ಬೆಂಗಳೂರು NIA ವಿಶೇಷ ನ್ಯಾಯಾಲಯದಿಂದ ಮಹತ್ವದ ತೀರ್ಪು: ಮಾನವ ಕಳ್ಳಸಾಗಣೆ ಜಾಲದ ನಾಲ್ವರಿಗೆ ಜೈಲು ಶಿಕ್ಷೆ!
ಬೆಂಗಳೂರು, ಏ.9: ಬೆಂಗಳೂರಿನ ಎನ್‌ಐಎ (NIA) ವಿಶೇಷ ನ್ಯಾಯಾಲಯವು ಅಂತರಾಷ್ಟ್ರೀಯ ಮಾನವ ಕಳ್ಳಸಾಗಣೆ ಜಾಲದಲ್ಲಿ ಭಾಗಿಯಾಗಿದ್ದ ನಾಲ್ವರು ಬಾಂಗ್ಲಾದೇಶಿ ಪ್ರಜೆಗಳಿಗೆ 3 ವರ್ಷಗಳ ಕಠಿಣ ಜೈಲು ಶಿಕ್ಷೆ (Rigorous Imprisonment) ಮತ್ತು ತಲಾ 20,000 ರೂ. ದಂಡ ವಿಧಿಸಿ ಆದೇಶಿಸಿದೆ. ಜಾಕಿರ್ ಖಾನ್, ಬಾದಲ್ ಹೌಲಾದರ್, ಕಬೀರ್ ತಾಲುಕ್ದಾರ್ ಮತ್ತು ಮೊಹಮ್ಮದ್ ಬಚ್ಚು ಘರಾಮಿ ದೋಷಿಗಳು ಎಂದು ಹೇಳಿದ್ದಾರೆ. ಇವರು ಬೆನಾಪೋಲ್ ಮತ್ತು ಅಖೌರಾ ಮೂಲಕ ಅಕ್ರಮವಾಗಿ ಭಾರತ ಪ್ರವೇಶಿಸಿದ್ದರು. ನಕಲಿ ಭಾರತೀಯ ಗುರುತಿನ ಚೀಟಿಗಳನ್ನು ಸೃಷ್ಟಿಸಿ…