ಬೆಂಗಳೂರು, ಏಪ್ರಿಲ್ 10: ಪ್ರವಾಸಕ್ಕೆಂದು ಪೋಷಕರ ಜೊತೆ ಜಿಲ್ಲೆಯ ಚಂದ್ರದ್ರೋಣ ಪರ್ವತ ಸರಣಿಗೆ ಬಂದಿದ್ದ ಕೇರಳದ ಬಾಲಕಿ ನಾಪತ್ತೆ ಪ್ರಕರಣ ಇನ್ನೂ ಇತ್ಯರ್ಥವಾಗಿಲ್ಲ. ಈ ಬಗ್ಗೆ ಪ್ರತಿಕ್ರಿಯಿಸಿರುವ ಗೃಹ ಸಚಿವ ಪರಮೇಶ್ವರ್, ಚಿಕ್ಕಮಗಳೂರು ಶ್ರೀನಂದ ಬಾಲಕಿ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಾಥಮಿಕ ಮಾಹಿತಿ ಲಭ್ಯವಿದ್ದರೂ, ಬಾಲಕಿಯನ್ನು ಇನ್ನೂ ಪತ್ತೆಹಚ್ಚಲು ಸಾಧ್ಯವಾಗಿಲ್ಲ. ಈ ಪ್ರಕರಣದಲ್ಲಿ ಒಂದು ಕಡೆ ಆಕೆಯ ಅಪಹರಣದ ಶಂಕೆಯಿದ್ದರೆ, ಮತ್ತೊಂದು ಕಡೆ ಬಾಲಕಿ ಬೇರೆಯವರ ಜೊತೆ ಹೋಗಿರುವ ಸಾಧ್ಯತೆಯೂ ಇದೆ. ಅಂತಿಮ ಸತ್ಯವು ಬಾಲಕಿ ಪತ್ತೆಯಾದ ನಂತರ ತಿಳಿಯುತ್ತದೆ ಎಂದು ಸಚಿವ ತಿಳಿಸಿದ್ದಾರೆ.
ಚಿತ್ರದುರ್ಗ, ಏಪ್ರಿಲ್ 10: ಗುರು-ಶಿಷ್ಯ ಸಂಬಂಧಕ್ಕೇ ಕಳಂಕ ತರುವಂತಹ ಘಟನೆಯೊಂದು ಚಿತ್ರದುರ್ಗ (Chitradurga) ಜಿಲ್ಲೆಯಲ್ಲಿ ಜರುಗಿದೆ. 16 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಗಣಿತ ಶಿಕ್ಷಕನೊಬ್ಬ ಶಾಲೆಯ ತರಗತಿ ಕೊಠಡಿಯಲ್ಲೇ ಅತ್ಯಾಚಾರ ಎಸಗಿದ್ದು, ಬಾಲಕಿ ಗರ್ಭಿಣಿಯಾದ ಬಳಿಕ ಅಕ್ರಮವಾಗಿ ಗರ್ಭಪಾತ ಮಾಡಿಸಿರುವ ಗಂಭೀರ ಆರೋಪ ಕೇಳಿಬಂದಿದೆ. ಸದ್ಯ ಆರೋಪಿ ಶಿಕ್ಷಕ ಹಾಗೂ ಗರ್ಭಪಾತ ಮಾಡಿಸಿದ ವೈದ್ಯೆ ವಿರುದ್ಧ ಚಳ್ಳಕೆರೆ ಪೊಲೀಸ್ ಠಾಣೆಯಲ್ಲಿ ಫೋಕ್ಸೋ ಪ್ರಕರಣ ದಾಖಲಾಗಿದೆ.
ಘಟನೆಯ ವಿವರ
ಚಿತ್ರದುರ್ಗ ಚಳ್ಳಕೆರೆ ತಾಲೂಕಿನ ತಳಕು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಶಿಕ್ಷಕ ಹೆಚ್.ಒ. ರಾಜಣ್ಣ ಎಂಬಾತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದು, ಈಕೃತ್ಯದಿಂದ ಬಾಲಕಿ ಗರ್ಭ ಧರಿಸಿದ್ದಾಳೆ. ವಿಷಯ ತಿಳಿಯುತ್ತಿದ್ದಂತೆಯೇ ರಾಜಣ್ಣ, ಚಳ್ಳಕೆರೆಯ ಲಕ್ಷ್ಮೀ ಶ್ರೀನಿವಾಸ ನರ್ಸಿಂಗ್ ಆಸ್ಪತ್ರೆಯ ವೈದ್ಯೆ ಶಂಕರಲಕ್ಷ್ಮೀ ಅವರ ಸಹಾಯದಿಂದ ಬಾಲಕಿಗೆ ಗರ್ಭಪಾತ ಮಾಡಿಸಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಪೋಕ್ಸೋ ಅಡಿ ದೂರು ದಾಖಲು
ವಿಷಯ ತಿಳಿಯುತ್ತಿದ್ದಂತೆಯೇ ಮಕ್ಕಳ ರಕ್ಷಣಾಧಿಕಾರಿ ರೇಖಾ ಅವರು ಚಳ್ಳಕೆರೆ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಶಿಕ್ಷಕ ರಾಜಣ್ಣ ಮತ್ತು ಗರ್ಭಪಾತ ಮಾಡಿದ ವೈದ್ಯೆ ಶಂಕರಲಕ್ಷ್ಮೀ ವಿರುದ್ಧ ಪೋಕ್ಸೋ (POCSO) ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಸದ್ಯ ಪೊಲೀಸರು ತನಿಖೆ ಕೈಗೊಂಡಿದ್ದು, ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಗೂಗಲ್ ಪೇಯಲ್ಲಿ ನೀಡಿರುವ ‘ಪಾಕೆಟ್ ಮನಿ’ ಆಪ್ಷನ್ ಬಗ್ಗೆ ಭಾರೀ ಚರ್ಚೆಗಳು ಆಗುತ್ತಿದೆ. ಈ ಆಪ್ಷನ್ ಕ್ಲಿಕ್ ಮಾಡಿದ್ರೆ ಹಣ ಎಲ್ಲವೂ ಹೋಗುತ್ತದೆ, ಇದೊಂದು ರೀತಿ ಸ್ಕ್ಯಾಮ್ ಎಂದು ಹೇಳುತ್ತಿದ್ದಾರೆ. ಇದೀಗ ಈ ಬಗ್ಗೆ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿದೆ. ಅಷ್ಟಕ್ಕೂ ಇದರ ಹಿಂದೆ ಇರುವ ನಿಜವಾದ ತಂತ್ರ ಏನು? ಎಂಬ ಬಗ್ಗೆ ತಿಳಿಯಬೇಕಿದೆ. ಅಷ್ಟಕ್ಕೂ ಗೂಗಲ್ ಪೇಯಲ್ಲಿ ಇಂತಹ ಸ್ಕ್ಯಾಮ್ಗಳು ನಡೆಯಲು ಸಾಧ್ಯವೇ? ಇಷ್ಟು ದೊಡ್ಡ ಸಂಸ್ಥೆ ಸೆಕ್ಯುರಿಟಿ ವಿಚಾರದಲ್ಲಿ ಅಪಾಯ ತಂದುಕೊಳ್ಳಲು ಸಾಧ್ಯವೇ ಇಲ್ಲ ಎಂಬುದು ವಾದವಾಗಿದೆ. ಇನ್ನು ಗೂಗಲ್ ಪೇಯಲ್ಲಿ ‘ಪಾಕೆಟ್ ಮನಿ’ ಆಪ್ಷನ್ ನೀಡಿರುವದರಿಂದ ಆಗುವ ಲಾಭಗಳೇನು? ಯಾಕಾಗಿ ಇದನ್ನು ನೀಡಿದ್ದಾರೆ ಎಂಬೆಲ್ಲ ವರದಿ ಇಲ್ಲಿದೆ ನೋಡಿ.
ಡಿಜಿಟಲ್ ಪಾವತಿ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಗೂಗಲ್ ಪೇ, ಕುಟುಂಬದ ಸದಸ್ಯರು ಮತ್ತು ಮಕ್ಕಳಿಗಾಗಿ ‘ಪಾಕೆಟ್ ಮನಿ’ ಎಂಬ ಹೊಸ ಫೀಚರ್ ಅನ್ನು ಬಿಡುಗಡೆ ಮಾಡಿದೆ. ಇದು ಪೋಷಕರು ತಮ್ಮ ಬ್ಯಾಂಕ್ ಖಾತೆಯನ್ನು ಬಳಸಿಕೊಂಡು ಮಕ್ಕಳಿಗೆ ಪಾವತಿ ಮಾಡಲು ಅವಕಾಶ ನೀಡುತ್ತದೆ, ಆದರೆ ಅದರ ಸಂಪೂರ್ಣ ನಿಯಂತ್ರಣ ಪೋಷಕರ ಕೈಯಲ್ಲೇ ಇರುತ್ತದೆ.
ಏನಿದು ‘ಪಾಕೆಟ್ ಮನಿ’ ವೈಶಿಷ್ಟ್ಯ?
ಇದು ಗೂಗಲ್ ಪೇನ ‘UPI Circle’ ಫ್ರೇಮ್‌ವರ್ಕ್ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಈ ಮೂಲಕ ಪೋಷಕರು ತಮ್ಮ ಮಕ್ಕಳಿಗೆ ಅಥವಾ ಅವಲಂಬಿತರಿಗೆ ಡಿಜಿಟಲ್ ಹಣವನ್ನು ಬಳಸಲು ಅನುಮತಿಸಬಹುದು. ಇದಕ್ಕಾಗಿ ದ್ವಿತೀಯ ಬಳಕೆದಾರರಿಗೆ (ಮಕ್ಕಳಿಗೆ) ಪ್ರತ್ಯೇಕ ಬ್ಯಾಂಕ್ ಖಾತೆಯ ಅಗತ್ಯವಿರುವುದಿಲ್ಲ. ಪೋಷಕರು ತಿಂಗಳಿಗೆ ಗರಿಷ್ಠ 15,000 ರೂ. ವರೆಗೆ ಖರ್ಚು ಮಾಡುವ ಮಿತಿಯನ್ನು ನಿಗದಿಪಡಿಸಬಹುದು. ಈ ಮಿತಿಯೊಳಗೆ ಮಕ್ಕಳು ಸ್ವತಂತ್ರವಾಗಿ ಪಾವತಿ ಮಾಡಬಹುದು.
ಈ ಆಯ್ಕೆಯನ್ನು ಆರಿಸಿಕೊಂಡರೆ, ಮಗು ಪ್ರತಿ ಬಾರಿ ಪೇಮೆಂಟ್ ಮಾಡಲು ಪ್ರಯತ್ನಿಸಿದಾಗ ಪೋಷಕರ ಫೋನ್‌ಗೆ ವಿನಂತಿ ಬರುತ್ತದೆ. ಪೋಷಕರು ಓಕೆ ಅಂದರಷ್ಟೇ ಹಣ ವರ್ಗಾವಣೆಯಾಗುತ್ತದೆ. ಒಬ್ಬ ಪ್ರಾಥಮಿಕ ಬಳಕೆದಾರನು ಇದರಲ್ಲಿ ಗರಿಷ್ಠ ಐವರು ಸದಸ್ಯರನ್ನು ಸೇರಿಸಬಹುದು. ಭದ್ರತೆಯ ದೃಷ್ಟಿಯಿಂದ, ಪೋಷಕರು ತಮ್ಮ ಮತ್ತು ಮಕ್ಕಳ ಸಂಬಂಧದ ಬಗ್ಗೆ ಸರ್ಕಾರಿ ಗುರುತಿನ ಚೀಟಿ ನೀಡಿ ಕೆವೈಸಿ ಮಾಡುವುದು ಕಡ್ಡಾಯವಾಗಿದೆ. ಇದರಿಂದ ಮಕ್ಕಳ ಬಳಿ ಬ್ಯಾಂಕ್ ಖಾತೆ ಇಲ್ಲದಿದ್ದರೂ, ಶಾಲಾ-ಕಾಲೇಜುಗಳ ಕ್ಯಾಂಟೀನ್ ಅಥವಾ ಸಣ್ಣ ಪುಟ್ಟ ಶಾಪಿಂಗ್‌ಗೆ ಡಿಜಿಟಲ್ ಪಾವತಿ ಮಾಡಲು ಈ ಫೀಚರ್ ಸಹಕಾರಿ.ಪೋಷಕರು ಹಣ ಎಲ್ಲಿ ಮತ್ತು ಎಷ್ಟು ಖರ್ಚಾಗುತ್ತಿದೆ ಎಂಬುದನ್ನು ತಮ್ಮ ಫೋನ್ ಮೂಲಕವೇ ಟ್ರ್ಯಾಕ್ ಮಾಡಬಹುದು.
ಗೂಗಲ್ ಪೇ ‘ಪಾಕೆಟ್ ಮನಿ’ ಸೆಟಪ್ ಮಾಡುವುದು ಹೇಗೆ? ಇಲ್ಲಿದೆ ಸ್ಟೆಪ್-ಬೈ-ಸ್ಟೆಪ್ ಗೈಡ್!
ಹಂತ 1: ಯುಪಿಐ ಸರ್ಕಲ್‌ಗೆ ಭೇಟಿ ನೀಡಿ
ನಿಮ್ಮ ಫೋನ್‌ನಲ್ಲಿ ಗೂಗಲ್ ಪೇ ಅಪ್ಲಿಕೇಶನ್ ತೆರೆಯಿರಿ. ಮೇಲೆ ಬಲಭಾಗದಲ್ಲಿರುವ ನಿಮ್ಮ ‘ಪ್ರೊಫೈಲ್’ (Profile) ಚಿತ್ರದ ಮೇಲೆ ಕ್ಲಿಕ್ ಮಾಡಿ. ಅಲ್ಲಿ ಕಾಣಿಸುವ ಮೆನುವಿನಲ್ಲಿ ‘UPI Circle’ ಎಂಬ ವಿಭಾಗವನ್ನು ಆಯ್ಕೆ ಮಾಡಿ.
ಹಂತ 2: ಸದಸ್ಯರನ್ನು ಸೇರಿಸಿ
‘ಪಾಕೆಟ್ ಮನಿ’ ಸೆಟಪ್ ಮಾಡುವ ಆಯ್ಕೆಯನ್ನು ಆರಿಸಿ. ನಿಮ್ಮ ಕಾಂಟ್ಯಾಕ್ಟ್ ಲಿಸ್ಟ್‌ನಿಂದ ನೀವು ಯಾರನ್ನು (ಮಕ್ಕಳು ಅಥವಾ ಅವಲಂಬಿತರು) ದ್ವಿತೀಯ ಬಳಕೆದಾರರನ್ನಾಗಿ ಸೇರಿಸಲು ಬಯಸುತ್ತೀರೋ ಅವರ ಹೆಸರನ್ನು ಆರಿಸಿ. ನೆನಪಿಡಿ, ಅವರು ಈಗಾಗಲೇ ಗೂಗಲ್ ಪೇ ಇನ್‌ಸ್ಟಾಲ್ ಮಾಡಿರಬೇಕು.
ಹಂತ 3: QR ಕೋಡ್ ಸ್ಕ್ಯಾನಿಂಗ್
ಈಗ ಪ್ರಾಥಮಿಕ ಬಳಕೆದಾರರು (ಪೋಷಕರು), ದ್ವಿತೀಯ ಬಳಕೆದಾರರ (ಮಕ್ಕಳ) ಗೂಗಲ್ ಪೇನಲ್ಲಿರುವ UPI Circle QR ಕೋಡ್ ಅನ್ನು ಸ್ಕ್ಯಾನ್ ಮಾಡಬೇಕು. ಇದು ಇಬ್ಬರ ನಡುವೆ ಸುರಕ್ಷಿತ ಸಂಪರ್ಕವನ್ನು ಏರ್ಪಡಿಸುತ್ತದೆ.
ಹಂತ 4: ಪಾವತಿ ವಿಧಾನದ ಆಯ್ಕೆ
ಇಲ್ಲಿ ನಿಮಗೆ ಎರಡು ಪ್ರಮುಖ ಆಯ್ಕೆಗಳು ಸಿಗುತ್ತವೆ:
ಪೂರ್ಣ ನಿಯೋಗ (Full Delegation): ಇಲ್ಲಿ ನೀವು ಮಾಸಿಕ ಖರ್ಚು ಮಿತಿಯನ್ನು (ಗರಿಷ್ಠ ₹15,000) ನಿಗದಿಪಡಿಸಬಹುದು. ಈ ಮಿತಿಯೊಳಗೆ ಮಕ್ಕಳು ನಿಮ್ಮ ಅನುಮತಿ ಇಲ್ಲದೆ ನೇರವಾಗಿ ಪಾವತಿ ಮಾಡಬಹುದು.
ಅನುಮೋದನೆ ಆಧಾರಿತ (Approve Each Payment): ಪ್ರತಿ ಬಾರಿ ಮಗು ಪಾವತಿ ಮಾಡುವಾಗಲೂ ನಿಮ್ಮ ಫೋನ್‌ಗೆ ನೋಟಿಫಿಕೇಶನ್ ಬರುತ್ತದೆ. ನೀವು ಅದನ್ನು ಅನುಮೋದಿಸಿದರೆ ಮಾತ್ರ ಹಣ ವರ್ಗಾವಣೆಯಾಗುತ್ತದೆ.
ಹಂತ 5: KYC ಮತ್ತು ದೃಢೀಕರಣ
ಕೊನೆಯದಾಗಿ, ನಿಮ್ಮ ಮತ್ತು ದ್ವಿತೀಯ ಬಳಕೆದಾರರ ನಡುವಿನ ಸಂಬಂಧವನ್ನು ನಮೂದಿಸಿ ಮತ್ತು ಅಗತ್ಯವಿರುವ ಸರ್ಕಾರಿ ಐಡಿ (Government ID) ವಿವರಗಳನ್ನು ಒದಗಿಸಿ KYC ಪ್ರಕ್ರಿಯೆ ಪೂರ್ಣಗೊಳಿಸಿ. ಸೆಟಪ್ ಖಚಿತಪಡಿಸಲು ನಿಮ್ಮ UPI PIN ನಮೂದಿಸಿದರೆ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ.
ಸೆಟಪ್ ಪ್ರಕ್ರಿಯೆ ಮತ್ತು ಕೆವೈಸಿ (KYC) ಪೂರ್ಣಗೊಂಡ ನಂತರ, ದ್ವಿತೀಯ ಬಳಕೆದಾರರು (ಮಕ್ಕಳು) ಸಾಮಾನ್ಯ ಯುಪಿಐ ಬಳಕೆದಾರರಂತೆ ಪಾವತಿ ಆರಂಭಿಸಬಹುದು.
ಅಂಗಡಿಗಳಲ್ಲಿ: ಯಾವುದೇ ಅಂಗಡಿಯ QR ಕೋಡ್ ಸ್ಕ್ಯಾನ್ ಮಾಡಬಹುದು ಅಥವಾ ಮೊಬೈಲ್ ಸಂಖ್ಯೆ ನಮೂದಿಸಬಹುದು.
ಆನ್‌ಲೈನ್‌ನಲ್ಲಿ: ಯಾವುದೇ ಆಪ್ ಅಥವಾ ವೆಬ್‌ಸೈಟ್‌ನಲ್ಲಿ ಚೆಕ್‌ಔಟ್ ಮಾಡುವಾಗ ‘UPI’ ಆಯ್ಕೆ ಮಾಡಿ, ಅಲ್ಲಿ ಗೂಗಲ್ ಪೇ ಮೂಲಕ ಪಾವತಿ ಪೂರ್ಣಗೊಳಿಸಬಹುದು.
ಹಂತ 2: ಪಾವತಿ ಪ್ರಕ್ರಿಯೆ
ಪೋಷಕರು ಸೆಟಪ್ ಸಮಯದಲ್ಲಿ ಆರಿಸಿಕೊಂಡಿರುವ ಆಯ್ಕೆಯ ಆಧಾರದ ಮೇಲೆ ಪಾವತಿ ನಡೆಯುತ್ತದೆ:
ಪೂರ್ಣ ನಿಯೋಗ: ಪೋಷಕರು ನಿಗದಿಪಡಿಸಿದ ಮಾಸಿಕ ಮಿತಿಯೊಳಗೆ (ಉದಾಹರಣೆಗೆ ₹2,000) ಮಗು ಪಾವತಿ ಮಾಡಿದರೆ, ಅದು ಯಾವುದೇ ಹೆಚ್ಚಿನ ಅನುಮತಿ ಇಲ್ಲದೆ ತಕ್ಷಣವೇ ಪೂರ್ಣಗೊಳ್ಳುತ್ತದೆ.
ಅನುಮೋದನೆ ಮೋಡ್ : ಮಗು ಪಾವತಿ ಮಾಡಲು ಮುಂದಾದಾಗ, ಪ್ರಾಥಮಿಕ ಬಳಕೆದಾರರಿಗೆ (ಪೋಷಕರಿಗೆ) ತಕ್ಷಣವೇ ಅಧಿಸೂಚನೆ (Notification) ಹೋಗುತ್ತದೆ. ಪೋಷಕರು ನಿಗದಿತ ಸಮಯದೊಳಗೆ ಅದನ್ನು ಪರಿಶೀಲಿಸಿ ‘Approve’ ಮಾಡಿದರೆ ಮಾತ್ರ ಪಾವತಿ ಸಫಲವಾಗುತ್ತದೆ.
ಹಂತ 3: ವಹಿವಾಟು ಇತಿಹಾಸ
ಪಾರದರ್ಶಕತೆಗಾಗಿ, ನಡೆದ ಎಲ್ಲಾ ವಹಿವಾಟುಗಳ ವಿವರಗಳು ಪೋಷಕರು ಮತ್ತು ಮಕ್ಕಳು ಇಬ್ಬರ ಗೂಗಲ್ ಪೇ ಆಪ್‌ನ ‘Transaction History’ ವಿಭಾಗದಲ್ಲಿ ಲಭ್ಯವಿರುತ್ತದೆ. ಇದರಿಂದ ಹಣ ಎಲ್ಲಿ ಖರ್ಚಾಗಿದೆ ಎಂಬುದನ್ನು ನಿಖರವಾಗಿ ತಿಳಿಯಬಹುದು.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ರಾಜ್ಯದ ವಿವಿಧ ಪ್ರಮುಖ ನಿಗಮ, ಮಂಡಳಿ ಮತ್ತು ವಿಶ್ವವಿದ್ಯಾಲಯಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಲಿಖಿತ ಪರೀಕ್ಷೆಯ ವೇಳಾಪಟ್ಟಿಯನ್ನು ಅಧಿಕೃತವಾಗಿ ಬಿಡುಗಡೆ ಮಾಡಿದೆ. ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ (RGUHS), ಬೆಂಗಳೂರು ಜಲಮಂಡಳಿ (BWSSB) ಮತ್ತು ಕೃಷಿ ಮಾರಾಟ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಮೂಲ ವೃಂದ ಹಾಗೂ ಕಲ್ಯಾಣ ಕರ್ನಾಟಕ ವೃಂದದ ಹುದ್ದೆಗಳಿಗೆ ಈ ಪರೀಕ್ಷೆಗಳು ನಡೆಯಲಿವೆ. ಈ ಮೂಲಕ ಬಹುದಿನಗಳಿಂದ ಪರೀಕ್ಷೆಗಾಗಿ ಕಾಯುತ್ತಿದ್ದ ಅಭ್ಯರ್ಥಿಗಳಿಗೆ ಪ್ರಾಧಿಕಾರವು ಸ್ಪಷ್ಟನೆಯನ್ನು ನೀಡಿದೆ.
ಪರೀಕ್ಷಾ ಪ್ರಕ್ರಿಯೆಯನ್ನು ಸುಗಮವಾಗಿ ನಡೆಸಲು ಪ್ರಾಧಿಕಾರವು ದಿನಾಂಕಗಳನ್ನು ನಿಗದಿಪಡಿಸಿದ್ದು, ಹೈದರಾಬಾದ್ ಕರ್ನಾಟಕ ಹಾಗೂ ಉಳಿದ ಜಿಲ್ಲೆಗಳ ಅಭ್ಯರ್ಥಿಗಳಿಗೆ ಪ್ರತ್ಯೇಕ ದಿನಗಳಂದು ಪರೀಕ್ಷೆ ನಡೆಯಲಿದೆ. ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್. ಪ್ರಸನ್ನ ಅವರು ನೀಡಿರುವ ಮಾಹಿತಿಯಂತೆ, ಮೂಲ ವೃಂದದ (RPC) ಹುದ್ದೆಗಳಿಗೆ ಏಪ್ರಿಲ್ 26 ಮತ್ತು ಮೇ 10ರಂದು ಪರೀಕ್ಷೆಗಳು ಜರುಗಲಿವೆ. ಅದೇ ರೀತಿ, ಕಲ್ಯಾಣ ಕರ್ನಾಟಕ ವೃಂದದ (HK) ಅಭ್ಯರ್ಥಿಗಳಿಗೆ ಏಪ್ರಿಲ್ 27 ಹಾಗೂ ಮೇ 9ರಂದು ಲಿಖಿತ ಪರೀಕ್ಷೆಗಳನ್ನು ನಡೆಸಲು ದಿನಾಂಕ ನಿಗದಿಪಡಿಸಲಾಗಿದೆ.
ಈ ನೇಮಕಾತಿ ಪರೀಕ್ಷೆಗಳಲ್ಲಿ ತಾಂತ್ರಿಕ ಮತ್ತು ತಾಂತ್ರಿಕೇತರ ಹೀಗೆ ವಿವಿಧ ಶ್ರೇಣಿಯ ಹುದ್ದೆಗಳು ಒಳಗೊಂಡಿವೆ. ಪರೀಕ್ಷೆಯ ಪಠ್ಯಕ್ರಮ, ಪರೀಕ್ಷಾ ಕೇಂದ್ರಗಳ ವಿವರ ಮತ್ತು ಪ್ರವೇಶ ಪತ್ರದ ಲಭ್ಯತೆಯ ಕುರಿತು ಅಭ್ಯರ್ಥಿಗಳು ನಿರಂತರವಾಗಿ ಕೆಇಎ ಅಧಿಕೃತ ವೆಬ್‌ಸೈಟ್(cetonline.karnataka.gov.in) ಗಮನಿಸಲು ಸೂಚಿಸಲಾಗಿದೆ. ಪರೀಕ್ಷಾ ದಿನಾಂಕಗಳು ಘೋಷಣೆಯಾಗಿರುವುದರಿಂದ ಅಭ್ಯರ್ಥಿಗಳು ತಮ್ಮ ಅಂತಿಮ ಹಂತದ ಸಿದ್ಧತೆಯನ್ನು ಚುರುಕುಗೊಳಿಸಲು ಇದು ಸಕಾಲವಾಗಿದೆ. ಹೆಚ್ಚಿನ ತಾಂತ್ರಿಕ ಮಾಹಿತಿ ಅಥವಾ ಬದಲಾವಣೆಗಳಿದ್ದಲ್ಲಿ ಪ್ರಾಧಿಕಾರವು ತನ್ನ ಜಾಲತಾಣದಲ್ಲಿ ಅಪ್‌ಡೇಟ್ ಮಾಡಲಿದೆ ಎಂದು ತಿಳಿಸಲಾಗಿದೆ.
ಉದ್ಯೋಗಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಬೆಂಗಳೂರು, ಏಪ್ರಿಲ್ 10: ಹೆಬ್ಬಾಳದ ಮನೋರಾಯನಪಾಳ್ಯದಲ್ಲಿ ವಿದ್ಯಾರ್ಥಿನಿ ತನುಶ್ರೀ ಸಾವು (Tanushree Death Case) ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಸ್ಫೋಟಕ ಮಾಹಿತಿ ಲಭ್ಯವಾಗಿದೆ. ಮೊದಲು ತಾಯಿಯ ಮೇಲೆ ಅನುಮಾನ ವ್ಯಕ್ತವಾಗಿದ್ದರೂ, ಈಗ ಲಭ್ಯವಿರುವ ಸಾಕ್ಷ್ಯಗಳು ಇದು ದ್ವಿತೀಯ ಪಿಯುಸಿ ಪರೀಕ್ಷೆ ಫೇಲ್ ಆಗಿ ಮನನೊಂದ ಆತ್ಮಹತ್ಯೆ ಎಂಬದನ್ನು ಪುಷ್ಟೀಕರಿಸುತ್ತಿವೆ. ತನುಶ್ರೀ ದೇಹ ನೇಣು ಬಿಗಿದ ಸ್ಥಿತಿಯಲ್ಲಿ ಗುರುವಾರ ಸಂಜೆ ಪತ್ತೆಯಾಗಿತ್ತು. ಸಂಬಂಧಿಕರು ಕೂಡ ವಿದ್ಯಾರ್ಥಿನಿಯ ತಾಯಿಯ ಮೇಲೆಯೇ ಅನುಮಾನ ವ್ಯಕ್ತಪಡಿಸಿದ್ದರು. ಆದರೆ, ಇದೀಗ ಅಸಲಿ ಸತ್ಯ ಬಹಿರಂಗವಾಗಿದೆ.
ಏನಿದು ಬಿಗ್ ಟ್ವಿಸ್ಟ್?
ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ತನುಶ್ರೀ ಗಣಿತ ಮತ್ತು ರಾಸಾಯನಶಾಸ್ತ್ರ ವಿಷಯಗಳಲ್ಲಿ ಅನುತ್ತೀರ್ಣಳಾಗಿದ್ದಳು. ಇದರಿಂದ ತೀವ್ರ ಮನನೊಂದಿದ್ದ ಆಕೆ, ಸಾವಿಗೂ ಮುನ್ನ ಸೋಶಿಯಲ್ ಮೀಡಿಯಾ ಸ್ಟೇಟಸ್‌ನಲ್ಲಿ ‘3 PM fielding set’ ಎಂದು ಬರೆದುಕೊಂಡಿದ್ದಳು. ಇದನ್ನು ಗಮನಿಸಿದ ಆಕೆಯ ಸ್ನೇಹಿತೆ ಗಾಬರಿಗೊಂಡು ‘ನಮ್ಮ ಮನೆಗೆ ಬಾ’ ಎಂದು ಮೆಸೇಜ್ ಮಾಡಿದ್ದಳು. ತನುಶ್ರೀ ಕೂಡ ‘ಸರಿ ಬರ್ತೀನಿ’ ಎಂದು ಉತ್ತರಿಸಿದ್ದಳು.
ಆದರೆ, ತನುಶ್ರೀಯ ಸ್ಟೇಟಸ್ ನೋಡಿ ಅನುಮಾನಗೊಂಡ ಸ್ನೇಹಿತೆ ತಕ್ಷಣ ಆಕೆಯ ಮನೆಗೆ ಓಡಿ ಬಂದಿದ್ದಳು. ಅಷ್ಟರಲ್ಲಾಗಲೇ ತನುಶ್ರೀ ನೇಣು ಬಿಗಿದುಕೊಂಡಿದ್ದಳು. ಕೂಡಲೇ ಸ್ನೇಹಿತೆ ತನ್ನ ತಂದೆ ಅಂಥೋನಿ ಅವರಿಗೆ ಕರೆ ಮಾಡಿದ್ದು, ಅವರು ಬಂದು ಬಾಗಿಲು ಒಡೆದು ತನುಶ್ರೀಯನ್ನು ಕೆಳಕ್ಕೆ ಇಳಿಸಿದ್ದಾರೆ. ಆಗ ತನುಶ್ರೀ ಉಸಿರಾಡುತ್ತಿದ್ದಳು ಎನ್ನಲಾಗಿದೆ. ಕೂಡಲೇ ಆಕೆಯನ್ನು ಅಂಬೇಡ್ಕರ್ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಮಾರ್ಗಮಧ್ಯೆ ಆಕೆ ಸಾವನ್ನಪ್ಪಿದ್ದಾಳೆ.
ಈ ಬೆಳವಣಿಗೆಯಿಂದಾಗಿ ಪ್ರಕರಣಕ್ಕೆ ಮತ್ತೊಂದು ಆಯಾಮ ಪಡೆದಂತಾಗಿದೆ. ಪೊಲೀಸರು ಯುಡಿಆರ್ (UDR) ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
ಆರಂಭದಲ್ಲಿ ಸಂಬಂಧಿಕರು ತನುಶ್ರೀಯ ತಾಯಿ ಮೇಲೆ ಅನುಮಾನ ವ್ಯಕ್ತಪಡಿಸಿದ್ದರು. ಇದು ಆತ್ಮಹತ್ಯೆ ಆಗಿರಲಾರದು ಎಂಬ ಅನುಮಾನವನ್ನೂ ವ್ಯಕ್ತಪಡಿಸಿದ್ದರು. ಆದರೆ, ಸದ್ಯ ಪ್ರಾಥಮಿಕ ತನಿಖೆಯಲ್ಲಿ ಆತ್ಮಹತ್ಯೆ ಎಂಬುದು ಗೊತ್ತಾಗಿದ್ದು, ತನಿಖೆ ಮುಂದುವರಿದಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿಕ್ಲಿಕ್ ಮಾಡಿ
ಚಾಮರಾಜನಗರ, ಏಪ್ರಿಲ್ 09: ಕಳ್ಳ-ಕಾಕರಿಗೆ ಸಾಮಾನ್ಯವಾಗಿ ಯಾವುದರ ಮೇಲೂ ಭಯ ಇರೋದಿಲ್ಲ. ಆದರೆ ಗುಂಡ್ಲುಪೇಟೆತಾಲೂಕಿನ ಬೊಮ್ಮಲಾಪುರದಲ್ಲಿ ದೇವಸ್ಥಾನದ ಹುಂಡಿ ಕದಿಯಲು ಬಂದ ಖದೀಮನೋರ್ವ, ಕನ್ನ ಹಾಕುವ ಮೊದಲು ದೇವರಿಗೆ ಕೈ ಮುಗಿದು ಕುಂಕುಮವನ್ನೂ ಹಚ್ಚಿಕೊಂಡಿದ್ದಾನೆ. ಗ್ರಾಮದ ಶಕ್ತಿ ದೇವತೆ ಪಟ್ಟದರಾಣಿ ದೇವಾಲಯದಲ್ಲಿ ಕಳ್ಳತನ ನಡೆದಿದ್ದು, ಈ ಹಿಂದೆಯೂ ಹುಂಡಿ ಹಣ ಕಳುವಾಗಿದ್ದ ಕಾರಣಕ್ಕೆ ದೇಗುಲಕ್ಕೆ ಸಿಸಿಟಿವಿ ಕ್ಯಾಮರಾ ಹಾಕಲಾಗಿತ್ತು. ಈ ಹಿನ್ನೆಲೆ ಕಳ್ಳತನದ ದೃಶ್ಯ ಸೆರೆಯಾಗಿದೆ. ಗುಂಡ್ಲುಪೇಟೆ ಪೊಲೀಸ್ ಠಾಣಾ ವ್ಯಾಪ್ತಿಗೆ ಒಳಪಡುವ ಬೊಮ್ಮಲಾಪುರ ಗ್ರಾಮದಲ್ಲಿ ಘಟನೆ ನಡೆದಿದೆ.
ಬೆಂಗಳೂರು, ಏಪ್ರಿಲ್ 10: ಚಿನ್ನ, ಬೆಳ್ಳಿ ಬೆಲೆಗಳ ಏರಿಳಿತದ ಟ್ರೆಂಡ್ ಮುಂದುವರಿಯುತ್ತಿದೆ. ಚಿನ್ನದ ಬೆಲೆ (Gold Rates) ಮೊನ್ನೆ ಏರಿತ್ತು, ನಿನ್ನೆ ಕುಸಿದಿತ್ತು, ಇವತ್ತು ಮತ್ತೆ ಏರಿದೆ. ಶುಕ್ರವಾರ ಇದರ ಬೆಲೆ ಗ್ರಾಮ್ಗೆ 140 ರೂಗಳಷ್ಟು ಹೆಚ್ಚಿದೆ. ವಿದೇಶಗಳಲ್ಲೂ ಇದರ ಬೆಲೆಯಲ್ಲಿ ಅಲ್ಪ ಏರಿಳಿತಗಳಾಗಿವೆ. ಬೆಳ್ಳಿ ಬೆಲೆಯಲ್ಲೂ ಇದೇ ಟ್ರೆಂಡ್ ಇದೆ. ನಿನ್ನೆ ಇಳಿದಿದ್ದ ಬೆಳ್ಳಿ ಬೆಲೆ ಇವತ್ತು 5 ರೂ ಏರಿದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 1,40,250 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 1,53,000 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 26,000 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 1,40,250 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 26,000 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 26,500 ರೂ ಇದೆ.
ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಏಪ್ರಿಲ್ 10ಕ್ಕೆ)
24 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 15,300 ರೂ
22 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 14,025 ರೂ
18 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 11,475 ರೂ
ಬೆಳ್ಳಿ ಬೆಲೆ 1 ಗ್ರಾಂಗೆ: 260 ರೂ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ
24 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 15,300 ರೂ
22 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 14,025 ರೂ
ಬೆಳ್ಳಿ ಬೆಲೆ 1 ಗ್ರಾಂಗೆ: 260 ರೂ
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್ಗೆ)
(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)
ಬೆಂಗಳೂರು, ಏ.10 : ಬೆಂಗಳೂರಿನ ಪ್ರತಿಷ್ಠಿತ ಐಟಿ ಹಬ್ ಎಲೆಕ್ಟ್ರಾನಿಕ್ ಸಿಟಿಯ ನೀಲಾದ್ರಿ ನಗರ ರಸ್ತೆ (Neeladri Nagar Road) ಸದ್ಯ ಗುಂಡಿಗಳ ಮಯವಾಗಿದ್ದು, ಮಳೆಯಾದರಂತೂ ಕೆರೆಯಂತಾಗುತ್ತಿದೆ. ಪ್ರತಿನಿತ್ಯ ಸಾವಿರಾರು ಜನರು ಸಂಚರಿಸುವ ಈ ರಸ್ತೆಯು ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಅಕ್ಷರಶಃ ನರಕವಾಗಿ ಮಾರ್ಪಟ್ಟಿದೆ. ಲವಲವಿಕೆಯಿಂದ ಇರಬೇಕಾದ ಈ ರಸ್ತೆಯಲ್ಲಿ ಸ್ವಲ್ಪ ಮಳೆಯಾದರೂ ನೀರು ಸರಿಯಾಗಿ ಹರಿದು ಹೋಗದೆ ನಿಲ್ಲುತ್ತಿದೆ. ಇದರಿಂದ ರಸ್ತೆಯಲ್ಲಿರುವ ಗುಂಡಿಗಳು ಯಾವುವು ಎಂಬುದು ತಿಳಿಯದೆ ವಾಹನ ಸವಾರರು ಅಪಘಾತಕ್ಕೀಡಾಗುತ್ತಿದ್ದಾರೆ. ಈ ಭಾಗದಲ್ಲಿ ಸುಮಾರು ಶೇ. 70ರಷ್ಟು ಕಟ್ಟಡಗಳು ಪಿಜಿ (PG) ಗಳಾಗಿವೆ. ಕೆಲಸಕ್ಕೆ ಹೋಗುವ ಸಾವಿರಾರು ಯುವಕ-ಯುವತಿಯರು ಪ್ರತಿದಿನ ಇದೇ ರಸ್ತೆಯನ್ನು ಬಳಸಬೇಕಿದ್ದು, ಪಾದಚಾರಿಗಳು ಕೆಸರು ನೀರಿನಲ್ಲಿ ನಡೆಯಲು ಹರಸಾಹಸ ಪಡುತ್ತಿದ್ದಾರೆ. ರಾತ್ರಿ ವೇಳೆಯಲ್ಲಿ ದ್ವಿಚಕ್ರ ವಾಹನ ಸವಾರರು ಆಳವಾದ ಗುಂಡಿಗಳಿಗೆ ಬಿದ್ದು ಗಾಯಗೊಳ್ಳುತ್ತಿರುವ ಘಟನೆಗಳು ಸಾಮಾನ್ಯವಾಗುತ್ತಿವೆ. “ನಾವು ಭಾರಿ ಪ್ರಮಾಣದ ತೆರಿಗೆ ಪಾವತಿಸುತ್ತಿದ್ದರೂ ಕನಿಷ್ಠ ಗುಣಮಟ್ಟದ ರಸ್ತೆಯೂ ನಮಗಿಲ್ಲ” ಎಂದು ಇಲ್ಲಿನ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸಂಬಂಧಪಟ್ಟ ಬಿಬಿಎಂಪಿ (BBMP) ಅಥವಾ ಇಎಲ್‌ಸಿಐಎ (ELCIA) ಅಧಿಕಾರಿಗಳು ತಕ್ಷಣ ಎಚ್ಚೆತ್ತು ರಸ್ತೆ ದುರಸ್ತಿ ಮಾಡಬೇಕೆಂದು ಒತ್ತಾಯಿಸಿದ್ದಾರೆ.
ಏಪ್ರಿಲ್ 12ರಿಂದ 18ರ ಅವಧಿಯಲ್ಲಿ ಸಾಡೇ ಸಾಥ್ ಶನಿ ಮೀನ ರಾಶಿಯಲ್ಲಿ ಹಾಗೂ ಗುರು ಮಿಥುನ ರಾಶಿಯಲ್ಲಿದ್ದಾನೆ. ಈ ಗ್ರಹಸ್ಥಿತಿಗಳು ಉದ್ಯೋಗದ ಮೇಲೆ ಬೀರುವ ಅನೇಕ ಪ್ರಭಾವಗಳನ್ನು ಬೀರಲಿವೆ.
ಮೇಷ:
ಉದ್ಯೋಗದಲ್ಲಿ ಹಠಾತ್ ಬದಲಾವಣೆ ಸಾಧ್ಯತೆ. ಹಿರಿಯ ಅಧಿಕಾರಿಗಳಿಂದ ಒತ್ತಡ ಬರಬಹುದು. ಆದರೆ ನಿಮ್ಮ ಸಂವಹನ ಕಲೆ ಮತ್ತು ಶ್ರಮದಿಂದ ವಾರದ ಕೊನೆಯಲ್ಲಿ ಉತ್ತಮ ಲಾಭ ಹಾಗೂ ಕಚೇರಿಯಲ್ಲಿ ಸ್ಥಾನಮಾನ ಪಡೆಯುವಿರಿ.
ವೃಷಭ:
ವೃತ್ತಿಯಲ್ಲಿ ಬಹಳ ಸಮಯದಿಂದ ನಿರೀಕ್ಷಿಸುತ್ತಿದ್ದ ಬಡ್ತಿ ಸಿಗುವ ಸಮಯ. ಆರ್ಥಿಕವಾಗಿ ಲಾಭದಾಯಕ ದಿನಗಳು. ಹೊಸ ಉದ್ಯೋಗದ ಆಫರ್‌ಗಳು ನಿಮ್ಮನ್ನು ಹುಡುಕಿ ಬರಲಿವೆ. ಆತ್ಮವಿಶ್ವಾಸದಿಂದ ಹೆಜ್ಜೆ ಇಡಿ, ಯಶಸ್ಸು ನಿಮ್ಮದಾಗಲಿದೆ.
ಮಿಥುನ:
ನಿಮ್ಮ ರಾಶಿಯಲ್ಲೇ ಗುರು ಇರುವುದರಿಂದ ಉದ್ಯೋಗದಲ್ಲಿ ಹೊಸ ಆಯಾಮ ತೆರೆದುಕೊಳ್ಳಲಿದೆ. ಸೃಜನಾತ್ಮಕ ಕೆಲಸಗಳಿಗೆ ಮನ್ನಣೆ ಸಿಗಲಿದೆ. ವ್ಯಾಪಾರಸ್ಥರಿಗೆ ಲಾಭದಾಯಕ ವಾರವಿದು. ಸಹೋದ್ಯೋಗಿಗಳೊಂದಿಗೆ ಉತ್ತಮ ಬಾಂಧವ್ಯ ಕಾಪಾಡಿಕೊಳ್ಳಿ.
ಕರ್ಕಾಟಕ:
ದೂರದ ಪ್ರಯಾಣದಿಂದ ವೃತ್ತಿಜೀವನದಲ್ಲಿ ಲಾಭವಾಗಲಿದೆ. ಧಾರ್ಮಿಕ ಅಥವಾ ಶಿಕ್ಷಣ ಕ್ಷೇತ್ರದಲ್ಲಿರುವವರಿಗೆ ಇದು ಅತ್ಯಂತ ಶುಭ ಕಾಲ. ಭಾಗ್ಯೋದಯವಾಗುವ ಸೂಚನೆಗಳಿದ್ದು, ಮೇಲಧಿಕಾರಿಗಳ ಸಂಪೂರ್ಣ ಸಹಕಾರ ನಿಮಗಿರುತ್ತದೆ.
ಸಿಂಹ:
ಕೆಲಸದ ಸ್ಥಳದಲ್ಲಿ ಶತ್ರುಗಳ ಕಾಟವಿರಬಹುದು, ಜಾಗರೂಕರಾಗಿರಿ. ಹಠಾತ್ ವರ್ಗಾವಣೆಯ ಯೋಗವಿದೆ. ಯಾವುದೇ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವ ಮುನ್ನ ಹಿರಿಯರ ಸಲಹೆ ಪಡೆಯಿರಿ. ಆರೋಗ್ಯದ ಕಡೆಗೂ ಸ್ವಲ್ಪ ಗಮನ ನೀಡುವುದು ಅನಿವಾರ್ಯ.
ಕನ್ಯಾ:
ಪಾಲುದಾರಿಕೆ ವ್ಯವಹಾರಗಳಲ್ಲಿ ಪ್ರಗತಿ ಕಂಡುಬರುತ್ತದೆ. ಸಾರ್ವಜನಿಕ ಸಂಪರ್ಕ ಹೊಂದಿರುವ ಕೆಲಸಗಳಲ್ಲಿ ಯಶಸ್ಸು ಸಿಗಲಿದೆ. ನಿಮ್ಮ ಕಾರ್ಯಕ್ಷಮತೆ ಹೆಚ್ಚಾಗಲಿದ್ದು, ಹೊಸ ಒಪ್ಪಂದಗಳಿಗೆ ಸಹಿ ಹಾಕಲು ಇದು ಅತ್ಯಂತ ಸೂಕ್ತವಾದ ಸಮಯವಾಗಿದೆ.
ತುಲಾ:
ಸ್ಪರ್ಧಾತ್ಮಕ ಪರೀಕ್ಷೆ ಬರೆಯುವವರಿಗೆ ಶುಭ ವಾರ್ತೆ ಇದೆ. ಉದ್ಯೋಗದಲ್ಲಿರುವ ಸಣ್ಣಪುಟ್ಟ ಸಮಸ್ಯೆಗಳು ಬಗೆಹರಿಯಲಿವೆ. ಕಠಿಣ ಪರಿಶ್ರಮದಿಂದ ಮಾತ್ರ ಗುರಿ ತಲುಪಲು ಸಾಧ್ಯ. ಸಾಲದ ಬಾಧೆಗಳಿಂದ ಮುಕ್ತಿ ಪಡೆಯಲು ದಾರಿ ಗೋಚರಿಸಲಿದೆ.
ವೃಶ್ಚಿಕ:
ಬುದ್ಧಿವಂತಿಕೆಯಿಂದ ಕಠಿಣ ಸವಾಲುಗಳನ್ನು ಎದುರಿಸುವಿರಿ. ಕಲೆ ಮತ್ತು ಸಾಹಿತ್ಯ ಕ್ಷೇತ್ರದಲ್ಲಿರುವವರಿಗೆ ಉತ್ತಮ ವೇದಿಕೆ ಸಿಗಲಿದೆ. ಉದ್ಯೋಗ ಬದಲಾವಣೆಗೆ ಇದು ಪೂರಕ ಸಮಯವಲ್ಲ, ಇರುವ ಕಡೆಯೇ ನಿಮ್ಮ ಶಕ್ತಿ ಪ್ರದರ್ಶಿಸಿ ಜಯಿಸಿ.
ಧನು:
ವೃತ್ತಿ ಕ್ಷೇತ್ರದಲ್ಲಿ ಸುಧಾರಣೆ ಕಂಡುಬರುತ್ತದೆ. ಭೂಮಿ ಅಥವಾ ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿರುವವರಿಗೆ ಹೆಚ್ಚಿನ ಲಾಭ. ಮನೆಯಿಂದಲೇ ಕೆಲಸ ಮಾಡುವವರಿಗೆ ಕೆಲಸದ ಒತ್ತಡ ಹೆಚ್ಚಿರಬಹುದು. ಸ್ಥಿರವಾದ ಮನಸ್ಥಿತಿ ಕಾಪಾಡಿಕೊಳ್ಳಿ.
ಮಕರ:
ನಿಮ್ಮ ಪರಾಕ್ರಮದಿಂದ ಕಷ್ಟದ ಕೆಲಸಗಳನ್ನು ಸುಲಭವಾಗಿ ಮುಗಿಸುವಿರಿ. ಲೇಖಕರು ಮತ್ತು ಪತ್ರಕರ್ತರಿಗೆ ಶುಭ ಕಾಲ. ಕಿರಿಯ ಸಹೋದ್ಯೋಗಿಗಳಿಂದ ಉತ್ತಮ ಸಹಕಾರ ಸಿಗಲಿದೆ. ಆರ್ಥಿಕವಾಗಿ ಈ ವಾರ ಧನ ಲಾಭದ ಸೂಚನೆಗಳಿವೆ.
ಕುಂಭ:
ಮಾತಿನ ಮೇಲೆ ನಿಗಾ ಇರಲಿ, ಕಚೇರಿಯಲ್ಲಿ ವಾದಗಳನ್ನು ತಪ್ಪಿಸಿ. ಹಣಕಾಸಿನ ವ್ಯವಹಾರಗಳಲ್ಲಿ ಎಚ್ಚರ ಅಗತ್ಯ. ಕುಟುಂಬದ ವ್ಯವಹಾರಗಳನ್ನು ವೃತ್ತಿಯೊಂದಿಗೆ ಬೆರೆಸಬೇಡಿ. ತಾಳ್ಮೆಯಿಂದ ಕೆಲಸ ಮಾಡಿದರೆ ವಾರಾಂತ್ಯಕ್ಕೆ ಶುಭ ಫಲ ದೊರೆಯಲಿದೆ.
ಮೀನ:
ರಾಶಿಯಲ್ಲಿ ಶನಿ ಇರುವುದರಿಂದ ಕೆಲಸದಲ್ಲಿ ಗೊಂದಲವಿರಬಹುದು. ಶಿಸ್ತುಬದ್ಧವಾಗಿ ಕೆಲಸ ಮಾಡುವುದು ಅನಿವಾರ್ಯ. ಅತಿಯಾದ ಆಲೋಚನೆ ಬಿಟ್ಟು ಕರ್ತವ್ಯದ ಮೇಲೆ ಗಮನವಿಡಿ. ಧೈರ್ಯದಿಂದ ಕೆಲಸ ಮಾಡಿದರೆ ಅಡೆತಡೆಗಳು ದೂರವಾಗುತ್ತವೆ.