ರಶ್ಮಿಕಾ ಮಂದಣ್ಣ ಹೊಸ ಸಿನಿಮಾಕ್ಕೆ ‘ಎ’ ಪ್ರಮಾಣ ಪತ್ರ – Kannada News | Rashmika, Kriti, Shahid starrer Cocktail 2 movie gets A certificate

ರಶ್ಮಿಕಾ ಮಂದಣ್ಣ (Rashmika Mandanna) ಈಗ ಪ್ಯಾನ್ ಇಂಡಿಯಾ ಸ್ಟಾರ್ ನಟಿ. ಹಲವು ದೊಡ್ಡ ಸ್ಟಾರ್​ಗಳ ಜೊತೆಗೆ ರಶ್ಮಿಕಾ ನಟಿಸುತ್ತಿದ್ದಾರೆ. ದಕ್ಷಿಣ ಭಾರತ ಚಿತ್ರರಂಗ ಸೇರಿದಂತೆ ಬಾಲಿವುಡ್​​ನ ಸಿನಿಮಾಗಳಲ್ಲಿಯೂ ಬ್ಯುಸಿಯಾಗಿದ್ದಾರೆ. ಆದರೆ ರಶ್ಮಿಕಾ ಮಂದಣ್ಣ ‘ಫ್ಯಾಮಿಲಿ ನಟಿ’ ಎಂದೇ ಹೆಸರು ಮಾಡಿದ್ದಾರೆ. ಅವರಿಗೆ ಸಿಗುವ ಪಾತ್ರಗಳು ಸಹ ಗೃಹಸ್ಥೆ, ಸಂಭಾವಿತ ಗರ್ಲ್​​ಫ್ರೆಂಡ್ ಇಂಥಹುವೇ. ‘ಅನಿಮಲ್’ ಅಂಥಹಾ ಸಿನಿಮಾನಲ್ಲೂ ಸಹ ರಶ್ಮಿಕಾ ಅವರದ್ದು ‘ಒಳ್ಳೆಯ ಪತ್ನಿ’ಯ ಪಾತ್ರವೇ ಆಗಿತ್ತು. ಆದರೆ ಇದೀಗ ರಶ್ಮಿಕಾ, ಹೊಸ ಸಿನಿಮಾನಲ್ಲಿ ತುಸು ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದು, ಇದೇ ಕಾರಣಕ್ಕೆ ಸಿನಿಮಾಕ್ಕೆ ‘ಎ’ ಪ್ರಮಾಣ ಪತ್ರ ದೊರೆತಿದೆ.

ರಶ್ಮಿಕಾ ನಟಿಸುವ ಸಿನಿಮಾಗಳಿಗೆ ‘ಎ’ ಪ್ರಮಾಣ ಪತ್ರ ಸಿಗುವುದು ಅಪರೂಪದಲ್ಲಿ ಅಪರೂಪ. ಈ ಹಿಂದೆ ‘ಅನಿಮಲ್’ ಸಿನಿಮಾಕ್ಕೆ ‘ಎ’ ಪ್ರಮಾಣ ಪತ್ರವನ್ನು ಸಿಬಿಎಫ್​​ಸಿ ನೀಡಿತ್ತು. ಆದರೆ ಆ ಸಿನಿಮಾನಲ್ಲಿ ರಶ್ಮಿಕಾ ಅವರದ್ದು ಸಂಭಾವಿತ ಗೃಹಿಣಿಯ ಪಾತ್ರವೇ ಆಗಿತ್ತು. ಆದರೆ ಇದೀಗ ರಶ್ಮಿಕಾ ನಟಿಸಿರುವ ಹೊಸ ಸಿನಿಮಾ ‘ಕಾಕ್​​ಟೇಲ್ 2’ಗೆ ಸಿಬಿಎಫ್​​ಸಿ ‘ಎ’ ಪ್ರಮಾಣ ಪತ್ರ ನೀಡಿದೆ. 18 ವರ್ಷಕ್ಕೂ ಹೆಚ್ಚಿನ ವಯಸ್ಸಿನವರು ಮಾತ್ರವೇ ಈ ಸಿನಿಮಾ ವೀಕ್ಷಿಸಬಹುದಾಗಿದೆ.

‘ಕಾಕ್​​ಟೇಲ್ 2’ ಸಿನಿಮಾಕ್ಕೆ ‘ಎ’ ಪ್ರಮಾಣ ಪತ್ರ ದೊರಕುವ ಮೂಲಕ ರಶ್ಮಿಕಾ ಮಂದಣ್ಣ ವೃತ್ತಿ ಜೀವನದಲ್ಲಿ ಎರಡನೇ ಸಿನಿಮಾಕ್ಕೆ ‘ಎ’ ಪ್ರಮಾಣ ಪತ್ರ ದೊರೆತಂತಾಗಿದೆ. ಈ ಹಿಂದೆ ರಶ್ಮಿಕಾ ನಾಯಕಿಯಾಗಿದ್ದ ‘ಅನಿಮಲ್’ ಸಿನಿಮಾಕ್ಕೆ ‘ಎ’ ಪ್ರಮಾಣ ಪತ್ರ ದೊರೆತಿತ್ತು. ಆದರೆ ಆ ಸಿನಿಮಾನಲ್ಲಿ ರಶ್ಮಿಕಾ ಅವರದ್ದು ಗ್ಲಾಮರಸ್ ಪಾತ್ರ ಆಗಿರಲಿಲ್ಲ. ಆದರೆ ‘ಕಾಕ್​​ಟೇಲ್ 2’ ಸಿನಿಮಾನಲ್ಲಿ ರಶ್ಮಿಕಾ ಮಂದಣ್ಣ ಸಖತ್ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದಾರೆ. ರಶ್ಮಿಕಾ ಜೊತೆಗೆ ನಟಿ ಕೃತಿ ಸನೊನ್ ಸಹ ಸಿನಿಮಾನಲ್ಲಿದ್ದು, ಅವರೂ ಸಹ ಸಖತ್ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದಾರೆ. ಇದೇ ಕಾರಣಕ್ಕೆ ಸಿನಿಮಾಕ್ಕೆ ‘ಎ’ ಪ್ರಮಾಣ ಪತ್ರ ನೀಡಲಾಗಿದೆ.

ಈ ಸಿನಿಮಾ ತ್ರಿಕೋನ ಪ್ರೇಮಕತೆಯನ್ನು ಒಳಗೊಂಡಿದೆ. ಸಿನಿಮಾನಲ್ಲಿ ಶಾಹಿದ್ ಕಪೂರ್ ನಾಯಕ. ಸಿನಿಮಾದ ಟ್ರೈಲರ್ ಈಗಾಗಲೇ ಬಿಡುಗಡೆ ಆಗಿದ್ದು, ಶಾಹಿದ್ ಕಪೂರ್, ರಶ್ಮಿಕಾ ಮತ್ತು ಕೃತಿ ಇಬ್ಬರಲ್ಲಿ ಒಬ್ಬರನ್ನು ಆಯ್ಕೆ ಮಾಡಿಕೊಳ್ಳಬೇಕಿದೆ. ಆದರೆ ಈ ನಡುವೆ ಮೂವರೂ ಪ್ರವಾಸಕ್ಕೆ ತೆರಳಿ ಒಬ್ಬರನ್ನೊಬ್ಬರು ಹೆಚ್ಚು ಅರ್ಥ ಮಾಡಿಕೊಳ್ಳುವ ಪ್ರಯತ್ನ ಮಾಡುತ್ತಾರೆ. ಕೊನೆಗೆ ಶಾಹಿದ್ ಯಾರನ್ನು ಒಪ್ಪಿಕೊಳ್ಳುತ್ತಾರೆ, ಅಥವಾ ಕತೆಯಲ್ಲಿ ಟ್ವಿಸ್ಟ್ ಏನಾದರೂ ಬರುತ್ತದೆಯೇ ಎಂಬುದು ಸಿನಿಮಾದ ಕತೆ.

ಇದನ್ನೂ ಓದಿ:ಸ್ಟಾರ್ ನಟಿಗೆ ಫಿಕ್ಸ್ ಆಗಿದ್ದ ಪ್ರಮುಖ ಸಿನಿಮಾ ಈಗ ರಶ್ಮಿಕಾ ಮಂದಣ್ಣ ಕೈಗೆ

ಈ ಸಿನಿಮಾನಲ್ಲಿ ರಶ್ಮಿಕಾ ಮಂದಣ್ಣ ಮತ್ತು ಕೃತಿ ಸನೋನ್ ಲೆಸ್ಬಿಯನ್ ಕಪಲ್ ಆಗಿ ನಟಿಸಿದ್ದಾರೆ ಎಂಬ ಮಾತುಗಳು ಸಹ ಕೇಳಿ ಬಂದಿದ್ದವು. ಚಿತ್ರತಂಡ ಇದನ್ನು ಅಲ್ಲಗಳೆದಿದೆಯಾದರೂ ಈಗ ಸಿನಿಮಾಕ್ಕೆ ‘ಎ’ ಪ್ರಮಾಣ ಪತ್ರ ದೊರೆತಿರವುದು ನೋಡಿ ಕೆಲ ನೆಟ್ಟಿಗರು ಮತ್ತೆ ಅನುಮಾನ ವ್ಯಕ್ತಪಡಿಸಿದ್ದಾರೆ. ಸಿನಿಮಾವನ್ನು ಹೋಮಿ ಅದಜಾನಿಯಾ ನಿರ್ದೇಶನ ಮಾಡಿದ್ದು, ನಿರ್ಮಾಣ ಮಾಡಿರುವುದು ದಿನೇಶ್ ವಿಜನ್. ಕತೆ ಬರೆದಿರುವುದು ಲವ್ ರಂಜನ್. ಸಿನಿಮಾ ಜೂನ್ 19ಕ್ಕೆ ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *