Category Archives: Blog

Your blog category

ಯಜ್ಞ-ಯಾಗಾದಿಗಳಲ್ಲಿ ಯಾವ ಸಮಿತ್ತುಗಳನ್ನು ಅರ್ಪಿಸಿದರೆ ಏನು ಫಲ? ಇಲ್ಲಿದೆ ವಿವರಣೆ

ಹಿಂದೂ ಸನಾತನ ಧರ್ಮದಲ್ಲಿ ಪಾಪ ಕರ್ಮಗಳನ್ನು ಕಳೆಯಲು, ಕಷ್ಟಗಳನ್ನು ನಿವಾರಿಸಲು ಮತ್ತು ಭಗವಂತನ ಸಂತೃಪ್ತಿಗಾಗಿ ಯಜ್ಞ, ಯಾಗಾದಿ ಹೋಮ ಹವನಗಳನ್ನು ನಡೆಸುವ ಪದ್ಧತಿ ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಿದೆ. ಈ ಹೋಮಗಳಿಗೆ ನಿರ್ದಿಷ್ಟ ಸಮಿಧೆ ಅಥವಾ ಸಮಿತ್ತುಗಳನ್ನು (ಪವಿತ್ರ ಮರದ ತುಂಡುಗಳು) ಬಳಸಲಾಗುತ್ತದೆ. ಹೋಮ ಹವನಗಳ ಸಂಪೂರ್ಣ ಫಲ ಪ್ರಾಪ್ತಿಗಾಗಿ, ಯಜ್ಞವನ್ನು ನಡೆಸುವ ಕರ್ತನು ಕನಿಷ್ಠ ಒಂದೆರಡು ಸಮಿತ್ತುಗಳನ್ನಾದರೂ ಸ್ವತಃ ತನ್ನ ಕೈಯಾರೆ ಸಂಗ್ರಹಿಸಿ ಅರ್ಪಿಸಬೇಕು ಎಂದು ಶಾಸ್ತ್ರಗಳು ತಿಳಿಸುತ್ತವೆ ಎಂಬುದಾಗಿ ಖ್ಯಾತ ಜ್ಯೋತಿಷಿ ಹಾಗೂ ವಾಸ್ತು ತಜ್ಞ ಡಾ. ಬಸವರಾಜ ಗುರೂಜಿ ‘ಟಿವಿ9 ಕನ್ನಡ ಡಿಜಿಟಲ್​’ನ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ತಿಳಿಸಿದ್ದಾರೆ.

ಅಂಗಡಿಯಿಂದ ಎಲ್ಲವನ್ನೂ ಖರೀದಿಸುವುದಕ್ಕಿಂತ ಅಥವಾ ಮತ್ತೊಬ್ಬರಿಗೆ ವಹಿಸುವುದಕ್ಕಿಂತ ವೈಯಕ್ತಿಕ ಶ್ರಮವು ಮಹತ್ವಪೂರ್ಣವಾಗಿದೆ. ಅಶ್ವತ್ಥ ವೃಕ್ಷ, ತುಳಸಿ, ಬಿಲ್ವ, ಅರಳಿಮರ, ಶಮಿಮರ ಮುಂತಾದ ವಿವಿಧ ಸಮಿತ್ತುಗಳನ್ನು ನಿರ್ದಿಷ್ಟ ದೇವತೆಗಳು ಮತ್ತು ಗ್ರಹಗಳಿಗೆ ಅನುಗುಣವಾಗಿ ಬಳಸಲಾಗುತ್ತದೆ. ಉದಾಹರಣೆಗೆ, ಸೂರ್ಯನಿಗೆ ಮದರ, ಚಂದ್ರನಿಗೆ ಪಲಾಶ, ಶನಿಗೆ ಶಮಿ. ಈ ಸಮಿತ್ತುಗಳನ್ನು ಭೂಸ್ಪರ್ಶ ಮಾಡದಂತೆ ತಂದು ಯಜ್ಞಕ್ಕೆ ಅರ್ಪಿಸಿದಾಗ ಯಜ್ಞವು ಹೆಚ್ಚು ಪರಿಪೂರ್ಣವಾಗಿ, ಶೀಘ್ರ ಫಲ ನೀಡುತ್ತದೆ ಎಂಬುದು ನಂಬಿಕೆ. ಋಷಿಮುನಿಗಳ ಕಾಲದಿಂದಲೂ ನಡೆದುಬಂದ ಈ ಪದ್ಧತಿಯು ನಮ್ಮ ಭಕ್ತಿ ಮತ್ತು ಸಮರ್ಪಣೆಯನ್ನು ಸೂಚಿಸುತ್ತದೆ ಎಂದು ಅವರು ಹೇಳಿದ್ದಾರೆ.

Source link

Horoscope Today: ಇಂದು ಈ ರಾಶಿಯವರಿಗೆ ಪ್ರೀತಿಪಾತ್ರರೊಂದಿಗೆ ಸಣ್ಣ ಕಲಹಗಳಾಗಬಹುದು ಎಚ್ಚರ!

ಇಂದು ಪರಾಭವ ನಾಮ ಸಂವತ್ಸರ, ಅಧಿಕ ಜೇಷ್ಠ ಮಾಸ, ಕೃಷ್ಣ ಪಕ್ಷ, ಅಮಾವಾಸ್ಯಾ ತಿಥಿ ಇರತಕ್ಕಂತದ್ದು. ಇಂದು ಎರಡು ವಿಶೇಷತೆಗಳಿವೆ. ರವಿಯು ಮಧ್ಯಾಹ್ನ 12:58ಕ್ಕೆ ಮಿಥುನ ರಾಶಿಗೆ ಪ್ರವೇಶಿಸುತ್ತಿದ್ದು, ಬುಧ ಗ್ರಹ ಅಲ್ಲಿಯೇ ಇರುವುದರಿಂದ ಬುಧಾದಿತ್ಯ ಯೋಗ ಸೃಷ್ಟಿಯಾಗಿದೆ. ಅಲ್ಲದೆ, ಅಧಿಕ ಜೇಷ್ಠ ಮಾಸದ ಅಮಾವಾಸ್ಯೆ ಇರುವುದರಿಂದ ಪಿತೃಗಳ ಸ್ಮರಣೆಗೆ ಮತ್ತು ಕಾಲಭೈರವ, ಶಿವ, ದುರ್ಗಾ ಆರಾಧನೆಗೆ ಇದು ಬಹಳ ಶ್ರೇಷ್ಠವಾದ ದಿನವಾಗಿದೆ ಎಂದು ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ತಿಳಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

 

Source link

ದಿನ ಭವಿಷ್ಯ: ಇಂದು ಈ ರಾಶಿಯವರು ಯಾರ ಮೇಲೂ ಅವಲಂಬಿತರಾಗಲು ಬಯಸರು… – Kannada News | Horoscope June 15 Monday 2026; Dina Rashi Bhavishya Today, Checkout the details here

ಮೇಷ ರಾಶಿ:

ಇಂದು ನಿಮಗೆ ಆರ್ಥಿಕವಾಗಿ ಅತ್ಯಂತ ಲಾಭದಾಯಕ ದಿನವಾಗಿರುತ್ತದೆ. ದೀರ್ಘಕಾಲದಿಂದ ಬಾಕಿ ಉಳಿದಿದ್ದ ಹಣ ಕೈಸೇರಲಿದ್ದು, ಮನಸ್ಸಿಗೆ ನೆಮ್ಮದಿ ಸಿಗಲಿದೆ. ಉದ್ಯೋಗದಲ್ಲಿ ನಿಮ್ಮ ಶ್ರಮಕ್ಕೆ ತಕ್ಕ ಮನ್ನಣೆ ದೊರೆಯುತ್ತದೆ. ವ್ಯಾಪಾರಸ್ಥರಿಗೆ ಹೊಸ ಹೂಡಿಕೆಯಿಂದ ಉತ್ತಮ ಲಾಭ ಸಿಗಲಿದೆ. ಕುಟುಂಬದಲ್ಲಿ ಸಂತೋಷದ ವಾತಾವರಣ ಇರಲಿದ್ದು, ಹಿರಿಯರ ಆಶೀರ್ವಾದ ನಿಮ್ಮ ಮೇಲಿರುತ್ತದೆ. ಕಾರ್ಯಸಿದ್ಧಿಯಾಗಲಿದೆ.

​ವೃಷಭ ರಾಶಿ:

ಇಂದು ಅನಗತ್ಯ ಖರ್ಚು ವೆಚ್ಚಗಳು ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಆರ್ಥಿಕ ಶಿಸ್ತು ಅತ್ಯಗತ್ಯ. ಆತುರದ ನಿರ್ಧಾರಗಳಿಂದ ವ್ಯವಹಾರದಲ್ಲಿ ನಷ್ಟ ಉಂಟಾಗಬಹುದು, ಜಾಗರೂಕರಾಗಿರಿ. ಉದ್ಯೋಗಸ್ಥರು ಕಚೇರಿಯಲ್ಲಿ ಸಹೋದ್ಯೋಗಿಗಳೊಂದಿಗೆ ತಾಳ್ಮೆಯಿಂದ ವರ್ತಿಸುವುದು ಒಳ್ಳೆಯದು. ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಹರಿಸಿ. ನಕಾರಾತ್ಮಕ ಆಲೋಚನೆಗಳಿಂದ ದೂರವಿದ್ದು, ಸಂಗಾತಿಯೊಂದಿಗೆ ಸಮಯ ಕಳೆಯುವುದರಿಂದ ಮಾನಸಿಕ ನೆಮ್ಮದಿ ಸಿಗುತ್ತದೆ.

​ಮಿಥುನ ರಾಶಿ:

ನಿಮಗೆ ಕೌಟುಂಬಿಕವಾಗಿ ಅತ್ಯಂತ ಸುಖಕರವಾದ ದಿನವಿದು. ಮನೆಯಲ್ಲಿ ಶುಭ ಕಾರ್ಯಗಳು ನೆರವೇರುವ ಬಗ್ಗೆ ಚರ್ಚೆಗಳು ನಡೆಯಲಿವೆ. ಉದ್ಯೋಗಾಕಾಂಕ್ಷಿಗಳಿಗೆ ಹೊಸ ಮತ್ತು ಉತ್ತಮ ಅವಕಾಶಗಳು ಹುಡುಕಿಕೊಂಡು ಬರಲಿವೆ. ಸಮಾಜದಲ್ಲಿ ನಿಮ್ಮ ಗೌರವ ಮತ್ತು ಪ್ರತಿಷ್ಠೆ ಹೆಚ್ಚಾಗಲಿದೆ. ಹಳೆಯ ಸ್ನೇಹಿತರನ್ನು ಭೇಟಿಯಾಗುವ ಯೋಗವಿದ್ದು, ದಿನವು ಅತ್ಯಂತ ಉತ್ಸಾಹದಿಂದ ಕೂಡಿರುತ್ತದೆ. ಆರೋಗ್ಯವು ಉತ್ತಮವಾಗಿರುತ್ತದೆ, ಧನಲಾಭವಾಗಲಿದೆ.

​ಕರ್ಕಾಟಕ ರಾಶಿ:

ಉದ್ಯೋಗಸ್ಥರಿಗೆ ಇಂದು ಕಚೇರಿಯಲ್ಲಿ ಮಹತ್ತರ ಪ್ರಗತಿ ಕಂಡುಬರಲಿದೆ. ಮೇಲಧಿಕಾರಿಗಳಿಂದ ಪ್ರಶಂಸೆ ಹಾಗೂ ಹೊಸ ಜವಾಬ್ದಾರಿಗಳು ಸಿಗುವ ಸಾಧ್ಯತೆ ಇದೆ. ವ್ಯಾಪಾರದಲ್ಲಿ ನಿರೀಕ್ಷಿತ ಲಾಭ ದೊರೆತು ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ದೂರದ ಸಂಬಂಧಿಗಳಿಂದ ಶುಭ ವಾರ್ತೆಗಳನ್ನು ಕೇಳುವಿರಿ. ವಿದ್ಯಾರ್ಥಿಗಳಿಗೆ ಕಠಿಣ ಪರಿಶ್ರಮದಿಂದ ಯಶಸ್ಸು ಸಿಗಲಿದೆ. ಕೋಪವನ್ನು ನಿಯಂತ್ರಣದಲ್ಲಿಟ್ಟುಕೊಂಡರೆ ದಿನವು ಇನ್ನಷ್ಟು ಸುಖಮಯವಾಗುತ್ತದೆ.

​ಸಿಂಹ ರಾಶಿ:

ಇಂದು ನಿಮಗೆ ಭೂಮಿ ಅಥವಾ ಆಸ್ತಿ ಖರೀದಿ ಮಾಡುವ ಯೋಗವಿದೆ. ದೀರ್ಘಕಾಲದ ಆಸೆಗಳು ಈಡೇರುವ ಸಮಯವಿದು. ಮನಸ್ಸಿನಲ್ಲಿದ್ದ ಆತಂಕಗಳು ದೂರವಾಗಿ ದೈಹಿಕ ಮತ್ತು ಮಾನಸಿಕ ನೆಮ್ಮದಿ ಸಿಗಲಿದೆ. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವಿರಿ. ಕೌಟುಂಬಿಕ ಜೀವನದಲ್ಲಿ ಸಾಮರಸ್ಯ ಇರಲಿದ್ದು, ಮಕ್ಕಳ ಪ್ರಗತಿಯಿಂದ ಮನಸ್ಸಿಗೆ ಸಂತೋಷವಾಗುತ್ತದೆ. ಸಮಾಜದಲ್ಲಿ ನಿಮ್ಮ ಪ್ರಭಾವ ಹೆಚ್ಚಾಗಲಿದ್ದು, ನಾಯಕತ್ವದ ಗುಣಕ್ಕೆ ಗೌರವ ಸಿಗಲಿದೆ.

​ಕನ್ಯಾ ರಾಶಿ:

ಕಳೆದ ಕೆಲವು ದಿನಗಳಿಂದ ಕಾಡುತ್ತಿದ್ದ ಆರೋಗ್ಯ ಸಮಸ್ಯೆಗಳು ಇಂದು ಸುಧಾರಿಸಲಿವೆ. ಉದ್ಯೋಗ ಅಥವಾ ವ್ಯವಹಾರದ ನಿಮಿತ್ತ ದೂರದ ಪ್ರಯಾಣ ಬೆಳೆಸಬೇಕಾಗಬಹುದು, ಈ ಪ್ರಯಾಣವು ನಿಮಗೆ ಲಾಭದಾಯಕವಾಗಿರುತ್ತದೆ. ಹೊಸ ಕೆಲಸವನ್ನು ಪ್ರಾರಂಭಿಸಲು ಇದು ಸೂಕ್ತ ದಿನವಾಗಿದೆ. ಆರ್ಥಿಕ ಪರಿಸ್ಥಿತಿ ಸ್ಥಿರವಾಗಿರುತ್ತದೆ. ಸಂಗಾತಿಯ ಬೆಂಬಲದಿಂದ ಕಠಿಣ ಸವಾಲುಗಳನ್ನು ಸುಲಭವಾಗಿ ಎದುರಿಸುವಿರಿ. ದಿನದ ಅಂತ್ಯಕ್ಕೆ ಶುಭ ಫಲವಿದೆ.

​ತುಲಾ ರಾಶಿ:

ವ್ಯಾಪಾರ ಮತ್ತು ವ್ಯವಹಾರ ರಂಗದಲ್ಲಿರುವವರಿಗೆ ಇಂದು ನಿರೀಕ್ಷೆಗೂ ಮೀರಿದ ಲಾಭ ದೊರೆಯಲಿದೆ. ಹೊಸ ಗ್ರಾಹಕರ ಸಂಪರ್ಕದಿಂದ ವ್ಯಾಪಾರ ವಿಸ್ತರಣೆಯಾಗಲಿದೆ. ಕೌಟುಂಬಿಕ ಕಲಹಗಳು ಬಗೆಹರಿದು ಮನೆಯಲ್ಲಿ ಶಾಂತಿ ನೆಲೆಸುತ್ತದೆ. ಬರಬೇಕಾಗಿದ್ದ ಬಾಕಿ ಹಣ ವಾಪಸ್ ಸಿಗುವುದರಿಂದ ಮಾನಸಿಕ ಒತ್ತಡ ಕಡಿಮೆಯಾಗಲಿದೆ. ಸ್ನೇಹಿತರೊಂದಿಗೆ ಆನಂದವಾಗಿ ಸಮಯ ಕಳೆಯುವಿರಿ. ಕಲಾತ್ಮಕ ಕ್ಷೇತ್ರಗಳ ಜನರಿಗೆ ಅಪಾರ ಮನ್ನಣೆ ಸಿಗಲಿದೆ.

​ವೃಶ್ಚಿಕ ರಾಶಿ:

ಇಂದು ನಿಮಗೆ ಮಿಶ್ರ ಫಲಗಳು ದೊರೆಯಲಿವೆ. ಕೆಲಸದ ಸ್ಥಳದಲ್ಲಿ ಕೆಲಸದ ಒತ್ತಡ ಹೆಚ್ಚಾಗುವುದರಿಂದ ಸುಸ್ತು ಎನಿಸಬಹುದು, ತಾಳ್ಮೆಯಿಂದ ಕೆಲಸ ಮಾಡಿ. ಆತುರದಲ್ಲಿ ಯಾವುದೇ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ. ಹಣಕಾಸಿನ ವಿಷಯದಲ್ಲಿ ಯಾರನ್ನೂ ಕುರುಡಾಗಿ ನಂಬಬೇಡಿ. ವಾಹನ ಚಾಲನೆ ಮಾಡುವಾಗ ಜಾಗರೂಕತೆ ಅತ್ಯಗತ್ಯ. ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲ ತಡವಾಗಿಯಾದರೂ ಸಿಗಲಿದೆ, ಧೃತಿಗೆಡಬೇಡಿ.

​ಧನು ರಾಶಿ:

ಇಂದು ನಿಮ್ಮ ಕೀರ್ತಿ ಮತ್ತು ಜನಪ್ರಿಯತೆ ಸಮಾಜದಲ್ಲಿ ವೃದ್ಧಿಯಾಗಲಿದೆ. ಕೈಗೆ ಬರಬೇಕಾಗಿದ್ದ ಹಣ ಸಕಾಲದಲ್ಲಿ ಸಿಗುವುದರಿಂದ ಆರ್ಥಿಕ ಸಂಕಷ್ಟಗಳು ದೂರವಾಗಲಿವೆ. ಉದ್ಯೋಗದಲ್ಲಿ ನಿಮ್ಮ ಕಾರ್ಯದಕ್ಷತೆಗೆ ದೊಡ್ಡ ಪ್ರಶಂಸೆ ಸಿಗಲಿದೆ. ದಂಪತಿಗಳ ನಡುವೆ ಮಧುರ ಬಾಂಧವ್ಯ ಇರಲಿದೆ. ಯುವಕರಿಗೆ ಉನ್ನತ ವ್ಯಾಸಂಗಕ್ಕಾಗಿ ವಿದೇಶಕ್ಕೆ ಹೋಗುವ ಅವಕಾಶಗಳು ಒದಗಿ ಬರಬಹುದು. ದಿನವು ಒಟ್ಟಾರೆಯಾಗಿ ಅತ್ಯಂತ ಉತ್ಸಾಹದಾಯಕವಾಗಿರುತ್ತದೆ.

​ಮಕರ ರಾಶಿ:

ನಿಮ್ಮ ದೀರ್ಘಕಾಲದ ಕಠಿಣ ಶ್ರಮಕ್ಕೆ ಇಂದು ತಕ್ಕ ಪ್ರತಿಫಲ ಸಿಗಲಿದೆ. ಕಚೇರಿಯಲ್ಲಿ ಉನ್ನತ ಹುದ್ದೆ ಅಥವಾ ವೇತನ ಹೆಚ್ಚಳದ ಸುದ್ದಿ ಕೇಳುವಿರಿ. ನ್ಯಾಯಾಲಯದ ವ್ಯವಹಾರಗಳು ನಿಮ್ಮ ಪರವಾಗಿ ತೀರ್ಪು ನೀಡುವ ಸಾಧ್ಯತೆ ಇದೆ. ಆರ್ಥಿಕವಾಗಿ ಪರಿಸ್ಥಿತಿ ಸದೃಢವಾಗಲಿದ್ದು, ಹಳೆಯ ಸಾಲಗಳನ್ನು ತೀರಿಸಲು ಸಾಧ್ಯವಾಗುತ್ತದೆ. ಸೃಜನಾತ್ಮಕ ಕೆಲಸಗಳಲ್ಲಿ ಆಸಕ್ತಿ ಹೆಚ್ಚಾಗಲಿದೆ. ಹಿರಿಯರ ಆರೋಗ್ಯದ ಕಡೆ ಗಮನವಿರಲಿ.

​ಕುಂಭ ರಾಶಿ:

ಮನೆಗೆ ಹತ್ತಿರದ ಬಂಧು-ಮಿತ್ರರ ಆಗಮನವಾಗಲಿದ್ದು, ಇದರಿಂದ ಮನೆಯಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಲಿದೆ. ಹಳೆಯ ನೆನಪುಗಳನ್ನು ಹಂಚಿಕೊಳ್ಳುವ ಮೂಲಕ ಮನಸ್ಸು ಹಗುರಾಗಲಿದೆ. ಕುಟುಂಬದವರೊಂದಿಗೆ ಸುಂದರ ಸಮಯ ಕಳೆಯುವಿರಿ. ಆರ್ಥಿಕ ಸ್ಥಿತಿ ಉತ್ತಮವಾಗಿಯೇ ಇರಲಿದ್ದು, ಭವಿಷ್ಯಕ್ಕಾಗಿ ಉಳಿತಾಯ ಮಾಡಲು ಯೋಜನೆ ರೂಪಿಸುವಿರಿ. ವ್ಯಾಪಾರದಲ್ಲಿ ಸಣ್ಣಪುಟ್ಟ ಪ್ರಗತಿ ಕಂಡುಬರುತ್ತದೆ. ದಾಂಪತ್ಯ ಜೀವನ ಮಧುರವಾಗಿರುತ್ತದೆ.

​ಮೀನ ರಾಶಿ:

ಇಂದು ನೀವು ಕೈಗೊಳ್ಳುವ ಎಲ್ಲಾ ಕಾರ್ಯಗಳಲ್ಲೂ ಜಯ ಸಿಗಲಿದೆ. ನಿಮ್ಮ ಕಾರ್ಯಕ್ಷಮತೆಯಿಂದ ಎದುರಾಳಿಗಳನ್ನು ಸುಲಭವಾಗಿ ಸೋಲಿಸುವಿರಿ. ಪ್ರಮುಖ ವ್ಯಕ್ತಿಗಳ ಭೇಟಿಯಿಂದ ವ್ಯವಹಾರದಲ್ಲಿ ಹೊಸ ತಿರುವು ಸಿಗಲಿದೆ. ನೂತನ ವಸ್ತುಗಳು ಅಥವಾ ಆಭರಣಗಳನ್ನು ಖರೀದಿಸುವ ಯೋಗವಿದೆ. ಆರೋಗ್ಯವು ಸಂಪೂರ್ಣವಾಗಿ ಸ್ಥಿರವಾಗಿರುತ್ತದೆ. ಮನಸ್ಸಿನಲ್ಲಿ ಹೊಸ ಆಲೋಚನೆಗಳು ಮೂಡಲಿದ್ದು, ಭವಿಷ್ಯದ ದೃಷ್ಟಿಯಿಂದ ದಿನವು ಅತ್ಯಂತ ಶುಭಪ್ರದವಾಗಿದೆ.

ಇಂದಿನ ಪಂಚಾಂಗ:

ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ಉತ್ತರಾಯಣ, ಋತು : ಗ್ರೀಷ್ಮ, ಚಾಂದ್ರಮಾಸ : ಅಧಿಕ ಜ್ಯೇಷ್ಠ, ಸೌರ ಮಾಸ : ವೃಷಭ, ಮಹಾನಕ್ಷತ್ರ : ಮೃಗಶಿರಾ, ವಾರ : ಸೋಮ, ಪಕ್ಷ : ಕೃಷ್ಣ, ತಿಥಿ : ಅಮಾವಾಸ್ಯಾ, ನಿತ್ಯನಕ್ಷತ್ರ : ಮೃಗಶಿರಾ, ಯೋಗ : ಸುಕರ್ಮಾ, ಕರಣ : ಕೌಲವ, ಸೂರ್ಯೋದಯ – 05 – 54 am, ಸೂರ್ಯಾಸ್ತ – 06 – 45 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 07:30 – 09:47, ಯಮಗಂಡ ಕಾಲ 10:44 – 12:20, ಗುಳಿಕ ಕಾಲ 13:57 – 15:33

-ಲೋಹಿತ್ ಹೆಬ್ಬಾರ್ – 8762924271 (what’s app only)

Source link

ರಾಜ್​​ಕುಮಾರ್, ವಿಷ್ಣುವರ್ಧನ್, ಶಂಕರ್ ನಾಗ್ ಬಗ್ಗೆ ದೊಡ್ಡಣ್ಣ ಮಾತು: ವಿಡಿಯೋ – Kannada News | Doddanna talks about Dr Rajkumar, Vishnuvardhan, Shankar Nag and Ambareesh

ನಟ ದೊಡ್ಡಣ್ಣ, ಕನ್ನಡ ಚಿತ್ರರಂಗದ (Sandalwood) ಹಿರಿಯ ನಟ. ದೊಡ್ಡಣ್ಣ ಅವರು ಚಿತ್ರರಂಗಕ್ಕೆ ಕಾಲಿರಿಸಿ ನಲವತ್ತು ವರ್ಷಗಳನ್ನು ದಾಟಿದ್ದಾಗಿದೆ. ಹಲವಾರು ಖ್ಯಾತ ನಟ, ನಿರ್ಮಾಪಕರು ನಿರ್ದೇಶಕರೊಟ್ಟಿಗೆ ಆತ್ಮೀಯ ಒಡನಾಟ ಇರಿಸಿಕೊಂಡಿದ್ದ ನಟ ದೊಡ್ಡಣ್ಣ ಚಿತ್ರರಂಗದ ದಿಗ್ಗಜರುಗಳ ಬಗ್ಗೆ ಬಲು ಸ್ವಾರಸ್ವಕರವಾಗಿ ವಿಷಯಗಳನ್ನು ಹೇಳುತ್ತಾರೆ. ಇತ್ತೀಚೆಗೆ ‘ಕನಕರಾಜ’ ಸಿನಿಮಾದ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದ ನಟ ದೊಡ್ಡಣ್ಣ ಅವರು ಚಿತ್ರರಂಗದ ದಿಗ್ಗಜರಾದ ಡಾ ರಾಜ್​​ಕುಮಾರ್, ವಿಷ್ಣುವರ್ಧನ್, ಅಂಬರೀಶ್ ಮತ್ತು ಶಂಕರ್​​ನಾಗ್ ಅವರುಗಳ ಬಗ್ಗೆ ಮಾತನಾಡಿದರು. ಅವರು ಹೇಳಿದ್ದೇನು? ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Source link

ಕೊಟ್ಟ ಮಾತು ಉಳಿಸಿಕೊಂಡ ರಶ್ಮಿಕಾ-ವಿಜಯ್: ನೂರಾರು ವಿದ್ಯಾರ್ಥಿಗಳಿಗೆ ನೆರವು – Kannada News | Rashmika and Vijay gave scholarships to 180 kids of Telangana

ವಿಜಯ್ ದೇವರಕೊಂಡ (Vijay Deverakonda) ಮತ್ತು ರಶ್ಮಿಕಾ ಮಂದಣ್ಣ (Rashmika Mandanna) ಅವರು ವಿವಾಹವಾಗುವ ಕೆಲ ದಿನಗಳ ಹಿಂದಷ್ಟೆ ವಿಜಯ್ ದೇವರಕೊಂಡ ಅವರ ತಂದೆ ಜಿಲ್ಲೆಯ ಕೆಲವು ವಿದ್ಯಾರ್ಥಿಗಳಿಗೆ ತಮ್ಮ ಕಡೆಯಿಂದ ಸ್ಕಾಲರ್ಶಿಪ್ ನೀಡಿ, ಅವರ ಶಿಕ್ಷಣಕ್ಕೆ ನೆರವಾಗಿದ್ದರು. ಅದೇ ಕಾರ್ಯಕ್ರಮದಲ್ಲಿ ಮಾತನಾಡಿದ್ದ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ, ಮುಂದಿನ ದಿನಗಳಲ್ಲಿ ಈ ಕಾರ್ಯಕ್ರಮವನ್ನು ಮುಂದುವರೆಸುವುದಾಗಿ ಜೊತೆಗೆ ಸರ್ಕಾರಿ ಶಾಲೆ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಕೈಲಾದ ನೆರವು ನೀಡುತ್ತೇವೆ ಎಂದು ಭರವಸೆ ನೀಡಿದ್ದರು, ಇದೀಗ ವಿಜಯ್ ಮತ್ತು ರಶ್ಮಿಕಾ ಅವರು ಆ ಭರವಸೆಯನ್ನು ಈಡೇರಿಸಿದ್ದಾರೆ.

ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಅವರು ಜಂಟಿಯಾಗಿ ದೇವರಕೊಂಡ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಅಚ್ಚಂಪೇಟ್ ಜಿಲ್ಲೆಯ 180 ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್ ನೀಡುತ್ತಿದ್ದಾರೆ. ನಟ ವಿಜಯ್ ದೇವರಕೊಂಡ ಅವರು ವಿದ್ಯಾರ್ಥಿವೇತನಕ್ಕೆ ಆಯ್ಕೆಯಾದವರ ಪಟ್ಟಿಯನ್ನು ಟ್ವಿಟ್ಟರ್​​ನಲ್ಲಿ ಹಂಚಿಕೊಂಡಿದ್ದಾರೆ. ‘ನಾವು ಅಚ್ಚಂಪೇಟೆ ಮಂಡಲದ 9 ಮತ್ತು 10ನೇ ತರಗತಿಯ ಕಠಿಣ ಪರಿಶ್ರಮಿ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲು ಅಂದುಕೊಂಡಿದ್ದ ಸಣ್ಣ ಕನಸನ್ನು ಈಡೇರಿಸುತ್ತಿದ್ದೇವೆ. ತಮ್ಮ ಹೆತ್ತವರಿಗೆ ಹೆಮ್ಮೆ ತಂದ 180 ಮಕ್ಕಳ ಪಟ್ಟಿ ಇಲ್ಲಿದೆ’ ಎಂದು ಅವರು ಬರೆದುಕೊಂಡಿದ್ದಾರೆ.

‘ಈ ವಿದ್ಯಾರ್ಥಿವೇತನ ಬಹಳ ಚಿಕ್ಕದಾಗಿರಬಹುದು, ಆದರೆ ಇದು ನಮಗೆ ಮುಖ್ಯ ಎಂದು ನಾನು ಭಾವಿಸುತ್ತೇನೆ. ನಾನು ನಿಮ್ಮ ಜೀವನದ ಭಾಗವಾಗಲು ಬಯಸುತ್ತೇನೆ. ನನ್ನ ಗ್ರಾಮದಿಂದ ಆರಂಭವಾದ ಈ ಪ್ರಯತ್ನ, ಮುಂದಿನ ದಿನಗಳಲ್ಲಿ ಇಡೀ ತೆಲಂಗಾಣದಾದ್ಯಂತ ವಿಸ್ತರಣೆಯಾಗಬೇಕು ಎಂಬುದು ನನ್ನ ಕನಸು’ ಎಂದು ಅವರು ಹೇಳಿಕೊಂಡಿದ್ದಾರೆ. ರಶ್ಮಿಕಾ ಸಹ ಈ ಬಗ್ಗೆ ಖುಷಿಯಾಗಿದ್ದು ‘ಇಂದು ನಾವು ‘ದಿ ದೇವರಕೊಂಡ ಫೌಂಡೇಶನ್’ ಮೂಲಕ ಒಳ್ಳೆಯ ಕೆಲಸವನ್ನು ಪ್ರಾರಂಭಿಸುತ್ತಿದ್ದೇವೆ. ನಮ್ಮ ಮಾವನವರ ಊರಾದ ಅಚ್ಚಂಪೇಟೆ ಮತ್ತು ತಮ್ಮೂರುಪೆಟ್‌ನಿಂದಲೇ ಇದನ್ನು ಪ್ರಾರಂಭಿಸಬೇಕೆಂದು ನಿರ್ಧರಿಸಿದ್ದೇವೆ. ಇಂದು ನಾನು ನಿಮ್ಮ ಮುಂದೆ ‘ರಶ್ಮಿಕಾ ಮಂದಣ್ಣ ದೇವರಕೊಂಡ’ ಆಗಿ ಮಾತನಾಡುತ್ತಿದ್ದೇನೆ. ನನಗೆ ತುಂಬಾ ಸಂತೋಷವಾಗಿದೆ’ ಎಂದಿದ್ದಾರೆ.

ಇದನ್ನೂ ಓದಿ:ಶಾಹಿದ್ ಕಪೂರ್ ಬಟ್ಟೆ ಹರಿದು, ರಶ್ಮಿಕಾ ಮೇಲೆ ಮುಗಿಬಿದ್ದ ಫ್ಯಾನ್ಸ್; ವಿಡಿಯೋ ವೈರಲ್

ಕಳೆದ ಕೆಲ ವರ್ಷಗಳಿಂದ ಪರಸ್ಪರ ಪ್ರೀತಿಯಲ್ಲಿದ್ದ ಈ ಜೋಡಿ ಫೆಬ್ರವರಿ 26, 2026 ರಂದು ಅದ್ಧೂರಿಯಾಗಿ ವಿವಾಹವಾದರು. ‘ಗೀತ ಗೋವಿಂದಂ’ ಮತ್ತು ‘ಡಿಯರ್ ಕಾಮ್ರೆಡ್’ ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿರುವ ವಿಜಯ್ ಮತ್ತು ರಶ್ಮಿಕಾ, ಇದೀಗ ‘ರಣಬಲಿ’ ಸಿನಿಮಾನಲ್ಲಿ ಒಟ್ಟಿಗೆ ನಟಿಸುತ್ತಿದ್ದಾರೆ. ಅದಾದ ಬಳಿಕ ‘ಗೀತ ಗೋವಿಂದಂ 2’ ಸಿನಿಮಾನಲ್ಲಿಯೂ ಒಟ್ಟಿಗೆ ನಟಿಸಲಿದ್ದಾರೆ. ರಶ್ಮಿಕಾ ಮಂದಣ್ಣ ನಟನೆಯ ‘ಕಾಕ್​​ಟೇಲ್ 2’ ಸಿನಿಮಾ ಇದೇ ತಿಂಗಳು 19ಕ್ಕೆ ಬಿಡುಗಡೆ ಆಗಲಿದೆ. ಇನ್ನು ವಿಜಯ್, ‘ರಣಬಲಿ’ ಹೊರತಾಗಿ ‘ರೌಡಿ ಜನಾರ್ಧನ್’ ಹೆಸರಿನ ಸಿನಿಮಾನಲ್ಲಿಯೂ ನಟಿಸುತ್ತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 10:54 pm, Sun, 14 June 26

Source link

IND vs PAK: ಪಾಕಿಸ್ತಾನ್ ವಿರುದ್ಧ 64 ರನ್​ಗಳಿಂದ ಗೆದ್ದ ಭಾರತದ ಸಿಂಹಿಣಿಯರು – Kannada News | India Dominates Pakistan in 2026 Women’s T20 World Cup Opener in Birmingham

ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದ 2026 ರ ಮಹಿಳಾ ಟಿ20 ವಿಶ್ವಕಪ್‌ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಹಾಗೂ ಪಾಕಿಸ್ತಾನದ ಮಹಿಳಾ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ನಿರೀಕ್ಷೆಯಂತೆಯೇ ಪಾಕಿಸ್ತಾನವನ್ನು ಸೋಲಿಸಿದ ಭಾರತ ವನಿತಾ ಪಡೆ, ಟಿ20 ವಿಶ್ವಕಪ್​ನಲ್ಲಿ ಗೆಲುವಿನ ಶುಭಾರಂಭ ಮಾಡಿದೆ. ಇದರ ಜೊತೆಗೆ ಪಾಕಿಸ್ತಾನದ ವಿರುದ್ಧ ತನ್ನ ಪಾರುಪತ್ಯವನ್ನು ಮುಂದುವರೆಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಟೀಂ ಇಂಡಿಯಾ, ಸ್ಮೃತಿ ಮಂಧಾನ ಅವರ ಅರ್ಧಶತಕದ ನೆರವಿನಿಂದ 170 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಪಾಕಿಸ್ತಾನ ಪೂರ್ಣ 20 ಓವರ್​ಗಳನ್ನು ಆಡಲು ಸಾಧ್ಯವಾಗದೆ 106 ರನ್​ಗಳಿಗೆ ಆಲೌಟ್ ಆಗುವ ಮೂಲಕ 64 ರನ್​ಗಳ ಈ ಹೀನಾಯ ಸೋಲು ಕಂಡಿತು.

Source link

IND vs PAK: ಪಾಕಿಸ್ತಾನ್ ವಿರುದ್ಧ 64 ರನ್​ಗಳಿಂದ ಗೆದ್ದ ಭಾರತದ ಸಿಂಹಿಣಿಯರು – Kannada News | 2026 womens t20 world cup india vs pakistan smriti mandhana birmingham win

ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದ 2026 ರ ಮಹಿಳಾ ಟಿ20 ವಿಶ್ವಕಪ್‌ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಹಾಗೂ ಪಾಕಿಸ್ತಾನದ ಮಹಿಳಾ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ನಿರೀಕ್ಷೆಯಂತೆಯೇ ಪಾಕಿಸ್ತಾನವನ್ನು ಸೋಲಿಸಿದ ಭಾರತ ವನಿತಾ ಪಡೆ, ಟಿ20 ವಿಶ್ವಕಪ್​ನಲ್ಲಿ ಗೆಲುವಿನ ಶುಭಾರಂಭ ಮಾಡಿದೆ. ಇದರ ಜೊತೆಗೆ ಪಾಕಿಸ್ತಾನದ ವಿರುದ್ಧ ತನ್ನ ಪಾರುಪತ್ಯವನ್ನು ಮುಂದುವರೆಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಟೀಂ ಇಂಡಿಯಾ, ಸ್ಮೃತಿ ಮಂಧಾನ ಅವರ ಅರ್ಧಶತಕದ ನೆರವಿನಿಂದ 170 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಪಾಕಿಸ್ತಾನ ಪೂರ್ಣ 20 ಓವರ್​ಗಳನ್ನು ಆಡಲು ಸಾಧ್ಯವಾಗದೆ 106 ರನ್​ಗಳಿಗೆ ಆಲೌಟ್ ಆಗುವ ಮೂಲಕ 64 ರನ್​ಗಳ ಈ ಹೀನಾಯ ಸೋಲು ಕಂಡಿತು.

Source link

‘ಪೆದ್ದಿ’ ಸಿನಿಮಾ ವಿವಾದ, ನಿರ್ದೇಶಕನೇ ಸರಿ ಎಂದ ಚಿತ್ರಸಾಹಿತಿ – Kannada News | Peddi lyricist said objectification of Janhvi Kapoor’s role not an issue

ರಾಮ್ ಚರಣ್ (Ram Charan) ನಟನೆಯ ‘ಪೆದ್ದಿ’ ಸಿನಿಮಾ ಬಿಡುಗಡೆ ಆಗಿ ವಾರಕ್ಕೂ ಹೆಚ್ಚು ಸಮಯವಾಗಿದೆ. ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ ಬ್ಲಾಕ್ ಬಸ್ಟರ್ ಆಗಿದೆ. ದೊಡ್ಡ ಮೊತ್ತದ ಗಳಿಕೆಯನ್ನು ಮಾಡಿದೆ. ಆದರೆ ಸಿನಿಮಾನಲ್ಲಿ ನಾಯಕಿ ಜಾನ್ಹವಿ ಕಪೂರ್ ಅವರನ್ನು ಅತಿಯಾಗಿ ಗ್ಲಾಮರೈಸ್ ಮಾಡಿ ತೋರಿಸಿರುವ ರೀತಿಯ ಬಗ್ಗೆ ತೀವ್ರ ಟೀಕೆ ವ್ಯಕ್ತವಾಗಿದೆ. ಅದರ ಬೆನ್ನಲ್ಲೆ ಸಿನಿಮಾದ ನಿರ್ದೇಶಕ ಬುಚ್ಚಿಬಾಬು ಸನಾ, ಕ್ಷಮೆ ಕೇಳಿದ್ದು ಮಾತ್ರವಲ್ಲದೆ, ಗ್ಲಾಮರಸ್ ದೃಶ್ಯಗಳನ್ನು ಕತ್ತರಿಸಿ, ನಾಯಕಿಯ ಕೆಲವು ಭಾವುಕ ಸನ್ನಿವೇಶಗಳನ್ನು ಸಿನಿಮಾಕ್ಕೆ ಸೇರಿಸಿದ್ದಾರೆ. ಆದರೆ ಇದೀಗ ಸಿನಿಮಾಕ್ಕೆ ಹಾಡುಗಳನ್ನು ಬರೆದಿರುವ ಚಿತ್ರಸಾಹಿತಿ ಅನಂತ್ ಶ್ರೀರಾಮ್, ಸಿನಿಮಾನಲ್ಲಿ ಜಾನ್ಹವಿಯ ಪಾತ್ರವನ್ನು ಗ್ಲಾಮರೈಸ್ ಮಾಡಿ ತೋರಿಸಿದ್ದು ತಪ್ಪಲ್ಲ ಎಂಬರ್ಥದ ಮಾತುಗಳನ್ನು ಆಡಿದ್ದಾರೆ.

ಸಿನಿಮಾದ ಸಕ್ಸಸ್ ಮೀಟ್ ಕಾರ್ಯಕ್ರಮಗಳನ್ನು ನಿರ್ದೇಶಕ ಬುಚ್ಚಿಬಾಬು ಸನಾ ಮಾಡುತ್ತಿದ್ದು, ಖುದ್ದು ತಾವೇ ಸುದ್ದಿಗೋಷ್ಠಿಗಳಲ್ಲಿ ಹಾಜರಾಗಿ ಸಿನಿಮಾದ ಯಶಸ್ಸಿನ ಖುಷಿಯನ್ನು ಮಾಧ್ಯಮದವರ ಜೊತೆಗೆ ಹಂಚಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ನಡೆದ ಇಂಥಹಾ ಸುದ್ದಿಗೋಷ್ಠಿಯಲ್ಲಿ ಬುಚ್ಚಿಬಾಬು ಸನಾ ಜೊತೆಗೆ ಚಿತ್ರಸಾಹಿತಿ ಅನಂತ್ ಶ್ರೀರಾಮ್ ಸಹ ಭಾಗಿ ಆಗಿದ್ದರು. ಸಹಜವಾಗಿಯೇ ಬುಚ್ಚಿಬಾಬುಗೆ ಜಾನ್ಹವಿಯ ಪಾತ್ರದ ಕುರಿತಾದ ಪ್ರಶ್ನೆ ಎದುರಾಯ್ತು.

ಆಗ ಮಧ್ಯ ಪ್ರವೇಶಿಸಿ ಉತ್ತರಿಸಿದ ಚಿತ್ರಸಾಹಿತಿ ಅನಂತ್, ‘ಜಾನ್ಹವಿಯ ಪಾತ್ರದ ಕುರಿತಾಗಿ ಎದ್ದ ಆಕ್ರೋಶ, ಸಾಮಾಜಿಕ ಜಾಲತಾಣದಲ್ಲಿ ಕೂತ ಕೆಲವು ಎಲೈಟ್ ಜನರ ಆಂಭೋಣವಷ್ಟೆ. ನಿಜವಾಗಿಯೂ ಸಿನಿಮಾ ನೋಡಿದ ಸಾಮಾನ್ಯ ಪ್ರೇಕ್ಷಕನದ್ದಲ್ಲ. ಯಾರೋ ಕೆಲವು ಇಂಗ್ಲೀಷ್ ಬಲ್ಲ, ಸಾಮಾಜಿಕ ಜಾಲತಾಣ ಬಳಸುವ ವ್ಯಕ್ತಿಗಳು ಮಾಡಿರುವ ವಿವಾದ ಅಷ್ಟೆ ಅದು. ನೀವು ಅದೇ ‘ವೈಟಲ್ ಅಟ್ರಾಕ್ಷನ್’, ‘ಹಾರ್ಮೊನಲ್ ರಿಯಾಕ್ಷನ್’ ಎಂದು ಹೇಳಿದ್ದರೆ ಒಪ್ಪಿಕೊಳ್ಳುತ್ತಿದ್ದರು. ಆದರೆ ಆ ನಾಯಕ ಒಬ್ಬ ಬುಡಕಟ್ಟಿಗೆ ಸೇರಿದವ, ಶಿಕ್ಷಣ ಇಲ್ಲದವ, ಅವನು ನಿನ್ನನ್ನು ಮುಟ್ಟುವ ಮನಸ್ಸಾಯಿತು ಎಂದು ಆತನ ಭಾಷೆಯಲ್ಲಿ ಹೇಳಿದರೆ ಅದು ಇವರಿಗೆ ಸರಿ ಬರಲಿಲ್ಲ’ ಎಂದು ಅವರು ಟೀಕೆ ಮಾಡಿದ್ದಾರೆ.

ಇದನ್ನೂ ಓದಿ:‘ಪೆದ್ದಿ’ ವಿವಾದ; ನಿರ್ದೇಶಕನ ಬೆಂಬಲಕ್ಕೆ ನಿಂತ ಕಂಗನಾ ರಣಾವತ್ 

‘ಯಾರಿಗೂ ನೋವು ಮಾಡಬಾರದು ಎಂಬ ಉದ್ದೇಶದಿಂದ ಹಾಗೂ ಪ್ರಜಾಪ್ರಭುತ್ವ ಎಂದರೆ 49:51 ಮಾತ್ರವಲ್ಲ 99:1 ಆದರೂ ಅದು ಪ್ರಜಾಪ್ರಭುತ್ವವೇ ಎಂಬ ಉದ್ದೇಶದಿಂದ, ದೂರುವವರ ಸಂಖ್ಯೆ ಕಡಿಮೆ ಇದ್ದರೂ ಸಹ ನಿರ್ದೇಶಕ ಬುಚ್ಚಿಬಾಬು ಸನಾ ಕ್ಷಮೆ ಕೇಳಿದ್ದಾರೆ. ಆದರೆ ಹೀಗೆಯೇ ಕತೆಯ ಹಿನ್ನೆಲೆ, ನಾಯಕ-ನಾಯಕಿಯ ಹಿನ್ನೆಲೆಗಳನ್ನು ಗಣನೆಗೆ ತೆಗೆದುಕೊಳ್ಳದೇ ಆಧುನಿಕ ಯುಗದ ಸೂಕ್ಷ್ಮತೆಯೇ ತೆರಮೇಲೆ ಕಾಣಿಸಿಕೊಳ್ಳಬೇಕೆಂದು ಹೀಗೆಯೇ ಟೀಕಿಸುತ್ತಾ ಹೋದರೆ, ಕಮರ್ಶಿಯಲ್ ಸಿನಿಮಾಗಳು ಡಾಕ್ಯುಮೆಂಟರಿಗಳಾಗುತ್ತವೆ’ ಎಂದು ಅನಂತ್ ಹೇಳಿದ್ದಾರೆ.

ಬಳಿಕ ಮಾತನಾಡಿದ ಬುಚ್ಚಿಬಾಬು ಸನಾ, ‘ನಾಯಕಿಯ ದೃಶ್ಯಗಳನ್ನು ಮೊದಲು ಬರೆದುಕೊಂಡಾಗ ನಿಜಕ್ಕೂ ಚೆನ್ನಾಗಿತ್ತು. ಆದರೆ ಸಿನಿಮಾ ಉದ್ದವಾಯ್ತೆಂದು ಕೆಲವು ದೃಶ್ಯಗಳನ್ನು ತೆಗೆದೆವು ಆಗ ನಾಯಕಿಗೂ ಕತೆಗೂ ಲಿಂಕ್ ಕಟ್ ಆದಂತಾಯ್ತು. ಈಗ ಗ್ಲಾಮರಸ್ ದೃಶ್ಯಗಳನ್ನು ತೆಗೆದು ನಾಯಕಿಯ ಭಾವುಕ ದೃಶ್ಯಗಳನ್ನು ಸೇರಿಸಿದ್ದೇವೆ’ ಎಂದಿದ್ದಾರೆ ಬುಚ್ಚಿಬಾಬು ಸನಾ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ನಾಯಕತ್ವ ಬದಲಾದರೂ ಕೋಲಾರ ಕಾಂಗ್ರೆಸ್​ನಲ್ಲಿ ಮುಗಿಯದ ಬಣ ಬಡಿದಾಟ – Kannada News | Clash Erupts Between MLA Kottur Manjunath and Minister K.H. Muniyappa Factions at Kolar Congress Office

ಕೋಲಾರ, ಜೂನ್​​ 14: ಕೋಲಾರ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಜಿಲ್ಲಾ ಮಟ್ಟದ ಮುಖಂಡರ ಮಹತ್ವದ ಸಭೆಯು ತೀವ್ರ ಮಾತಿನ ಚಕಮಕಿಗೆ ಕಾರಣವಾಗಿದೆ. ಬಿ.ಕೆ.ಹರಿಪ್ರಸಾದ್​​ ಅಧಿಕಾರ ಸ್ವೀಕಾರ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಕಾಂಗ್ರೆಸ್ ಶಾಸಕ ಕೊತ್ತೂರು ಮಂಜುನಾಥ್ ಮತ್ತು ಸಚಿವ ಕೆ.ಹೆಚ್.ಮುನಿಯಪ್ಪ ಬಣಗಳ ನಡುವೆ ಗಲಾಟೆ ನಡೆದಿದೆ. ಶಾಸಕರು ಹಾಗೂ ಇತರ ಹಿರಿಯ ಮುಖಂಡರ ಸಮ್ಮುಖದಲ್ಲೇ ಬಣ ರಾಜಕೀಯದ ಜಗಳ ಬಹಿರಂಗಗೊಂಡಿದೆ. ಸಭೆ ನಡೆಯುತ್ತಿದ್ದ ಸಂದರ್ಭದಲ್ಲಿ, ಕೆ.ಹೆಚ್.ಮುನಿಯಪ್ಪ ಬಣದ ಮಂಜುನಾಥ್ ಮತ್ತು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸೈಯದ್ ಅಫ್ಸರ್ ನಡುವೆ ವಾಗ್ವಾದ ತಾರಕಕ್ಕೇರಿದೆ. ಈ ವೇಳೆ ಮುಖಂಡರು ಅವಾಚ್ಯ ಪದಗಳಿಂದ ಬೈದಾಡಿಕೊಂಡರು. ಸಭೆ ನಂತರವೂ ಕಚೇರಿ ಹೊರಗೂ ಮಾತಿನ ಚಕಮಕಿ ಉಂಟಾಗಿದೆ. ಶಾಸಕ ಕೆ.ವೈ ನಂಜೇಗೌಡ, ಕೊತ್ತೂರು ಮಂಜುನಾಥ್ ಮತ್ತು MLC ಅನಿಲ್ ಕುಮಾರ್ ಸಭೆಯಲ್ಲಿ ಭಾಗಿಯಾಗಿದ್ದರು.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

ಸಿಎಂ ಡಿಕೆ ಶಿವಕುಮಾರ್ ದೆಹಲಿ ಭೇಟಿಯ ಮೊದಲ ಫಲ: ನಮ್ಮ ಮೆಟ್ರೋ ಪ್ರಯಾಣಿಕರಿಗೆ ಸದ್ಯದಲ್ಲೇ ಮತ್ತೊಂದು ಗುಡ್ ನ್ಯೂಸ್ – Kannada News | DK Shivakumar Delhi Met success: Union Governmnet give Premotion Soon to Bengaluru orange metro line

ಬೆಂಗಳೂರು, (ಜೂನ್ 14): ಕಳೆದ ವರ್ಷ ಆಗಸ್ಟ್ ನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ಅವರು ಹಳದಿ ಲೈನ್ ಮೆಟ್ರೋ ಉದ್ಘಾಟನೆ ಮಾಡಿ ಅದೇ ದಿನ ಆರೆಂಜ್ ಲೈನ್‌ಗೆ (Orange Line Metro) ಶಂಕುಸ್ಥಾಪನೆ ಮಾಡಿದ್ದರು. ಆದರೆ ಡಬಲ್ ಡೆಕ್ಕರ್ ಫ್ಲೈ ಓವರ್ ಸಂಬಂಧ ಇಲ್ಲಿಯವರೆಗೆ ಕಾಮಗಾರಿ ಮಾತ್ರ ಆರಂಭವಾಗಿರಲಿಲ್ಲ. ಈ ಸಂಬಂಧ ಸಿಎಂ ಡಿಕೆ ಶಿವಕುಮಾರ್ (DK Shivakumar) ಅವರು ಮೊನ್ನೆ ದೆಹಲಿಯಲ್ಲಿ ಕೇಂದ್ರ ನಗರಾಭಿವೃದ್ಧಿ ಸಚಿವ ಮನೋಹರ್ ಲಾಲ್ ಕಟ್ಟರ್ ಅವರನ್ನು ಭೇಟಿ ಮಾಡಿ ಡಬಲ್ ಡೆಕ್ಕರ್ ಕಂ ಮೆಟ್ರೋಗೆ ಅನುಮತಿ ನೀಡುವಂತೆ ಮನವಿ ಮಾಡಿದ್ದು, ಸದ್ಯದಲ್ಲೇ ಇದಕ್ಕೆ ಗ್ರೀನ್ ಸಿಗ್ನಲ್ ‌ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.

ಮುಖ್ಯಾಂಶಗಳು

  • ಕೇಂದ್ರದಿಂದ ನಮ್ಮ ಮೆಟ್ರೋ ಪ್ರಯಾಣಿಕರಿಗೆ ಸದ್ಯದಲ್ಲೇ ಸಿಗಲಿದೆ ಗುಡ್ ನ್ಯೂಸ್
  • ಆರೆಂಜ್ ಲೈನ್ ಮೆಟ್ರೋ ಮಾರ್ಗದಲ್ಲೂ ಬರಲಿದೆ ಡಬಲ್ ಡೆಕ್ಕರ್ ಫ್ಲೈ ಓವರ್
  • ಸಿಎಂ ಡಿಕೆ ಶಿವಕುಮಾರ್ ದೆಹಲಿ ಭೇಟಿಯ ಮೊದಲ ಫಲ

ಜೆ.ಪಿ ನಗರ ನಾಲ್ಕನೇ ಹಂತದಿಂದ ಕೆಂಪಾಪುರ, ಹೊಸಹಳ್ಳಿ ಟು ಕಡಬಗೆರೆ.ಆರೆಂಜ್ ಲೈನ್ ಮೆಟ್ರೋ ಮಾರ್ಗಕ್ಕೆ ಪ್ರಧಾನಿ ನರೇಂದ್ರ ಮೋದಿ ಕಳೆದ ವರ್ಷ ಆಗಸ್ಟ್- 10 ರಂದು ಶಂಕುಸ್ಥಾಪನೆ ಮಾಡಿದ್ದರು. ಆದರೆ ಇಲ್ಲಿಯವರೆಗೆ ಮೆಟ್ರೋ ಕಾಮಗಾರಿ ಮಾತ್ರ ಆರಂಭವಾಗಿರಲಿಲ್ಲ. ಇದಕ್ಕೆ ಪ್ರಮುಖ ಕಾರಣ ಅಂದರೆ, ರಾಜ್ಯ ಸರ್ಕಾರ ಈ ಮಾರ್ಗದಲ್ಲಿ ಟ್ರಾಫಿಕ್ ಸಮಸ್ಯೆಗೆ ಬ್ರೇಕ್ ಹಾಕಲು ಮೆಟ್ರೋ ಜೊತೆಗೆ ಡಬಲ್ ಡೆಕ್ಕರ್ ಫ್ಲೈ ಓವರ್ ನಿರ್ಮಾಣ ಮಾಡಲು ಮುಂದಾಗಿತ್ತು. ಆದರೆ ಇದಕ್ಕೆ ಕೇಂದ್ರ ನಗರಾಭಿವೃದ್ಧಿ ಇಲಾಖೆ ಅಸಮಾಧಾನ ವ್ಯಕ್ತಪಡಿಸಿತ್ತು. ಇದರಿಂದ ಮೆಟ್ರೋ ಪ್ರಯಾಣಿಕರ ಮೇಲೆ ಪರಿಣಾಮ ಬೀರಳಿದೆ. ಡಬಲ್ ಡೆಕ್ಕರ್ ಫ್ಲೈ ಓವರ್ ನಿರ್ಮಾಣ ಮಾಡಿದ್ರೆ ವಾಹನಗಳ ಸಂಖ್ಯೆ ಹೆಚ್ಚಾಗುತ್ತದೆ ಮೆಟ್ರೋ ಪ್ರಯಾಣಿಕರ ಸಂಖ್ಯೆ ಕಡಿಮೆ ಆಗುತ್ತದೆ ಅನ್ನೋ ಕಾರಣ ನೀಡಿತ್ತು. ಆದರೆ ಇದೀಗ ಡಿಕೆ ಶಿವಕುಮಾರ್, ಕೇಂದ್ರ ಸಚಿವ ಮನೋಹರ್ ಲಾಲ್ ಕಟ್ಟರ್ ಅವರನ್ನು ಭೇಟಿ ಮಾಡಿ ಡಬಲ್ ಡೆಕ್ಕರ್ ಕಂ ಮೆಟ್ರೋಗೆ ಅನುಮತಿ ನೀಡುವಂತೆ ಮನವಿ ಮಾಡಿದ್ದು, ಶೀಘ್ರದಲ್ಲೇ ಅನುಮತಿ ನೀಡುವ ಸಾಧ್ಯತೆಗಳಿವೆ.

ಇದನ್ನೂ ಓದಿ: ಒಂದು ಭೇಟಿ, ಹತ್ತಾರು ಬೇಡಿಕೆ: ಪ್ರಧಾನಿ ಮೋದಿ ಮುಂದೆ ಡಿಕೆಶಿ ಇಟ್ಟ ಬೇಡಿಕೆಗಳಾವುವು? ಇಲ್ಲಿದೆ ಪಟ್ಟಿ

ಇನ್ನೂ ಮೆಟ್ರೋ 3ನೇ ಹಂತದಲ್ಲಿ ಎರಡು ಮಾರ್ಗಗಳಿದ್ದು, ಜೆಪಿ ನಗರ 4ನೇ ಹಂತದಿಂದ-ಕೆಂಪಾಪುರ ಒಟ್ಟು 32.5 ಕಿಮೀ ಉದ್ದದ ಮಾರ್ಗ.ಹೊಸಹಳ್ಳಿಯಿಂದ ಮಾಗಡಿ ರಸ್ತೆಯಾಗಿ ಕಡಬಗೆರೆ ಒಟ್ಟು 12.15 ಕಿಮೀ. ಉದ್ದವನ್ನು ಹೊಂದಿದೆ. ಈ ಬಗ್ಗೆ ಮಾತನಾಡಿದ ಸ್ಥಳೀಯ ನಿವಾಸಿ, ನಮ್ಮ ಮನೆಯ ಮುಂಭಾಗದಲ್ಲಿ ಮೆಟ್ರೋ ಕಂ ಡಬಲ್ ಡೆಕ್ಕರ್ ಫ್ಲೈ ಹಾದು ಹೋಗುವುದು ತುಂಬಾ ಸಂತೋಷದ ವಿಷ್ಯ. ಇದರಿಂದ ರಿಂಗ್ ರೋಡ್ ನಲ್ಲಿ ಟ್ರಾಫಿಕ್ ಸಮಸ್ಯೆ ‌ಕಂಟ್ರೊಲ್ ಆಗಲಿದೆ, ವಾಯುಮಾಲಿನ್ಯದ ಪ್ರಮಾಣವು ಕಡಿಮೆ ಆಗಲಿದೆ. ಜನರು ಸಂಚಾರ ಮಾಡಲು ಸಾಕಷ್ಟು ಸಹಾಯ ಆಗಲಿದೆ. ಪೀಣ್ಯದಲ್ಲಿರುವ ಸಾವಿರಾರು ಇಂಡಸ್ಟ್ರಿಗಳಿದ್ದು, ಕೆಲಸಕ್ಕೆ ಹೋಗುವವರಿಗೆ ಅನುಕೂಲವಾಗಲಿದೆ ಅಂತಾರೇ.

ಒಟ್ನಲ್ಲಿ ಆರೆಂಜ್ ಲೈನ್‌ ಮೆಟ್ರೋ ಮಾರ್ಗದಲ್ಲಿ ಡಬಲ್ ಡೆಕ್ಕರ್ ಫ್ಲೈ ಓವರ್ ನಿರ್ಮಾಣ ಮಾಡಲು ಸದ್ಯದಲ್ಲೇ ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್ ನೀಡಲಿದ್ದು, ಇದರಿಂದ ಔಟರ್ ರಿಂಗ್ ರೋಡ್ ನಿವಾಸಿಗಳಿಗೆ ಮತ್ತು ವಾಹನ ಸವಾರರಿಗೆ ಹೆಚ್ಚಿನ ಅನುಕೂಲವಾಗಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 9:59 pm, Sun, 14 June 26

Source link