Headlines

IPL 2026: ಮುಂಬೈ- ರಾಜಸ್ಥಾನ್ ಪಂದ್ಯ ಯಾವಾಗ ಎಷ್ಟು ಗಂಟೆಗೆ ಆರಂಭ? ಉಚಿತವಾಗಿ ವೀಕ್ಷಿಸುವುದು ಹೇಗೆ?

ಐಪಿಎಲ್ 2026 (IPL 2026) ರ 13 ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ (MI vs RR) ತಂಡಗಳು ಪರಸ್ಪರ ಮುಖಾಮುಖಿಯಾಗಲಿವೆ. ಈ ಟೂರ್ನಿಯಲ್ಲಿ ಎರಡೂ ತಂಡಗಳ ಮೂರನೇ ಪಂದ್ಯ ಇದಾಗಿದೆ. ರಾಜಸ್ಥಾನ್ ರಾಯಲ್ಸ್ ತಂಡ ಗುಜರಾತ್ ಟೈಟಾನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳನ್ನು ಸೋಲಿಸಿ ಸತತ ಎರಡು ಪಂದ್ಯಗಳನ್ನು ಗೆದ್ದು ಬೀಗಿದೆ. ಇತ್ತ ಮುಂಬೈ ಇಂಡಿಯನ್ಸ್ ತನ್ನ ಮೊದಲ ಪಂದ್ಯದಲ್ಲಿ ಕೋಲ್ಕತ್ತಾವನ್ನು ಸೋಲಿಸಿದರೆ, ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೋಲನ್ನು ಎದುರಿಸಿದೆ….

Read More

ಮತ್ತೆ ಸರ್ಕಾರಕ್ಕೆ ಸೆಡ್ಡು ಹೊಡೆಯಲು ಮುಂದಾದ ಸಾರಿಗೆ ನೌಕರರು: ಏ 8ರಂದು ಬಸ್ ಸಂಚಾರ ಡೌಟ್

ಬೆಂಗಳೂರು, ಏಪ್ರಿಲ್ 06: 38 ತಿಂಗಳ ವೇತನ ಹಿಂಬಾಕಿ ‌ಮತ್ತು ಹೊಸ ವೇತನ (Salary Arrears) ಪರಿಷ್ಕರಣೆಗಾಗಿ ಆಗ್ರಹಿಸಿ ಈಗಾಗಲೇ ಸಾರಿಗೆ ನೌಕರರು ಹೋರಾಟಕ್ಕೆ ಮುಂದಾಗಿದ್ದರು. ಆದರೆ ‌ಸರ್ಕಾರ 26 ತಿಂಗಳ ವೇತನ ಹಿಂಬಾಕಿ 2025 ಏಪ್ರಿಲ್​ನಿಂದ ವೇತನ ಪರಿಷ್ಕರಣೆಗೆ ಒಪ್ಪಿಗೆ ನೀಡಿತ್ತು. ಸದ್ಯ ಇದಕ್ಕೆ ಒಪ್ಪದ ಸಾರಿಗೆ ನೌಕರರ ಕೂಟ ಮತ್ತೆ ಹೋರಾಟಕ್ಕೆ ಮುಂದಾಗಿದೆ. ಚಿತ್ರದುರ್ಗದಿಂದ ಬೆಂಗಳೂರಿನ ಫ್ರೀಡಂ ಪಾರ್ಕ್​ವರೆಗೆ ಪಾದಯಾತ್ರೆ ರಾಜ್ಯ ಸರ್ಕಾರ ಸಾರಿಗೆ ನೌಕರರಿಗೆ ನೀಡಬೇಕಿದ್ದ 38 ವೇತನ ಹಿಂಬಾಕಿ 2024ರಿಂದ ಆಗಬೇಕಿದ್ದ,…

Read More

ಅಮೆರಿಕದ ಕದನವಿರಾಮದ ಪ್ರಸ್ತಾಪಕ್ಕೆ ಒಪ್ಪದ ಇರಾನ್ ಹಾಕಿದ ಷರತ್ತುಗಳಿವು

ಟೆಹ್ರಾನ್, ಏಪ್ರಿಲ್ 6: ಅಮೆರಿಕದ ಕದನ ವಿರಾಮ ಪ್ರಸ್ತಾವನೆಯನ್ನು ಇರಾನ್ (Iran War) ತಿರಸ್ಕರಿಸಿದೆ. ಪಾಕಿಸ್ತಾನದ ಮೂಲಕ ತನ್ನ ಪ್ರತಿಕ್ರಿಯೆಯನ್ನು ಟ್ರಂಪ್​ಗೆ ತಲುಪಿಸಿದೆ. ನಾವು ತಾತ್ಕಾಲಿಕ ಕದನ ವಿರಾಮಕ್ಕೆ ಒಪ್ಪುವುದಿಲ್ಲ. ಈ ಯುದ್ಧಕ್ಕೆ ಶಾಶ್ವತ ಅಂತ್ಯ ಹಾಡಬೇಕಾಗಿದೆ ಎಂದು ಇರಾನ್ ಹೇಳಿದೆ. ಇರಾನ್‌ನ ಉತ್ತರದ ಜೊತೆಗೆ ಅಮೆರಿಕಕ್ಕೆ 10 ಷರತ್ತುಗಳನ್ನು ಕೂಡ ವಿಧಿಸಿದೆ. ಇದು ಮಧ್ಯಪ್ರಾಚ್ಯ ಪ್ರದೇಶದಾದ್ಯಂತದ ಘರ್ಷಣೆಗಳನ್ನು ಕೊನೆಗೊಳಿಸುವ ಬೇಡಿಕೆಗಳು, ಹಾರ್ಮುಜ್ ಜಲಸಂಧಿಯ ಮೂಲಕ ಸುರಕ್ಷಿತ ಮಾರ್ಗವನ್ನು ಖಚಿತಪಡಿಸಿಕೊಳ್ಳಲು ಪ್ರೋಟೋಕಾಲ್‌ಗಳು, ನಿರ್ಬಂಧಗಳನ್ನು ತೆಗೆದುಹಾಕುವುದು ಮತ್ತು ಪುನರ್…

Read More

ಗೋಲ್ಡ್ ಒಡಿ, ಇದು ಒಡವೆ ಸಾಲಕ್ಕಿಂತ ಎಷ್ಟು ಭಿನ್ನ, ಎಷ್ಟು ಉಪಯುಕ್ತ? ಇಲ್ಲಿದೆ ಮಾಹಿತಿ

ಬ್ಯಾಂಕ್ ಓವರ್​ಡ್ರಾಫ್ಟ್ ಅಥವಾ ಓ.ಡಿ. ಫೆಸಿಲಿಟಿ (Overdraft facility) ಬಗ್ಗೆ ಗೊತ್ತಿರಬಹುದು. ಅಂಥದ್ದೇ ರೀತಿ ಗೋಲ್ಡ್ ಓವರ್​ಡ್ರಾಫ್ಟ್ (Gold OD) ಸಾಲದ ಸೌಲಭ್ಯ ಇದೆ. ಬಹುತೇಕ ಎಲ್ಲಾ ಬ್ಯಾಂಕುಗಳು ಮತ್ತು ಎನ್​ಬಿಎಫ್​ಸಿಗಳು ಈ ಗೋಲ್ಡ್ ಒ.ಡಿ. ಸೌಲಭ್ಯದ ಆಯ್ಕೆಯನ್ನು ಗ್ರಾಹಕರಿಗೆ ನೀಡುತ್ತವೆ. ಚಿನ್ನ ಅಥವಾ ಒಡವೆ ಮೇಲೆ ಸಾಲ ಬಹಳ ಸುಲಭವಾಗಿ ಸಿಗುತ್ತದೆ. ಇದು ಬಹಳ ಜನಪ್ರಿಯವೂ ಹೌದು. ಆದರೆ, ಗೋಲ್ಡ್ ಓವರ್​ಡ್ರಾಫ್ಟ್ ಲೋನ್ ಇದಕ್ಕಿಂತಲೂ ಹೆಚ್ಚಿನ ಉಪಯುಕ್ತತೆ ಹೊಂದಿದೆ. ಏನಿದು ಗೋಲ್ಡ್ ಓವರ್​ಡ್ರಾಫ್ಟ್ ಫೆಸಿಲಿಟಿ? ಬ್ಯಾಂಕ್​ನಲ್ಲಿ…

Read More

ಸಿಹಿಯಾಗಿರುವ ಆಹಾರವೊಂದೇ ಅಲ್ಲ ನೀವು ಇಷ್ಟಪಟ್ಟು ತಿನ್ನುವ ಉಪ್ಪು ಉಪ್ಪಾಗಿರುವ ಆಹಾರ ಕೂಡ ಶುಗರ್ ಲೆವೆಲ್ ಹೆಚ್ಚಿಸಬಹುದು!

ಸಾಮಾನ್ಯವಾಗಿ ಹೆಚ್ಚು ಸಿಹಿ ತಿನ್ನುವುದರಿಂದ ಮಾತ್ರ ಡಯಾಬಿಟಿಸ್ ಸಮಸ್ಯೆ ಉಂಟಾಗುತ್ತದೆ ಎಂಬುದು ಹಲವರ ನಂಬಿಕೆ. ಅದರಿಂದಲೇ ಡಯಾಬಿಟಿಸ್ (Diabetics) ಇರುವವರಿಗೆ ಸಿಹಿ ಆಹಾರಗಳಿಂದ ದೂರವಿರಲು ಸಲಹೆ ನೀಡಲಾಗುತ್ತದೆ. ಆದರೆ, ಕೆಲವು ಉಪ್ಪಿನ ಅಂಶವಿರುವ ಆಹಾರಗಳ ಸೇವನೆಯಿಂದಲೂ ಈ ರೀತಿ ಸಮಸ್ಯೆಯಾಗಬಹುದು ಎಂಬುದು ತಿಳಿದಿದೆಯೇ… ಹೌದು, ಉಪ್ಪಿನ ಅಂಶವಿರುವ ಆಹಾರ ರಕ್ತದಲ್ಲಿನ ಶುಗರ್ ಮಟ್ಟವನ್ನು ಹೆಚ್ಚಿಸಬಹುದು ಎಂದು ತಜ್ಞರು ಎಚ್ಚರಿಸುತ್ತಾರೆ. ಹಾಗಾದರೆ ಉಪ್ಪಿರುವ ಆಹಾರ ಹೇಗೆ ಶುಗರ್ ಲೆವೆಲ್ ಹೆಚ್ಚಳಕ್ಕೆ ಕಾರಣವಾಗುತ್ತದೆ, ಯಾವ ಆಹಾರಗಳು ಆರೋಗ್ಯಕ್ಕೆ ಅಪಾಯಕಾರಿ, ಡಯಾಬಿಟಿಸ್…

Read More

IPL 2026: ಲೀಗ್ ಹಂತದಲ್ಲಿ ಮತ್ತೆ ಮುಖಾಮುಖಿಯಾಗಲ್ಲ ಆರ್​ಸಿಬಿ- ಸಿಎಸ್​ಕೆ..!

ಅಂತರರಾಷ್ಟ್ರೀಯ ಕ್ರಿಕೆಟ್​ನಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯಕ್ಕೆ ಇರುವಷ್ಟೇ ಮಹತ್ವ ಐಪಿಎಲ್‌ನಲ್ಲಿ (IPL) ಆರ್​ಸಿಬಿ ಹಾಗೂ ಸಿಎಸ್​ಕೆ (RCB vs CSK) ನಡುವಿನ ಪಂದ್ಯಕ್ಕೆ ಇರುತ್ತದೆ. ಈ ಉಭಯ ತಂಡಗಳ ಮುಖಾಮುಖಿಯನ್ನು ನೋಡಲು ಅಭಿಮಾನಿಗಳು ವರ್ಷಗಳಿಂದ ಕಾದು ಕುಳಿತಿರುತ್ತಾರೆ. ಹಾಗೆಯೇ ಪಂದ್ಯಗಳು ನಡೆದಾಗ ಕ್ರೀಡಾಂಗಣಗಳು ತುಂಬಿ ತುಳುಕುತ್ತಿರುತ್ತವೆ. ಇದನ್ನು ಗಮನಿಸಿಯೇ ಬಿಸಿಸಿಐ, ಲೀಗ್ ಹಂತದಲ್ಲಿ ಆರ್​ಸಿಬಿ ಹಾಗೂ ಸಿಎಸ್‌ಕೆ ನಡುವೆ ಎರಡು ಪಂದ್ಯಗಳನ್ನು ಆಯೋಜನೆ ಮಾಡುತ್ತದೆ. ಇದರಿಂದ ಅಭಿಮಾನಿಗಳು ಎರಡು ಬಾರಿ ಈ ತಂಡಗಳ ನಡುವಿನ…

Read More

ಚಾಕೋಲೇಟ್ ಕೊಳ್ಳಲು ಅಂಗಡಿಗೆ ಬಂದ, ಚಿನ್ನದ ಸರ ಎಳೆದುಕೊಂಡು ಓಡಿದ!

ನವದೆಹಲಿ, ಏಪ್ರಿಲ್ 6: ವಿಕ್ಸ್ ಚಾಕೋಲೇಟ್ ಖರೀದಿ ಮಾಡಲು ಅಂಗಡಿಗೆ ಬಂದ ಕಳ್ಳನೊಬ್ಬ ಅಂಗಡಿಯ ಮಾಲೀಕಳ ಕುತ್ತಿಗೆಯಿಂದ ಚಿನ್ನದ ಸರವನ್ನು ಎಳೆದುಕೊಂಡಿದ್ದಾನೆ. ದಿನಸಿ ಅಂಗಡಿಯಲ್ಲಿ ನಡೆದ ಈ ಚಿನ್ನದ ಸರ ಕಿತ್ತುಕೊಂಡ ಘಟನೆ ಅಲ್ಲಿನ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅದರಲ್ಲಿ ಕಳ್ಳನ ಮುಖವೂ ಸ್ಪಷ್ಟವಾಗಿ ದಾಖಲಾಗಿದೆ. ಸಂಜೆ ದಿನಸಿ ಅಂಗಡಿಗೆ ಬಂದ ಅಪರಿಚಿತನೊಬ್ಬ ವಿಕ್ಸ್ ಚಾಕೋಲೇಟ್​ಗಳನ್ನು ಕೇಳಿದ. ಇದಕ್ಕೆ ಅಂಗಡಿಯಲ್ಲಿದ್ದ ಮಹಿಳೆ ಅವನಿಗೆ ವಿಕ್ಸ್ ಕೊಟ್ಟಳು. ಆಗ ಚಿಲ್ಲರೆ ಹಣ ನೀಡಲು ಹತ್ತಿರ ಬಂದ ಆ ಕಳ್ಳ ಆಕೆಯ…

Read More

ಬಿಕ್ಲು ಶಿವ ಕೊಲೆ ಕೇಸ್: ಜೈಲಿನಿಂದ ಹೊರಬಂದಿದ್ದರೂ ಭೈರತಿ ಬಸವರಾಜ್​​ಗೆ ಎದುರಾಯ್ತು ಸಂಕಷ್ಟ

ಬೆಂಗಳೂರು, ಏಪ್ರಿಲ್​​ 06: ರೌಡಿಶೀಟರ್​ ಬಿಕ್ಲು ಶಿವ ಕೊಲೆ ಪ್ರಕರಣ ರಾಜ್ಯ ರಾಜಕೀಯದಲ್ಲಿ ಸಾಕಷ್ಟು ಸಂಚಲನ ಸೃಷ್ಟಿಸಿತ್ತು. ಇದೇ ಕೇಸ್​ನಲ್ಲಿ ಬಂಧನಕ್ಕೊಳಗಾಗಿದ್ದ ಕೆ.ಆರ್ ಪುರಂ ಶಾಸಕ ಭೈರತಿ ಬಸವರಾಜ್ (Byrathi Basavaraj) ಇತ್ತೀಚೆಗೆ ಜಾಮೀನು ಮೇಲೆ ಬಿಡುಗಡೆಯಾಗಿದ್ದರು. ಇದೀಗ ಜಾಮೀನು ರದ್ದುಪಡಿಸುವಂತೆ ಕೋರಿ ಸಿಐಡಿ ಪೊಲೀಸರಿಂದ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಲಾಗಿದೆ. ಆ ಮೂಲಕ ಭೈರತಿ ಬಸವರಾಜ್​​ಗೆ ಮತ್ತೆ ಸಂಕಷ್ಟ ಶುರುವಾಗಿದೆ. ರೌಡಿಶೀಟರ್ ಬಿಕ್ಲು ಶಿವ ಅಲಿಯಾಸ್ ಶಿವಕುಮಾರ್ ಕೊಲೆ ಪ್ರಕರಣದಲ್ಲಿ 5ನೇ ಆರೋಪಿಯಾಗಿರುವ ಕೆ.ಆರ್.ಪುರಂ ಬಿಜೆಪಿ ಶಾಸಕ…

Read More

‘ನಾನು ಸ್ಟಾರ್ ಅಲ್ಲ, ಕಲಾವಿದೆ; ಕಲಾವಿದರಿಗೆ ಸಾವಿಲ್ಲ’: ನಟಿ ಶ್ರುತಿ ಹರಿಹರನ್

ನಟಿ ಶ್ರುತಿ ಹರಿಹರನ್ (Sruthi Hariharan) ಅವರು ಸಿನಿಮಾಗಳ ಆಯ್ಕೆಯಲ್ಲಿ ಬಹಳ ಚ್ಯೂಸಿ. ವಯಸ್ಸು ಆಗುತ್ತಿದ್ದಂತೆಯೇ ಇನ್ನೂ ಉತ್ತಮವಾದ ಪಾತ್ರಗಳು ಸಿಗುತ್ತಿವೆ ಎಂಬ ಖುಷಿ ಅವರಿಗೆ ಇದೆ. ‘ಲೈಫ್ ಚೆನ್ನಾಗಿ ನಡೆಯುತ್ತಿದೆ. ಇನ್ನೊಂದು ಬಿಸ್ನೆಸ್ ಕೂಡ ಶುರು ಮಾಡಿದ್ದೇನೆ. ಮನೆ, ಮಗು, ಸಿನಿಮಾ ಜೊತೆ ಬ್ಯುಸಿ ಆಗಿದ್ದೇನೆ. ಎನ್​ಹೆಚ್​ 66 ಸಿನಿಮಾ ಕೂಡ ನನಗೆ ಚಾಲೆಂಜಿಂಗ್ ಆಗಿದೆ. 15 ವರ್ಷಗಳಲ್ಲಿ ಅಂದಾಜು 40 ಪಾತ್ರ ಮಾಡಿರುತ್ತೇನೆ. ಆದರೆ ಅವುಗಳಿಗಿಂತ ಡಿಫರೆಂಟ್ ಆಗಿರುವ ಪಾತ್ರ ಈ ಸಿನಿಮಾದಲ್ಲಿ ನನಗೆ…

Read More

ಮದುವೆ ಬಳಿಕ ಮೊದಲ ಬಾರಿ ತವರಿಗೆ ಬಂದ ರಶ್ಮಿಕಾ: ಮಗಳಿಗೆ ಬಂಗಲೆ ಗಿಫ್ಟ್ ಕೊಟ್ಟ ತಂದೆ

ಸ್ಯಾಂಡಲ್‌ವುಡ್‌ನಿಂದ ಬಣ್ಣದ ಬದುಕು ಆರಂಭಿಸಿ ಬಳಿಕ ನ್ಯಾಷನಲ್ ಕ್ರಶ್ ಆಗಿ ಮಿಂಚಿದ ನಟಿ ರಶ್ಮಿಕಾ ಮಂದಣ್ಣ ಇತ್ತೀಚೆಗೆ ವಿಜಯ್ ದೇವರಕೊಂಡ (Vijay Deverakonda) ಜೊತೆ ಮದುವೆ ಮಾಡಿಕೊಂಡಿದ್ದರು. ಈಗ ಪತಿಯ ಜೊತೆ ಅವರು ಮೊದಲ ಬಾರಿಗೆ ತವರಿಗೆ ಆಗಮಿಸಿದ್ದಾರೆ. ಮದುವೆಯಾದ ನಂತರ ಇದೇ ಮೊದಲ ಬಾರಿಗೆ ರಶ್ಮಿಕಾ (Rashmika Mandanna) ಅವರು ಕೊಡಗಿನ (Kodagu) ವಿರಾಜಪೇಟೆಗೆ ಭೇಟಿ ನೀಡಿದ್ದಾರೆ. ಹುಟ್ಟುಹಬ್ಬದ ಪ್ರಯುಕ್ತ ಅವರು ತವರಿಗೆ ಬಂದಿದ್ದಾರೆ. ಅವರಿಗೆ ತಂದೆಯಿಂದ ಭರ್ಜರಿ ಉಡುಗೊರೆ ಸಿಕ್ಕಿದೆ. ಭಾನುವಾರ (ಏಪ್ರಿಲ್ 5)…

Read More