ಅಲ್ಲು ಅರ್ಜುನ್ ಸಿನಿಮಾ ‘ರಾಕಾ’ ಟೈಟಲ್ ಅರ್ಥವೇನು? ಶುರುವಾಗಿದೆ ಚರ್ಚೆ
‘ಪುಷ್ಪ 2’ ಅಂತಹ ಬ್ಲಾಕ್‌ಬಸ್ಟರ್ ಚಿತ್ರದ ನಂತರ ಅಲ್ಲು ಅರ್ಜುನ್ ಹೊಸ ಸಿನಿಮಾ ಘೋಷಿಸಿದ್ದಾರೆ. ಬನ್ನಿ ತಮ್ಮ ಮುಂದಿನ ಚಿತ್ರವನ್ನು ಅಟ್ಲೀ ಅವರೊಂದಿಗೆ ಮಾಡುತ್ತಿದ್ದಾರೆ. ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ತಮಿಳಿನಲ್ಲಿ ದೊಡ್ಡ ಬಜೆಟ್ ಚಿತ್ರಗಳಿಗೆ ಹೆಸರು ವಾಸಿಯಾಗಿರುವ ಸನ್ ಪಿಕ್ಚರ್ಸ್ ಸುಮಾರು 800 ಕೋಟಿ ರೂ. ಬಜೆಟ್‌ನಲ್ಲಿ ಈ ಚಿತ್ರವನ್ನು ನಿರ್ಮಿಸುತ್ತಿದೆ. ಕಳೆದ ವರ್ಷ ಪ್ರಾರಂಭವಾದ ಈ ಚಿತ್ರದ ಚಿತ್ರೀಕರಣವು ಇಲ್ಲಿಯವರೆಗೆ ವರ್ಕಿಂಗ್ ಟೈಟಲ್‌ನೊಂದಿಗೆ ಮುಗಿದಿದೆ. ಅಲ್ಲು ಅರ್ಜುನ್ ಅವರ ಹುಟ್ಟುಹಬ್ಬದಂದು (ಏಪ್ರಿಲ್…