Headlines

ಮುಂಬೈ ಸೆಷನ್ಸ್ ನ್ಯಾಯಾಲಯದಲ್ಲಿ ಭದ್ರತಾ ಲೋಪ: ಪೊಲೀಸ್ ಮೇಲೆಯೇ ಹಲ್ಲೆ ನಡೆಸಿ ವಿಚಾರಣಾಧೀನ ಆರೋಪಿ ಪರಾರಿ

ಮುಂಬೈ, ಏಪ್ರಿಲ್ 09: ನ್ಯಾಯಾಲಯದಲ್ಲಿ ಆರೋಪಿಯೊಬ್ಬ ಪೊಲೀಸ್(Police) ಅಧಿಕಾರಿ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿರುವ ಘಟನೆ ಮುಂಬೈನಲ್ಲಿ ನಡೆದಿದೆ. ಕೊಲೆ ಯತ್ನದ ಪ್ರಕರಣದ ವಿಚಾರಣಾಧೀನ ಆರೋಪಿ ಹ್ಯಾರಿಸನ್ ಆಂಥೋನಿ ಜೋಸೆಫ್,ಪೊಲೀಸ್ ಕಾನ್ಸ್‌ಟೇಬಲ್ ಮೇಲೆ ಹಲ್ಲೆ ನಡೆಸಿ ಕೈಕೋಳ ಸಮೇತ ಪರಾರಿಯಾಗಿದ್ದು, ಪೊಲೀಸರು ಆರೋಪಿಗಾಗಿ ತೀವ್ರ ಶೋಧ ನಡೆಸುತ್ತಿದ್ದಾರೆ. 42 ವರ್ಷದ ಹ್ಯಾರಿಸನ್ ಆಂಥೋನಿ ಜೋಸೆಫ್ ವಿರುದ್ಧ MCOCA ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ಆತ ಮಾರ್ಚ್ 2024ರಲ್ಲಿ ವ್ಯಕ್ತಿಯೊಬ್ಬರ ಮೇಲೆ ಗುಂಡು ಹಾರಿಸಿದ ಆರೋಪ ಎದುರಿಸುತ್ತಿದ್ದಾನೆ. ಆರ್ಥರ್ ರಸ್ತೆ…

Read More

‘ಕರ್ಣ’ ಧಾರಾವಾಹಿಯಲ್ಲಿ ಮಹಾ ತಿರುವು; ಕರ್ಣನ ತಂದೆ ರಿವೀಲ್

‘ಕರ್ಣ’ ಧಾರಾವಾಹಿ ಹೊಸ ಹೊಸ ತಿರುವುಗಳನ್ನು ಪಡೆದುಕೊಂಡು ಸಾಗುತ್ತಿದೆ. ಈ ಧಾರಾವಾಹಿ ಟಿಆರ್​​​ಪಿಯಲ್ಲೂ ನಂಬರ್ 1 ಸ್ಥಾನದಲ್ಲಿ ಇದೆ. ಹೀಗಿರುವಾಗಲೇ ‘ಕರ್ಣ’ ಧಾರಾವಾಹಿಯಲ್ಲಿ ಒಂದು ಕಟು ಸತ್ಯವೂ ರಿವೀಲ್ ಆಗಿದೆ ಎನ್ನಬಹುದು. ಕರ್ಣನು ರಮೇಶ್ ಮಗ ಎಂಬ ಕಟು ಸತ್ಯವನ್ನು ರಮೇಶ್ ತಂಗಿ ತಾರಾ ರಿವೀಲ್ ಮಾಡಿದ್ದಾಳೆ. ಇದು ಶಾಕಿಂಗ್ ಎನಿಸಿದೆ. ಇದು ಧಾರಾವಾಹಿಯಲ್ಲಿ ದೊಡ್ಡ ತಿರುವಿಗೆ ಕಾರಣ ಆಗಬಹುದು ಎಂದು ಊಹಿಸಲಾಗಿದೆ. ಮುಂದಿನ ಕಥೆ ಮತ್ತಷ್ಟು ರೋಚಕವಾಗಿದೆ. ‘ಕರ್ಣ’ ಧಾರಾವಾಹಿಯಲ್ಲಿ ಹಲವು ತಿರುವುಗಳು ಎದುರಾಗಿವೆ. ಇದರಲ್ಲಿ…

Read More

ಒಂದು ರನ್ ಸೋಲುಗಳೊಂದಿಗೆ ಹೀಗೊಂದು ದಾಖಲೆ ಬರೆದ ಡೆಲ್ಲಿ ಕ್ಯಾಪಿಟಲ್ಸ್

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನ 14ನೇ ಪಂದ್ಯವು ರಣರೋಚಕ ಹೋರಾಟಕ್ಕೆ ಸಾಕ್ಷಿಯಾಗಿತ್ತು. ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ಗುಜರಾತ್ ಟೈಟಾನ್ಸ್ (GT) ವಿರುದ್ಧದ ಈ ಪಂದ್ಯದಲ್ಲಿ ಒಂದು ರನ್​ನ ಸೋಲಿನೊಂದಿಗೆ ಡೆಲ್ಲಿ ಕ್ಯಾಪಿಟಲ್ಸ್ (DC) ತಂಡವು ವಿಶೇಷ ದಾಖಲೆಯೊಂದನ್ನು ಬರೆದಿದೆ. ಈ ಮ್ಯಾಚ್​ನಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಗುಜರಾತ್ ಟೈಟಾನ್ಸ್ ತಂಡವು ಶುಭ್​​ಮನ್ ಗಿಲ್ (70), ಜೋಸ್ ಬಟ್ಲರ್ (52) ಹಾಗೂ ವಾಷಿಂಗ್ಟನ್ ಸುಂದರ್​​ (55) ಅವರ ಅರ್ಧಶತಕಗಳ ನೆರವಿನೊಂದಿಗೆ 20…

Read More

ಸೌಮ್ಯತೆಯಿಂದ ಆಯುಷ್ಯ ಮತ್ತು ಮನಶಾಂತಿ; ಯಾವ ಸ್ಥಳಗಳಲ್ಲಿ ಏರು ಧ್ವನಿಯಲ್ಲಿ ಮಾತನಾಡುವುದು ಆಪತ್ತು ತರುತ್ತದೆ?

ನಮ್ಮ ಸಂಪ್ರದಾಯಗಳು, ಪದ್ಧತಿಗಳು ಮತ್ತು ವಿಧಿವಿಧಾನಗಳ ಮಹತ್ವವನ್ನು ಅರಿಯುವುದು ಮುಖ್ಯ. ತಾಳ್ಮೆ, ಸಹನೆ ಮತ್ತು ನೆಮ್ಮದಿಯ ಜೀವನ ನಡೆಸಲು ನಮ್ಮ ಮಾತುಗಳು ಬಹಳ ಪ್ರಭಾವ ಬೀರುತ್ತವೆ. ಆಯಸ್ಸನ್ನು ಕಡಿಮೆ ಮಾಡುವಲ್ಲಿ ತಪ್ಪು ಮಾತಿನ ಶೈಲಿಗಳ ಪಾತ್ರವಿದೆ. ಕೆಲವು ನಿರ್ದಿಷ್ಟ ಸ್ಥಳಗಳಲ್ಲಿ ಏರು ಧ್ವನಿಯಲ್ಲಿ ಮಾತನಾಡುವುದು ಸೂಕ್ತವಲ್ಲ. ವಿದ್ಯಾಲಯಗಳಲ್ಲಿ, ಆಸ್ಪತ್ರೆಗಳಲ್ಲಿ, ಹಣಕಾಸು ವ್ಯವಹಾರಗಳಲ್ಲಿ, ಪೂಜಾ ಸಮಯದಲ್ಲಿ, ದಾಂಪತ್ಯ ಜೀವನದಲ್ಲಿ, ಮೇಲಧಿಕಾರಿಗಳೊಂದಿಗೆ ಮತ್ತು ಮಕ್ಕಳೊಂದಿಗೆ ಮಾತನಾಡುವಾಗ ಮೃದುವಾದ ಧ್ವನಿ ಬಹಳ ಮುಖ್ಯ. ಜೋರಾಗಿ ಮಾತನಾಡಿದಾಗ ನಮ್ಮ ಜ್ಞಾನ ಕುಂಠಿತವಾಗುತ್ತದೆ ಎಂದು…

Read More

ಕೊಹ್ಲಿ ಹೊಗಳಿಕೆ ಬಳಿಕ ‘ಧುರಂಧರ್ 2’ ಹೌಸ್​​ಫುಲ್? ಕಲೆಕ್ಷನ್ ಏನ್​ ಅನ್ನುತ್ತೆ?

ಕ್ರಿಕೆಟರ್ ವಿರಾಟ್ ಕೊಹ್ಲಿ ಅವರಿಗೆ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಅಭಿಮಾನಿ ಬಳಗ ಇದೆ. ಅವರು ಏನೇ ಮಾಡಿದರೂ ಆ ಬಗ್ಗೆ ಚರ್ಚೆಗಳು ನಡೆಯುತ್ತವೆ. ಇತ್ತೀಚೆಗೆ ಅವರು ‘ಧುರಂಧರ್ 2’ ಚಿತ್ರವನ್ನು ನೋಡಿ ಹಾಡಿ ಹೊಗಳಿದ್ದರು. ಆದಿತ್ಯ ಧಾರ್ ನಿರ್ದೇಶನ, ರಣವೀರ್ ಸಿಂಗ್ ನಟನೆ ಸೇರಿ ಎಲ್ಲದಕ್ಕೂ ಮೆಚ್ಚುಗೆ ಸೂಚಿಸಿದ್ದರು. ಸಿನಿಮಾ ಅದ್ಭುತ ಎಂದಿದ್ದರು. ಇದಾದ ಬಳಿಕ ಸಿನಿಮಾ ಹೌಸ್​​ಫುಲ್ ಕಾಣುತ್ತಿದೆ ಎಂಬ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಹಾಗಾದರೆ, ಸಿನಿಮಾದ ಕಲೆಕ್ಷನ್ ಹೆಚ್ಚಿತೇ? ಆ ಬಗ್ಗೆ…

Read More

ಇಂದು ಈ ರಾಶಿಯವರಿಗೆ ವಸಂತ ಕಾಲ: ಎಲ್ಲವೂ ನೀವು ಹೇಳಿದಂತೆ ನಡೆಯುತ್ತದೆ

ಬೆಂಗಳೂರು, ಏ.9: ಪ್ರಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು 2026ರ ಏಪ್ರಿಲ್ 9, ಗುರುವಾರದ ದೈನಂದಿನ ರಾಶಿಫಲವನ್ನು ಪ್ರಸ್ತುತಪಡಿಸಿದ್ದಾರೆ. ಈ ದಿನವು ಪರಾಭವನಾಮ ಸಂವತ್ಸರ, ಉತ್ತರಾಯಣ, ಚೈತ್ರ ಮಾಸ, ವಸಂತ ಋತು, ಕೃಷ್ಣ ಪಕ್ಷದ ಸಪ್ತಮಿ, ಪೂರ್ವಾಷಾಡ ನಕ್ಷತ್ರ, ಪರಿಘ ಯೋಗ ಮತ್ತು ಭವಕರಣಗಳನ್ನು ಒಳಗೊಂಡಿದೆ. ರಾಹುಕಾಲ ಮಧ್ಯಾಹ್ನ 1:52 ರಿಂದ 3:25 ರವರೆಗೆ ಇದ್ದು, ಸರ್ವಸಿದ್ಧಿ, ಸಂಕಲ್ಪ ಹಾಗೂ ಶುಭಕಾಲ ಮಧ್ಯಾಹ್ನ 12:21 ರಿಂದ 1:54 ರವರೆಗೆ ಇರುತ್ತದೆ. ರವಿ ಮೀನ ರಾಶಿಯಲ್ಲಿ ಮತ್ತು…

Read More

ಮಿಲ್ಲರ್ ಮಾಡಿದ ಒಂದು ತಪ್ಪಿನಿಂದಾಗಿ ಸೋತ ಡೆಲ್ಲಿ ಕ್ಯಾಪಿಟಲ್ಸ್

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನ 14ನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ (GT) ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ (DC) ತಂಡವು ಕೇವಲ 1 ರನ್​​ನಿಂದ ಸೋತಿದೆ. ಗೆಲುವಿನ ಹೊಸ್ತಿಲಲ್ಲಿದ್ದ ಡೆಲ್ಲಿ ಕ್ಯಾಪಿಟಲ್ಸ್​ ತಂಡವು ಡೇವಿಡ್ ಮಿಲ್ಲರ್ ಅವರ ಒಂದು ನಿರ್ಧಾರದಿಂದಾಗಿ ಸೋಲೊಪ್ಪಿಕೊಳ್ಳಬೇಕಾಯಿತು ಎಂದರೆ ತಪ್ಪಾಗಲಾರದು. ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಗುಜರಾತ್ ಟೈಟಾನ್ಸ್ 20 ಓವರ್​ಗಳಲ್ಲಿ 210 ರನ್‌ಗಳ ಬೃಹತ್ ಮೊತ್ತ ಪೇರಿಸಿತ್ತು. ಗುರಿ ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ…

Read More

ಇರಾನಿನ ಸ್ನೇಹ, ಅಮೆರಿಕದ ನಂಟು: ಮಧ್ಯಪ್ರಾಚ್ಯದ ಶಾಂತಿ ದೂತನಾಗಿ ಪಾಕಿಸ್ತಾನ ಹೊರಹೊಮ್ಮಿದ್ಹೇಗೆ?

ವಾಷಿಂಗ್ಟನ್, ಏಪ್ರಿಲ್ 09: ಮಧ್ಯಪ್ರಾಚ್ಯದಲ್ಲಿ ಉಲ್ಬಣಗೊಂಡಿದ್ದ ಯುದ್ಧದ ಜ್ವಾಲೆಗೆ ತಕ್ಷಣದ ವಿರಾಮ ಬಿದ್ದಿದೆ. ಇರಾನ್(Iran) ಮತ್ತು ಅಮೆರಿಕ ನಡುವೆ ಎರಡು ವಾರಗಳ ಕಾಲದ ಕದನ ವಿರಾಮ ಏರ್ಪಟ್ಟಿದ್ದು, ಈ ಐತಿಹಾಸಿಕ ಒಪ್ಪಂದದ ಹಿಂದೆ ಪಾಕಿಸ್ತಾನದ “ಚಾಣಕ್ಯ ನೀತಿ” ಕೆಲಸ ಮಾಡಿದೆ ಎಂದು ವರದಿಯಾಗಿದೆ. ಆದರೂ ಇಸ್ರೇಲ್ ಲೆಬನಾನ್ ಮೇಲೆ ದಾಳಿ ನಡೆಸಿದ್ದು, ಇದರ ಪರಿಣಾಮ ಇರಾನ್ ಮತ್ತೆ ಹಾರ್ಮುಜ್ ಜಲಸಂಧಿಯನ್ನು ಮುಚ್ಚಿದೆ. ಇರಾನ್ ವಿದೇಶಾಂಗ ಸಚಿವ ಸಯ್ಯದ್ ಅಬ್ಬಾಸ್ ಅರಘ್ಚಿ, ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಮತ್ತು…

Read More

Assembly Elections 2026 Voting Live: ಕರ್ನಾಟಕ, ಕೇರಳ, ಅಸ್ಸಾಂ, ಪುದುಚೇರಿಯಲ್ಲಿ ಮತದಾನ ಶುರು – Kannada News | Assam, Kerala, Puducherry Assembly Elections Davangere South and Bagalkot ByPoll 2026 Voting Live Updates; BJP, Congress, LDF, UDF, CPI latest news

ವಿಧಾನಸಭೆ ಚುನಾವಣೆ ಲೈವ್ (ಸಾಂದರ್ಭಿಕ ಚಿತ್ರ) ಬೆಂಗಳೂರು/ನವದೆಹಲಿ, ಏಪ್ರಿಲ್ 9: ಕರ್ನಾಟಕದ ದಾವಣಗೆರೆ ದಕ್ಷಿಣ, ಬಾಗಲಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಉಪಚುನಾವಣೆ (Karnataka By-Election) ನಡೆಯುತ್ತಿದೆ. ಮತ್ತೊಂದೆಡೆ, ಕೇರಳದ 140 ಕ್ಷೇತ್ರ, ಅಸ್ಸಾಂನ 126 ಕ್ಷೇತ್ರ, ಪುದುಚೇರಿಯ 30 ಕ್ಷೇತ್ರಗಳಿಗೆ (Assembly Elections) ವೋಟಿಂಗ್ ನಡೆಯುತ್ತಿದೆ. ಬಾಗಲಕೋಟೆಯಲ್ಲಿ 322 ಮತಗಟ್ಟೆ ತೆರೆಯಲಾಗಿದ್ದು, ದಾವಣಗೆರೆ ದಕ್ಷಿಣದಲ್ಲಿ 284 ಮತಗಟ್ಟೆಗಳಿವೆ. ಸುಮಾರು ಎರಡೂವರೆ ಸಾವಿರ ಚುನಾವಣಾ ಸಿಬ್ಬಂದಿಯನ್ನ ಬಾಗಲಕೋಟೆಯಲ್ಲಿ ನಿಯೋಜಿಸಲಾಗಿದ್ದು, ದಾವಣಗೆರೆಯಲ್ಲಿ 1ಸಾವಿರದ 489 ಸಿಬ್ಬಂದಿ ಕಾರ್ಯ ನಿರ್ವಹಿಸಲಿದ್ದಾರೆ. ಬಾಗಲಕೋಟೆ ಕಣದಲ್ಲಿ…

Read More

ಬ್ರೇಕಪ್​​ನಲ್ಲಿ ಕೊನೆ ಆಯ್ತು ಸಾನ್ಯಾ-ರಿಷಬ್ ಸಂಬಂಧ; ಮೌನ ತಾಳಿದ ನಟಿ

ಬಾಲಿವುಡ್ ನಟಿ ಸಾನ್ಯಾ ಮಲ್ಹೋತ್ರ (Sanya Malhotra) ಈಗ ವೈಯಕ್ತಿಕ ಕಾರಣಗಳಿಂದ ಸುದ್ದಿಯಲ್ಲಿದ್ದಾರೆ. ಅವರು ಸಿತಾರ್ ವಾದಕ ರಿಷಬ್ ರಿಖಿರಾಮ್ ಶರ್ಮಾ ಜೊತೆ ಕಳೆದು ಒಂದು ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದರು. ಈಗ ಇಬ್ಬರೂ ಬ್ರೇಕಪ್ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಇಬ್ಬರೂ ಪರಸ್ಪರ ಅನ್​​ಫಾಲೋ ಮಾಡಿಕೊಂಡಿದ್ದಾರೆ. ಇದರಿಂದ ಇಬ್ಬರೂ ಬೇರೆ ಆಗಿದ್ದಾರೆ ಎಂಬ ವದಂತಿ ದಟ್ಟವಾಗಿದೆ. ಸಾನ್ಯಾ ಮಲ್ಹೋತ್ರ ಅವರು ‘ದಂಗಲ್’ ಸಿನಿಮಾ ಮೂಲಕ ಫೇಮಸ್ ಆದರು. ಅವರ ನಟನೆಗೆ ಭಾರೀ ಮೆಚ್ಚುಗೆ ಬಂತು. ಆ ಬಳಿಕ…

Read More