ಊಬರ್ ಕಂಪನಿ ಚಾಲಕರಿಗೆ ಮಾಡೋ ಮೋಸ ಎಂಥದ್ದು ಅಂತ ಬಿಚ್ಚಿಟ್ಟ ಚಾಲಕರು!
ಬೆಂಗಳೂರು, ಏಪ್ರಿಲ್ 08: ಬೊಮ್ಮನಹಳ್ಳಿಯ ಊಬರ್ ಕಚೇರಿ ಮುಂದೆ ಚಾಲಕರು ಬೃಹತ್ ಪ್ರತಿಭಟನೆ ನಡೆಸಿದ್ದಾರೆ. ಊಬರ್ ಕಂಪನಿಯಿಂದ ತಮಗೆ ಆಗುತ್ತಿರುವ ಅನ್ಯಾಯ ಮತ್ತು ಶೋಷಣೆಯನ್ನು ಖಂಡಿಸಿ, ಚಾಲಕರು ಮನವಿ ಸಲ್ಲಿಸಿದ್ದಾರೆ. ಸರ್ಕಾರ ನಿಗದಿಪಡಿಸಿದ ದರಗಳನ್ನು ಊಬರ್ ನೀಡುತ್ತಿಲ್ಲ ಎಂದು ಆರೋಪಿಸಿದ್ದಾರೆ. ವಿಶೇಷವಾಗಿ, ನಾನ್-ಪೀಕ್ ಅವರ್‌ಗಳಲ್ಲಿ ಸಿಗುವ ದರ ಅತ್ಯಂತ ಕಡಿಮೆಯಾಗಿದ್ದು, ಒಂದು ಟ್ರಿಪ್‌ಗೆ ಕೇವಲ 8 ರಿಂದ 15 ರೂಪಾಯಿ ಮಾತ್ರ ಸಿಗುತ್ತಿದೆ ಎಂದು ಚಾಲಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಎಲ್‌ಪಿಜಿ ಮತ್ತು ಸಿಎನ್‌ಜಿ ಇಂಧನ ಬೆಲೆಗಳು ಗಣನೀಯವಾಗಿ…