Category Archives: Blog

Your blog category

ಜನಗಣತಿ ಕಾರ್ಯಕ್ಕೆ ಆಸ್ಪತ್ರೆ ಸಿಬ್ಬಂದಿ ನಿಯೋಜನೆ: ರೋಗಿಗಳಿಗೆ ವೈದ್ಯಕೀಯ ಸೇವೆ ಸಿಗೋದು ಡೌಟ್

ಜನಗಣತಿ ಕಾರ್ಯಕ್ಕೆ ಆಸ್ಪತ್ರೆ ಸಿಬ್ಬಂದಿ ನಿಯೋಜನೆ: ರೋಗಿಗಳಿಗೆ ವೈದ್ಯಕೀಯ ಸೇವೆ ಸಿಗೋದು ಡೌಟ್

ಬೆಂಗಳೂರು, ಏಪ್ರಿಲ್ 7: ರಾಜಧಾನಿ ಬೆಂಗಳೂರಿನ (Bangalore) ಸರ್ಕಾರಿ ಆಸ್ಪತ್ರೆಗಳಲ್ಲಿ ಈಗಾಗಲೇ ತಜ್ಞರು ಮತ್ತು ಸಿಬ್ಬಂದಿಯ ಕೊರತೆ ಎದ್ದು ಕಾಣುತ್ತಿದೆ. ಇಂತಹ ಸಂದರ್ಭದಲ್ಲಿ 2027ರ ಜನಗಣತಿ ಸಮೀಕ್ಷಾ ಕಾರ್ಯಕ್ಕೆ ಆರೋಗ್ಯ ಇಲಾಖೆಯ ನೌಕರರನ್ನು ಬಳಸಿಕೊಳ್ಳುತ್ತಿರುವುದು ರೋಗಿಗಳಿಗೆ ಭಾರಿ ಸಂಕಷ್ಟ ತಂದೊಡ್ಡಲಿದೆ. ವೈದ್ಯಕೀಯ ಸೇವೆಗಳ ಮೇಲೆ ಪರಿಣಾಮ ಬೀರಲಿದ್ದು, ಆಸ್ಪತ್ರೆ ಸಿಬ್ಬಂದಿಯನ್ನು ಗಣತಿ ಕಾರ್ಯಕ್ಕೆ ಬಳಸಿಕೊಳ್ಳದಂತೆ ಮನವಿ ಮಾಡಲಾಗಿದೆ.

ಯಾರೆಲ್ಲಾ ಜನಗಣತಿ ಕಾರ್ಯಕ್ಕೆ?

ವೈದ್ಯಕೀಯ ಶಿಕ್ಷಣ ಇಲಾಖೆ ಮತ್ತು ಆರೋಗ್ಯ ಇಲಾಖೆಯ ಪ್ಯಾರಾ ಮೆಡಿಕಲ್ ಸಿಬ್ಬಂದಿ, ಲ್ಯಾಬ್ ಟೆಕ್ನಿಶಿಯನ್ಸ್, ಎಕ್ಸರೆ ಟೆಕ್ನಾಲಜಿಸ್ಟ್, ಫಿಸಿಯೋಥೆರಫಿಸ್ಟ್, ಕ್ಲಿನಿಕಲ್ ಸೈಕಾಲಜಿಸ್ಟ್ ಹಾಗೂ ನೇತ್ರಾಧಿಕಾರಿಗಳನ್ನು ಜನಗಣತಿ ಕೆಲಸಕ್ಕೆ ನಿಯೋಜಿಸಲಾಗಿದೆ. ಮಲ್ಲೇಶ್ವರಂನ ಕೆಸಿ ಜನರಲ್ ಆಸ್ಪತ್ರೆಯೊಂದರಲ್ಲೇ ಸುಮಾರು 20ಕ್ಕೂ ಹೆಚ್ಚು ನೌಕರರನ್ನು ಈ ಕಾರ್ಯಕ್ಕೆ ಬಳಸಿಕೊಳ್ಳಲಾಗುತ್ತಿರುವುದು ಆಸ್ಪತ್ರೆಯ ದೈನಂದಿನ ಕಾರ್ಯಚಟುವಟಿಕೆಗೆ ಹೊಡೆತ ನೀಡಲಿದೆ.

ರೋಗಿಗಳ ಗೋಳು ಕೇಳುವವರಾರು?

ಸರ್ಕಾರಿ ಆಸ್ಪತ್ರೆಗಳಿಗೆ ಪ್ರತಿನಿತ್ಯ 800 ರಿಂದ 1000ಕ್ಕೂ ಹೆಚ್ಚು ರೋಗಿಗಳು ಒಪಿಡಿ ಸೇವೆಗೆ ಬರುತ್ತಾರೆ. ಎಕ್ಸರೆ ಮತ್ತು ಲ್ಯಾಬ್ ಟೆಸ್ಟ್‌ಗಳಿಗೆ ಈಗಾಗಲೇ ಜನದಟ್ಟಣೆ ಇರುತ್ತದೆ. ಈಗ ಇರುವ ಸಿಬ್ಬಂದಿಯನ್ನೂ ಜನಗಣತಿಗೆ ಕಳುಹಿಸಿದರೆ ರೋಗಿಗಳಿಗೆ ತುರ್ತು ಚಿಕಿತ್ಸೆ ನೀಡುವುದು ಅಸಾಧ್ಯವಾಗಲಿದೆ.

ಇದನ್ನೂ ಓದಿ: ಇಂದಿನಿಂದ ಜನಗಣತಿ: ಸ್ವಯಂ ಗಣತಿ ಹೇಗೆ ಮಾಡುವುದು? ಸಾರ್ವಜನಿಕರು ಭಾಗಿಯಾಗೋದು ಹೇಗೆ?

ಆರೋಗ್ಯ ಇಲಾಖೆಯು ತುರ್ತು ಸೇವೆ ನೀಡುವ ವಿಭಾಗವಾಗಿರುವುದರಿಂದ, ಸಾರ್ವಜನಿಕ ಹಿತದೃಷ್ಟಿಯಿಂದ ಆರೋಗ್ಯ ಸಿಬ್ಬಂದಿಯನ್ನು ಜನಗಣತಿ ಕಾರ್ಯದಿಂದ ಕೈಬಿಡಬೇಕು ಎಂದು ಆಸ್ಪತ್ರೆಗಳ ಅಧೀಕ್ಷಕರು ಹಾಗೂ ಕರ್ನಾಟಕ ರಾಜ್ಯ ಆರೋಗ್ಯ ವೈದ್ಯಕೀಯ ಶಿಕ್ಷಣ ಇಲಾಖೆ ನೌಕರರ ಕೇಂದ್ರ ಸಂಘ ಆಯುಕ್ತರಿಗೆ ಪತ್ರ ಬರೆದು ಮನವಿ ಮಾಡಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Viral: ನಿರ್ಮಾಣದ ಹೆಸರಿನಲ್ಲಿ ಹದಗೆಟ್ಟ ಬೆಂಗಳೂರು; ವರ್ಷಗಳ ಬಳಿಕ ನಗರಕ್ಕೆ ಮರಳಿದ ವ್ಯಕ್ತಿ ಹೀಗೆಂದಿದ್ದೇಕೆ?

ಬೆಂಗಳೂರು,  ಏಪ್ರಿಲ್‌ 07: ಮಾಯಾನಗರಿ ಬೆಂಗಳೂರು (Bengaluru), ಯುವಕರ ಪಾಲಿಗೆ ಅದೊಂದು ಕನಸಿನ ಲೋಕ, ಹೀಗಾಗಿ ನೂರಾರು ಕನಸುಗಳನ್ನು ಹೊತ್ತು ಇಲ್ಲಿಗೆ ಲಕ್ಷಾಂತರ ಜನರು ಬರುತ್ತಾರೆ. ಹೀಗೆ ಬಂದವರು ಹಾಗೂ ಇಲ್ಲಿನ ನಿವಾಸಿಗಳು ಕೂಡ ಇಲ್ಲಿನ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತುವ ಪ್ರಯತ್ನ ಮಾಡುವುದು ಕಡಿಮೆ. ಹೀಗಿರುವಾಗ ಬೆಂಗಳೂರಿನ ನಿವಾಸಿಯೊಬ್ಬರು ಎರಡು ವರ್ಷಗಳ ಬಳಿಕ ಈ ನಗರಕ್ಕೆ ಮರಳಿದ್ದು, ಇಲ್ಲಿನ ವಾಸ್ತವ ಸ್ಥಿತಿಯನ್ನು ಬಿಚ್ಚಿಟ್ಟಿದ್ದಾರೆ. ನಗರದ ಹದಗೆಡುತ್ತಿರುವ ಸ್ಥಿತಿಯ ಬಗ್ಗೆ ಬೆಂಗಳೂರಿನ ನಿವಾಸಿಯೊಬ್ಬರು ಮಾಡಿದ ಪ್ರಾಮಾಣಿಕ ಪೋಸ್ಟ್ ಮಾಡಿದ್ದು, ಇದು ನೆಟ್ಟಿಗರ ಗಮನ ಸೆಳೆದಿದೆ.

ಆದಿತ್ಯ ಕುಲಕರ್ಣಿ (Aditya Kulkarni) ಎಂಬ ವ್ಯಕ್ತಿ ತಮ್ಮ ಎಕ್ಸ್ ಖಾತೆಯಲ್ಲಿ ಹದಗೆಟ್ಟಿರುವ ಬೆಂಗಳೂರಿನ ಬಗ್ಗೆ ಹೇಳಿದ್ದಾರೆ. ನಾನು ಬೆಂಗಳೂರಿಗೆ ಹಿಂತಿರುಗಿ 3 ತಿಂಗಳಿಗಿಂತಲೂ ಹೆಚ್ಚು ಸಮಯವಾಗಿದೆ. ನಾನು ದೂರವಿದ್ದ 2 ವರ್ಷಗಳಲ್ಲಿ ನಗರವು ಗಮನಾರ್ಹವಾಗಿ ಬದಲಾಗಿದೆ ಎಂದು ನಾನು ಹೇಳಲೇಬೇಕು. ಬದಲಾವಣೆಯು ಕೆಟ್ಟದ್ದಾಗಿದೆ ಎಂದು ಹೇಳಲು ನನಗೆ ಭಯವಾಗಿದೆ ಎಂದು ಹೇಳಿದ್ದಾರೆ.

ವೈರಲ್ ಪೋಸ್ಟ್ ಇಲ್ಲಿದೆ

ಎಲ್ಲೆಡೆ ನಿರ್ಮಾಣ ಕಾರ್ಯಗಳು ನಡೆಯುತ್ತಿವೆ, ರಸ್ತೆಗಳು ಅಗೆದು ಹಾಕಲ್ಪಟ್ಟಿವೆ, ಇತ್ತ ಗುಂಡಿಗಳಿಂದ ತುಂಬಿವೆ. ಎಲ್ಲೆಡೆ ಕಸವಿದೆ ಮತ್ತು ಇಡೀ ನಗರವು ಹೊಲಸಿನಿಂದ ಗಬ್ಬು ನಾರುತ್ತಿದೆ. ಸಂಚಾರ ಹದಗೆಟ್ಟಿದೆ ಮತ್ತು ರಸ್ತೆಗಳಲ್ಲಿ ನಾಗರಿಕ ಪ್ರಜ್ಞೆಯ ಕೊರತೆಯನ್ನು ನೋಡಲು ಭಯಾನಕವಾಗಿದೆ. ನನ್ನ ಮನೆಯಿದ್ದ ಈ ನಗರವನ್ನು ನಾನು ಗುರುತಿಸಲು ಸಾಧ್ಯವಾಗುತ್ತಿಲ್ಲ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ತಡರಾತ್ರಿ ಯುವತಿಯ ನೆರವಿಗೆ ಬಂದ ಅಪರಿಚಿತರು

ಏಪ್ರಿಲ್ 6 ರಂದು ಹಂಚಿಕೊಳ್ಳಲಾದ ಈ ಪೋಸ್ಟ್ ಐವತ್ತು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಬೆಂಗಳೂರು ಒಂದು ಅದ್ಭುತ ನಗರ. ನಗರವು ಜನರಿಂದ ಕೂಡಿದೆ, ಆದರೆ ಕೆಲವು ಮೂರ್ಖ ಜನರು ತಮ್ಮ ವಾಸಿಸುವ ಸ್ಥಳಗಳನ್ನು ನಾಶಮಾಡುತ್ತಾರೆ ಎಂದು ಹೇಳಿದ್ದಾರೆ. ಇನ್ನೊಬ್ಬರು, ನಿರ್ಮಾಣ ಚಟುವಟಿಕೆಗಳಿಂದ ಮನೆಗಳಲ್ಲಿ ಧೂಳು ಸಂಗ್ರಹವಾಗುವುದನ್ನು ಮರೆಯಲು ಸಾಧ್ಯವೇ ಎಂದಿದ್ದಾರೆ. ಮತ್ತೊಬ್ಬರು, ರಾಜಕೀಯ ನಾಯಕರು ಸಮಸ್ಯೆಗಳನ್ನು ಸರಿಪಡಿಸುವುದಕ್ಕಿಂತ ಐಪಿಎಲ್ ಟಿಕೆಟ್‌ಗಳ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಾರೆ. ಅವರನ್ನು ಆಯ್ಕೆ ಮಾಡುವುದನ್ನು ಮುಂದುವರಿಸಿ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Source link

ಒಂದೇ ಚಿತ್ರದಲ್ಲಿ ಇಬ್ಬರು ಬಿಗ್ ಬಾಸ್ ವಿನ್ನರ್ಸ್; ಗಮನ ಸೆಳೆದ ‘ಎಲ್ರ ಕಾಲೆಳಿಯುತ್ತೆ ಕಾಲ’ ಟ್ರೇಲರ್

ರ‍್ಯಾಪರ್ ಚಂದನ್ ಶೆಟ್ಟಿ ಅವರು ‘ಬಿಗ್ ಬಾಸ್’ ವಿನ್ನರ್ ಆಗಿ ಗಮನ ಸೆಳೆದರು. ಆ ಬಳಿಕ ಅವರು ನಟನೆಯಲ್ಲಿ ಬ್ಯುಸಿ ಆದರು.ಈಗ ಅವರು ನಟ ಕೂಡ ಹೌದು. ಇನ್ನು, ಮತ್ತೋರ್ವ ಬಿಗ್ ಬಾಸ್ (Bigg Boss) ವಿನ್ನರ್ ಮಂಜು ಪಾವಗಡ ಅವರು ಕಿರುತೆರೆ ಹಾಗೂ ಹಿರಿತೆರೆಯಲ್ಲಿ ಬ್ಯುಸಿ ಇದ್ದಾರೆ. ಇಬ್ಬರೂ ಒಟ್ಟಾಗಿ ನಟಿಸಿರೋ ‘ಎಲ್ರ ಕಾಲೆಳಿಯುತ್ತೆ ಕಾಲ’ ಟ್ರೇಲರ್ ರಿಲೀಸ್ ಆಗಿದೆ. ಈ ಸಿನಿಮಾಗೆ ನಟ ಸುಜಯ್ ಶಾಸ್ತ್ರಿ ನಿರ್ದೇಶನ ಇದೆ. ಅರ್ಚನಾ ಕೊಟ್ಟಿಗೆ ನಾಯಕಿ ಆಗಿರೋ ಈ ಚಿತ್ರ ಏಪ್ರಿಲ್ 17ರಂದು ರಿಲೀಸ್ ಆಗುತ್ತಿದೆ.

ಸುಜಯ್ ಶಾಸ್ತ್ರಿ ಅವರು ಹಾಸ್ಯ ಪಾತ್ರಗಳ ಮೂಲಕ ಗಮನ ಸೆಳೆದವರು. ಈಗ ಅವರು ನಿರ್ದೇಶನ ಮಾಡಿದ್ದಾರೆ. ಒಂದೂರಲ್ಲಿ ಗಡಿಯಾರವೇ ಇಲ್ಲ ಅಂದ್ರೆ ಏನಾಗುತ್ತೇ? ಗಡಿಯಾರ ಇಲ್ಲ ಅಂದ್ರೂ ಸಮಯ ನಮ್ಮ ಕಾಲೆಳೆಯೋದನ್ನು ಬಿಡೋದಿಲ್ಲ ಎಂಬ ವಿಷಯವನ್ನು ‘ಎಲ್ರ ಕಾಲೆಳಿಯುತ್ತೆ ಕಾಲ’ ಸಿನಿಮಾದಲ್ಲಿ ಹೇಳಲಾಗುತ್ತಿದೆಯಂತೆ. ರೆಟ್ರೋ ಸ್ಟೈಲ್​​ನಲ್ಲಿ ಸಿನಿಮಾ ಮೂಡಿಬಂದಿದೆ.

ಚಂದನ್ ಶೆಟ್ಟಿ ಬೆಂಗಳೂರಿನಿಂದ ಹಳ್ಳಿಗೆ ಬರುತ್ತಾರೆ. ಅಲ್ಲಿ ಒಂದಷ್ಟು ಘಟನೆಗಳು ನಡೆಯುತ್ತವೆ. ಆರಂಭದಲ್ಲಿ ಎಲ್ಲವೂ ಹಾಸ್ಯಮಯವಾಗಿಯೇ ಕಾಣಿಸಿದರೂ ಕೊನೆಗೆ ಟ್ರೇಲರ್ ಗಂಭೀರ ಸ್ವರೂಪ ಪಡೆದುಕೊಳ್ಳುತ್ತದೆ. ಈ ರೀತಿಯಲ್ಲಿ ‘ಎಲ್ರ ಕಾಲೆಳಿಯುತ್ತೆ ಕಾಲ’ ಟ್ರೇಲರ್ ಮೂಡಿ ಬಂದಿದೆ.

ಇದನ್ನೂ ಓದಿ: ಕ್ರಿಸ್ ಗೇಲ್ ಜೊತೆ ಚಂದನ್ ಶೆಟ್ಟಿ ವಿಡಿಯೋ ಸಾಂಗ್; ಕನ್ನಡ ಹಾಡಿಗೆ ಎಗ್ಸೈಟ್ ಆದ ಯೂನಿವರ್ಸಲ್ ಬಾಸ್

ಈ ಸಿನಿಮಾ ಸೆಟ್ಟೇರಿ ಕೆಲ ವರ್ಷಗಳು ಕಳೆದಿವೆ. ಆದರೆ, ಸಿನಿಮಾ ರಿಲೀಸ್ ಮಾಡಲು ಸಾಧ್ಯವಾಗಿರಲಿಲ್ಲ. ಈಗ ಎಲ್ಲಾ ಸಿದ್ಧತೆಗಳೊಂದಿಗೆ ಸಿನಿಮಾ ಬರುತ್ತಿದೆ. ಚಂದನ್, ಮಂಜು, ಅರ್ಚನಾ ಜೊತೆ ತಾರಾ ಅನುರಾಧಾ, ಮಂಡ್ಯ ರಮೇಶ್, ದತ್ತಣ್ಣ ಮೊದಲಾದವರು ನಟಿಸಿದ್ದಾರೆ. ದಿವಂಗತ ರಾಜೇಶ್ ಪೂಜಾರಿ ಕೂಡ ನಟಿಸಿದ್ದಾರೆ. ಉಶಾ ಗೋವಿಂದ ರಾಜು ನಿರ್ಮಾಣ ಇರುವ ಈ ಚಿತ್ರಕ್ಕೆ ಪ್ರವೀಣ್-ಪ್ರದೀಪ್ ಸಂಗೀಯ ಸಂಯೋಜನೆ ಮಾಡಿದ್ದಾರೆ. ರಾಜ್​​​ಗುರು ಹೊಸಕೋಟೆ ಚಿತ್ರಕ್ಕೆ ಕಥೆ-ಚಿತ್ರಕಥೆ ಬರೆದಿದ್ದಾರೆ. ವಿಶ್ವಜಿತ್ ರಾವ್ ಛಾಯಾಗ್ರಹಣ ಸಿನಿಮಾಗೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Gold Rates: ಚಿನ್ನದ ಬೆಲೆಯಲ್ಲಿ ಅಲ್ಪ ಇಳಿಕೆ; ಇಲ್ಲಿದೆ ದರಪಟ್ಟಿ

ಬೆಂಗಳೂರು, ಏಪ್ರಿಲ್ 7: ಚಿನ್ನದ ಬೆಲೆ ಅಕ್ಷರಶಃ ಪ್ರಕ್ಷುಬ್ದತೆಯ ಸ್ವಭಾವ ಪಡೆದಿದೆ. ದಿನವೂ ಏರಿಳಿತಗಳನ್ನು ಕಾಣುತ್ತಿದೆ. ಒಂದೇ ದಿನದಲ್ಲಿ ಬೆಲೆಯಲ್ಲಿ (Gold Rates) ಬದಲಾವಣೆ ಆಗುತ್ತಿದೆ. ನಿನ್ನೆ ಬೆಳಗ್ಗೆ 165 ರೂ ಇಳಿದಿದ್ದ ಚಿನ್ನದ ಬೆಲೆ ಸಂಜೆ ಸುಮಾರು 150 ರೂಗಳಷ್ಟು ಏರಿತ್ತು. ಇವತ್ತು ಮಂಗಳವಾರ ಬೆಳಗ್ಗೆ ಬೆಲೆ 75 ರೂನಷ್ಟು ಕಡಿಮೆಗೊಂಡಿದೆ. ವಿದೇಶಗಳಲ್ಲೂ ಇದೇ ರೀತಿ ಏರಿಳಿತದ ಆಟ ನಡೆದಿದೆ. ಈ ಮಧ್ಯೆ ಬೆಳ್ಳಿ ಬೆಲೆಯ ಸ್ಥಿರತೆ ಮುಂದುವರಿದಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,37,350 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,49,840 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 25,000 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,37,350 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 25,000 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 25,500 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಏಪ್ರಿಲ್ 7ಕ್ಕೆ)

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,984 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,735 ರೂ
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 11,238 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 250 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,984 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,735 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 250 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 13,735 ರೂ
  • ಚೆನ್ನೈ: 13,860 ರೂ
  • ಮುಂಬೈ: 13,735 ರೂ
  • ದೆಹಲಿ: 13,750 ರೂ
  • ಕೋಲ್ಕತಾ: 13,735 ರೂ
  • ಕೇರಳ: 13,735 ರೂ
  • ಅಹ್ಮದಾಬಾದ್: 13,740 ರೂ
  • ಜೈಪುರ್: 13,750 ರೂ
  • ಲಕ್ನೋ: 13,750 ರೂ
  • ಭುವನೇಶ್ವರ್: 13,735 ರೂ

ಇದನ್ನೂ ಓದಿ: ಗೋಲ್ಡ್ ಒಡಿ, ಇದು ಒಡವೆ ಸಾಲಕ್ಕಿಂತ ಎಷ್ಟು ಭಿನ್ನ, ಎಷ್ಟು ಉಪಯುಕ್ತ? ಇಲ್ಲಿದೆ ಮಾಹಿತಿ

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಮಲೇಷ್ಯಾ: 579 ರಿಂಗಿಟ್ (13,335 ರುಪಾಯಿ)
  • ದುಬೈ: 519.50 ಡಿರಾಮ್ (13,149 ರುಪಾಯಿ)
  • ಅಮೆರಿಕ: 146 ಡಾಲರ್ (13,573 ರುಪಾಯಿ)
  • ಸಿಂಗಾಪುರ: 185.50 ಸಿಂಗಾಪುರ್ ಡಾಲರ್ (13,414 ರುಪಾಯಿ)
  • ಕತಾರ್: 518.50 ಕತಾರಿ ರಿಯಾಲ್ (13,225 ರೂ)
  • ಸೌದಿ ಅರೇಬಿಯಾ: 530 ಸೌದಿ ರಿಯಾಲ್ (13,123 ರುಪಾಯಿ)
  • ಓಮನ್: 55.25 ಒಮಾನಿ ರಿಯಾಲ್ (13,342 ರುಪಾಯಿ)
  • ಕುವೇತ್: 42.77 ಕುವೇತಿ ದಿನಾರ್ (12,955 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 250 ರೂ
  • ಚೆನ್ನೈ: 255 ರೂ
  • ಮುಂಬೈ: 250 ರೂ
  • ದೆಹಲಿ: 250 ರೂ
  • ಕೋಲ್ಕತಾ: 250 ರೂ
  • ಕೇರಳ: 255 ರೂ
  • ಅಹ್ಮದಾಬಾದ್: 250 ರೂ
  • ಜೈಪುರ್: 250 ರೂ
  • ಲಕ್ನೋ: 250 ರೂ
  • ಭುವನೇಶ್ವರ್: 255 ರೂ
  • ಪುಣೆ: 250

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಪ್ರೀ ರಿಲೀಸ್​​ನಲ್ಲಿ ಕಾರ್ಯಕ್ರಮದಲ್ಲಿ ಎಐ ಬಳಕೆ: ನಟನ ಬುದ್ಧಿವಂತಿಕೆ ಮೆಚ್ಚಿದ ಅಭಿಮಾನಿಗಳು

ಪ್ಯಾನ್ ಇಂಡಿಯಾ (Pan India) ಸಿನಿಮಾಗಳ ಹವಾ ಜೋರಾದ ಮೇಲೆ ಸ್ಟಾರ್ ನಟರು ಬೇರೆ ಬೇರೆ ರಾಜ್ಯಗಳಲ್ಲಿ ಸಿನಿಮಾ ಪ್ರಚಾರ ಮಾಡುವುದು ಕಡ್ಡಾಯ ಆಗಿಬಿಟ್ಟಿದೆ. ಆದರೆ 22 ಅಧಿಕೃತ ಭಾಷೆಗಳಿರುವ ಭಾರತದಲ್ಲಿ ಎಲ್ಲ ಪ್ರೇಕ್ಷಕರನ್ನು ಅವರ ಸ್ವಂತ ಭಾಷೆಗಳ ಮೂಲಕ ತಲುಪುವುದು ಬಹಳ ಕಷ್ಟ. ಎಷ್ಟೋ ಮಂದಿ ಸ್ಟಾರ್ ನಟರು, ತಮ್ಮ ಭಾಷೆಯ ಮಿತಿಯಿಂದಾಗಿಯೇ ಬೇರೆ ರಾಜ್ಯಗಳಿಗೆ ಪ್ರಚಾರಕ್ಕೆ ಹೋಗುವುದಿಲ್ಲ. ಆದರೆ ಇದೀಗ ಯುವ ನಟನೊಬ್ಬ ಬುದ್ಧಿವಂತಿಕೆ ತೋರಿಸಿದ್ದು, ಎಐ ಬಳಸಿ ಬೇರೆ ರಾಜ್ಯದಲ್ಲಿ ಪ್ರಚಾರ ಮಾಡಿರುವುದು ಮಾತ್ರವಲ್ಲ, ಸಖತ್ ಜನ ಸ್ಪಂದನೆಯನ್ನೂ ಸಹ ಪಡೆದಿದ್ದಾರೆ.

ತಮಿಳಿನ ಸ್ಟಾರ್ ಯುವನಟ ಪ್ರದೀಪ್ ರಂಗನಾಥನ್ ನಟನೆಯ ‘ಎಲ್​​ಐಕೆ’ ಸಿನಿಮಾ ಇದೇ ವಾರ ಬಿಡುಗಡೆ ಆಗುತ್ತಿದ್ದು, ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮವನ್ನು ಹೈದರಾಬಾದ್​​ನಲ್ಲಿ ಆಯೋಜಿಸಲಾಗಿತ್ತು. ಪ್ರದೀಪ್, ಪ್ರತಿಬಾರಿಯೂ ತಮ್ಮ ಸಿನಿಮಾ ಬಿಡುಗಡೆ ಆಗುವಾಗ ತೆಲುಗು ರಾಜ್ಯಗಳಿಗೆ ಬಂದು ಪ್ರಚಾರ ಮಾಡುತ್ತಾರೆ. ಆದರೆ ತೆಲುಗು ಸರಿಯಾಗಿ ಬರದ ಕಾರಣ ಈಹಿಂದೆ ಕೆಲವು ಸಮಸ್ಯೆಗಳನ್ನು ಅವರು ಎದುರಿಸಿದ್ದರು.

ಇದೇ ಕಾರಣಕ್ಕೆ ಈ ಬಾರಿ ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿ ಅವರು ಪ್ರೀ ರಿಲೀಸ್ ಭಾಷಣದ ವೇಳೆ ಎಐ ಮೊರೆ ಹೋಗಿದ್ದಾರೆ. ‘ಕಳೆದ ಬಾರಿ ನಾನು ತೆಲುಗಿನಲ್ಲಿ ಮಾತನಾಡಿದಾಗ ಸಾಕಷ್ಟು ಸಮಸ್ಯೆ ಆಗಿತ್ತು. ನನಗೆ ತೆಲುಗು ಸರಿಯಾಗಿ ಬರದು, ಹಾಗಾಗಿ ನಾನು ತಮಿಳಿನಲ್ಲಿ ಹೇಳಿದ್ದನ್ನು ಎಐ ತೆಲುಗಿನಲ್ಲಿ ಹೇಳಲಿದೆ ಎಂದು ಹೇಳಿ. ತಮ್ಮ ಮೊಬೈಲ್ ನ ಎಐ ಆಪ್ ಬಳಸಿ ಪ್ರದೀಪ್ ರಂಗನಾಥ್ ಭಾಷಣ ಮಾಡಿದರು.

ಇದನ್ನೂ ಓದಿ:ಎಐನಿಂದ ಮಾಡಲ್ಪಟ್ಟ ರಾಮಾಯಣದ ಬಿಟಿಎಸ್

ಪ್ರದೀಪ್ ರಂಗನಾಥನ್ ಅವರು ‘ಎಲ್​​ಐಕೆ’ ಹೆಸರಿನ ತಮಿಳು ಸಿನಿಮಾನಲ್ಲಿ ನಟಿಸಿದ್ದಾರೆ. ಇದು 2040ರ ಕತೆಯನ್ನು ಒಳಗೊಂಡಿದೆ. ಪ್ರಪಂಚ ಬಹಳ ಅಡ್ವಾನ್ಸ್ ಆಗಿಬಿಟ್ಟಿದೆ, ಮಾನವ ಸಂಬಂಧಗಳು ಬಹಳ ತೆಳುವಾಗಿವೆ. ಅಂಥಹಾ ಸಂದರ್ಭದಲ್ಲಿ ಯುವಕನೊಬ್ಬ ಪ್ರೀತಿಯನ್ನು ಅರಸಿ ಹೋಗುವ ಕತೆಯನ್ನು ಈ ಸಿನಿಮಾ ಒಳಗೊಂಡಿದೆ. ಸಿನಿಮಾನಲ್ಲಿ ಕೃತಿ ಶೆಟ್ಟಿ ನಾಯಕಿ, ಎಸ್​​ಜೆ ಸೂರ್ಯ ವಿಲನ್.

ಪ್ರದೀಪ್ ರಂಗನಾಥನ್ ಭಿನ್ನ ರೀತಿಯ ನಟ. ಈ ವರೆಗೆ ಮೂರು ಸಿನಿಮಾಗಳಲ್ಲಿ ಪ್ರದೀಪ್ ನಟಿಸಿದ್ದು, ಮೂರೂ ಸಿನಿಮಾಗಳು ಭಾರಿ ದೊಡ್ಡ ಹಿಟ್ ಆಗಿವೆ. ಪ್ರದೀಪ್ ನಟಿಸಿರುವ ಮೂರೂ ಸಿನಿಮಾಗಳು ಬಾಕ್ಸ್ ಆಫೀಸ್​​ನಲ್ಲಿ ನೂರು ಕೋಟಿಗೂ ಹೆಚ್ಚು ಗಳಿಕೆ ಮಾಡಿವೆ. ಇದೀಗ ನಾಲ್ಕನೇ ಸಿನಿಮಾ ‘ಎಲ್​​ಐಕೆ’ (ಲವ್ ಇನ್​ಶ್ಯುರೆನ್ಸ್ ಕಂಪೆನಿ)ಯಲ್ಲಿ ನಟಿಸುತ್ತಿದ್ದಾರೆ. ಸಿನಿಮಾ ಇದೇ ಶುಕ್ರವಾರ ಬಿಡುಗಡೆ ಆಗಲಿದೆ. ಸಿನಿಮಾ ನಿರ್ದೇಶನ ಮಾಡಿರುವುದು ನಯನತಾರಾ ಪತಿ ವಿಘ್ನೇಶ್ ಶಿವನ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಕೋಟ್ಯಾಂತರ ರೂ. ಮೌಲ್ಯದ ಕಾಮಗಾರಿಗಳನ್ನು ನಿರ್ವಹಿಸುತ್ತಿದ್ದ ಕಂಟ್ರಾಕ್ಟರ್ ಅನುಮಾನಾಸ್ಪದ ಸಾವು!

ಮಂಡ್ಯ, ಏಪ್ರಿಲ್ 07: ಜಿಲ್ಲೆಯಲ್ಲಿ ಪ್ರಥಮ ದರ್ಜೆ ಕಂಟ್ರಾಕ್ಟರ್ ಒಬ್ಬರು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಆತಂಕ ಮೂಡಿಸಿದೆ. ಶ್ರೀರಂಗಪಟ್ಟಣ ತಾಲೂಕಿನ ಹುಣಸನ ಹಳ್ಳಿಯ ನಿವಾಸಿ ಪವನ್ (27) ಎಂಬ ಯುವಕನ ಶವ ಕಾವೇರಿ ನದಿಯಲ್ಲಿ (Cauvery River) ಪತ್ತೆಯಾಗಿದ್ದು, ಈ ಪ್ರಕರಣ ಹಲವು ಪ್ರಶ್ನೆಗಳನ್ನು ಹುಟ್ಟಿಸಿದೆ.

ಮನೆಗೆ ಬರುವುದಿಲ್ಲ ಎಂದು ಹೇಳಿ ಹೋದವನು ಶವವಾಗಿ ಪತ್ತೆ!

ಪವನ್ ಕೋಟ್ಯಾಂತರ ರೂಪಾಯಿ ಮೌಲ್ಯದ ಕಾಮಗಾರಿಗಳನ್ನು ನಿರ್ವಹಿಸುತ್ತಿದ್ದ ಕಂಟ್ರಾಕ್ಟರ್ ಆಗಿದ್ದು, ನಾಲ್ಕು ದಿನಗಳ ಹಿಂದೆ ಕೆಲಸ ಇದೆ, ಇಂದು ಮನೆಗೆ ಬರುವುದಿಲ್ಲ ಎಂದು ಕುಟುಂಬಕ್ಕೆ ತಿಳಿಸಿ ಹೊರಟಿದ್ದ. ಆದರೆ ನಂತರ ಆತ ಮನೆಗೆ ವಾಪಸ್ ಆಗಿಲ್ಲ. ಅವನ ಮೊಬೈಲ್ ಸ್ವಿಚ್ ಆಫ್ ಆಗಿರುವುದರ ಜೊತೆಗೆ ಸಾಮಾಜಿಕ ಜಾಲತಾಣ ಖಾತೆಗಳೂ ಡಿ-ಆಕ್ಟಿವ್ ಆಗಿದ್ದವು. ಇದರಿಂದ ಆತಂಕಗೊಂಡ ಕುಟುಂಬಸ್ಥರು ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಕೊಲೆಯ ಶಂಕೆ ವ್ಯಕ್ತಪಡಿಸಿದ ಕುಟುಂಬಸ್ಥರು

ಇದೀಗ ನಿನ್ನೆ ಶ್ರೀರಂಗಪಟ್ಟಣ ತಾಲೂಕಿನ ಕಾವೇರಿ ನದಿಯಲ್ಲಿ ಪವನ್ ಅವರ ಮೃತದೇಹ ಪತ್ತೆಯಾಗಿದ್ದು, ದೇಹದ ಮೇಲೆ ಗಾಯಗಳಿರುವುದು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಕುಟುಂಬಸ್ಥರು ಮತ್ತು ಆಪ್ತರು ಇದು ಕೊಲೆ ಆಗಿರಬಹುದೆಂದು ಶಂಕೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ ಪಾಕಿಸ್ತಾನದ ಕೋರ್ಟ್, ಕಚೇರಿಗಳಿಗೇ ಬಾಂಬ್ ಬೆದರಿಕೆ ಸಂದೇಶ ಕಳುಹಿಸಿದ್ದ ಮೈಸೂರಿನ ‘ಹುಸಿ ಬಾಂಬ್’ ಕಿಂಗ್‌ಪಿನ್!

ಈ ಘಟನೆ ಸ್ಥಳೀಯರಲ್ಲಿ ಭೀತಿ ಹುಟ್ಟಿಸಿದ್ದು, ಪವನ್ ಸಾವಿನ ಸತ್ಯಾಸತ್ಯತೆ ಕುರಿತು ಸಮಗ್ರ ತನಿಖೆ ನಡೆಸುವಂತೆ ಕುಟುಂಬಸ್ಥರು ಆಗ್ರಹಿಸಿದ್ದಾರೆ. ಪ್ರಕರಣ ಸಂಬಂಧ ಶ್ರೀರಂಗಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Hanuman Puja: ಮಂಗಳವಾರ ಹನುಮಂತನ ಪೂಜೆ ಏಕೆ ಶ್ರೇಷ್ಠ? ಉಪವಾಸದ ವೇಳೆ ಈ ತಪ್ಪು ಮಾಡಲೇಬೇಡಿ!

ಹಿಂದೂ ಧರ್ಮದ ಸಂಪ್ರದಾಯದಲ್ಲಿ ವಾರದ ಏಳೂ ದಿನಗಳು ಒಂದೊಂದು ದೇವತೆಗೆ ಮೀಸಲಾಗಿವೆ. ಅದರಂತೆ, ಮಂಗಳವಾರವನ್ನು ಶ್ರೀರಾಮನ ಪರಮ ಭಕ್ತನಾದ ಹನುಮಂತನಿಗೆ ಅಥವಾ ಬಜರಂಗಬಲಿಗೆ ಸಮರ್ಪಿಸಲಾಗಿದೆ. ಈ ದಿನದಂದು ಆಂಜನೇಯನನ್ನು ವಿಶೇಷ ವಿಧಿವಿಧಾನಗಳೊಂದಿಗೆ ಪೂಜಿಸುವುದು ಮತ್ತು ಉಪವಾಸ ಮಾಡುವುದು ಬಹಳ ಹಿಂದಿನಿಂದಲೂ ನಡೆದುಬಂದಿರುವ ಪದ್ಧತಿಯಾಗಿದೆ. ಹೀಗೆ ಮಾಡುವುದರಿಂದ ಹನುಮಂತನು ಪ್ರಸನ್ನನಾಗಿ ಭಕ್ತರ ಜೀವನದಲ್ಲಿರುವ ಎಲ್ಲಾ ಅಡೆತಡೆಗಳನ್ನು ನಿವಾರಿಸುತ್ತಾನೆ ಮತ್ತು ಸಕಲ ಭಯಗಳನ್ನು ದೂರಮಾಡಿ ಆಶೀರ್ವದಿಸುತ್ತಾನೆ ಎಂಬ ಬಲವಾದ ನಂಬಿಕೆಯಿದೆ.

ಪೌರಾಣಿಕ ಹಿನ್ನೆಲೆಯನ್ನು ಗಮನಿಸಿದರೆ, ಹನುಮಂತನು ಜನಿಸಿದ್ದು ಮಂಗಳವಾರದಂದು ಎಂದು ಹೇಳಲಾಗುತ್ತದೆ. ಇದೇ ಕಾರಣಕ್ಕಾಗಿ ಈ ದಿನವನ್ನು ಅವನ ಪೂಜೆಗೆ ಅತ್ಯಂತ ಶ್ರೇಷ್ಠವೆಂದು ಪರಿಗಣಿಸಲಾಗಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಮಂಗಳ ಗ್ರಹವು ಹನುಮಂತನಿಗೆ ಸಂಬಂಧಿಸಿದೆ, ಆದ್ದರಿಂದ ಈ ದಿನ ಉಪವಾಸ ಆಚರಿಸುವುದರಿಂದ ಜಾತಕದಲ್ಲಿರುವ ಮಂಗಳ ದೋಷಗಳು ನಿವಾರಣೆಯಾಗಿ ಜೀವನದಲ್ಲಿ ಸುಖ ಮತ್ತು ಸಮೃದ್ಧಿ ನೆಲೆಸುತ್ತದೆ. ಭಕ್ತಿಯಿಂದ ಹನುಮಂತನನ್ನು ಸ್ಮರಿಸುವವರ ಸಕಲ ದುಃಖಗಳನ್ನು ಆತನು ನಾಶಪಡಿಸುತ್ತಾನೆ ಎಂದು ಭಕ್ತರು ನಂಬುತ್ತಾರೆ.

ಮಂಗಳವಾರದ ಉಪವಾಸವನ್ನು ಆಚರಿಸುವಾಗ ಕೆಲವು ಕಟ್ಟುನಿಟ್ಟಾದ ನಿಯಮಗಳನ್ನು ಪಾಲಿಸುವುದು ಅತ್ಯಗತ್ಯ. ಮೊದಲನೆಯದಾಗಿ, ಈ ದಿನದ ಪೂಜೆಯಲ್ಲಿ ಶುದ್ಧತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಮತ್ತು ಪ್ರಾರ್ಥನೆಯ ಸಮಯದಲ್ಲಿ ಮನಸ್ಸು ಇತ್ತ ಇತ್ತ ಅಲೆಯದಂತೆ ಏಕಾಗ್ರತೆಯನ್ನು ಕಾಯ್ದುಕೊಳ್ಳಬೇಕು. ಉಪವಾಸದ ಅವಧಿಯಲ್ಲಿ ಉಪ್ಪನ್ನು ಸೇವಿಸುವುದನ್ನು ಸಂಪೂರ್ಣವಾಗಿ ವರ್ಜಿಸಬೇಕು. ಅಲ್ಲದೆ, ನೀವು ಬೇರೆಯವರಿಗೆ ಸಿಹಿತಿಂಡಿಗಳನ್ನು ದಾನ ಮಾಡುತ್ತಿದ್ದರೆ, ಅದನ್ನು ಯಾವುದೇ ಕಾರಣಕ್ಕೂ ನೀವು ತಿನ್ನಬಾರದು. ಇದು ಉಪವಾಸದ ಪಾವಿತ್ರ್ಯತೆಯನ್ನು ಕಾಪಾಡುತ್ತದೆ.

ಇದನ್ನೂ ಓದಿ: ಮುಯ್ಯಿ ರೂಪದಲ್ಲಿ ಕೊಡುವ ಹಣಕ್ಕೆ 1ರೂ. ಸೇರಿಸಿ ಕೊಡಬೇಕು ಯಾಕೆ ಗೊತ್ತಾ?

ಕೊನೆಯದಾಗಿ, ಪೂಜೆಯ ಸಮಯದಲ್ಲಿ ಧರಿಸುವ ಬಟ್ಟೆಗಳ ಬಗ್ಗೆಯೂ ಜಾಗ್ರತೆ ಇರಲಿ. ಮಂಗಳವಾರದಂದು ಹನುಮಂತನ ಆರಾಧನೆ ಮಾಡುವಾಗ ಕಪ್ಪು ಅಥವಾ ಬಿಳಿ ಬಟ್ಟೆಗಳನ್ನು ಧರಿಸುವುದು ಸೂಕ್ತವಲ್ಲ; ಬದಲಾಗಿ ಹನುಮಂತನಿಗೆ ಪ್ರಿಯವಾದ ಕೆಂಪು ಬಣ್ಣದ ಬಟ್ಟೆಗಳನ್ನು ಧರಿಸುವುದು ಹೆಚ್ಚು ಫಲಪ್ರದ. ಉಪವಾಸದ ಅವಧಿಯಲ್ಲಿ ದಿನಕ್ಕೆ ಒಮ್ಮೆ ಮಾತ್ರ ಸಾತ್ತ್ವಿಕ ಆಹಾರವನ್ನು ಸೇವಿಸಬೇಕು. ಈ ಎಲ್ಲಾ ನಿಯಮಗಳನ್ನು ಶ್ರದ್ಧೆಯಿಂದ ಪಾಲಿಸುವುದರಿಂದ ಬಜರಂಗಬಲಿಯ ಪೂರ್ಣ ಅನುಗ್ರಹವನ್ನು ಪಡೆಯಲು ಸಾಧ್ಯವಾಗುತ್ತದೆ ಎಂದು ನಂಬಲಾಗಿದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಇರಾನ್​ನ ಸರ್ವೋಚ್ಚ ನಾಯಕ ಮೊಜ್ತಬಾಗೆ ಪ್ರಜ್ಞೆ ಇಲ್ಲ, ಯಾವ ನಿರ್ಧಾರಗಳನ್ನು ತೆಗೆದುಕೊಳ್ಳುವ ಸ್ಥಿತಿಯಲ್ಲಿಲ್ಲ

ಟೆಹ್ರಾನ್, ಏಪ್ರಿಲ್ 07: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಉದ್ವಿಗ್ನತೆಯ ನಡುವೆ, ಇರಾನ್‌(Iran)ನ ಹೊಸ ಸರ್ವೋಚ್ಚ ನಾಯಕನ ಬಗ್ಗೆ ಮಾಹಿತಿಯೊಂದು ಹೊರಬಿದ್ದಿದೆ. ಮೊಜ್ತಬಾ ಖಮೇನಿಗೆ ಪ್ರಜ್ಞೆ ಇಲ್ಲ, ಯಾವ ನಿರ್ಧಾರಗಳನ್ನೂ ತೆಗೆದುಕೊಳ್ಳುವ ಸ್ಥಿತಿಯಲ್ಲಿಲ್ಲ ಎನ್ನುವ ಮಾಹಿತಿ ಲಭ್ಯವಾಗಿದೆ. ಅಮೆರಿಕ ಮತ್ತು ಇಸ್ರೇಲಿ ಗುಪ್ತಚರ ಮೂಲಗಳನ್ನು ಆಧರಿಸಿದ ವರದಿಗಳ ಪ್ರಕಾರ, ಮೊಜ್ತಬಾ ಖಮೇನಿ ಅವರು ಕೋಮ್ ನಗರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಜ್ಞಾಹೀನರಾಗಿದ್ದಾರೆ. ಆದಾಗ್ಯೂ, ಅವರ ಸ್ಥಿತಿಯ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ. ಯುದ್ಧದ ಮೊದಲ ದಿನದಂದು ಅವರ ತಂದೆ, ಅಲಿ ಖಮೇನಿ, ತಾಯಿ, ಹೆಂಡತಿ ಮತ್ತು ಮಗನನ್ನು ಕೊಂದ ಅದೇ ವೈಮಾನಿಕ ದಾಳಿಯಲ್ಲಿ ಮೊಜ್ತಬಾ ಗಾಯಗೊಂಡಿದ್ದಾರೆ ಎಂದು ವರದಿ ಹೇಳುತ್ತದೆ.

ಗುಪ್ತಚರ ಸಂಸ್ಥೆಗಳು ಕೋಮ್ ನಗರದಲ್ಲಿ ಕೆಲವು ಅನುಮಾನಾಸ್ಪದ ಚಟುವಟಿಕೆಗಳನ್ನು ಗಮನಿಸಿವೆ.ಕೋಮ್‌ನಲ್ಲಿ ಬೃಹತ್ ಸಮಾಧಿಯ ನಿರ್ಮಾಣ ಕಾರ್ಯ ನಡೆಯುತ್ತಿದೆ.ಮಾಜಿ ಸುಪ್ರೀಂ ನಾಯಕ ಅಲಿ ಖಮೇನಿ ಮತ್ತು ಇತರ ಕುಟುಂಬ ಸದಸ್ಯರನ್ನು ಅಲ್ಲಿ ಸಮಾಧಿ ಮಾಡಲು ಸಿದ್ಧತೆಗಳು ನಡೆಯುತ್ತಿರಬಹುದು ಎಂದು ಶಂಕಿಸಲಾಗಿದೆ.

ಸಾರ್ವಜನಿಕ ಅಂತ್ಯಕ್ರಿಯೆಯ ಸಮಯದಲ್ಲಿ ನಾಗರಿಕರು ಪ್ರತಿಭಟಿಸಬಹುದು ಅಥವಾ ಸಮಾಧಿಗಳಿಗೆ ಹಾನಿ ಮಾಡಬಹುದು ಎಂದು ಇರಾನಿನ ಅಧಿಕಾರಿಗಳು ಭಯಪಡುತ್ತಾರೆ, ಆದ್ದರಿಂದ ಇದನ್ನು ಅತ್ಯಂತ ಗೌಪ್ಯವಾಗಿಡಲಾಗುತ್ತಿದೆ.ಮಾರ್ಚ್ ಆರಂಭದಲ್ಲಿ ಇರಾನ್‌ನ ಸರ್ವೋಚ್ಚ ನಾಯಕನಾಗಿ ಆಯ್ಕೆಯಾದಾಗಿನಿಂದ ಮೊಜ್ತಾಬಾ ಖಮೇನಿ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ , ಇದು ಅವರ ಆರೋಗ್ಯದ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ಮತ್ತಷ್ಟು ಓದಿ: ಅಮೆರಿಕದ ಕದನವಿರಾಮದ ಪ್ರಸ್ತಾಪಕ್ಕೆ ಒಪ್ಪದ ಇರಾನ್ ಹಾಕಿದ ಷರತ್ತುಗಳಿವು

ಇತ್ತೀಚೆಗೆ ಅವರು ಯುದ್ಧ ಕೋಣೆಯಲ್ಲಿ ಇಸ್ರೇಲ್‌ನ ನಕ್ಷೆಯನ್ನು ನೋಡುತ್ತಿರುವುದನ್ನು ತೋರಿಸುವ ವೀಡಿಯೊ ಬಿಡುಗಡೆಯಾಯಿತು. ಆದರೆ ತಜ್ಞರು ಇದನ್ನು ಎಐ ವಿಡಿಯೋ ಎಂದು ಕರೆದಿದ್ದಾರೆ. ಇರಾನ್‌ನಲ್ಲೂ ಉದ್ವಿಗ್ನತೆ ಹೆಚ್ಚುತ್ತಿರುವಂತೆ ಕಾಣುತ್ತಿದೆ.

ಕೆಲವು ವಿರೋಧ ಗುಂಪುಗಳು ಮತ್ತು ಭದ್ರತಾ ಪಡೆಗಳ ನಡುವೆ ಘರ್ಷಣೆಗಳು ಭುಗಿಲೆದ್ದಿವೆ.ಇದು ದೇಶದೊಳಗೆ ಅಸ್ಥಿರತೆಯನ್ನು ಇನ್ನಷ್ಟು ಹೆಚ್ಚಿಸುವ ಸಾಧ್ಯತೆಯಿದೆ. ನಡೆಯುತ್ತಿರುವ ಸಂಘರ್ಷದ ಮಧ್ಯೆ ಇರಾನ್‌ನ ಉನ್ನತ ನಾಯಕತ್ವದ ಸುತ್ತಲಿನ ಪ್ರಶ್ನೆಗಳು ದೇಶದ ಆಂತರಿಕ ರಾಜಕೀಯದ ಮೇಲೆ ಮಾತ್ರವಲ್ಲದೆ ಇಡೀ ಮಧ್ಯಪ್ರಾಚ್ಯದ ಸ್ಥಿರತೆಯ ಮೇಲೂ ಪರಿಣಾಮ ಬೀರಬಹುದು.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Anthills Pooja: ಹುತ್ತಗಳಿಗೆ ಪೂಜೆ ಮಾಡುವ ಮುನ್ನ ಈ ವಿಷ್ಯ ತಿಳಿದುಕೊಳ್ಳಿ

ಹಿಂದೂ ಸನಾತನ ಸಂಸ್ಕೃತಿಯ ಒಂದು ವಿಶಿಷ್ಟ ಆಚರಣೆಯಾದ ಹುತ್ತದ ಪೂಜೆಯ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ನೀಡಿರುವ ಮಾಹಿತಿ ಇಲ್ಲಿದೆ. ಹಿಂದೂ ಪರಂಪರೆಯಲ್ಲಿ ಕಲ್ಲು, ಮಣ್ಣು, ವಿಗ್ರಹ, ಮರ, ಗಿಡ, ನೀರು ಎಲ್ಲವನ್ನೂ ಪವಿತ್ರ ಭಾವನೆಯಿಂದ ಭಗವಂತನ ಸ್ವರೂಪವೆಂದು ಆರಾಧಿಸಲಾಗುತ್ತದೆ. ಈ ಆಚರಣೆಗಳಲ್ಲಿ ಹುತ್ತಕ್ಕೆ ಪೂಜೆ ಮಾಡುವುದು, ನಮಸ್ಕಾರ ಮಾಡುವುದು, ಹಾಲು ಎರೆದು ನೈವೇದ್ಯ ಅರ್ಪಿಸುವುದು ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಿರುವ ಪದ್ಧತಿಯಾಗಿದೆ. ನಮ್ಮ ಶೋಡಶೋಪ ಸಂಸ್ಕಾರಗಳಲ್ಲಿ ಹುತ್ತಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗುತ್ತದೆ.

ಯಾವ ಹುತ್ತ ಶ್ರೇಷ್ಠ ಮತ್ತು ಯಾವ ಹುತ್ತಕ್ಕೆ ಪೂಜೆ ಮಾಡುವುದರಿಂದ ಹೆಚ್ಚು ಫಲ ದೊರೆಯುತ್ತದೆ ಎಂಬ ಪ್ರಶ್ನೆಗೆ, ಶಾಸ್ತ್ರಗಳಲ್ಲಿ ವಿವರಣೆ ನೀಡಲಾಗಿದೆ. ಹುತ್ತಗಳಲ್ಲಿ ಎರಡು ವಿಧಗಳಿವೆ: ದೊಡ್ಡ ಕಿಂಡಿಗಳನ್ನು, ಅಂದರೆ ಅಗಲವಾದ ತೂತುಗಳನ್ನು ಹೊಂದಿರುವ ಹುತ್ತಗಳನ್ನು ಹೆಣ್ಣು ಹುತ್ತವೆಂದು ಕರೆಯಲಾಗುತ್ತದೆ. ಗೋಪುರದ ಆಕಾರದಲ್ಲಿ ನಿರಂತರವಾಗಿ ಬೆಳೆಯುವ ಹುತ್ತಗಳನ್ನು ಗಂಡು ಹುತ್ತವೆಂದು ಪರಿಗಣಿಸಲಾಗುತ್ತದೆ. ವಾಲ್ಮೀಕಿ ಮಹರ್ಷಿಗಳು ಹುತ್ತದಲ್ಲಿ ಅನೇಕ ವರ್ಷಗಳ ಕಾಲ ತಪಸ್ಸು ಮಾಡಿದ್ದರಿಂದಲೇ ಅವರಿಗೆ ವಾಲ್ಮೀಕಿ ಎಂಬ ಹೆಸರು ಬಂತು ಎಂಬ ನಂಬಿಕೆಯಿದೆ.

ಹುತ್ತದ ಪೂಜೆಯು ಅನೇಕ ಸಂಕಲ್ಪಗಳು ಮತ್ತು ದೋಷಗಳ ನಿವಾರಣೆಗಾಗಿ ಆಚರಿಸಲಾಗುತ್ತದೆ. ನಾಗದೋಷ, ಸಂತಾನ ಪ್ರಾಪ್ತಿ, ಕಣ್ಣಿನ ತೊಂದರೆಗಳು, ಚರ್ಮದ ಸಮಸ್ಯೆಗಳು, ಕುಜದೋಷ ನಿವಾರಣೆ, ಹಾಗೂ ಸುಖ, ಶಾಂತಿ, ನೆಮ್ಮದಿಗಾಗಿ ಹುತ್ತಗಳಿಗೆ ಪೂಜೆ ಸಲ್ಲಿಸಲಾಗುತ್ತದೆ. ನಮ್ಮ ಪೂರ್ವಿಕರು ಹುತ್ತಗಳನ್ನು ಶಕ್ತಿ ಕೇಂದ್ರಗಳು ಎಂದು ಗುರುತಿಸಿದ್ದಾರೆ. ಕಲಶದಲ್ಲಿ ಸರ್ವದೇವತೆಗಳನ್ನು ಆವಾಹನೆ ಮಾಡುವಂತೆ, ಹುತ್ತಗಳಲ್ಲಿ ಶಕ್ತಿ, ದೇವಿಯ ಕೃಪೆ, ಅಮ್ಮನ ಆವಾಹನೆ ಮತ್ತು ತ್ರಿಶಕ್ತಿಗಳ ಸಂಗಮವಿರುತ್ತದೆ ಎಂಬ ದೃಢ ನಂಬಿಕೆಯಿದೆ. ನಾಗದೋಷ ಅಥವಾ ರಾಹು ಗ್ರಹಗಳ ದೋಷವಿದ್ದರೆ, ಈ ಹುತ್ತ ಪೂಜೆಯನ್ನು ಶ್ರದ್ಧೆ, ಭಕ್ತಿ ಮತ್ತು ಭಯದಿಂದ ಆಚರಿಸಬೇಕು.

ಇದನ್ನೂ ಓದಿ: ಮುಯ್ಯಿ ರೂಪದಲ್ಲಿ ಕೊಡುವ ಹಣಕ್ಕೆ 1ರೂ. ಸೇರಿಸಿ ಕೊಡಬೇಕು ಯಾಕೆ ಗೊತ್ತಾ?

ಸಾಮಾನ್ಯವಾಗಿ ಹುತ್ತ ಪೂಜೆಯನ್ನು ನಾಗರ ಪಂಚಮಿ, ಷಷ್ಠಿ, ಸುಬ್ರಹ್ಮಣ್ಯ ಷಷ್ಠಿ, ಮಂಗಳವಾರ, ಶುಕ್ರವಾರ ಮತ್ತು ಸಂಕಷ್ಟಹರ ಚತುರ್ಥಿಗಳಂದು ಮಾಡಲಾಗುತ್ತದೆ. ಇರುವೆಗಳು ನಿರ್ಮಿಸುವ ಸಣ್ಣ ಹುತ್ತಗಳ ಜೊತೆಗೆ, ಗೆದ್ದಲು ಹುತ್ತಗಳೂ ಇರುತ್ತವೆ. ಆದರೆ, ಕೆಲವು ನಿರ್ದಿಷ್ಟ ಸ್ಥಳಗಳಲ್ಲಿನ ಹುತ್ತಗಳು ಅತಿ ಹೆಚ್ಚು ಪವಿತ್ರ ಮತ್ತು ಫಲಪ್ರದ ಎಂದು ಪರಿಗಣಿಸಲಾಗುತ್ತದೆ. ಅರಳಿ ಮರದ ಹತ್ತಿರ ಇರುವ ಹುತ್ತಗಳು ಅತ್ಯಂತ ಪವಿತ್ರವಾದವು. ದೇವಾಲಯಗಳ ಸಮೀಪ, ನವಗ್ರಹಗಳ ಪಕ್ಕ, ಮತ್ತು ನಾಗರ ಕಲ್ಲುಗಳ ಪಕ್ಕದಲ್ಲಿರುವ ಹುತ್ತಗಳು ಶ್ರೇಷ್ಠವೆಂದು ಭಾವಿಸಲಾಗುತ್ತದೆ. ಈ ಸ್ಥಳಗಳಲ್ಲಿ ಸುಬ್ರಹ್ಮಣ್ಯ ಮತ್ತು ಆದಿಶಕ್ತಿಯ ಆವಾಸವಿರುತ್ತದೆ ಎಂಬ ನಂಬಿಕೆಯಿದೆ.

ಕೃಷಿಕರ ನಂಬಿಕೆಯ ಪ್ರಕಾರ, ಹುತ್ತಗಳಿರುವ ಹೊಲಗಳಲ್ಲಿ ನೀರಿನ ಮೂಲ ಇರುತ್ತದೆ. ಹುತ್ತಗಳ ಬಳಿ ಮಹರ್ಷಿಗಳು, ಸಪ್ತ ಚಿರಂಜೀವಿಗಳಾದ ಹನುಮಂತ, ಸಪ್ತ ಋಷಿಗಳು ಸೂಕ್ಷ್ಮ ರೂಪದಲ್ಲಿ ನೆಲೆಸಿರುತ್ತಾರೆ ಎಂಬ ಮಾತಿದೆ. ಹಾಗಾಗಿ, ಭೂಮಿಯ ಮಟ್ಟದಲ್ಲಿರುವ ಮತ್ತು ದೇವಾಲಯಗಳಂತಹ ಪವಿತ್ರ ಕ್ಷೇತ್ರಗಳಲ್ಲಿರುವ ಹುತ್ತಗಳಿಗೆ ಪೂಜೆ ಸಲ್ಲಿಸುವುದರಿಂದ ಹೆಚ್ಚಿನ ಫಲ ದೊರೆಯುತ್ತದೆ. ಬೇರೆಡೆ ಹುತ್ತ ಪೂಜೆ ಮಾಡುವುದರಿಂದ ಫಲ ದೊರೆಯುವುದಿಲ್ಲ ಎಂದಲ್ಲ, ಆದರೆ ಸಮಯ ತೆಗೆದುಕೊಳ್ಳಬಹುದು. ಈ ನಿರ್ದಿಷ್ಟ ಸ್ಥಳಗಳು ಹೆಚ್ಚಿನ ಶಕ್ತಿ ಹೊಂದಿದ ಸ್ಥಳಗಳಾಗಿವೆ ಎಂದು ಗುರೂಜಿ ಸಲಹೆ ನೀಡಿದ್ದಾರೆ.

 

ಡಾ.ಬಸವರಾಜ್ ಗುರೂಜಿ, ವೈದಿಕ ಜ್ಯೋತಿಷಿ (9972848937)

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪರಮಾಣು ಕ್ಷೇತ್ರದಲ್ಲಿ ಭಾರತದ ನಿರ್ಣಾಯಕ ಹೆಜ್ಜೆ, ದೇಶಕ್ಕೆ ಇದು ಹೆಮ್ಮೆಯ ಕ್ಷಣ: ಪ್ರಧಾನಿ ಮೋದಿ

ನವದೆಹಲಿ, ಏಪ್ರಿಲ್ 07: ಇಂದು ಭಾರತವು ಪರಮಾಣು ಕ್ಷೇತ್ರದಲ್ಲಿ ನಿರ್ಣಾಯಕ ಹೆಜ್ಜೆಯನ್ನು ಇಟ್ಟಿದೆ. ತನ್ನ ಪರಮಾಣು ಕಾರ್ಯಕ್ರಮದ ಎರಡನೇ ಹಂತವನ್ನು ಪೂರೈಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ(Narendra Modi) ಹೇಳಿದ್ದಾರೆ. ಕಲ್ಪಾಕಂನಲ್ಲಿರುವ ಭಾರತದ 500 ಮೆಗಾವ್ಯಾಟ್ ಮಾದರಿ ಫಾಸ್ಟ್ ಬ್ರೀಡರ್ ರಿಯಾಕ್ಟರ್ (ಪಿಎಫ್‌ಬಿಆರ್) ಕಾರ್ಯಾರಂಭ ಮಾಡಿದೆ. ಇದು ದೇಶದ ನಾಗರಿಕ ಪರಮಾಣು ಕಾರ್ಯಕ್ರಮದ ಎರಡನೇ ಹಂತವನ್ನು ಮುನ್ನಡೆಸುವಲ್ಲಿ ನಿರ್ಣಾಯಕ ಹೆಜ್ಜೆ ಎಂದು ಕರೆದಿದ್ದಾರೆ.

ಇಂದು ಎಕ್ಸ್​​ನಲ್ಲಿ ಪೋಸ್ಟ್ ಮಾಡಿರುವ ಅವರು, ಕಲ್ಪಾಕಂನಲ್ಲಿರುವ ಸ್ಥಳೀಯವಾಗಿ ವಿನ್ಯಾಸಗೊಳಿಸಲಾದ ಮತ್ತು ನಿರ್ಮಿಸಲಾದ ಮೂಲಮಾದರಿ ಫಾಸ್ಟ್ ಬ್ರೀಡರ್ ರಿಯಾಕ್ಟರ್ ನಿರ್ಣಾಯಕ ಹಂತವನ್ನು ತಲುಪಿದೆ ಎಂದು ಬರೆದಿದ್ದಾರೆ. ಈ ಮುಂದುವರಿದ ರಿಯಾಕ್ಟರ್, ತಾನು ಬಳಸುವುದಕ್ಕಿಂತ ಹೆಚ್ಚಿನ ಇಂಧನವನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ, ಇದು ನಮ್ಮ ವೈಜ್ಞಾನಿಕ ಸಾಮರ್ಥ್ಯದ ಆಳ ಮತ್ತು ನಮ್ಮ ಎಂಜಿನಿಯರಿಂಗ್ ಉದ್ಯಮದ ಬಲವನ್ನು ಪ್ರತಿಬಿಂಬಿಸುತ್ತದೆ ಎಂದರು.

ಪ್ರೋಗ್ರಾಂನ   ಮೂರನೇ ಹಂತದಲ್ಲಿ ನಮ್ಮ ವಿಶಾಲವಾದ ಥೋರಿಯಂ ನಿಕ್ಷೇಪಗಳನ್ನು ಬಳಸಿಕೊಳ್ಳುವ ಕಡೆಗೆ ಇದು ನಿರ್ಣಾಯಕ ಹೆಜ್ಜೆಯಾಗಿದೆ. ಭಾರತಕ್ಕೆ ಹೆಮ್ಮೆಯ ಕ್ಷಣ. ನಮ್ಮ ಅಭಿನಂದನೆಗಳು ಎಂದು ಪ್ರಧಾನಿ ಮೋದಿ ಬರೆದಿದ್ದಾರೆ.
ಕಲ್ಪಾಕಂನಲ್ಲಿರುವ ಮೂಲಮಾದರಿ ಫಾಸ್ಟ್ ಬ್ರೀಡರ್ ರಿಯಾಕ್ಟರ್ ಕೇವಲ ಒಂದು ವೈಜ್ಞಾನಿಕ ಮೈಲಿಗಲ್ಲು ಅಲ್ಲ. ಇದು ಕೇವಲ 2 ನೇ ಹಂತ. ಹಂತ 3ರಲ್ಲಿ ನಮ್ಮ ಥೋರಿಯಂ ನಿಕ್ಷೇಪಗಳನ್ನು ಅನ್ಲಾಕ್ ಮಾಡುತ್ತದೆ, ಇದು ವಿಶ್ವದಲ್ಲೇ ಅತಿ ದೊಡ್ಡದು.

ಮತ್ತಷ್ಟು ಓದಿ: ಕಾಂಗ್ರೆಸ್​​ಗೆ ಕುಟುಂಬ ಮೊದಲು, ನಮಗೆ ದೇಶ ಮೊದಲು; ಅಸ್ಸಾಂನಲ್ಲಿ ಪ್ರಧಾನಿ ಮೋದಿ ವಾಗ್ದಾಳಿ

ಈ ರಿಯಾಕ್ಟರ್ ಯುರೇನಿಯಂ ಬಳಸಿ ವಿದ್ಯುತ್ ಉತ್ಪಾದಿಸುತ್ತದೆ ಮತ್ತು ಪ್ಲುಟೋನಿಯಂ ಅನ್ನು ಸಹ ಉತ್ಪಾದಿಸುತ್ತದೆ. ಈ ಪ್ಲುಟೋನಿಯಂ ಅನ್ನು ಭವಿಷ್ಯದಲ್ಲಿ ಥೋರಿಯಂ ಅನ್ನು ಇಂಧನವಾಗಿ ಪರಿವರ್ತಿಸಲು ಬಳಸಲಾಗುತ್ತದೆ. ನಾವು ಮೂರನೇ ಹಂತವನ್ನು (ಥೋರಿಯಂ ಆಧಾರಿತ ರಿಯಾಕ್ಟರ್) ತಲುಪಿದ ನಂತರ, ಭಾರತವು ಮುಂದಿನ 250-300 ವರ್ಷಗಳವರೆಗೆ ಬೇರೆ ಯಾವುದೇ ದೇಶದಿಂದ ವಿದ್ಯುತ್‌ಗಾಗಿ ಯಾರನ್ನೂ ಕೇಳುವ ಅಗತ್ಯವಿರುವುದಿಲ್ಲ.

PFBR ನಿರ್ಮಾಣ ಕಾರ್ಯವು 2004 ರಲ್ಲಿ ಪ್ರಾರಂಭವಾಯಿತು. ಯೋಜನೆಯು ಹಲವು ವಿಳಂಬಗಳನ್ನು ಕಂಡಿದೆ, ಆರಂಭಿಕ ವೆಚ್ಚದ ಅಂದಾಜು 5,677 ಕೋಟಿ ರೂ.ಗಳು, ಇದು ಸುಮಾರು 7,600 ಕೋಟಿ ರೂ.ಗಳಿಗೆ ಏರಿದೆ. ಪರಮಾಣು ಶಕ್ತಿ ನಿಯಂತ್ರಣ ಮಂಡಳಿ (AERB) ಜುಲೈ 2024 ರಲ್ಲಿ ಮೊದಲ ಇಂಧನ ಲೋಡಿಂಗ್‌ಗೆ ಅನುಮೋದನೆ ನೀಡಿತು. ಅಧಿಕೃತ ಹೇಳಿಕೆಗಳ ಪ್ರಕಾರ, ಕೋರ್ ಲೋಡಿಂಗ್ ಚಟುವಟಿಕೆಗಳು ಮಾರ್ಚ್ 2024 ರಲ್ಲಿ ಪ್ರಾರಂಭವಾದವು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

Source link