ಡ್ರಗ್ಸ್ ಫ್ಯಾಕ್ಟರಿ ರಾಜಧಾನಿ ಆಯ್ತಾ ಬೆಂಗಳೂರು?: 55.88 ಕೋಟಿ ರೂ. ಮೌಲ್ಯದ MDMA ಸೀಜ್; ನಾಲ್ವರು ಅರೆಸ್ಟ್ – Kannada News | Bangalore Drug Factory Busted: 55 Cr MDMA Seized by Maharashtra Police
ಬೆಂಗಳೂರು, ಡಿಸೆಂಬರ್ 28: ಮಹಾರಾಷ್ಟ್ರದ ANTF ಕೊಂಕಣ ವಿಭಾಗದ ಪೊಲೀಸರು ಕರ್ನಾಟಕದ ರಾಜಧಾನಿ ಬೆಂಗಳೂರಲ್ಲಿ ಭರ್ಜರಿ ಬೇಟೆ ನಡೆಸಿದ್ದಾರೆ. ವಿವಿಧೆಡೆ ದಾಳಿ ನಡೆಸಿ 55.88 ಕೋಟಿ ರೂ. ಮೌಲ್ಯದ ಡ್ರಗ್ಸ್ ಸೀಜ್ ಮಾಡಿದ್ದು, ಪ್ರಕರಣ ಸಂಬಂಧ ನಾಲ್ವರನ್ನು ಬಂಧಿಸಿದ್ದಾರೆ. RJ ಇವೆಂಟ್ ಹೆಸರಿನಲ್ಲಿ ಡ್ರಗ್ಸ್ ಫ್ಯಾಕ್ಟರಿ ನಡೆಸುತ್ತಿರುವುದು ಪತ್ತೆಯಾಗಿರೋದು ಬೆಂಗಳೂರಿಗರನ್ನು ಬೆಚ್ಚಿ ಬೀಳಿಸಿದೆ. ಮುಂಬೈನಲ್ಲಿ ಇತ್ತೀಚೆಗೆ 1.5 ಕೋಟಿ ರೂ. ಮೌಲ್ಯದ ಡ್ರಗ್ಸ್ ಸೀಜ್ ಮಾಡಲಾಗಿತ್ತು. ಈ ವೇಳೆ ಅರೆಸ್ಟ್ ಆಗಿದ್ದ ಅಬ್ದುಲ್ಲಾ ಖಾದರ್ ಶೇಕ್ ಎಂಬಾತ…