Category Archives: Blog

Your blog category

ಆಟೋ ಗ್ಯಾಸ್ ಎಮರ್ಜೆನ್ಸಿ: ಎಲ್‌ಪಿಜಿ ಬಂಕ್‌ಗಳ ಎದುರು ಮುಂದುವರಿದ ಸರದಿ ಸಾಲು, ಕರ್ನಾಟಕ ಬಂದ್ ಎಚ್ಚರಿಕೆ

ಆಟೋ ಗ್ಯಾಸ್ ಎಮರ್ಜೆನ್ಸಿ: ಎಲ್‌ಪಿಜಿ ಬಂಕ್‌ಗಳ ಎದುರು ಮುಂದುವರಿದ ಸರದಿ ಸಾಲು, ಕರ್ನಾಟಕ ಬಂದ್ ಎಚ್ಚರಿಕೆ

ಬೆಂಗಳೂರು, ಏಪ್ರಿಲ್ 7: ಕರ್ನಾಟಕದಲ್ಲಿ (Karnataka) ಆಟೋ ಗ್ಯಾಸ್ (LPG) ಅಭಾವ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಗ್ಯಾಸ್‌ಗಾಗಿ ಎಲ್‌ಪಿಜಿ ಬಂಕ್‌ಗಳ ಮುಂದೆ ಆಟೋ ಸಾರಥಿಗಳು ಕಿಲೋಮೀಟರ್‌ಗಟ್ಟಲೆ ಕ್ಯೂ ನಿಲ್ಲುವಂತಾಗಿದ್ದು, ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಸಮಸ್ಯೆಯನ್ನು ಬಗೆಹರಿಸದಿದ್ದರೆ ‘ಕರ್ನಾಟಕ ಬಂದ್’ ಮಾಡುವುದಾಗಿ ಆಟೋ ಸಂಘಟನೆಗಳು ಸರ್ಕಾರಕ್ಕೆ ಎಚ್ಚರಿಕೆ ನೀಡಿವೆ. ಬೆಂಗಳೂರಿನ ಗಿರಿನಗರ, ಹೆಬ್ಬಾಳ, ಸಾರಕ್ಕಿ, ಸಜ್ಜನ್ ರಾವ್ ಸರ್ಕಲ್ ಸೇರಿದಂತೆ ರಾಜ್ಯದ ಹಲವೆಡೆ ಆಟೋ ಚಾಲಕರು ಇಡೀ ದಿನ ದುಡಿಮೆ ಬಿಟ್ಟು ಗ್ಯಾಸ್‌ಗಾಗಿ ಕಾಯುತ್ತಿದ್ದಾರೆ. ಸೋಮವಾರವಷ್ಟೇ ಆಹಾರ ಸಚಿವ ಕೆಹೆಚ್ ಮುನಿಯಪ್ಪ ಅವರ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ್ದ ಚಾಲಕರು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದರು.

ಸಚಿವ ಮುನಿಯಪ್ಪ ಭರವಸೆ ಮತ್ತು ಕೇಂದ್ರಕ್ಕೆ ಪತ್ರ

ಚಾಲಕರ ಅಹವಾಲು ಆಲಿಸಿದ ಸಚಿವ ಕೆ.ಹೆಚ್. ಮುನಿಯಪ್ಪ, ಏಪ್ರಿಲ್ 10ರಂದು ಸಭೆ ನಡೆಸಿ ಸಮಸ್ಯೆ ಇತ್ಯರ್ಥಪಡಿಸುವುದಾಗಿ ಭರವಸೆ ನೀಡಿದ್ದಾರೆ. ಅಲ್ಲದೆ, ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಅವರಿಗೆ ಪತ್ರ ಬರೆದಿರುವ ಮುನಿಯಪ್ಪ, ‘ಕರ್ನಾಟಕದಲ್ಲಿ ಎಲ್‌ಪಿಜಿ ಅಭಾವ ತೀವ್ರವಾಗಿದೆ. ಕೆಲವು ಖಾಸಗಿ ವಿತರಣಾ ಕೇಂದ್ರಗಳು ಹೆಚ್ಚಿನ ದರ ವಸೂಲಿ ಮಾಡುತ್ತಿವೆ. ನಿಗದಿತ ದರದಲ್ಲೇ ಗ್ಯಾಸ್ ಪೂರೈಕೆಯಾಗುವಂತೆ ಕ್ರಮ ಕೈಗೊಳ್ಳಿ’ ಎಂದು ಮನವಿ ಮಾಡಿದ್ದಾರೆ.

ಇದನ್ನೂ ಓದಿ: ‘ಬೆಂಗಳೂರು ಟ್ರಾಫಿಕ್ ನಿಮಗೆ ತಾಳ್ಮೆಯ ಪಾಠ ಕಲಿಸುತ್ತೆ’: ರೋಡ್ ರೇಜ್ ಪ್ರಕರಣದಲ್ಲಿ ಟೆಕ್ಕಿಗೆ ಹೈಕೋರ್ಟ್ ಚಾಟಿ!

ಇತ್ತ ಬಾಗಲಕೋಟೆಯಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿರುವ ಸಿಎಂ ಸಿದ್ದರಾಮಯ್ಯ, ‘ಗ್ಯಾಸ್ ಸಿಲಿಂಡರ್ ಒದಗಿಸುವುದು ಪ್ರಧಾನಿ ಮೋದಿ ಅವರ ಜವಾಬ್ದಾರಿ. ಗ್ಯಾಸ್ ಸಿಗದೆ ಜನರು ತೊಂದರೆ ಅನುಭವಿಸುತ್ತಿದ್ದಾರೆ’ ಎಂದು ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಪ್ರತಿಭಟನೆಯ ಎಚ್ಚರಿಕೆ

ನಮಗೆ ತಕ್ಷಣ ಪರಿಹಾರ ಸಿಗದಿದ್ದರೆ ಪ್ರತಿಭಟನೆ ತೀವ್ರಗೊಳಿಸುತ್ತೇವೆ ಎಂದು ಪೀಸ್ ಆಟೋ ಸಂಘಟನೆಯ ಅಧ್ಯಕ್ಷ ರಘು ಎಚ್ಚರಿಕೆ ನೀಡಿದ್ದಾರೆ. ಅಲ್ಲದೆ, ಏಪ್ರಿಲ್ 9 ಗುರುವಾರದಂದು ‘ಕರಾಳ ದಿನ’ ಆಚರಿಸಿ, ಆಟೋಗಳಿಗೆ ಕಪ್ಪು ಬಾವುಟ ಕಟ್ಟಿ ಪ್ರತಿಭಟಿಸಲು ನಿರ್ಧರಿಸಲಾಗಿದೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ರಾಜ್ಯಾದ್ಯಂತ ಬಂದ್ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Bengaluru Air Quality: ಅಂತೂ ಇಂತೂ ಸುಧಾರಿಸಿತು ಬೆಂಗಳೂರಿನ ಏರ್ ಕ್ವಾಲಿಟಿ!

ಬೆಂಗಳೂರು, ಏಪ್ರಿಲ್ 07: ಕಳೆದ ಹಲವು ದಿನಗಳಿಂದ ಬೆಂಗಳೂರು ಸೆರಿದಂತೆ ರಾಜ್ಯದ ವಿವಿಧೆಡೆ ವಾಯು ಗುಣಮಟ್ಟ (Bengaluru Air Quality) ಸುಧಾರಿಸುತ್ತಿದೆ. ಇಷ್ಟು ದಿನ ಉಸಿರಾಟಕ್ಕೂ ಮಾರಕವಾಗಿದ್ದ ಗಾಳಿಯು ಇಂದು ಒಳ್ಳೆಯ ಗುಣಮಟ್ಟದಲ್ಲಿರುವುದು ಸ್ವಲ್ಪಮಟ್ಟಿಗೆ ಆತಂಕವನ್ನು ಕಡಿಮೆಯಾಗಿಸಿದೆ. ಆದರೂ ವಾಯು ಗುಣಮಟ್ಟ ಎಲ್​ಲೆಡೆಯೂ ಅನಾರೋಗ್ಯಕರ ಮಟ್ಟದಲ್ಲಿಯೆ ಇದೆ ಎಂದು ತಜ್ಞರು ತಿಳಿಸಿದ್ದಾರೆ.

ಉಡುಪಿ, ಮಂಗಳೂರು ಸೇರಿದಂತೆ ಇಂದು ಹಲವೆಡೆ ವಾಯು ಗುಣಮಟ್ಟ ಸುಧಾರಿಸಿದೆ. ಕೆಲ ದಿನಗಳ ಹಿಂದೆಯಷ್ಟೇ ತೀವ್ರ ಕಳಪೆ ಮಟ್ಟಕ್ಕೆ ಇಳಿದಿದ್ದ ಬೆಂಗಳೂರಿನ ಏರ್ ಕ್ವಾಲಿಟಿ ಇಂದು 94ಕ್ಕೆ ತಲುಪಿದೆ. ಬೆಂಗಳೂರಿನ AQI ಇನ್ನೂ ಆರೋಗ್ಯಕ್ಕೆ ಮಾರಕವಾಗಿಯೇ ಇದೆ. ಕಳೆದ ಕೆಲ ದಿನಗಳಿಗೆ ಹೋಲಿಸಿದರೆ ಅಂಕೆಗಳಲ್ಲಿ ಸಣ್ಣ ಏರುಪೇರು ಕಂಡರೂ, WHO ಮಾನದಂಡಗಳ ಪ್ರಕಾರ ಈ ಮಟ್ಟದ ಗಾಳಿಯ ಗುಣಮಟ್ಟ ಆರೋಗ್ಯಕ್ಕೆ ಹಾನಿಕರವಾಗಿಯೇ ಉಳಿದಿದೆ.

ರಾಜ್ಯದ ಇತರ ನಗರದಲ್ಲಿ ಇಂದಿನ ಗಾಳಿಯ ಗುಣಮಟ್ಟ (Air Quality Index)

  • ಬೆಂಗಳೂರು – 94
  • ಮಂಗಳೂರು-87
  • ಮೈಸೂರು –93
  • ಬೆಳಗಾವಿ – 128
  • ಕಲಬುರ್ಗಿ-71
  • ಶಿವಮೊಗ್ಗ – 54
  • ಬಳ್ಳಾರಿ – 66
  • ಹುಬ್ಬಳ್ಳಿ- 146
  • ಉಡುಪಿ –89
  • ವಿಜಯಪುರ –86

ಗಾಳಿ ಗುಣಮಟ್ಟ ತಿಳಿಯುವುದು ಹೇಗೆ?

  • ಉತ್ತಮ- 0-50
  • ಮಧ್ಯಮ – 50-100
  • ಕಳಪೆ – 100-150
  • ಅನಾರೋಗ್ಯಕರ – 150-200
  • ಗಂಭೀರ – 200 – 300
  • ಅಪಾಯಕಾರಿ – 300 -500+

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬೆಂಗಳೂರಿನ ಯುವತಿ ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮಹಾಕುಂಭದ ವೇಳೆ ಫೇಮಸ್ ಆಗಿದ್ದ ಐಐಟಿ ಬಾಬಾ

ಜಜ್ಜರ್​​ಸಿಂಗ್, ಏಪ್ರಿಲ್ 07: ಪ್ರಯಾಗ್​ರಾಜ್​ನಲ್ಲಿ ನಡೆದ ಮಹಾ ಕುಂಭಮೇಳದ ಸಮಯದಲ್ಲಿ ಫೇಮಸ್ ಆಗಿದ್ದ ಐಐಟಿ ಬಾಬಾ ಅಭಯ್ ಸಿಂಗ್ ಬೆಂಗಳೂರಿನ ಯುವತಿ ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.ಅವರು ಮತ್ತು ಅವರ ಪತ್ನಿ ಪ್ರೀತಿಕಾ ಮೊದಲ ಬಾರಿಗೆ ತಮ್ಮ ಹುಟ್ಟೂರು ಜಜ್ಜರ್‌ಗೆ ಭೇಟಿ ನೀಡಿದ್ದರು, ಅಲ್ಲಿ ಅವರನ್ನು ನೋಡಲು ಮತ್ತು ಸ್ವಾಗತಿಸಲು ಜನಸಮೂಹ ಸೇರಿತ್ತು. ಅಭಯ್ ತನ್ನ ಬ್ಯಾಂಕ್ ಖಾತೆಯ KYC ನವೀಕರಿಸಲು ತನ್ನ ಪತ್ನಿಯೊಂದಿಗೆ  ಜಜ್ಜರ್‌ಗೆ ಬಂದಿದ್ದರು.ಈ ಸಮಯದಲ್ಲಿ, ಅವರು ತಹಸಿಲ್ ಸಂಕೀರ್ಣದಲ್ಲಿರುವ ತಮ್ಮ ವಕೀಲ ಕರಣ್ ಸಿಂಗ್ ಗ್ರೆವಾಲ್ ಅವರ ಕೊಠಡಿಯಲ್ಲಿ ಸ್ವಲ್ಪ ಸಮಯ ಕಳೆದರು ಮತ್ತು ಅಲ್ಲಿ ಮಾಧ್ಯಮದವರನ್ನು ಸಹ ಭೇಟಿಯಾದರು. ಈ ಸಂದರ್ಭದಲ್ಲಿ ಅಭಯ್, ತಮ್ಮ ಪತ್ನಿ ಪ್ರೀತಿಕಾ ಬೆಂಗಳೂರಿನ ನಿವಾಸಿಯಾಗಿರುವುದಾಗಿ ಹೇಳಿದ್ದಾರೆ.

 

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

‘ಅಮೃತಧಾರೆ’ ಮಲ್ಲಿಗೆ ಸಾಗರ ಎಂದರೆ ಬಲು ಇಷ್ಟ; ಏಕೆ?

ಜೀ ಕನ್ನಡದಲ್ಲಿ ಪ್ರಸಾರ ಕಾಣುತ್ತಿರುವ ‘ಅಮೃತಧಾರೆ’ ಧಾರಾವಾಹಿ (Amruthadhare Serial) ಸಾಕಷ್ಟು ಗಮನ ಸೆಳೆಯುತ್ತಿದೆ. ಈ ಧಾರಾವಾಹಿ ಭರ್ಜರಿ ಮೆಚ್ಚುಗೆ ಪಡೆಯುತ್ತಿದೆ. ಟಿಆರ್ಪಿಯಲ್ಲೂ ಧಾರಾವಾಹಿ ಟಾಪ್ ಐದರಲ್ಲಿ ಸ್ಥಾನ ಪಡೆದಿರುವುದು ವಿಶೇಷ. ಈ ಧಾರಾವಾಹಿಯಲ್ಲಿ ಗೌತಮ್ ಹಾಗು ಭೂಮಿಕಾ ಪಾತ್ರ ಮಾಡಿರುವ ರಾಜೇಶ್ ನಟರಂಗ ಹಾಗೂ ಛಾಯಾ ಸಿಂಗ್ ಎಷ್ಟು ಗಮನ ಸೆಳೆದಿದ್ದಾರೋ, ಮಲ್ಲಿ ಪಾತ್ರ ಮಾಡಿರುವ ಅನ್ವಿತಾ ಕೂಡ ಮೆಚ್ಚುಗೆ ಪಡೆದಿದ್ದಾರೆ. ಅವರ ಪಾತ್ರ ಗಮನ ಸೆಳೆದಿದೆ.

‘ಅಮೃತಧಾರೆ’ ಧಾರಾವಾಹಿಯಲ್ಲಿ ಮಲ್ಲಿ ಪಾತ್ರದಲ್ಲಿ ಮೊದಲು ರಾಧಾ ಭಗವತಿ ಕಾಣಿಸಿಕೊಂಡಿದ್ದರು. ಅವರಿಗೆ ಕಲರ್ಸ್ ಕನ್ನಡದಲ್ಲಿ ‘ಭಾರ್ಗವಿ ಎಲ್ಎಲ್ಬಿ’ ಧಾರಾವಾಹಿ ಸಿಕ್ಕಿತು. ಆ ಬಳಿಕ ಅವರು ಧಾರಾವಾಹಿ ಬಿಟ್ಟರು ಮತ್ತು ಈ ಧಾರಾವಾಹಿ ಆಫರ್ ಅನ್ವಿತಾ ಅವರಿಗೆ ಹೋಯಿತು. ಅವರಿಗೆ ಸಾಗರ ಎಂದರೆ ಬಲು ಇಷ್ಟವಂತೆ.

ಅನ್ವಿತಾ ಸಾಗರ್ ಅವರದ್ದು ಮೂಲ ಶಿವಮೊಗ್ಗ ಜಿಲ್ಲೆಯ ಸಾಗರ. ಅವರು ಹುಟ್ಟಿದ್ದು ಇಲ್ಲಿ. ಅವರ ಅಪ್ಪ-ಅಮ್ಮ, ಅಣ್ಣ ಮಂಗಳೂರಿನಲ್ಲೇ ಇದ್ದಾರೆ. ಅವರಿಗೆ ಸಾಗರ ಎಂದರೆ ವಿಶೇಷ ಪ್ರೀತಿ ಇದೆ. ತಾವು ಹುಟ್ಟಿದ ಊರು ಎಂದು ಅವರಿಗೆ ವಿಶೇಷ ಪ್ರೀತಿ ಇದೆ. ಅನ್ವಿತಾ ಸಾಗರ್ ಅವರ ಸಹೋದರ ಅನೂಪ್ ತುಳು ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ.

ಸಾಗರದ ಇಕ್ಕೇರಿ, ಕೆಳದಿ, ಮನೆ ಜಾಗ ಎಲ್ಲವೂ ಇಷ್ಟ. ಅಲ್ಲಿನ ಹಸಿರು ಪರಿಸರ ಇಷ್ಟ ಆಗುತ್ತದೆ. ಅವರಿಗೆ ಜೋಗ್ ಪಾಲ್ ಕೂಡ ಇಷ್ಟ. ಮಂಗಳೂರಿನಲ್ಲಿ ಕುಟುಂಬದವರ ಇದ್ದಾರೆ. ಅವರ ಮನೆಯ ಅಡುಗೆಯನ್ನು ಊಟ ಮಾಡಬಹುದು. ಬೆಂಗಳೂರಲ್ಲಿ ಅವರಿಗೆ ಒಂಟಿತನ ಕಾಡುತ್ತದೆಯಂತೆ. .

ಇದನ್ನೂ ಓದಿ: ಅಮೃತಧಾರೆ: ಹೆಣ್ಣಿನ ಕಣ್ಣೀರು ಯುದ್ಧದ ಆರಂಭ; ಜೆಡಿಗೆ ಮಲ್ಲಿಯ ಎಚ್ಚರಿಕೆ

ಅನ್ವಿತಾ ಸಾಗರ್ ಅವರು ಮಲ್ಲಿಯಾಗಿ ಎಲ್ಲರಿಗೂ ಇಷ್ಟ ಆಗಿದ್ದಾರೆ. ಅವರ ನಟನೆಗೆ ಎಲ್ಲರೂ ಭೇಷ್ ಎನ್ನುತ್ತಿದ್ದಾರೆ. ಈಗ ಮಲ್ಲಿಗೆ ಎರಡನೇ ಮದುವೆ ಆಗಿದೆ. ಇಲ್ಲಿಂದ ಅವರ ಜೀವನ ಸಂಪೂರ್ಣ ಬದಲಾಗುವ ನಿರೀಕ್ಷೆ ಇದೆ. ಅವರು ಈಗ ಸಿವಿಲ್ ಪರೀಕ್ಷೆ ಪಾಸ್ ಆಗಿದ್ದು, ಸರ್ಕಾರಿ ಅಧಿಕಾರಿ ಆಗುವ ಸಾಧ್ಯತೆಯೂ ದಟ್ಟವಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

‘ಪ್ರೀತಿನೇ ಎಲ್ಲಾ ಅಲ್ಲ, ಆದರೆ, ಪ್ರೀತಿ ಇಲ್ದೆ ಏನೂ ಇಲ್ಲ’; ತ್ರಿಷಾ ಮಾರ್ಮಿಕ ಪೋಸ್ಟ್

ನಟಿ ತ್ರಿಷಾ ಕೃಷ್ಣನ್ (Trisha) ಅವರು ಸುದ್ದಿಯಲ್ಲಿದ್ದಾರೆ. ಇದಕ್ಕೆ ಕಾರಣ ಆಗಿದ್ದು ವಿಜಯ್ ಜೊತೆಗಿನ ಗೆಳೆತನ. ವಿಜಯ್ ಹಾಗೂ ತ್ರಿಷಾ ಮಧ್ಯೆ ಅಫೇರ್ ಇದೆ ಎಂಬ ಸುದ್ದಿ ಇತ್ತೀಚೆಗೆ ಹರಿದಾಡಿತ್ತು. ಆದರೆ, ಇದನ್ನು ಯಾರೂ ಒಪ್ಪಿಕೊಂಡಿಲ್ಲ. ಹೀಗಿರುವಾಗಲೇ ವಿಜಯ್ ಪತ್ನಿ ಸಂಗೀತಾ ವಿಚ್ಛೇದನಕ್ಕೆ ಅರ್ಜಿ ಸಲ್ಲಿಕೆ ಮಾಡಿದ್ದು, ಪತಿಗೆ ನಟಿಯ ಜೊತೆ ಅಕ್ರಮ ಸಂಬಂಧ ಇದೆ ಎಂದು ಆರೋಪಿಸಿದ್ದಾರೆ. ಈ ಮಧ್ಯೆ ತ್ರಿಷಾ ಹಂಚಿಕೊಂಡ ಸಾಲುಗಳು ಗಮನ ಸೆಳೆದಿವೆ.

ತ್ರಿಷಾ ಅವರು ತಮಿಳಿನ ಖ್ಯಾತ ನಟಿ. ಅವರಿಗೆ ಪರಭಾಷೆಯಲ್ಲೂ ಬೇಡಿಕೆ ಇದೆ. ಅವರು ಕನ್ನಡದಲ್ಲಿ ಪುನೀತ್ ರಾಜ್​​ಕುಮಾರ್ ಜೊತೆ ‘ಪವರ್’ ಸಿನಿಮಾದಲ್ಲಿ ನಟಿಸಿದ್ದಾರೆ. ಹೀಗಾಗಿ, ಕನ್ನಡದವರಿಗೂ ಅವರ ಪರಿಚಯ ಇದೆ. ತ್ರಿಷಾ ವಿಜಯ್ ಜೊತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇಬ್ಬರ ಬಾಂಧವ್ಯ ಚೆನ್ನಾಗಿಯೇ ಇದೆ. ಇದನ್ನು ಅನೇಕರು ಪ್ರಶ್ನೆ ಮಾಡುತ್ತಿದ್ದಾರೆ. ಹೀಗಿರುವಾಗಲೇ ಅವರು ಪ್ರೀತಿ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

‘ಪ್ರೀತಿಯೇ ಎಲ್ಲವೂ ಅಲ್ಲ, ಆದರೂ ಪ್ರೀತಿ ಇಲ್ಲದೆ ಎಲ್ಲವೂ ಅರ್ಥಹೀನ’ ಎಂಬ ಸಾಲುಗಳನ್ನು ತ್ರಿಷಾ ಹಂಚಿಕೊಂಡಿದ್ದಾರೆ. ಅವರ ಇನ್​ಸ್ಟಾ ಸ್ಟೋರಿ ಗಮನ ಸೆಳೆದಿದೆ. ತ್ರಿಷಾ ಹೆಸರು ವಿಜಯ್ ಜೊತೆ ಚರ್ಚೆ ಆಗುವಾಗಲೇ ಈ ರೀತಿಯಲ್ಲಿ ಅವರು ಪೋಸ್ಟ್ ಹಾಕಿದ್ದು ಚರ್ಚೆಗೆ ಕಾರಣ ಆಗಿದೆ.

ಇದನ್ನೂ ಓದಿ: ‘ನನಗೆ ವಿಚ್ಛೆದನ ಬಗ್ಗೆ ನಂಬಿಕೆ ಇಲ್ಲ, ಮದುವೆಗೂ ಮೊದಲು ನೂರು ಬಾರಿ ಯೋಚಿಸುವೆ’; ತ್ರಿಷಾ

ಸಂಗೀತಾ ಹಾಗೂ ವಿಜಯ್ ವಿವಾಹ ಆಗಿ 26 ವರ್ಷಗಳು ಕಳೆದಿವೆ. ಈಗ ಇಬ್ಬರೂ ಬೇರೆ ಆಗುತ್ತಿರುವುದು ಬೇಸರದ ಸಂಗತಿ. ಇನ್ನು ತ್ರಿಷಾ ಹಾಗೂ ವಿಜಯ್ ಸಿನಿಮಾ ವಿಷಯ ನೋಡೋದಾದರೆ ಇಬ್ಬರ ಮಧ್ಯೆ ಎರಡು ದಶಕಗಳ ಬಂಧ ಇದೆ. ‘ಗಿಲ್ಲಿ’ (2004), ‘ತಿರುಪಾಚಿ’ (2005), ‘ಆತಿ’ (2006), ‘ಕುರುವಿ’ (2008), ‘ಲಿಯೋ’ (2023) ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಆರ್​​ಸಿಬಿ ಮ್ಯಾಚ್​​ಗಳಲ್ಲಿ ಸದಾ ಅನುಷ್ಕಾ ಶರ್ಮಾ ಪಕ್ಕ ಕೂರುವ ಈ ಸುಂದರಿ ಯಾರು?

ಸದ್ಯ ಐಪಿಎಲ್ ಹವಾ ಜೋರಾಗಿದೆ. ಆರ್​​ಸಿಬಿ ಒಳ್ಳೆಯ ಪರ್ಫಾರ್ಮೆನ್ಸ್ ನೀಡುತ್ತಿದ್ದು, ಆಡಿದ ಎರಡು ಪಂದ್ಯಗಳ ಪೈಕಿ ಎರಡೂ ಮ್ಯಾಚ್ ಗೆದ್ದಿದೆ. ಆರ್​​​ಸಿಬಿ ಮ್ಯಾಚ್ ನೋಡಲು ನಟಿ ಅನುಷ್ಕಾ ಶರ್ಮಾ ಆಗಮಿಸುತ್ತಿದ್ದಾರೆ. ಆರ್​​ಸಿಬಿಯ ಎರಡೂ ಪಂದ್ಯಗಳು ಬೆಂಗಳೂರಿನಲ್ಲಿ ನಡೆದಿದ್ದವು. ಹೀಗಾಗಿ, ಅನುಷ್ಕಾ ಶರ್ಮಾ ಅವರು ಬೆಂಗಳೂರಿಗೆ ಬಂದಿದ್ದರು. ಪ್ರತಿ ಪಂದ್ಯದಲ್ಲೂ ಅವರ ಪಕ್ಕ  ಓರ್ವ ಸುಂದರಿ ಕುಳಿತಿರುತ್ತಾರೆ. ಅವರು ಯಾರು ಎನ್ನುವ ಹುಡುಕಾಟ ನಡೆದಿದೆ.

ಅನುಷ್ಕಾ ಶರ್ಮಾ ಪಕ್ಕ ಕುಳಿತಿರುವ ಹುಡುಗಿ ಯಾರು ಎಂಬುದನ್ನು ಪತ್ತೆ ಹಚ್ಚಲು ಅನೇಕರು ಎಐ ಟೂಲ್​​​ಗಳನ್ನು ಬಳಕೆ ಮಾಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಪ್ರಶ್ನೆಗಳನ್ನು ಕೇಳಿದ್ದರು. ಈ ವೇಳೆ ಅನೇಕರಿಗೆ ತಪ್ಪು ಮಾಹಿತಿ ಸಿಕ್ಕಿದೆ. ಅನುಷ್ಕಾ ಶರ್ಮಾ ಅವರ ಅತ್ತಿಗೆ ಭಾವನಾ ಕೊಹ್ಲಿ ಎಂದು ಕೆಲವರು ಹೇಳಿದರೆ, ಇನ್ನೂ ಕೆಲವರು ಹರ್ಭಜನ್ ಸಿಂಗ್ ಪತ್ನಿ ಗೀತಾ ಬಸ್ರಾ ಎಂದಿದ್ದಾರೆ. ಆದರೆ, ಇದು ಯಾವುದೂ ನಿಜವಲ್ಲ.

ಅನುಷ್ಕಾ ಶರ್ಮಾ ಪಕ್ಕದಲ್ಲಿ ಕೂರುವು ಮಹಿಳೆಯ ಹೆಸರು ಮಾಳವಿಕಾ ನಾಯಕ್. ಅವರು ಅನುಷ್ಕಾ ಶರ್ಮಾ ಅವರ ಬೆಸ್ಟ್ ಫ್ರೆಂಡ್. ಕೊಹ್ಲಿ ಅವರಿಗೂ ತುಂಬಾನೇ ಆಪ್ತರು. ಹೀಗಾಗಿ, ಅನುಷ್ಕಾ ಮ್ಯಾಚ್ ನೋಡಲು ತಮ್ಮ ಗೆಳತಿ ಜೊತೆ ಆಗಮಿಸುತ್ತಾರೆ. ಕೆಲವೊಮ್ಮೆ ಇಬ್ಬರೂ ಪತಿಯ ಜೊತೆ ಡಬಲ್ ಡೇಟ್​​ಗೆ ಹೋದ ಉದಾಹರಣೆಯೂ ಇದೆ.

ಇದನ್ನೂ ಓದಿ: ಅನುಷ್ಕಾ ಶರ್ಮಾ ‘ಚಾಕಡ್ ಎಕ್ಸ್​ಪ್ರೆಸ್’ ಸಿನಿಮಾ ಕತೆ ಏನಾಯ್ತು?

ಆರ್​​ಸಿಬಿ ಹಾಗೂ ಚೆನ್ನೈ ಮ್ಯಾಚ್​ನಲ್ಲಿ ಮಾಳವಿಕಾ ಹಾಗೂ ಅನುಷ್ಕಾ ಆರ್​​​ಸಿಬಿಗೆ ಚಿಯರ್ ಮಾಡುತ್ತಿರುವ ಫೋಟೋ ಗಮನ ಸೆಳೆದಿದೆ. ಮಾಳವಿಕಾ ಅವರು ಚಿತ್ರರಂಗದ ಜೊತೆ ಯಾವುದೇ ನಂಟು ಹೊಂದಿಲ್ಲ. ಅವರ ಲಿಂಕ್ಡಿನ್ ಪ್ರಾಫೈಲ್ ಪ್ರಕಾರ ಅವರು ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್ ಅಲ್ಲಿ ಎಂಬಿಎ ಪದವಿ ಪಡೆದಿದ್ದಾರೆ. ಅವರು ಈಗ ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರು ಬೆಂಗಳೂರು ಮೂಲದವರು. ಅವರ ಪತಿ ನಿಖಿಲ್ ಸೋಸಲೆ ಆರ್​​ಸಿಬಿ ತಂಡದ ಮಾಜಿ ಮಾಲಿಕತ್ವ ಕಂಪನಿ ಡಿಯಾಜಿಯೋದಲ್ಲಿ ಕೆಲಸ ಮಾಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಇರಾನ್ ಮುಗಿಸಲು ಒಂದೇ ಒಂದು ರಾತ್ರಿ ಸಾಕು, ಗಡುವು ಮುಗಿಯುವ ಮುನ್ನವೇ ಇರಾನ್​ಗೆ ಟ್ರಂಪ್ ಬೆದರಿಕೆ

ವಾಷಿಂಗ್ಟನ್, ಏಪ್ರಿಲ್ 07: ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್(Donald Trump) ಇರಾನ್​ಗೆ ಕಠಿಣ ಎಚ್ಚರಿಕೆ ನೀಡಿದ್ದಾರೆ. ಹಾರ್ಮುಜ್ ಜಲಸಂಧಿಯನ್ನು ತೆರೆಯದಿದ್ದರೆ ಇರಾನ್ ರಾತ್ರೋರಾತ್ರಿ ನಾಶವಾಗಬಹುದು ಎಂದು ಟ್ರಂಪ್ ಬೆದರಿಸಿದ್ದಾರೆ. ಶ್ವೇತಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವ ಟ್ರಂಪ್, ಇಡೀ ದೇಶ ರಾತ್ರೋ ರಾತ್ರಿ ನಾಶವಾಗಬಹುದು ಮತ್ತು ಆ ರಾತ್ರಿ ಮಂಗಳವಾರವೇ ಆಗಿರಬಹುದು ಎಂದಿದ್ದಾರೆ. ಹಾರ್ಮುಜ್ ಜಲಸಂಧಿಯನ್ನು ಮತ್ತೆ ತೆರೆಯುವ ಬಗ್ಗೆ ಹೆಚ್ಚುತ್ತಿರುವ ಉದ್ವಿಗ್ನತೆ ಮಧ್ಯೆ ಈ ಹೇಳಿಕೆ ಬಂದಿದೆ. ಟ್ರಂಪ್ ಮಂಗಳವಾರ(ಏಪ್ರಿಲ್ 7) ರಾತ್ರಿ 8 ಗಂಟೆಯವರೆಗೆ ಇರಾನ್​ಗೆ ಸಮಯ ನೀಡಿದ್ದಾರೆ.

ಮಾರ್ಚ್​ ಅಂತ್ಯದಲ್ಲಿ ಇರಾನ್​ಗೆ ಒಪ್ಪಂದಕ್ಕೆ ಬರಲು ಅಥವಾ ಹಾರ್ಮುಜ್ ಜಲಸಂಧಿಯನ್ನು ತೆರೆಯಲು 10 ದಿನಗಳ ಅಲ್ಟಿಮೇಟಂ ನೀಡಿದ್ದರು. ನಂತರ ಇರಾನ್ ಕೋರಿಕೆಯ ಮೇಲೆ ಈ ಅವಧಿಯನ್ನು ಇನ್ನೂ 10 ದಿನಗಳವರೆಗೆ ವಿಸ್ತರಿಸಿದ್ದರು.ರಾನ್‌ನಲ್ಲಿ ಅಪಘಾತಕ್ಕೀಡಾದ ತಮ್ಮ ಫೈಟರ್ ಜೆಟ್ ಎಫ್ -15 ರ ಪೈಲಟ್‌ನನ್ನು ರಕ್ಷಿಸಲು ಆರಂಭಿಸಲಾದ ಕಾರ್ಯಾಚರಣೆಯನ್ನು ಟ್ರಂಪ್ ಐತಿಹಾಸಿಕ ಎಂದು ಬಣ್ಣಿಸಿದರು.

ಕಳೆದ 37 ದಿನಗಳಲ್ಲಿ, ಅಮೆರಿಕದ ಸಶಸ್ತ್ರ ಪಡೆಗಳು ಇರಾನ್ ಮೇಲೆ 10,000 ಕ್ಕೂ ಹೆಚ್ಚು ಯುದ್ಧ ವಿಮಾನಗಳನ್ನು ಹಾರಿಸಿವೆ. ಇದು ಅಭೂತಪೂರ್ವವಾಗಿದೆ” ಎಂದು ಹೇಳಿದರು. ಕಳೆದ ವಾರ ಇರಾನ್‌ನಲ್ಲಿ ಹೊಡೆದುರುಳಿಸಿದ ಅಮೆರಿಕದ ಎಫ್ -15, ಈ ಸಂಪೂರ್ಣ ಕಾರ್ಯಾಚರಣೆಯ ಸಮಯದಲ್ಲಿ ಶತ್ರುಗಳಿಂದ ಹೊಡೆದುರುಳಿಸಿದ ಮೊದಲ ಮಾನವಸಹಿತ ವಿಮಾನವಾಗಿದೆ ಎಂದು ಅವರು ಹೇಳಿದ್ದಾರೆ.

ಮತ್ತಷ್ಟು ಓದಿ: ಇರಾನ್​ನಲ್ಲಿ ನಾಪತ್ತೆಯಾಗಿದ್ದ ಅಮೆರಿಕ ಯುದ್ಧ ವಿಮಾನದ ಪೈಲಟ್ ಸಿಕ್ಕಿದ್ದಾರೆ: ಡೊನಾಲ್ಡ್​ ಟ್ರಂಪ್

ಟ್ರಂಪ್ ಅಮೆರಿಕದ ಮಿಲಿಟರಿ ಕಾರ್ಯಾಚರಣೆಯ ವಿವರಗಳನ್ನು ಹಂಚಿಕೊಂಡರು. ತನ್ನ ಪೈಲಟ್‌ಗಳಲ್ಲಿ ಒಬ್ಬರನ್ನು ರಕ್ಷಿಸಲು ಅಮೆರಿಕ ಸೇನೆಯು ಇದುವರೆಗಿನ ಅತಿದೊಡ್ಡ ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ ಎಂದು ಅವರು ವಿವರಿಸಿದರು. ಈ ಪೈಲಟ್ ಇರಾನ್‌ನೊಳಗೆ, ಶತ್ರು ಪ್ರದೇಶದಲ್ಲಿ ಅಪಘಾತಕ್ಕೀಡಾಗಿದ್ದರು. ಅಲ್ಲಿನ ಪರಿಸ್ಥಿತಿಗಳು ಅತ್ಯಂತ ಅಪಾಯಕಾರಿಯಾಗಿದ್ದವು. ಈ ಧೈರ್ಯಶಾಲಿ ಪೈಲಟ್ ಅನ್ನು ರಕ್ಷಿಸಲು ಅಮೆರಿಕ 200 ಅಮೆರಿಕದ ಸೈನಿಕರನ್ನು ನಿಯೋಜಿಸಿತು. 21 ಅಮೆರಿಕದ ವಿಮಾನಗಳು ಇಡೀ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದವು.

ಹಾರ್ಮುಜ್ ಜಲಸಂಧಿಯು ವಿಶ್ವದ ತೈಲ ರಫ್ತಿಗೆ ಪ್ರಮುಖ ಮಾರ್ಗವಾಗಿದ್ದು, ಇದರ ಮುಚ್ಚುವಿಕೆಯು ಜಾಗತಿಕ ತೈಲ ಬೆಲೆಗಳು ಗಗನಕ್ಕೇರಲು ಕಾರಣವಾಗಿದೆ. ಇರಾನ್ ಮೇಲೆ ಒತ್ತಡ ಹೆಚ್ಚಿಸಲು, ಡೊನಾಲ್ಡ್​ ಟ್ರಂಪ್ ಜಲಸಂಧಿಯನ್ನು ತೆರೆಯದಿದ್ದರೆ, ಇರಾನ್​ನ ಎಲ್ಲಾ ಇಂಧನ ಸೌಲಭ್ಯಗಳು ಮತ್ತು ಸೇತುವೆಗಳು ನಾಶವಾಗುತ್ತವೆ.

ಮಾತುಕತೆ ಚೆನ್ನಾಗಿ ನಡೆಯುತ್ತಿದೆ, ಟ್ರಂಪ್ ಅವರ ಆಕ್ರಮಣಕಾರಿ ತಂತ್ರಗಳು ಈ ಪ್ರದೇಶದಲ್ಲಿ ಸ್ಥಿರತೆಯನ್ನು ಪುನಃಸ್ಥಾಪಿಸಲು ಹಾಗೂ ಸುಗಮ ತೈಲ ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ಇರಾನ್ ಮೇಲೆ ಒತ್ತಡ ಹೇರುವ ಗುರಿಯನ್ನು ಹೊಂದಿದೆ.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Daily Devotional: ನೀವು ಮನೆಯಲ್ಲಿ ಸರಿಯಾದ ದಿಕ್ಕಿನಲ್ಲೇ ಕಸ ಗುಡಿಸುತ್ತಿದ್ದೀರಾ?

ಟಿವಿ9​​ ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ಮನೆಯಲ್ಲಿ ಕಸ ಯಾವ ದಿಕ್ಕಿನಿಂದ ಗುಡಿಸಲು ಶುರು ಮಾಡಬೇಕು ಎಂದು ಡಾ.ಬಸವರಾಜ ಗುರೂಜಿ ವಿವರಿಸಿದ್ದಾರೆ. ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ಕಸವನ್ನು ಗುಡಿಸುವ ದಿಕ್ಕು ಮುಖ್ಯವಾಗುತ್ತದೆ. ಮನೆಯಲ್ಲಿ ಸುಖ, ಶಾಂತಿ, ನೆಮ್ಮದಿ ಮತ್ತು ಧನಯೋಗ ನೆಲಸಬೇಕಾದರೆ, ಈಶಾನ್ಯ ದಿಕ್ಕಿನಿಂದ ಕಸ ಗುಡಿಸಲು ಪ್ರಾರಂಭಿಸಬೇಕು. ನಂತರ ಆಗ್ನೇಯದ ಕಡೆಗೆ ಸಾಗಿ, ವಾಯುವ್ಯ ದಿಕ್ಕಿನ ಮೂಲಕ ನೈರುತ್ಯ ದಿಕ್ಕಿನಲ್ಲಿ ಕಸ ಗುಡಿಸುವುದನ್ನು ಪೂರ್ಣಗೊಳಿಸಬೇಕು. ಈ ವಿಧಾನವು ಮನೆಗೆ ಅದೃಷ್ಟ ಮತ್ತು ಸಮೃದ್ಧಿಯನ್ನು ತರುತ್ತದೆ ಎಂದು ನಂಬಲಾಗಿದೆ. ಸೂರ್ಯೋದಯಕ್ಕೆ ಮುಂಚೆ ಕಸ ಗುಡಿಸುವುದು ಉತ್ತಮ. ಸೂರ್ಯಾಸ್ತದ ನಂತರ ಅಥವಾ ಮುರಿದ ಪೊರಕೆಯಿಂದ ಗುಡಿಸುವುದು ಅಶುಭಕರ. ಪೊರಕೆಯನ್ನು ಅಡ್ಡಲಾಗಿ, ಯಾರಿಗೂ ಕಾಣಿಸದ ಜಾಗದಲ್ಲಿ ಇಡುವುದು ಒಳ್ಳೆಯದು ಎಂದು ಗುರೂಜಿ ಹೇಳಿದ್ದಾರೆ.

 

 

 

Source link

ದ್ವಿತೀಯ ಪಿಯುಸಿ ಫಲಿತಾಂಶ ವಿಳಂಬ ಯಾಕೆ ಗೊತ್ತೇ? ಅಸಲಿ ಕಾರಣ ಬಹಿರಂಗ!

ಬೆಂಗಳೂರು, ಏಪ್ರಿಲ್ 7: ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ (2nd Puc Result) ಇಂದು (ಏಪ್ರಿಲ್ 7) ಪ್ರಕಟವಾಗಲಿದೆ ಎಂದು ಕಾತರದಿಂದ ಕಾಯುತ್ತಿದ್ದ ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ನಿರಾಸೆಯಾಗಿದೆ. ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ (KSEAB) ಫಲಿತಾಂಶ ಪ್ರಕಟಿಸಲು ಸಿದ್ಧತೆ ಮಾಡಿಕೊಂಡಿದ್ದರೂ, ತಾಂತ್ರಿಕ ಕಾರಣಗಳಿಂದಾಗಿ ಪ್ರಕಟಣೆಯನ್ನು ಮುಂದೂಡಲಾಗಿದೆ. ಆದರೆ, ಫಲಿತಾಂಶ ಪ್ರಕಟಿಸುವುದನ್ನು ಮುಂದೂಡಿಕೆ ಮಾಡಲು ಅಸಲಿ ಕಾರಣ ಏನೆಂಬುದು ಈಗ ಬಹಿರಂಗವಾಗಿದೆ.

ಚುನಾವಣಾ ನೀತಿ ಸಂಹಿತೆ ಅಡ್ಡಿ

ರಾಜ್ಯದಲ್ಲಿ ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ನಡೆಯುತ್ತಿದ್ದು, ಏಪ್ರಿಲ್ 9ರಂದು ಮತದಾನ ನಿಗದಿಯಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಕೆಲವು ಭಾಗಗಳಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದೆ. ಸಾಮಾನ್ಯವಾಗಿ ಫಲಿತಾಂಶವನ್ನು ಶಿಕ್ಷಣ ಸಚಿವರ ಉಪಸ್ಥಿತಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಪ್ರಕಟಿಸಲಾಗುತ್ತದೆ. ಆದರೆ, ನೀತಿ ಸಂಹಿತೆ ಇರುವುದರಿಂದ ಸಚಿವರು ಅಧಿಕೃತವಾಗಿ ಫಲಿತಾಂಶ ಪ್ರಕಟಿಸಲು ಚುನಾವಣಾ ಆಯೋಗದಿಂದ ಅನುಮತಿ ಪಡೆಯಬೇಕಾಗುತ್ತದೆ.

ಚುನಾವಣಾ ಆಯೋಗದ ಅನುಮತಿಗೆ ಕಾಯುತ್ತಿರುವ ಮಂಡಳಿ

ಫಲಿತಾಂಶ ಪ್ರಕಟಿಸಲು ಅನುಮತಿ ಕೋರಿ ಕೆಎಸ್ಇಎಬಿ ಈಗಾಗಲೇ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದೆ. ಆಯೋಗವು ಅನುಮತಿ ನೀಡಿದ ತಕ್ಷಣವೇ ಫಲಿತಾಂಶದ ದಿನಾಂಕವನ್ನು ಅಧಿಕೃತವಾಗಿ ಘೋಷಿಸಲು ಮಂಡಳಿ ಸರ್ವ ಸಿದ್ಧತೆ ಮಾಡಿಕೊಂಡಿದೆ. 2018 ಮತ್ತು 2023ರ ವಿಧಾನಸಭಾ ಚುನಾವಣೆ ಸಂದರ್ಭದಲ್ಲೂ ನೀತಿ ಸಂಹಿತೆ ಜಾರಿಯಲ್ಲಿದ್ದರೂ, ಅಧಿಕಾರಿಗಳ ಮೂಲಕ ಫಲಿತಾಂಶ ಪ್ರಕಟಿಸಲಾಗಿತ್ತು. ಆದರೆ ಈ ಬಾರಿ ಆಯೋಗದ ಒಪ್ಪಿಗೆ ಸಿಗದ ಕಾರಣ ಅನಿವಾರ್ಯವಾಗಿ ವಿಳಂಬವಾಗಿದೆ.

ಸೆಕೆಂಡ್ ಪಿಯುಸಿ ಫಲಿತಾಂಶ ಆನ್​ಲೈನ್​ನಲ್ಲಿ ನೋಡುವುದು ಹೇಗೆ?

ಸೆಕೆಂಟ್ ಪಿಯುಸಿ ಫಲಿತಾಂಶ ಪ್ರಕಟವಾದ ನಂತರ ಆನ್​ಲೈನ್​ನಲ್ಲಿ ನೋಡುವುದು ಹೇಗೆಂಬ ಮಾಹಿತಿ ಇಲ್ಲಿದೆ.

  • ಅಧಿಕೃತ ವೆಬ್‌ಸೈಟ್ karresults.nic.in ಗೆ ಭೇಟಿ ನೀಡಿ.
  • ಮುಖಪುಟದಲ್ಲಿರುವ ‘Karnataka 2nd PUC Result 2026’ ಲಿಂಕ್ ಮೇಲೆ ಕ್ಲಿಕ್ ಮಾಡಿ.
  • ನಿಮ್ಮ ರಿಜಿಸ್ಟ್ರೇಶನ್ ನಂಬರ್ ಮತ್ತು ಜನ್ಮ ದಿನಾಂಕವನ್ನು ನಮೂದಿಸಿ.
  • ‘Submit’ ಬಟನ್ ಒತ್ತಿದ ತಕ್ಷಣ ನಿಮ್ಮ ಅಂಕಪಟ್ಟಿ ಪರದೆಯ ಮೇಲೆ ಕಾಣಿಸುತ್ತದೆ.
  • ಭವಿಷ್ಯದ ಉಲ್ಲೇಖಕ್ಕಾಗಿ ಇದರ ಪ್ರಿಂಟ್‌ಔಟ್ ತೆಗೆದುಕೊಳ್ಳಿ.

ಇದನ್ನೂ ಓದಿ: ದ್ವಿತೀಯ ಪಿಯು ಫಲಿತಾಂಶದ ಬಗ್ಗೆ ಬಿಗ್​ ಅಪ್​ಡೇಟ್, ವಿದ್ಯಾರ್ಥಿಗಳಿಗೆ-ಪೋಷಕರಿಗೆ ನಿರಾಸೆ

ಫೆಬ್ರವರಿ 28ರಿಂದ ಮಾರ್ಚ್ 17ರವರೆಗೆ ನಡೆದಿದ್ದ ಪರೀಕ್ಷೆಗೆ ರಾಜ್ಯಾದ್ಯಂತ ಒಟ್ಟು 7,10,363 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದರು. ಇಲಾಖೆಯು ನಿಗದಿತ ಗುರಿಯಂತೆ ಮೌಲ್ಯಮಾಪನ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಮುಗಿಸಿದೆ. ಆಯೋಗದಿಂದ ಒಪ್ಪಿಗೆ ಸಿಕ್ಕ ಕೂಡಲೇ ಫಲಿತಾಂಶ ಪ್ರಕಟ ಮಾಡಲಿದೆ.

ಮತ್ತಷ್ಟು ಶಿಕ್ಷಣ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Horoscope Today: ಇಂದು ಈ ರಾಶಿಯವರಿಗೆ ಆಕಸ್ಮಿಕ ಧನ ಲಾಭ!

ಟಿವಿ9​​ ಡಿಜಿಟಲ್ ವಾಹಿನಿಯಲ್ಲಿ ಪ್ರಸಾರವಾದ ದಿನಭವಿಷ್ಯ ಕಾರ್ಯಕ್ರಮದಲ್ಲಿ ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು ಏಪ್ರಿಲ್ 7, ಮಂಗಳವಾರದ ದ್ವಾದಶ ರಾಶಿಗಳ ಫಲಾಫಲಗಳನ್ನು ವಿವರಿಸಿದ್ದಾರೆ. ಈ ದಿನ ಪರಾಭವ ನಾಮ ಸಂವತ್ಸರ, ಉತ್ತರಾಯಣ, ಚೈತ್ರ ಮಾಸ, ವಸಂತ ಋತು, ಕೃಷ್ಣ ಪಕ್ಷ, ಷಷ್ಠೀ ತಿಥಿಯಾಗಿದೆ. ಇಂದು ಡಾ. ಬಸವರಾಜ ಗುರೂಜಿಯವರು ಪ್ರತಿ ರಾಶಿಯವರಿಗೂ ಆರೋಗ್ಯ, ಆರ್ಥಿಕ ಸ್ಥಿತಿ, ಉದ್ಯೋಗ, ವ್ಯಾಪಾರ, ಕುಟುಂಬ ಮತ್ತು ವೈಯಕ್ತಿಕ ಸಂಬಂಧಗಳ ಕುರಿತು ವಿವರವಾದ ಸಲಹೆಗಳನ್ನು ನೀಡಿದ್ದಾರೆ.

 

 

 

 

Source link