | Young man puts his hand on young woman’s chest while she falls asleep on bus

ಕಾರವಾರ, ಡಿ.31: ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಯುವತಿಗೆ ಲೈಂಗಿಕ ದೌರ್ಜನ್ಯ ಮಾಡಿರುವ ಘಟನೆ ಕಾರವಾರದಲ್ಲಿ ನಡೆದಿದೆ. ಕಾರವಾರದಿಂದ ಅಂಕೋಲಾ ಕಡೆಗೆ ಹೊಗುತ್ತಿದ್ದ ಬಸ್ಸಿನಲ್ಲಿ ನಡೆದಿದೆ. ಯುವತಿ ಬಸ್​​​​​​ನಲ್ಲಿ ನಿದ್ದೆಗೆ ಜಾರಿದ್ದ ವೇಳೆ ಪಕ್ಕದಲ್ಲಿ ಕುಳಿತ ಯುವಕ ಎದೆ ಮೇಲೆ ಕೈ ಇಟ್ಟು ಲೈಂಗಿಕ ಕಿರುಕುಳ ನೀಡಿದ್ದಾನೆ. ಯುವತಿ ನಿದ್ದೆಯಿಂದ ಎಚ್ಚರಗೊಂಡು ನೋಡಿದಾಗ, ಕೈ ಆಕೆಯ ಎದೆ ಮೇಲಿತ್ತು. ಈ ಬಗ್ಗೆ ಸೋಶಿಯಲ್​​ ಮೀಡಿಯಾದಲ್ಲಿ ವಿಡಿಯೋ ಮಾಡಿ ಹಂಚಿಕೊಂಡಿದ್ದಾಳೆ. ಇನ್ನು ಯುವಕನಿಗೆ ಅವಾಚ್ಯ ಶಬ್ದಗಳಿಂದ ಉಗಿದು, ಧರ್ಮದೇಟು ನೀಡಿದ್ದಾಳೆ. ಈ ವಿಡಿಯೋ ಪೊಲೀಸರಿಗೂ ಟ್ಯಾಗ್​ ಮಾಡಿದ್ದಾಳೆ. ಈ ವಿಡಿಯೋ ಮೂಲಕ ನಮ್ಮ ರಕ್ಷಣೆಗೆ ನಾವೇ ಮುಂದಾಗಬೇಕೆಂದು ಸಂದೇಶ ನೀಡಿದ್ದಾಳೆ. ಇದೀಗ ಅಂಕೋಲಾ ಪೊಲೀಸರು ದೂರು ದಾಖಲಿಸಿಕೊಂಡಿದ್ದು, ವಿಡಿಯೋ ಆಧಾರದ ಮೇಲೆ ದೂರು ದಾಖಲಿಸಿಕೊಂಡು ಯುವಕ ಮೇಲೆ ಕ್ರಮ ಕೈಗೊಳ್ಳುವ ಭರವಸೆಯನ್ನು ಎಸ್ಪಿ ದೀಪನ್ ಹೇಳಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

 

Source link

ಹಾಲಿವುಡ್​​ಗೆ ಪೈಪೋಟಿ ಕೊಡುತ್ತಿದೆ ಭಾರತದ ಈ ಕೋತಿ, ಆದಾಯ ಎಷ್ಟು ಗೊತ್ತೆ? – Kannada News | Bandar Apna Dost Youtube Chanel made 38 crore rs just from AI videos

ಸಾಮಾಜಿಕ ಜಾಲತಾಣದ (Social Media) ಈ ಜಮಾನಾನಲ್ಲಿ ಯಾವಾಗ ಯಾವುದು ವೈರಲ್ ಆಗುತ್ತದೆ, ಯಾವ ರೀತಿಯ ಕಂಟೆಂಟ್ ಜನರಿಗೆ ಇಷ್ಟವಾಗುತ್ತದೆ ಎಂದು ಊಹಿಸುವುದೇ ಕಷ್ಟ. ಭಾರತದ ಕೋತಿಯೊಂದು ವಿಶ್ವಮಟ್ಟದಲ್ಲಿ ಟಾಪ್ ಕಂಟೆಂಟ್ ಆಗಿ ಮಿಂಚಿದೆ ಮಾತ್ರವಲ್ಲದೆ ಕೆಲವೇ ತಿಂಗಳುಗಳಲ್ಲಿ 38 ಕೋಟಿ ರೂಪಾಯಿಗೂ ಹೆಚ್ಚು ಹಣವನ್ನು ಕೇವಲ ಯೂಟ್ಯೂಬ್ ಒಂದರಿಂದಲೇ ಗಳಿಸಿದೆ. ಆಶ್ಚರ್ಯ ಎನಿಸಿದರೂ ಸಹ ಇದು ನಿಜ. ವಿಶ್ವದಾದ್ಯಂತ ಅತಿ ಹೆಚ್ಚು ವೀಕ್ಷಿಸಲ್ಪಟ್ಟ ಎಐ ವಿಡಿಯೋಗಳಲ್ಲಿ ಭಾರತದ ಕೋತಿ ಸ್ಥಾನ ಗಳಿಸಿದೆ.

‘ಬಂದರ್ ಅಪ್ನ ದೋಸ್ತ್’ (ಕೋತಿ ನಮ್ಮ ಸ್ನೇಹಿತ) ಹೆಸರಿನ ಯೂಟ್ಯೂಬ್ ಚಾನೆಲ್ ಒಂದಿದೆ. ಈ ಚಾನೆಲ್ ಆರಂಭವಾಗಿ ವರ್ಷ ಸಹ ಇನ್ನೂ ಆಗಿಲ್ಲ. ಯೂಟ್ಯೂಬ್​​ನ ಎಲ್ಲ ವಿಡಿಯೋಗಳು ಎಐ ಬಳಸಿ ಮಾಡಿರುವಂಥಹವು. ಯೂಟ್ಯೂಬ್​​ನಲ್ಲಿ ವಿಡಿಯೋಗಳಲ್ಲಿ ಒಂದು ಕೋತಿ ಇದೆ, ಆಗಾಗ್ಗೆ ಹಲ್ಕ್ ರೀತಿಯ ವ್ಯಕ್ತಿಯೊಬ್ಬ ಬರುತ್ತಾನೆ. ಕೆಂಪು ಸೀರೆ ಉಟ್ಟ ಮಂತ್ರವಾದಿ ಹೆಂಗಸೊಬ್ಬಳು ಕೆಲ ವಿಡಿಯೋಗಳಲ್ಲಿ ಕಾಣಿಸಿಕೊಳ್ಳುತ್ತಾಳೆ ಅಷ್ಟೆ. ಈ ಖಾತೆಯಲ್ಲಿರುವ ವಿಡಿಯೋಗಳ ಸಂಖ್ಯೆ ಸಹ ಕಡಿಮೆಯೇ ಆದರೆ ಅಷ್ಟರಲ್ಲೇ ಈ ಖಾತೆಯ ಮಾಲೀಕ 38 ಕೋಟಿಗೂ ಹೆಚ್ಚು ಮೊತ್ತವನ್ನು ಗಳಿಕೆ ಮಾಡಿದ್ದಾನೆ.

ವಿಶ್ವದಲ್ಲೇ ಅತಿ ಹೆಚ್ಚು ವೀಕ್ಷಣೆಗೆ ಒಳಗಾದ ಎಐ ವಿಡಿಯೋಗಳಲ್ಲಿ ‘ಬಂದರ್ ಅಪ್ನಾ ದೋಸ್ತ್’ ಯೂಟ್ಯೂಬ್​ ಚಾನೆಲ್ಲು ಸಹ ಒಂದಾಗಿದೆ. ವಿಶೇಷವೆಂದರೆ ಈ ಯೂಟ್ಯೂಬ್ ಚಾನೆಲ್ಲಿನ ಕಂಟೆಂಟ್ ಸಹ ಅದ್ಭುತ ಗುಣಮಟ್ಟವನ್ನೇನೂ ಹೊಂದಿಲ್ಲ. ಬಹಳ ಸಾಧಾರಣ ಗುಣಮಟ್ಟದ ಕಂಟೆಂಟ್ ಅನ್ನು ಒಳಗೊಂಡಿದೆ ಆದರೂ ಸಹ ಇದು ವಿಶ್ವದಲ್ಲೇ ಹೆಚ್ಚು ನೋಡಲಾದ ಎಐ ವಿಡಿಯೋಗಳಲ್ಲಿ ಒಂದಾಗಿದೆ.

ಇದನ್ನೂ ಓದಿ:Year Ender 2024: ಈ ವರ್ಷ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಸೃಷ್ಟಿಸಿದ್ದ 10 ವಿಡಿಯೋಗಳು

‘ಬಂದರ್ ಅಪ್ನಾ ದೋಸ್ತ್’ ವಿಡಿಯೋನ ಯಶಸ್ಸಿನ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಆರಂಭವಾಗಿದೆ. ಎಐನ ಅಗತ್ಯತೆ ಬಗ್ಗೆ ಮನದಟ್ಟು ಮಾಡಲು ಕೆಲವರು ‘ಬಂದರ್ ಅಪ್ನಾ ದೋಸ್ತ್’ ಯೂಟ್ಯೂಬ್ ಚಾನೆಲ್ಲಿನ ಉದಾಹರಣೆ ಕೊಡುತ್ತಿದ್ದಾರೆ. ಇನ್ನು ಕೆಲವರು ‘ಭಾರತದ ಒಂದು ಕೋತಿ ಅರ್ಧ ಹಾಲಿವುಡ್ ಸಿನಿಮಾಗಳಿಗೂ ಹೆಚ್ಚು ಹಣ ಗಳಿಕೆ ಮಾಡಿದೆ’ ಎಂದಿದ್ದಾರೆ. ಇನ್ನು ಕೆಲವರು ಇದು ಸುಳ್ಳು ಇಷ್ಟು ಹಣ ಬರಲು ಸಾಧ್ಯವಿಲ್ಲ ಎಂದು ಸಹ ವಾದ ಮಾಡಿದ್ದಾರೆ.

ಜೀತ್ ಕರಮ್​​ಕಮ್ ಎಂಬಾತ ಈ ‘ಬಂದರ್ ಅಪ್ನಾ ದೋಸ್ತ್’ ಯೂಟ್ಯೂಬ್ ಚಾನೆಲ್ಲಿನ ಮಾಲೀಕನಾಗಿದ್ದಾನೆ. ಈ ಯೂಟ್ಯೂಬ್ ಚಾನೆಲ್ಲಿಗೆ ಈಗಾಗಲೇ 27 ಲಕ್ಷಕ್ಕೂ ಹೆಚ್ಚು ಸಬ್​​ಸ್ಕ್ರೈಬರ್​​ಗಳಿದ್ದಾರೆ. ಚಾನೆಲ್ಲಿನಲ್ಲಿ ಕೇವಲ ಐದು ಲಾಂಗ್ ಫಾರ್ಮ್ಯಾಟ್ ವಿಡಿಯೋಗಳಷ್ಟೆ ಇವೆ. ಆದರೆ 600 ಕ್ಕೂ ಹೆಚ್ಚು ಶಾರ್ಟ್ ವಿಡಿಯೋಗಳಿವೆ. ಕೇವಲ ಶಾರ್ಟ್ ವಿಡಿಯೋಗಳಿಂದಲೇ ಕೋಟ್ಯಂತರ ಹಣ ಗಳಿಸಿದ್ದಾರೆ ‘ಬಂದರ್ ಅಪ್ನಾ ದೋಸ್ತ್’ ಮಾಲೀಕ ಜೀತು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಪುರಿ ಜಗನ್ನಾಥ ದೇವಸ್ಥಾನದಲ್ಲಿ ಈ ವರ್ಷದ ಕೊನೆಯ ಸೂರ್ಯಾಸ್ತ ಕಂಡಿದ್ದು ಹೀಗೆ – Kannada News | Video of the last sunset of the year 2025 from Puri Shree Jagannatha Temple

ಪುರಿ, ಡಿಸೆಂಬರ್ 31: ಹೊಸ ವರ್ಷ ಸಮೀಪಿಸುತ್ತಿರುವುದರಿಂದ ಒಡಿಶಾದ ಪುರಿಯಲ್ಲಿರುವ ಶ್ರೀ ಜಗನ್ನಾಥ ದೇವಸ್ಥಾನದಲ್ಲಿ ಜಗನ್ನಾಥ ಮತ್ತು ಅವರ ಸಹೋದರರ ದರ್ಶನಕ್ಕಾಗಿ ಹೆಚ್ಚಿನ ಸಂಖ್ಯೆಯ ಭಕ್ತರು ಆಗಮಿಸಿದ್ದರು. ಹೊಸ ವರ್ಷದ ಮೊದಲ ದಿನವಾದ್ದರಿಂದ ನಾಳೆಯೂ ಇಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗುವ ನಿರೀಕ್ಷೆಯಿದೆ. ಈ ನಡುವೆ ಇಂದು ಸಂಜೆ ಪುರಿ ಜಗನ್ನಾಥ ಸ್ವಾಮಿ ದೇವಾಲಯದಲ್ಲಿ ಈ ವರ್ಷದ ಕೊನೆಯ ಸೂರ್ಯಾಸ್ತ ಗಮನಸೆಳೆಯಿತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಹೊಸ ವರ್ಷದ ವೇಳೆಯೂ ಮದ್ಯಕ್ಕಿಲ್ಲ ಡಿಮ್ಯಾಂಡ್​​: ದಾಖಲೆ ಮಟ್ಟದಲ್ಲಿ ಬೇಡಿಕೆ ಕುಸಿತ – Kannada News | Chikkaballapur Records a Fifty Eight Percent Drop in Alcohol Sales During New Year Celebrations

ಚಿಕ್ಕಬಳ್ಳಾಪುರ, ಡಿಸೆಂಬರ್​​ 31: ಹೊಸ ವರ್ಷದ ಪಾರ್ಟಿ ಅಂದ್ರೆ ಅಲ್ಲಿ ಮದ್ಯ ಇರಲೇ ಬೇಕು. ಎಣ್ಣೆ ಇಲ್ಲದಿದ್ರೆ ಅದೆಂತಾ ಪಾರ್ಟಿ ಗುರೂ ಎಂದು ಮೂಗು ಮುರಿಯೋರ ನಡುವೆಯೂ ಮದ್ಯದ ಬೇಡಿಕೆ ಕುಸಿದಿದೆ ಎಂಬುದನ್ನು ನೀವು ನಂಬಬೇಕಿದೆ. ನ್ಯೂ ಇಯರ್​ ಸಂಭ್ರಮದ ನಡುವೆಯೂ ಚಿಕ್ಕಬಳ್ಳಾಪುರ ಜಿಲ್ಲೆಯೊಂದರಲ್ಲಿಯೇ ಮದ್ಯದ ಬೇಡಿಕೆ ಶೇ.58ಕ್ಕಿಂತ ಹೆಚ್ಚು ಕುಸಿತ ಕಂಡಿದೆ. ಕಳೆದ ವರ್ಷದ ಅಂಕಿ ಅಂಶಗಳಿಗೆ ಹೋಲಿಸದರೆ ಇದು ಭಾರಿ ಪ್ರಮಾಣದ ಇಳಿಕೆಯಾಗಿದೆ.

ಹೌದು, 2024ರ ಡಿಸೆಂಬರ್​​ 31ಕ್ಕೆ ಹೋಲಿಸಿದರೆ ಈ ವರ್ಷ ಡಿಸೆಂಬರ್​​ 31ರ ಮದ್ಯ ಮಾರಾಟದಲ್ಲಿ ಗಣನೀಯ ವ್ಯತ್ಯಾಸ ಕಂಡುಬಂದಿದೆ. ಮದ್ಯ ಬೇಡಿಕೆಯಲ್ಲಿ ಶೇ. 58.8ರಷ್ಟು ಕಡಿಮೆಯಾಗಿದ್ದರೆ, ಬಿಯರ್ ಬೇಡಿಕೆ ಶೇ. 11.94ರಷ್ಟು ಇಳಿಕೆಯಾಗಿದೆ. ಹೀಗಾಗಿ ಕರ್ನಾಟಕ ರಾಜ್ಯ ಪಾನೀಯ ನಿಗಮ ನಿಯಮಿತ ಬಲವಂತ ಮಾಡಿ ಬಾರ್​​ಗಳಿಗೆ ಮದ್ಯ ಸರಬರಾಜು ಮಾಡಬೇಕಾದ ಸ್ಥಿತಿ ಉದ್ಭವಿಸಿದ್ದು, ಟಾರ್ಗೆಟ್ ರೀಚ್ ಮಾಡಲು ಅಬಕಾರಿ ಇಲಾಖೆ ಪರದಾಟ ನಡೆಸುತ್ತಿದೆ.

ಇದನ್ನೂ ಓದಿ:  ಕರ್ನಾಟಕದಲ್ಲಿ ಮದ್ಯ ಮಾರಾಟ ಭಾರಿ ಕುಸಿತ; 7 ತಿಂಗಳಾದ್ರೂ ಕಿಕ್‌ ಕೊಡದ ಎಣ್ಣೆ, ಕಾರಣವೇನು?

ಬೇಡಿಕೆ ಇಳಿಕೆಯಾಗಿರೋದೆಷ್ಟು?

ಕಳೆದ ವರ್ಷ ಡಿಸೆಂಬರ್​​ 31ರಂದು 13,191 ಕೇಸ್​​/ಬಾಕ್ಸ್​​ ಮದ್ಯ ಮಾರಾಟವಾಗಿದ್ದರೆ ಈ ವರ್ಷ ಡಿಸೆಂಬರ್​​ 31ರಂದು 5,516 ಕೇಸ್​​/ಬಾಕ್ಸ್​​ ಮಾತ್ರ ಸೇಲ್​​ ಆಗಿದೆ. ಅಂದರೆ ಶೇ. 58.18ರಷ್ಟು ಕುಸಿತವಾಗಿದೆ. ಇದೇ ದಿನಾಂಕಗಳಲ್ಲಿ ಕಳೆದ ವರ್ಷ 5,384 ಕೇಸ್​​/ಬಾಕ್ಸ್​​ ಬಿಯರ್​​ ಮಾರಾಟವಾಗಿದ್ದರೆ, ಈ ಬಾರಿ 4,741 ಕೇಸ್​​/ಬಾಕ್ಸ್​​ ಮಾರಾಟವಾಗಿದೆ. ಆ ಮೂಲಕ ಬೇಡಿಕೆ ಶೇ. 11.94ರಷ್ಟು ಇಳಿಕೆಯಾಗಿದೆ.

ದುಡಿಮೆ ಇಲ್ಲದ ಕಾರಣ ಹಣ ಸಂಪಾದನೆ ಇಲ್ಲ. ಸರಿಯಾಗಿ ಮಳೆ ಆಗದಿರೋದ್ರಿಂದ ಬೆಳೆ ಇಲ್ಲದೆಯೂ ಜನರ ಆದಾಯಕ್ಕೆ ಖೋತಾ ಆಗಿದೆ. ಇದರ ನಡುವೆ ಮದ್ಯದ ಬೆಲೆಯೂ ಏರಿಕೆಯಾಗಿದೆ. ಲಿಕ್ಕರ್​​ಗಳ ಮೇಲೆ 10-15 ರೂಪಾಯಿ ಹೆಚ್ಚಾಗಿರುವ ಆಗಿರುವ ಕಾರಣ ಕುಡಿಯುವರಿಗೆ ಸಮಸ್ಯೆ ಆಗಿದೆ. ಕಳೆದ ವರ್ಷಕ್ಕೆ ಹೋಲಿಸದರೆ ಹೊಸ ವರ್ಷದ ವೇಳೆ ಮದ್ಯ ಖರೀದಿಸುವವರ ಸಂಖ್ಯೆ ಜಿಲ್ಲೆಯಲ್ಲಿ ಕಡಿಮೆಯಾಗಿದೆ ಎಂದು ಬಾರ್​​ ಮಾಲಕರು ಅಭಿಪ್ರಾಯಪಟ್ಟಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ವರ್ಷದ ಕೊನೆಯ ಸೂರ್ಯಾಸ್ತ: ನಯನ ಮನೋಹರ ದೃಶ್ಯ ಸೆರೆ – Kannada News | Koppal: the Last Sunset of 2025: A Mesmerising Sight Captured

ಕೊಪ್ಪಳ, ಡಿಸೆಂಬರ್​ 31: 2025ರ ವರ್ಷದ ಕೊನೆಯ ಸೂರ್ಯಾಸ್ತದ ವಿಹಂಗಮ ದೃಶ್ಯ ಟಿವಿ9 ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದೆ. ಕೊಪ್ಪಳ ತಾಲೂಕಿನ ಗಿಣಗೇರಾ ಗ್ರಾಮದ ಸಮೀಪ ಸೂರ್ಯಾಸ್ತದ ಈ ದೃಶ್ಯ ಕಂಡುಬಂದಿದ್ದು, ನೋಡುಗರ ಕಣ್ಮನ ಸೆಳೆಯಿತು. ಸೂರ್ಯಾಸ್ತದ ನಯನ ಮನೋಹರ ದೃಶ್ಯವನ್ನು ಕ್ಯಾಮರಾಮೆನ್ ಮಾರುತಿ ಕಟ್ಟಿಮನಿ ಅವರು ಸೆರೆ ಹಿಡಿದಿದ್ದಾರೆ. ವಿಡಿಯೋ ನೋಡಿ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

New Year 2026: ಹೊಸ ವರ್ಷದ ಆಚರಣೆ ಪ್ರಾರಂಭವಾದದ್ದು ಹೇಗೆ? ಇಲ್ಲಿದೆ ಆಸಕ್ತಿದಾಯಕ ಸಂಗತಿ – Kannada News | New Year 2026: How did the custom of celebrating the New Year on January 1st begin?

ಹಳೆಯ ವರ್ಷಕ್ಕೆ ವಿದಾಯ ಹೇಳಿ, ಹೊಸ ವರ್ಷವನ್ನು (New Year) ಸ್ವಾಗತಿಸುವುದಕ್ಕೆ ಈಗಾಗಲೇ ಕ್ಷಣಗಣನೆ ಆರಂಭವಾಗಿದೆ. ಪ್ರತಿವರ್ಷ ಡಿಸೆಂಬರ್‌ 31 ರ ರಾತ್ರಿಯಿಂದಲೇ ಸಂಭ್ರಮಾಚರಣೆ ಶುರುವಾಗುತ್ತದೆ. ಜನರೆಲ್ಲರೂ ಕುಟುಂಬಸ್ಥರು, ಫ್ರೆಂಡ್ಸ್‌ ಜೊತೆ ಸೇರಿ ಮಸ್ತ್‌ ಪಾರ್ಟಿ ಮಾಡುವ ಮೂಲಕ ಉಜ್ವಲ ಮತ್ತು ಸಮೃದ್ಧ ನಾಳೆಯ ಭರವಸೆಯೊಂದಿಗೆ  ಹೊಸ ವರ್ಷವನ್ನು ಭರದಿಂದ ಸ್ವಾಗತಿಸುತ್ತಾರೆ. ಪ್ರತಿ ವರ್ಷ ಜನವರಿ 1 ರಂದು ಪ್ರಪಂಚದಾದ್ಯಂತ ಈ ಸಂಭ್ರಮಾಚರಣೆ ನಡೆದುಕೊಂಡು ಬರುತ್ತಿದೆ. ಜನವರಿ 1 ರಂದೇ ಏಕೆ ಹೊಸ ವರ್ಷವನ್ನು ಆಚರಿಸಲಾಗುತ್ತದೆ, ಈ ಪದ್ಧತಿ ಯಾವಾಗ ಜಾರಿಗೆ ಬಂದಿತು ಎಂಬುದರ ಇಂಟರೆಸ್ಟಿಂಗ್‌ ಸಂಗತಿಯನ್ನು ತಿಳಿಯಿರಿ.

ಹೊಸ ವರ್ಷದ ಆಚರಣೆಯ ಇತಿಹಾಸವೇನು?

ಹೊಸ ವರ್ಷದ ಆರಂಭವನ್ನು ಸಾಂಪ್ರದಾಯಿಕ ಗ್ರೆಗೋರಿಯನ್ ಕ್ಯಾಲೆಂಡರ್ ಪ್ರಕಾರ ವಿಶ್ವಾದ್ಯಂತ ಆಚರಿಸಲಾಗುತ್ತದೆ. ಜನವರಿ 1 ನೇ ತಾರೀಖನ್ನು ಹೊಸ ವರ್ಷದ ದಿನವಾಗಿ ಆಚರಿಸುವುದು ಅಕ್ಟೋಬರ್ 15, 1582 ರಂದು ಪ್ರಾರಂಭವಾಯಿತು. ಇದರ ಮೊದಲು ಹೊಸ ವರ್ಷವನ್ನು ಕೆಲವೊಮ್ಮೆ ಮಾರ್ಚ್ 25 ರಂದು ಮತ್ತು ಕೆಲವೊಮ್ಮೆ ಡಿಸೆಂಬರ್ 25 ರಂದು ಆಚರಿಸಲಾಗುತ್ತಿತ್ತು.  ಈ ಮಾರ್ಚ್‌ ತಿಂಗಳನ್ನು  ರೋಮನ್ನರ ಯುದ್ಧ ದೇವರು ಎಂದು ಪರಿಗಣಿಸಲಾಗುತ್ತದೆ. ಆರಂಭಿಕ ಕ್ಯಾಲೆಂಡರ್‌ನಲ್ಲಿ ಕೇವಲ 10 ತಿಂಗಳುಗಳಿದ್ದವು. ಹೀಗಾಗಿ, ಒಂದು ವರ್ಷವು 310 ದಿನಗಳನ್ನು ಮತ್ತು ಒಂದು ವಾರವು 8 ದಿನಗಳನ್ನು ಹೊಂದಿತ್ತು. ಜನರು ಮಾರ್ಚ್‌ನಲ್ಲಿ ಅಕಿಟು ಎಂಬ ಹಬ್ಬವನ್ನು ಆಚರಿಸುತ್ತಿದ್ದರು, ಇದು ವಸಂತಕಾಲದ ಆರಂಭವನ್ನು ಸೂಚಿಸುತ್ತದೆ.

ಜನವರಿ 1 ರಂದು ಹೊಸ ವರ್ಷವನ್ನು ಆಚರಿಸುವ ಸಂಪ್ರದಾಯವು ಪ್ರಾಚೀನ ರೋಮ್‌ನಲ್ಲಿ ಪ್ರಾರಂಭವಾಯಿತು ಮತ್ತು ಕ್ರಿ.ಪೂ 46 ರಲ್ಲಿ, ರೋಮನ್ ಚಕ್ರವರ್ತಿ ಜೂಲಿಯಸ್ ಸೀಸರ್ ‘ಜೂಲಿಯನ್ ಕ್ಯಾಲೆಂಡರ್’ ಅನ್ನು ಜಾರಿಗೆ ತಂದರು. ಜೂಲಿಯನ್ ಕ್ಯಾಲೆಂಡರ್ ಒಂದು ವರ್ಷದಲ್ಲಿ 12 ತಿಂಗಳುಗಳನ್ನು ಒಳಗೊಂಡಿತ್ತು. ಖಗೋಳಶಾಸ್ತ್ರಜ್ಞರನ್ನು ಭೇಟಿಯಾದ ನಂತರ, ಜೂಲಿಯಸ್ ಸೀಸರ್ ಭೂಮಿಯು ಸೂರ್ಯನ ಸುತ್ತ 365 ದಿನಗಳು ಮತ್ತು ಆರು ಗಂಟೆಗಳಲ್ಲಿ ಸುತ್ತುತ್ತದೆ ಎಂದು ತಿಳಿದುಕೊಂಡರು. ಇದನ್ನು ಗಣನೆಗೆ ತೆಗೆದುಕೊಂಡು, ಜೂಲಿಯನ್ ಕ್ಯಾಲೆಂಡರ್ ವರ್ಷವನ್ನು 310 ರಿಂದ 365 ದಿನಗಳಿಗೆ ವಿಸ್ತರಿಸಲಾಯಿತು. ನಂತರ ಅಮೆರಿಕದ ನೇಪಲ್ಸ್‌ನ ವೈದ್ಯ ಅಲೋಶಿಯಸ್ ಲಿಲಿಯಸ್, ರೋಮನ್ ಕ್ಯಾಲೆಂಡರ್ ಅನ್ನು ಮಾರ್ಪಡು ಮಾಡಿ ಜಗತ್ತಿಗೆ ಹೊಸ ಕ್ಯಾಲೆಂಡರ್ ಪರಿಚಯಿಸಿದರು. ಅದುವೇ ಗ್ರೆಗೋರಿಯನ್ ಕ್ಯಾಲೆಂಡರ್, ಇದರಲ್ಲಿ ವರ್ಷದ ಮೊದಲ ದಿನವನ್ನು ಜನವರಿ 1 ರಂದು ಆಚರಿಸಲಾಯಿತು. ಅಂದಿನಿಂದ, ಜನವರಿ 1 ರಂದು ಹೊಸ ವರ್ಷವನ್ನು ಆಚರಿಸುವ ಸಂಪ್ರದಾಯವು ಪ್ರಪಂಚದಾದ್ಯಂತ ಪ್ರಚಲಿತವಾಗಿದೆ.

ಹೊಸ ವರ್ಷದ ಮಹತ್ವವೇನು?

  • ಹೊಸ ವರ್ಷ ಎಂದರೆ ಕೇವಲ ಕ್ಯಾಲೆಂಡರ್‌ ಬದಲಿಸುವ ದಿನವಲ್ಲ. ಅದು ನಮ್ಮನ್ನು ನಾವು ಸುಧಾರಿಸಿಕೊಳ್ಳಲು, ಹಿಂದಿನ ಕಹಿ, ನೋವುಗಳನ್ನು ಮರೆತು ಹೊಸ ಜೀವನವನ್ನು ಆರಂಭಿಸಲಿರುವ ಒಂದು ಅವಕಾಶವಾಗಿದೆ.
  • ಹೊಸ ವರ್ಷವು ನಮಗೆ ಹೊಸ ಶಕ್ತಿ ಮತ್ತು ಸಕಾರಾತ್ಮಕತೆಯನ್ನು ತುಂಬುವ ವಿಶೇಷ ದಿನವಾಗಿದ್ದು, ಹೊಸ ವರ್ಷದ ಆರಂಭವು ಪ್ರತಿ ದಿನವನ್ನು ಹೇಗೆ ಉತ್ತಮಗೊಳಿಸಬೇಕೆಂದು ನಮಗೆ ಕಲಿಸುತ್ತದೆ.

ಇದನ್ನೂ ಓದಿ: ಹೊಸ ವರ್ಷದ ದಿನ ನಿಮ್ಮ ಪ್ರೀತಿಪಾತ್ರರಿಗೆ ರೀತಿ ಶುಭಾಶಯಗಳನ್ನು ತಿಳಿಸಿ

ಭಾರತದಲ್ಲಿ ಹೊಸ ವರ್ಷ:

ನಮ್ಮ ದೇಶದಲ್ಲಿ, ಹೊಸ ವರ್ಷದ ಆಚರಣೆಗಳು ಪ್ರದೇಶ ಮತ್ತು ಧರ್ಮದಿಂದ ಬದಲಾಗುತ್ತವೆ. ಪಂಜಾಬ್‌ನ ಜನರು ಏಪ್ರಿಲ್ 13 ರಂದು ಬೈಸಾಖಿಯಂದು ತಮ್ಮ ಹೊಸ ವರ್ಷವನ್ನು ಆಚರಿಸುತ್ತಾರೆ. ನಾನಾಕ್ಷಾಹಿ ಕ್ಯಾಲೆಂಡರ್ ಪ್ರಕಾರ, ಸಿಖ್ಖರು ಮಾರ್ಚ್‌ನಲ್ಲಿ ಹೋಳಿಯ ಎರಡನೇ ದಿನದಂದು ತಮ್ಮ ಹೊಸ ವರ್ಷವನ್ನು ಆಚರಿಸುತ್ತಾರೆ. ಜೈನರು ದೀಪಾವಳಿಯ ಎರಡನೇ ದಿನದಂದು ಹೊಸ ವರ್ಷವನ್ನು ಆಚರಿಸುತ್ತಾರೆ. ಹಿಂದೂ ಧರ್ಮದಲ್ಲಿ ಯುಗಾದಿ ಹಬ್ಬದಂದು ಹೊಸ ವರ್ಷವನ್ನು ಆಚರಿಸಲಾಗುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

New Year Celebration: ಬೆಂಗಳೂರಲ್ಲಿ ಪಬ್​​ಗಳತ್ತ ಮುಖ ಮಾಡಿದ ಜನ; ಸಿಲಿಕಾನ್​​ ಸಿಟಿ ಫುಲ್​​ ಝಗಮಗ – Kannada News | New Year’s Eve in Bengaluru: Crowds gather at pubs and restaurants

ಬೆಂಗಳೂರು, ಡಿಸೆಂಬರ್​​ 31: ನಗರವು ಹೊಸ ವರ್ಷದ ಆಚರಣೆಗೆ ಸಿದ್ಧವಾಗಿದ್ದು, ಸಂಭ್ರಮಾಚರಣೆಗೆ ಕ್ಷಣಗಣನೆ ಆರಂಭಗೊಂಡಿದೆ. ಎಂ.ಜಿ. ರೋಡ್, ಬ್ರಿಗೇಡ್ ರೋಡ್, ಚರ್ಚ್ ಸ್ಟ್ರೀಟ್, ಕೋರಮಂಗಲ ಹಾಗೂ ಇಂದಿರಾನಗರದಂತಹ ಪ್ರಮುಖ ಪ್ರದೇಶಗಳು ದೀಪಾಲಂಕಾರಗಳಿಂದ ಝಗಮಗಿಸುತ್ತಿವೆ. ಪಾರ್ಟಿಪ್ರಿಯರು ಹಾಗೂ ಯುವಜನತೆ ಈಗಾಗಲೇ ಪಬ್‌ಗಳು ಮತ್ತು ರಸ್ತೆಗಳತ್ತ ಉತ್ಸಾಹದಿಂದ ಆಗಮಿಸುತ್ತಿದ್ದಾರೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ಬೆಂಗಳೂರು ಪೊಲೀಸರು ಅಗತ್ಯ ಭದ್ರತಾ ವ್ಯವಸ್ಥೆಗಳನ್ನು ಕೈಗೊಂಡಿದ್ದಾರೆ. ನಗರದಾದ್ಯಂತ 20,000ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ. ಎಂ.ಜಿ. ರೋಡ್, ಬ್ರಿಗೇಡ್ ರೋಡ್ ಮತ್ತು ಚರ್ಚ್ ಸ್ಟ್ರೀಟ್ ಸೇರಿದಂತೆ ಜನನಿಬಿಡ ಪ್ರದೇಶಗಳಲ್ಲಿ 6,000ಕ್ಕೂ ಹೆಚ್ಚು ಸಿಬ್ಬಂದಿ ಕಣ್ಗಾವಲಿರಲಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಒಡಿಶಾದಲ್ಲಿ 2 ಪ್ರಲೇ ಕ್ಷಿಪಣಿಗಳ ಯಶಸ್ವಿ ಉಡಾವಣೆ; ವಿಡಿಯೋ ಇಲ್ಲಿದೆ – Kannada News | DRDO successfully conducts salvo launch of 2 Pralay missiles in Odisha Watch video

ನವದೆಹಲಿ, ಡಿಸೆಂಬರ್ 31: ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಇಂದು ಒಡಿಶಾದ ಕರಾವಳಿಯಲ್ಲಿ ಎರಡು ಪ್ರಲೇ ಕ್ಷಿಪಣಿಗಳ (missiles)  ಉಡಾವಣೆಯನ್ನು ಯಶಸ್ವಿಯಾಗಿ ನಡೆಸಿತು. ಈ ಪರೀಕ್ಷೆಯು ಇಂದು ಬೆಳಿಗ್ಗೆ 10.30ರ ಸುಮಾರಿಗೆ ಚಂಡಿಪುರದ ಇಂಟಿಗ್ರೇಟೆಡ್ ಟೆಸ್ಟ್ ರೇಂಜ್ (ITR)ನಿಂದ ನಡೆಯಿತು. ಕ್ಷಿಪಣಿಗಳನ್ನು ಒಂದೇ ಲಾಂಚರ್‌ನಿಂದ ಉಡಾಯಿಸಲಾಯಿತು. ಇದು ಭಾರತದ ಕ್ಷಿಪಣಿ ಪರೀಕ್ಷಾ ಕಾರ್ಯಕ್ರಮದಲ್ಲಿ ಪ್ರಮುಖ ಮೈಲಿಗಲ್ಲಾಗಿದೆ.

ಪ್ರಲೇ ಕ್ಷಿಪಣಿಯು ಭಾರತದಲ್ಲಿ ಅಭಿವೃದ್ಧಿಪಡಿಸಿದ, ಘನ ಇಂಧನ, ಅರೆ ಬ್ಯಾಲಿಸ್ಟಿಕ್ ಕ್ಷಿಪಣಿಯಾಗಿದೆ. ಇದು ಹೆಚ್ಚಿನ ನಿಖರತೆ ಮತ್ತು ಸುಧಾರಿತ ಮಾರ್ಗದರ್ಶನ ವ್ಯವಸ್ಥೆಗಳಿಗೆ ಹೆಸರುವಾಸಿಯಾಗಿದೆ. ಪ್ರಲೇ ಕ್ಷಿಪಣಿಯನ್ನು ಭಾರತದ ಬೆಳೆಯುತ್ತಿರುವ ರಕ್ಷಣಾ ಬಲಕ್ಕೆ ಪ್ರಮುಖ ಸೇರ್ಪಡೆ ಎಂದು ಪರಿಗಣಿಸಲಾಗಿದೆ. ಸಂಶೋಧನಾ ಕೇಂದ್ರ ಇಮಾರತ್, ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಪ್ರಯೋಗಾಲಯ ಮತ್ತು ಅಡ್ವಾನ್ಸ್ಡ್ ಸಿಸ್ಟಮ್ಸ್ ಪ್ರಯೋಗಾಲಯ ಸೇರಿದಂತೆ ಹಲವಾರು ಡಿಆರ್‌ಡಿಒ ಪ್ರಯೋಗಾಲಯಗಳ ಜಂಟಿ ಪ್ರಯತ್ನಗಳ ಫಲಿತಾಂಶವೇ ಈ ಯಶಸ್ವಿ ಪರೀಕ್ಷೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಧುರಂಧರ್’ ಸಿನಿಮಾಗೆ 90 ಕೋಟಿ ರೂಪಾಯಿ ನಷ್ಟ ಆಗಿದ್ದು ಯಾಕೆ? – Kannada News | Dhurandhar distributor says this film suffered Rs 90 Cr loss due to this reason

ಅಕ್ಷಯ್ ಖನ್ನಾ, ರಣವೀರ್ ಸಿಂಗ್ (Ranveer Singh) ಮುಂತಾದವರು ನಟಿಸಿರುವ ‘ಧುರಂಧರ್’ ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಆಗಿದೆ. ವಿಶ್ವಾದ್ಯಂತ ಈ ಸಿನಿಮಾದ ಕಲೆಕ್ಷನ್ 1100 ಕೋಟಿ ರೂಪಾಯಿ ಮೀರಿದೆ. ನಿರ್ಮಾಪಕರಿಗೆ ಈ ಸಿನಿಮಾದಿಂದ ಭರ್ಜರಿ ಲಾಭ ಆಗಿದೆ. ಇಂದಿಗೂ ಬಾಕ್ಸ್ ಆಫೀಸ್​ನಲ್ಲಿ ಉತ್ತಮವಾಗಿ ಕಲೆಕ್ಷನ್ ಆಗುತ್ತಲೇ ಇದೆ. ಭಾರತದ ಮಾರುಕಟ್ಟೆಯಲ್ಲಿ ಈ ಸಿನಿಮಾ 800 ಕೋಟಿ ರೂಪಾಯಿ ಗಳಿಸುವ ನಿರೀಕ್ಷೆ ಇದೆ. ಹಾಗಿದ್ದರೂ ಕೂಡ ‘ಧುರಂಧರ್’ (Dhurandhar) ಸಿನಿಮಾಗೆ 90 ಕೋಟಿ ರೂಪಾಯಿ ಹೆಚ್ಚುವರಿ ಲಾಭ ಮಿಸ್ ಆಗಿದೆ. ಅದು ಹೇಗೆ ಎಂಬುದನ್ನು ವಿತರಕರು ವಿವರಿಸಿದ್ದಾರೆ.

ಬಾಲಿವುಡ್ ಸಿನಿಮಾಗಳಿಗೆ ವಿಶ್ವಾದ್ಯಂತ ಮಾರುಕಟ್ಟೆ ಇದೆ. ಮಿಡಲ್ ಈಸ್ಟ್ ದೇಶಗಳಲ್ಲಿ ಹಿಂದಿ ಸಿನಿಮಾಗಳನ್ನು ಜನರು ಮುಗಿಬಿದ್ದು ನೋಡುತ್ತಾರೆ. ಆದರೆ ‘ಧುರಂಧರ್’ ಸಿನಿಮಾವನ್ನು ಮಿಡಲ್ ಈಸ್ಟ್ ರಾಷ್ಟ್ರಗಳಲ್ಲಿ ಬ್ಯಾನ್ ಮಾಡಲಾಗಿದೆ. ಅದರಿಂದಾಗಿ ಈ ಚಿತ್ರಕ್ಕೆ ಆಗಬೇಕಿದ್ದ ಹೆಚ್ಚುವರಿ 90 ಕೋಟಿ ರೂಪಾಯಿಗಳು ನಷ್ಟ ಆಗಿವೆ ಎಂಬುದು ವಿತರಕರ ಲೆಕ್ಕಾಚಾರ.

ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಘರ್ಷವನ್ನು ‘ಧುರಂಧರ್’ ಸಿನಿಮಾದಲ್ಲಿ ತೋರಿಸಲಾಗಿದೆ. ಪಾಕಿಸ್ತಾನ ನಡೆಸುವ ಭಯೋತ್ಪಾದಕ ಕೃತ್ಯಗಳನ್ನು ಎಳೆಎಳೆಯಾಗಿ ಈ ಸಿನಿಮಾದಲ್ಲಿ ಬಿಡಿಸಿ ಇಡಲಾಗಿದೆ. ಧರ್ಮದ ಹೆಸರಿನಲ್ಲಿ ಭಯೋತ್ಪಾದನೆ ಹೇಗೆ ನಡೆಯುತ್ತಿದೆ ಎಂಬುದನ್ನು ತೋರಿಸಲಾಗಿದೆ. ಧರ್ಮದ ಕುರಿತ ವಿಚಾರಗಳು ಪ್ರಸ್ತಾಪ ಆಗಿರುವುದರಿಂದ ಮಿಡಲ್ ಈಸ್ಟ್ ರಾಷ್ಟ್ರಗಳಲ್ಲಿ ಸಿನಿಮಾ ಬ್ಯಾನ್ ಆಗಿದೆ.

ಲೆಬೆನಾನ್, ಸಿರಿಯಾ, ಇಸ್ರೇಲ್, ಜೋರ್ಡನ್, ಸೌದಿ ಅರೇಬಿಯಾ, ಯೆಮನ್, ಓಮನ್, ಬರ್ಹೇನ್, ಖತಾರ್, ಯುನೈಟೆಡ್ ಅರಬ್ ಎಮಿರೈಟ್ಸ್, ಕುವೈತ್, ಇರಾಕ್, ಇರಾನ್ ದೇಶಗಳಲ್ಲಿ ‘ಧುರಂಧರ್​’ ಸಿನಿಮಾದ ಪ್ರದರ್ಶನಕ್ಕೆ ಅವಕಾಶ ಸಿಕ್ಕಿಲ್ಲ. ಪಾಕಿಸ್ತಾನದಲ್ಲಿ ಕೂಡ ಈ ಸಿನಿಮಾ ಬಿಡುಗಡೆ ಆಗಿಲ್ಲ. ಹಾಗಿದ್ದರೂ ಕೂಡ ಪೈರಸಿ ಮೂಲಕ ಅಲ್ಲಿನ ಜನರು ಸಿನಿಮಾ ವೀಕ್ಷಿಸಿದ್ದಾರೆ.

ಇದನ್ನೂ ಓದಿ: ಅನಾಯಾಸವಾಗಿ ಭಾರತದಲ್ಲೇ 800 ಕೋಟಿ ರೂಪಾಯಿ ಗಳಿಸಲಿದೆ ‘ಧುರಂಧರ್’

ಅಕ್ಷಯ್ ಖನ್ನಾ ಅವರು ‘ಧುರಂಧರ್’ ಸಿನಿಮಾದಲ್ಲಿ ವಿಲನ್ ಪಾತ್ರ ಮಾಡಿದ್ದರೂ ಕೂಡ ಸಿಕ್ಕಾಪಟ್ಟೆ ಜನಪ್ರಿಯತೆ ಪಡೆದಿದ್ದಾರೆ. ಸಾರಾ ಅರ್ಜುನ್ ಅವರು ನಾಯಕಿಯಾಗಿ ಮಿಂಚಿದ್ದಾರೆ. ಭಾರತೀಯ ಗೂಢಚಾರಿ ಪಾತ್ರದಲ್ಲಿ ರಣವೀರ್ ಸಿಂಗ್ ಅವರು ಅಭಿಮಾನಿಗಳ ಮನ ಗೆದ್ದಿದ್ದಾರೆ. ಆದಿತ್ಯ ಧಾರ್ ಅವರ ನಿರ್ದೇಶನಕ್ಕೆ ಪ್ರೇಕ್ಷಕರು ಭೇಷ್ ಎಂದಿದ್ದಾರೆ. ಬಿಡುಗಡೆಯಾಗಿ 27 ದಿನಗಳು ಕಳೆದರೂ ಹೌಸ್​ಫುಲ್ ಪ್ರದರ್ಶನ ಮುಂದುವರಿದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಧಾರಾವಾಡ: ಸೂರ್ಯರಶ್ಮಿ ಜತೆಗೆ ಕೆರೆ ನೀರಿನ ಚೆಲ್ಲಾಟ: 2025ರ ಕೊನೆಯಲ್ಲಿ ಕಂಡ ಅದ್ಭುತ ದೃಶ್ಯ – Kannada News | Discover Dharwad’s Kelageri Lake: Stunning Sunsets in Karnataka’s Belavalanaadu

ಧಾರವಾಡ, ಡಿ.31: ಧಾರಾವಾಡವನ್ನು ಅರೆಮಲೆನಾಡು ಜಿಲ್ಲೆ ಎಂದು ಅನೇಕರು ಕರೆಯುತ್ತಾರೆ. ಇನ್ನು ಕೆಲವರು ಬೆಳವಲನಾಡು ( Kelageri Lake sunset) ಎನ್ನುತ್ತಾರೆ. ಇಲ್ಲಿ ಯಾವುದೇ ಬೀಜ ಎಸೆದರೂ ಮೊಳಕೆಯೊಡೆದು ಹೆಮ್ಮರವಾಗಿ ಬಿಡುತ್ತೆ ಎಂಬ ಮಾತಿದೆ. ಇದೇ ಕಾರಣಕ್ಕೆ ಈ ಊರನ್ನು ಬೆಳವಲನಾಡು ಎಂದು ಕರೆಯುತ್ತಾರೆ. ಈ ಎಲ್ಲ ಸಮೃದ್ಧಿಗೆ ಇಲ್ಲಿನ ಕೆರೆಗಳು ಕಾರಣ. ಜಿಲ್ಲೆಯ ಬಹುತೇಕ ಪ್ರದೇಶಗಳು ಕೆರೆಗಳಿಂದ ತುಂಬಿದೆ. ಅದರಲ್ಲೂ ಕೆಲಗೇರಿ ಕೆರೆ ಈ ಜಿಲ್ಲೆಯ ಜನರ ಜೀವನಾಡಿ. ಇಂತಹ ಸುಂದರವಾದ ಕೆರೆಯಲ್ಲಿ ಸುಂದರವಾದ ನೀರು-ಸೂರ್ಯನ ಆಟ ದೃಶ್ಯ ನೋಡುವುದೇ ಅದ್ಭುತ. ಹೊಸ ಆಚರಣೆಗೆ ಇಂದೊಂದು ಅದ್ಭುತ ದೃಶ್ಯ.

ಈ ಕೆರೆಯ ಸುತ್ತಮುತ್ತಲಿನ ಪರಿಸರದಲ್ಲಿ ಹೊಸ ಹೊಸ ದೃಶ್ಯಗಳು ಕಂಡು ಬಂದಿದೆ. ಸೂರ್ಯನ ಬೆಳಕಿನೊಂದಿಗೆ ನೀರಿನ ಆಟವೂ ಅಲ್ಲಿನ ಜನರ ಖುಷಿಯ ಕ್ಷಣಕ್ಕೆ ಕಾರಣವಾಗಿತ್ತು.  ಸಂಜೆಯಾಗುತ್ತಿದ್ದಂತೆ ಸೂರ್ಯ ರಶ್ಮಿ ಜತೆಗೆ ಕೆರೆ ನೀರಿನ ಚೆಲ್ಲಾಟವನ್ನು ನೋಡಲು ಎರಡು ಕಣ್ಣು ಸಾಲದು, ಅಂತಹ ಅದ್ಭುತ ದೃಶ್ಯ ಕಂಡು ಬಂದಿದೆ. ಧಾರವಾಡದಿಂದ ಗೋವಾಕ್ಕೆ ಹೋಗುವ ದಾರಿಯಲ್ಲಿ ಸಿಗುವ ಕೆಲಗೇರಿ ಕೆರೆ. ಈ ಕೆರೆಯನ್ನು ಸರ್ ಎಂ. ವಿಶ್ವೇಶ್ವರಯ್ಯ ನಿರ್ಮಿಸಿದ್ದು, ಸೂರ್ಯನ ಸಂಜೆಯ ಬೆಳಕು ಬಣ್ಣ ಬಣ್ಣದ ಕಲ್ಲುಗಳಿಗೆ ನೀರಿನ ಅಲೆಗಳು ಮುತ್ತಿಡುವ ಕ್ಷಣ ನೋಡಲು ಎರಡು ಕಣ್ಣುಗಳು ಸಾಲದು, ಸೂರ್ಯನ ಬಿಂಬಕ್ಕೆ ವಿವಿಧ ಬಗೆಯ ಬಣ್ಣಗಳನ್ನು ಪಡೆದುಕೊಳ್ಳುತ್ತದೆ. ಒಂದು ಬಾರಿ ಬಂಗಾರದ ಬಣ್ಣ, ಮತ್ತೊಮ್ಮೆ ವಜ್ರ, ಹರಳುಗಳಂತೆ ಕಾಣುತ್ತದೆ.

ಇದನ್ನೂ ಓದಿ: ಆತ್ಮಹತ್ಯೆ ಮಾಡಿಕೊಳ್ಳಲು ಕಾಡಿಗೆ ಹೋದವನಿಗೆ ವಿಷ್ಣುವಿನ ದರ್ಶನ; ದೇವಾಲಯ ಕಟ್ಟಿ ಪೂಜಿಸಿದ ಬೀದರ್​​​ನ ಜನ

ಸಂಜೆ ಹೊತ್ತಿಗೆ ಬೆಟ್ಟ-ಗುಡ್ಡಗಳ ಮರೆಯಲ್ಲಿ ನಿಧಾನವಾಗಿ ಇಳಿಯುವ ಸೂರ್ಯ, ತನ್ನೆಲ್ಲಾ ಹಳೆಯ ನೆನಪುಗಳನ್ನ ಅಳಿಸಿ ಹಾಕಿ, ಹೊಸ ವರ್ಷಕ್ಕೆ ಹೊಸ ಬದುಕು ಹಾಗೂ ಭರವಸೆಯತ್ತ ಸಾಗುತ್ತಿರುವಂತೆ ಭಾಸವಾಗುತ್ತೆ. ನಿಧಾನವಾಗಿ ನೀರಿನಲ್ಲಿ ಇಳಿಯುವಂತೆ ಕಾಣುವ ಸೂರ್ಯ, ರಕ್ತದಲ್ಲಿ ಮಿಂದೆದ್ದವನಂತೆ ಕಾಣುತ್ತಾನೆ. ತನ್ನ ಸುತ್ತಮುತ್ತಲಿನ ಪರಿಸರಕ್ಕೂ ಅದನ್ನೇ ಹೊದಿಸುತ್ತಾನೆ. ಕ್ಷಣ ಉರುಳಿದಂತೆ ಚಿನ್ನದ ಬಣ್ಣಕ್ಕೆ ತಿರುಗುತ್ತಾ, ಕೆರೆಯ ಒಡಲನ್ನು ಚಿನ್ನದ ನೀರಿನಿಂದ ತುಂಬುತ್ತಾನೆ. ಅರೆಮಲೆನಾಡು ಜಿಲ್ಲೆಗಳಲ್ಲಿ ಜೂನ್ ಆರಂಭದಿಂದ ಡಿಸೆಂಬರ್ ಕೊನೆಯವರೆಗೆ ಸೂರ್ಯನ ಪ್ರಖರತೆ ಕಡಿಮೆ. ಮಳೆಗಾಲದಲ್ಲಿ ಸೂರ್ಯ ಮೋಡದ ಮರೆಯಲ್ಲಿ ಅವಿತುಕೊಂಡರೆ, ಚಳಿಗಾಲದಲ್ಲಿ ಮಂಜಿನಿಂದ ಹೊರ ಬಾರದೇ ಮರೆಯಾಗಿರುತ್ತಾನೆ. ಆದರೆ ಡಿಸೆಂಬರ್ ಮುಗಿಯುತ್ತಾ ಬರುತ್ತೋ ಆಗ ಮೋಡ-ಮಂಜಿನಿಂದ ಪ್ರಕೃತಿಯಷ್ಟೇ ಅಲ್ಲ, ಸೂರ್ಯನೂ ಮುಕ್ತಿ ಪಡೆದು, ತನ್ನ ಅಸ್ತಿತ್ವವನ್ನ ತೋರಿಸುತ್ತಾನೆ. ಈ ವೇಳೆಯಲ್ಲಿ ಕೆರೆಯ ನೀರಿನೊಂದಿಗೆ ಈತನ ಚೆಲ್ಲಾಟವನ್ನ ನೋಡಲಿಕ್ಕೆ ಎರಡು ಕಣ್ಣು ಸಾಲದು ಎಂದು ಸ್ಥಳೀಯರೊಬ್ಬರು ಹೇಳಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 6:09 pm, Wed, 31 December 25

Source link