ENG vs WI: ನೇಪಾಳ ವಿರುದ್ಧ ತಿಣುಕಾಡಿ ಗೆದಿದ್ದ ಇಂಗ್ಲೆಂಡ್‌ಗೆ ವಿಂಡೀಸ್ ವಿರುದ್ಧ ಸೋಲು – Kannada News | West Indies Unbeaten Run Continues: Beat England in T20 World Cup 2026
ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡವು 2026 ರ ಟಿ20 ವಿಶ್ವಕಪ್ನಲ್ಲಿ ತನ್ನ ಅಜೇಯ ಓಟವನ್ನು ಮುಂದುವರಿಸುವಲ್ಲಿ ಯಶಸ್ವಿಯಾಗಿದೆ. ಟೂರ್ನಿಯ 15 ನೇ ಪಂದ್ಯದಲ್ಲಿ ಇಂಗ್ಲೆಂಡ್ ಹಾಗೂ ವೆಸ್ಟ್ ಇಂಡೀಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ವಿಂಡೀಸ್ ಶೆರ್ಫೇನ್ ರುದರ್ಫೋರ್ಡ್ ಅವರ ಸ್ಫೋಟಕ ಇನ್ನಿಂಗ್ಸ್ ಬಲದಿಂದ ಇಂಗ್ಲೆಂಡ್‌ಗೆ 197 ರನ್‌ಗಳ ಗುರಿಯನ್ನು ನೀಡಿತು. ಈ ಗುರಿ ಬೆನ್ನಟ್ಟಿದ ಇಂಗ್ಲೆಂಡ್, ವಿಂಡೀಸ್ ಸ್ಪಿನ್ನರ್‌ಗಳ ಬಲೆಗೆ ಸಿಲುಕಿ ಪೂರ್ಣ 20 ಓವರ್ಗಳನ್ನು ಆಡಲಾಗದೆ ಆಲೌಟ್ ಆಯಿತು. ಅಂತಿಮವಾಗಿ…