Headlines

‘ಬೆಂಗಳೂರು ಟ್ರಾಫಿಕ್ ನಿಮಗೆ ತಾಳ್ಮೆಯ ಪಾಠ ಕಲಿಸುತ್ತೆ’: ರೋಡ್ ರೇಜ್ ಪ್ರಕರಣದಲ್ಲಿ ಟೆಕ್ಕಿಗೆ ಹೈಕೋರ್ಟ್ ಚಾಟಿ!

ಬೆಂಗಳೂರು, ಏಪ್ರಿಲ್ 7: ‘ನಿಮಗೆ ತಾಳ್ಮೆ ಇಲ್ಲದಿದ್ದರೆ ಇಲ್ಲಿ ಏನೂ ಮಾಡಲು ಸಾಧ್ಯವಿಲ್ಲ. ಬೆಂಗಳೂರಿನ (Bangalore) ಟ್ರಾಫಿಕ್ ನಿಮಗೆ ತಾಳ್ಮೆಯನ್ನು ಕಲಿಸುತ್ತದೆ. ರೋಡ್ ರೇಜ್ ಅಥವಾ ರಸ್ತೆಯ ಮೇಲಿನ ಇಂತಹ ಉದ್ಧಟತನದ ವರ್ತನೆಗಳನ್ನು ಎಂದಿಗೂ ಕ್ಷಮಿಸಲು ಸಾಧ್ಯವಿಲ್ಲ’ ಎಂದು ಕರ್ನಾಟಕ ಹೈಕೋರ್ಟ್ (Karnataka High Court) ಗಂಭೀರವಾಗಿ ಟೆಕ್ಕಿಯೊಬ್ಬರಿಗೆ ಎಚ್ಚರಿಕೆ ನೀಡಿದೆ. ತನ್ನ ವಿರುದ್ಧ ದಾಖಲಾಗಿದ್ದ ರೋಡ್​ ರೇಜ್ ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ಸಾಫ್ಟ್‌ವೇರ್ ಇಂಜಿನಿಯರ್ ಒಬ್ಬರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ…

Read More

Horoscope Today 07 April: ಇಂದು ಈ ರಾಶಿಯವರ ಮಾತು ನಂಬಿಕೆಗೆ ಅರ್ಹವಲ್ಲ

ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ಉತ್ತರಾಯಣ, ಋತು : ವಸಂತ, ಚಾಂದ್ರಮಾಸ : ಚೈತ್ರ, ಸೌರ ಮಾಸ : ಮೀನ, ಮಹಾನಕ್ಷತ್ರ : ರೇವತೀ, ವಾರ : ಮಂಗಳ, ಪಕ್ಷ : ಕೃಷ್ಣ, ತಿಥಿ : ಷಷ್ಠೀ, ನಿತ್ಯನಕ್ಷತ್ರ : ಜ್ಯೇಷ್ಠಾ, ಯೋಗ : ಸಿದ್ಧಿ, ಕರಣ : ಭದ್ರ, ಸೂರ್ಯೋದಯ – 06 – 17 am, ಸೂರ್ಯಾಸ್ತ – 06 – 35 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ…

Read More

IPL 2026: ಮಳೆಯಿಂದ ಕೆಕೆಆರ್- ಪಂಜಾಬ್ ನಡುವಿನ ಪಂದ್ಯ ರದ್ದು

ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆಯಬೇಕಿದ್ದ ಕೋಲ್ಕತ್ತಾ ನೈಟ್ ರೈಡರ್ಸ್​ ಹಾಗೂ ಪಂಜಾಬ್ ಕಿಂಗ್ಸ್ ನಡುವಿನ ಐಪಿಎಲ್ 2026 ರ 12ನೇ ಪಂದ್ಯ ಮಳೆಯಿಂದ ರದ್ದಾಗಿದೆ. ಹೀಗಾಗಿ ಉಭಯ ತಂಡಗಳಿಗೆ ತಲಾ ಒಂದೊಂದು ಅಂಕ ಸಿಕ್ಕಿದೆ. ಇದರಿಂದ ಕೆಕೆಆರ್​ಗೆ ಲಾಭವಾದರೆ, ಪಂಜಾಬ್ ತಂಡ ಬೇಸರದಿಂದ ಮೈದಾನ ತೊರೆದಿದೆ. ಏಕೆಂದರೆ ಕೆಕೆಆರ್ ತಂಡ ಆಡಿದ ಮೊದಲ ಎರಡು ಪಂದ್ಯಗಳನ್ನು ಸೋತಿತ್ತು. ಇದರಿಂದ ತಂಡ ಯಾವುದೇ ಅಂಕಗಳನ್ನು ಹೊಂದಿರಲಿಲ್ಲ. ಆದರೆ ಈ ಪಂದ್ಯ ರದ್ದಾದ ಕಾರಣ ಕೆಕೆಆರ್​ಗೆ 1 ಅಂಕ ಸಿಕ್ಕಿದೆ….

Read More

ಕಾಂಗ್ರೆಸ್​​ಗೆ ಕುಟುಂಬ ಮೊದಲು, ನಮಗೆ ದೇಶ ಮೊದಲು; ಅಸ್ಸಾಂನಲ್ಲಿ ಪ್ರಧಾನಿ ಮೋದಿ ವಾಗ್ದಾಳಿ

ನವದೆಹಲಿ, ಏಪ್ರಿಲ್ 6: ಪ್ರಧಾನಿ ನರೇಂದ್ರ ಮೋದಿ (PM Modi) ಇಂದು ಕಾಂಗ್ರೆಸ್ ಪಕ್ಷದ ವಿರುದ್ಧ ಅಸ್ಸಾಂನ ಚುನಾವಣಾ ರ್ಯಾಲಿಯಲ್ಲಿ ವಾಗ್ದಾಳಿ ನಡೆಸಿದರು. ನಮಗೆ ದೇಶ ಮೊದಲಾದರೆ ಕಾಂಗ್ರೆಸ್​ಗೆ “ಕುಟುಂಬ-ಮೊದಲು” ಎಂದು ಅವರು ಟೀಕಿಸಿದ್ದಾರೆ. ಹೊಜೈನಲ್ಲಿ ನಡೆದ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ಅಸ್ಸಾಂನಲ್ಲಿ ಈ ಬಾರಿ ಬಿಜೆಪಿ ಹ್ಯಾಟಿಕ್ ಬಾರಿಸಲಿದೆ ಎಂದಿದ್ದಾರೆ. ಬಿಜೆಪಿಯ ಆಡಳಿತ ಮಾದರಿಯನ್ನು ಎತ್ತಿ ತೋರಿಸಿದ ಪ್ರಧಾನಿ ಮೋದಿ, ತಮ್ಮ ಪಕ್ಷವು ನಿರಂತರ ಅಭಿವೃದ್ಧಿ ಪ್ರಯತ್ನಗಳ ಮೂಲಕ ಅಸ್ಸಾಂ ಜನರ ಜೀವನವನ್ನು ಸುಧಾರಿಸಲು…

Read More

ಕೆಡಿ ಹಾಡಿನ ವಿವಾದ: ಜನರನ್ನು ಸೆಳೆಯುವ ಪ್ರಯತ್ನದ ಬಗ್ಗೆ ಗಾಯಕ ನವೀನ್ ಸಜ್ಜು ಹೇಳಿದ್ದಿಷ್ಟು..

‘ಕೆಡಿ’ ಸಿನಿಮಾದ ‘ಸರ್ಸೆ ನಿನ್ನ ಸೆರಗ’ ಹಾಡು ತುಂಬಾ ವಿವಾದಕ್ಕೆ ಕಾರಣ ಆಯಿತು. ಕಡೆಗೂ ಆ ಹಾಡು ಡಿಲೀಟ್ ಮಾಡಬೇಕಾಯಿತು. ಆ ರೀತಿ ಆಗಿದ್ದರ ಬಗ್ಗೆ ಗಾಯಕ ನವೀನ್ ಸಜ್ಜು (Naveen Sajju) ಅವರು ತಮ್ಮ ಅನಿಸಿಕೆ ತಿಳಿಸಿದ್ದಾರೆ. ‘ಸಂಗೀತಗಾರರು ನಾವು ಟ್ರೆಂಡ್ ಹಿಂದೆ ಹೋಗುವುದಲ್ಲ. ನಾವೇ ಟ್ರೆಂಡ್ ಸೆಟ್ ಮಾಡುವುದು. ನನಗೆ ಮೊದಲು ಆರ್ಕೆಸ್ಟ್ರಾಗಳಲ್ಲಿ ಜನಪದ ಗೀತೆಗಳನ್ನು ಹಾಡಲು ನನಗೆ ಅವಕಾಶ ಕೊಡುತ್ತಿರಲಿಲ್ಲ. ಆದರೆ ನಾನು ಆಗ ಅವರಿಗೆ ಸವಾಲು ಹಾಕಿದ್ದೆ. ಈಗ ನನ್ನ ಬ್ಯಾಂಡ್…

Read More

IPL 2026: ರಾಜಸ್ಥಾನ್ ವಿರುದ್ಧ ಆಡ್ತಾರಾ ಹಾರ್ದಿಕ್ ಪಾಂಡ್ಯ?

ಹಾರ್ದಿಕ್ ಪಾಂಡ್ಯ (Hardik Pandya) ನಾಯಕತ್ವದ ಮುಂಬೈ ಇಂಡಿಯನ್ಸ್, 2012 ರ ನಂತರ ಮೊದಲ ಬಾರಿಗೆ 19 ನೇ ಐಪಿಎಲ್ (IPL) ಸೀಸನ್‌ನಲ್ಲಿ ತಮ್ಮ ಅಭಿಯಾನವನ್ನು ಗೆಲುವಿನ ಆರಂಭವನ್ನು ಮಾಡಿತು. ಮಾರ್ಚ್ 29 ರಂದು ವಾಂಖೆಡೆ ಕ್ರೀಡಾಂಗಣದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಸೋಲಿಸುವ ಮೂಲಕ ಮುಂಬೈ ತನ್ನ ಅಭಿಯಾನವನ್ನು ಗೆಲುವಿನೊಂದಿಗೆ ಪ್ರಾರಂಭಿಸಿತು. ಆದರೆ, ಆ ನಂತರ ಮುಂಬೈ ತನ್ನ ಗೆಲುವಿನ ಓಟವನ್ನು ಕಾಯ್ದುಕೊಳ್ಳಲು ವಿಫಲವಾಯಿತು. ಶನಿವಾರ ನಡೆದ ತನ್ನ ಎರಡನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಡೆಲ್ಲಿ…

Read More

ಶವವಾಗಿ ಪತ್ತೆಯಾದ ಕಿರುತೆರೆ ನಟಿ ಸುಭಾಷಿಣಿ; ಗಂಡನಿಗೆ ಕೊನೆಯ ವಿಡಿಯೋ ಕಾಲ್

‘ಸನ್ ಟಿವಿ’ಯ ಅತ್ಯಂತ ಜನಪ್ರಿಯ ಧಾರಾವಾಹಿಗಳಲ್ಲಿ ಒಂದಾದ ‘ಕಯಲ್’ (Kayal) ಮೂಲಕ ಮನೆಮಾತಾಗಿದ್ದ ನಟಿ ಸುಭಾಷಿಣಿ ಬಾಲಸುಬ್ರಮಣಿಯಂ ಇಂದು (ಏಪ್ರಿಲ್ 6) ಚೆನ್ನೈನಲ್ಲಿ ನಿಧನರಾಗಿದ್ದಾರೆ. ಉದಯೋನ್ಮುಖ ನಟಿಯ ಹಠಾತ್ ಸಾವು (Subashini Death) ತಮಿಳು ಕಿರುತೆರೆ ಲೋಕಕ್ಕೆ ಮತ್ತು ಅವರ ಅಭಿಮಾನಿಗಳಿಗೆ ತೀವ್ರ ಆಘಾತವನ್ನುಂಟು ಮಾಡಿದೆ. ವರದಿಗಳ ಪ್ರಕಾರ, ಚೆನ್ನೈನ ತಮ್ಮ ನಿವಾಸದಲ್ಲಿ ಸುಭಾಷಿಣಿ (Subashini Balasubramaniyam) ಶವವಾಗಿ ಪತ್ತೆಯಾಗಿದ್ದಾರೆ. ಪ್ರಾಥಮಿಕ ಪೊಲೀಸ್ ತನಿಖೆಯ ಪ್ರಕಾರ ಇದು ಆತ್ಮಹತ್ಯೆ ಎಂದು ಶಂಕಿಸಲಾಗಿದೆ. ಪತಿಯೊಂದಿಗೆ ವಿಡಿಯೋ ಕಾಲ್‌ನಲ್ಲಿ ಮಾತನಾಡುತ್ತಿದ್ದಾಗ…

Read More

ನೋಡನೋಡುತ್ತಲೇ ಬೈಕ್ ಮೇಲೆ ಪಲ್ಟಿಯಾಯ್ತು ಹುಲ್ಲು ತುಂಬಿದ ಟ್ರಾಕ್ಟರ್

ಹೈದರಾಬಾದ್, ಏಪ್ರಿಲ್ 6: ರಸ್ತೆಯಲ್ಲಿ ಓಡಾಡುವಾಗ ಎಷ್ಟು ಎಚ್ಚರ ವಹಿಸಿದರೂ ಕಡಿಮೆಯೇ. ತೆಲಂಗಾಣದ (Telangana) ರಸ್ತೆಯ ಸಿಸಿಟಿವಿಯಲ್ಲಿ ವಿಡಿಯೋವೊಂದು ಸೆರೆಯಾಗಿದ್ದು, ಒಣಗಿದ ಹುಲ್ಲು ತುಂಬಿಸಿಕೊಂಡಿದ್ದ ಟ್ರ್ಯಾಕ್ಟರ್ ಒಂದು ರಸ್ತೆಯ ತಿರುವಿನಲ್ಲಿ ಆಕಸ್ಮಿಕವಾಗಿ ಮಗುಚಿ ಬಿದ್ದಿದೆ. ಈ ವೇಳೆ ಎದುರಿನಿಂದ ಬರುತ್ತಿದ್ದ ಬೈಕ್ ಸವಾರ ಆ ಟ್ರ್ಯಾಕ್ಟರ್ ಅಡಿ ಸಿಲುಕಿಕೊಂಡಿದ್ದಾರೆ. ಓವರ್‌ಲೋಡ್ ಆಗಿದ್ದ ಟ್ರ್ಯಾಕ್ಟರ್ ಉರುಳಿ ಬಿದ್ದಿದ್ದರಿಂದ ಬೈಕ್ ಸವಾರನಿಗೆ ಗಂಭೀರ ಗಾಯಗಳಾಗಿವೆ. ಈ ವಿಡಿಯೋ ರಸ್ತೆ ಸುರಕ್ಷತೆಯ ಬಗ್ಗೆ ಆತಂಕವನ್ನು ಮೂಡಿಸಿದೆ. ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು…

Read More

ಕಾಂಗ್ರೆಸ್ ಬಹಿರಂಗ ಸಭೆ ವೇಳೆ ಮೊಳಗಿದ ಅಝಾನ್, ಕೈ ಅಭ್ಯರ್ಥಿ ಮಾಡಿದ್ದೇನು ನೋಡಿ

ಬಾಗಲಕೋಟೆ, (ಏಪ್ರಿಲ್ 06): ಬಾಗಲಕೋಟೆ ಉಪಚುನಾವಣೆ (Bagalkot By Election) ಕದನ ರಂಗೇರಿದ್ದು, ಇಂದು (ಏಪ್ರಿಲ್ 06) ಸಿಎಂ ಸಿದ್ದರಾಮಯ್ಯ ಅವರು ಅಭ್ಯರ್ಥಿ ಉಮೇಶ್ ಮೇಟಿ ಪರ ಭರ್ಜರಿ ಮತಯಾಚನೆ ನಡೆಸಿದರು. ಬಸವೇಶ್ವರ ವೃತ್ತದಲ್ಲಿ ನಡೆಯುತ್ತಿದ್ದ ಕಾಂಗ್ರೆಸ್ ಬಹಿರಂಗ ಸಭೆ ವೇಳೆ ಅಝಾನ್ ಕೂಗುತ್ತಿದ್ದಂತೆಯೇ ಅಭ್ಯರ್ಥಿ ಉಮೇಶ್ ಮೇಟಿ ತಮ್ಮ ಭಾಷಣವನ್ನು ನಿಲಿಸಿರುವ ಪ್ರಸಂಗ ನಡೆದಿದೆ. ಸಮೀಪದ‌ ಮಸೀದಿ‌ ಒಂದರಿಂದ ಅಝಾನ್ ಆರಂಭವಾಗ್ತಿದ್ದಂತೆ ಉಮೇಶ ಮೇಟಿ ಭಾಷಣ ನಿಲ್ಲಿಸಿದ್ದು, ಬಳಿಕ ಅಝಾನ್ ಮುಗಿಯುತ್ತಿದ್ದಂತೆಯೇ ಮಾತು ಮುಂದುವರೆಸಿದರು. ಕರ್ನಾಟಕದ…

Read More

ಇಪಿಎಫ್, ಎನ್​ಪಿಎಸ್ ಮತ್ತು ಮ್ಯೂಚುವಲ್ ಫಂಡ್; ರಿಟೈರ್ಮೆಂಟ್ ಪ್ಲಾನಿಂಗ್​ಗೆ ಯಾವುದು ಉತ್ತಮ?

ಭಾರತದಲ್ಲಿ ರಿಟೈರ್ಮೆಂಟ್​ಗೆ ಪ್ಲಾನಿಂಗ್ (Retirement Planning) ಮಾಡುವವರ ಸಂಖ್ಯೆ ಬಹಳ ಕಡಿಮೆ. ಮಧ್ಯ ಮಧ್ಯದಲ್ಲಿ ಬರುವ ಖರ್ಚು ವೆಚ್ಚಗಳಿಗೇ ಎಲ್ಲಾ ಸಂಪಾದನೆ ಸರಿ ಮಾಡಿಕೊಳ್ಳುವುದುಂಟು. ಆಫೀಸ್​ನಲ್ಲಿ ಸಿಗುವ ಇಪಿಎಫ್, ಗ್ರಾಚುಟಿ ಹಣ ನಿವೃತ್ತಿ ನಂತರ ಸಾಕಾಗಬಹುದು ಎಂಬುದು ಬಹಳ ಜನರ ಎಣಿಕೆ. ಆದರೆ, ಇದು ತಪ್ಪು ಎಣಿಕೆ. ಸದ್ಯ ರಿಟೈರ್ಮೆಂಟ್ ಪ್ಲಾನಿಂಗ್​ಗೆ ಮೂರು ರೀತಿಯ ಆಯ್ಕೆಗಳಿವೆ. ಒಂದು, ಇಪಿಎಫ್ ಹಣ. ಎರಡನೆಯದು ಎನ್​ಪಿಎಸ್. ಮೂರನೆಯದು ಮ್ಯೂಚುವಲ್ ಫಂಡ್. ಮೂರನ್ನೂ ಬಳಸಿ ಪ್ಲಾನಿಂಗ್ ಮಾಡಿಕೊಳ್ಳಬಹುದು. ಇಪಿಎಫ್, ಎನ್​ಪಿಎಸ್ ಮತ್ತು…

Read More