‘ಡ್ರ್ಯಾಗನ್’ ಸಿನಿಮಾ ಶೂಟಿಂಗ್ ನಿಲ್ಲಿಸಿದ ಪ್ರಶಾಂತ್ ನೀಲ್, ಜೂ. ಎನ್‌ಟಿಆರ್; ಕಾರಣ ಏನು?
ನಟ ಜೂನಿಯರ್ ಎನ್‌ಟಿಆರ್ ಮತ್ತು ನಿರ್ದೇಶಕ ಪ್ರಶಾಂತ್ ನೀಲ್ ಕಾಂಬಿನೇಶನ್‌ನ ಬಹುನಿರೀಕ್ಷಿತ ‘ಡ್ರ್ಯಾಗನ್’ (Dragon) ಸಿನಿಮಾದ ಚಿತ್ರೀಕರಣಕ್ಕೆ ಸಣ್ಣ ಬ್ರೇಕ್ ನೀಡಲಾಗಿದೆ. ಈ ತಿಂಗಳು ನಡೆಯಬೇಕಿದ್ದ ಪ್ರಮುಖ ಹಂತದ ಚಿತ್ರೀಕರಣವನ್ನು ದಿಢೀರ್ ಸ್ಥಗಿತಗೊಳಿಸಲಾಗಿದೆ ಎಂದು ವರದಿಯಾಗಿದೆ. ಈ ಚಿತ್ರದಲ್ಲಿ ಎನ್‌ಟಿಆರ್ (Jr NTR) ವಿಭಿನ್ನ ಗೆಟಪ್‌ಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇತ್ತೀಚಿನ ಶೆಡ್ಯೂಲ್‌ಗಾಗಿ ಎನ್‌ಟಿಆರ್ ಅವರ ಹೊಸದೊಂದು ಲುಕ್ ಫೈನಲ್ ಮಾಡಬೇಕಿತ್ತು. ಆದರೆ, ಎನ್‌ಟಿಆರ್ ಮತ್ತು ಪ್ರಶಾಂತ್ ನೀಲ್ (Prashanth Neel) ಇಬ್ಬರೂ ಆ ಹೊಸ ಲುಕ್ ಬಗ್ಗೆ ತೃಪ್ತರಾಗಿಲ್ಲ…