ರಾಜ್ಯಸಭೆಯಲ್ಲಿ ಮತ್ತೆ ಕರ್ನಾಟಕದ ಪರ ಧ್ವನಿ ಎತ್ತಿದ ದೇವೇಗೌಡ್ರು, ಈ ಬಾರಿ ಕೇಳಿದ್ದೇನು? – Kannada News | HD Devegowda Requests In rajyasabha Industrial corridor from Bengaluru to Mangaluru
ನವದೆಹಲಿ, (ಫೆಬ್ರವರಿ 11): ಕೇಂದ್ರ ಬಜೆಟ್ (Union Budget) ಮೇಲಿನ ಚರ್ಚೆಯಲ್ಲಿ ರಾಜ್ಯಸಭೆಯಲ್ಲಿ ಮಾಜಿ ಪ್ರಧಾನಿ ಎಚ್ಡಿ ದೇವೇಗೌಡ (HD Devegowda) ಅವರು ಪಾಲ್ಗೊಂಡು ಮಾತನಾಡಿದ್ದು, ಮೂರು ಪ್ರಮುಖ ಬಂದರುಗಳನ್ನು ಜೋಡಿಸುವ ಬೆಂಗಳೂರಿನಿಂದ – ಮಂಗಳೂರಿನವರೆಗೆ ಕೈಗಾರಿಕಾ ಕಾರಿಡಾರ್ ವಿಸ್ತರಣೆ ಹಾಗೂ ಹಲಸು, ಹುಣಸೆ, ನೇರಳೆ ಮಂಡಳಿ ರಚನೆ ಮಾಡಬೇಕು ಎಂದು ಕೋರಿದರು. ಈಗಾಗಲೇ ಚೆನ್ನೈನಿಂದ ಬೆಂಗಳೂರು ಮತ್ತು ಹೈದರಾಬಾದ್‌ನಿಂದ ಬೆಂಗಳೂರು ನಡುವಿನ ಪ್ರಮುಖ ಬಂದರುಗಳನ್ನು ಹೊಂದಿರುವ ಕೈಗಾರಿಕಾ ಕಾರಿಡಾರ್ ಯೋಜನೆಗಳಿಗೆ ಅನುಮೋದನೆ ನೀಡುವ ಸರ್ಕಾರದ ನಿರ್ಧಾರವನ್ನು…