ಬೆಂಗಳೂರು, ಏಪ್ರಿಲ್ 7: ಬೆಂಗಳೂರಿನ ಕಾಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೋಮವಾರ ಬೆಳಗಿನ ಜಾವ ವಿಚಿತ್ರ ಕಳವು ಪ್ರಕರಣ ನಡೆದಿದೆ. ಹೆಲ್ಮೆಟ್ ಧರಿಸಿ ಬೈಕ್‌ನಲ್ಲಿ ಬಂದ ಕಳ್ಳನೊಬ್ಬ, ರಸ್ತೆಯಲ್ಲಿನ ಮನೆಗಳ ಗೇಟ್ ಪರಿಶೀಲಿಸಿ, ಲಾಕ್ ಇಲ್ಲದ ಮನೆಯೊಳಗೆ ನುಗ್ಗಿ ಅಡುಗೆ ಅನಿಲ ಸಿಲಿಂಡರ್ ಕದ್ದು ಪರಾರಿಯಾಗಿದ್ದಾನೆ. ಮುಂಜಾನೆ 3 ಗಂಟೆ ಸುಮಾರಿಗೆ ನಡೆದ ಈ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಕಾಡುಗೋಡಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿಕ್ಲಿಕ್ ಮಾಡಿ
ಸೆಲೆಬ್ರಿಟಿಗಳು ಸಾರ್ವಜನಿಕವಾಗಿ ಕಾಣಿಸಿಕೊಂಡಾಗ ಅಭಿಮಾನಿಗಳು ಹೇಗೆ ನಡೆದುಕೊಳ್ಳುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ. ಕೆಲವರು ಸೆಲ್ಫಿ ತೆಗೆದುಕೊಳ್ಳುತ್ತಾರೆ, ಇನ್ನೂ ಕೆಲವರು ತಬ್ಬಿ ಮುತ್ತು ಕೊಡಲು ಬರುತ್ತಾರೆ. ಈಗ ನಟಿಯೊಬ್ಬರಿಗೆ ಹಾಗೆಯೇ ಆಗಿದೆ. ಈ ಸಂದರ್ಭದ ವಿಡಿಯೋ ವೈರಲ್ ಆಗಿದ್ದು, ಇದಕ್ಕೆ ಅಭಿಮಾನಿಗಳು ನಾನಾ ರೀತಿಯಲ್ಲಿ ಕಮೆಂಟ್ ಮಾಡುವುದನ್ನು ನೀವು ಕಾಣಬಹುದು.
ಮಲಯಾಳಂನ ಪಾಲಕ್ಕಾಡ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಮಲಯಾಳಂನ ಸ್ಟಾರ್ ನಾಯಕಿ ಮಂಜು ವಾರಿಯರ್ ಅವರಿಗೆ ಮಹಿಳಾ ಅಭಿಮಾನಿಯೊಬ್ಬರು ಬಲವಂತವಾಗಿ ಮುತ್ತಿಟ್ಟರು. ಇದು ನಡೆದಾಗ ನಾಯಕಿ ಮತ್ತು ಅಲ್ಲಿದ್ದ ಎಲ್ಲರೂ ಆಘಾತಕ್ಕೊಳಗಾದರು. ಈ ಕಾರ್ಯಕ್ರಮದ ನಿರೂಪಕಿಯೂ ಅಭಿಮಾನಿಯನ್ನು ತಡೆಯಲು ಪ್ರಯತ್ನಿಸಿದರು. ನಮ್ಮ ಬಳಿಗೆ ಬಂದಿರುವ ಚಲನಚಿತ್ರ ಸೆಲೆಬ್ರಿಟಿಗಳೊಂದಿಗೆ ಈ ರೀತಿ ವರ್ತಿಸುವುದು ಸರಿಯಲ್ಲ ಎಂದು ಅವರು ಎಚ್ಚರಿಸಿದರು.
ನನಗೆ ಮಂಜು ಅಕ್ಕ ತುಂಬಾ ಇಷ್ಟ.. ಅದಕ್ಕಾಗಿಯೇ ನಾನು ಅವಳಿಗೆ ಮುತ್ತಿಟ್ಟೆ’ ಎಂದು ಅಭಿಮಾನಿ ಉತ್ತರಿಸಿದರು. ಇಷ್ಟೆಲ್ಲಾ ನಡೆದರೂ, ಮಂಜು ವಾರಿಯರ್ ಕೋಪಗೊಳ್ಳಲಿಲ್ಲ. ಇದು ಸಂಭವಿಸಿದ ನಂತರವೂ, ಅವರು ತುಂಬಾ ತಾಳ್ಮೆ ಮತ್ತು ಸಹಿಷ್ಣುತೆಯಿಂದ ನಡೆದುಕೊಂಡರು. ಇತರ ಅಭಿಮಾನಿಗಳೊಂದಿಗೆ ಚಾಟ್ ಮಾಡುತ್ತಿದ್ದರು ಮತ್ತು ಫೋಟೋಗಳು ಮತ್ತು ಸೆಲ್ಫಿಗಳನ್ನು ತೆಗೆದುಕೊಳ್ಳುತ್ತಿದ್ದರು. ಪ್ರಸ್ತುತ, ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಮಂಜು ವಾರಿಯರ್ ವಿಷಯಕ್ಕೆ ಬಂದರೆ ಅವರು ದಕ್ಷಿಣದ ಬಹುಮುಖ ಪ್ರತಿಭೆಗಳಲ್ಲಿ ಒಬ್ಬರು. ಮಂಜು ಕೇವಲ ನಟಿ ಮಾತ್ರವಲ್ಲ. ಅವರು ಡ್ಯಾನ್ಸರ್, ಬರಹಗಾರ್ತಿ, ನಿರ್ಮಾಪಕಿ ಮತ್ತು ಸಾಮಾಜಿಕ ಕಾರ್ಯಕರ್ತೆ ಕೂಡ! ಅವರು ಮಲಯಾಳಂ ಚಿತ್ರರಂಗದಲ್ಲಿ ಸ್ಟಾರ್ ನಟಿ. ರಾಷ್ಟ್ರೀಯ ಪ್ರಶಸ್ತಿಯನ್ನು ಗೆದ್ದ ಮಂಜು, ಮಂಜು ಸಲ್ಲಪಂ ಎಂಬ ಪುಸ್ತಕವನ್ನು ಬರೆಯುವ ಮೂಲಕ ತಾನು ಬರಹಗಾರ್ತಿಯೂ ಹೌದು ಎಂದು ಸಾಬೀತುಪಡಿಸಿದ್ದಾರೆ. ಪ್ರಸ್ತುತ, ಅವರ ಕೈಯಲ್ಲಿ ಹಲವಾರು ಚಿತ್ರಗಳು ಇವೆ.
ದಾವಣಗೆರೆ, ಏಪ್ರಿಲ್ 07: ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆ (Byelection) ಏಪ್ರಿಲ್ 9ರಂದು ನಡೆಯಲಿರುವ ಹಿನ್ನೆಲೆಯಲ್ಲಿ ರಾಜಕೀಯ ಚಟುವಟಿಕೆಗಳು ಚುರುಕುಗೊಂಡಿವೆ. ಪ್ರಮುಖ ಪಕ್ಷಗಳು ಮತದಾರರನ್ನು ಸೆಳೆಯಲು ವಿವಿಧ ರೀತಿಯ ಪ್ರಚಾರ ಕೈಗೊಂಡಿರುವ ನಡುವೆ, ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಸಂದೇಶಗಳ ಹಾವಳಿ ಕೂಡ ಹೆಚ್ಚಾಗಿದೆ. ಚುನಾವಣೆ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬರಿಗೆ ಓಟ್ ಹಾಕಿ ಎಂದು ಸಿರಿಗೆರೆ ಸ್ವಾಮೀಜಿ ಹೆಸರಲ್ಲಿನ ಸಂದೇಶ ವೈರಲ್ ಆಗಿದ್ದು, ಸಾಕಷ್ಟು ಚರ್ಚೆ ಹುಟ್ಟಿಹಾಕಿತ್ತು. ಇದಕ್ಕೀಗ ಸ್ಪಷ್ಟನೆ ಸಿಕ್ಕಿದೆ.
ಸ್ಪಷ್ಟನೆ ನೀಡಿದ ಆಡಳಿತ ಮಂಡಳಿ
ಸಿರಿಗೆರೆ ತರಳುಬಾಳು ಗುರುಪೀಠದ ಡಾ. ಶಿವಮೂರ್ತಿ ಶಿವಾಚಾರ್ಯ ಶ್ರೀ ಅವರ ಹೆಸರಿನಲ್ಲಿ ನಕಲಿ ಸಂದೇಶವೊಂದು ವೈರಲ್ ಆಗಿದ್ದು, ನಿರ್ದಿಷ್ಟ ಅಭ್ಯರ್ಥಿಗೆ ಮತ ನೀಡುವಂತೆ ಕರೆ ನೀಡಲಾಗಿದೆ ಎಂಬುದು ಬೆಳಕಿಗೆ ಬಂದಿದೆ. ಸ್ವಾಮೀಜಿಯಿಂದಲೇ ಸಾಮಾಜಿಕ ಜಾಲತಾಣದಲ್ಲಿ ಈ ರೀತಿಯ ಪ್ರಚಾರ ನಡೆಯುತ್ತಿದೆಯೇನೋ ಎಂದು ಹಲವರು ಭಾವಿಸಿದ್ದರು. ಆದರೆ ಇದಕ್ಕೆ ಮಠದ ಆಡಳಿತ ಮಂಡಳಿ ಸ್ಪಷ್ಟನೆ ನೀಡಿದ್ದು, ಶ್ರೀಗಳ ಹೆಸರಿನಲ್ಲಿ ನಕಲಿ ಸಂದೇಶ ರವಾನಿಸಲಾಗುತ್ತಿದೆ ಎಂದಿದೆ. ಈ ಸಂದೇಶವು ಸ್ವಾಮೀಜಿಯವರ ನಿಲುವನ್ನು ತಪ್ಪಾಗಿ ಪ್ರತಿಬಿಂಬಿಸುವುದಾಗಿ ಮಠದ ಆಡಳಿತ ಮಂಡಳಿ ಹೇಳಿದೆ.
ಈ ಕುರಿತು ಮಠದ ಕಾರ್ಯದರ್ಶಿ ಜಿಲ್ಲಾಧಿಕಾರಿಗಳಿಗೆ ಲಿಖಿತ ದೂರು ಸಲ್ಲಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಮಾಹಿತಿಯನ್ನು ಹರಡುವವರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ. ಇಂತಹ ನಕಲಿ ಸಂದೇಶಗಳು ಮತದಾರರನ್ನು ತಪ್ಪು ದಾರಿಗೆಳೆಯುವ ಸಾಧ್ಯತೆ ಇರುವುದರಿಂದ ಅಧಿಕಾರಿಗಳು ಕಟ್ಟುನಿಟ್ಟಿನ ನಿಗಾ ವಹಿಸುವ ಅಗತ್ಯವಿದೆ ಎಂದು ತಿಳಿಸಿದ್ದಾರೆ.
ಕೊಪ್ಪಳ, ಏಪ್ರಿಲ್ 7: ಕುಷ್ಟಗಿ ತಾಲೂಕಿನ ಕಬ್ಬರಗಿಯಲ್ಲಿ ನಡೆದ ಶ್ರೀ ಮಾಸ್ತೆಮ್ಮ ದೇವಿ ಜಾತ್ರೆಯಲ್ಲಿ 62 ವರ್ಷದ ವ್ಯಕ್ತಿಯೊಬ್ಬರು ಅಸಾಮಾನ್ಯ ಸಾಹಸ ಮೆರೆದಿದ್ದಾರೆ. ಮನ್ನೇರಾಳ ಗ್ರಾಮದ ಶರಣಪ್ಪ ಗೊಲ್ಲರ ಎಂಬುವವರು ಎಣ್ಣೆ ಸವರಿ ಜಾರುತ್ತಿದ್ದ 120 ಅಡಿ ಎತ್ತರದ ಹಾಲುಗಂಭವನ್ನು ಲೀಲಾಜಾಲವಾಗಿ ಏರಿ ನೆರೆದಿದ್ದ ಸಾವಿರಾರು ಭಕ್ತರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಮೂರು ವರ್ಷಕ್ಕೊಮ್ಮೆ ನಡೆಯುವ ಈ ಜಾತ್ರೆಯಲ್ಲಿ ಯಾದವ ಸಮಾಜದವರು ತಂಡೋಪತಂಡವಾಗಿ ಭಾಗವಹಿಸುತ್ತಾರೆ. ಕಂಬದ ಮೇಲೆ ಕೊಬ್ಬರಿ ಉತ್ತತ್ತಿ ಕಟ್ಟಿರಲಾಗುತ್ತದೆ. ಕಂಬದ ಮೇಲಿಂದ ಎಣ್ಣೆ ಬಿಡುತ್ತಿದ್ದರೂ ಲೆಕ್ಕಿಸದೆ, ಶರಣಪ್ಪ ಅವರು ತೋರಿದ ದೈಹಿಕ ಕ್ಷಮತೆ ಮತ್ತು ಭಕ್ತಿಗೆ ಜನ ಶಹಬ್ಬಾಸ್ ಎಂದಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿಕ್ಲಿಕ್ ಮಾಡಿ
ಪನಾಮ, ಏಪ್ರಿಲ್ 07: ಪನಾಮ ಕಾಲುವೆಯ ಪೆಸಿಫಿಕ್ ಪ್ರವೇಶದ್ವಾರದಲ್ಲಿರುವ ಬ್ರಿಡ್ಜ್ ಆಫ್ ದಿ ಅಮೆರಿಕಾಸ್ ಬಳಿ ಇಂಧನ ಟ್ಯಾಂಕರ್ ಸ್ಫೋಟಗೊಂಡಿದ್ದು, ಘಟನೆಯಲ್ಲಿ ನಾಲ್ವರು ಗಾಯಗೊಂಡಿದ್ದಾರೆ ಮತ್ತು ಒಬ್ಬರು ಕಾಣೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಪನಾಮ ನಗರದ ಪಶ್ಚಿಮ ಭಾಗದಲ್ಲಿರುವ ಬಾಲ್ಬೋವಾದ ಲಾ ಬೊಕಾ ಪ್ರದೇಶದಲ್ಲಿ ಈ ಘಟನೆ ಸಂಭವಿಸಿದೆ. ಮೂರು ಇಂಧನ ಟ್ಯಾಂಕರ್ಗಳಿಗೆ ಬೆಂಕಿ ತಗುಲಿ ಸ್ಫೋಟಗೊಂಡಿದೆ ಎಂದು ಅಗ್ನಿಶಾಮಕ ಸಿಬ್ಬಂದಿ ತಿಳಿಸಿದ್ದಾರೆ.ಸೇತುವೆ ಪಕ್ಕದಲ್ಲಿದ್ದ ಬೇರೆ ವಾಹನಗಳಿಗೂ ಹಾನಿಯುಂಟಾಗಿದೆ.1,654 ಮೀಟರ್ ಉದ್ದದ ಪ್ರಮುಖ ರಸ್ತೆಯಾದ ಬ್ರಿಡ್ಜ್ ಆಫ್ ದಿ ಅಮೆರಿಕಾಸ್ ಅನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ.
‘ಧುರಂಧರ್ 2’ ಚಿತ್ರವನ್ನು (Dhuranadhar 2) ವೀಕ್ಷಿಸಿ ಎಲ್ಲರೂ ತಮ್ಮ ವಿಮರ್ಶೆ ತಿಳಿಸುತ್ತಿದ್ದಾರೆ. ಆದಿತ್ಯ ಧಾರ್ ಅವರ ನಿರ್ದೇಶನ ಹಾಗೂ ರಣವೀರ್ ಸಿಂಗ್ ಅವರ ನಟನೆಯನ್ನು ಹೊಗಳುತ್ತಿದ್ದಾರೆ. ಈಗ ಖ್ಯಾತ ಕ್ರಿಕೆಟರ್ ವಿರಾಟ್ ಕೊಹ್ಲಿ ಅವರು ‘ಧುರಂಧರ್ 2’ ಸಿನಿಮಾ ವೀಕ್ಷಿಸಿದ್ದಾರೆ. ಅವರು ಈ ಚಿತ್ರವನ್ನು ಹಾಡಿಹೊಗಳಿದ್ದಾರೆ. ಇತ್ತೀಚಿಗಿನ ವರ್ಷಗಳಲ್ಲಿ ನೋಡಿದ ಅದ್ಭುತ ಸಿನಿಮಾ ಇದು ಎಂದು ಮೆಚ್ಚಿಕೊಂಡಿದ್ದಾರೆ.
ಇನ್ಸ್ಟಾಗ್ರಾಮ್ ಸ್ಟೇಟಸ್ ಅಲ್ಲಿ ಕೊಹ್ಲಿ ಅವರು ಸಿನಿಮಾ ಬಗ್ಗೆ ವಿಮರ್ಶೆ ತಿಳಿಸಿದ್ದಾರೆ. ‘ನಾನು ಧುರಂಧರ್ 2’ ಸಿನಿಮಾ ವೀಕ್ಷಿಸಿದೆ. ಭಾರತದ ಸಿನಿಮಾಗಳಲ್ಲಿ ಈ ರೀತಿಯ ಅದ್ಭುತ ಅನುಭವವನ್ನು ಎಂದಿಗೂ ಪಡೆದಿಲ್ಲ.ಈ ಸಿನಿಮಾ ನನ್ನಲ್ಲಿರುವ ಎಲ್ಲಾ ರೀತಿಯ ಭಾವನೆಗಳನ್ನು ಹೊರತಂದಿತು’ ಎಂದು ಕೊಹ್ಲಿ ಹೇಳಿದ್ದಾರೆ.
‘4 ಗಂಟೆಗಳ ಕಾಲ ನಾನು ಎಲ್ಲಿಯೂ ಬೇಸರ ಮಾಡಿಕೊಂಡಿಲ್ಲ. ಆದಿತ್ಯ ಧಾರ್ ಅವರೇ ನಿಮ್ಮ ಪ್ರತಿಭೆ ಮತ್ತು ದೃಢನಿಶ್ಚಯವು ನೀವು ಸೃಷ್ಟಿಸಿದ್ದರಲ್ಲಿ ಪ್ರತಿಫಲಿಸುತ್ತದೆ. ನಿಮಗೆ ಹ್ಯಾಟ್ಸ್ ಆಫ್. ಎಲ್ಲಾ ನಟರು ತಮ್ಮ ಪಾತ್ರಗಳಲ್ಲಿ ಅದ್ಭುತವಾಗಿ ನಟಿಸಿದ್ದಾರೆ. ರಣವೀರ್ ಸಿಂಗ್ ಈ ಸಿನಿಮಾದಲ್ಲಿ ಬೇರೆ ಹಂತ ತಲುಪಿದ್ದೀರಿ. ನಿಮ್ಮ ಅಭಿನಯ ಅದ್ಭುತವಾಗಿತ್ತು. ಖಂಡಿತವಾಗಿಯೂ ವಾವ್’ ಎಂದು ಅವರು ಬರೆದುಕೊಂಡಿದ್ದಾರೆ.
ವಿರಾಟ್ ಕೊಹ್ಲಿ ಅವರಿಗೆ ಇನ್ಸ್ಟಾಗ್ರಾಮ್ ಅಲ್ಲಿ 27 ಕೋಟಿಗೂ ಹೆಚ್ಚು ಹಿಂಬಾಲಕರು ಇದ್ದಾರೆ. ಅವರ ಸಿನಿಮಾ ವಿಮರ್ಶೆ ನೋಡಿ ಒಂದಷ್ಟು ಮಂದಿ ಸಿನಿಮಾ ನೋಡಲು ತೆರಳಬಹುದು. ಇದರಿಂದ ಸಿನಿಮಾದ ಗಳಿಕೆ ಹೆಚ್ಚಲಿದೆ.
‘ಧುರಂಧರ್ 2’ ಸಿನಿಮಾ ಭಾರತದಲ್ಲೇ ಸಾವಿರ ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಹಿಂದಿ ಸಿನಿಮಾ ಒಂದು ಇಷ್ಟು ದೊಡ್ಡ ಮಟ್ಟದಲ್ಲಿ ಗಳಿಕೆ ಮಾಡಿದ್ದು ಇದೇ ಮೊದಲು ಅನ್ನೋದು ವಿಶೇಷ.
ಬಾಲಿವುಡ್‌ನಲ್ಲಿ ಖಳನಾಯಕ ಪಾತ್ರಗಳಿಂದ ಸುದ್ದಿಯಲ್ಲಿರುವ ಅನೇಕ ನಟರಿದ್ದಾರೆ. ಅವರು ದೊಡ್ಡ ಪರದೆಯ ಮೇಲೆ ಪ್ರಬಲ ಪಾತ್ರ ಮಾಡಿ ಗಮನ ಸೆಳೆದದ್ದಾರೆ. ಅವರಲ್ಲಿ ಮಹೇಶ್ ಆನಂದ್ ಕೂಡ ಒಬ್ಬರು. ಐದು ಬಾರಿ ವಿವಾಹವಾದರು ಮತ್ತು 12 ಮಹಿಳೆಯರೊಂದಿಗೆ ಪ್ರೇಮ ಸಂಬಂಧ ಹೊಂದಿದ್ದರು. ಆದರೆ ಕೊನೆಯ ಕ್ಷಣದಲ್ಲಿ, ಯಾರೂ ಅವರೊಂದಿಗೆ ಇರಲಿಲ್ಲ.
ಮಹೇಶ್ ಮೊದಲು ರೀನಾ ರಾಯ್ ಅವರನ್ನು ವಿವಾಹವಾದರು. ಆದರೆ ಅವರ ಸಂಬಂಧ ಹೆಚ್ಚು ಕಾಲ ಉಳಿಯಲಿಲ್ಲ. ಅವರು ಎರಡನೇ ಬಾರಿಗೆ ಬರ್ಖಾ ರಾಯ್ ಅವರನ್ನು ವಿವಾಹವಾದರು. ಅದರ ನಂತರ, ನಟ ಮಿಸ್ ಇಂಡಿಯಾ ಇಂಟರ್ನ್ಯಾಷನಲ್ ಎರಿಕಾ ಮಾರಿಯಾ ಡಿ’ಸೋಜಾ ಅವರನ್ನು ವಿವಾಹವಾದರು. ಇಬ್ಬರಿಗೂ ಒಬ್ಬ ಮಗನಿದ್ದಾನೆ. ನಟ ನಟಿ ಉಷಾ ಬಚ್ಚನ್ ಅವರನ್ನು ನಾಲ್ಕನೇ ಬಾರಿಗೆ ವಿವಾಹವಾದರು. ಆದರೆ ಈ ಮದುವೆಯೂ ಹೆಚ್ಚು ಕಾಲ ಉಳಿಯಲಿಲ್ಲ. ಮಹೇಶ್ ರಷ್ಯಾದ ಮಹಿಳೆ ಲಾನಾಳನ್ನು ಐದನೇ ಬಾರಿಗೆ ಮದುವೆಯಾಗುವ ಮೂಲಕ ಪ್ರೀತಿಗೆ ಮತ್ತೊಂದು ಅವಕಾಶವನ್ನು ನೀಡಿದರು. ಆದರೆ ಈ ಸಂಬಂಧವೂ ಹೆಚ್ಚು ಕಾಲ ಉಳಿಯಲಿಲ್ಲ.
ಕೊನೆಗೆ, ನಟನನ್ನು ಅವನ ಕುಟುಂಬ ಸಂಪೂರ್ಣವಾಗಿ ವಂಚಿಸಿತು. ನಟನ ಬಳಿ ನೀರಿನ ಬಾಟಲಿ ಖರೀದಿಸಲು ಸಹ ಹಣವಿರಲಿಲ್ಲ.
ಫೆಬ್ರವರಿ 9, 2019 ರಂದು, ಮುಂಬೈಮ ಮಹೇಶ್ ಆನಂದ್ ವರ್ಸೋವಾದಲ್ಲಿರುವ ತಮ್ಮ ಫ್ಲಾಟ್‌ನಲ್ಲಿ ಶವವಾಗಿ ಪತ್ತೆಯಾಗಿದ್ದರು. 57 ವರ್ಷದ ನಟ ತಮ್ಮ ಫ್ಲಾಟ್‌ನಲ್ಲಿ ಒಬ್ಬಂಟಿಯಾಗಿ ವಾಸಿಸುತ್ತಿದ್ದರು. ನಟ ಎರಡು ದಿನಗಳಿಂದ ಮನೆಯ ಬಾಗಿಲು ಕೂಡ ತೆರೆಯಲಿಲ್ಲ. ಕೊನೆಗೆ, ಕೆಲಸದಾಕೆ ನಟನ ಸಹೋದರಿಗೆ ಕರೆ ಮಾಡಿ ಮಾಹಿತಿ ನೀಡಿದರು. ನಂತರ ನಟನ ಸಹೋದರಿ ಪೊಲೀಸರಿಗೆ ಮಾಹಿತಿ ನೀಡಿದರು.
ಪೊಲೀಸರು ಮನೆಯ ಬಾಗಿಲು ಒಡೆದು ಒಳಗೆ ಹೋದಾಗ, ನಟ ಸೋಫಾದ ಮೇಲೆ ಮಲಗಿದ್ದು, ಅವರ ಪಕ್ಕದಲ್ಲಿ ಮದ್ಯದ ಬಾಟಲಿಗಳು ಮತ್ತು ಆಹಾರ ಪದಾರ್ಥಗಳು ಬಿದ್ದಿರುವುದು ಕಂಡುಬಂದಿತ್ತು. ನಟ ಮೃತಪಟ್ಟಿದ್ದರು ಮತ್ತು ದೇಹವು ಎರಡು ದಿನಗಳಿಂದ ಮನೆಯಲ್ಲಿ ಕೊಳೆಯುತ್ತಿತ್ತು. ಆದರೆ ಮರಣೋತ್ತರ ಪರೀಕ್ಷೆಯ ವರದಿಯ ಪ್ರಕಾರ, ನಟ ಮೂರು ದಿನಗಳ ಹಿಂದೆಯೇ ಸಾವನ್ನಪ್ಪಿದ್ದರು. ವರದಿಯಲ್ಲಿ, ನಟ ನೈಸರ್ಗಿಕ ಕಾರಣಗಳಿಂದ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಹೇಳಿದ್ದರು. ಅವರು ಹಿಂದಿಯಲ್ಲಿ ಅನೇಕ ಸಿನಿಮಾಗಳಲ್ಲಿ ನಟಿಸಿದ್ದರು.
ಮೈಸೂರು, ಏಪ್ರಿಲ್ 7: ದೇಶಾದ್ಯಂತ ಶಾಲೆಗಳು, ನ್ಯಾಯಾಲಯಗಳು ಮತ್ತು ಸರ್ಕಾರಿ ಕಚೇರಿಗಳಿಗೆ ಹುಸಿ ಬಾಂಬ್ ಬೆದರಿಕೆ (Hoax Bomb Threat) ಇಮೇಲ್ ಕಳುಹಿಸಿ ಆತಂಕ ಸೃಷ್ಟಿಸಿದ್ದ ಮೈಸೂರಿನ (Mysuru) ಶ್ರೀನಿವಾಸ್ ಲೂಯಿಸ್ (SrinivasLouis) (47), ಅಂತರಾಷ್ಟ್ರೀಯ ಮಟ್ಟದಲ್ಲೂ ಇಂತಹ ಕಿಡಿಗೇಡಿತನ ಮಾಡಿರುವುದು ದೆಹಲಿ ಪೊಲೀಸರ ವಿಚಾರಣೆ ವೇಳೆ ಬಹಿರಂಗವಾಗಿದೆ. ಈತ ಪಾಕಿಸ್ತಾನದ ನ್ಯಾಯಾಲಯಗಳು, ಶಾಲಾ-ಕಾಲೇಜುಗಳು ಮತ್ತು ಅಲ್ಲಿನ ಸರ್ಕಾರಿ ಕಚೇರಿಗಳಿಗೂ ಹುಸಿ ಬಾಂಬ್ ಬೆದರಿಕೆ ಸಂದೇಶ ರವಾನಿಸಿದ್ದ ಎಂಬುದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ.
ಡಾರ್ಕ್ ವೆಬ್ ಮೂಲಕ ಸಂಚು
ತಾಂತ್ರಿಕವಾಗಿ ಅತ್ಯಂತ ಚಾಣಾಕ್ಷನಾಗಿರುವ ಶ್ರೀನಿವಾಸ್, ಪೊಲೀಸರಿಗೆ ಸಿಕ್ಕಿಬೀಳದಂತೆ ತನ್ನ ಐಪಿ (IP) ವಿಳಾಸವನ್ನು ಮರೆಮಾಚಲು ‘ಡಾರ್ಕ್ ವೆಬ್’ ಮತ್ತು ವಿಪಿಎನ್ ತಂತ್ರಜ್ಞಾನ ಬಳಸುತ್ತಿದ್ದ. ಪಾಕಿಸ್ತಾನದ ಪ್ರಮುಖ ಸ್ಥಳಗಳನ್ನು ಪತ್ತೆ ಹಚ್ಚಲು ಗೂಗಲ್ ಮ್ಯಾಪ್ ಬಳಸುತ್ತಿದ್ದ ಈತ, ವಾಯ್ಸ್ ಓವರ್ ಇಂಟರ್ನೆಟ್ ಪ್ರೋಟೋಕಾಲ್ (VoIP) ಮೂಲಕವೂ ಕರೆಗಳನ್ನು ಮಾಡುತ್ತಿದ್ದ. ಸುಮಾರು 50ಕ್ಕೂ ಹೆಚ್ಚು ನಕಲಿ ಇಮೇಲ್ ಐಡಿಗಳನ್ನು ಸೃಷ್ಟಿಸಿ ಈ ಕೃತ್ಯ ಎಸಗಿದ್ದ.
FSLಗೆ ಲ್ಯಾಪ್‌ಟಾಪ್ ರವಾನೆ
ಮಾರ್ಚ್ 27ರಂದು ಮೈಸೂರಿನಲ್ಲಿ ದೆಹಲಿ ಪೊಲೀಸರಿಂದ ಬಂಧಿಸಲ್ಪಟ್ಟಿದ್ದ ಈತನಿಂದ ಮೊಬೈಲ್, ಲ್ಯಾಪ್‌ಟಾಪ್ ಮತ್ತು ಹಲವು ಸಿಮ್ ಕಾರ್ಡ್‌ಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಇವುಗಳಲ್ಲಿರುವ ಮಾಹಿತಿಯನ್ನು ಸಂಪೂರ್ಣವಾಗಿ ಪರಿಶೋಧಿಸಲು ಪೊಲೀಸರು ಈ ಡಿಜಿಟಲ್ ಪುರಾವೆಗಳನ್ನು ಎಫ್‌ಎಸ್‌ಎಲ್ (FSL) ಪರೀಕ್ಷೆಗೆ ರವಾನಿಸಿದ್ದಾರೆ. ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಇಮೇಲ್ ಕಳುಹಿಸುತ್ತಿದ್ದ ಈತ, ದೇಶದ ಹಲವು ರಾಜ್ಯಗಳ ವಿಧಾನಸಭೆಗಳಿಗೂ ಬೆದರಿಕೆ ಹಾಕಿದ್ದ.
ಸದ್ಯ ದೆಹಲಿ ಪೊಲೀಸರ ಕಸ್ಟಡಿಯಲ್ಲಿರುವ ಶ್ರೀನಿವಾಸ್‌ನನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದ್ದು, ಈತನ ಹಿಂದೆ ಯಾವುದಾದರೂ ಸಂಘಟನೆಗಳಿವೆಯೇ ಅಥವಾ ಕೇವಲ ಕುಚೇಷ್ಟೆಗಾಗಿ ಇಷ್ಟೆಲ್ಲಾ ಮಾಡಿದ್ದಾನೆಯೇ ಎಂಬ ನಿಟ್ಟಿನಲ್ಲಿ ತನಿಖೆ ಮುಂದುವರಿದಿದೆ.
ಯಾರು ಈ ಶ್ರೀನಿವಾಸ್?
ಹುಸಿ ಬಾಂಬ್ ಬೆದರಿಕೆ ಪ್ರಕರಣದಲ್ಲಿ ದೆಹಲಿ ಪೊಲೀಸ್ ಕಸ್ಟಡಿಯಲ್ಲಿರುವ ಶ್ರೀನಿವಾಸ್ ಲೂಯಿಸ್, ಮೈಸೂರಿನ ಪ್ರತಿಷ್ಠಿತ ಬೃಂದಾವನ ಬಡಾವಣೆ ಎರಡನೇ ಹಂತದ 6ನೇ ಕ್ರಾಸ್ ನಿವಾಸಿ. ಇಲ್ಲಿದ್ದುಕೊಂಡೇ ಬಾಂಬ್ ಬೆದರಿಕೆ ಸಂದೇಶ ಕಳುಹಿಸುವ ಕೃತ್ಯಗಳನ್ನು ಎಸಗುತ್ತಿದ್ದ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿಕ್ಲಿಕ್ ಮಾಡಿ
ಪಾಕಿಸ್ತಾನ ಪ್ರೀಮಿಯರ್ ಲೀಗ್ ಅಲ್ಲಿ ಪ್ರೊಫೆಷನಲಿಸಂ ಇಲ್ಲ ಎಂದು ಅನೇಕರು ದೂರುತ್ತಾರೆ. ಈಗ ಹೊಸ ವಿಡಿಯೋ ಒಂದು ವೈರಲ್ ಆಗಿದೆ. ಈ ವಿಡಿಯೋದಲ್ಲಿ ಆರಂಭದಿಂದ ಕೊನೆಯವರೆಗೂ ಬ್ಯಾಟ್ಸಮನ್ಗಳು ಓಡುತ್ತಲೇ ಇರುತ್ತಾರೆ. ಇದು ಪಾಕಿಸ್ತಾನ ಸೂಪರ್ ಲೀಗ್ನ ವಿಡಿಯೋ ಎಂದು ವೈರಲ್ ಮಾಡಲಾಗಿದೆ. ಆದರೆ, ಅಸಲಿಗೆ ಇದು ಪಾಕ್ ಲೀಗ್ ಅಲ್ಲ. ಭಾರತದ ರಾಜ್ಯ ಮಟ್ಟದ ಲೀಗ್ ನಲ್ಲಿ ನಡೆದ ಘಟನೆ ಇದಾಗಿದ್ದು, ಇದನ್ನು ಪಾಕಿಸ್ತಾನ ಲೀಗ್ ಎಂದು ವೈರಲ್ ಮಾಡಲಾಗಿದೆ.
ಬೆಂಗಳೂರು, ಏಪ್ರಿಲ್ 07: ಕಳೆದ ಹಲವು ದಿನಗಳಿಂದ ರಾಜ್ಯದ ವಿವಿಧ ಭಾಗಗಳಲ್ಲಿ ಮಳೆರಾಯನ ಆರ್ಭಟ (Weather Forecast) ಕಾಣಿಸಿತ್ತು. ಆದರೆ ಇಂದು ಕೇವಲ ಬೆರಳೆಣಿಕೆಯಷ್ಟು ಪ್ರದೇಶಗಳಲ್ಲಿ ಮಳೆಯಾಗಲಿದ್ದು, ಚಿಕ್ಕಬಳ್ಳಾಪುರ, ಕೋಲಾರ, ಚಾಮರಾಜನಗರ ಮೂರು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಸೂಚಿಸಲಾಗಿದೆ. ಉಳಿದೆಡೆ ಒಣ ಹವೆಯ ವಾತಾವರಣವಿರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಎಲ್ಲೆಲ್ಲಿ ಮಳೆ, ಒಣ ಹವೆ?
ದಕ್ಷಿಣ ಒಳನಾಡಿನ ಚಾಮರಾಜನಗರ, ರಾಮನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಕೋಲಾರದಲ್ಲಿ 30-40 ಕೀ.ಮಿ/ಗಂ ವೇಗದಲ್ಲಿ ಗಾಳಿ ಮಳೆ ಜೋರಾಗಿರಲಿದೆ.
ದಕ್ಷಿಣ ಒಳನಾಡಿನ ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ, ರಾಮನಗರ, ಚಿಕ್ಕಮಗಳೂರು, ಶಿವಮೊಗ್ಗ, ಹಾಸನ, ಕೊಡಗು, ಚಾಮರಾಜನಗರ, ಮೈಸೂರು, ತುಮಕೂರು ಮತ್ತು ವಿಜಯನಗರ ಜಿಲ್ಲೆಗಳಲ್ಲಿಯೂ ಒಣ ಹವೆಯ ವಾತಾವರಣ ಇರಲಿದೆ.
ಕರಾವಳಿಯ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಒಣ ಹವೆಯಿರಲಿದೆ ಎಂದು ಇಲಾಖೆ ತಿಳಿಸಿದೆ. ಉತ್ತರ ಒಳನಾಡು ಭಾಗದ ಜಿಲ್ಲೆಗಳಾದ ಬೆಳಗಾವಿ, ಬೀದರ್, ವಿಜಯಪುರ, ಬಾಗಲಕೋಟೆ, ಹಾವೇರಿ, ಗದಗ, ಧಾರವಾಡ, ಕಲಬುರಗಿ, ಕೊಪ್ಪಳ, ಬಳ್ಳಾರಿ, ರಾಯಚೂರು, ಯಾದಗಿರಿ ಮತ್ತು ವಿಜಯನಗರದಲ್ಲಿಯೂ ಶುಷ್ಕ ವಾತಾವರಣವಿರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.