Headlines

‘ಪೆದ್ದಿ’ ಚಿತ್ರದ  ಬಗ್ಗೆ ದೊಡ್ಡ ಅಪ್​​ಡೇಟ್ ಕೊಟ್ಟ ನಿರ್ದೇಶಕ; ಹೊಸ ದೃಶ್ಯಗಳ ಸೇರ್ಪಡೆ  – Kannada News | Ram Charan’s Peddi Reigns Box Office: New Scenes Added to Smash Hit Film

ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಅಭಿನಯದ ಇತ್ತೀಚಿನ ಸೂಪರ್ ಹಿಟ್ ಸಿನಿಮಾ ‘ಪೆದ್ದಿ’ (Peddi Movie) ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸುತ್ತಿದೆ. ಜೂನ್ 4 ರಂದು ವಿಶ್ವಾದ್ಯಂತ ತೆರೆಕಂಡ ಈ ಚಿತ್ರವು ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಭರ್ಜರಿ ಪ್ರಶಂಸೆ ಪಡೆದುಕೊಂಡಿದೆ. ಸದ್ಯ ಭಾರಿ ಕಲೆಕ್ಷನ್ ಮಾಡುತ್ತಿರುವ ಈ ಸಿನಿಮಾ 2026ರಲ್ಲಿ ದಕ್ಷಿಣ ಭಾರತದಲ್ಲೇ ಅತಿ ಹೆಚ್ಚು ಗಳಿಕೆ ಮಾಡಿದ ನಂಬರ್ ಒನ್ ಚಿತ್ರವಾಗಿ ಹೊರಹೊಮ್ಮಿದೆ. ಎಲ್ಲಾ ಕಡೆ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿರುವ ಹಿನ್ನೆಲೆಯಲ್ಲಿ ಚಿತ್ರತಂಡ ಇತ್ತೀಚೆಗೆ ಸಕ್ಸಸ್…

Read More

ಸಿಕ್ಸ್ ಸಿಡಿಸಿಯೇ ಹೊಸ ಇತಿಹಾಸ ನಿರ್ಮಿಸಿದ ಸ್ಮೃತಿ ಮಂಧಾನ

ಭಾರತೀಯ ಮಹಿಳಾ ಕ್ರಿಕೆಟ್‌ನ ಸ್ಟಾರ್ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧಾನ (Smriti Mandhana) ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಅಭೂತಪೂರ್ವ ಮೈಲಿಗಲ್ಲೊಂದನ್ನು ಸಾಧಿಸಿದ್ದಾರೆ. ಅದು ಸಹ ಚುಟುಕು ಕ್ರಿಕೆಟ್​ನಲ್ಲಿ ಸಿಕ್ಸ್ ಸಿಡಿಸಿ ಎಂಬುದು ವಿಶೇಷ. (PC: BCCI) ಬರ್ಮಿಂಗ್ಹ್ಯಾಮ್​ನ ಎಡ್ಜ್​ಬಾಸ್ಟನ್ ಸ್ಟೇಡಿಯಂನಲ್ಲಿ ನಡೆದ ಪಾಕಿಸ್ತಾನ್ ವಿರುದ್ಧದ ಪಂದ್ಯದಲ್ಲಿ ಸ್ಮೃತಿ ಮಂಧಾನ 44 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 9 ಫೋರ್ ಗಳೊಂದಿಗೆ 68 ರನ್ ಬಾರಿಸಿದ್ದರು. ಈ ಎರಡು ಸಿಕ್ಸರ್ ಗಳೊಂದಿಗೆ ಸ್ಮೃತಿ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ…

Read More

ಕಂಗನಾ ರಣಾವತ್‌ಗೆ ಶಾಕ್: ‘ಭಾರತ ಭಾಗ್ಯ ವಿಧಾತಾ’ ಚಿತ್ರಕ್ಕೆ ಭಾರಿ ನಷ್ಟದ ಭೀತಿ – Kannada News | Kangana Ranaut’s ‘Bharat Bhagya Vidhata’ Faces Massive Box Office Loss

ಬಾಲಿವುಡ್ ನಟಿ ಕಂಗನಾ ರಣಾವತ್ (Kangana Ranaut) ಅಭಿನಯದ ಬಹುನಿರೀಕ್ಷಿತ ಚಿತ್ರ ‘ಭಾರತ್ ಭಾಗ್ಯ ವಿಧಾತಾ’ ಬಾಕ್ಸ್ ಆಫೀಸ್‌ನಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡುತ್ತಿದೆ. ಜೂನ್ 12 ರಂದು ಬಿಡುಗಡೆಯಾದ ಈ ಸಿನಿಮಾ ಮೊದಲ ವೀಕೆಂಡ್‌ನಲ್ಲಿ ಗಲ್ಲಾಪೆಟ್ಟಿಗೆಯಲ್ಲಿ ತತ್ತರಿಸಿ ಹೋಗಿದ್ದು, ಚಿತ್ರದ ನಿರ್ಮಾಪಕರಿಗೆ ಕೋಟ್ಯಂತರ ರೂಪಾಯಿ ನಷ್ಟವಾಗುವ ಮುನ್ಸೂಚನೆ ಸಿಕ್ಕಿದೆ. ಯಾವುದೇ ದೊಡ್ಡ ಸಿನಿಮಾದ ಅಬ್ಬರ ಇಲ್ಲದಿದ್ದರೂ ಚಿತ್ರಕ್ಕೆ ಪ್ರೇಕ್ಷಕರು ಬರುತ್ತಿಲ್ಲ. ಕೋಟಿ ಬಜೆಟ್; ಗಳಿಸಿದ್ದು ಕೇವಲ 4 ಕೋಟಿ! ಮೂಲಗಳ ಪ್ರಕಾರ, ‘ಭಾರತ ಭಾಗ್ಯ ವಿಧಾತಾ’…

Read More

ಯಾರೋ ಬೆಂಕಿ ಬೆಂಕಿ ಎಂದು ಕೂಗಿದ್ದಕ್ಕೆ ಭಯಗೊಂಡು ರೈಲಿನಿಂದ ಹಾರಿದ ನಾಲ್ವರಿಗೆ ಮತ್ತೊಂದು ರೈಲು ಡಿಕ್ಕಿ, ಎಲ್ಲರೂ ಸಾವು – Kannada News | Morena Train Tragedy: 4 Dead After Fire Rumor Causes Panic Jump, Hits Another Train

ಮೊರೆನಾ, ಜೂನ್ 15: ರೈಲಿನಲ್ಲಿ ಯಾರೋ ಬೆಂಕಿ ಬೆಂಕಿ ಎಂದು ಕೂಗೊಕೊಂಡಿದ್ದಕ್ಕೆ ಭಯಗೊಂಡು ನಾಲ್ವರು ರೈಲಿನಿಂದ ಹಾರಿ ಪ್ರಾಣ ಕಳೆದುಕೊಂಡಿರುವ ಹೃದಯವಿದ್ರಾವಕ ಘಟನೆ ಮಧ್ಯ ಪ್ರದೇಶದ ಮೊರೆನಾ ಜಿಲ್ಲೆಯಲ್ಲಿ ನಡೆದಿದೆ. ಮೊರೆನಾ ಜಿಲ್ಲೆಯ ಹೇತಾಂಪುರ ನಿಲ್ದಾಣದ ಬಳಿಯ ಉದಯಪುರ ಇಂಟರ್‌ಸಿಟಿ ಎಕ್ಸ್‌ಪ್ರೆಸ್‌ನಿಂದ ಗಾಬರಿಗೊಂಡ ಪ್ರಯಾಣಿಕರು ರೈಲಿ(Train)ನಿಂದ ಹಾರುವಾಗ ಪಕ್ಕದ ಹಳಿಯಲ್ಲಿ ಬರುತ್ತಿದ್ದ ಮತ್ತೊಂದು ರೈಲಿಗೆ ಡಿಕ್ಕಿ ಹೊಡೆದ ಪರಿಣಾಮ ಎಲ್ಲಾ ನಾಲ್ವರು ಅಲ್ಲೇ ಉಸಿರು ಚೆಲ್ಲಿದ್ದಾರೆ. ಜೂನ್ 14 ರಂದು ಸಂಜೆ 4.15 ರ ಸುಮಾರಿಗೆ ಈ…

Read More

Karnataka Weather Forecast: ರಾಜ್ಯದಲ್ಲಿ 2-3 ದಿನ ಮಳೆ ಅಬ್ಬರ; ಎಲ್ಲೆಲ್ಲಿ ವರುಣಾರ್ಭಟ? – Kannada News | Karnataka Weather Update: IMD Predicts Heavy Rainfall Across the State for Next 2 3 Days

ಬೆಂಗಳೂರು, ಜೂನ್​​ 15: ಮುಂಗಾರು ಮಳೆ ದೇಶದ ಹಲವು ಭಾಗಗಳಲ್ಲಿ ಮತ್ತಷ್ಟು ಮುನ್ನಡೆ ಸಾಧಿಸಿದ್ದು ಭಾರತೀಯ ಹವಾಮಾನ ಇಲಾಖೆ (IMD) ಪ್ರಕಾರ, ಮುಂದಿನ ಎರಡರಿಂದ ಮೂರು ದಿನಗಳಲ್ಲಿ ಕರ್ನಾಟಕದಲ್ಲಿ ಮಳೆಯ ಅಬ್ಬರ ಹೆಚ್ಚಲಿದೆ. ಉತ್ತರ ಒಳನಾಡು, ದಕ್ಷಿಣ ಒಳನಾಡು ಮತ್ತು ಕರಾವಳಿ ಸೇರಿ ರಾಜ್ಯಾದ್ಯಂತ ಗುಡುಗು ಹಾಗೂ ಮಿಂಚು ಸಹಿತ ಮಳೆಯನ್ನು ಅಂದಾಜಿಸಲಾಗಿದ್ದು, ಬೆಂಗಳೂರಲ್ಲಿಯೂ ವರುಣನ ಅಬ್ಬರವಿರಲಿದೆ. ಮುಖ್ಯಾಂಶಗಳು ರಾಜ್ಯದಲ್ಲಿ ಮುಂದಿನ 2-3 ದಿನಗಳು ವರುಣನ ಅಬ್ಬರ ರಾಜ್ಯದ ಹಲವೆಡೆ ಗುಡುಗು, ಮಿಂಚು ಸಹಿತ ಮಳೆ ಬೆಂಗಳೂರಲ್ಲಿಯೂ…

Read More

ಬಾಗಲಕೋಟೆ: ಭಾರಿ ಮಳೆಗೆ ಜಮಖಂಡಿ ತರಕಾರಿ ಮಾರುಕಟ್ಟೆ ಜಲಾವೃತ – Kannada News | Bagalkot Rain Fury: Heavy Rains Flood Gotay Vegetable Market in Jamkhandi; Trees Uprooted on Vijayapura

ಬಾಗಲಕೋಟೆ, ಜೂನ್ 15: ಬಾಗಲಕೋಟೆ ಜಿಲ್ಲೆಯಾದ್ಯಂತ ಮುಂಗಾರು ಮಳೆಯ ಅಬ್ಬರ ತೀವ್ರಗೊಂಡಿದ್ದು, ಜಮಖಂಡಿ ತಾಲೂಕಿನ ಹಲವೆಡೆ ಭಾರಿ ಮಳೆಯಿಂದಾಗಿ ವ್ಯಾಪಕ ಅವಾಂತರಗಳು ಸೃಷ್ಟಿಯಾಗಿವೆ. ಜಮಖಂಡಿ ತಾಲೂಕಿನ ಗೋಟೆ ಗ್ರಾಮದ ಸಾಪ್ತಾಹಿಕ ಸಂತೆಯಲ್ಲಿ ಸುರಿದ ಭಾರಿ ಮಳೆಯಿಂದಾಗಿ ತರಕಾರಿ ಮಾರುಕಟ್ಟೆ ಸಂಪೂರ್ಣ ಜಲಾವೃತಗೊಂಡಿತು. ಮಾರುಕಟ್ಟೆಯ ಮೈದಾನದಲ್ಲೆಲ್ಲಾ ಮಂಡಿಯುದ್ದ ನೀರು ನಿಂತಿದ್ದರಿಂದ ತರಕಾರಿ ಬುಟ್ಟಿಗಳು ಹಾಗೂ ಕ್ರೇಟ್‌ಗಳು ನೀರಿನಲ್ಲಿ ಮುಳುಗಡೆಯಾದವು. ಹಠಾತ್ ಮಳೆಯಿಂದ ಕಂಗಾಲಾದ ವ್ಯಾಪಾರಿಗಳು ತಮಗಾಗುವ ಭಾರಿ ನಷ್ಟವನ್ನು ತಪ್ಪಿಸಲು ಟೊಮೆಟೊ, ಹಸಿರು ಸೊಪ್ಪು ಹಾಗೂ ಇತರೆ ತರಕಾರಿಗಳನ್ನು…

Read More

ಮಹಾರಾಷ್ಟ್ರ: ಸೋಲಾಪುರದಲ್ಲಿ ಯಾತ್ರಿಕರಿದ್ದ ವ್ಯಾನ್ ಬಾವಿಗೆ ಉರುಳಿ 8 ಮಂದಿ ಸಾವು, 7 ಮಂದಿಗೆ ಗಾಯ, ಪ್ರಧಾನಿ ನೆರವು – Kannada News | Solapur Van Accident: 8 Dead, 7 Injured as Pilgrim Vehicle Falls into Well; PM Announces Aid

ಸೋಲಾಪುರ, ಜೂನ್ 15: ಮಹಾರಾಷ್ಟ್ರದ ಸೋಲಾಪುರ ಜಿಲ್ಲೆಯಲ್ಲಿ ಭಾನುವಾರ( ಜೂ.14) ಸಂಜೆ ಅಪಘಾತ(Accident)ವೊಂದು ಸಂಭವಿಸಿದೆ. ಯಾತ್ರಿಕರನ್ನು ಹೊತ್ತೊಯ್ಯುತ್ತಿದ್ದ ಪಿಕಪ್ ವ್ಯಾನ್ ರಸ್ತೆ ಬದಿಯಿದ್ದ ಬಾವಿಗೆ ಉರುಳಿಬಿದ್ದ ಪರಿಣಾಮ ನಾಲ್ವರು ಮಹಿಳೆಯರು ಮತ್ತು ಮಕ್ಕಳು ಸೇರಿ 8 ಮಂದಿ ಪ್ರಾಣಬಿಟ್ಟಿದ್ದಾರೆ. ಅಪಘಾತದಲ್ಲಿ ಇತರೆ 7 ಮಂದಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತಪಟ್ಟವರು ಪಂಢರಪುರ ಪ್ರದೇಶದ ರಂಜನಿ ಗ್ರಾಮದ ನಿವಾಸಿಗಳಾಗಿದ್ದು, ದುರಂತ ಸಂಭವಿಸಿದಾಗ ತೀರ್ಥಯಾತ್ರೆಗೆ ಪ್ರಯಾಣಿಸುತ್ತಿದ್ದರು ಎಂದು ವರದಿಯಾಗಿದೆ. ಸೋಲಾಪುರ ಅಪಘಾತ ಸಂಭವಿಸಿದ್ಹೇಗೆ? ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ಸೋಲಾಪುರ…

Read More

ವಿಜಯ್ ದೇವರಕೊಂಡ ಮೇಲೆ ರಶ್ಮಿಕಾಗೆ ಎಷ್ಟು ಕಾಳಜಿ ನೋಡಿ; ವಿಡಿಯೋ ವೈರಲ್ – Kannada News | Vijay Deverakonda and Rashmika’s Viral Scholarship Video: Couple Goals and Philanthropy

ತೆಲುಗು ಚಿತ್ರರಂಗದ ಸ್ಟಾರ್ ಜೋಡಿಯಾದ ವಿಜಯ್ ದೇವರಕೊಂಡ (Vijay Devarakonda) ಮತ್ತು ರಶ್ಮಿಕಾ ಮಂದಣ್ಣ ಮತ್ತೊಮ್ಮೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದ್ದಾರೆ. ಇತ್ತೀಚೆಗೆ ತೆಲಂಗಾಣಕ್ಕೆ ಭೇಟಿ ನೀಡಿದ್ದ ಸಂದರ್ಭದ ಇವರಿಬ್ಬರ ಕ್ಯೂಟ್ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಪರಸ್ಪರ ಪ್ರೀತಿಸಿ, ಸಪ್ತಪದಿ ತುಳಿದಿರುವ ಈ ಜೋಡಿಯ ನಡುವೆ ಎಂತಹ ಆಪ್ತತೆ ಮತ್ತು ಪ್ರೀತಿ ಇದೆ ಎಂಬುದಕ್ಕೆ ಈ ವಿಡಿಯೋವೇ ಸಾಕ್ಷಿ ಎನ್ನುತ್ತಿದ್ದಾರೆ ಅಭಿಮಾನಿಗಳು. ವಿವಾಹದ ಸಂದರ್ಭದಲ್ಲಿ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡು…

Read More

ಹಲವು ಯುದ್ಧದ ಬಳಿಕ ಜಗತ್ತಿಗೆ ಶುಭ ಸುದ್ದಿ: ಅಮೆರಿಕ-ಇರಾನ್ ಶಾಂತಿ ಒಪ್ಪಂದ ಅಂತಿಮ, ಹೊರ್ಮುಝ್ ತೆರವು – Kannada News | US Iran War Ends! President Donald Trump Announces Peace Deal and Reopening of Strait of Hormuz

ಅಮೆರಿಕ-ಇರಾನ್ ಶಾಂತಿ ಒಪ್ಪಂದ ಅಂತಿಮImage Credit source: TV9 Network ನವದೆಹಲಿ, ಜೂನ್ 15: ಜಾಗತಿಕ ಆರ್ಥಿಕತೆ ಮತ್ತು ತೈಲ ಮಾರುಕಟ್ಟೆಯನ್ನು ತಲ್ಲಣಗೊಳಿಸಿದ್ದ ಅಮೆರಿಕ ಹಾಗೂ ಇರಾನ್ ನಡುವಿನ ಮಹಾ ಸಮರಕ್ಕೆ (US Iran War) ಕೊನೆಗೂ ಶಾಶ್ವತ ಬ್ರೇಕ್ ಬೀಳುವ ಕಾಲ ಸನ್ನಿಹಿತವಾಗಿದೆ. ಕಳೆದ 100ಕ್ಕೂ ಹೆಚ್ಚು ದಿನಗಳಿಂದ ನಡೆಯುತ್ತಿದ್ದ ಭೀಕರ ಯುದ್ಧ ಮತ್ತು ರಾಜತಾಂತ್ರಿಕ ಹಗ್ಗಜಗ್ಗಾಟಕ್ಕೆ ತೆರೆಬಿದ್ದಿದ್ದು, ಉಭಯ ದೇಶಗಳ ನಡುವಿನ ಶಾಂತಿ ಒಪ್ಪಂದ ಅಂತಿಮಗೊಂಡಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald…

Read More

ಕೊಲ್ಲೂರು ಮೂಕಾಂಬಿಕೆಯ ಬಳಿಕ ಉಡುಪಿ ಕೃಷ್ಣನ ದರ್ಶನ ಪಡೆದ ಅನಂತ್​​ ಅಂಬಾನಿ – Kannada News | Business Tycoon Mukesh Ambani’s Son Anant Ambani Visits Udupi Krishna Mutt

ಉಡುಪಿ, ಜೂನ್​​ 15: ಉದ್ಯಮಿ ಮುಖೇಶ್ ಅಂಬಾನಿ ಅವರ ಪುತ್ರ ಅನಂತ್ ಅಂಬಾನಿ ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿದ್ದಾರೆ. ತಮ್ಮ ಕುಟುಂಬದ ಗುರೂಜಿ ಅವರೊಂದಿಗೆ ಆಗಮಿಸಿದ್ದ ಅವರು ಕೊಲ್ಲೂರು ಮೂಕಾಂಬಿಕೆಯ ದರ್ಶನದ ಬಳಿಕ ಉಡುಪಿ ಕೃಷ್ಣನನ್ನೂ ಕಣ್ತುಂಬಿಕೊಂಡಿದ್ದಾರೆ. ಉಡುಪಿ ಮಠದ ಆಡಳಿತ ಮಂಡಳಿಯು ಅನಂತ್ ಅಂಬಾನಿ ಅವರನ್ನು ಸ್ವಾಗತಿಸಿದ್ದು, ಕೃಷ್ಣನ ದರ್ಶನದ ಬಳಿಕ ಪರ್ಯಾಯ ಶೀರೂರು ಮಠದ ಶ್ರೀಗಳನ್ನೂ ಅನಂತ್​​ ಭೇಟಿಯಾಗಿದ್ದಾರೆ. ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ. Source link

Read More