Headlines

ಹೆಲ್ಮೆಟ್ ಧರಿಸಿ ಬಂದು ಗ್ಯಾಸ್ ಸಿಲಿಂಡರ್ ಎಗರಿಸಿದ ಚಾಲಾಕಿ ಕಳ್ಳ; ಸಿಸಿಟಿವಿ ವಿಡಿಯೋ ಇಲ್ಲಿದೆ ನೋಡಿ

ಬೆಂಗಳೂರು, ಏಪ್ರಿಲ್ 7: ಬೆಂಗಳೂರಿನ ಕಾಡುಗೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೋಮವಾರ ಬೆಳಗಿನ ಜಾವ ವಿಚಿತ್ರ ಕಳವು ಪ್ರಕರಣ ನಡೆದಿದೆ. ಹೆಲ್ಮೆಟ್ ಧರಿಸಿ ಬೈಕ್‌ನಲ್ಲಿ ಬಂದ ಕಳ್ಳನೊಬ್ಬ, ರಸ್ತೆಯಲ್ಲಿನ ಮನೆಗಳ ಗೇಟ್ ಪರಿಶೀಲಿಸಿ, ಲಾಕ್ ಇಲ್ಲದ ಮನೆಯೊಳಗೆ ನುಗ್ಗಿ ಅಡುಗೆ ಅನಿಲ ಸಿಲಿಂಡರ್ ಕದ್ದು ಪರಾರಿಯಾಗಿದ್ದಾನೆ. ಮುಂಜಾನೆ 3 ಗಂಟೆ ಸುಮಾರಿಗೆ ನಡೆದ ಈ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಕಾಡುಗೋಡಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ. ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ Source link

Read More

ಸ್ಟಾರ್​ ನಾಯಕಿಯನ್ನು ತಬ್ಬಿ ಮುತ್ತಿಟ್ಟ ಅಭಿಮಾನಿ; ವಿಡಿಯೋ ವೈರಲ್

ಸೆಲೆಬ್ರಿಟಿಗಳು ಸಾರ್ವಜನಿಕವಾಗಿ ಕಾಣಿಸಿಕೊಂಡಾಗ ಅಭಿಮಾನಿಗಳು ಹೇಗೆ ನಡೆದುಕೊಳ್ಳುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ. ಕೆಲವರು ಸೆಲ್ಫಿ ತೆಗೆದುಕೊಳ್ಳುತ್ತಾರೆ, ಇನ್ನೂ ಕೆಲವರು ತಬ್ಬಿ ಮುತ್ತು ಕೊಡಲು ಬರುತ್ತಾರೆ. ಈಗ ನಟಿಯೊಬ್ಬರಿಗೆ ಹಾಗೆಯೇ ಆಗಿದೆ. ಈ ಸಂದರ್ಭದ ವಿಡಿಯೋ ವೈರಲ್ ಆಗಿದ್ದು, ಇದಕ್ಕೆ ಅಭಿಮಾನಿಗಳು ನಾನಾ ರೀತಿಯಲ್ಲಿ ಕಮೆಂಟ್ ಮಾಡುವುದನ್ನು ನೀವು ಕಾಣಬಹುದು. ಮಲಯಾಳಂನ ಪಾಲಕ್ಕಾಡ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಮಲಯಾಳಂನ ಸ್ಟಾರ್ ನಾಯಕಿ ಮಂಜು ವಾರಿಯರ್ ಅವರಿಗೆ ಮಹಿಳಾ ಅಭಿಮಾನಿಯೊಬ್ಬರು ಬಲವಂತವಾಗಿ ಮುತ್ತಿಟ್ಟರು. ಇದು ನಡೆದಾಗ ನಾಯಕಿ ಮತ್ತು ಅಲ್ಲಿದ್ದ…

Read More

ಎಚ್ಚರ! ಸಿರಿಗೆರೆ ಸ್ವಾಮೀಜಿ ಹೆಸರಿನಲ್ಲಿ ವೈರಲ್ ಆಗುತ್ತಿದೆ ನಕಲಿ ಸಂದೇಶ!

ದಾವಣಗೆರೆ, ಏಪ್ರಿಲ್ 07: ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆ (Byelection) ಏಪ್ರಿಲ್ 9ರಂದು ನಡೆಯಲಿರುವ ಹಿನ್ನೆಲೆಯಲ್ಲಿ ರಾಜಕೀಯ ಚಟುವಟಿಕೆಗಳು ಚುರುಕುಗೊಂಡಿವೆ. ಪ್ರಮುಖ ಪಕ್ಷಗಳು ಮತದಾರರನ್ನು ಸೆಳೆಯಲು ವಿವಿಧ ರೀತಿಯ ಪ್ರಚಾರ ಕೈಗೊಂಡಿರುವ ನಡುವೆ, ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಸಂದೇಶಗಳ ಹಾವಳಿ ಕೂಡ ಹೆಚ್ಚಾಗಿದೆ. ಚುನಾವಣೆ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬರಿಗೆ ಓಟ್​ ಹಾಕಿ ಎಂದು ಸಿರಿಗೆರೆ ಸ್ವಾಮೀಜಿ ಹೆಸರಲ್ಲಿನ ಸಂದೇಶ ವೈರಲ್ ಆಗಿದ್ದು, ಸಾಕಷ್ಟು ಚರ್ಚೆ ಹುಟ್ಟಿಹಾಕಿತ್ತು. ಇದಕ್ಕೀಗ ಸ್ಪಷ್ಟನೆ ಸಿಕ್ಕಿದೆ. ಸ್ಪಷ್ಟನೆ ನೀಡಿದ ಆಡಳಿತ ಮಂಡಳಿ ಸಿರಿಗೆರೆ ತರಳುಬಾಳು…

Read More

120 ಅಡಿ ಎತ್ತರದ ಹಾಲುಗಂಬ ಏರಿ ಸಾಹಸ ಮೆರೆದ 62ರ ವ್ಯಕ್ತಿ! ವಿಡಿಯೋ ನೋಡಿ

ಕೊಪ್ಪಳ, ಏಪ್ರಿಲ್ 7: ಕುಷ್ಟಗಿ ತಾಲೂಕಿನ ಕಬ್ಬರಗಿಯಲ್ಲಿ ನಡೆದ ಶ್ರೀ ಮಾಸ್ತೆಮ್ಮ ದೇವಿ ಜಾತ್ರೆಯಲ್ಲಿ 62 ವರ್ಷದ ವ್ಯಕ್ತಿಯೊಬ್ಬರು ಅಸಾಮಾನ್ಯ ಸಾಹಸ ಮೆರೆದಿದ್ದಾರೆ. ಮನ್ನೇರಾಳ ಗ್ರಾಮದ ಶರಣಪ್ಪ ಗೊಲ್ಲರ ಎಂಬುವವರು ಎಣ್ಣೆ ಸವರಿ ಜಾರುತ್ತಿದ್ದ 120 ಅಡಿ ಎತ್ತರದ ಹಾಲುಗಂಭವನ್ನು ಲೀಲಾಜಾಲವಾಗಿ ಏರಿ ನೆರೆದಿದ್ದ ಸಾವಿರಾರು ಭಕ್ತರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಮೂರು ವರ್ಷಕ್ಕೊಮ್ಮೆ ನಡೆಯುವ ಈ ಜಾತ್ರೆಯಲ್ಲಿ ಯಾದವ ಸಮಾಜದವರು ತಂಡೋಪತಂಡವಾಗಿ ಭಾಗವಹಿಸುತ್ತಾರೆ. ಕಂಬದ ಮೇಲೆ ಕೊಬ್ಬರಿ ಉತ್ತತ್ತಿ ಕಟ್ಟಿರಲಾಗುತ್ತದೆ. ಕಂಬದ ಮೇಲಿಂದ ಎಣ್ಣೆ ಬಿಡುತ್ತಿದ್ದರೂ ಲೆಕ್ಕಿಸದೆ,…

Read More

Video: ಅಮೆರಿಕದ ಪನಾಮ ಕಾಲುವೆ ಮೇಲಿರುವ ಸೇತುವೆಯಲ್ಲಿ ಮೂರು ಇಂಧನ ಟ್ಯಾಂಕರ್​ಗಳ ಸ್ಫೋಟ, ಭಯಾನಕ ವಿಡಿಯೋ ಇಲ್ಲಿದೆ

ಪನಾಮ, ಏಪ್ರಿಲ್ 07: ಪನಾಮ ಕಾಲುವೆಯ ಪೆಸಿಫಿಕ್ ಪ್ರವೇಶದ್ವಾರದಲ್ಲಿರುವ ಬ್ರಿಡ್ಜ್ ಆಫ್ ದಿ ಅಮೆರಿಕಾಸ್ ಬಳಿ ಇಂಧನ ಟ್ಯಾಂಕರ್ ಸ್ಫೋಟಗೊಂಡಿದ್ದು, ಘಟನೆಯಲ್ಲಿ ನಾಲ್ವರು ಗಾಯಗೊಂಡಿದ್ದಾರೆ ಮತ್ತು ಒಬ್ಬರು ಕಾಣೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಪನಾಮ ನಗರದ ಪಶ್ಚಿಮ ಭಾಗದಲ್ಲಿರುವ ಬಾಲ್ಬೋವಾದ ಲಾ ಬೊಕಾ ಪ್ರದೇಶದಲ್ಲಿ ಈ ಘಟನೆ ಸಂಭವಿಸಿದೆ. ಮೂರು ಇಂಧನ ಟ್ಯಾಂಕರ್​ಗಳಿಗೆ ಬೆಂಕಿ ತಗುಲಿ ಸ್ಫೋಟಗೊಂಡಿದೆ ಎಂದು ಅಗ್ನಿಶಾಮಕ ಸಿಬ್ಬಂದಿ ತಿಳಿಸಿದ್ದಾರೆ.ಸೇತುವೆ ಪಕ್ಕದಲ್ಲಿದ್ದ ಬೇರೆ ವಾಹನಗಳಿಗೂ ಹಾನಿಯುಂಟಾಗಿದೆ.1,654 ಮೀಟರ್ ಉದ್ದದ ಪ್ರಮುಖ ರಸ್ತೆಯಾದ ಬ್ರಿಡ್ಜ್ ಆಫ್ ದಿ…

Read More

‘ಅದ್ಭುತ ಅನುಭವ’; ‘ಧರುಂಧರ್ 2’ ನೋಡಿ ವಿಮರ್ಶೆ ತಿಳಿಸಿದ ವಿರಾಟ್ ಕೊಹ್ಲಿ

‘ಧುರಂಧರ್ 2’ ಚಿತ್ರವನ್ನು (Dhuranadhar 2) ವೀಕ್ಷಿಸಿ ಎಲ್ಲರೂ ತಮ್ಮ ವಿಮರ್ಶೆ ತಿಳಿಸುತ್ತಿದ್ದಾರೆ. ಆದಿತ್ಯ ಧಾರ್ ಅವರ ನಿರ್ದೇಶನ ಹಾಗೂ ರಣವೀರ್ ಸಿಂಗ್ ಅವರ ನಟನೆಯನ್ನು ಹೊಗಳುತ್ತಿದ್ದಾರೆ. ಈಗ ಖ್ಯಾತ ಕ್ರಿಕೆಟರ್ ವಿರಾಟ್ ಕೊಹ್ಲಿ ಅವರು ‘ಧುರಂಧರ್ 2’ ಸಿನಿಮಾ ವೀಕ್ಷಿಸಿದ್ದಾರೆ. ಅವರು ಈ ಚಿತ್ರವನ್ನು ಹಾಡಿಹೊಗಳಿದ್ದಾರೆ. ಇತ್ತೀಚಿಗಿನ ವರ್ಷಗಳಲ್ಲಿ ನೋಡಿದ ಅದ್ಭುತ ಸಿನಿಮಾ ಇದು ಎಂದು ಮೆಚ್ಚಿಕೊಂಡಿದ್ದಾರೆ. ಇನ್​ಸ್ಟಾಗ್ರಾಮ್ ಸ್ಟೇಟಸ್​​ ಅಲ್ಲಿ ಕೊಹ್ಲಿ ಅವರು ಸಿನಿಮಾ ಬಗ್ಗೆ ವಿಮರ್ಶೆ ತಿಳಿಸಿದ್ದಾರೆ. ‘ನಾನು ಧುರಂಧರ್ 2’ ಸಿನಿಮಾ…

Read More

5 ವಿವಾಹ, 12 ಪ್ರೇಮ ಸಂಬಂಧ; ಸಾಯುವಾಗ ಒಂಟಿಯಾದ ಬಾಲಿವುಡ್ ಖಳ ನಾಯಕ

ಬಾಲಿವುಡ್‌ನಲ್ಲಿ ಖಳನಾಯಕ ಪಾತ್ರಗಳಿಂದ ಸುದ್ದಿಯಲ್ಲಿರುವ ಅನೇಕ ನಟರಿದ್ದಾರೆ. ಅವರು ದೊಡ್ಡ ಪರದೆಯ ಮೇಲೆ ಪ್ರಬಲ ಪಾತ್ರ ಮಾಡಿ ಗಮನ ಸೆಳೆದದ್ದಾರೆ. ಅವರಲ್ಲಿ ಮಹೇಶ್ ಆನಂದ್ ಕೂಡ ಒಬ್ಬರು. ಐದು ಬಾರಿ ವಿವಾಹವಾದರು ಮತ್ತು 12 ಮಹಿಳೆಯರೊಂದಿಗೆ ಪ್ರೇಮ ಸಂಬಂಧ ಹೊಂದಿದ್ದರು. ಆದರೆ ಕೊನೆಯ ಕ್ಷಣದಲ್ಲಿ, ಯಾರೂ ಅವರೊಂದಿಗೆ ಇರಲಿಲ್ಲ. ಮಹೇಶ್ ಮೊದಲು ರೀನಾ ರಾಯ್ ಅವರನ್ನು ವಿವಾಹವಾದರು. ಆದರೆ ಅವರ ಸಂಬಂಧ ಹೆಚ್ಚು ಕಾಲ ಉಳಿಯಲಿಲ್ಲ. ಅವರು ಎರಡನೇ ಬಾರಿಗೆ ಬರ್ಖಾ ರಾಯ್ ಅವರನ್ನು ವಿವಾಹವಾದರು. ಅದರ…

Read More

ಪಾಕಿಸ್ತಾನದ ಕೋರ್ಟ್, ಕಚೇರಿಗಳಿಗೇ ಬಾಂಬ್ ಬೆದರಿಕೆ ಸಂದೇಶ ಕಳುಹಿಸಿದ್ದ ಮೈಸೂರಿನ ‘ಹುಸಿ ಬಾಂಬ್’ ಕಿಂಗ್‌ಪಿನ್!

ಮೈಸೂರು, ಏಪ್ರಿಲ್ 7: ದೇಶಾದ್ಯಂತ ಶಾಲೆಗಳು, ನ್ಯಾಯಾಲಯಗಳು ಮತ್ತು ಸರ್ಕಾರಿ ಕಚೇರಿಗಳಿಗೆ ಹುಸಿ ಬಾಂಬ್ ಬೆದರಿಕೆ (Hoax Bomb Threat) ಇಮೇಲ್ ಕಳುಹಿಸಿ ಆತಂಕ ಸೃಷ್ಟಿಸಿದ್ದ ಮೈಸೂರಿನ (Mysuru) ಶ್ರೀನಿವಾಸ್ ಲೂಯಿಸ್ (SrinivasLouis) (47), ಅಂತರಾಷ್ಟ್ರೀಯ ಮಟ್ಟದಲ್ಲೂ ಇಂತಹ ಕಿಡಿಗೇಡಿತನ ಮಾಡಿರುವುದು ದೆಹಲಿ ಪೊಲೀಸರ ವಿಚಾರಣೆ ವೇಳೆ ಬಹಿರಂಗವಾಗಿದೆ. ಈತ ಪಾಕಿಸ್ತಾನದ ನ್ಯಾಯಾಲಯಗಳು, ಶಾಲಾ-ಕಾಲೇಜುಗಳು ಮತ್ತು ಅಲ್ಲಿನ ಸರ್ಕಾರಿ ಕಚೇರಿಗಳಿಗೂ ಹುಸಿ ಬಾಂಬ್ ಬೆದರಿಕೆ ಸಂದೇಶ ರವಾನಿಸಿದ್ದ ಎಂಬುದು ಪೊಲೀಸ್ ಮೂಲಗಳಿಂದ ತಿಳಿದುಬಂದಿದೆ. ಡಾರ್ಕ್ ವೆಬ್ ಮೂಲಕ…

Read More

ಇದು ಪಾಕ್ ಲೀಗ್​ ವಿಡಿಯೋನಾ? ವೈರಲ್ ಆದ ವಿಡಿಯೋ ಹಿಂದಿನ ಅಸಲಿಯತ್ತೇನು?

ಪಾಕಿಸ್ತಾನ ಪ್ರೀಮಿಯರ್ ಲೀಗ್ ಅಲ್ಲಿ ಪ್ರೊಫೆಷನಲಿಸಂ ಇಲ್ಲ ಎಂದು ಅನೇಕರು ದೂರುತ್ತಾರೆ. ಈಗ ಹೊಸ ವಿಡಿಯೋ ಒಂದು ವೈರಲ್ ಆಗಿದೆ. ಈ ವಿಡಿಯೋದಲ್ಲಿ ಆರಂಭದಿಂದ ಕೊನೆಯವರೆಗೂ ಬ್ಯಾಟ್ಸಮನ್​​ಗಳು ಓಡುತ್ತಲೇ ಇರುತ್ತಾರೆ. ಇದು ಪಾಕಿಸ್ತಾನ ಸೂಪರ್ ಲೀಗ್​​ನ ವಿಡಿಯೋ ಎಂದು ವೈರಲ್ ಮಾಡಲಾಗಿದೆ. ಆದರೆ, ಅಸಲಿಗೆ ಇದು ಪಾಕ್ ಲೀಗ್ ಅಲ್ಲ. ಭಾರತದ ರಾಜ್ಯ ಮಟ್ಟದ ಲೀಗ್​ ನಲ್ಲಿ ನಡೆದ ಘಟನೆ ಇದಾಗಿದ್ದು, ಇದನ್ನು ಪಾಕಿಸ್ತಾನ ಲೀಗ್ ಎಂದು ವೈರಲ್ ಮಾಡಲಾಗಿದೆ. ಇನ್ನಷ್ಟು  ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​…

Read More

ಕರ್ನಾಟಕ ಹವಾಮಾನ ವರದಿ: ಬೆಂಗಳೂರು, ರಾಮನಗರದಲ್ಲಿ ಮಳೆಯಾಗುವ ಮುನ್ಸೂಚನೆ; ಮೂರು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​

ಬೆಂಗಳೂರು, ಏಪ್ರಿಲ್ 07: ಕಳೆದ ಹಲವು ದಿನಗಳಿಂದ ರಾಜ್ಯದ ವಿವಿಧ ಭಾಗಗಳಲ್ಲಿ ಮಳೆರಾಯನ ಆರ್ಭಟ  (Weather Forecast) ಕಾಣಿಸಿತ್ತು. ಆದರೆ ಇಂದು ಕೇವಲ ಬೆರಳೆಣಿಕೆಯಷ್ಟು ಪ್ರದೇಶಗಳಲ್ಲಿ ಮಳೆಯಾಗಲಿದ್ದು, ಚಿಕ್ಕಬಳ್ಳಾಪುರ, ಕೋಲಾರ, ಚಾಮರಾಜನಗರ ಮೂರು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​ ಸೂಚಿಸಲಾಗಿದೆ. ಉಳಿದೆಡೆ ಒಣ ಹವೆಯ ವಾತಾವರಣವಿರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಎಲ್ಲೆಲ್ಲಿ ಮಳೆ, ಒಣ ಹವೆ? ದಕ್ಷಿಣ ಒಳನಾಡಿನ ಚಾಮರಾಜನಗರ, ರಾಮನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಕೋಲಾರದಲ್ಲಿ 30-40 ಕೀ.ಮಿ/ಗಂ ವೇಗದಲ್ಲಿ ಗಾಳಿ ಮಳೆ ಜೋರಾಗಿರಲಿದೆ….

Read More