Category Archives: Blog

Your blog category

ಜೀವನದಲ್ಲಿ ಸುದೀಪ್ ಅವರಂತಹ ವ್ಯಕ್ತಿ ಸಿಕ್ಕಿದ್ದು ನನ್ನ ಪುಣ್ಯ; ನವೀನ್ ಚಂದ್ರ – Kannada News | Naveen Chandra on Sudeep: ‘Mark’ Actor Reveals Angel Like Mind

ನವೀನ್ ಚಂದ್ರ ಬಗ್ಗೆ ಅನೇಕರಿಗೆ ತಿಳಿದಿದೆ. ಅವರು ತಮಿಳು ನಟ. ಅವರು ಕನ್ನಡ ಚಿತ್ರರಂಗಕ್ಕೂ ಪರಿಚಯ ಆಗಿದ್ದಾರೆ. ಇದಕ್ಕೆ ಕಾರಣ ಆಗಿದ್ದು ‘ಮಾರ್ಕ್’ ಸಿನಿಮಾ. ಈ ಸಿನಿಮಾದಲ್ಲಿ ವಿಲನ್ ಪಾತ್ರ ಮಾಡಿ ಅವರು ಜನಪ್ರಿಯತೆ ಪಡೆದರು. ಅವರು ಸ್ಪಷ್ಟ ಕನ್ನಡ ಮಾತನಾಡುತ್ತಾರೆ. ಅವರು ಈಗ ಒಂದು ವಿಷಯ ರಿವೀಲ್ ಮಾಡಿದ್ದಾರೆ. ಸುದೀಪ್ ಜೊತೆಗಿನ ಒಡನಾಟದ ಬಗ್ಗೆ ಮಾತನಾಡಿದ್ದಾರೆ.

‘ಮಾರ್ಕ್’ ಚಿತ್ರದ ಹುಬ್ಬಳ್ಳಿ ಈವೆಂಟ್​​ನಲ್ಲಿ ನವೀನ್ ಚಂದ್ರ ಮಾತನಾಡಿದ್ದರು. ಈ ವೇಳೆ ಅವರು ಒಂದು ವಿಷಯ ಹಂಚಿಕೊಂಡರು. ಅದು ಈಗ ವೈರಲ್ ಆಗಿದೆ ‘ಮಧ್ಯಾಹ್ನ 2 ಗಂಟೆವರೆಗೆ ಚೆನ್ನೈನಲ್ಲಿದ್ದೆ. ಹುಬ್ಬಳ್ಳಿಗೆ ಬರಬೇಕು, ಹೇಗೆ ಬರಬೇಕು ಗೊತ್ತಾಗಲಿಲ್ಲ. ರಸ್ತೆ ಮೂಲಕವಂತೂ ಬರೋಕೆ ಸಾಧ್ಯವೇ ಇರಲಿಲ್ಲ. ಒಂದು ಕಾಲ್ ಬಂತು. ನೀವು ಇಲ್ಲಿ ಬರಬೇಕು ಎಂದರು ಸುದೀಪ್. ಸುದೀಪ್ ಸರ್ ನಿಮ್ಮ ಮನಸ್ಸು ದೊಡ್ಡದು. ನಾಲ್ಕೂವರೆಗೆ ಚೆನ್ನೈ ಬಿಟ್ಟೆ. 8 ಗಂಟೆಗೆ ಇಲ್ಲಿದ್ದೇನೆ. ಇದಕ್ಕೆ ಸುದೀಪ್ ಕಾರಣ’ ಎಂದರು ನವೀನ್ ಚಂದ್ರ.

‘ನಮ್ಮ ಇಡೀ ಕುಟುಂಬ ಅವರಿಗೆ ದೊಡ್ಡ ಅಭಿಮಾನಿ. ಅವರಿಗೆ ಯಾರು ತಾನೇ ಅಭಿಮಾನಿ ಅಲ್ಲ ಹೇಳಿ. ಅವರದ್ದು ಏಂಜಲ್ ರೀತಿಯ ಮನಸ್ಸು. ಅವರು ನಮಗೆ ಸಿಕ್ಕಿದ್ದು, ಪರಿಚಯ ಆಗಿದ್ದಕ್ಕೆ ನಾನು ಲಕ್ಕಿ’ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ತಮಿಳು ನಟ ನವೀನ್ ಚಂದ್ರಗೆ ಅಷ್ಟು ಸ್ಪಷ್ಟ ಕನ್ನಡ ಹೇಗೆ ಬರುತ್ತೆ? ಉತ್ತರಿಸಿದ ಹೀರೋ

ನವೀನ್ ಚಂದ್ರ ಅವರು ಸ್ವಚ್ಛವಾಗಿ ಕನ್ನಡ ಮಾತನಾಡ ಬಲ್ಲರು. ಅವರು ಹುಟ್ಟಿ ಬೆಳೆದಿದ್ದು ಬಳ್ಳಾರಿಯಲ್ಲಿ. ಹೀಗಾಗಿ, ಕನ್ನಡದಲ್ಲೇ ಅವರು ಓದಿದ್ದು. ಆ ಬಳಿಕ ತೆಲುಗು, ತಮಿಳು ಸಿನಿಮಾಗಳಿಂದ ಆಫರ್ ಬಂದು ಆ ಕಡೆ ಹೆಚ್ಚು ಸೆಟಲ್ ಆದರು. ಇದರಿಂದ ಅವರಿಗೆ ಕನ್ನಡದ ಟಚ್​ ಸ್ವಲ್ಪ ತಪ್ಪಿದೆ. ಆದರೂ ಅವರು ಭಾಷೆಯನ್ನು ಮರೆತಿಲ್ಲ. ‘ಮಾರ್ಕ್’ ಸಿನಿಮಾದಲ್ಲಿ ಅವರು ವಿಲನ್ ಪಾತ್ರ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 8:33 am, Thu, 1 January 26

Source link

ಕೀ ಕೊಡೋದ್ರಲ್ಲಿ ಮಾಸ್ಟರ್​; ಗಿಲ್ಲಿ ಮಾತಿಗೆ ಉರಿದುರಿದು ಬಿದ್ದ ಧ್ರುವಂತ್-ಅಶ್ವಿನಿ – Kannada News | Big Boss Kannada 12: Gilli vs Ashwini Gowda Dhruvanth Fight, Controversy

ಗಿಲ್ಲಿ ನಟ (Gilli Nata) ಅವರು ಯಾರನ್ನಾದರೂ ಉರಿಸಬೇಕು, ಯಾರನ್ನಾದರೂ ಅಳಿಸಬೇಕು ಎಂದು ನಿರ್ಧರಿಸಿದರೆ ಅವರ ಮಾತೇ ಸಾಕು. ಅವರು ಕೀ ಕೊಡೋದ್ರಲ್ಲಿ ಮಾಸ್ಟರ್. ಈಗ ಬಿಗ್ ಬಾಸ್ ಮನೆಯಲ್ಲಿ ಅಶ್ವಿನಿ ಗೌಡ-ಧ್ರುವಂತ್ ಹಾಗೂ ಗಿಲ್ಲಿ ನಟ ಮಧ್ಯೆ ಕಿರಿಕ್ ಆಗಿದೆ. ಗಿಲ್ಲಿ ಅದೆಷ್ಟು ಟ್ರಿಗರ್ ಮಾಡಿದರು ಎಂದರೆ, ಅಶ್ವಿನಿ ಅವರಿಗೆ ಕಂಟ್ರೋಲ್ ಸಿಗಲೇ ಇಲ್ಲ. ಅವರ ಮಾತು ಮಿತಿಮೀರಿದೆ. ತಾವು ಏಕವಚನ ಬಳಸಿ ಬೇರೆಯವರಿಂದ ಗೌರವ ನಿರೀಕ್ಷೆ ಮಾಡಿದ್ದಾರೆ. ಇದು ಚರ್ಚೆಗೆ ಕಾರಣ ಆಗಿದೆ.

ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಗಿಲ್ಲಿ ನಟ ಹಾಗೂ ಅಶ್ವಿನಿ ಗೌಡ ಮಧ್ಯೆ ಮೊದಲಿನಿಂದಲೂ ಕಿರಿಕ್​​ಗಳು ಆದ ಉದಾಹರಣೆ ಇದೆ. ಇತ್ತೀಚೆಗೆ ಅಶ್ವಿನಿ ಗೌಡ ಅವರು ಬದಲಾಗಿದ್ದರು. ಯಾವುದೇ ವಿಷಯ ಬಂದರೂ ಮೌನ ತಾಳುತ್ತಿದ್ದರು. ಅವರು ಯಾರ ಮೇಲೂ ಕೋಪ ಮಾಡಿಕೊಳ್ಳುತ್ತಾ ಇರಲಿಲ್ಲ. ಆದರೆ, ಈಗ ಅವರು ಮತ್ತೆ ಬದಲಾಗಿದ್ದಾರೆ. ಅವರು ನಿಯಂತ್ರಣ ಕಳೆದುಕೊಂಡಿದ್ದಾರೆ.

ಗಿಲ್ಲಿ ಮಾಡಿದ ಉಸ್ತುವಾರಿ ವಿಷಯಕ್ಕೆ ಚರ್ಚೆಗಳು ಆರಂಭ ಆದವು. ಗಿಲ್ಲಿ ನಟ ಅವರು ಉಸ್ತುವಾರಿಗೆ ತುಂಬಾನೇ ಟೈಮ್ ತೆಗೆದುಕೊಂಡರು ಎಂದು ಅಶ್ವಿನಿ ಗೌಡ ಹಾಗೂ ಧ್ರುವಂತ್ ಹೇಳಿದರು. ಇದು ಗಿಲ್ಲಿಗೆ ಕೋಪ ತರಿಸಿದೆ. ಇಬ್ಬರನ್ನೂ ಗಿಲ್ಲಿ ಟ್ರಿಗರ್ ಮಾಡುವ ನಿರ್ಧಾರಕ್ಕೆ ಬಂದರು. ಗಿಲ್ಲಿ ಮಾತಿನ ಮೂಲಕವೇ ಕಿಡಿ ಹೊತ್ತಿಸಿದರು. ಅದು ನಂತರ ಕಾಡ್ಗಿಚ್ಚಾಯಿತು.

ಇದನ್ನೂ ಓದಿ: ಗಿಲ್ಲಿಗೆ ‘ಲೋ*ರ್’, ಥರ್ಡ್​​ಕ್ಲಾಸ್ ಪದ ಬಳಕೆ ಮಾಡಿದ ಅಶ್ವಿನಿ; ಮತ್ತೆ ಬಂತು ಹಳೇ ವರ್ಷನ್

ಧ್ರುವಂತ್ ಹಾಗೂ ಅಶ್ವಿನಿ ಗೌಡ ಅವರು ಉರಿದುರಿದು ಬೀಳೋಕೆ ಆರಂಭಿಸಿದರು. ಆದರೆ, ಗಿಲ್ಲಿ ಮಾತ್ರ ಇದನ್ನು ಕೂಲ್ ಆಗೇ ತೆಗೆದುಕೊಳ್ಳುತ್ತಿದ್ದರು. ಇಬ್ಬರ ನಡುವೆ ನಡೆದ ವಾಗ್ವಾದದಲ್ಲಿ ಅಶ್ವಿನಿ ಗೌಡ ಅವರು ಕೆಟ್ಟ ಪದಗಳನ್ನು ಬಳಕೆ ಮಾಡಿದ್ದಾರೆ. ಈ ವಿಷಯ ವೀಕೆಂಡ್​​ನಲ್ಲಿ ಚರ್ಚೆ ಆಗುವ ಸಾಧ್ಯತೆ ಇದೆ. ಇವರ ಜಗಳ ಮನೆಯವರ ಅಸಮಾಧಾನಕ್ಕೆ ಕಾರಣ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

New Year 2026: ಹೊಸ ವರ್ಷದ ಶುಭಾಶಯ ತಿಳಿಸಿ, ಶಾಂತಿ, ಆರೋಗ್ಯ ಮತ್ತು ಸಮೃದ್ಧಿಗಾಗಿ ಪ್ರಾರ್ಥಿಸಿದ ಪ್ರಧಾನಿ ಮೋದಿ – Kannada News | PM Modi Welcomes the New Year With Message of Peace and Collective Well Being

ನವದೆಹಲಿ, ಜನವರಿ 01: 2026ಕ್ಕೆ ಕಾಲಿಡುತ್ತಿದ್ದಂತೆಯೇ ಪ್ರಧಾನಿ ನರೇಂದ್ರ ಮೋದಿ(Narendra Modi) ದೇಶ ಹಾಗೂ ವಿಶ್ವದ ಜನತೆಗೆ ಹೊಸ ವರ್ಷದ ಶುಭಾಶಯ ಕೋರಿದ್ದಾರೆ. ಅಷ್ಟೇ ಅಲ್ಲದೆ ದೇಶದಲ್ಲಿ ಶಾಂತಿ ನೆಲೆಸಲು, ಪ್ರಜೆಗಳಿಗೆ ಉತ್ತಮ ಆರೋಗ್ಯ, ಸಮೃದ್ಧಿ ಸಿಗಲಿ ಎಂದು ಪ್ರಾರ್ಥಿಸಿದ್ದಾರೆ. ಎಕ್ಸ್​​ನಲ್ಲಿ ಸಂದೇಶವನ್ನು ಹಂಚಿಕೊಂಡಿದ್ದು, ಜನರು ತಮ್ಮ ವೈಯಕ್ತಿಕ ಮತ್ತು ವೃತ್ತಿಪರ ಜೀವನದಲ್ಲಿ ಯಶಸ್ಸು ಪಡೆಯಲಿ ಎಂದು ಹಾರೈಸಿದ್ದಾರೆ.ಹೊಸ ವರ್ಷವು ನಿಮ್ಮ ಪ್ರಯತ್ನಗಳಲ್ಲಿ ಯಶಸ್ಸು ಮತ್ತು ನೀವು ಮಾಡುವ ಎಲ್ಲದರಲ್ಲೂ ಸಾಧನೆಯೊಂದಿಗೆ ಉತ್ತಮ ಆರೋಗ್ಯ ಮತ್ತು ಸಮೃದ್ಧಿಯನ್ನು ತರಲಿ ಎಂದಿದ್ದಾರೆ.

ದೆಹಲಿ ಮತ್ತು ಮುಂಬೈ ಸೇರಿದಂತೆ ಪ್ರಮುಖ ಮಹಾನಗರಗಳಲ್ಲಿ, ಹೊಸ ವರ್ಷವನ್ನು ಸ್ವಾಗತಿಸಲು ಇಂಡಿಯಾ ಗೇಟ್, ಕನ್ನಾಟ್ ಪ್ಲೇಸ್ ಮತ್ತು ಮೆರೈನ್ ಡ್ರೈವ್‌ನಂತಹ ಪ್ರಸಿದ್ಧ ಸ್ಥಳಗಳ ಬಳಿ ದೊಡ್ಡ ಜನಸಮೂಹ ಜಮಾಯಿಸಿ, ಹಬ್ಬದ ವಾತಾವರಣವನ್ನು ಸೃಷ್ಟಿಸಿತು.

ಏತನ್ಮಧ್ಯೆ, ದೇಶಾದ್ಯಂತ ಅಧಿಕಾರಿಗಳು ಸಂಚಾರ ಸಲಹೆಗಳು, ರೆಸ್ಟೋರೆಂಟ್‌ಗಳು ಮತ್ತು ಹೋಟೆಲ್‌ಗಳಿಗೆ ಮಾರ್ಗಸೂಚಿಗಳನ್ನು ಹೊರಡಿಸಿದರು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಭಾರಿ ಜನದಟ್ಟಣೆಯ ನಿರೀಕ್ಷೆಯಲ್ಲಿ ಹೆಚ್ಚುವರಿ ಭದ್ರತಾ ಪಡೆಗಳನ್ನು ನಿಯೋಜಿಸಿದ್ದರು. ದೇಶಾದ್ಯಂತ ರಾಜ್ಯ ಸರ್ಕಾರಗಳು ಹೊಸ ವರ್ಷವನ್ನು ಭವ್ಯ ಆಚರಣೆಗಳು, ಕೌಂಟ್‌ಡೌನ್ ಪಾರ್ಟಿಗಳು ಸ್ವಾಗತಿಸಿದವು.

ಪ್ರಧಾನಿ ಮೋದಿ ಪೋಸ್ಟ್​

ಏಕೆಂದರೆ ಆಚರಣೆಗಳು ಸುಗಮವಾಗಿ ಮತ್ತು ಯಾವುದೇ ಅಹಿತಕರ ಘಟನೆಗಳಿಲ್ಲದೆ ನಡೆಯುವಂತೆ ನೋಡಿಕೊಳ್ಳಲು ದೇಶಾದ್ಯಂತ ರಾಜ್ಯ ಸರ್ಕಾರಗಳು ಭದ್ರತಾ ಕ್ರಮಗಳನ್ನು ಹೆಚ್ಚಿಸಿವೆ.

ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಕೂಡ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್​ ಮಾಡಿದ್ದು, ಅದರಲ್ಲಿ  ನಿಮ್ಮೆಲ್ಲರಿಗೂ ಹೊಸ ವರ್ಷದ ಹೃತ್ಪೂರ್ವಕ  ಶುಭಾಶಯ. ಹೊಸ ವರ್ಷದ ಈ ಶುಭ ಸಂದರ್ಭವು ಪ್ರತಿಯೊಬ್ಬ ನಾಗರಿಕನ ಜೀವನದಲ್ಲಿ ಹೊಸ ಭರವಸೆ, ಸಕಾರಾತ್ಮಕ ಶಕ್ತಿ ಮತ್ತು ನಿರಂತರ ಪ್ರಗತಿಯ ತರಲಿ ಎಂದಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಬಾಯಿ ಮುಚ್ಕೊಂಡು ಕೂತ್ಗೊ; ಕಾವ್ಯಾಗೆ ಅವಾಜ್ ಹಾಕಿದ ಧ್ರುವಂತ್

ಕ್ಯಾಪ್ಟನ್ಸಿ ಟಾಸ್ಕ್ ಈ ವಾರ ತುಂಬಾನೇ ಮುಖ್ಯ. ಈ ಬಾರಿ ಗೆದ್ದವರು ನೇರವಾಗಿ ಫಿನಾಲೆ ವಾರಕ್ಕೆ ಆಯ್ಕೆ ಆಗುತ್ತಾರೆ. ಇದಕ್ಕಾಗಿ ಭಾರೀ ಫೈಟ್ ನಡೆಯುತ್ತಿದೆ. ಈ ಟಾಸ್ಕ್​​ಗೆ ಧ್ರುವಂತ್ ಹಾಗೂ ಕಾವ್ಯಾ ಅವರನ್ನು ಉಸ್ತುವಾರಿ ಆಗಿ ನೇಮಕ ಮಾಡಲಾಗಿತ್ತು. ಇಬ್ಬರ ಮಧ್ಯೆ ಕಿರಿಕ್ ಆಗಿದೆ. ‘ಬಾಯಿ ಮುಚ್ಕೊಂಡು ಕೂತ್ಗೊ’ ಎಂದು ಕಾವ್ಯಾಗೆ ಧ್ರುವಂತ್ ಅವಾಜ್ ಹಾಕಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಕೊಪ್ಪಳ ಗ್ಯಾಂಗ್‌ ರೇಪ್‌ ಪ್ರಕರಣಕ್ಕೆ ಟ್ವಿಸ್ಟ್: ತಾಲೂಕು ವೈದ್ಯಾಧಿಕಾರಿ ವಿರುದ್ಧವೇ ದಾಖಲಾಯ್ತು ಎಫ್​ಐಆರ್! – Kannada News | Koppal women harassment Case Takes Twist: FIR Filed Against Taluk Medical Officer for Alleged Evidence Tampering

ಕೊಪ್ಪಳ, ಜನವರಿ 1: ಕೊಪ್ಪಳ (Koppal) ಜಿಲ್ಲೆ ಯಲಬುರ್ಗಾದ ಮದ್ಲೂರಿನಲ್ಲಿ ನವೆಂಬರ್​​ನಲ್ಲಿ ನಡೆದಿದ್ದ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಈಗ ಮತ್ತೆ ಮುನ್ನೆಲೆಗೆ ಬಂದಿದೆ. ಕೃತ್ಯ ನಡೆದ ಕೆಲವೇ ಗಂಟೆಗಳಲ್ಲಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದರೂ, ತಾಲೂಕು ವೈದ್ಯಾಧಿಕಾರಿಯು ಅತ್ಯಾಚಾರಿಗಳನ್ನು ರಕ್ಷಿಸಲು ಯತ್ನಿಸಿರುವುದು ಗೊತ್ತಾಗಿದೆ. ಸದ್ಯ ತಾಲೂಕು ವೈದ್ಯಾಧಿಕಾರಿ ವಿರುದ್ಧವೂ ಪೊಲೀಸರು ಎಫ್​ಐಆರ್ ದಾಖಲಿಸಿದ್ದಾರೆ. ಯಲಬುರ್ಗಾ ತಾಲೂಕು ಆಸ್ಪತ್ರೆ ವೈದ್ಯಾಧಿಕಾರಿ ಡಾ. ಶಿವಕುಮಾರ್ ಸಾಕ್ಷಿ ನಾಶಪಡಿಸಿದ್ದಾರೆಂಬ ಆರೋಪ ಕೇಳಿ ಬಂದಿದೆ. ಹೀಗಾಗಿ ಶಿವಕುಮಾರ್ ವಿರುದ್ಧ ಯಲಬುರ್ಗಾ ಸಿಪಿಐ ಮೌನೇಶ್ವರ್‌ ಮಾಲಿಪಾಟೀಲ್ ಬಿಎನ್​ಎಸ್ 238 (ಬಿ)ಅಡಿ ಪ್ರಕರಣ ದಾಖಲಿಸಿದ್ದಾರೆ.

ಗ್ಯಾಂಗ್‌ ರೇಪ್‌ ಕೇಸ್‌ನಲ್ಲಿ ವೈದ್ಯಾಧಿಕಾರಿ ನಿರ್ಲಕ್ಷ್ಯತೆ ಮೇಲುನೋಟಕ್ಕೆ ಕಾಣಿಸಿದೆ. ಅತ್ಯಾಚಾರ ಪ್ರಕರಣ ಸಂಬಂಧ ಪೊಲೀಸರು ಸಂಗ್ರಹಿಸಿದ್ದ ವಸ್ತುಗಳ ಮೇಲೆ ಡಾಕ್ಟರ್‌ ನೆರವಿನಿಂದಲೇ ಸಿಬ್ಬಂದಿ ಸಹಿ ಮಾಡಿದ್ದಾರೆ. ಅಲ್ಲದೇ, ಆರೋಪಿಗಳಿಂದ ಸಂಗ್ರಹಿಸಿದ 16 ವಸ್ತುಗಳು ಹಾಗೂ ಡಿಎನ್‌ಎ ಸಾಕ್ಷಿಗಳನ್ನು ಸಿಗದಂತೆ ಮಾಡಿದ್ದಾರೆ. ಆ ಮೂಲಕ ಆರೋಪಿಗಳಿಗೆ ನೆರವಾಗಿದ್ದಾರೆ ಎಂದು ಆರೋಪಿಸಲಾಗಿದೆ. ಪೊಲೀಸರು ಕೇಳಿದರೆ, ಉದ್ಧಟತನದಿಂದ ವರ್ತಿಸಿದ್ದಾರೆ ಎಂಬುದನ್ನೂ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಕೊಪ್ಪಳ ಗ್ಯಾಂಗ್​ರೇಪ್ ಪ್ರಕರಣದ ಹಿನ್ನೆಲೆ

ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕಿನ ಮದ್ಲೂರ ಗ್ರಾಮದ ಬಳಿ 39 ವರ್ಷದ ಮಹಿಳೆ ಮೇಲೆ ನವೆಂಬರ್ 17 ರ ಸಂಜೆ ಸಾಮೂಹಿಕ ಅತ್ಯಾಚಾರ ನಡೆದಿತ್ತು. ಹೊಸಪೇಟೆಯಿಂದ ಕುಷ್ಟಗಿಗೆ ತಮ್ಮ ಪರಿಚದವರ ಬಳಿ ಹಣ ತಗೆದುಕೊಂಡು ಹೋಗಲು ಮಹಿಳೆ ಬಂದಿದ್ದರು. ಆದರೆ ಅಲ್ಲಿಂದ ಆ ಮಹಿಳೆಯನ್ನು ಕರೆದುಕೊಂಡ ಹೋದ ನಾಲ್ವರು ಕಿರಾತಕರು, ಮತ್ತು ಬರಿಸುವ ಜ್ಯೂಸ್ ಕುಡಿಸಿ ಅತ್ಯಾಚಾರ ಎಸಗಿದ್ದರು. ಕೃತ್ಯದ ಸಂಬಂಧ ಮಹಿಳೆಯು ಪರಿಚಯಸ್ಥ ಲಕ್ಷ್ಮಣ ಎಂಬಾತ ಸೇರಿ ನಾಲ್ವರ ವಿರುದ್ದ ಯಲಬುರ್ಗಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಕುಷ್ಟಗಿ ಹಾಗೂ ಮದ್ಲೂರ ಸೀಮಾದ ಪಾಳು ಬಿದ್ದ ಮನೆಯಲ್ಲಿ ಯಾವುದೋ ಜ್ಯೂಸ್ ಕುಡಿಸಿ ಅತ್ಯಾಚಾರ ಮಾಡಿದ್ದಾರೆಂದು ದೂರಿನಲ್ಲಿ ಉಲ್ಲೇಖಿಸಿದ್ದರು. ಈ ಘಟನೆ ರಾಜ್ಯಾದ್ಯಂತ ವ್ಯಾಪಕ ಚರ್ಚೆಗೆ ಗ್ರಾಸವಾಗಿತ್ತು.

ದೂರು ದಾಖಲಾದ ಬಳಿಕ ಕೊಪ್ಪಳ ಎಸ್​​ಪಿ ಮೂರು ತಂಡಗಳನ್ನು ರಚನೆ ಮಾಡಿ, ಕೆಲವೇ ಗಂಟೆಗಳಲ್ಲಿ ಆರೋಪಿಗಳಾದ ಲಕ್ಷ್ಮಣ, ಬಸವರಾಜ್, ಶಿವಕುಮಾರ್ ಹಾಗೂ ಭೀಮಪ್ಪರನ್ನು ಬಂಧಿಸಿದ್ದರು. ಲಕ್ಷ್ಮಣ ಹಾಗೂ ಬಸವರಾಜ್ ಮೂಲತಃ ಗದಗ ಜಿಲ್ಲೆಯ ರೋಣ ತಾಲೂಕಿನ ಅಸೂಟಿ ಗ್ರಾಮದವರು. ಭೀಮಪ್ಪ ಹಾಗೂ ಶಶಿಕುಮಾರ್ ಯಲಬುರ್ಗಾ ತಾಲೂಕಿನ ಹನುಮಾಪೂರ ಗ್ರಾಮದವರು. ನಂತರ ಬಂಧಿತರು ಜೈಲುಪಾಲಾಗಿದ್ದರು.

ಇದನ್ನೂ ಓದಿ: ಕೊಪ್ಪಳ: ಯಲಬುರ್ಗಾದಲ್ಲಿ ಮಹಿಳೆಗೆ ಮದ್ಯ ಸೇವನೆ ಮಾಡಿಸಿ ನಾಲ್ವರಿಂದ ಅತ್ಯಾಚಾರ

ಸದ್ಯ, ತಾಲೂಕು ವೈದ್ಯಾಧಿಕಾರಿ ಶಿವಕುಮಾರ್ ಸಾಕ್ಷ್ಯ ನಾಶಕ್ಕೆ ಮುಂದಾಗಿರುವುದರಿಂದ ಪ್ರಕರಣ ಮತ್ತೆ ಮುನ್ನೆಲೆಗೆ ಬಂದಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Bengaluru Air Quality: ಹೊಸ ವರ್ಷಕ್ಕೆ ರಾಜ್ಯದ ಜನರಿಗೆ ಶಾಕ್​​​ ಕೊಟ್ಟ ಗಾಳಿ ಗುಣಮಟ್ಟ, ಈ ಜಿಲ್ಲೆಗಳಲ್ಲಿ ಎಚ್ಚರವಹಿಸಲು ಸೂಚನೆ – Kannada News | Poor Air Quality in Karnataka: Bengaluru AQI 168, Health Risks and Precautions

ಬೆಂಗಳೂರು, ಜ.1: ಹೊಸ ವರ್ಷದ ಮೊದಲು ದಿನವೇ ರಾಜ್ಯದಲ್ಲಿ ಗಾಳಿ ಗುಣಮಟ್ಟ (Karnataka air quality) ತುಂಬಾ ಹದಗೆಟ್ಟಿದೆ. ರಾಜ್ಯದಲ್ಲಿ ವಾಯು ಗುಣಮಟ್ಟ ಮಧ್ಯಮದಿಂದ ಕಳಪೆಯವರೆಗೆ ಇರಲಿದೆ ಎಂದು ಹೇಳಲಾಗಿದೆ. , ಹಲವಾರು ಪ್ರಮುಖ ನಗರಗಳು ಹೆಚ್ಚಿನ ಮಾಲಿನ್ಯ ಮಟ್ಟವನ್ನು ಅನುಭವಿಸುತ್ತಿವೆ ಎಂದು ಹೇಳಲಾಗಿದೆ. ಬೆಂಗಳೂರಿನಲ್ಲಿ ಪ್ರಸ್ತುತ ಗಾಳಿಯ ಗುಣಮಟ್ಟ ಕಳಪೆಯಾಗಿದ್ದು, AQI ಸರಿಸುಮಾರು 150–168 ರಷ್ಟಿದೆ . ಹಿರಿಯರು ಹಾಗೂ ಮಕ್ಕಳ ಮೇಲೆ ಇದರ ಪರಿಣಾಮ ಹೆಚ್ಚಾಗಲಿದೆ. ಅವರು ಹೆಚ್ಚಿನ ಕಾಳಜಿಯನ್ನು ವಹಿಸಬೇಕು ಎಂದು ಸಲಹೆ ನೀಡಲಾಗಿದೆ. ಗಂಟಲಿನ ಕಿರಿಕಿರಿ ಮತ್ತು ಉಸಿರಾಟದ ತೊಂದರೆಯನ್ನು ಅನುಭವಿಸಬಹುದು. ಯಾದಗಿರಿಯಲ್ಲಿ ಇಂದಿನ ಗಾಳಿಯ ಗುಣಮಟ್ಟ 168 ಇರಲಿದೆ. ತುಮಕೂರಿನಲ್ಲಿ ಗಾಳಿಯ ಗುಣಮಟ್ಟ 167 ಇರಲಿದೆ. ಮಂಗಳೂರಿನಲ್ಲಿ ಗಾಳಿಯ ಗುಣಮಟ್ಟ 165 ಇದೆ. ಬೀದರ್​​​ನಲ್ಲಿ 189 ಗಾಳಿಯ ಗುಣಮಟ್ಟ ಇದೆ ಎಂದು ಹೇಳಲಾಗಿದೆ. ಇದು ರಾಜ್ಯದಲ್ಲಿರುವ ಕಳಪೆ ಗಾಳಿಯ ಗುಣಮಟ್ಟ ಎಂದು ಹೇಳಲಾಗಿದೆ.

ಇನ್ನು ವಿಜಯಪುರದಲ್ಲಿ ಗಾಳಿಯ ಗುಣಮಟ್ಟ 68 ಇದೆ. ಬಾಗಲಕೋಟೆಯಲ್ಲಿ ಗಾಳಿಯ ಗುಣಮಟ್ಟ 73 ಇದೆ. ಶಿವಮೊಗ್ಗದಲ್ಲೂ ಕೂಡ ಗಾಳಿಯ ಮಟ್ಟ ಮಧ್ಯಮವಾಗಿದು, ಸೂಚಂಕ್ಯ 74 ಇದೆ. ಚಾಮರಾಜನಗರದಲ್ಲಿ 76 ಗಾಳಿ ಗುಣಮಟ್ಟ ಇದೆ. ಇದು ಅತ್ಯಂತ ಮಧ್ಯಮ ಗಾಳಿಮಟ್ಟದ ಸೂಚಂಕ್ಯವಾಗಿದೆ. ಇಂದು PM2.5: 73 µg/m³ ಇರಲಿದೆ. ಹಾಗೂ PM10: 99 µg/m³ ಇರಲಿದೆ. ಎಲ್ಲ ಜಿಲ್ಲೆಗಳು WHO ಶಿಫಾರಸು ಮಾಡಿದ ಮಾನದಂಡಗಳನ್ನು ಅನುಸರಿಸುವಂತೆ ಸಲಹೆ ನೀಡಲಾಗಿದೆ. ಮಕ್ಕಳು, ವೃದ್ಧರು ಮತ್ತು ಉಸಿರಾಟದ ಸಮಸ್ಯೆ ಇರುವವರು ಹೊರಗೆ ಹೋಗದಂತೆ ಎಚ್ಚರಿಕೆ ನೀಡಲಾಗಿದೆ. N95 ಮಾಸ್ಕ್ ಧರಿಸುವಂತೆ ಸಲಹೆ ನೀಡಿದ್ದಾರೆ.

ಇದನ್ನೂ ಓದಿ: ಕರ್ನಾಟಕ ಹವಾಮಾನ ವರದಿ: ಬೆಂಗಳೂರು, ದಕ್ಷಿಣ ಒಳನಾಡಿನಲ್ಲಿ ಭಾಗಶಃ ಮೋಡ ಕವಿದ ವಾತಾವರಣ

ಇಂದಿನ ರಾಜ್ಯದ ಗಾಳಿಯ ಗುಣಮಟ್ಟ:

ಬೆಂಗಳೂರು: 168

ಮಂಗಳೂರು: 165

ಮೈಸೂರು: 146

ಬೆಳಗಾವಿ:157

ಕಲಬುರ್ಗಿ: 155

ಶಿವಮೊಗ್ಗ: 182

ಬಳ್ಳಾರಿ: 199

ಹುಬ್ಬಳ್ಳಿ: 106

ಉಡುಪಿ: 160

ವಿಜಯಪುರ: 90

ಗಾಳಿ ಗುಣಮಟ್ಟ ತಿಳಿಯುವುದು ಹೇಗೆ?

ಉತ್ತಮ- 0-50

ಮಧ್ಯಮ – 50-100

ಕಳಪೆ – 100-150

ಅನಾರೋಗ್ಯಕರ – 150-200

ಗಂಭೀರ – 200 – 300

ಅಪಾಯಕಾರಿ – 300 -500+

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

29 ವರ್ಷಗಳ ಹಿಂದೆ ಮೃತಪಟ್ಟಿದ್ದ ವ್ಯಕ್ತಿ ಎಸ್​ಐಆರ್​ಗಾಗಿ ಬದುಕಿ ಬಂದ್ರು – Kannada News | Declared Dead Decades Ago, Man Reappears in UP Home After 29 Years

ಲಕ್ನೋ, ಜನವರಿ 01: ಸುಮಾರು ಮೂರು ದಶಕಗಳ ಹಿಂದೆಯೇ ಸತ್ತಿದ್ದಾರೆಂದು ಭಾವಿಸಲಾದ ಹಿರಿಯ ವ್ಯಕ್ತಿಯೊಬ್ಬರು ಮನೆಗೆ ಬಂದಾಗ ಸದಸ್ಯರ ಸಂತೋಷಕ್ಕೆ ಪಾರವೇ ಇರಲಿಲ್ಲ. ಅವರು ಮನೆ ಬಿಟ್ಟು ಹೋದಾಗಿನಿಂದ ಅವರನ್ನು ಹುಡುಕದೇ ಇರುವ ಸ್ಥಳವೇ ಇರಲಿಲ್ಲ, ಕೊನೆಗೆ ಮೃತಪಟ್ಟಿರಬಹುದು ಎಂದು ಭಾವಿಸಿ ಕೈ ಚೆಲ್ಲಿದ್ದರು. ಈಗ ದೇಶಾದ್ಯಂತ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ(SIR)ಗೆ ದಾಖಲೆಗಳನ್ನು ಪಡೆಯಲು ಊರಿಗೆ ಮರಳಿದಾಗ ಅವರನ್ನು ಕಂಡು ಕುಟುಂಬ ಸದಸ್ಯರು ಆಶ್ಚರ್ಯಚಕಿತರಾದರು.

ಉತ್ತರ ಪ್ರದೇಶದ ಮುಜಫರ್‌ನಗರ ಜಿಲ್ಲೆಯಲ್ಲಿ ಭಾವನಾತ್ಮಕ ವಾತಾವರಣ ನಿರ್ಮಾಣವಾಗಿತ್ತು. ಖತೌಲಿ ಪಟ್ಟಣದ ಮೊಹಲ್ಲಾ ಬಲ್ಕಾರಾಂ ನಿವಾಸಿ ಶರೀಫ್ 28 ವರ್ಷಗಳ ನಂತರ ತಮ್ಮ ಕುಟುಂಬದೊಂದಿಗೆ ಮತ್ತೆ ಒಂದಾದರು. ಅವರನ್ನು ನೋಡಿದ ಸಂಬಂಧಿಕರು ಮತ್ತು ಸ್ಥಳೀಯರು ಕಣ್ಣೀರು ಹಾಕಿದರು.ಎಸ್‌ಐಆರ್ (ವಿಶೇಷ ತೀವ್ರ ಪರಿಷ್ಕರಣೆ) ಪ್ರಕ್ರಿಯೆಗೆ ಅಗತ್ಯವಾದ ದಾಖಲೆಗಳನ್ನು ಸಲ್ಲಿಸುವ ಸಮಯದಲ್ಲಿ ಈ ಪುನರ್ಮಿಲನ ನಡೆಯಿತು.

1997 ರಲ್ಲಿ ಪಶ್ಚಿಮ ಬಂಗಾಳಕ್ಕೆ ಸ್ಥಳಾಂತರಗೊಂಡಿದ್ದರು
ಷರೀಫ್ ಅವರ ಮೊದಲ ಪತ್ನಿ 1997 ರಲ್ಲಿ ನಿಧನರಾದರು. ನಂತರ ಅವರು ಮರುಮದುವೆಯಾಗಿ ತಮ್ಮ ಹೊಸ ಪತ್ನಿಯೊಂದಿಗೆ ಪಶ್ಚಿಮ ಬಂಗಾಳಕ್ಕೆ ತೆರಳಿದರು. ಸ್ವಲ್ಪ ಸಮಯದವರೆಗೆ, ಅವರು ಲ್ಯಾಂಡ್​ಲೈನ್ ಮೂಲಕ ಕುಟುಂಬದವರೊಂದಿಗೆ ಸಂಪರ್ಕ ನಡೆಸುತ್ತಿದ್ದರು. ಕಾಲ ಕ್ರಮೇಣ ಕರೆ ಮಾಡುವುದನ್ನೇ ನಿಲ್ಲಿಸಿದರು. ಆಗ ಕುಟುಂಬ ಸದಸ್ಯರು ಅವರನ್ನು ಹುಡುಕಿದ್ದಾರೆ. ಎಲ್ಲಿಯೂ ಅವರು ಪತ್ತೆಯಾಗಿರಲಿಲ್ಲ.

ಪಶ್ಚಿಮ ಬಂಗಾಳದಲ್ಲಿ ಅವರು ನೀಡಿದ ವಿಳಾಸದಲ್ಲಿ ಕುಟುಂಬವು ಅವರನ್ನು ಪತ್ತೆಹಚ್ಚಲು ಹಲವಾರು ಬಾರಿ ಪ್ರಯತ್ನಿಸಿತು, ಆದರೆ ಯಾವುದೇ ಸುಳಿವು ಸಿಗಲಿಲ್ಲ. ಅಂತಿಮವಾಗಿ, ಷರೀಫ್ ನಮ್ಮೊಂದಿಗೆ ಇಲ್ಲ ಎಂದು ಕುಟುಂಬ ಒಪ್ಪಿಕೊಂಡರು.

ಮತ್ತಷ್ಟು ಓದಿ: ಮತದಾರರ ಪಟ್ಟಿ ತೀವ್ರ ಪರಿಷ್ಕರಣೆ ಮುಂದೂಡುವಂತೆ ಕೋರಿ ಸುಪ್ರೀಂ ಮೆಟ್ಟಿಲೇರಿದ ಕೇರಳ ಸರ್ಕಾರ

ವಿಶೇಷ ಪಟ್ಟಿ ಪರಿಶೀಲನೆಯೇ ಅವರು ಊರಿಗೆ ಮರಳಲು ಕಾರಣ
SIR ಪ್ರಕ್ರಿಯೆಗೆ ಅಗತ್ಯವಾದ ದಾಖಲೆಗಳನ್ನು ಸಂಗ್ರಹಿಸಲು ಷರೀಫ್ ಎರಡು ದಿನಗಳ ಹಿಂದೆ ಖತೌಲಿಯಲ್ಲಿರುವ ತಮ್ಮ ಪೂರ್ವಜರ ಮನೆಗೆ ಮರಳಿದರು. 28 ವರ್ಷಗಳ ನಂತರ ಅವರ ಹಠಾತ್ ಆಗಮನವು ಅವರ ಕುಟುಂಬ, ನೆರೆಹೊರೆಯವರು ಮತ್ತು ಸಂಬಂಧಿಕರನ್ನು ಆಶ್ಚರ್ಯಗೊಳಿಸಿತು ಮತ್ತು ಸಂತೋಷಪಡಿಸಿತು. ವರ್ಷಗಳಲ್ಲಿ ಅವರ ಅನೇಕ ನಿಕಟ ಸಂಬಂಧಿಗಳು ನಿಧನರಾಗಿದ್ದಾರೆ ಎಂದು ಷರೀಫ್‌ಗೆ ತಿಳಿದುಬಂದಿದೆ.

ಷರೀಫ್ ಅವರ ಸೋದರಳಿಯ ಮೊಹಮ್ಮದ್ ಅಕ್ಲಿಮ್, ಕುಟುಂಬವು ಖರಗ್‌ಪುರ ಮತ್ತು ಅಸನ್ಸೋಲ್ ಸೇರಿದಂತೆ ಪಶ್ಚಿಮ ಬಂಗಾಳದ ವಿವಿಧ ಸ್ಥಳಗಳಲ್ಲಿ 15-20 ವರ್ಷಗಳಿಂದ ಅವರನ್ನು ಹುಡುಕಿದೆ, ಆದರೆ ಅವರ ಯಾವುದೇ ಸುಳಿವು ಸಿಗಲಿಲ್ಲ ಎಂದು ಹೇಳಿದರು. ಷರೀಫ್ ಹಿಂತಿರುಗಿದ್ದಾರೆ ಎಂಬ ಸುದ್ದಿ ಬಂದಾಗ, ಆರಂಭದಲ್ಲಿ ಯಾರೂ ಅದನ್ನು ನಂಬಲಿಲ್ಲ. ದೂರದ ಸಂಬಂಧಿಕರು ವೀಡಿಯೊ ಕರೆಯ ಮೂಲಕ ಅವರೊಂದಿಗೆ ಮಾತನಾಡಿದ್ದಾರೆ.

ಸರ್ಕಾರಿ ದಾಖಲೆಗಳ ಅಗತ್ಯವಿದ್ದ ಕಾರಣ ಮಾತ್ರ ಅವರು ಹಿಂತಿರುಗಿದ್ದಾರೆ, ಅವರು ತಮ್ಮ ಊರಿಗೆ ಮರಳಲಿದ್ದಾರೆ ಎಂದು ಅವರು ಹೇಳಿದರು. ವರದಿಗಳ ಪ್ರಕಾರ, ಅಗತ್ಯ ದಾಖಲೆಗಳನ್ನು ಪೂರ್ಣಗೊಳಿಸಿದ ನಂತರ ಮತ್ತು ಸಂಬಂಧಿಕರನ್ನು ಭೇಟಿಯಾದ ನಂತರ, ಷರೀಫ್ ಪಶ್ಚಿಮ ಬಂಗಾಳಕ್ಕೆ ಮರಳಿದ್ದಾರೆ, ಅಲ್ಲಿ ಅವರು ಕಳೆದ ಮೂರು ದಶಕಗಳಿಂದ ತಮ್ಮ ಪತ್ನಿ ಮತ್ತು ಮಕ್ಕಳೊಂದಿಗೆ ವಾಸಿಸುತ್ತಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಗಿಲ್ಲಿಗೆ ‘ಲೋ*ರ್’, ಥರ್ಡ್​​ಕ್ಲಾಸ್ ಪದ ಬಳಕೆ ಮಾಡಿದ ಅಶ್ವಿನಿ; ಮತ್ತೆ ಬಂತು ಹಳೇ ವರ್ಷನ್ – Kannada News | Ashwini Gowda Used Lofer Third class words in Bigg Boss Ashwini Old Version Returns

ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ (BBK 12) ಅಶ್ವಿನಿ ಗೌಡ ಅವರ ಹೊಸ ವರ್ಷನ್ ಇತ್ತೀಚೆಗಷ್ಟೇ ಆರಂಭ ಆಗಿತ್ತು. ಮೊದಲು ಕೂಗಾಟ, ಅವಾಚ್ಯ ಪದ ಬಳಕೆ ಮಾಡಿಕೊಂಡು ಓಡಾಡುತ್ತಿದ್ದ ಅವರು ನಂತರ ಬದಲಾದರು. ಇತ್ತೀಚೆಗೆ ಅವರು ಬಹುತೇಕ ಸಂದರ್ಭದಲ್ಲಿ ಮೌನವಾಗೇ ಇರುತ್ತಿದ್ದರು. ಯಾರೇ ಎಷ್ಟೇ ಟ್ರಿಗರ್ ಮಾಡಿದರೂ ಅವರು ರೇಗಾಡುತ್ತಾ ಇರಲಿಲ್ಲ. ತಾಳ್ಮೆಯಿಂದ ವರ್ತಿಸುತ್ತಿದ್ದರು. ಆದರೆ, ಈಗ ಅವರ ಹಳೆಯ ವರ್ಷನ್ ಮತ್ತೆ ಆರಂಭ ಆಗಿದೆ. ಅವರು ಗಿಲ್ಲಿಗೆ ಬಾಯಿಗೆ ಬಂದಂತೆ ಬೈದಿದ್ದಾರೆ.

ಧ್ರುವಂತ್ ಹಾಗೂ ಅಶ್ವಿನಿ ಗೌಡ ಒಂದೇ ಕಡೆ ಕುಳಿತಿದ್ದರು. ಅಲ್ಲಿಯೇ ಗಿಲ್ಲಿ ಕೂಡ ಇದ್ದರು. ಇಬ್ಬರ ಮಧ್ಯೆ ಮಾತಿನ ಚಕಮಕಿ ಶುರುವಾಗಿದೆ. ಇಬ್ಬರೂ ಕಿರಿಕ್ ಮಾಡಿಕೊಂಡಿದ್ದಾರೆ. ಗಿಲ್ಲಿ ಮಾತನಾಡಿದರು ಎಂದು ಅಶ್ವಿನಿ, ಅಶ್ವಿನಿ ಮಾತನಾಡಿದರು ಎಂದು ಗಿಲ್ಲಿ, ಹೀಗೆ, ಮಾತಿಗೆ ಮಾತು ಬೆಳೆದಿದೆ. ತಾಳ್ಮೆ ಕಳೆದುಕೊಂಡ ಅಶ್ವಿನಿ ಅವರು ಗಿಲ್ಲಿಗೆ ‘ಲೋಫರ್’ ಎಂದೆಲ್ಲ ಬೈದಿದ್ದಾರೆ.

ಅಶ್ವಿನಿ ವಿರುದ್ಧ ಏಕವಚನ ಪದ ಬಳಕೆ ಮಾಡಿದರು ಗಿಲ್ಲಿ. ಇದರಿಂದ ಸಿಟ್ಟಾದ ಅಶ್ವಿನಿ, ‘ಗಿಲ್ಲಿ ನಿಂಗೆ ಬೆನ್ನುಮೂಳೆ ಇಲ್ಲ. ನೀನೊಬ್ಬ ಲೋಫರ್. ಥರ್ಡ್​ ಕ್ಲಾಸ್ ನೀನು’ ಎಂದು ಕೂಗಾಡಿದ್ದಾರೆ. ಈ ವಿಷಯ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಮತ್ತೆ ಹಳೆಯ ವರ್ಷನ್ ಮರಳಿದೆ ಎಂದು ಅನೇಕರು ಹೇಳಿದ್ದಾರೆ. ಅಶ್ವಿನಿ ಗೌಡ ಅವರು ಈ ಮೊದಲು ಬಳಕೆ ಮಾಡಿದ ಪದಗಳ ಆಡಿಯೋ ಹಾಕಲಾಗಿತ್ತು. ಅಲ್ಲಿಂದ ಅವರು ಬದಲಾಗಿದ್ದರು. ಈಗ ಮತ್ತೆ ಕೂಗಾಡಿ ಸುದ್ದಿಯಾಗಿದ್ದಾರೆ.

ಇದನ್ನೂ ಓದಿ: ಬಿಗ್ ಬಾಸ್ ಆದೇಶಕ್ಕೆ ನಲುಗಿ ಹೋದ ಗಿಲ್ಲಿ ನಟ; ಇದಕ್ಕೆ ಕಾರಣ ರಘು-ಸೂರಜ್?

‘ನಿಮ್ಮ ಜಗಳದಿಂದ ಇಡೀ ಮನೆಗೆ ಗಾರ್ಡನ್​​ಗೆ ಬರೋಕೆ ಆಗ್ತಾ ಇಲ್ಲ. ಟಾಕ್ಸಿಕ್ ಎನಿಸುತ್ತಿದೆ. ದಯವಿಟ್ಟು ನಿಲ್ಲಿಸಿ. ಈ ರೀತಿಯ ವಿಷಯಗಳನ್ನು ಮಾತನಾಡಲು ಸುದೀಪ್ ಅವರು ಬರಬೇಕಾ’ ಎಂದು ಸ್ಪಂದನಾ ಅವರು ಕೇಳಿಕೊಂಡರು. ಆದಾಗ್ಯೂ ಧ್ರುವಂತ್ ಮಾತು ನಿಲ್ಲಿಸಿಲ್ಲ. ‘ಕೇಳಿ ಕೇಳಿ ಇಸ್ಕೋತೀದಾನೆ, ನಾನೇನು ಮಾಡಲಿ’ ಎಂದು ಗಿಲ್ಲಿ ಪ್ರಶ್ನೆ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ದೊಡ್ಡಬಳ್ಳಾಪುರ: ಅಕ್ರಮವಾಗಿ ಪಾರ್ಟಿ ಮಾಡುತ್ತಿದ್ದವರಿಗೆ ಶಾಕ್, ಫಾರ್ಮ್​ಹೌಸ್ ಮೇಲೆ ದಾಳಿ – Kannada News | Doddaballapur: Police Raid Farmhouse Hosting Illegal New year Party

ದೇವನಹಳ್ಳಿ, ಜನವರಿ 1: ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲ್ಲೂಕಿನ ಹೆಗ್ಗಡಹಳ್ಳಿಯ ಫಾರ್ಮ್‌ಹೌಸ್ ಒಂದರಲ್ಲಿ ಅನುಮತಿ ಪಡೆಯದೆ ಅಕ್ರಮವಾಗಿ ನಡೆಯುತ್ತಿದ್ದ ಹೊಸ ವರ್ಷಾಚರಣೆಯ ಪಾರ್ಟಿ ಮೇಲೆ ಪೊಲೀಸರು ಮಧ್ಯರಾತ್ರಿ ದಾಳಿ ನಡೆಸಿದ್ದಾರೆ. ಈ ಪಾರ್ಟಿಯಲ್ಲಿ ಸುಮಾರು 40-50 ಯುವಕರು ಭಾಗವಹಿಸಿದ್ದರು. ಅನುಮತಿ ಪಡೆಯದೆ ಜೋರಾದ ಸಂಗೀತ ಹಾಕಿ ಮೋಜು ಮಸ್ತಿ ಮಾಡಲಾಗುತ್ತಿತ್ತು. ಅತಿಯಾದ ಶಬ್ದ ಮಾಲಿನ್ಯದ ಬಗ್ಗೆ ಸ್ಥಳೀಯರು ದೂರು ನೀಡಿದ ಹಿನ್ನೆಲೆಯಲ್ಲಿ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಸಾದಿಕ್ ಪಾಷಾ ನೇತೃತ್ವದಲ್ಲಿ ಈ ದಾಳಿ ನಡೆದಿದೆ. ಪೊಲೀಸರು ಪಾರ್ಟಿಗೆ ಬ್ರೇಕ್ ಹಾಕಿ, ಸ್ಥಳದಲ್ಲಿದ್ದ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ. ಫಾರ್ಮ್‌ಹೌಸ್ ಮಾಲೀಕ ಮತ್ತು ಪಾರ್ಟಿ ಆಯೋಜಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಮಾರ್ಕ್’ ವೀಕ್ಷಿಸುವಾಗ ಕಿಚ್ಚನ ಎದುರೇ ಗಿಲ್ಲಿ ಗೆಲ್ಲಬೇಕು ಎಂದ ಫ್ಯಾನ್ಸ್; ಸುದೀಪ್ ರಿಯಾಕ್ಷನ್ ಏನು? – Kannada News | Kichcha Sudeep Ignores Gilli Must Win Chant ahead of Bigg Boss Kannada 12 Finale

ಕಿಚ್ಚ ಸುದೀಪ್ (Sudeep) ಅವರು ಕಳೆದ ಹಲವು ವರ್ಷಗಳಿಂದ ಬಿಗ್ ಬಾಸ್ ನಡೆಸಿಕೊಡುತ್ತಾ ಬರುತ್ತಿದ್ದಾರೆ. ಈಗಾಗಲೇ 11 ಸೀಸನ್ ಪೂರ್ಣಗೊಂಡಿದ್ದು, 12ನೇ ಸೀಸನ್ ನಡೆಯುತ್ತಿದೆ. ಅವರು ಒಮ್ಮೆ ವೇದಿಕೆ ಏರಿದರೆ ಮುಗಿಯಿತು, ಯಾರ ಪರವಾಗಿಯೂ ಬ್ಯಾಟ್ ಬೀಸೋದಿಲ್ಲ. ಅವರು ಎಷ್ಟೇ ಆಪ್ತರಾಗಿದ್ದರೂ ತಪ್ಪು ಮಾಡಿದಾಗ ಕ್ಲಾಸ್ ತೆಗೆದುಕೊಳ್ಳುತ್ತಾರೆ. ಈಗ ಸುದೀಪ್ ಎದುರು ‘ಗಿಲ್ಲಿ ಗೆಲ್ಲಬೇಕು’ ಎನ್ನುವ ಘೋಷಣೆ ಕೂಗಲಾಗಿದೆ.

ಸುದೀಪ್ ನಟನೆಯ ‘ಮಾರ್ಕ್’ ಸಿನಿಮಾ ಡಿಸೆಂಬರ್ 25ರಂದು ರಿಲೀಸ್ ಆಯಿತು. ಈ ಚಿತ್ರ ಉತ್ತಮ ಕಲೆಕ್ಷನ್ ಮಾಡುತ್ತಿದೆ. ಈ ಚಿತ್ರವನ್ನು ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ. ಇನ್ನೂ ಕೆಲವು ದಿನ ಸಿನಿಮಾ ಉತ್ತಮವಾಗಿ ಕಲೆಕ್ಷನ್ ಮಾಡುವ ಸಾಧ್ಯತೆ ಇದೆ. ಅವರು ಅಭಿಮಾನಿಗಳ ಜೊತೆ ಸಿನಿಮಾ ವೀಕ್ಷಿಸಿದ್ದಾರೆ. ಈ ವೇಳೆ ಅವರ ಎದುರು ‘ಗಿಲ್ಲಿ ಗೆಲ್ಲಬೇಕು’ ಎನ್ನುವ ಬೇಡಿಕೆ ಬಂದಿದೆ.

ಸುದೀಪ್ ಅವರನ್ನು ನೋಡಲು ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ನೆರೆದಿದ್ದರು. ಎಲ್ಲರೂ ಕಿಚ್ಚನ ಪರವಾಗಿ ಘೋಷಣೆಗಳನ್ನು ಕೂಗುತ್ತಾ ಇದ್ದರು. ಅಲ್ಲೋರ್ವ ‘ಅಣ್ಣ ಗಿಲ್ಲಿ ಗೆಲ್ಲಬೇಕು’ ಎಂದು ಕೂಗಿದ್ದಾನೆ. ಇದು ಕಿಚ್ಚನಿಗೂ ಕೇಳಿಸಿದೆ. ಕೇಳಿದರೂ ಅವರು ಕೇಳಿಸಿದಂತೆ ಇದ್ದಾರೆ. ಫಿನಾಲೆಗೆ ಕೆಲವೇ ವಾರ ಬಾಕಿದೆ. ಹೀಗಿರುವಾಗ ಅವರು ಇದಕ್ಕೆ ರಿಯಾಕ್ಟ್ ಮಾಡಿದರೆ ಬೇರೆಯದೇ ಅರ್ಥ ಪಡೆದುಕೊಳ್ಳುತ್ತದೆ. ಹೀಗಾಗಿ, ಸುದೀಪ್ ಈ ವಿಷಯದಲ್ಲಿ ಮೌನ ಕಾಪಾಡಿಕೊಂಡಿದ್ದಾರೆ.

ಈ ಬಾರಿ ಬಿಗ್ ಬಾಸ್​​​ನಲ್ಲಿ ಗಿಲ್ಲಿ ಹೆಚ್ಚು ಹೈಲೈಟ್ ಆಗಿ ಕಾಣಿಸುತ್ತಿದ್ದಾರೆ. ಇದಕ್ಕೆ ಕಾರಣ ಏನು ಎಂಬುದನ್ನು ಸುದೀಪ್ ಅವರು ಈ ಮೊದಲು ವಿವರಿಸಿದ್ದರು. ‘ಗಿಲ್ಲಿ ಉತ್ತಮವಾಗಿ ಆಡುತ್ತಿದ್ದಾರೆ, ಇಲ್ಲ ಎಂದು ಹೇಳಲ್ಲ. ಆದರೆ, ಉಳಿದ ಯಾರೊಬ್ಬರೂ ಉತ್ತಮ ಪ್ರದರ್ಶನ ನೀಡುತ್ತಿಲ್ಲ. ಹೀಗಾಗಿ ಒಬ್ಬರು ಹೈಲೈಟ್ ಆಗುತ್ತಿದ್ದಾರೆ’ ಎಂದಿದ್ದರು ಸುದೀಪ್.

ಇದನ್ನೂ ಓದಿ: ಅಭಿಮಾನಿಗಳ ಜೊತೆ ಸಿನಿಮಾ ನೋಡುತ್ತಿರುವ ಉದ್ದೇಶ ಏನು? ಸುದೀಪ್ ಉತ್ತರ

‘ಮಾರ್ಕ್’ ಸಿನಿಮಾ ಒಂದು ವಾರಕ್ಕೆ ಒಳ್ಳೆಯ ಗಳಿಕೆ ಮಾಡಿದೆ. ಚಿತ್ರದ ಕಲೆಕ್ಷನ್ 50 ಕೋಟಿ ರೂಪಾಯಿಯತ್ತ ಸಾಗುತ್ತಿದೆ. ಚಿತ್ರದ ಒಟ್ಟಾರೆ ಕಲೆಕ್ಷನ್ ಎಷ್ಟು ಕೋಟಿ ರೂಪಾಯಿ ಆಗುತ್ತದೆ ಎಂಬ ಕುತೂಹಲ ಮೂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link