Category Archives: Blog

Your blog category

ಚಂದ್ರದ್ರೋಣ ಪರ್ವತ ಶ್ರೇಣಿಯಲ್ಲಿ ಬಾಲಕಿ ನಾಪತ್ತೆ ಕೇಸ್​: 3 ದಿನ ಕಳೆದರೂ ಸಿಕ್ಕಿಲ್ಲ ಸುಳಿವು

ಚಂದ್ರದ್ರೋಣ ಪರ್ವತ ಶ್ರೇಣಿಯಲ್ಲಿ ಬಾಲಕಿ ನಾಪತ್ತೆ ಕೇಸ್​: 3 ದಿನ ಕಳೆದರೂ ಸಿಕ್ಕಿಲ್ಲ ಸುಳಿವು

ಚಿಕ್ಕಮಗಳೂರು, ಏಪ್ರಿಲ್​​ 10: ಚಂದ್ರದ್ರೋಣ ಪರ್ವತ ಶ್ರೇಣಿಯಲ್ಲಿ ಕೇರಳ ಮೂಲದ 15 ವರ್ಷದ ಬಾಲಕಿ ಶ್ರೀನಂದಾ ಮೂರು ದಿನಗಳಿಂದ ನಾಪತ್ತೆಯಾಗಿದ್ದಾರೆ. ಏಪ್ರಿಲ್ 7ರಂದು ಚಿಕ್ಕಮಗಳೂರು ನಗರಕ್ಕೆ ಆಗಮಿಸಿದ್ದ 40 ಜನರ ಪ್ರವಾಸಿ ತಂಡದಲ್ಲಿ ಶ್ರೀನಂದಾ ಕೂಡ ಇದ್ದರು. ಮಾಣಿಕ್ಯಧಾರ ಜಲಪಾತದ ಬಳಿ ನಾಪತ್ತೆಯಾಗಿದ್ದು, ಇನಾಮು ದತ್ತಾತ್ರೇಯ ಬಾಬುಡಂ ಸ್ವಾಮಿ ದರ್ಗಾ ಹಾಗೂ ಮಾಣಿಕ್ಯಧಾರಕ್ಕೆ ಭೇಟಿ ನೀಡಿದ್ದಾಗ ಈ ಘಟನೆ ನಡೆದಿದೆ. ಎಸ್ಡಿಆರ್ಎಫ್, ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಹಾಗೂ ಎಎನ್ಎಫ್ ತಂಡಗಳು ಸೇರಿ ಬಾಲಕಿಯ ಶೋಧ ಕಾರ್ಯದಲ್ಲಿ ತೊಡಗಿವೆ. ಡ್ರೋನ್ ಹಾಗೂ ಥರ್ಮಲ್ ಕ್ಯಾಮೆರಾಗಳನ್ನು ಬಳಸಲಾಗಿದೆಯಾದರೂ, ಬಾಲಕಿ ಬಗ್ಗೆ ಇದುವರೆಗೆ ಯಾವುದೇ ಸುಳಿವು ಸಿಕ್ಕಿಲ್ಲ. ಬಾಲಕಿ ಎಲ್ಲಾದರೂ ಬಿದ್ದಿದ್ದಾಳಾ ಅಥವಾ ಬೇರೆಡೆ ಹೋಗಿದ್ದಾಳೆ ಎಂಬ ಅನುಮಾನದ ಮೇಲೆ ತನಿಖೆ ಮುಂದುವರಿದಿದೆ. ಕೇರಳದಿಂದಲೂ ಪೊಲೀಸರ ತಂಡ ಆಗಮಿಸಿದ್ದು, ಪೋಷಕರ ಮೊಬೈಲ್ ಕರೆ ವಿವರಗಳನ್ನು ಪರಿಶೀಲಿಸಲಾಗುತ್ತಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಇಸ್ರೇಲ್ ಕ್ಯಾನ್ಸರ್ ಇದ್ದಂತೆ : ಪಾಕ್ ಸಚಿವ ಖ್ವಾಜಾ ಆಸಿಫ್ ವಿವಾದಾತ್ಮಕ ಹೇಳಿಕೆ, ನೆತನ್ಯಾಹು ತೀವ್ರ ವಾಗ್ದಾಳಿ

ಇಸ್ಲಾಮಾಬಾದ್, ಏಪ್ರಿಲ್ 10: ಮಧ್ಯಪ್ರಾಚ್ಯದ ರಣಾಂಗಣದಲ್ಲಿ ಬಾಂಬ್‌ಗಳ ಸದ್ದು ಕೇಳಿಸುತ್ತಿರುವಂತೆಯೇ, ಇತ್ತ ರಾಜತಾಂತ್ರಿಕ ವೇದಿಕೆಯಲ್ಲಿ ಪಾಕಿಸ್ತಾನ ಮತ್ತು ಇಸ್ರೇಲ್(Israel) ನಡುವೆ ‘ಪದಗಳ ಸಮರ’ ತಾರಕಕ್ಕೇರಿದೆ. ಅಮೆರಿಕ ಮತ್ತು ಇರಾನ್ ನಡುವಿನ ಶಾಂತಿ ಮಾತುಕತೆಗಳಿಗೆ ಪಾಕಿಸ್ತಾನ ಆತಿಥ್ಯ ವಹಿಸಲು ಸಿದ್ಧತೆ ನಡೆಸುತ್ತಿರುವ ಬೆನ್ನಲ್ಲೇ, ಪಾಕ್ ರಕ್ಷಣಾ ಸಚಿವರ ಸ್ಫೋಟಕ ಹೇಳಿಕೆ ಜಾಗತಿಕ ರಾಜಕಾರಣದಲ್ಲಿ ಕಿಚ್ಚು ಹಚ್ಚಿದೆ.

ಇಸ್ರೇಲ್ ಒಂದು ಕ್ಯಾನ್ಸರ್: ಪಾಕ್ ಸಚಿವ ಖವಾಜಾ ಆಸಿಫ್ ಆಕ್ರೋಶ, ನೆತನ್ಯಾಹು ತಿರುಗೇಟು
ಅಮೆರಿಕ ಮತ್ತು ಇರಾನ್ ನಡುವೆ 14 ದಿನಗಳ ಕದನ ವಿರಾಮ ಘೋಷಣೆಯಾಗಿದ್ದರೂ, ಲೆಬನಾನ್ ಮತ್ತು ಗಾಜಾದಲ್ಲಿ ನಡೆಯುತ್ತಿರುವ ರಕ್ತಪಾತವು ಹೊಸ ರಾಜತಾಂತ್ರಿಕ ಬಿಕ್ಕಟ್ಟನ್ನು ಸೃಷ್ಟಿಸಿದೆ. ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸಿಫ್ ಅವರು ಇಸ್ರೇಲ್ ವಿರುದ್ಧ ನಡೆಸಿರುವ ವಾಗ್ದಾಳಿ ಈಗ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರನ್ನು ಕೆರಳಿಸಿದೆ.

ಖ್ವಾಜಾ ಆಸಿಫ್ ಅವರ ವಿವಾದಾತ್ಮಕ ಹೇಳಿಕೆ
ಇಸ್ಲಾಮಾಬಾದ್‌ನಲ್ಲಿ ಶಾಂತಿ ಮಾತುಕತೆಗೆ ವೇದಿಕೆ ಸಿದ್ಧವಾಗುತ್ತಿರುವಾಗಲೇ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದ  ಆಸಿಫ್, ಇಸ್ರೇಲ್ ಅನ್ನು ಕಟುವಾದ ಪದಗಳಿಂದ ಟೀಕಿಸಿದ್ದಾರೆ. ಇಸ್ರೇಲ್ ಒಂದು ಶಾಪ ಮತ್ತು ಕ್ಯಾನ್ಸರ್ ಇದ್ದಂತೆ  ಅದನ್ನು  ನರಕದಲ್ಲಿ ಸುಟ್ಟುಹಾಕಿಬಿಡಬೇಕು ಎಂದು ಹೇಳಿದ್ದರು.

ಗಾಜಾ ಮತ್ತು ಇರಾನ್ ನಂತರ ಈಗ ಲೆಬನಾನ್‌ನಲ್ಲಿ ಇಸ್ರೇಲ್ ಅಮಾಯಕರ ರಕ್ತವನ್ನು ಸುರಿಸುತ್ತಿದೆ ಎಂದು ಅವರು ಆರೋಪಿಸಿದರು. ವಿವಾದ ತಾರಕಕ್ಕೇರುತ್ತಿದ್ದಂತೆಯೇ ಆಸಿಫ್ ಅವರು ತಮ್ಮ ಟ್ವೀಟ್ ಅನ್ನು ಅಳಿಸಿ ಹಾಕಿದರಾದರೂ, ಅಷ್ಟರಲ್ಲೇ ಅದು ಜಾಗತಿಕವಾಗಿ ಚರ್ಚೆಗೆ ಗ್ರಾಸವಾಗಿತ್ತು.

ಸಚಿವ ಆಸಿಫ್ ಅವರ ಹೇಳಿಕೆಗೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಒಂದು ಕಡೆ ಶಾಂತಿ ಪ್ರಕ್ರಿಯೆಯ ಭಾಗವೆಂದು ಹೇಳಿಕೊಳ್ಳುವ ದೇಶದ ಸಚಿವರು ಇಂತಹ ಅವಹೇಳನಕಾರಿ ಮತ್ತು ಅಪಾಯಕಾರಿ ಹೇಳಿಕೆ ನೀಡುವುದನ್ನು ಯಾವುದೇ ಸರ್ಕಾರ ಸಹಿಸುವುದಿಲ್ಲ ಎಂದು ಅವರು ಗುಡುಗಿದ್ದಾರೆ.

ಮತ್ತಷ್ಟು ಓದಿ: ಇಸ್ರೇಲ್ ಹಿಜ್ಬೊಲ್ಲಾ ಮೇಲೆ ದಾಳಿ ಮುಂದುವರಿಸುತ್ತದೆ; ನೆತನ್ಯಾಹು ಎಚ್ಚರಿಕೆ

ಪ್ರಧಾನಿ ಶೆಹಬಾಜ್ ಷರೀಫ್ ಅವರು ಕದನ ವಿರಾಮವು ಲೆಬನಾನ್ ಸೇರಿದಂತೆ ಇಡೀ ಪ್ರದೇಶಕ್ಕೆ ಅನ್ವಯಿಸುತ್ತದೆ ಎಂದು ವಾದಿಸುತ್ತಿದ್ದಾರೆ. ಕದನ ವಿರಾಮವು ಇರಾನ್ ಮತ್ತು ಅಮೆರಿಕಕ್ಕೆ ಮಾತ್ರ ಸೀಮಿತವಾಗಿದ್ದು, ಲೆಬನಾನ್‌ನಲ್ಲಿ ಹಿಜ್ಬೊಲ್ಲಾ ವಿರುದ್ಧದ ಮಿಲಿಟರಿ ಕ್ರಮ ಮುಂದುವರಿಯಲಿದೆ ಎಂದು ಇಸ್ರೇಲ್ ಸ್ಪಷ್ಟಪಡಿಸಿದೆ.

ರಾಜತಾಂತ್ರಿಕ ಪ್ರಯತ್ನಗಳಿಗೆ ಹಿನ್ನಡೆ?
ಲೆಬನಾನ್‌ನಲ್ಲಿ ಇಸ್ರೇಲ್ ದಾಳಿ ನಿಲ್ಲಿಸದಿದ್ದರೆ ಅಮೆರಿಕದೊಂದಿಗೆ ನಡೆಯಲಿರುವ ಶಾಂತಿ ಮಾತುಕತೆಗಳನ್ನು ಮುಂದೂಡುವುದಾಗಿ ಇರಾನ್ ಈಗಾಗಲೇ ಎಚ್ಚರಿಕೆ ನೀಡಿದೆ. ಮುಂದಿನ ವಾರ ಅಮೆರಿಕದಲ್ಲಿ ಇಸ್ರೇಲ್ ಮತ್ತು ಲೆಬನಾನ್ ನಡುವೆ ಮಾತುಕತೆಗಳು ನಡೆಯುವ ನಿರೀಕ್ಷೆಯಿದ್ದರೂ,  ಖ್ವಾಜಾ ಆಸಿಫ್ ಅವರಂತಹ ಕಠಿಣ ಹೇಳಿಕೆಗಳು ಮತ್ತು ಸತತ ದಾಳಿಗಳು ಪರಿಸ್ಥಿತಿಯನ್ನು ಮತ್ತಷ್ಟು ಸಂಕೀರ್ಣಗೊಳಿಸಿವೆ.

ಒಂದು ಕಡೆ ಶಾಂತಿಗಾಗಿ ಹರಸಾಹಸ ನಡೆಯುತ್ತಿದ್ದರೆ, ಇನ್ನೊಂದು ಕಡೆ ನಾಯಕರ ನಡುವಿನ ವೈಯಕ್ತಿಕ ವಾಗ್ದಾಳಿಗಳು ಉರಿಯುವ ಬೆಂಕಿಗೆ ತುಪ್ಪ ಸುರಿಯುತ್ತಿವೆ. ಪಾಕಿಸ್ತಾನವು ಮಧ್ಯಸ್ಥಿಕೆದಾರನ ಪಾತ್ರ ವಹಿಸಲು ಹವಣಿಸುತ್ತಿರುವ ಈ ಸಮಯದಲ್ಲಿ ಇಸ್ರೇಲ್ ಅನ್ನು ‘ಕ್ಯಾನ್ಸರ್’ ಎಂದು ಕರೆದಿರುವುದು ರಾಜತಾಂತ್ರಿಕವಾಗಿ ಇಸ್ಲಾಮಾಬಾದ್‌ಗೆ ಮುಳುವಾಗುವ ಸಾಧ್ಯತೆಯಿದೆ.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Virgo Horoscope: ನೀವು ಕನ್ಯಾ ರಾಶಿಯವರ? ಹಾಗಿದ್ರೆ ನಿಮಗಾಗಿ ಉಪಯುಕ್ತ ಮಾಹಿತಿ ಇಲ್ಲಿದೆ

ಬುಧನ ಆಧಿಪತ್ಯದ ಕನ್ಯಾ ರಾಶಿಗೆ 2026ರ ಏಪ್ರಿಲ್ ತಿಂಗಳಲ್ಲಿ ಶನಿ, ಕುಜ, ರವಿ, ಬುಧರ ದೃಷ್ಟಿಯೂ ನೇರವಾಗಿ ಇರುವುದರಿಂದ ಜೊತೆಗೆ ರಾಶಿಯ ಅಧಿಪತಿಯಾದ ಬುಧನು ನೀಚಸ್ಥಾನಕ್ಕೆ ಹೋಗಿ, ಅಲ್ಲಿಂದ ದೃಷ್ಟಿಯನ್ನು ಇಟ್ಟ ಕಾರಣ ನಾನಾರೀತಿಯ ತೊಂದರೆಗಳು ಆರಂಭದ ದಿನಗಳಲ್ಲಿ ಆಗಲಿದೆ. ಅನಂತರದಲ್ಲಿ ಒಂದೊಂದೇ ಭಾರಗಳು ಕಡಿಮೆಯಾಗಿ ನಿಶ್ಚಿಂತೆಯ ಬೆಳಕು ನಿಮ್ಮೊಂದಿಗೆ ಮುನ್ನಡೆಸಲಿದೆ.

​ಉದ್ಯೋಗ ಮತ್ತು ವ್ಯವಹಾರ:

ಉದ್ಯೋಗದ ದೃಷ್ಟಿಯಿಂದ ಈ ತಿಂಗಳು ಶುಭ ಫಲಿತಾಂಶಗಳನ್ನು ನೀಡಲಿದೆ. ಶನಿಯು ಆರನೇ ಮನೆಯಲ್ಲಿರುವುದರಿಂದ ಕೆಲಸದ ಸ್ಥಳದಲ್ಲಿ ನಿಮ್ಮ ಪ್ರಭಾವ ಹೆಚ್ಚಾಗಲಿದೆ. ಶತ್ರುಗಳ ಮೇಲೆ ಜಯ ಸಾಧಿಸುವಿರಿ. ನಿಮ್ಮ ಶ್ರಮಕ್ಕೆ ತಕ್ಕ ಮನ್ನಣೆ ಸಿಗಲಿದೆ. ಹೂಡಿಕೆಯಲ್ಲಿ ಜಾಗರೂಕರಾಗಿರಿ. ತಿಂಗಳ ದ್ವಿತೀಯಾರ್ಧದಲ್ಲಿ ಹೊಸ ಒಪ್ಪಂದಗಳು ಕೈಗೂಡಬಹುದು.

ವಿದ್ಯಾಭ್ಯಾಸ:

​ವಿದ್ಯಾರ್ಥಿಗಳಿಗೆ ಇದು ಮಧ್ಯಮ ಫಲದ ಕಾಲ. ಏಕಾಗ್ರತೆಯ ಕೊರತೆ ಕಾಡಬಹುದು. ​ಸ್ಪರ್ಧಾತ್ಮಕ ಪರೀಕ್ಷೆ ಬರೆಯುವವರಿಗೆ ಶನಿಯ ಅನುಗ್ರಹದಿಂದ ಉತ್ತಮ ಯಶಸ್ಸು ಸಿಗುವ ಸಾಧ್ಯತೆ ಇದೆ. ​ಉನ್ನತ ಶಿಕ್ಷಣಕ್ಕಾಗಿ ಶ್ರಮಿಸುತ್ತಿರುವವರು ಹೆಚ್ಚಿನ ಪರಿಶ್ರಮ ಹಾಕಬೇಕಾಗುತ್ತದೆ.

ಅರ್ಥಿಕತೆ:

​ಆರ್ಥಿಕ ಸ್ಥಿತಿ ಏರಿಳಿತದಿಂದ ಕೂಡಿರುತ್ತದೆ. ಅನಗತ್ಯ ಖರ್ಚುಗಳ ಮೇಲೆ ನಿಯಂತ್ರಣವಿರಲಿ. ಆದಾಯದ ಮೂಲಗಳು ಉತ್ತಮವಾಗಿದ್ದರೂ, ಉಳಿತಾಯ ಮಾಡುವುದು ಸವಾಲಾಗಬಹುದು. ಹಳೆಯ ಸಾಲಗಳನ್ನು ತೀರಿಸಲು ಇದು ಸಕಾಲ. ಆದರೆ, ಈ ತಿಂಗಳು ಹೊಸದಾಗಿ ದೊಡ್ಡ ಮೊತ್ತದ ಸಾಲ ಮಾಡುವುದನ್ನು ತಪ್ಪಿಸುವುದು ಕ್ಷೇಮ.

ವಿವಾಹ ಮತ್ತು ಕೌಟುಂಬಿಕ ಜೀವನ:

ಕೌಟುಂಬಿಕವಾಗಿ ಕೆಲವು ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಮೂಡಬಹುದು. ಅವಿವಾಹಿತರಿಗೆ ಕಂಕಣ ಭಾಗ್ಯ ಕೂಡಿಬರಲು ಸ್ವಲ್ಪ ವಿಳಂಬವಾಗಬಹುದು. ಸಂಗಾತಿಯೊಂದಿಗೆ ಮಾತನಾಡುವಾಗ ತಾಳ್ಮೆ ಇರಲಿ. ​ಮನೆಯ ಹಿರಿಯರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.

ವಿದೇಶ ಪ್ರವಾಸ ಮತ್ತು ವಾಹನ ಖರೀದಿ:

ವಿದೇಶಕ್ಕೆ ಹೋಗುವ ಪ್ರಯತ್ನದಲ್ಲಿದ್ದವರಿಗೆ ಈ ತಿಂಗಳು ಸಾಧಾರಣ ಫಲ ನೀಡಲಿದೆ. ದಾಖಲಾತಿಗಳ ಕೆಲಸದಲ್ಲಿ ವಿಳಂಬವಾಗಬಹುದು. ಹೊಸ ವಾಹನ ಖರೀದಿಗೆ ತಿಂಗಳ ಮಧ್ಯಭಾಗದ ಅನಂತರದ ಸಮಯ ಶುಭವಾಗಿದೆ. ಚಾಲನೆಯಲ್ಲಿ ಜಾಗರೂಕತೆ ಅತ್ಯಗತ್ಯ.

ಭೂಮಿ ಖರೀದಿ ಮತ್ತು ಗೃಹ ನಿರ್ಮಾಣ:

​ಆಸ್ತಿ ವಿಚಾರದಲ್ಲಿ ಈ ತಿಂಗಳು ಶುಭ ಸೂಚನೆಗಳಿವೆ. ಭೂಮಿ ಖರೀದಿ ಮಾಡುವ ಆಲೋಚನೆ ಇದ್ದರೆ ಕಾನೂನುಬದ್ಧವಾಗಿ ಎಲ್ಲವನ್ನೂ ಪರಿಶೀಲಿಸಿ ಮುಂದುವರಿಯಿರಿ. ​ಗೃಹನಿರ್ಮಾಣ ಕಾರ್ಯ ಪ್ರಾರಂಭಿಸಲು ಅಥವಾ ಅರ್ಧಕ್ಕೆ ನಿಂತ ಕೆಲಸಗಳನ್ನು ಮುಂದುವರಿಸಲು ಪೂರಕ ವಾತಾವರಣವಿದೆ.

ಶತ್ರುಕಾಟ ಮತ್ತು ನ್ಯಾಯಾಲಯದ ವಿಚಾರ:

ಏಳನೇ ಮನೆಯ ಶನಿಯು ನಿಮ್ಮ ಸಂಗಾತಿಯ ಬಗ್ಗೆ ನಿರ್ಲಕ್ಷ್ಯ ತೋರಿಸಿದ್ದು, ನಿಮ್ಮ ಮೇಲೆ ಶತ್ರುವಿನ ಭಾವ ಉಂಟಾಗಲು ಸಾಕು. ಗುಪ್ತ ಶತ್ರುಗಳ ಬಗ್ಗೆ ಭಯ ಬೇಡ, ನಿಮ್ಮ ವ್ಯಕ್ತಿತ್ವವೇ ಅವರಿಗೆ ಉತ್ತರವಾಗಲಿದೆ. ಕೋರ್ಟ್ ಕಚೇರಿ ವ್ಯವಹಾರಗಳಲ್ಲಿ ನಿಮಗೆ ಜಯ ಸಿಗುವ ಸಾಧ್ಯತೆ ಹೆಚ್ಚಿದೆ. ಸಂಧಾನದ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಲು ಇದು ಉತ್ತಮ ಸಮಯ. ​ಬುಧವಾರದಂದು ವಿಷ್ಣು ಸಹಸ್ರನಾಮ ಪಾರಾಯಣ ಮಾಡುವುದರಿಂದ ಮಾನಸಿಕ ಶಾಂತಿ ಮತ್ತು ಕಾರ್ಯಸಿದ್ಧಿ ಲಭಿಸುತ್ತದೆ.

– ಲೋಹಿತ ಹೆಬ್ಬಾರ್

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Viral: ಹುಷಾರಿಲ್ಲ ಅಂದ್ರೂ ರಜೆ ಕೊಡಲ್ಲ; ಮ್ಯಾನೇಜರ್ ವರ್ತನೆಗೆ ಬೇಸರ ವ್ಯಕ್ತಪಡಿಸಿದ ಉದ್ಯೋಗಿ

ಕೆಲಸ (job) ಅಂದ್ರೆ ಹಾಗೆನೇ, ಕತ್ತೆ ತರಹ ದುಡಿದ್ರೂ ಬೆಲೆ ಇಲ್ಲ. ನೀವು ಏನೇ ಹೇಳಿ, ನಮ್ಮ ಬಾಸ್ ಒಂದೇ ಒಂದು ರಜೆ ಕೇಳಿದ್ರು ಕೊಡಲ್ಲ. ಹುಷಾರಿಲ್ಲ ಅಂದ್ರೂ ಆಫೀಸಿಗೆ ಬಂದು ಕೆಲಸ ಮಾಡು ಅಂತಾರೆ. ಒಂದು ದಿನ ರಜೆ ಅಂದ್ರೆ ಆಕಾಶ ಭೂಮಿ ಒಂದು ಮಾಡ್ತಾರೆ. ಕೆಲ ಉದ್ಯೋಗಿಗಳು ಈ ರೀತಿ ಹೇಳುವುದನ್ನು ನೀವು ನೋಡಿರುತ್ತೀರಿ. ಇಲ್ಲೊಬ್ಬ ಉದ್ಯೋಗಿಯೂ ಹೊಟ್ಟೆ ಹಾಗೂ ಜ್ವರದ ಕಾರಣ ಶಿಫ್ಟ್ ಆರಂಭವಾಗುವ ಒಂದು ಗಂಟೆ ಮುಂಚಿತವಾಗಿ ಮ್ಯಾನೇಜರ್‌ಗೆ ಕರೆ ಮಾಡಿ ರಜೆ ಕೇಳಿದ್ದಾರೆ. ಉದ್ಯೋಗಿ ರಜೆ ಕೇಳುತ್ತಿದ್ದಂತೆ ಮ್ಯಾನೇಜರ್ ತನ್ನ ಮಾತಿನ ಧಾಟಿಯನ್ನೇ ಬದಲಾಯಿಸಿದ್ದಾರೆ. ರಜೆ ಕೇಳಲು ಹೋದಾಗ ಉದ್ಯೋಗಿಗಾದ ಕಹಿ ಅನುಭವದ ಬಗ್ಗೆ ಹೇಳಿಕೊಂಡಿದ್ದು, ಈ ಪೋಸ್ಟ್ ಇಂಟರ್ನೆಟ್‌ನಲ್ಲಿ ಚರ್ಚೆಗೆ ಕಾರಣವಾಗಿದೆ.  ನೆಟ್ಟಿಗರು ಕೆಲಸದ ಸಂಸ್ಕೃತಿಯನ್ನು ಟೀಕಿಸಿದ್ದಾರೆ.

Indianworkculture ಹೆಸರಿನ ರೆಡ್ಡಿಟ್ ಖಾತೆಯಲ್ಲಿ ಉದ್ಯೋಗಿಯೊಬ್ಬರು ರಜೆ ಕೇಳಿದಾಗ ಮ್ಯಾನೇಜರ್ ಪ್ರತಿಕ್ರಿಯೆಯ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಉದ್ಯೋಗಿಯೊಬ್ಬರಿಗೆ ಜ್ವರ ಹಾಗೂ ಹೊಟ್ಟೆಯ ಸಮಸ್ಯೆ ಕಾಣಿಸಿಕೊಂಡಿದ್ದು, ಹೀಗಾಗಿ ಶಿಫ್ಟ್ ಆರಂಭವಾಗುವ ಒಂದು ಗಂಟೆ ಮುನ್ನ ಮ್ಯಾನೇಜರ್‌ಗೆ ಕರೆ ಮಾಡಿ ನಾನು ಅನಾರೋಗ್ಯದ ಕಾರಣ ಸಿಕ್ ಲೀವ್ ತೆಗೆದುಕೊಳ್ಳುತ್ತಿದ್ದೇನೆ ಎಂದು ತಿಳಿಸಿದ್ದಾರೆ. ಆದರೆ ಈ ಮ್ಯಾನೇಜರ್ ಮಾತ್ರ ಉದ್ಯೋಗಿಯ ಬಳಿ ರಜೆ ತೆಗೆದುಕೊಳ್ಳುವಾಗ ಅನುಮತಿ ಕೇಳಬೇಕು, ಬದಲಾಗಿ ಮಾಹಿತಿ ಯಾವುದೇ ಕಾರಣಕ್ಕೂ ಕೊಡಬಾರದು ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

ವೈರಲ್ ಪೋಸ್ಟ್ ಇಲ್ಲಿದೆ

ಅಷ್ಟೇ ಅಲ್ಲದೇ, ಅನಾರೋಗ್ಯದ ರಜೆ ಸಿಗಬೇಕಾದರೆ ಕನಿಷ್ಠ ಮೂರು ದಿನವಾದ್ರೂ ಆಸ್ಪತ್ರೆಗೆ ದಾಖಲಾಗಿರಬೇಕು ಇದ್ದ ನಿಯಮವನ್ನೇ ಬದಲಾಯಿಸಿ ಬಿಟ್ಟರು. ಕಂಪನಿಯ ನಿಯಮದ ಪ್ರಕಾರ 2 ದಿನದ ವಿಶ್ರಾಂತಿಗೂ ರಜೆ ತೆಗೆದುಕೊಳ್ಳುವ ಅವಕಾಶವಿದೆ. ಅದಲ್ಲದೇ, ಈ ವ್ಯಕ್ತಿ ವೈದ್ಯರಿಂದ ಸರ್ಟಿಫಿಕೇಟ್ ತಂದು ಅಪ್ಲೈ ಮಾಡಿದ್ರೂ, ಮ್ಯಾನೇಜರ್ ಅದನ್ನು ಒಪ್ಪಲಿಲ್ಲ. ಬದಲಿಗೆ, ಖಾಸಗಿ ಪ್ರಿಸ್ಕ್ರಿಪ್ಷನ್ ನನಗೆ ಮತ್ತು ಟೀಮ್ ಲೀಡ್‌ಗೆ ತೋರಿಸಬೇಕು, ನಾವು ಅದನ್ನು ರಿವ್ಯೂ ಮಾಡಿದ ಮೇಲೆಯೇ ರಜೆ ಅಪ್ರೂವ್ ಮಾಡುವುದು ಎಂದು ಖಡಕ್ ಆಗಿ ಹೇಳಿರುವ ಬಗ್ಗೆ ಇಲ್ಲಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ರಾತ್ರಿ 12 ಗಂಟೆಯಾದ್ರು ಮುಗಿಯದ ಕೆಲಸ; ಬೈಕ್‌ನಲ್ಲಿ ಲ್ಯಾಪ್ ಟಾಪ್ ಹಿಡಿದು ಕುಳಿತ ವ್ಯಕ್ತಿ

ಈ ರೆಡ್ಡಿಟ್ ಪೋಸ್ಟ್ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ, ನಿಮ್ಮ ಮ್ಯಾನೇಜರ್ ಒಬ್ಬ ಹುಚ್ಚ. ಆದರೆ ಇದು ನಿಮ್ಮ ಅಪಾಯಿಂಟ್ಮೆಂಟ್ ಲೆಟರ್ ನಲ್ಲಿ ಬರೆದಿದೆಯೇ? ವಿಷಯ ತಿಳಿಸಿ ಹೆಚ್ ಆರ್ ಗೆ ವರದಿ ಮಾಡಿ. ಅಲ್ಲಿನ ಸಂಸ್ಕೃತಿ ಹೀಗಿದ್ದರೆ ಬೇರೆ ಕೆಲಸ ಹುಡುಕಿಕೊಳ್ಳಿ ಎಂದು ಸಲಹೆ ನೀಡಿದ್ದಾರೆ. ಮತ್ತೊಬ್ಬರು, ಆಫೀಸಿಗೆ ಹೋಗಿ ಮ್ಯಾನೇಜರ್ ಟೇಬಲ್ ಮೇಲೆ ವಾಂತಿ ಮಾಡಿ. ನೀವು ಅಸ್ವಸ್ಥಳಾಗಿದ್ದರಿಂದ ಮ್ಯಾನೇಜರ್ ಯಾವುದೇ ಪ್ರಶ್ನೆ ಕೇಳಲ್ಲ ಎಂದು ಹೇಳಿದ್ದಾರೆ. ಇನ್ನೊಬ್ಬರು, ಇದು ಯಾವ ರೀತಿಯ ಕಂಪನಿ? ನಾನು ತಲೆನೋವಿನಂತಹ ಸಣ್ಣ ಸಮಸ್ಯೆಗೆ ಅನಾರೋಗ್ಯ ರಜೆ ತೆಗೆದುಕೊಂಡಿದ್ದೇನೆ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Source link

ಲಂಚ ಪಡೆಯುತ್ತಾ ರೆಡ್​ಹ್ಯಾಂಡೆಡ್ ಆಗಿ ಸಿಕ್ಕ ಆಫೀಸರ್; ಸಿನಿಮೀಯ ರೀತಿಯಲ್ಲಿ ಆರೋಪಿಯನ್ನು ವಶಕ್ಕೆ ಪಡೆದ ಲೋಕಾಯುಕ್ತ!

ರಾಯಚೂರು, ಏಪ್ರಿಲ್ 10: ಜಿಲ್ಲೆಯಲ್ಲಿ ಲೋಕಾಯುಕ್ತರು (Lokayukta) ಸಿನಿಮೀಯ ರೀತಿಯಲ್ಲಿ ಕಾರ್ಯಾಚರಣೆ ನಡೆಸಿ ಭ್ರಷ್ಟಾಚಾರ ಆರೋಪದಡಿ ಸಿರವಾರ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಯನ್ನು ವಶಕ್ಕೆ ಪಡೆದಿದ್ದಾರೆ. ಪಂಚಾಯತ್‌ನ ಚೀಫ್ ಆಫೀಸರ್ ಸುರೇಶ್ ಶೆಟ್ಟಿ, ಖಾತಾ ಮ್ಯೂಟೇಶನ್ ಮಾಡಲು ಲೇಔಟ್ ಮಾಲೀಕ ರಘರಾಮ್ ರೆಡ್ಡಿಯಿಂದ 2 ಲಕ್ಷ ರೂ. ಲಂಚ ಬೇಡಿಕೆ ಇಟ್ಟಿದ್ದಾರೆ ಎಂದು ಆರೋಪಿಸಲಾಗಿದೆ. ಈ ಆರೋಪದ ಹಿನ್ನೆಲೆ ಸುರೇಶ್​ನನ್ನು ವಶಕ್ಕೆ ಪಡೆಯಲಾಗಿದೆ.

ಲೇಔಟ್ ಮಾಲೀಕನಿಂದ ಲೋಕಾಯುಕ್ತಗೆ ದೂರು

ಸಿರವಾರ ಪಟ್ಟಣದ ಹೊಸ ಲೇಔಟ್‌ನ 34 ನಿವೇಶನಗಳ ಖಾತಾ ಮ್ಯೂಟೇಶನ್ ಪ್ರಕ್ರಿಯೆಗಾಗಿ ಸುರೇಶ್ ಲಂಚ ಕೇಳಿದ್ದಾರೆ ಎಂದು ಆರೋಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ರಘರಾಮ್ ರೆಡ್ಡಿ ಲೋಕಾಯುಕ್ತರಿಗೆ ದೂರು ನೀಡಿದ್ದರು. ದೂರು ಆಧಾರವಾಗಿ ಕಾರ್ಯಾಚರಣೆ ನಡೆಸಿದ ಲೋಕಾಯುಕ್ತ ಅಧಿಕಾರಿಗಳು, ನಿನ್ನೆ ರಘರಾಮ್ ರೆಡ್ಡಿ ಅವರು 1 ಲಕ್ಷ ರೂ. ಹಣವನ್ನು ಸುರೇಶ್ ಶೆಟ್ಟಿಗೆ ನೀಡುವ ವೇಳೆ ದಾಳಿ ನಡೆಸಿದ್ದಾರೆ.

ಇದನ್ನೂ ಓದಿ ಕಿವಿ ಕೇಳಲ್ಲ, ಮಾತೂ ಬರಲ್ಲ! ಆದ್ರೂ ಸ್ನೇಹಿತನ ಹೆಂಡತಿ ಮೇಲೆ ಕಣ್ಣು ಹಾಕಿದ ವ್ಯಕ್ತಿ ಮಾಡಿದ್ದೇನು ಗೊತ್ತಾ?

ಸ್ನೇಹಿತನ ಮನೆಯಲ್ಲಿ ಅಡಗಿದ್ದ ಆರೋಪಿ ಬಲೆಗೆ!

ಆದರೆ ದಾಳಿ ವೇಳೆ ಸುರೇಶ್ ಶೆಟ್ಟಿ ಕಾರಿನಲ್ಲಿ ಹಣ ಸಮೇತ ಸ್ಥಳದಿಂದ ಪರಾರಿಯಾಗಿದ್ದು, ಬಳಿಕ ಸಿರವಾರದಿಂದ ಕವಿತಾಳ ಕಡೆಗೆ ಕಾರಿನಲ್ಲಿ ತೆರಳಿ ಸ್ನೇಹಿತರ ಮನೆಯಲ್ಲಿ ಅಡಗಿಕೊಂಡಿದ್ದರು ಎನ್ನಲಾಗಿದೆ. ಲೋಕಾಯುಕ್ತ ತಂಡ ಮೊಬೈಲ್ ಲೊಕೇಶನ್ ಟ್ರೇಸ್ ಮಾಡಿ ಕವಿತಾಳ ಪಟ್ಟಣದಲ್ಲಿ ಆರೋಪಿಯನ್ನು ಪತ್ತೆಹಚ್ಚಿ ವಶಕ್ಕೆ ಪಡೆದಿದೆ. ಇದೀಗ ಆರೋಪಿಯನ್ನು ವಿಚಾರಣೆಗೊಳಪಡಿಸಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ಮುಂದುವರಿದಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಛೇ, ಇದೆಂಥಾ ಕ್ರೌರ್ಯ! ಜಗಳ ಬಿಡಿಸಲು ಹೋದ ಗರ್ಭಿಣಿಯ ಹೊಟ್ಟೆಗೆ ಒದ್ದ ಕಿರಾತಕರು, ಗರ್ಭದಲ್ಲಿದ್ದ ಅವಳಿ ಶಿಶುಗಳು ದಾರುಣ ಸಾವು

ಹಾವೇರಿ, ಏಪ್ರಿಲ್ 10: ಸಾಲದ ಹಣ ವಾಪಸ್ ಕೇಳುವ ಭರದಲ್ಲಿ ಗುಂಪೊಂದು ಗರ್ಭಿಣಿ ಮಹಿಳೆಯ ಮೇಲೆ ಹಲ್ಲೆ ನಡೆಸಿದ ಪರಿಣಾಮ, ಹೊಟ್ಟೆಯಲ್ಲಿದ್ದ ಆರು ತಿಂಗಳ ಅವಳಿ-ಜವಳಿ ಶಿಶುಗಳು ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ಹಾವೇರಿ (Haveri) ಜಿಲ್ಲೆ ಸವಣೂರು ತಾಲೂಕಿನ ಅಲ್ಲಿಪುರ ಗ್ರಾಮದಲ್ಲಿ ನಡೆದಿದೆ. ಅಲ್ಲಿಪುರ ಗ್ರಾಮದ ಹಾಲವ್ವ ಎಂಬುವವರು ಮಗಳ ಸೀಮಂತ ಕಾರ್ಯಕ್ರಮಕ್ಕಾಗಿ ಊರಿಗೆ ಬಂದಿದ್ದರು. ಹಾಲವ್ವ ಅವರು ಗ್ರಾಮದ ಸುರೇಶ ಲಮಾಣಿ ಎಂಬುವವರಿಂದ 30 ಸಾವಿರ ರೂಪಾಯಿ ಸಾಲ ಪಡೆದಿದ್ದರು.

ಮಾರ್ಚ್ 28ರಂದು ಹಣ ವಾಪಸ್ ಕೇಳಲು ಬಂದ ಸುರೇಶ ಮತ್ತು ಆತನ ಕುಟುಂಬಸ್ಥರು ಗಲಾಟೆ ಆರಂಭಿಸಿದ್ದಾರೆ. ‘ಮಗಳ ಸೀಮಂತ ಮುಗಿದ ಮೇಲೆ ಹಣ ಕೊಡುತ್ತೇವೆ, ಸ್ವಲ್ಪ ಸಮಯ ಕೊಡಿ’ ಎಂದು ಹಾಲವ್ವ ಮನವಿ ಮಾಡಿದರೂ ಕೇಳದ ಆರೋಪಿಗಳು ಹಲ್ಲೆಗೆ ಮುಂದಾಗಿದ್ದಾರೆ.

ಗರ್ಭಿಣಿ ಪವಿತ್ರ ಮೇಲೆ ಹೊಟ್ಟೆಗೆ ಒದ್ದು ಹಲ್ಲೆ

ತಾಯಿ ಹಾಲವ್ವ ಮೇಲೆ ಹಲ್ಲೆ ನಡೆಯುತ್ತಿರುವುದನ್ನು ಕಂಡು ಜಗಳ ಬಿಡಿಸಲು ಬಂದ ಆರು ತಿಂಗಳ ಗರ್ಭಿಣಿ ಮಗಳು ಪವಿತ್ರ ಲಮಾಣಿ ಅವರ ಹೊಟ್ಟೆಗೆ ಆರೋಪಿಗಳು ಬಲವಾಗಿ ಒದ್ದಿದ್ದಾರೆ. ಹಲ್ಲೆಯಿಂದ ಗಂಭೀರವಾಗಿ ಅಸ್ವಸ್ಥಗೊಂಡ ಪವಿತ್ರ ಅವರನ್ನು ತಕ್ಷಣ ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತು. ಚಿಕಿತ್ಸೆ ಫಲಕಾರಿಯಾಗದೆ ಅವಧಿಪೂರ್ವ ಹೆರಿಗೆಯಾಗಿದ್ದು, ಹೊಟ್ಟೆಯಲ್ಲಿದ್ದ ಅವಳಿ ಕಂದಮ್ಮಗಳು ಪೆಟ್ಟು ಬಿದ್ದು ಸಾವನ್ನಪ್ಪಿವೆ.

ನಾಲ್ವರ ವಿರುದ್ಧ ದೂರು

ಈ ಘಟನೆಗೆ ಸಂಬಂಧಿಸಿದಂತೆ ಸುರೇಶ ಲಮಾಣಿ, ಪರಶುರಾಮ ಲಮಾಣಿ, ಮಹೇಶ ಲಮಾಣಿ ಮತ್ತು ಸಕ್ಕುಬಾಯಿ ಲಮಾಣಿ ಎಂಬ ನಾಲ್ವರ ವಿರುದ್ಧ ಸವಣೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ‘ನನ್ನ ಮಗಳ ಸೀಮಂತ ಮಾಡಬೇಕಾದ ಮನೆಯಲ್ಲಿ ಈಗ ಶವದ ಸೂತಕ ಆವರಿಸಿದೆ, ಆರೋಪಿಗಳನ್ನು ಬಂಧಿಸಿ ನಮಗೆ ನ್ಯಾಯ ಕೊಡಿಸಿ’ ಎಂದು ತಾಯಿ ಹಾಲವ್ವ ಕಣ್ಣೀರು ಹಾಕುತ್ತಾ ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಕಿವಿ ಕೇಳಲ್ಲ, ಮಾತೂ ಬರಲ್ಲ! ಆದ್ರೂ ಸ್ನೇಹಿತನ ಹೆಂಡತಿ ಮೇಲೆ ಕಣ್ಣು ಹಾಕಿದ ವ್ಯಕ್ತಿ ಮಾಡಿದ್ದೇನು ಗೊತ್ತಾ?

ವರದಿ: ಅಣ್ಣಪ್ಪ ಬಾರ್ಕಿ, ಟಿವಿ9 ಹಾವೇರಿ

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಟೀಂ ಇಂಡಿಯಾ ಮಾಜಿ ನಾಯಕನಿಗೆ ಗೆಲುವನ್ನು ಅರ್ಪಿಸಿದ LSG ಫಿನಿಶರ್ ಮುಕುಲ್ ಚೌಧರಿ

ಕೋಲ್ಕತ್ತಾ ನೈಟ್ ರೈಡರ್ಸ್ (KKR) ಹಾಗೂ ಲಖನೌ ಸೂಪರ್ ಜಯಂಟ್ಸ್ ನಡುವಿನ ಪಂದ್ಯದಲ್ಲಿ ಕೋಲ್ಕತ್ತ ಕೊನೆಯ ಕ್ಷಣದಲ್ಲಿ ಸೋತಿದೆ. ಎಲ್​​ಎಸ್​​ಜಿ ಪರ ಮುಕುಲ್ ಚೌಧರಿ ಅವರು 27 ಬಾಲ್​​ಗಳಿಗೆ 54 ರನ್ ಪೇರಿಸಿ, ತಂಡವನ್ನು ಗೆಲುವಿನ ದಡ ಸೇರಿಸಿದರು. ಅವರ ಅದ್ಭುತ ಆಟಕ್ಕೆ ಎಲ್ಲರೂ ತಲೆ ಬಾಗಿದ್ದಾರೆ. ಅವರು ತಮ್ಮ ಗೆಲುವನ್ನು ವಿಶೇಷ ವ್ಯಕ್ತಿಗೆ ಅರ್ಪಿಸಿದ್ದಾರೆ. ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್​ ಅಲ್ಲಿ ಈ ಬಗ್ಗೆ ಮಾತನಾಡಿದ್ದಾರೆ.

182 ರನ್​​ಗಳ ಬೃಹತ್ ಮೊತ್ತವನ್ನು ಎಲ್​​ಎಸ್​ಜಿ ಬೆನ್ನು ಹತ್ತಿತು. ಉತ್ತಮ ಆರಂಭ ಕಂಡರೂ ನಂತರ ಮುಗ್ಗರಿಸಿತು. ಎಲ್​​ಎಸ್​​ಜಿ 16 ಓವರ್​​ಗೆ 128 ರನ್​​ಗಳಿಗೆ ಏಳು ವಿಕೆಟ್ ಕಳೆದುಕೊಂಡು ಸಂಕಷ್ಟ ಅನುಭವಿಸಿತು. ಪಂದ್ಯ ಕೈ ತಪ್ಪಿತು ಎನ್ನುವಾಗ ಜಾಗರೂಕ ಆಟ ಆಡಲು ಆರಂಭಿಸಿದ್ದು ಮುಕುಲ್. 18ನೇ ಓವರ್​​ನಲ್ಲಿ 13 ರನ್​​, 19ನೇ ಓವರ್​​ನಲ್ಲಿ 16 ರನ್ ಬಾರಿಸಿದರು. ಕೊನೆಯ ಓವರ್​​ನಲ್ಲಿ ಗೆಲುವಿಗೆ ಬೇಕಾಗಿದ್ದು 14 ರನ್​​ಗಳು.

ಆವೇಶ್ ಮೊದಲು ಬಾಲ್ ಸಿಂಗಲ್ ತೆಗೆದರು. ನಂತರ ಬ್ಯಾಟಿಂಗ್​​ಗೆ ಇಳಿದ ಮುಕುಲ್ ಒಂದು ಸಿಕ್ಸ್ ಬಾರಿಸಿದರು. ನಂತರ ಎರಡು ಬಾಲ್ ಡಾಟ್ ಆಯಿತು. ಐದನೇ ಬಾಲ್​​ಗೆ ಆರು ರನ್​​ಗಳು ಬಂದವು. ಕೊನೆಯ ಬಾಲ್ ಸಿಂಗಲ್ ತೆಗೆಯುವ ಮೂಲಕ ಎಲ್​​ಎಸ್​ಜಿ ಗೆಲುವಿನ ದಡ ಸೇರಿತು.

‘ಎಂಎಸ್ ಧೋನಿ ಪಂದ್ಯಗಳನ್ನು ಹೇಗೆ ಫಿನಿಶ್ ಮಾಡುತ್ತಾರೆ ಎಂಬುದನ್ನು ನಾನು ನೋಡುತ್ತಿದ್ದೆ. ನಾನು ಅದೇ ರೀತಿಯಲ್ಲಿ ಬ್ಯಾಟ್ ಮಾಡಿದೆ. ನನ್ನ ವೃತ್ತಿಜೀವನದ ಆರಂಭದಲ್ಲಿ ಅವರು ನನಗೆ ಸ್ಫೂರ್ತಿ ನೀಡಿದರು. ನಾನು ಗೆಲ್ಲಿಸಿಕೊಟ್ಟೆ, ಮತ್ತು ಆ ಗೆಲುವನ್ನು ಅವರಿಗೆ ಅರ್ಪಿಸುತ್ತೇನೆ’ ಎಂದರು.

‘ನನ್ನ ದೇಹ ಹೆಚ್ಚು ಶಕ್ತಿಯನ್ನು ಹೊಂದಿದೆ. ಆದರೆ ನಾನು ದಿನವೂ ಅಭ್ಯಾಸ ಮಾಡುತ್ತೇನೆ. ಪ್ರತಿದಿನ 100ರಿಂದ 150 ಸಿಕ್ಸರ್‌ಗಳನ್ನು ಹೊಡೆಯುವುದನ್ನು ಅಭ್ಯಾಸ ಮಾಡಿದರೆ ಆ ಕಲೆ ಬೆಳೆಯುತ್ತದೆ. ಕಳೆದ 5-6 ತಿಂಗಳುಗಳಿಂದ ನಾನು ಅದರ ಮೇಲೆ ಸಾಕಷ್ಟು ಕೆಲಸ ಮಾಡಿದ್ದೇನೆ’ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಯುವ ಬ್ಯಾಟರ್ ಮುಕುಲ್ ಚೌಧರಿ ಎದುರು ಸೋತ ಕೆಕೆಆರ್

ಮುಕುಲ್ ಅವರನ್ನು ತಂಡಕ್ಕೆ ಹೇಗೆ ಆಯ್ಕೆ ಮಾಡಲಾಯಿತು ಎಂಬ ವಿಷಯವನ್ನು ತಂಡದ ಕೋಚ್ ಜಸ್ಟಿನ್ ಲ್ಯಾಂಗರ್ ರಿವೀಲ್ ಮಾಡಿದ್ದಾರೆ. ‘ಮುಕುಲ್ ಅವರನ್ನು ಕೆಲವು ತಿಂಗಳ ಹಿಂದೆ ತರಬೇತಿ ಶಿಬಿರದಲ್ಲಿ ನೋಡಿದ್ದೆವು. ಈ ದೇಶದಲ್ಲಿ ತುಂಬಾ ಪ್ರತಿಭೆಗಳಿವೆ. ನಮ್ಮ ಡೇಟಾ ವಿಶ್ಲೇಷಕ ಶ್ರೀನಿವಾಸ್ ಅವರೇ ಮುಕುಲ್​​ನ ಆಯ್ಕೆ ಮಾಡಿದ್ದು’ ಎಂದು ಜಸ್ಟಿನ್ ವಿವರಿಸಿದರು. ಎಲ್​​ಎಸ್​​ಜಿ ಮುಕುಲ್​​ಗೆ 2.60 ಕೋಟಿ ರೂಪಾಯಿ ನೀಡಿ ಖರೀದಿ ಮಾಡಿದೆ. ಈ ಹಣ ಒಂದೇ ಪಂದ್ಯದಲ್ಲಿ ವಸೂಲಿ ಆಗಿದೆ ಎಂದು ಅನೇಕರು ಮಾತನಾಡಿಕೊಂಡಿದ್ದಾರೆ.

ಇನ್ನಷ್ಟು ಕ್ರಿಕೆಟ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಮದುವೆಯಾದ 14 ತಿಂಗಳಲ್ಲೇ ಸ್ಮರಣಶಕ್ತಿ ಕಳೆದುಕೊಂಡ ರಾಷ್ಟ್ರೀಯ ವಾಲಿಬಾಲ್ ಪಟು

ವಾರಾಣಸಿ, ಏಪ್ರಿಲ್ 10: ವಾಲಿಬಾಲ್(Volleyball) ಕೋರ್ಟ್​​ನಲ್ಲಿ ಎದುರಾಳಿಗಳನ್ನು ಮಣಿಸುತ್ತಿದ್ದ ಪ್ರಿಯಾ ಸರೋಜ್, ಇಂದು ಹಾಸಿಗೆಯ ಮೇಲೆ ಪ್ರಜ್ಞೆಯಿಲ್ಲದೆ ಮಲಗಿದ್ದಾರೆ. ಅವರ ಸ್ಮರಣಶಕ್ತಿ ಸಂಪೂರ್ಣವಾಗಿ ಹೋಗಿದೆ, ಮಾತು ಮರೆಯಾಗಿದೆ. ಅವರ ಈ ದುಸ್ಥಿತಿಗೆ ಗಂಡನೇ ಕಾರಣ ಎಂಬ ಆಘಾತಕಾರಿ ಸತ್ಯವನ್ನು ಅವರ ತಾಯಿ ನಿಶಾ ಈಗ ಕಣ್ಣೀರಿನೊಂದಿಗೆ ಬಿಚ್ಚಿಟ್ಟಿದ್ದಾರೆ.

ಫೆಬ್ರವರಿ 2024 ರಲ್ಲಿ ವಾರಾಣಸಿಯ ಪರಮಾನಂದಪುರದ ಪ್ರಿಯಾ ಸರೋಜ್ ಅವರನ್ನು ಬಿಎಲ್‌ಡಬ್ಲ್ಯೂ ನಿವಾಸಿ, ಜೆಇ (Junior Engineer) ಆಗಿ ಕೆಲಸ ಮಾಡುತ್ತಿದ್ದ ಅಮಿತ್ ವರ್ಮಾ ಅವರೊಂದಿಗೆ ಅದ್ಧೂರಿಯಾಗಿ ಮದುವೆ ಮಾಡಿಕೊಡಲಾಗಿತ್ತು. ಮಗಳ ಜೀವನ ಸುಖವಾಗಿರಲಿ ಎಂದು ಪೋಷಕರು ಹಾರೈಸಿದ್ದರು. ಮದುವೆಯ ನಂತರ ಅಮಿತ್‌ಗೆ ಗೋರಖ್‌ಪುರಕ್ಕೆ ವರ್ಗಾವಣೆಯಾದಾಗ ಪ್ರಿಯಾ ಕೂಡ ಪತಿಯೊಂದಿಗೆ ತೆರಳಿದ್ದರು.

ಆರಂಭದಲ್ಲಿ ಎಲ್ಲವೂ ಚೆನ್ನಾಗಿಯೇ ಇತ್ತು. ಆದರೆ ಕ್ರಮೇಣ ಅಮಿತ್ ತನ್ನ ಅಸಲಿ ರೂಪ ತೋರಿಸಲು ಆರಂಭಿಸಿದ್ದ. ಪ್ರಿಯಾ ಹೆಸರಿನಲ್ಲಿದ್ದ ಜಮೀನನ್ನು ತನ್ನ ಹೆಸರಿಗೆ ವರ್ಗಾಯಿಸುವಂತೆ ಮತ್ತು ಹೆಚ್ಚಿನ ವರದಕ್ಷಿಣೆ ತರುವಂತೆ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಲು ಶುರುಮಾಡಿದ್ದ. ತನ್ನ ನೋವನ್ನು ಯಾರಿಗೂ ಹೇಳಿಕೊಳ್ಳದೆ ಪ್ರಿಯಾ ಸಹಿಸಿಕೊಂಡಿದ್ದಳು. ಆದರೆ ಅಳಿಯನ ಕಿರುಕುಳ ಮಿತಿಮೀರಿತ್ತು, ಎಂದು ತಾಯಿ ನಿಶಾ ಆರೋಪಿಸಿದ್ದಾರೆ.

ಮತ್ತಷ್ಟು ಓದಿ:

“ಅಣ್ಣನ ಮದುವೆ ಸಂಭ್ರಮದ ನಡುವೆ ಘೋರ ದುರಂತ!”: ಲಿಫ್ಟ್ ಕೇಬಲ್ ತುಂಡಾಗಿ ತಮ್ಮನಿಗೆ ಗಂಭೀರ ಗಾಯ, ಸಿಸಿಟಿವಿಯಲ್ಲಿ ದೃಶ್ಯ ಸೆರೆ

 

ಮದುವೆಯಾದ 14 ತಿಂಗಳಿಗೆ ಪ್ರಿಯಾ ಅವರ ತಾಯಿಗೆ ಒಂದು ಕರೆ ಬಂತು. ನಿಮ್ಮ ಮಗಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಹೇಳಿದ್ದರು. ಗಾಬರಿಯಿಂದ ಗೋರಖ್‌ಪುರಕ್ಕೆ ಓಡಿಹೋದ ತಾಯಿಗೆ ಕಂಡದ್ದು ಮತ್ತೊಂದು ಆಘಾತ. ಪ್ರಿಯಾ ಜೀವಂತವಾಗಿದ್ದಳು, ಆದರೆ ಕೋಮಾದಲ್ಲಿದ್ದಳು.

ಅಲ್ಲಿಂದ ಚಿಕಿತ್ಸೆಗಾಗಿ ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡಿದರೂ ಫಲ ಸಿಗಲಿಲ್ಲ. ಚಿಕಿತ್ಸೆಯ ಸಮಯದಲ್ಲಿ ಪ್ರಿಯಾ ಕ್ರಮೇಣ ತನ್ನ ಸ್ಮರಣಶಕ್ತಿ ಮತ್ತು ಮಾತನಾಡುವ ಶಕ್ತಿಯನ್ನು ಕಳೆದುಕೊಂಡಳು. ಒಂದು ಕಾಲದಲ್ಲಿ ಕ್ರೀಡಾಂಗಣದಲ್ಲಿ ಚೈತನ್ಯದ ಬುಗ್ಗೆಯಾಗಿದ್ದ ಈಕೆ ಈಗ ತನ್ನ ಗುರುತನ್ನೇ ಮರೆತು ಹೋಗಿದ್ದಾಳೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

Source link

ನೀನು ಬಂಗಾರದ ಮನುಷ್ಯ ಕಣಯ್ಯ!: ಅಭಿಮಾನಿಯ ಫೋನ್​​​ ನೋಡಿ ಕರಗಿದ ಸಂಜು ಸ್ಯಾಮ್ಸನ್ ಮನಸ್ಸು

ಕೇರಳ, ಏ.10: ಸಂಜು ಸ್ಯಾಮ್ಸನ್ (Sanju Samson) ಕ್ರೀಡಾ ಸಾಮ್ರಾಜ್ಯದ ಯುವ ಆಟಗಾರ, ಸೈಲೆಂಟ್​​ ಆಗಿರುವ ಇವರು, ಒಳ್ಳೆಯ ಮನಸ್ಸಿನ ವ್ಯಕ್ತಿ, ಒಂದು ದಿನವೂ ತಾಳ್ಮೆ ಕಳೆದುಕೊಂಡಿಲ್ಲ. ಎಲ್ಲವನ್ನು ಕೂಲ್​ ಆಗಿ ನಿಭಾಯಿಸಿದ್ದಾರೆ, ಇದೀಗ ಇವರ ಈ ಗುಣಕ್ಕೆ ಒಂದು ಒಳ್ಳೆಯ ಉದಾಹರಣೆ ಇಲ್ಲಿದೆ ನೋಡಿದೆ. ಐಪಿಎಲ್ 2026ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (CSK) ಪರ ಆಡುತ್ತಿರುವ ಸಂಜು ಸ್ಯಾಮ್ಸನ್, ಸಾಲು ಸಾಲು ಸೋಲಿನ ನಂತರವೂ ಅಭಿಮಾನಿಗಳ ಮನಸ್ಸಿನಲ್ಲಿ ಉಳಿದುಕೊಂಡಿದ್ದಾರೆ. ಇದೀಗ ತಮ್ಮ ಗುಣದಿಂದ ಅಭಿಮಾನಗಳಿಗೆ ಮತ್ತಷ್ಟು ಇಷ್ಟವಾಗಿದ್ದಾರೆ. ಇವರು ಇತ್ತೀಚಿಗೆ ಕೇರಳದಲ್ಲಿ ಪ್ರಯಾಣಿಸುತ್ತಿದ್ದಾಗ ತಮ್ಮ ಅಭಿಮಾನಿಯೊಬ್ಬರ ಸಂಕಷ್ಟಕ್ಕೆ ಸ್ಪಂದಿಸಿ ಸುದ್ದಿಯಾಗಿದ್ದಾರೆ.

ಸಂಜು ಸ್ಯಾಮ್ಸನ್ ಅವರು ಕೋಝಿಕ್ಕೋಡ್‌ನಿಂದ ಕೊಯಮತ್ತೂರಿಗೆ ಪ್ರಯಾಣಿಸುತ್ತಿದ್ದರು. ಮುಂಡೂರು-ತೂತಾ ರಸ್ತೆಯ ಪುಂಚಪ್ಪಾಡಂ ಬಳಿ ಫೋನ್ ಕರೆ ಮಾಡಲು ತಮ್ಮ ಕಾರನ್ನು ನಿಲ್ಲಿಸಿದ್ದರು. ಈ ವೇಳೆ ಕೇಬಲ್ ಟೆಕ್ನಿಷಿಯನ್ ಶಬರೀಶ್ ಎಂಬುವವರು ತಮ್ಮ ಸ್ನೇಹಿತನೊಂದಿಗೆ ಕ್ರಿಕೆಟ್ ಆಡಲು ಹೋಗುತ್ತಿದ್ದರು. ಕಾರಿನಲ್ಲಿದ್ದ ವ್ಯಕ್ತಿ ಸಂಜು ಸ್ಯಾಮ್ಸನ್ ಎಂದು ತಿಳಿದ ಅಭಿಮಾನಿಗಳು ಅವರ ಬಳಿ ತೆರಳಿ ಮಾತನಾಡಿಸಿದರು. ಸಂಜು ಅತ್ಯಂತ ಪ್ರೀತಿಯಿಂದ ಅವರ ಕ್ಷೇಮ ವಿಚಾರಿಸಿ, ಸೆಲ್ಫಿ ನೀಡಲು ಒಪ್ಪಿದರು. ಶಬರೀಶ್ ಸೆಲ್ಫಿ ತೆಗೆಯುವಾಗ ಅವರ ಫೋನ್‌ನ ಡಿಸ್‌ಪ್ಲೇ ಸಂಪೂರ್ಣವಾಗಿ ಒಡೆದಿರುವುದನ್ನು ಸಂಜು ಗಮನಿಸಿದ್ದಾರೆ.

ಇಲ್ಲಿದೆ ನೋಡಿ ಎಕ್ಸ್​​ ಪೋಸ್ಟ್​:

ಕಾರಿನಲ್ಲಿದ್ದ ವ್ಯಕ್ತಿ ಸಂಜು ಸ್ಯಾಮ್ಸನ್ ಎಂದು ತಿಳಿದ ಅಭಿಮಾನಿಗಳು ಅವರ ಬಳಿ ತೆರಳಿ ಮಾತನಾಡಿಸಿದರು. ಸಂಜು ಅತ್ಯಂತ ಪ್ರೀತಿಯಿಂದ ಅವರ ಕ್ಷೇಮ ವಿಚಾರಿಸಿ, ಸೆಲ್ಫಿ ನೀಡಲು ಒಪ್ಪಿದರು. ಶಬರೀಶ್ ಸೆಲ್ಫಿ ತೆಗೆಯುವಾಗ ಅವರ ಫೋನ್‌ನ ಡಿಸ್‌ಪ್ಲೇ ಸಂಪೂರ್ಣವಾಗಿ ಒಡೆದಿರುವುದನ್ನು ಸಂಜು ಗಮನಿಸಿದರು. ಅಭಿಮಾನಿಯ ಫೋನ್ ಸ್ಥಿತಿ ನೋಡಿ ಮರುಗಿದ ಸಂಜು, ತಕ್ಷಣ ತಮ್ಮ ಕಾರಿನ ಹಿಂಭಾಗದಲ್ಲಿದ್ದ ಸುಮಾರು 40,000 ರೂ. ಮೌಲ್ಯದ ಹೊಸ ಸ್ಮಾರ್ಟ್‌ಫೋನ್ ಅನ್ನು ಶಬರೀಶ್‌ಗೆ ಉಡುಗೊರೆಯಾಗಿ ನೀಡಿದರು. ಈ ಅನಿರೀಕ್ಷಿತ ಉಡುಗೊರೆಯಿಂದ ಅಭಿಮಾನಿಗಳು ಫಿದಾ ಆಗಿದ್ದಾರೆ.

ಇದನ್ನೂ ಓದಿ: RCB v/s RR: ತವರಿನಿಂದ ಹೊರಗೆ ಆರ್​ಸಿಬಿಗೆ ಮೊದಲ ಪಂದ್ಯ, ಹೇಗಿದೆ ಉಭಯ ತಂಡಗಳ ಬಲಾಬಲ? ಇಲ್ಲಿದೆ ಫುಲ್ ಡಿಟೇಲ್ಸ್

ಟಿ20 ವಿಶ್ವಕಪ್ 2026ರ ಫೈನಲ್‌ನಲ್ಲಿ ಭಾರತಕ್ಕೆ ಗೆಲುವು ತಂದುಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಸಂಜು, ಪ್ರಸ್ತುತ ಐಪಿಎಲ್‌ನಲ್ಲಿ ಸಿಎಸ್‌ಕೆ ಪರ ಸತತ ಮೂರು ಪಂದ್ಯಗಳಲ್ಲಿ (6, 7, 9 ರನ್) ವೈಫಲ್ಯ ಅನುಭವಿಸಿದ್ದಾರೆ. ಸಿಎಸ್‌ಕೆ ತಂಡ ಕೂಡ ಸತತ ಮೂರು ಸೋಲುಗಳಿಂದ ಕಂಗೆಟ್ಟಿದ್ದು, ಏಪ್ರಿಲ್ 11ರ ಶನಿವಾರದಂದು ಚೆನ್ನೈನ ಚೆಪಾಕ್ ಸ್ಟೇಡಿಯಂನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಕಣಕ್ಕಿಳಿಯಲಿದೆ.

ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Kaalashtami: ಸಾಲ ಮತ್ತು ಭಯದಿಂದ ಮುಕ್ತಿ ಬೇಕೆ? ಇಂದು ಕಾಲಾಷ್ಟಮಿ ದಿನ ಮರೆಯದೇ ಹೀಗೆ ಮಾಡಿ

ಕಾಲಾಷ್ಟಮಿಯ ಮಹತ್ವ ಮತ್ತು ಆಚರಣೆಯ ಕುರಿತು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ನೀಡಿರುವ ಮಾಹಿತಿ ಇಲ್ಲಿದೆ. ಹಬ್ಬ ಹರಿದಿನಗಳು, ವಿಶೇಷ ಕಾರ್ಯಕ್ರಮಗಳು ಮತ್ತು ಶುಭ ಕಾರ್ಯಗಳ ನಡುವೆ, ಕಾಲಾಷ್ಟಮಿಯು ಮಹತ್ತರವಾದ ಪ್ರಭಾವ, ಪರಿವರ್ತನೆ, ಅದೃಷ್ಟ ಮತ್ತು ಸಂಕಟ ನಿವಾರಣೆಯನ್ನು ತರುವ ವಿಶೇಷ ಪರ್ವಕಾಲವಾಗಿದೆ. ಇದು ಭಕ್ತರಲ್ಲಿ ನಂಬಿಕೆಯನ್ನು ಮೂಡಿಸುತ್ತದೆ.

ಪ್ರತಿ ಚಂದ್ರಮಾನ ಮಾಸದ ಕೃಷ್ಣ ಪಕ್ಷದ ಎಂಟನೇ ದಿನವನ್ನು (ಅಷ್ಟಮಿ ತಿಥಿ) ಕಾಲಾಷ್ಟಮಿ ಎಂದು ಆಚರಿಸಲಾಗುತ್ತದೆ. ಈ ದಿನ ಶಿವನ ಉಗ್ರ ರೂಪವಾದ ಕಾಲಭೈರವನನ್ನು ಆರಾಧಿಸಲಾಗುತ್ತದೆ, ಇವನು ಬೇಗನೆ ಫಲಿತಾಂಶಗಳನ್ನು ನೀಡುವ ಶಕ್ತಿ ಹೊಂದಿದ್ದಾನೆ. ಕಾಲಭೈರವನು 64 ರೂಪಗಳನ್ನು ಹೊಂದಿದ್ದು, ಕಾಲದ ಅಧಿಪತಿಯಾಗಿದ್ದಾನೆ. ಕಾಲಾಷ್ಟಮಿಯಂದು ಆಚರಣೆ ಮಾಡುವ ವಿಧಿ ವಿಧಾನಗಳು ಮತ್ತು ಅದರ ಮಹತ್ವವನ್ನು ತಿಳಿಯುವುದು ಅವಶ್ಯಕ. ಉದಾಹರಣೆಗೆ, ಏಪ್ರಿಲ್ 2026ರಲ್ಲಿ, ಅಷ್ಟಮಿ ತಿಥಿಯು ಒಂಬತ್ತನೇ ತಾರೀಕು ರಾತ್ರಿ 9 ಗಂಟೆ 13 ನಿಮಿಷಕ್ಕೆ ಪ್ರಾರಂಭವಾಗಿ, ಹತ್ತನೇ ತಾರೀಕು ರಾತ್ರಿ 11 ಗಂಟೆ 15 ನಿಮಿಷದವರೆಗೆ ಇರುತ್ತದೆ.

ಕಾಲಾಷ್ಟಮಿ ದಿನವು ಶುಭ ಫಲಗಳಿಗಾಗಿ ಅತ್ಯಂತ ಪ್ರಮುಖವಾಗಿದೆ. ಮನೆ ಕಟ್ಟುವ ಆಸೆ, ವಿವಾಹ, ಮಕ್ಕಳ ಪ್ರಾಪ್ತಿ, ಉತ್ತಮ ಆರೋಗ್ಯ, ಶತ್ರುಗಳ ಸಂಹಾರ, ಮತ್ತು ರಾಜಕೀಯ ಸ್ಥಾನಮಾನದಂತಹ ಎಲ್ಲ ಆಸೆ ಆಕಾಂಕ್ಷೆಗಳನ್ನು ಈಡೇರಿಸಲು ಈ ದಿನದಂದು ಪೂಜೆ ಸಲ್ಲಿಸಲಾಗುತ್ತದೆ. ಈ ದಿನದಂದು ಶಿವ ಚಾಲೀಸಾ, ಶಿವ ಅಷ್ಟೋತ್ತರ, ಭೈರವ ಚಾಲೀಸಾ, ಮತ್ತು ಭೈರವ ಅಷ್ಟೋತ್ತರ ಮಂತ್ರಗಳನ್ನು ಪಠಿಸುವುದು ಶ್ರೇಷ್ಠ. ಶಿವನು ಬ್ರಹ್ಮನ ಅಹಂಕಾರವನ್ನು ಕಡಿಮೆ ಮಾಡಲು ಮತ್ತು ಜ್ಞಾನೋದಯ ಮಾಡಿಸಲು ಕಾಲಭೈರವನ ರೂಪವನ್ನು ತಾಳಿದನೆಂಬ ಪ್ರತೀತಿ ಇದೆ. ಕಾಲ ಎಂದರೆ ಸಮಯ ಮತ್ತು ಭೈರವ ಎಂದರೆ ಭಯವನ್ನು ಹೋಗಲಾಡಿಸುವವನು. ಹೀಗಾಗಿ, ಕಾಲಭೈರವನು ಸಮಯದಲ್ಲಿನ ಭಯವನ್ನು ನಿವಾರಿಸುವವನಾಗಿದ್ದಾನೆ.

ಕಾಲಭೈರವ ಆರಾಧನೆಯು ಭಯ, ಆತಂಕ, ಸಾಲಬಾದೆ, ರಾಜಕೀಯ ಪ್ರಗತಿ, ಸ್ಥಾನಮಾನ, ಮತ್ತು ನ್ಯಾಯಾಲಯದ ಪ್ರಕರಣಗಳಿಂದ ಉಂಟಾಗುವ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ. ಭೈರವನನ್ನು ಕ್ಷೇತ್ರ ಪಾಲಕ ಅಂದರೆ ರಕ್ಷಕ ಎಂದು ಕರೆಯಲಾಗುತ್ತದೆ. ಜ್ಯೋತಿಷ್ಯದ ಪ್ರಕಾರ, ಶನಿ ದೋಷ, ರಾಹು ದೋಷ, ಅರ್ಧಾಷ್ಟಮ ಶನಿ, ಅಷ್ಟಮ ಶನಿ, ಮತ್ತು ಪಂಚಮ ಶನಿ ದೋಷಗಳಿಂದ ಬಳಲುತ್ತಿರುವವರು ಈ ದಿನ ಕಾಲಭೈರವನ ಪೂಜೆ ಮಾಡುವುದರಿಂದ ವಿಶೇಷ ಫಲಗಳನ್ನು ಪಡೆಯುತ್ತಾರೆ. ಭೈರವನು ಶಿಸ್ತಿನ ಸಿಪಾಯಿಯಂತೆ, ತನ್ನ ಭಕ್ತರನ್ನು ಸಂಕಷ್ಟಗಳಿಂದ ಕಾಪಾಡುತ್ತಾನೆ.

ಇದನ್ನೂ ಓದಿ: ಮುಯ್ಯಿ ರೂಪದಲ್ಲಿ ಕೊಡುವ ಹಣಕ್ಕೆ 1ರೂ. ಸೇರಿಸಿ ಕೊಡಬೇಕು ಯಾಕೆ ಗೊತ್ತಾ?

ಕಾಲಾಷ್ಟಮಿ ಆಚರಣೆಯ ವಿಧಿ ವಿಧಾನಗಳು: ಬೆಳಗಿನ ಜಾವ ಸ್ನಾನ ಮಾಡಿ, ಶುದ್ಧರಾಗಬೇಕು. ಭೈರವೇಶ್ವರ ದೇವಸ್ಥಾನಕ್ಕೆ ಭೇಟಿ ನೀಡುವುದು ಅಥವಾ ಮನೆಯಲ್ಲಿಯೇ ದೇವರನ್ನು ಸ್ಥಾಪಿಸಿ ಮಾನಸಿಕವಾಗಿ ಜಪ ಮಾಡುವುದು ಉತ್ತಮ. ಸಂಧ್ಯಾಕಾಲದಲ್ಲಿ ಭೈರವೇಶ್ವರ ದೇವಸ್ಥಾನದಲ್ಲಿ ಸಾಸಿವೆ ಎಣ್ಣೆ ದೀಪವನ್ನು ಹಚ್ಚುವುದು ಅತ್ಯಂತ ಶುಭಕರ. ಇದಲ್ಲದೆ, ಕಾಲಭೈರವನ ವಾಹನವಾದ ನಾಯಿಗಳಿಗೆ ಬಿಸ್ಕತ್ತು, ರೊಟ್ಟಿ ಅಥವಾ ಚಪಾತಿಯನ್ನು ನೀಡುವುದು ಬಹಳ ಪುಣ್ಯ. ಇಡೀ ದಿನ “ಓಂ ಕಾಲಭೈರವಾಯ ನಮಃ” ಎಂಬ ಮಂತ್ರವನ್ನು ಪಠಿಸುವುದರಿಂದ ಸಕಲ ಸಂಕಟಗಳು ದೂರವಾಗಿ ಶುಭ ಫಲಗಳು ಪ್ರಾಪ್ತವಾಗುತ್ತವೆ ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link