Category Archives: Blog

Your blog category

IND vs PAK: ಮಾಜಿ ನಾಯಕಿಯನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ ಹಾಲಿ ನಾಯಕಿ ಹರ್ಮನ್

Source link

ತಮಿಳುನಾಡು ಸಿಎಂ ವಿಜಯ್ ಬೆನ್ನಲ್ಲೇ ಕೊಲ್ಲೂರು ಮೂಕಾಂಬಿಕೆ ದೇಗುಲಕ್ಕೆ ಅನಂತ್ ಅಂಬಾನಿ ಭೇಟಿ

ಉಡುಪಿ, ಜೂನ್​​ 14: ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ದೇಶದ ಖ್ಯಾತ ಉದ್ಯಮಿ ಮುಕೇಶ್ ಅಂಬಾನಿ ಪುತ್ರ ಅನಂತ್ ಅಂಬಾನಿ ಭಾನುವಾರ ಭೇಟಿ ನೀಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ದೇಶದ ಪ್ರಮುಖ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡುತ್ತಿರುವ ಅನಂತ್ ಅಂಬಾನಿ, ಇಂದು ಕೊಲ್ಲೂರಿನಲ್ಲಿ ದೇವಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ್ದಾರೆ. ತಮ್ಮ ಕುಟುಂಬದ ಆಪ್ತ ಗುರೂಜಿ ಅವರ ಜೊತೆಯಲ್ಲಿ ಆಗಮಿಸಿದ ಅನಂತ್ ಅಂಬಾನಿ, ಮೂಕಾಂಬಿಕಾ ಸನ್ನಿಧಾನದಲ್ಲಿ ನಡೆದ ವಿಶೇಷ ಪೂಜಾ ಕೈಂಕರ್ಯಗಳಲ್ಲಿ ಪಾಲ್ಗೊಂಡರು. ಇತ್ತೀಚೆಗೆ ಕೇರಳದ ಪ್ರಮುಖ ದೇವಾಲಯಗಳು ಸೇರಿದಂತೆ ದೇಶದ ಹಲವೆಡೆ ದೇವಸ್ಥಾನಗಳಿಗೆ ಭೇಟಿ ನೀಡುತ್ತಿರುವ ಅನಂತ್ ಅಂಬಾನಿ, ಇದೀಗ ಕೊಲ್ಲೂರು ದೇವಿಯ ದರ್ಶನ ಪಡೆದಿದ್ದಾರೆ. ಇನ್ನು ಇತ್ತೀಚೆಗೆ ತಮಿಳುನಾಡು ಸಿಎಂ ವಿಜಯ್ ಕೂಡ  ಕೊಲ್ಲೂರು ಮೂಕಾಂಬಿಕೆ ದೇಗುಲಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದರು.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

ಜೈಪುರದಲ್ಲಿ ಮಾನ ಹರಾಜು ಹಾಕಿದ ಬೆಂಗಳೂರು ಪೊಲೀಸರು: ಲೇಡಿ ಪಿಎಸ್ಐ ಸೇರಿ ಮೂವರು ಅರೆಸ್ಟ್​ – Kannada News | Police Bribery Case: PSI and Two Constables Arrested by Jaipur ACB

ಉಳ್ವಪ್ಪ, PSI ಅನಿತಾ, ಯತೀಶ್ ಕುಮಾರ್Image Credit source: tv9 kannada

ಬೆಂಗಳೂರು, ಜೂನ್​ 14: ನ್ಯಾಯ ಕೊಡಿಸುವಲ್ಲಿ ಕರ್ನಾಟಕ (Karnataka) ಪೊಲೀಸ್ ದೇಶದಲ್ಲೇ ನಂಬರ್ ಒನ್. ಆದರೆ ಬೆಂಗಳೂರಿನ ಮೂವರು ಪೊಲೀಸರು ಜೈಪುರದಲ್ಲಿ ಇಲಾಖೆಯ ಮಾನ ಹರಾಜು ಹಾಕಿದ್ದಾರೆ. ವರದಕ್ಷಿಣೆ ಕಿರುಕುಳ ಪ್ರಕರಣದ ಆರೋಪಿ‌ಯನ್ನು ಬಂಧಿಸಲು ಹೋಗಿದ್ದವರು ಲಂಚ ಸ್ವೀಕರಿಸುತ್ತಿದ್ದಾಗ ಅಲ್ಲಿನ ಭ್ರಷ್ಟಾಚಾರ ನಿಗ್ರಹ ದಳ (ACB) ಅಧಿಕಾರಿಗಳ ಕೈಯಲ್ಲಿ ಲಾಕ್ ಆಗಿದ್ದಾರೆ.

ಮುಖ್ಯಾಂಶಗಳು

  • ಜೈಪುರದಲ್ಲಿ ಬೆಂಗಳೂರಿನ ಮೂವರು ಪೊಲೀಸರು ಎಸಿಬಿ ಬಲೆಗೆ
  • 40 ಸಾವಿರ ರೂ ಲಂಚ ಪಡೆಯುವಾಗ ಸಿಕ್ಕಿಬಿದ್ದ ಪೊಲೀಸರು
  • ಜೈಪುರ ಎಸಿಬಿ‌ ಎಎಸ್​ಪಿ ಭೂಪೇಂದ್ರ ಚೌಧರಿ ನೇತೃತ್ವದಲ್ಲಿ ದಾಳಿ

ವರದಕ್ಷಿಣೆ ಪ್ರಕರಣದ ತನಿಖೆಗಾಗಿ ಜೈಪುರಕ್ಕೆ ತೆರಳಿದ್ದ ಪೊಲೀಸರು

ದೊಡ್ಡ ದೊಡ್ಡ ಪ್ರಕರಣದಲ್ಲಿ ಸುಮ್ಮನಾಗುವ ಪೊಲೀಸರು ವರದಕ್ಷಿಣೆ ಪ್ರಕರಣದಲ್ಲಿ ರಾಜಸ್ಥಾನಕ್ಕೆ ಹೋಗಿದ್ದರು. ಆರೋಪಿಯನ್ನ ಬಂಧಿಸಿ ಕರೆದುಕೊಂಡು ಬರುವುದನ್ನು ಬಿಟ್ಟು ಹಣ ಮಾಡಲು ಮುಂದಾಗಿದ್ದರು. ಆರೋಪಿ ಬಳಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಆದರೆ ಆರೋಪಿ ಇದನ್ನು ಬಂಡವಾಳ ಮಾಡಿಕೊಂಡು ಜೈಪುರ್ ಎಸಿಬಿಗೆ ದೂರು ನೀಡಿದ್ದಾನೆ. ದೂರಿನ‌ ಮೇಲೆ ಕಾರ್ಯಾಚರಣೆ ನಡೆಸಿದ ಎಸಿಬಿ ರಾಜ್ಯದ ಪಿಎಸ್​​ಐ ಸೇರಿ ಮೂವರನ್ನ ಬಂಧಿಸಿದ್ದಾರೆ.

2 ಲಕ್ಷ ರೂ ಲಂಚಕ್ಕೆ ಬೇಡಿಕೆ

ವರದಕ್ಷಿಣೆ ಪ್ರಕರಣದ ತನಿಖೆಗಾಗಿ ಹೆಚ್​ಎಎಲ್ ಪೊಲೀಸ್ ಠಾಣೆಯ ಸಬ್-ಇನ್‌ಸ್ಪೆಕ್ಟರ್ ಅನಿತಾ, ಕಾನ್ಸ್‌ಟೇಬಲ್​​ ಯತೀಶ್ ಕುಮಾರ್, ಉಳ್ವಪ್ಪ ತೆರಳಿದ್ದರು‌. ಆರೋಪಿಯನ್ನು ಬಂಧಿಸಿದ ಇವರು ದುಡ್ಡು ಕೊಟ್ಟರೆ ಬಿಡುವುದಾಗಿ ಹೇಳಿದ್ದಾರೆ. ಪ್ರಕರಣದಲ್ಲಿ ನೆರವು ನೀಡುವುದಾಗಿ ಹೇಳಿ 2 ಲಕ್ಷ ರೂ ಲಂಚಕ್ಕೆ ಬೇಡಿಕೆ ಇಟ್ಟಿದ್ದರು.

ಪೊಲೀಸರಿಗೆ ಸರಿಯಾದ ಪಾಠ ಕಲಿಸಿದ ಆರೋಪಿ

ಬೆಂಗಳೂರು ಪೊಲೀಸರ ವಸೂಲಿ ಬಾಜಿಯಿಂದ ಬೇಸತ್ತ ಆರೋಪಿ, ತಕ್ಷಣ ಜೈಪುರ ಎಸಿಬಿ ಅಧಿಕಾರಿಗಳನ್ನು ಸಂಪರ್ಕಿಸಿ ದೂರು ನೀಡಿದ್ದ. ದೂರು ಸ್ವೀಕರಿಸಿದ ರಾಜಸ್ಥಾನ ಎಸಿಬಿ ಟೀಂ, ಪ್ರಾಥಮಿಕ ತನಿಖೆ ನಡೆಸಿ ಬೆಂಗಳೂರು ಪೊಲೀಸರಿಗೆ ಬಲೆ ಬೀಸಿತ್ತು. ಜೈಪುರದ ಗಂಗೌರ್ ಹೋಟೆಲ್‌ನಲ್ಲಿ ನಡೆದ ಕಾರ್ಯಾಚರಣೆಯಲ್ಲಿ 40 ಸಾವಿರ ರೂ ಲಂಚ ಸ್ವೀಕರಿಸುತ್ತಿದ್ದ ವೇಳೆ ಪಿಎಸ್​​ಐ ಅನಿತಾ ಸೇರಿ ಮೂವರು ಆರೋಪಿಗಳನ್ನು ರೆಡ್ ಹ್ಯಾಂಡ್ ಆಗಿ ಬಂಧಿಸಲಾಗಿದೆ. ಡಿಐಜಿ ಓಂ ಪ್ರಕಾಶ್ ಮೀನಾ ಅವರ ಮೇಲ್ವಿಚಾರಣೆಯಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಭೂಪೇಂದ್ರ ಚೌಧರಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಮೂವರನ್ನ ವಶಕ್ಕೆ ಪಡೆಯಲಾಗಿದೆ.

ಇದನ್ನೂ ಓದಿ: ನಕ್ಸಲ್ ಚಟುವಟಿಕೆಗೆ ಬೆಂಗಳೂರಲ್ಲಿ ಹಣಕಾಸು ವಹಿವಾಟು: ರಾಜ್ಯದ ನಾಲ್ವರು ಸೇರಿ 7 ಜನರ ವಿರುದ್ಧ ಎಫ್​ಐಆರ್​

ಒಟ್ಟಾರೆ ಇಡೀ ದೇಶದಲ್ಲಿ ಬೆಂಗಳೂರು ಪೊಲೀಸರ ಗೌರವ 40 ಸಾವಿರ ರೂ.ಕ್ಕೆ ಹರಾಜಾಗಿದೆ‌. ಇನ್ನಾದ್ರೂ ಪೊಲೀಸ್ ಇಲಾಖೆ ಆರೋಪಿಗಳ ಬಳಿ ಕೈ ಒಡ್ಡೋದನ್ನ ನಿಲ್ಲಿಸಬೇಕಿದೆ. ಸದ್ಯ ಮೂವರು ಪೊಲೀಸರನ್ನ ಬಂಧಿಸಿರುವ ಜೈಪುರ ಎಸಿಬಿ ಟೀಂ ಹೆಚ್ಚಿನ ವಿಚಾರಣೆ ನಡೆಸುತ್ತಿದೆ.

ವರದಿ: ವಿಕಾಸ್ ಟಿವಿ9 ಬೆಂಗಳೂರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ರಶ್ಮಿಕಾ ಮಂದಣ್ಣ ಹೊಸ ಸಿನಿಮಾಕ್ಕೆ ‘ಎ’ ಪ್ರಮಾಣ ಪತ್ರ – Kannada News | Rashmika, Kriti, Shahid starrer Cocktail 2 movie gets A certificate

ರಶ್ಮಿಕಾ ಮಂದಣ್ಣ (Rashmika Mandanna) ಈಗ ಪ್ಯಾನ್ ಇಂಡಿಯಾ ಸ್ಟಾರ್ ನಟಿ. ಹಲವು ದೊಡ್ಡ ಸ್ಟಾರ್​ಗಳ ಜೊತೆಗೆ ರಶ್ಮಿಕಾ ನಟಿಸುತ್ತಿದ್ದಾರೆ. ದಕ್ಷಿಣ ಭಾರತ ಚಿತ್ರರಂಗ ಸೇರಿದಂತೆ ಬಾಲಿವುಡ್​​ನ ಸಿನಿಮಾಗಳಲ್ಲಿಯೂ ಬ್ಯುಸಿಯಾಗಿದ್ದಾರೆ. ಆದರೆ ರಶ್ಮಿಕಾ ಮಂದಣ್ಣ ‘ಫ್ಯಾಮಿಲಿ ನಟಿ’ ಎಂದೇ ಹೆಸರು ಮಾಡಿದ್ದಾರೆ. ಅವರಿಗೆ ಸಿಗುವ ಪಾತ್ರಗಳು ಸಹ ಗೃಹಸ್ಥೆ, ಸಂಭಾವಿತ ಗರ್ಲ್​​ಫ್ರೆಂಡ್ ಇಂಥಹುವೇ. ‘ಅನಿಮಲ್’ ಅಂಥಹಾ ಸಿನಿಮಾನಲ್ಲೂ ಸಹ ರಶ್ಮಿಕಾ ಅವರದ್ದು ‘ಒಳ್ಳೆಯ ಪತ್ನಿ’ಯ ಪಾತ್ರವೇ ಆಗಿತ್ತು. ಆದರೆ ಇದೀಗ ರಶ್ಮಿಕಾ, ಹೊಸ ಸಿನಿಮಾನಲ್ಲಿ ತುಸು ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದು, ಇದೇ ಕಾರಣಕ್ಕೆ ಸಿನಿಮಾಕ್ಕೆ ‘ಎ’ ಪ್ರಮಾಣ ಪತ್ರ ದೊರೆತಿದೆ.

ರಶ್ಮಿಕಾ ನಟಿಸುವ ಸಿನಿಮಾಗಳಿಗೆ ‘ಎ’ ಪ್ರಮಾಣ ಪತ್ರ ಸಿಗುವುದು ಅಪರೂಪದಲ್ಲಿ ಅಪರೂಪ. ಈ ಹಿಂದೆ ‘ಅನಿಮಲ್’ ಸಿನಿಮಾಕ್ಕೆ ‘ಎ’ ಪ್ರಮಾಣ ಪತ್ರವನ್ನು ಸಿಬಿಎಫ್​​ಸಿ ನೀಡಿತ್ತು. ಆದರೆ ಆ ಸಿನಿಮಾನಲ್ಲಿ ರಶ್ಮಿಕಾ ಅವರದ್ದು ಸಂಭಾವಿತ ಗೃಹಿಣಿಯ ಪಾತ್ರವೇ ಆಗಿತ್ತು. ಆದರೆ ಇದೀಗ ರಶ್ಮಿಕಾ ನಟಿಸಿರುವ ಹೊಸ ಸಿನಿಮಾ ‘ಕಾಕ್​​ಟೇಲ್ 2’ಗೆ ಸಿಬಿಎಫ್​​ಸಿ ‘ಎ’ ಪ್ರಮಾಣ ಪತ್ರ ನೀಡಿದೆ. 18 ವರ್ಷಕ್ಕೂ ಹೆಚ್ಚಿನ ವಯಸ್ಸಿನವರು ಮಾತ್ರವೇ ಈ ಸಿನಿಮಾ ವೀಕ್ಷಿಸಬಹುದಾಗಿದೆ.

‘ಕಾಕ್​​ಟೇಲ್ 2’ ಸಿನಿಮಾಕ್ಕೆ ‘ಎ’ ಪ್ರಮಾಣ ಪತ್ರ ದೊರಕುವ ಮೂಲಕ ರಶ್ಮಿಕಾ ಮಂದಣ್ಣ ವೃತ್ತಿ ಜೀವನದಲ್ಲಿ ಎರಡನೇ ಸಿನಿಮಾಕ್ಕೆ ‘ಎ’ ಪ್ರಮಾಣ ಪತ್ರ ದೊರೆತಂತಾಗಿದೆ. ಈ ಹಿಂದೆ ರಶ್ಮಿಕಾ ನಾಯಕಿಯಾಗಿದ್ದ ‘ಅನಿಮಲ್’ ಸಿನಿಮಾಕ್ಕೆ ‘ಎ’ ಪ್ರಮಾಣ ಪತ್ರ ದೊರೆತಿತ್ತು. ಆದರೆ ಆ ಸಿನಿಮಾನಲ್ಲಿ ರಶ್ಮಿಕಾ ಅವರದ್ದು ಗ್ಲಾಮರಸ್ ಪಾತ್ರ ಆಗಿರಲಿಲ್ಲ. ಆದರೆ ‘ಕಾಕ್​​ಟೇಲ್ 2’ ಸಿನಿಮಾನಲ್ಲಿ ರಶ್ಮಿಕಾ ಮಂದಣ್ಣ ಸಖತ್ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದಾರೆ. ರಶ್ಮಿಕಾ ಜೊತೆಗೆ ನಟಿ ಕೃತಿ ಸನೊನ್ ಸಹ ಸಿನಿಮಾನಲ್ಲಿದ್ದು, ಅವರೂ ಸಹ ಸಖತ್ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದಾರೆ. ಇದೇ ಕಾರಣಕ್ಕೆ ಸಿನಿಮಾಕ್ಕೆ ‘ಎ’ ಪ್ರಮಾಣ ಪತ್ರ ನೀಡಲಾಗಿದೆ.

ಈ ಸಿನಿಮಾ ತ್ರಿಕೋನ ಪ್ರೇಮಕತೆಯನ್ನು ಒಳಗೊಂಡಿದೆ. ಸಿನಿಮಾನಲ್ಲಿ ಶಾಹಿದ್ ಕಪೂರ್ ನಾಯಕ. ಸಿನಿಮಾದ ಟ್ರೈಲರ್ ಈಗಾಗಲೇ ಬಿಡುಗಡೆ ಆಗಿದ್ದು, ಶಾಹಿದ್ ಕಪೂರ್, ರಶ್ಮಿಕಾ ಮತ್ತು ಕೃತಿ ಇಬ್ಬರಲ್ಲಿ ಒಬ್ಬರನ್ನು ಆಯ್ಕೆ ಮಾಡಿಕೊಳ್ಳಬೇಕಿದೆ. ಆದರೆ ಈ ನಡುವೆ ಮೂವರೂ ಪ್ರವಾಸಕ್ಕೆ ತೆರಳಿ ಒಬ್ಬರನ್ನೊಬ್ಬರು ಹೆಚ್ಚು ಅರ್ಥ ಮಾಡಿಕೊಳ್ಳುವ ಪ್ರಯತ್ನ ಮಾಡುತ್ತಾರೆ. ಕೊನೆಗೆ ಶಾಹಿದ್ ಯಾರನ್ನು ಒಪ್ಪಿಕೊಳ್ಳುತ್ತಾರೆ, ಅಥವಾ ಕತೆಯಲ್ಲಿ ಟ್ವಿಸ್ಟ್ ಏನಾದರೂ ಬರುತ್ತದೆಯೇ ಎಂಬುದು ಸಿನಿಮಾದ ಕತೆ.

ಇದನ್ನೂ ಓದಿ:ಸ್ಟಾರ್ ನಟಿಗೆ ಫಿಕ್ಸ್ ಆಗಿದ್ದ ಪ್ರಮುಖ ಸಿನಿಮಾ ಈಗ ರಶ್ಮಿಕಾ ಮಂದಣ್ಣ ಕೈಗೆ

ಈ ಸಿನಿಮಾನಲ್ಲಿ ರಶ್ಮಿಕಾ ಮಂದಣ್ಣ ಮತ್ತು ಕೃತಿ ಸನೋನ್ ಲೆಸ್ಬಿಯನ್ ಕಪಲ್ ಆಗಿ ನಟಿಸಿದ್ದಾರೆ ಎಂಬ ಮಾತುಗಳು ಸಹ ಕೇಳಿ ಬಂದಿದ್ದವು. ಚಿತ್ರತಂಡ ಇದನ್ನು ಅಲ್ಲಗಳೆದಿದೆಯಾದರೂ ಈಗ ಸಿನಿಮಾಕ್ಕೆ ‘ಎ’ ಪ್ರಮಾಣ ಪತ್ರ ದೊರೆತಿರವುದು ನೋಡಿ ಕೆಲ ನೆಟ್ಟಿಗರು ಮತ್ತೆ ಅನುಮಾನ ವ್ಯಕ್ತಪಡಿಸಿದ್ದಾರೆ. ಸಿನಿಮಾವನ್ನು ಹೋಮಿ ಅದಜಾನಿಯಾ ನಿರ್ದೇಶನ ಮಾಡಿದ್ದು, ನಿರ್ಮಾಣ ಮಾಡಿರುವುದು ದಿನೇಶ್ ವಿಜನ್. ಕತೆ ಬರೆದಿರುವುದು ಲವ್ ರಂಜನ್. ಸಿನಿಮಾ ಜೂನ್ 19ಕ್ಕೆ ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಪಾಕ್ ವಿರುದ್ಧ ಮೊದಲ ಎಸೆತದಲ್ಲೇ ವಿಶ್ವ ದಾಖಲೆ ಸೃಷ್ಟಿಸಿದ ಶಫಾಲಿ ವರ್ಮಾ – Kannada News | Shafali Verma’s World Record Six vs Pakistan: India’s T20 WC 2026 Campaign Begins with a Bang!

ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ, ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ನೆಲೆ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ನಾನು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ನನ್ನ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ನನ್ನ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More

Source link

ಪಾಕ್ ವಿರುದ್ಧ ಮೊದಲ ಎಸೆತದಲ್ಲೇ ವಿಶ್ವ ದಾಖಲೆ ಸೃಷ್ಟಿಸಿದ ಶಫಾಲಿ ವರ್ಮಾ – Kannada News | Womens t20 world cup 2026 shafali verma first ball six vs pakistan

ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ, ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ನೆಲೆ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ನಾನು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ನನ್ನ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ನನ್ನ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More

Source link

ಬೆಂಗಳೂರಿನಲ್ಲಿ ಪುಡಿರೌಡಿಗಳ ಕಿರುಕುಳ ತಪ್ಪಿಸಲು ವ್ಯಾಪಾರಿಗಳು ಆಗ್ರಹ: ಜೂ.1ರಂದು ಬೇಕರಿ-ಕಾಂಡಿಮೆಂಟ್ಸ್ ಬಂದ್..! – Kannada News | Bengaluru condiments association Calls Shop Bandh On June 18th Over rowdies harassment

ಬೆಂಗಳೂರು, (ಜೂನ್ 14): ಪೋಲಿಸರು (Police), ಜಿಬಿಎ ಅಧಿಕಾರಿಗಳು, ಆರೋಗ್ಯ ಇಲಾಖೆ ಸೇರಿದಂತೆ ಪ್ರಮುಖವಾಗಿ ಪುಡಿ ರೌಡಿಗಳ ಕಿರುಕುಳಕ್ಕೆ ಬ್ರೇಕ್ ಹಾಕುವಂತೆ ಆಗ್ರಹಿಸಿ, ಸಿಲಿಕಾನ್ ಸಿಟಿ ಬೆಂಗಳೂರಿನ ಬೇಕರಿ-ಕಾಂಡಿಮೆಂಟ್ಸ್, ಬೀಡಾ ಅಂಗಡಿ, ಸಣ್ಣಪುಟ್ಟ ವ್ಯಾಪಾರಿಗಳು ಗುರುವಾದಿಂದ ಅನಿರ್ದಿಷ್ಟಾವದಿ ಮುಷ್ಕರಕ್ಕೆ ಕರೆ ನೀಡಿದ್ದಾರೆ. ಹೌದು….ಪುಡಿರೌಡಿಗಳ ಕಿರುಕುಳಕ್ಕೆ ಬೇಸತ್ತು ಬೇಕರಿ ಕಾಂಡಿಮೆಂಟ್ಸ್ ಅಸೋಸಿಯೇಷನ್ (Bengaluru condiments association), ಜೂನ್ 18ರಂದು ಬೇಕರಿ ಹಾಗೂ ಕಾಂಡಿಮೆಂಟ್ಸ್ ಅಂಗಡಿಗಳು ಬಂದ್ಗೆ ಕರೆ ನೀಡಿದೆ. ಈ ಮೂಲಕ ರೌಡಿಗಳ ದಾಂಧಲೆಗಳಿಗೆ ಬ್ರೇಕ್ ಹಾಕುವಂತೆ ಒತ್ತಾಯಿಸಿದೆ.

ಮುಖ್ಯಾಂಶಗಳು

  • ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಹೆಚ್ಚಾದ ಪುಡಿರೌಡಿಗಳ ಕಿರಿಕಿರಿ
  • ಅಧಿಕಾರಿಗಳು, ಪುಡಿರೌಡಿಗಳ ಕಿರುಕುಳ ತಪ್ಪಿಸಲು ಕಾಂಡಿಮೆಂಟ್ಸ್ ವ್ಯಾಪಾರಿಗಳು ಆಗ್ರಹ
  • ಗುರುವಾರ ಬೆಂಗಳೂರಿನಲ್ಲಿ ಬೇಕರಿ-ಕಾಂಡಿಮೆಂಟ್ಸ್ ಬಂದ್

ಹೆಚ್ಚಾದ ಪುಡಿರೌಡಿಗಳ ಹಾವಳಿ

ಇತ್ತೀಚೆಗೆ ರಾಜಧಾನಿ ಬೆಂಗಳೂರಲ್ಲಿ ಪುಡಿರೌಡಿಗಳ ಹಾವಳಿ ಹೆಚ್ಚಾಗಿದೆ. ಹಫ್ತಾ ವಸೂಲಿ ಮಾಡುವುದು ಹಣ ಕೊಡದೆ ಇದ್ರೆ ಹಲ್ಲೆ ಮಾಡುವ ಪ್ರಕರಣಗಳು ಹೆಚ್ಚಾಗುತ್ತಿದೆ. ಇದರ ಜೊತೆಯಲ್ಲಿ ಪೋಲಿಸರು, ಜಿಬಿಎ ಅಧಿಕಾರಿಗಳು, ಆರೋಗ್ಯ ಇಲಾಖೆಯ ಅಧಿಕಾರಿಗಳ ಹಿಂಸೆ ಬೇರೆ. ಹೀಗಾಗಿ ಇದಕ್ಕೆ ಕಡಿವಾಣ ಹಾಕುವಂತೆ ಬೆಂಗಳೂರಿನ ಬೇಕರಿ- ಕಾಂಡಿಮೆಂಟ್ಸ್,ಬೀಡಾ ಅಂಗಡಿ, ಸಣ್ಣಪುಟ್ಟ ವ್ಯಾಪಾರಿಗಳು, ಗುರುವಾದಿಂದ ಅನಿರ್ದಿಷ್ಟಾವದಿ ಮುಷ್ಕರಕ್ಕೆ ಕರೆ ನೀಡಿದ್ದಾರೆ. ಗುರುವಾರದಂದು ನಗರದಲ್ಲಿ ಹಾಲು,ಟೀ,ಕಾಫಿ, ಬ್ರೇಡ್, ಬನ್, ಹಣ್ಣು, ತರಕಾರಿ, ಊಟ-ತಿಂಡಿ ಸಿಗೋದು ಬಹುತೇಕ ಡೌಟ್ ಎನ್ನಲಾಗ್ತಿದೆ. ಗುರುವಾರ ಬೆಳಿಗ್ಗೆ 5 ಗಂಟೆಯಿಂದ ಬೆಂಗಳೂರಿನ ಎಲ್ಲಾ ಅಂಗಡಿ ಮುಗ್ಗಟ್ಟುಗಳು ಬಂದ್ ಆಗಲಿದ್ಯಂತೆ.ಬದುಕಲು ಅವಕಾಶ ಕೊಡಿ ಇಲ್ಲ ಒಂದು ತೊಟ್ಟು ವಿಷ ಕೊಡಿ ಎಂದು ಪ್ರತಿಭಟನೆಗೆ ಮುಂದಾಗಿರುವ ಬೇಕರಿ- ಕಾಂಡಿಮೆಂಟ್ಸ್ ಮಾಲೀಕರು.

ಇದನ್ನೂ ಓದಿ: ಸಿಎಂ ಡಿಕೆಶಿ ಸೂಚನೆ ಬೆನ್ನಲ್ಲೇ ಪ್ರತಿ ಪೊಲೀಸ್ ಠಾಣೆಯಲ್ಲಿ ರೌಡಿ ಸ್ಕ್ವಾಡ್ ರಚನೆಗೆ ಆದೇಶ

ಇನ್ನೂ ಬೆಂಗಳೂರಿನಲ್ಲಿ ಬೇಕರಿ, ಕಾಂಡಿಮೆಂಟ್ಸ್, ಬೀಡಾ ಅಂಗಡಿ, ಚಿಲ್ಲರೆ ಅಂಗಡಿ, ಬೀದಿಬದಿ ವ್ಯಾಪಾರಿಗಳು, ಮೊಬೈಲ್ ಕ್ಯಾಂಟೀನ್ ಸೇರಿ ಒಟ್ಟು ಸುಮಾರು 58 ಸಾವಿರ ಅಂಗಡಿಗಳಿವೆ. ಈ ಎಲ್ಲಾ ವ್ಯಾಪಾರಿಗಳು ಮುಷ್ಕರಕ್ಕೆ ಬೆಂಬಲ ನೀಡಿದ್ದು, ಜೂನ್ 18ರಂದು   ಅಂಗಡಿ ಕ್ಲೋಸ್ ಮಾಡಿ ಫ್ರೀಡಂ ಪಾರ್ಕ್ ನಲ್ಲಿ ಬೆಳಿಗ್ಗೆ 5 ರಿಂದ ರಾತ್ರಿ11 ಗಂಟೆಯವರೆಗೆ ಮುಷ್ಕರ ನಡೆಸಲು ಮುಂದಾಗಿದ್ದಾರೆ.

ವ್ಯಾಪಾರಿಗಳ ಪ್ರಮುಖ ಬೇಡಿಕೆಗಳು

ತಂಬಾಕು ಉತ್ಪನ್ನಗಳನ್ನು ಮುಕ್ತವಾಗಿ ಮಾರಾಟ ಮಾಡಲು ಅವಕಾಶ ಕೊಡಿ,ಇಲ್ಲ ಉತ್ಪನ್ನಗಳನ್ನು ಸಂಪೂರ್ಣ ನಿಷೇಧಿಸಬೇಕು, ಬೇಕರಿ ಕಾಂಡಿಮೆಂಟ್ಸ್ ಮಾಲೀಕರು ಹಣ ಕೊಟ್ಟು ಖರೀದಿ ಮಾಡಿದ ಅ ವಸ್ತುಗಳನ್ನು ಅಧಿಕಾರಿಗಳು ಸೀಜ್ ಮಾಡ್ತಿದ್ದಾರೆ ಅದನ್ನು ನಿಲ್ಲಿಸಬೇಕು. ಹಾಗೇ ಅಧಿಕಾರಿಗಳ ದರ್ಪ ನಿಲ್ಲಿಸಬೇಕು. ಪುಡಿ ರೌಡಿಗಳ ರೌಡಿಸಂ ಕಡಿವಾಣ ಹಾಕಬೇಕು.

ಈ ಬಗ್ಗೆ ಮಾತನಾಡಿದ ವ್ಯಾಪಾರಿ, ಇತ್ತೀಚೆಗೆ ಬೇಕರಿ ಕಾಂಡಿಮೆಂಟ್ಸ್ ಮಾಲೀಕರಿಗೆ ಕಿರುಕುಳ ಹೆಚ್ಚಾಗಿದೆ. ಹಣ ಕೊಡದೆ ಕಿರುಕುಳ ಕೊಡ್ತಾರೆ. ಇದರಿಂದ ಗುರುವಾರ ಎಲ್ಲಾ ಸಣ್ಣಪುಟ್ಟ ವ್ಯಾಪಾರಿಗಳು ಸೇರಿಕೊಂಡು ಅಂಗಡಿ ಕ್ಲೋಸ್ ಮಾಡಿ ಫ್ರೀಡಂ ಪಾರ್ಕ್ ನಲ್ಲಿ ಬೆಳಿಗ್ಗೆ 5 ರಿಂದ ರಾತ್ರಿ11 ಗಂಟೆಯವರೆಗೆ ಮುಷ್ಕರ ಮಾಡುತ್ತೇವೆ ಎಂದಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

World Wind Day 2026: ವಿಶ್ವ ಪವನ ದಿನಾಚರಣೆಯ ಉದ್ದೇಶವೇನು? – Kannada News | World Wind Day 2026: Purpose of World Wind Day

ಪವನ (Wind) ಶಕ್ತಿಯು ಶುದ್ಧ, ನವೀಕರಿಸಬಹುದಾದ ಮತ್ತು ಹೇರಳವಾದ ಶಕ್ತಿಯ ನೈಸರ್ಗಿಕ ಮೂಲವಾಗಿದ್ದು, ಇದರಿಂದ ಶಕ್ತಿಯನ್ನು ಉತ್ಪಾದಿಸಬಹುದು ಅಲ್ಲದೆ ಇದು ಹವಾಮಾನ ಬದಲಾವಣೆಯನ್ನು ತಗ್ಗಿಸುವಲ್ಲಿ, ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡುವಲ್ಲಿ ಮತ್ತು ಸುಸ್ಥಿರ ಅಭಿವೃದ್ಧಿಯನ್ನು ಉತ್ತೇಜಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಮುಖ್ಯವಾಗಿ ಭೂಮಿಯ ಮೇಲಿರುವ ಪ್ರತಿಯೊಂದು ಜೀವಿಯ ಉಳಿವಿಗೂ ಗಾಳಿ ಬೇಕೇ ಬೇಕು. ಶುದ್ಧ ಗಾಳಿಯ ಮಹತ್ವವನ್ನು ಸಾರಲು, ಈ ಪವನ ಶಕ್ತಿಯ ವಿವಿಧ ಉಪಯೋಗ ಮತ್ತು ಅದರ ಸರಿಯಾದ ಬಳಕೆಯ ಬಗ್ಗೆ ಜಾಗೃತಿ ಮೂಡಿಸಲು ಪ್ರತಿವರ್ಷ ಜೂನ್ 15 ರಂದು‌ ವಿಶ್ವ ವಾಯು ದಿನವನ್ನು ಆಚರಿಸಲಾಗುತ್ತದೆ.

ವಿಶ್ವ ಗಾಳಿ ದಿನದ ಇತಿಹಾಸವೇನು?

ಯುರೋಪಿಯನ್ ವಿಂಡ್‌ ಎನರ್ಜಿ ಅಸೋಸಿಯೇಷನ್ (EWEA) 2007 ರಲ್ಲಿ ಮೊದಲ ಬಾರಿಗೆ ಈ ದಿನವನ್ನು ಆಚರಿಸಿತು. ನಂತರ, 2009 ರಲ್ಲಿ  ಈ ಸಂಘಟನೆ ಗ್ಲೋಬಲ್‌ ವಿಂಡ್‌ ಎನರ್ಜಿ ಕೌನ್ಸಿಲ್ (GWEC) ಸಹಭಾಗಿತ್ವದಲ್ಲಿ ಈ ದಿನವನ್ನು ವಿವಿಧ ಕಾರ್ಯಕ್ರಮಗಳ ಜೊತೆಗೆ  ಜಾಗತಿಕವಾಗಿ ಆಚರಿಸಲು ಪ್ರಾರಂಭಿಸಿತು. ಎರಡೂ ಸಂಸ್ಥೆಗಳು ಈ ದಿನದಂದು ಶುದ್ಧ ಗಾಳಿಯ ಮಹತ್ವದ ಬಗ್ಗೆ ಮತ್ತು ವಾತಾವರಣದಲ್ಲಿನ ಇಂಗಾಲದ ಪ್ರಮಾಣವನ್ನು ಕಡಿಮೆ ಮಾಡಲು ಜನರಿಗೆ ಅರಿವು ಮೂಡಿಸಲಾಗುತ್ತದೆ.

ಇದನ್ನೂ ಓದಿ: ರಕ್ತದಾನ ಮಾಡಿ ಅಮೂಲ್ಯ ಜೀವಗಳನ್ನು ಉಳಿಸಲು ನೆರವಾಗಿ

ವಿಶ್ವ ಗಾಳಿ ದಿನದ ಮಹತ್ವವೇನು?

  • ಪವನ ಶಕ್ತಿಯ ಮಹತ್ವ ಹಾಗೂ ಅದರ ಸರಿಯಾದ ಬಳಕೆಯ ಬಗ್ಗೆ ಜಾಗೃತಿಯನ್ನು ಮೂಡಿಸಲು ವಿಶ್ವ ವಾಯು ದಿನವನ್ನು ಅಚರಿಸಲಾಗುತ್ತದೆ.
  • ಈ ದಿನದಂದು, ದೈನಂದಿನ ಜೀವನದಲ್ಲಿ ಪವನ ಶಕ್ತಿಯನ್ನು ಬಳಸಲು, ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡಲು ಮತ್ತು ಪವನ ಶಕ್ತಿ ಉತ್ಪಾದನಾ ವಲಯದಲ್ಲಿ ಉದ್ಯೋಗವನ್ನು ಉತ್ತೇಜಿಸಲು ಪ್ರಪಂಚದಾದ್ಯಂತ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.
  • ಇಂದಿನ ಕಾಲದಲ್ಲಿ, ನೀರು, ಗಾಳಿ, ಸೌರ ಮತ್ತು ಇತರ ನೈಸರ್ಗಿಕ ಅಸಾಂಪ್ರದಾಯಿಕ ಶಕ್ತಿಯ ಮಹತ್ವ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಪ್ರಕೃತಿಯನ್ನು ನಾಶಮಾಡುವ ಬದಲು, ವಿಜ್ಞಾನವು ನೈಸರ್ಗಿಕ ಸಂಪನ್ಮೂಲಗಳ ಉತ್ತಮ ಬಳಕೆಯತ್ತ ಸಾಗುತ್ತಿದೆ. ಗಾಳಿಯ ಶಕ್ತಿ ಮತ್ತು ಅದನ್ನು ಹೇಗೆ ಬಳಸಿಕೊಳ್ಳಬಹುದು ಎಂಬುದರ ಕುರಿತು ಜಾಗೃತಿ ಮೂಡಿಸಲು ವಿಶ್ವ ಪವನ ದಿನವನ್ನು ಆಚರಿಸಲಾಗುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ತೆರಿಗೆ ವಿನಾಯಿತಿ, ಉಚಿತ ಟಿಕೆಟ್: ಆದರೂ ಏಳುತ್ತಿಲ್ಲ ಕಂಗನಾ ಸಿನಿಮಾ – Kannada News | Kangana Ranaut starrer bharat bhagya vidhata movie declares tax free in Haryana

ಕಂಗನಾ ರನೌತ್ (Kangana Ranaut) ನಟನೆಯ ‘ಭಾರತ ಭಾಗ್ಯ ವಿಧಾತ’ ಹೆಸರಿನ ಸಿನಿಮಾ ಎರಡು ದಿನಗಳ ಹಿಂದಷ್ಟೆ ಬಿಡುಗಡೆ ಆಗಿದೆ. ನಟಿ ಮತ್ತು ಸಂಸದೆ ಆಗಿರುವ ಕಂಗನಾ ರನೌತ್ ಅವರು ಶುಶ್ರೂಕಿಯ ಪಾತ್ರದಲ್ಲಿ ನಟಿಸಿದ್ದಾರೆ. 2008 ರಲ್ಲಿ ನಡೆದ ಮುಂಬೈ ದಾಳಿಯ ವೇಳೆ ಮುಂಬೈನ ಕಾಮಾ ಆಸ್ಪತ್ರೆಯ ವೈದ್ಯರು ಮತ್ತು ಶುಶ್ರೂಕಿಯರು ತೋರಿದ ಅಭೂತಪೂರ್ವ ಧೈರ್ಯ, ತ್ಯಾಗ ಮತ್ತು ಸೇವೆಯ ಕತೆಯನ್ನು ಈ ಸಿನಿಮಾ ಒಳಗೊಂಡಿದೆ. ಸಿನಿಮಾದ ಕಥಾವಸ್ತು ಚೆನ್ನಾಗಿದೆಯಾದರೂ ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ ಬಲು ನೀರಸ ಪ್ರದರ್ಶನ ತೋರುತ್ತಿದೆ.

ಕಂಗನಾ ನಟನೆಯ ಈ ಸಿನಿಮಾಕ್ಕೆ ಹರಿಯಾಣದಲ್ಲಿ ತೆರಿಗೆ ವಿನಾಯಿತಿ ಘೋಷಿಸಲಾಗಿದೆ. ಶನಿವಾರ ಸಿನಿಮಾದ ವಿಶೇಷ ಸ್ಕ್ರೀನಿಂಗ್ಗೆ ಹಾಜರಾಗಿ ಸಿನಿಮಾ ನೋಡಿದ ಹರಿಯಾಣ ಸಿಎಂ ನಯಾಬ್ ಸಿಂಗ್ ಅವರು, ಈ ಸಿನಿಮಾವು ಇದು ಧೈರ್ಯ, ಕರುಣೆ, ಕರ್ತವ್ಯ ಮತ್ತು ಮಾನವೀಯತೆಯ ಶಕ್ತಿಯುತ ಕಥೆಯನ್ನು ಸಾರುತ್ತದೆ ಮತ್ತು ಪ್ರತಿಯೊಬ್ಬ ಭಾರತೀಯರಿಗೂ ಸ್ಪೂರ್ತಿ ನೀಡುತ್ತದೆ ಎಂದು ಬಣ್ಣಿಸಿದರು. ಚಿತ್ರದ ವಿಶೇಷ ಪ್ರದರ್ಶನದ ವೇಳೆ ಮುಖ್ಯಮಂತ್ರಿಯವರ ಪತ್ನಿ ಸುಮನ್ ಸೈನಿ, ಅವರ ಸಂಪುಟದ ಕೆಲವು ಸಚಿವರು ಮತ್ತು ನಟಿ ಕಂಗನಾ ರನೌತ್ ಉಪಸ್ಥಿತರಿದ್ದರು.

ಇದೇ ಸಿನಿಮಾಕ್ಕೆ ಇಡೀ ದೇಶದಾದ್ಯಂತ ಒಂದು ಟಿಕೆಟ್ ಖರೀದಿಸಿದರೆ ಮತ್ತೊಂದು ಟಿಕೆಟ್ ಉಚಿತ ಎಂಬ ಘೋಷಣೆಯನ್ನೂ ಸಹ ಚಿತ್ರತಂಡ ಘೋಷಿಸಿದೆ. ಬುಕ್​​ಮೈ ಶೋ ಮೂಲಕ ಟಿಕೆಟ್ ಬುಕ್ ಮಾಡುವವರು ‘BHARAT’ ಎಂಬ ಕೋಡ್ ಬಳಸಿ ಟಿಕೆಟ್ ಬುಕ್ ಮಾಡಿದಲ್ಲಿ ಒಂದು ಟಿಕೆಟ್ ಬೆಲೆಗೆ ಎರಡು ಟಿಕೆಟ್ ಬುಕ್ ಮಾಡಬಹುದಾಗಿದೆ. ದೇಶದಾದ್ಯಂತ ಎಲ್ಲ ನಗರಗಳಲ್ಲಿಯೂ ಈ ಆಫರ್ ಚಾಲ್ತಿಯಲ್ಲಿದೆ.

ಇದನ್ನೂ ಓದಿ:ಅಪರೂಪಕ್ಕೆ ದೀಪಿಕಾ ಪಡುಕೋಣೆಯನ್ನು ಕೊಂಡಾಡಿದ ಕಂಗನಾ ರನೌತ್

ಇಷ್ಟೆಲ್ಲ ಆದರೂ ಸಹ ‘ಭಾರತ್ ಭಾಗ್ಯ ವಿಧಾತ’ ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ ನೀರಸ ಕಲೆಕ್ಷನ್ ಮಾಡಿದೆ. ಮೊದಲ ದಿನ ಒಂದು ಕೋಟಿ ಗಳಿಸಿದ್ದ ಈ ಸಿನಿಮಾ ವೀಕೆಂಡ್​​ನಲ್ಲಿ ಅಷ್ಟೇನೂ ಉತ್ತಮ ಮೊತ್ತ ಗಳಿಸಿಲ್ಲ ಆದರೆ ಮೊದಲ ದಿನಕ್ಕೆ ಹೋಲಿಸಿದರೆ ನಿನ್ನೆ (ಶನಿವಾರ) ಗಳಿಕೆಯಲ್ಲಿ ಸಣ್ಣ ಏರಿಕೆ ಕಂಡು ಬಂದಿದೆ. ಎರಡನೇ ದಿನ ಅಂದರೆ ಶನಿವಾರದಂದು ಸಿನಿಮಾ 1.45 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಈಗ ತೆರಿಗೆ ವಿನಾಯಿತಿ, ಒಂದು ಟಿಕೆಟ್​​ಗೆ ಇನ್ನೊಂದು ಫ್ರೀ ಆಫರ್​ಗಳ ಬಳಿಕ ಭಾನುವಾರದ ಗಳಿಕೆ ಇನ್ನಷ್ಟು ಉತ್ತಮಗೊಳ್ಳುವ ನಿರೀಕ್ಷೆ ಚಿತ್ರತಂಡದ್ದು.

ಈ ಸಿನಿಮಾ ಮುಂಬೈನಲ್ಲಿ ನಡೆದ 26/11 ಭಯೋತ್ಪಾದಕ ದಾಳಿಯ ಕತೆಯನ್ನು ಒಳಗೊಂಡಿದೆ. ಭಯೋತ್ಪಾದಕರು ಆಸ್ಪತ್ರೆಯ ಒಳಗೆ ನುಗ್ಗಿದಾಗ, ನರ್ಸ್‌ಗಳು, ವಾರ್ಡ್ ಬಾಯ್‌ಗಳು, ಸ್ವಚ್ಛತಾ ಸಿಬ್ಬಂದಿ, ಲಿಫ್ಟ್ ಆಪರೇಟರ್‌ಗಳು ಮತ್ತು ಭದ್ರತಾ ಸಿಬ್ಬಂದಿ ತಮ್ಮ ಕರ್ತವ್ಯವನ್ನು ಹೇಗೆ ದೃಢವಾಗಿ ನಿರ್ವಹಿಸಿದರು ಹಾಗೂ ನೂರಾರು ಜೀವಗಳನ್ನು ಹೇಗೆ ಕಾಪಾಡಿದರು ಎಂಬುದನ್ನು ಸಿನಿಮಾನಲ್ಲಿ ತೋರಿಸಲಾಗಿದೆ. ಕಂಗನಾ ರನೌತ್, ಗಿರಿಜಾ ಓಕ್, ಸ್ಮಿತಾ ತಾಂಬೆ ಇನ್ನೂ ಹಲವರು ಸಿನಿಮಾನಲ್ಲಿ ನಟಿಸಿದ್ದಾರೆ. ಸಿನಿಮಾ ನಿರ್ದೇಶಿಸಿರುವುದು ಮನೋಜ್ ತಪಾಡಿಯಾ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

IND vs PAK: ಪಾಕಿಸ್ತಾನ್ ವಿರುದ್ಧ ನಿರ್ಣಾಯಕ ಅರ್ಧಶತಕ ಚಚ್ಚಿದ ಸ್ಮೃತಿ ಮಂಧಾನ – Kannada News | India vs Pakistan Women’s T20 World Cup 2026: Smriti Mandhana’s Fifty Steers India Amidst Early Collapse

ಭಾರತ ಮತ್ತು ಪಾಕಿಸ್ತಾನ (India vs Pakistan) ನಡುವಿನ ಮಹಿಳಾ ಟಿ20 ವಿಶ್ವಕಪ್ ( Women’s T20 World Cup 2026) ಪಂದ್ಯ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯುತ್ತಿದೆ. ಈ ಪಂದ್ಯಾವಳಿಯಲ್ಲಿ ಉಭಯ ತಂಡಗಳಿಗೆ ಇದು ಮೊದಲ ಪಂದ್ಯವಾಗಿದೆ. ಹೀಗಾಗಿ ಉಭಯ ತಂಡಗಳು ಗೆಲುವಿನೊಂದಿಗೆ ಟೂರ್ನಿ ಆರಂಭಿಸಲು ನೋಡುತ್ತಿವೆ. ಅದರಂತೆ ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ನಾಯಕಿ ಹರ್ಮನ್​ಪ್ರೀತ್ ಕೌರ್ ಮೊದಲು ಬ್ಯಾಟಿಂಗ್‌ ಆಯ್ದುಕೊಂಡರು. ಆದರೆ ನಾಯಕಿಯ ಆಯ್ಕೆಯನ್ನು ಸಮರ್ಥಿಸಿಕೊಳ್ಳುವಲ್ಲಿ ಶಫಾಲಿ ಹಾಗೂ ಜೆಮೀಮಾ ಎಡವಿದರು. ಆದಾಗ್ಯೂ ಈ ಮಹತ್ವದ ಪಂದ್ಯದಲ್ಲಿ ತಮ್ಮ ಹಳೆಯ ಲಯಕ್ಕೆ ಮರಳಿದ ಉಪನಾಯಕಿ ಸ್ಮೃತಿ ಮಂಧಾನ ಸ್ಫೋಟಕ ಅರ್ಧಶತಕದ ಇನ್ನಿಂಗ್ಸ್ ಆಡಿದರು.

ಈ ಪಂದ್ಯದಲ್ಲಿ ಭಾರತಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಆರಂಭಿಕ ಆಟಗಾರ್ತಿ ಶಫಾಲಿ ವರ್ಮಾ ಇನ್ನಿಂಗ್ಸ್​ನ ಮೊದಲ ಎಸೆತವನ್ನು ಸಿಕ್ಸರ್​ಗಟ್ಟಿದರಾದರೂ ಅದೇ ಓವರ್​ನ ಕೊನೆಯ ಎಸೆತದಲ್ಲಿ ಕೀಪರ್​​ಗೆ ಕ್ಯಾಚಿತ್ತು ಔಟಾದರು. ಆ ಬಳಿಕ ಬಂದ ಜೆಮೀಮಾ ಕೂಡ ಕೇವಲ 1 ರನ್​ಗೆ ವಿಕೆಟ್ ಒಪ್ಪಿಸಿದರು. ಹೀಗಾಗಿ ಭಾರತ ಕೇವಲ 18 ರನ್​ಗಳಿಗೆ ತನ್ನ ಮೊದಲೆರಡು ವಿಕೆಟ್​ಗಳನ್ನು ಕಳೆದುಕೊಂಡಿತು. ಆದರೆ ಆ ಬಳಿಕ ಜೊತೆಯಾದ ಸ್ಮೃತಿ ಹಾಗೂ ಹರ್ಮನ್​ ತಂಡದ ಇನ್ನಿಂಗ್ಸ್ ಕಟ್ಟಿದರು. ಇವರಿಬ್ಬರು ಮೂರನೇ ವಿಕೆಟ್​ಗೆ 91 ರನ್​ಗಳ ಜೊತೆಯಾಟವನ್ನಾಡಿತು.

ಆರಂಭದಲ್ಲಿ ತಾಳ್ಮೆಯ ಬ್ಯಾಟಿಂಗ್‌ ಪ್ರದರ್ಶಿಸಿದ ಸ್ಮೃತಿ, ಆ ಬಳಿಕ ನಿಧಾನವಾಗಿ ತಮ್ಮ ಗೇರ್ ಬದಲಿಸಿದರು. ಹೀಗಾಗಿ ಕೇವಲ 34 ಎಸೆತಗಳಲ್ಲಿ ತಮ್ಮ ಅರ್ಧಶತಕ ಪೂರೈಸಿದರು. ಸ್ಮೃತಿ ಅವರ ಈ ಇನ್ನಿಂಗ್ಸ್​ನಿಂದಾಗಿ ಭಾರತ ತಂಡ ಶತಕದ ಗಡಿ ಕೂಡ ದಾಟಿತು. ಅರ್ಧಶತಕದ ಬಳಿಕ ಹೊಡಿಬಡಿ ಆಟಕ್ಕೆ ಮುಂದಾದ ಸ್ಮೃತಿ 68 ರನ್ ಬಾರಿಸಿ ಔಟಾದರು. ತಮ್ಮ ಇನ್ನಿಂಗ್ಸ್​ನಲ್ಲಿ 44 ಎಸೆತಗಳನ್ನು ಎದುರಿಸಿದ ಸ್ಮೃತಿ 9 ಬೌಂಡರಿ ಹಾಗೂ 2 ಸಿಕ್ಸರ್‌ಗಳನ್ನು ಬಾರಿಸಿದರು.

ವಾಸ್ತವವಾಗಿ ವಿಶ್ವಕಪ್​ಗೂ ಮುನ್ನ ಸ್ಮೃತಿ ಕಳಪೆ ಫಾರ್ಮ್​ನಿಂದ ಬಳಲುತ್ತಿದ್ದರು. ವಾಸ್ತವವಾಗಿ ಟಿ20 ವಿಶ್ವಕಪ್‌ಗೆ ಸಿದ್ಧರಾಗಲು ಮತ್ತು ಅಲ್ಲಿನ ಪರಿಸ್ಥಿತಿಗಳಿಗೆ ಹೊಂದಿಕೊಳ್ಳಲು ಹರ್ಮನ್‌ಪ್ರೀತ್ ಪಡೆ ಸಾಕಷ್ಟು ಮುಂಚಿತವಾಗಿಯೇ ಇಂಗ್ಲೆಂಡ್‌ಗೆ ತಲುಪಿತ್ತು. ಆದಾಗ್ಯೂ, ಈ ಪ್ರವಾಸ ಮಂಧಾನಾಗೆ ದುಃಸ್ವಪ್ನವಾಗಿ ಪರಿಣಮಿಸಿತ್ತು. ಇಂಗ್ಲೆಂಡ್ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯದಲ್ಲಿ ಖಾತೆ ತೆರೆಯದೆ ಪೆವಿಲಿಯನ್‌ ಸೇರಿದ್ದ ಮಂಧಾನ, ಎರಡನೇ ಪಂದ್ಯದಲ್ಲಿ 32 ರನ್ ಗಳಿಸುವ ಮೂಲಕ ಹಳೆಯ ಫಾರ್ಮ್​ಗೆ ಮರಳುವ ಭರವಸೆಯನ್ನು ಮೂಡಿಸಿದ್ದರು. ಆದರೆ ಮೂರನೇ ಮತ್ತು ಅಂತಿಮ ಟಿ20ಯಲ್ಲಿ ಕೇವಲ 8 ರನ್ ಕಲೆಹಾಕಲಷ್ಟೇ ಶಕ್ತರಾಗಿದ್ದರು.

ಇದರ ನಂತರ, ವೆಸ್ಟ್ ಇಂಡೀಸ್ ವಿರುದ್ಧದ ವಿಶ್ವಕಪ್‌ನ ಮೊದಲ ಅಭ್ಯಾಸ ಪಂದ್ಯದಲ್ಲಿ 39 ರನ್ ಬಾರಿಸಿದ್ದ ಸ್ಮೃತಿ, ಇಂಗ್ಲೆಂಡ್ ವಿರುದ್ಧದ ಎರಡನೇ ಅಭ್ಯಾಸ ಪಂದ್ಯದಲ್ಲಿ ಕೇವಲ 1 ರನ್ ಗಳಿಸುವ ಮೂಲಕ ಮತ್ತೆ ನಿರಾಶೆ ಮೂಡಿಸಿದ್ದರು. ಹೀಗಾಗಿ ಸ್ಮೃತಿ ಅವರ ಫಾರ್ಮ್​ ತಂಡದ ಕಳವಳ ಹೆಚ್ಚಿಸಿತ್ತು. ಆದರೆ ಪಾಕ್ ವಿರುದ್ಧದ ಪಂದ್ಯದಲ್ಲಿ ಅರ್ಧಶತಕ ಬಾರಿಸುವ ಮೂಲಕ ಮಂಧಾನ ತಮ್ಮ ಹಳೆಯ ಲಯಕ್ಕೆ ಮರಳಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link