Headlines

ಜನಗಣತಿ ಕಾರ್ಯಕ್ಕೆ ಆಸ್ಪತ್ರೆ ಸಿಬ್ಬಂದಿ ನಿಯೋಜನೆ: ರೋಗಿಗಳಿಗೆ ವೈದ್ಯಕೀಯ ಸೇವೆ ಸಿಗೋದು ಡೌಟ್

ಬೆಂಗಳೂರು, ಏಪ್ರಿಲ್ 7: ರಾಜಧಾನಿ ಬೆಂಗಳೂರಿನ (Bangalore) ಸರ್ಕಾರಿ ಆಸ್ಪತ್ರೆಗಳಲ್ಲಿ ಈಗಾಗಲೇ ತಜ್ಞರು ಮತ್ತು ಸಿಬ್ಬಂದಿಯ ಕೊರತೆ ಎದ್ದು ಕಾಣುತ್ತಿದೆ. ಇಂತಹ ಸಂದರ್ಭದಲ್ಲಿ 2027ರ ಜನಗಣತಿ ಸಮೀಕ್ಷಾ ಕಾರ್ಯಕ್ಕೆ ಆರೋಗ್ಯ ಇಲಾಖೆಯ ನೌಕರರನ್ನು ಬಳಸಿಕೊಳ್ಳುತ್ತಿರುವುದು ರೋಗಿಗಳಿಗೆ ಭಾರಿ ಸಂಕಷ್ಟ ತಂದೊಡ್ಡಲಿದೆ. ವೈದ್ಯಕೀಯ ಸೇವೆಗಳ ಮೇಲೆ ಪರಿಣಾಮ ಬೀರಲಿದ್ದು, ಆಸ್ಪತ್ರೆ ಸಿಬ್ಬಂದಿಯನ್ನು ಗಣತಿ ಕಾರ್ಯಕ್ಕೆ ಬಳಸಿಕೊಳ್ಳದಂತೆ ಮನವಿ ಮಾಡಲಾಗಿದೆ. ಯಾರೆಲ್ಲಾ ಜನಗಣತಿ ಕಾರ್ಯಕ್ಕೆ? ವೈದ್ಯಕೀಯ ಶಿಕ್ಷಣ ಇಲಾಖೆ ಮತ್ತು ಆರೋಗ್ಯ ಇಲಾಖೆಯ ಪ್ಯಾರಾ ಮೆಡಿಕಲ್ ಸಿಬ್ಬಂದಿ, ಲ್ಯಾಬ್ ಟೆಕ್ನಿಶಿಯನ್ಸ್,…

Read More

Viral: ನಿರ್ಮಾಣದ ಹೆಸರಿನಲ್ಲಿ ಹದಗೆಟ್ಟ ಬೆಂಗಳೂರು; ವರ್ಷಗಳ ಬಳಿಕ ನಗರಕ್ಕೆ ಮರಳಿದ ವ್ಯಕ್ತಿ ಹೀಗೆಂದಿದ್ದೇಕೆ?

ಬೆಂಗಳೂರು,  ಏಪ್ರಿಲ್‌ 07: ಮಾಯಾನಗರಿ ಬೆಂಗಳೂರು (Bengaluru), ಯುವಕರ ಪಾಲಿಗೆ ಅದೊಂದು ಕನಸಿನ ಲೋಕ, ಹೀಗಾಗಿ ನೂರಾರು ಕನಸುಗಳನ್ನು ಹೊತ್ತು ಇಲ್ಲಿಗೆ ಲಕ್ಷಾಂತರ ಜನರು ಬರುತ್ತಾರೆ. ಹೀಗೆ ಬಂದವರು ಹಾಗೂ ಇಲ್ಲಿನ ನಿವಾಸಿಗಳು ಕೂಡ ಇಲ್ಲಿನ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತುವ ಪ್ರಯತ್ನ ಮಾಡುವುದು ಕಡಿಮೆ. ಹೀಗಿರುವಾಗ ಬೆಂಗಳೂರಿನ ನಿವಾಸಿಯೊಬ್ಬರು ಎರಡು ವರ್ಷಗಳ ಬಳಿಕ ಈ ನಗರಕ್ಕೆ ಮರಳಿದ್ದು, ಇಲ್ಲಿನ ವಾಸ್ತವ ಸ್ಥಿತಿಯನ್ನು ಬಿಚ್ಚಿಟ್ಟಿದ್ದಾರೆ. ನಗರದ ಹದಗೆಡುತ್ತಿರುವ ಸ್ಥಿತಿಯ ಬಗ್ಗೆ ಬೆಂಗಳೂರಿನ ನಿವಾಸಿಯೊಬ್ಬರು ಮಾಡಿದ ಪ್ರಾಮಾಣಿಕ ಪೋಸ್ಟ್…

Read More

ಒಂದೇ ಚಿತ್ರದಲ್ಲಿ ಇಬ್ಬರು ಬಿಗ್ ಬಾಸ್ ವಿನ್ನರ್ಸ್; ಗಮನ ಸೆಳೆದ ‘ಎಲ್ರ ಕಾಲೆಳಿಯುತ್ತೆ ಕಾಲ’ ಟ್ರೇಲರ್

ರ‍್ಯಾಪರ್ ಚಂದನ್ ಶೆಟ್ಟಿ ಅವರು ‘ಬಿಗ್ ಬಾಸ್’ ವಿನ್ನರ್ ಆಗಿ ಗಮನ ಸೆಳೆದರು. ಆ ಬಳಿಕ ಅವರು ನಟನೆಯಲ್ಲಿ ಬ್ಯುಸಿ ಆದರು.ಈಗ ಅವರು ನಟ ಕೂಡ ಹೌದು. ಇನ್ನು, ಮತ್ತೋರ್ವ ಬಿಗ್ ಬಾಸ್ (Bigg Boss) ವಿನ್ನರ್ ಮಂಜು ಪಾವಗಡ ಅವರು ಕಿರುತೆರೆ ಹಾಗೂ ಹಿರಿತೆರೆಯಲ್ಲಿ ಬ್ಯುಸಿ ಇದ್ದಾರೆ. ಇಬ್ಬರೂ ಒಟ್ಟಾಗಿ ನಟಿಸಿರೋ ‘ಎಲ್ರ ಕಾಲೆಳಿಯುತ್ತೆ ಕಾಲ’ ಟ್ರೇಲರ್ ರಿಲೀಸ್ ಆಗಿದೆ. ಈ ಸಿನಿಮಾಗೆ ನಟ ಸುಜಯ್ ಶಾಸ್ತ್ರಿ ನಿರ್ದೇಶನ ಇದೆ. ಅರ್ಚನಾ ಕೊಟ್ಟಿಗೆ ನಾಯಕಿ ಆಗಿರೋ…

Read More

Gold Rates: ಚಿನ್ನದ ಬೆಲೆಯಲ್ಲಿ ಅಲ್ಪ ಇಳಿಕೆ; ಇಲ್ಲಿದೆ ದರಪಟ್ಟಿ

ಬೆಂಗಳೂರು, ಏಪ್ರಿಲ್ 7: ಚಿನ್ನದ ಬೆಲೆ ಅಕ್ಷರಶಃ ಪ್ರಕ್ಷುಬ್ದತೆಯ ಸ್ವಭಾವ ಪಡೆದಿದೆ. ದಿನವೂ ಏರಿಳಿತಗಳನ್ನು ಕಾಣುತ್ತಿದೆ. ಒಂದೇ ದಿನದಲ್ಲಿ ಬೆಲೆಯಲ್ಲಿ (Gold Rates) ಬದಲಾವಣೆ ಆಗುತ್ತಿದೆ. ನಿನ್ನೆ ಬೆಳಗ್ಗೆ 165 ರೂ ಇಳಿದಿದ್ದ ಚಿನ್ನದ ಬೆಲೆ ಸಂಜೆ ಸುಮಾರು 150 ರೂಗಳಷ್ಟು ಏರಿತ್ತು. ಇವತ್ತು ಮಂಗಳವಾರ ಬೆಳಗ್ಗೆ ಬೆಲೆ 75 ರೂನಷ್ಟು ಕಡಿಮೆಗೊಂಡಿದೆ. ವಿದೇಶಗಳಲ್ಲೂ ಇದೇ ರೀತಿ ಏರಿಳಿತದ ಆಟ ನಡೆದಿದೆ. ಈ ಮಧ್ಯೆ ಬೆಳ್ಳಿ ಬೆಲೆಯ ಸ್ಥಿರತೆ ಮುಂದುವರಿದಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22…

Read More

ಪ್ರೀ ರಿಲೀಸ್​​ನಲ್ಲಿ ಕಾರ್ಯಕ್ರಮದಲ್ಲಿ ಎಐ ಬಳಕೆ: ನಟನ ಬುದ್ಧಿವಂತಿಕೆ ಮೆಚ್ಚಿದ ಅಭಿಮಾನಿಗಳು

ಪ್ಯಾನ್ ಇಂಡಿಯಾ (Pan India) ಸಿನಿಮಾಗಳ ಹವಾ ಜೋರಾದ ಮೇಲೆ ಸ್ಟಾರ್ ನಟರು ಬೇರೆ ಬೇರೆ ರಾಜ್ಯಗಳಲ್ಲಿ ಸಿನಿಮಾ ಪ್ರಚಾರ ಮಾಡುವುದು ಕಡ್ಡಾಯ ಆಗಿಬಿಟ್ಟಿದೆ. ಆದರೆ 22 ಅಧಿಕೃತ ಭಾಷೆಗಳಿರುವ ಭಾರತದಲ್ಲಿ ಎಲ್ಲ ಪ್ರೇಕ್ಷಕರನ್ನು ಅವರ ಸ್ವಂತ ಭಾಷೆಗಳ ಮೂಲಕ ತಲುಪುವುದು ಬಹಳ ಕಷ್ಟ. ಎಷ್ಟೋ ಮಂದಿ ಸ್ಟಾರ್ ನಟರು, ತಮ್ಮ ಭಾಷೆಯ ಮಿತಿಯಿಂದಾಗಿಯೇ ಬೇರೆ ರಾಜ್ಯಗಳಿಗೆ ಪ್ರಚಾರಕ್ಕೆ ಹೋಗುವುದಿಲ್ಲ. ಆದರೆ ಇದೀಗ ಯುವ ನಟನೊಬ್ಬ ಬುದ್ಧಿವಂತಿಕೆ ತೋರಿಸಿದ್ದು, ಎಐ ಬಳಸಿ ಬೇರೆ ರಾಜ್ಯದಲ್ಲಿ ಪ್ರಚಾರ ಮಾಡಿರುವುದು…

Read More

ಕೋಟ್ಯಾಂತರ ರೂ. ಮೌಲ್ಯದ ಕಾಮಗಾರಿಗಳನ್ನು ನಿರ್ವಹಿಸುತ್ತಿದ್ದ ಕಂಟ್ರಾಕ್ಟರ್ ಅನುಮಾನಾಸ್ಪದ ಸಾವು!

ಮಂಡ್ಯ, ಏಪ್ರಿಲ್ 07: ಜಿಲ್ಲೆಯಲ್ಲಿ ಪ್ರಥಮ ದರ್ಜೆ ಕಂಟ್ರಾಕ್ಟರ್ ಒಬ್ಬರು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಆತಂಕ ಮೂಡಿಸಿದೆ. ಶ್ರೀರಂಗಪಟ್ಟಣ ತಾಲೂಕಿನ ಹುಣಸನ ಹಳ್ಳಿಯ ನಿವಾಸಿ ಪವನ್ (27) ಎಂಬ ಯುವಕನ ಶವ ಕಾವೇರಿ ನದಿಯಲ್ಲಿ (Cauvery River) ಪತ್ತೆಯಾಗಿದ್ದು, ಈ ಪ್ರಕರಣ ಹಲವು ಪ್ರಶ್ನೆಗಳನ್ನು ಹುಟ್ಟಿಸಿದೆ. ಮನೆಗೆ ಬರುವುದಿಲ್ಲ ಎಂದು ಹೇಳಿ ಹೋದವನು ಶವವಾಗಿ ಪತ್ತೆ! ಪವನ್ ಕೋಟ್ಯಾಂತರ ರೂಪಾಯಿ ಮೌಲ್ಯದ ಕಾಮಗಾರಿಗಳನ್ನು ನಿರ್ವಹಿಸುತ್ತಿದ್ದ ಕಂಟ್ರಾಕ್ಟರ್ ಆಗಿದ್ದು, ನಾಲ್ಕು ದಿನಗಳ ಹಿಂದೆ ಕೆಲಸ ಇದೆ, ಇಂದು ಮನೆಗೆ…

Read More

Hanuman Puja: ಮಂಗಳವಾರ ಹನುಮಂತನ ಪೂಜೆ ಏಕೆ ಶ್ರೇಷ್ಠ? ಉಪವಾಸದ ವೇಳೆ ಈ ತಪ್ಪು ಮಾಡಲೇಬೇಡಿ!

ಹಿಂದೂ ಧರ್ಮದ ಸಂಪ್ರದಾಯದಲ್ಲಿ ವಾರದ ಏಳೂ ದಿನಗಳು ಒಂದೊಂದು ದೇವತೆಗೆ ಮೀಸಲಾಗಿವೆ. ಅದರಂತೆ, ಮಂಗಳವಾರವನ್ನು ಶ್ರೀರಾಮನ ಪರಮ ಭಕ್ತನಾದ ಹನುಮಂತನಿಗೆ ಅಥವಾ ಬಜರಂಗಬಲಿಗೆ ಸಮರ್ಪಿಸಲಾಗಿದೆ. ಈ ದಿನದಂದು ಆಂಜನೇಯನನ್ನು ವಿಶೇಷ ವಿಧಿವಿಧಾನಗಳೊಂದಿಗೆ ಪೂಜಿಸುವುದು ಮತ್ತು ಉಪವಾಸ ಮಾಡುವುದು ಬಹಳ ಹಿಂದಿನಿಂದಲೂ ನಡೆದುಬಂದಿರುವ ಪದ್ಧತಿಯಾಗಿದೆ. ಹೀಗೆ ಮಾಡುವುದರಿಂದ ಹನುಮಂತನು ಪ್ರಸನ್ನನಾಗಿ ಭಕ್ತರ ಜೀವನದಲ್ಲಿರುವ ಎಲ್ಲಾ ಅಡೆತಡೆಗಳನ್ನು ನಿವಾರಿಸುತ್ತಾನೆ ಮತ್ತು ಸಕಲ ಭಯಗಳನ್ನು ದೂರಮಾಡಿ ಆಶೀರ್ವದಿಸುತ್ತಾನೆ ಎಂಬ ಬಲವಾದ ನಂಬಿಕೆಯಿದೆ. ಪೌರಾಣಿಕ ಹಿನ್ನೆಲೆಯನ್ನು ಗಮನಿಸಿದರೆ, ಹನುಮಂತನು ಜನಿಸಿದ್ದು ಮಂಗಳವಾರದಂದು ಎಂದು…

Read More

ಇರಾನ್​ನ ಸರ್ವೋಚ್ಚ ನಾಯಕ ಮೊಜ್ತಬಾಗೆ ಪ್ರಜ್ಞೆ ಇಲ್ಲ, ಯಾವ ನಿರ್ಧಾರಗಳನ್ನು ತೆಗೆದುಕೊಳ್ಳುವ ಸ್ಥಿತಿಯಲ್ಲಿಲ್ಲ

ಟೆಹ್ರಾನ್, ಏಪ್ರಿಲ್ 07: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಉದ್ವಿಗ್ನತೆಯ ನಡುವೆ, ಇರಾನ್‌(Iran)ನ ಹೊಸ ಸರ್ವೋಚ್ಚ ನಾಯಕನ ಬಗ್ಗೆ ಮಾಹಿತಿಯೊಂದು ಹೊರಬಿದ್ದಿದೆ. ಮೊಜ್ತಬಾ ಖಮೇನಿಗೆ ಪ್ರಜ್ಞೆ ಇಲ್ಲ, ಯಾವ ನಿರ್ಧಾರಗಳನ್ನೂ ತೆಗೆದುಕೊಳ್ಳುವ ಸ್ಥಿತಿಯಲ್ಲಿಲ್ಲ ಎನ್ನುವ ಮಾಹಿತಿ ಲಭ್ಯವಾಗಿದೆ. ಅಮೆರಿಕ ಮತ್ತು ಇಸ್ರೇಲಿ ಗುಪ್ತಚರ ಮೂಲಗಳನ್ನು ಆಧರಿಸಿದ ವರದಿಗಳ ಪ್ರಕಾರ, ಮೊಜ್ತಬಾ ಖಮೇನಿ ಅವರು ಕೋಮ್ ನಗರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಜ್ಞಾಹೀನರಾಗಿದ್ದಾರೆ. ಆದಾಗ್ಯೂ, ಅವರ ಸ್ಥಿತಿಯ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ಬಂದಿಲ್ಲ. ಯುದ್ಧದ ಮೊದಲ ದಿನದಂದು ಅವರ ತಂದೆ, ಅಲಿ…

Read More

Anthills Pooja: ಹುತ್ತಗಳಿಗೆ ಪೂಜೆ ಮಾಡುವ ಮುನ್ನ ಈ ವಿಷ್ಯ ತಿಳಿದುಕೊಳ್ಳಿ

ಹಿಂದೂ ಸನಾತನ ಸಂಸ್ಕೃತಿಯ ಒಂದು ವಿಶಿಷ್ಟ ಆಚರಣೆಯಾದ ಹುತ್ತದ ಪೂಜೆಯ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ನೀಡಿರುವ ಮಾಹಿತಿ ಇಲ್ಲಿದೆ. ಹಿಂದೂ ಪರಂಪರೆಯಲ್ಲಿ ಕಲ್ಲು, ಮಣ್ಣು, ವಿಗ್ರಹ, ಮರ, ಗಿಡ, ನೀರು ಎಲ್ಲವನ್ನೂ ಪವಿತ್ರ ಭಾವನೆಯಿಂದ ಭಗವಂತನ ಸ್ವರೂಪವೆಂದು ಆರಾಧಿಸಲಾಗುತ್ತದೆ. ಈ ಆಚರಣೆಗಳಲ್ಲಿ ಹುತ್ತಕ್ಕೆ ಪೂಜೆ ಮಾಡುವುದು, ನಮಸ್ಕಾರ ಮಾಡುವುದು, ಹಾಲು ಎರೆದು ನೈವೇದ್ಯ ಅರ್ಪಿಸುವುದು ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಿರುವ ಪದ್ಧತಿಯಾಗಿದೆ. ನಮ್ಮ ಶೋಡಶೋಪ…

Read More

ಪರಮಾಣು ಕ್ಷೇತ್ರದಲ್ಲಿ ಭಾರತದ ನಿರ್ಣಾಯಕ ಹೆಜ್ಜೆ, ದೇಶಕ್ಕೆ ಇದು ಹೆಮ್ಮೆಯ ಕ್ಷಣ: ಪ್ರಧಾನಿ ಮೋದಿ

ನವದೆಹಲಿ, ಏಪ್ರಿಲ್ 07: ಇಂದು ಭಾರತವು ಪರಮಾಣು ಕ್ಷೇತ್ರದಲ್ಲಿ ನಿರ್ಣಾಯಕ ಹೆಜ್ಜೆಯನ್ನು ಇಟ್ಟಿದೆ. ತನ್ನ ಪರಮಾಣು ಕಾರ್ಯಕ್ರಮದ ಎರಡನೇ ಹಂತವನ್ನು ಪೂರೈಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ(Narendra Modi) ಹೇಳಿದ್ದಾರೆ. ಕಲ್ಪಾಕಂನಲ್ಲಿರುವ ಭಾರತದ 500 ಮೆಗಾವ್ಯಾಟ್ ಮಾದರಿ ಫಾಸ್ಟ್ ಬ್ರೀಡರ್ ರಿಯಾಕ್ಟರ್ (ಪಿಎಫ್‌ಬಿಆರ್) ಕಾರ್ಯಾರಂಭ ಮಾಡಿದೆ. ಇದು ದೇಶದ ನಾಗರಿಕ ಪರಮಾಣು ಕಾರ್ಯಕ್ರಮದ ಎರಡನೇ ಹಂತವನ್ನು ಮುನ್ನಡೆಸುವಲ್ಲಿ ನಿರ್ಣಾಯಕ ಹೆಜ್ಜೆ ಎಂದು ಕರೆದಿದ್ದಾರೆ. ಇಂದು ಎಕ್ಸ್​​ನಲ್ಲಿ ಪೋಸ್ಟ್ ಮಾಡಿರುವ ಅವರು, ಕಲ್ಪಾಕಂನಲ್ಲಿರುವ ಸ್ಥಳೀಯವಾಗಿ ವಿನ್ಯಾಸಗೊಳಿಸಲಾದ ಮತ್ತು ನಿರ್ಮಿಸಲಾದ…

Read More