ಬೆಂಗಳೂರು, ಏಪ್ರಿಲ್ 7: ಇಸ್ರೇಲ್, ಇರಾನ್, ಅಮೆರಿಕ ಸೇನಾ ಸಂಘರ್ಷದ ನಂತರ ಉಂಟಾದ ಗ್ಯಾಸ್ ಕೊರತೆಯಿಂದಾಗಿ, ವಾಣಿಜ್ಯ ಮತ್ತು ಗೃಹಬಳಕೆಯ ಇಂಡಕ್ಷನ್ ಸ್ಟವ್‌ಗಳ ಬೇಡಿಕೆ ಗಣನೀಯವಾಗಿ ಹೆಚ್ಚಾಗಿದೆ. ಹಿಂದೆ ದಿನಕ್ಕೆ ಕೇವಲ 40 ವಾಣಿಜ್ಯ ಇಂಡಕ್ಷನ್ ಸ್ಟವ್‌ಗಳಿಗೆ ಬೇಡಿಕೆ ಇದ್ದರೆ, ಈಗ ಅದು 200ಕ್ಕೆ ಏರಿದೆ. ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು ಹಾಗೂ ಸ್ಟಾರ್ ಹೋಟೆಲ್‌ಗಳು ಗ್ಯಾಸ್‌ಗೆ ಪರ್ಯಾಯವಾಗಿ ವಿದ್ಯುತ್ ಚಾಲಿತ ಇಂಡಕ್ಷನ್ ಒಲೆಗಳತ್ತ ಮುಖ ಮಾಡಿವೆ. ಪೀಣ್ಯ ಇಂಡಸ್ಟ್ರಿಯಲ್ಲಿ ತಯಾರಕರು ಹೆಚ್ಚಿದ ಬೇಡಿಕೆಯನ್ನು ಪೂರೈಸಲು ಹಗಲಿರುಳು ಶ್ರಮಿಸುತ್ತಿದ್ದಾರೆ. ಕಾರ್ಮಿಕರ ಕೊರತೆಯ ನಡುವೆಯೂ ಉತ್ಪಾದನೆಯನ್ನು ಹೆಚ್ಚಿಸಲು ಶಿಫ್ಟ್‌ಗಳನ್ನು ವಿಸ್ತರಿಸಲಾಗುತ್ತಿದೆ. ಗೃಹಬಳಕೆದಾರರಲ್ಲಿಯೂ ಇಂಡಕ್ಷನ್ ಸ್ಟವ್‌ಗಳ ಮಾರಾಟದಲ್ಲಿ ಭಾರೀ ಏರಿಕೆ ಕಂಡುಬಂದಿದೆ. ಹಿಂದೆ ದಿನಕ್ಕೆ ಒಂದು ಅಥವಾ ಎರಡು ಸ್ಟವ್‌ಗಳು ಮಾರಾಟವಾಗುತ್ತಿದ್ದರೆ, ಈಗ ಅದು 15-20ಕ್ಕೆ ಏರಿದೆ. ಪೂರೈಕೆ ಕೊರತೆಯಿಂದಾಗಿ ಗ್ರಾಹಕರಿಗೆ ಬೇಕಾದ ಎಲ್ಲಾ ಮಾಡೆಲ್‌ಗಳು ಲಭ್ಯವಾಗುತ್ತಿಲ್ಲ. ಕಂಪನಿಗಳಿಂದ ಸ್ಟಾಕ್ ಪಡೆಯುವುದು ಕೂಡ ಮಾರಾಟಗಾರರಿಗೆ ಸವಾಲಾಗಿದೆ.
ವರದಿ: ಈರಣ್ಣ, ಟಿವಿ9 ಬೆಂಗಳೂರು
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿಕ್ಲಿಕ್ ಮಾಡಿ
ಹಿಂದೂ ಧರ್ಮದಲ್ಲಿ ವೈಶಾಖ ಮಾಸದ ಶುಕ್ಲ ಪಕ್ಷದ ತೃತೀಯ ತಿಥಿಯನ್ನು ಅತ್ಯಂತ ಮಂಗಳಕರ ದಿನವೆಂದು ಪರಿಗಣಿಸಲಾಗುತ್ತದೆ. ಈ ದಿನವನ್ನೇ ನಾವು ‘ಅಕ್ಷಯ ತೃತೀಯ’ ಎಂದು ಆಚರಿಸುತ್ತೇವೆ. ಈ ದಿನದ ವಿಶೇಷತೆಯೆಂದರೆ, ಇದು ‘ಸ್ವಯಂ ಸಿದ್ಧ ಮುಹೂರ್ತ’. ಅಂದರೆ, ಯಾವುದೇ ಶುಭ ಕಾರ್ಯವನ್ನು ಮಾಡಲು ಈ ದಿನ ಪ್ರತ್ಯೇಕವಾಗಿ ಪಂಚಾಂಗ ನೋಡಿ ಶುಭ ಸಮಯ ಹುಡುಕುವ ಅಗತ್ಯವಿಲ್ಲ. ಅಕ್ಷಯ ತೃತೀಯದಂದು ಮಾಡುವ ದಾನ, ಪೂಜೆ ಮತ್ತು ಹೂಡಿಕೆಗಳು ಅಕ್ಷಯವಾಗಿ (ಎಂದೂ ಮುಗಿಯದ) ಇರುತ್ತವೆ ಎಂಬುದು ಭಕ್ತರ ನಂಬಿಕೆ.
ಏಪ್ರಿಲ್ 19 ರಂದು ಅಕ್ಷಯ ತೃತೀಯ: ಈ ವರ್ಷದ ವಿಶೇಷತೆ ಏನು?
ಈ ವರ್ಷ ಏಪ್ರಿಲ್ 19 ರಂದು ಅಕ್ಷಯ ತೃತೀಯವನ್ನು ಆಚರಿಸಲಾಗುತ್ತಿದ್ದು, ಜ್ಯೋತಿಷ್ಯ ಶಾಸ್ತ್ರದ ದೃಷ್ಟಿಯಿಂದ ಈ ದಿನ ಅತ್ಯಂತ ವಿಶೇಷವಾಗಿರಲಿದೆ. ಈ ದಿನ ಆಕಾಶದಲ್ಲಿ ‘ಗಜಕೇಸರಿ ರಾಜಯೋಗ’ ಎಂಬ ಶಕ್ತಿಯುತ ಯೋಗವು ನಿರ್ಮಾಣವಾಗುತ್ತಿದೆ. ಚಂದ್ರ ಮತ್ತು ಗುರು ಗ್ರಹಗಳು ಪರಸ್ಪರ ಕೇಂದ್ರ ಸ್ಥಾನದಲ್ಲಿದ್ದಾಗ ಈ ಯೋಗವು ಸೃಷ್ಟಿಯಾಗುತ್ತದೆ. ಇದನ್ನು ರಾಜಯೋಗವೆಂದೇ ಕರೆಯಲಾಗುತ್ತಿದ್ದು, ಇದು ಕೆಲವು ರಾಶಿಯವರ ಬದುಕಿನಲ್ಲಿ ಬಂಪರ್ ಲಾಭಗಳನ್ನು ತರಲಿದೆ.
ಈ 3 ರಾಶಿಯವರಿಗೆ ಶುಕ್ರದೆಸೆ ಆರಂಭ:
ಮೇಷ ರಾಶಿ:
ಮೇಷ ರಾಶಿಯವರಿಗೆ ಈ ವರ್ಷದ ಅಕ್ಷಯ ತೃತೀಯವು ಒಂದು ವರದಾನವೇ ಸರಿ. ಗಜಕೇಸರಿ ಯೋಗದ ಪ್ರಭಾವದಿಂದ ನೀವು ದೀರ್ಘಕಾಲದಿಂದ ನೆನೆಗುದಿಗೆ ಬಿದ್ದಿದ್ದ ಕೆಲಸಗಳು ವೇಗವಾಗಿ ಪೂರ್ಣಗೊಳ್ಳಲಿವೆ. ಹೊಸ ಉದ್ಯಮ ಅಥವಾ ವ್ಯಾಪಾರವನ್ನು ಪ್ರಾರಂಭಿಸಲು ಇದು ಸುವರ್ಣ ಕಾಲ. ಅನಿರೀಕ್ಷಿತವಾಗಿ ಆರ್ಥಿಕ ಲಾಭಗಳು ಉಂಟಾಗುವ ಸಾಧ್ಯತೆಯಿದ್ದು, ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ.
ತುಲಾ ರಾಶಿ:
ತುಲಾ ರಾಶಿಯವರ ಜೀವನದಲ್ಲಿ ಈ ರಾಜಯೋಗವು ಸುಖ-ಸಂತೋಷವನ್ನು ತುಂಬಲಿದೆ. ಸಮಾಜದಲ್ಲಿ ನಿಮ್ಮ ಗೌರವ ಮತ್ತು ಪ್ರತಿಷ್ಠೆ ಹೆಚ್ಚಾಗುವ ಸಮಯವಿದು. ಹೊಸ ಉದ್ಯೋಗದ ಹುಡುಕಾಟದಲ್ಲಿರುವವರಿಗೆ ಅಥವಾ ಕೆಲಸ ಬದಲಾಯಿಸಲು ಇಚ್ಛಿಸುವವರಿಗೆ ಉತ್ತಮ ಅವಕಾಶಗಳು ಕೈಬೀಸಿ ಕರೆಯಲಿವೆ. ಆದಾಯದ ಹೊಸ ಮೂಲಗಳು ಸೃಷ್ಟಿಯಾಗಲಿದ್ದು, ಆರ್ಥಿಕ ಸ್ಥಿತಿ ಸದೃಢವಾಗಲಿದೆ.
ಧನು ರಾಶಿಯ ಅಧಿಪತಿ ಗುರುವಾಗಿರುವುದರಿಂದ, ಗಜಕೇಸರಿ ಯೋಗದ ಗರಿಷ್ಠ ಲಾಭ ಇವರಿಗೆ ಸಿಗಲಿದೆ. ಈ ಅವಧಿಯಲ್ಲಿ ನಿಮ್ಮ ಬೌದ್ಧಿಕ ಸಾಮರ್ಥ್ಯ ಹೆಚ್ಚಾಗಲಿದ್ದು, ಸಾಮಾಜಿಕ ಕ್ಷೇತ್ರದಲ್ಲಿ ಉತ್ತಮ ಹೆಸರು ಗಳಿಸುವಿರಿ. ಹಣಕಾಸಿನ ಹರಿವು ಹೆಚ್ಚಾಗುವುದರಿಂದ ಹಳೆಯ ಸಾಲಗಳಿಂದ ಮುಕ್ತಿ ಪಡೆಯುವ ಸಾಧ್ಯತೆಯಿದೆ. ಒಟ್ಟಾರೆಯಾಗಿ ಹೇಳುವುದಾದರೆ, ಇದು ನಿಮಗೆ ಸಮೃದ್ಧಿಯ ಕಾಲ.
ಲಕ್ಷ್ಮಿ ಪೂಜೆ ಮತ್ತು ಹೂಡಿಕೆಯ ಮಹತ್ವ:
ಅಕ್ಷಯ ತೃತೀಯದಂದು ಲಕ್ಷ್ಮಿ ದೇವಿಗೆ ವಿಶೇಷ ಪೂಜೆ ಸಲ್ಲಿಸುವುದರಿಂದ ಮನೆಯಲ್ಲಿ ಐಶ್ವರ್ಯ ವೃದ್ಧಿಯಾಗುತ್ತದೆ. ಜನರು ಈ ದಿನ ಚಿನ್ನವನ್ನು ಖರೀದಿಸಲು ಮುಗಿಬೀಳುತ್ತಾರೆ, ಏಕೆಂದರೆ ಇದು ಸಮೃದ್ಧಿಯ ಸಂಕೇತವೆಂದು ಪರಿಗಣಿಸಲಾಗಿದೆ. ಇದರೊಂದಿಗೆ ಬಡವರಿಗೆ ಅನ್ನದಾನ ಅಥವಾ ವಸ್ತ್ರದಾನ ಮಾಡುವುದರಿಂದ ಶಾಶ್ವತ ಪುಣ್ಯ ನಿಮ್ಮದಾಗಲಿದೆ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಬೆಂಗಳೂರು, ಏಪ್ರಿಲ್ 07: 2026ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಇಂದು (ಏಪ್ರಿಲ್ 07)ರಂದು ಪ್ರಕಟವಾಗಬಹುದೆಂದು ನಿರೀಕ್ಷಿಸಲಾಗಿತ್ತು. ಆದರೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ (KSEAB) ಫಲಿತಾಂಶ ಪ್ರಕಟಿಸಲು ಸಿದ್ಧತೆ ಮಾಡಿಕೊಂಡಿದ್ದರೂ, ತಾಂತ್ರಿಕ ಕಾರಣಗಳಿಂದಾಗಿ ಪ್ರಕಟಣೆಯನ್ನು ಮುಂದೂಡಲಾಗಿರುವ ಬಗ್ಗೆ ಮಾಹಿತಿ ಸಿಕ್ಕ ಕಾರಣ, ಫಲಿತಾಂಶದ ನಿರೀಕ್ಷೆಯಲ್ಲಿದ್ದ ಲಕ್ಷಾಂತರ ವಿದ್ಯಾರ್ಥಿಗಳು ನಿರಾಸೆಗೊಂಡಿದ್ದರು. ಈ ನಡುವೆ ಮಹತ್ವದ ಮಾಹಿತಿ ಲಭ್ಯವಾಗಿದ್ದು, ಏಪ್ರಿಲ್ 9ರಂದು ದ್ವಿತೀಯ ಪಿಯಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಲಿದೆ ಎಂಬ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ದೊರೆತಿದೆ.
ಫೆಬ್ರವರಿ 28 ರಿಂದ ಮಾರ್ಚ್ 17ರ ವರೆಗೆ ದ್ವಿತೀಯ ಪಿಯುಸಿ ಪರೀಕ್ಷೆ ರಾಜ್ಯದಲ್ಲಿ ನಡೆದಿದ್ದು, 7,10,363ಕ್ಕೂ ಹೆಚ್ಚು ವಿದ್ಯಾರ್ಥಿಗಳು ಎಕ್ಸಾಂ ಬರೆದಿದ್ದಾರೆ. ಇಲ್ಲಿಯವರೆಗೆ ಇದ್ದ ಮಾಹಿತಿಯ ಪ್ರಕಾರ ಏಪ್ರಿಲ್ 7ರಂದು ಅಂದರೆ ಇಂದೇ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿತ್ತು. ಆದರೆ ಅಧಿಕೃತ ಪ್ರಕಟಣೆ ಹೊರಬಾರದ ಕಾರಣ ಅನಿಶ್ಚಿತತೆ ಉಂಟಾದ ಪರಿಣಾಮ ವಿದ್ಯಾರ್ಥಿಗಳಲ್ಲಿಯೂ ಗೊಂದಲ ಮೂಡಿತ್ತು. ಈ ನಡುವೆ ಫಲಿತಾಂಶ ಪ್ರಕಟವಾಗಲಿರುವ ದಿನಾಂಕದ ಬಗ್ಗೆ ಬಗ್ಗೆ ಮಹತ್ವದ ಮಾಹಿತಿ ಸಿಕ್ಕಿದೆ. ಇನ್ನು ಪ್ರಕಟವಾಗಲಿರುವ ಫಲಿತಾಂಶ ಆನ್‌ಲೈನ್‌ನಲ್ಲಿ ಲಭ್ಯವಾಗಲಿದ್ದು, ವಿದ್ಯಾರ್ಥಿಗಳು ತಮ್ಮ ನೋಂದಣಿ ಸಂಖ್ಯೆ (Registration Number) ಮತ್ತು ಜನ್ಮ ದಿನಾಂಕ (Date of Birth) ನಮೂದಿಸಿ ಮಾರ್ಕ್ಸ್ ಅನ್ನು ಪರಿಶೀಲಿಸಬಹುದಾಗಿದೆ.
ರಾಜ್ಯದಲ್ಲಿ ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ನಡೆಯುತ್ತಿದ್ದು, ಏಪ್ರಿಲ್ 9ರಂದು ಮತದಾನ ನಿಗದಿಯಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಕೆಲವು ಭಾಗಗಳಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ಫಲಿತಾಂಶವನ್ನು ಶಿಕ್ಷಣ ಸಚಿವರ ಉಪಸ್ಥಿತಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಪ್ರಕಟಿಸಲು ಕೆಲ ಅಡ್ಡಿಗಳಿವೆ. ನೀತಿ ಸಂಹಿತೆ ಇರುವುದರಿಂದ ಸಚಿವರು ಅಧಿಕೃತವಾಗಿ ಫಲಿತಾಂಶ ಪ್ರಕಟಿಸಲು ಚುನಾವಣಾ ಆಯೋಗದಿಂದ ಅನುಮತಿ ಪಡೆಯಬೇಕಿರುವ ಕಾರಣ ಫಲಿತಾಂಶ ಪ್ರಕಟ ವಿಳಂಬವಾಗಿದೆ.
ಕನ್ನಡ ಚಿತ್ರರಂಗದಲ್ಲಿ ರೆಬೆಲ್ ಸ್ಟಾರ್ ಅಂತ ಇದ್ದವರು ಅಂಬರೀಷ್. ಹಲವು ವರ್ಷಗಳ ಕಾಲ ಚಿತ್ರರಂಗದಲ್ಲಿ ಮಿಂಚಿ ಅವರು ಮರೆಯಾದರು. ಅವರು ಈಗಲೂ ಅನೇಕರ ಫೇವರಿಟ್. ತೆಲುಗಿನಲ್ಲಿ ಪ್ರಭಾಸ್ (Prabhas) ಅವರನ್ನು ರೆಬೆಲ್ ಸ್ಟಾರ್ ಎನ್ನುತ್ತಾರೆ. ಈಗಲೂ ಅವರು ಸಿನಿಮಾಗಳನ್ನು ಮಾಡುತ್ತಾ ಇದ್ದಾರೆ. ಈಗ ಇಬ್ಬರ ಮಧ್ಯೆ ಒಂದು ಸಾಮ್ಯತೆ ಇದೆ ಎಂಬ ವಿಷಯ ಗೊತ್ತಾಗಿದೆ.
‘ಆಲ್ ರೌಂಡರ್’ ಹೆಸರಿನ ಯೂಟ್ಯೂಬ್ ಚಾನೆಲ್ ಅಲ್ಲಿ ಕಾಸ್ಟಿಂಗ್ ನಿರ್ದೇಶಕ ನಂದ ಕೀಶೋರ್ ಮಾತನಾಡಿದ್ದಾರೆ. ಅವರು ತೆಲುಗು ಚಿತ್ರರಂಗವನ್ನು ಹತ್ತಿರದಿಂದ ಕಂಡವರು. ಅವರು ಪ್ರಭಾಸ್ ಬಗ್ಗೆ ಮಾತನಾಡಿದ್ದಾರೆ. ಪ್ರಭಾಸ್ ಅವರನ್ನು ಅಂಬರೀಷ್ಗೆ ಹೋಲಿಕೆ ಮಾಡಿದ್ದಾರೆ. ಊಟದ ವಿಷಯದಲ್ಲಿ ಇಬ್ಬರ ಮಧ್ಯೆ ಸಾಮ್ಯತೆ ಇದೆ ಎಂದು ಅವರು ವಿವರಿಸಿದ್ದಾರೆ.
‘ಸೆಟ್ ಬಾಯ್ ಎಲ್ಲಾದರೂ ಒಂದು ಕಡೆ ಫುಡ್ ತಿಂದಿದ್ದಾನೆ ಎಂದರೆ ಅದನ್ನು ಪ್ರಭಾಸ್ ನೆನಪಿಟ್ಟುಕೊಳ್ಳುತ್ತಾರೆ. ಮುಂದೆ ಆ ಆಹಾರ ತೆಗೆದುಕೊಂಡು ಬಂದಾಗ ಸೆಟ್ ಬಾಯ್ನ ಕರೆದು ಅವರಿಗೂ ಕೊಡ್ತಾರೆ. ಇದು ಪ್ರಭಾಸ್ ಹೆಚ್ಚುಗಾರಿಕೆ’ ಎಂದರು ನಂದ ಕಿಶೋರ್.
‘ಆದಿಪುರಷ್’ ಸಿನಿಮಾದ ಶೂಟ್ ಮುಂಬೈನಲ್ಲಿ ನಡೆಯುತ್ತಿತ್ತಂತೆ. ಈ ವೇಳೆ ಪ್ರಭಾಸ್ ಚೆನ್ನೈ ಇಂದ ಊಟ ತರಿಸಿದ್ದರು. ಫ್ಲೈಟ್ ಅಲ್ಲಿ ಓರ್ವನ ಕಳುಹಿಸಿ, ಆತ ಊಟ ತೆಗೆದು ಮತ್ತೆ ಮುಂಬೈಗೆ ಬಂದಿದ್ದ. ಇದು ಪ್ರಭಾಸ್ ಊಟದ ಬಗ್ಗೆ ಇರುವ ಕ್ರೇಜ್.
‘ನಮ್ಮಲ್ಲಿ ಅಂಬರೀಷ್ ಇದ್ದರು. ಅವರಿಗೆ ಎಲ್ಲರಿಗೂ ಊಟ ಹಾಕಿಸೋದು ಅಂದ್ರೆ ಇಷ್ಟ ಆಗಿತ್ತು. ಅದೇ ರೀತಿ ಪ್ರಭಾಸ್. ಪ್ರಭಾಸ್ ದೊಡ್ಡಪ್ಪ ಕೃಷ್ಣಂ ರಾಜು ಕಾಲದಿಂದಲೂ ಹಾಗೆಯೇ. ಪ್ರಭಾಸ್ ತಮ್ಮ ಕುಟುಂಬದ ಲೆಗಸಿಯನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ’ ಎಂದು ನಂದ ಕಿಶೋರ್ ಹಾಡಿ ಹೊಗಳಿದರು. ಅಂಬರೀಷ್ ಅವರ ಬಗ್ಗೆ ಅನೇಕ ಕಲಾವಿದರು ಮಾತನಾಡಿದ್ದಾರೆ. ಅವರು ನಟನ ಹಾಡಿ ಹೊಗಳಿದ್ದರು. ಅವರ ಫುಡ್ ಕ್ರೇಜ್ ವಿವರಿಸಿದ್ದರು.
ಬೆಂಗಳೂರು, ಏಪ್ರಿಲ್ 7: ಭಾರತದಲ್ಲಿ ಕುಡಿಯುವ ನೀರಿನ (Drinking Water) ಸಂಪರ್ಕ ವ್ಯವಸ್ಥೆಯಲ್ಲಿ ಮಹತ್ವದ, ಕ್ರಾಂತಿಕಾರಕ ಬದಲಾವಣೆಯಾಗಿದ್ದು, ದೇಶದ ಶೇ 95ರಷ್ಟು ಕುಟುಂಬಗಳು ಇಂದು ಶುದ್ಧ ಕುಡಿಯುವ ನೀರಿನ ಸೌಲಭ್ಯ ಹೊಂದಿವೆ. ಇದರೊಂದಿಗೆ, ಕುಡಿಯುವ ನೀರು ಸಂಪರ್ಕದ ಈ ಪ್ರಗತಿಯಲ್ಲಿ ಭಾರತ ಜಗತ್ತಿಗೇ ಮಾದರಿಯಾಗಿದೆ. ಆದರೆ, ಕರ್ನಾಟಕವೂ ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳಲ್ಲಿ ಒಂದು ಕುತೂಹಲಕಾರಿ ಬೆಳವಣಿಗೆ ಕಂಡುಬಂದಿದೆ. ಬೆಂಗಳೂರು (Bangalore) ಸೇರಿದಂತೆ ದಕ್ಷಿಣ ಭಾರತದ ಹೆಚ್ಚಿಮ ನಗರವಾಸಿಗಳು ನಲ್ಲಿ ನೀರಿಗಿಂತ ಹೆಚ್ಚಾಗಿ ‘ಬಾಟಲ್ ವಾಟರ್’ ಅಥವಾ ‘ಕ್ಯಾನ್ ನೀರ’ನ್ನು ಅವಲಂಬಿಸಿರುವುದು ತಿಳಿದುಬಂದಿದೆ.
ದಕ್ಷಿಣದ ರಾಜ್ಯಗಳೇ ಟಾಪ್!
ರಾಷ್ಟ್ರೀಯ ಮಾದರಿ ಸಮೀಕ್ಷೆ (NSS) 2022-23ರ ದತ್ತಾಂಶದ ಪ್ರಕಾರ, ಆಂಧ್ರಪ್ರದೇಶ, ಕರ್ನಾಟಕ, ತಮಿಳುನಾಡು ಮತ್ತು ತೆಲಂಗಾಣದ ನಗರ ಪ್ರದೇಶಗಳಲ್ಲಿ ಕಾಲು ಭಾಗಕ್ಕೂ ಹೆಚ್ಚು (ಶೇ 25+) ಕುಟುಂಬಗಳು ಬಾಟಲಿ ನೀರನ್ನೇ ಪ್ರಧಾನ ಆಧಾರವಾಗಿರಿಸಿಕೊಂಡಿವೆ. ಮನೆಗಳಿಗೆ ವಿತರಿಸಲಾಗುವ ಕ್ಯಾನ್ ವಾಟರ್ ಸಂಸ್ಕೃತಿ ಇಲ್ಲಿ ಭಾರಿ ಜನಪ್ರಿಯವಾಗಿದೆ.
ಕೇರಳದಲ್ಲಿ ಬಾವಿ ನೀರಿಗೇ ಆದ್ಯತೆ
ದಕ್ಷಿಣದ ಉಳಿದ ರಾಜ್ಯಗಳು ಬಾಟಲಿ ನೀರಿಗೆ ಮಾರುಹೋಗಿದ್ದರೆ, ಕೇರಳ ಮಾತ್ರ ಭಿನ್ನವಾಗಿದೆ. ಇಲ್ಲಿ ಇಂದಿಗೂ ಮನೆಗಳಲ್ಲಿರುವ ಬಾವಿ ನೀರು ಕುಡಿಯುವ ನೀರಿನ ಪ್ರಮುಖ ಮೂಲವಾಗಿ ಮುಂದುವರಿದಿದೆ.
ನಗರ ಭಾರತದ ಒಟ್ಟಾರೆ ಚಿತ್ರಣ ಗಮನಿಸಿದರೆ, ಇಂದಿಗೂ ಶೇ 70ರಷ್ಟು ಜನರಿಗೆ ನಲ್ಲಿ ನೀರೇ ಆಸರೆ. ಆದರೆ ದಕ್ಷಿಣದ ಪ್ರಭಾವದಿಂದಾಗಿ ದೇಶದ ಒಟ್ಟಾರೆ ನಗರವಾಸಿಗಳಲ್ಲಿ ಶೇ 15ರಷ್ಟು ಮಂದಿ ಬಾಟಲಿ ನೀರನ್ನೇ ನೆಚ್ಚಿಕೊಂಡಿದ್ದಾರೆ. ಒಟ್ಟಿನಲ್ಲಿ, ನಲ್ಲಿ ನೀರಿಗಿಂತ ಶುದ್ಧೀಕರಿಸಿದ ಬ್ರಾಂಡೆಡ್ ನೀರಿನತ್ತ ಭಾರತೀಯ ನಗರವಾಸಿಗಳು ಆಕರ್ಷಿತರಾಗುತ್ತಿರುವುದು ಈ ಸಮೀಕ್ಷೆಯಿಂದ ಸ್ಪಷ್ಟವಾಗಿದೆ.
ಬೆಂಗಳೂರಿನಲ್ಲಿ ದಿನವೊಂದರಲ್ಲಿ ಎಷ್ಟು ವಾಟರ್ ಕ್ಯಾನ್ ಮಾರಾಟವಾಗುತ್ತೆ ಗೊತ್ತಾ?
ಬೆಂಗಳೂರು ನಗರವೊಂದರಲ್ಲೇ ಪ್ರತಿದಿನ ಅಂದಾಜು 15 ರಿಂದ 20 ಲಕ್ಷ ಕುಡಿಯುವ ನೀರಿನ ಕ್ಯಾನ್‌ಗಳು (20 ಲೀಟರ್) ಮಾರಾಟವಾಗುತ್ತವೆ. ಬೇಸಿಗೆಯ ಅವಧಿಯಲ್ಲಿ ಈ ಬೇಡಿಕೆಯು ಶೇ 30 ರಿಂದ 40ರಷ್ಟು ಹೆಚ್ಚಾಗುತ್ತದೆ. ನಗರದ ಐಟಿ ಹಬ್‌ಗಳಾದ ವೈಟ್‌ಫೀಲ್ಡ್, ಎಲೆಕ್ಟ್ರಾನಿಕ್ ಸಿಟಿ ಮತ್ತು ಮಹದೇವಪುರದಂತಹ ಪ್ರದೇಶಗಳಲ್ಲಿ ವಲಸಿಗರ ಸಂಖ್ಯೆ ಹೆಚ್ಚಿರುವುದರಿಂದ, ಅಲ್ಲಿನ ಶೇ. 60ಕ್ಕೂ ಹೆಚ್ಚು ನಿವಾಸಿಗಳು ತಮ್ಮ ದೈನಂದಿನ ಕುಡಿಯುವ ನೀರಿಗಾಗಿ ಖಾಸಗಿ ಕ್ಯಾನ್ ಸರಬರಾಜುದಾರರನ್ನೇ ಅವಲಂಬಿಸಿದ್ದಾರೆ. ಕಾವೇರಿ ನೀರು ತಲುಪದ ಮತ್ತು ಅಂತರ್ಜಲ ಕುಸಿದಿರುವ ಪ್ರದೇಶಗಳಲ್ಲಿ ಈ ಕ್ಯಾನ್ ಸಂಸ್ಕೃತಿ ಮನೆಮಾತಾಗಿದೆ ಎಂಬುದು ಎನ್ಎಸ್ಎಸ್ ಸಮೀಕ್ಷೆಯಿಂದ ತಿಳಿದುಬಂದಿದೆ.
ಬೆಂಗಳೂರಿನಲ್ಲಿ ಈ ನೀರಿನ ಉದ್ಯಮವು ವಾರ್ಷಿಕವಾಗಿ ಅಂದಾಜು 1,000 ಕೋಟಿ ರೂ.ಗಿಂತಲೂ ಹೆಚ್ಚಿನ ವಹಿವಾಟು ನಡೆಸುತ್ತದೆ. ನಗರದಲ್ಲಿ ಅಧಿಕೃತವಾಗಿ ಸುಮಾರು 500ಕ್ಕೂ ಹೆಚ್ಚು ಐಎಸ್ಐ (ISI) ಮುದ್ರೆ ಹೊಂದಿದ ನೀರು ಶುದ್ಧೀಕರಣ ಘಟಕಗಳಿವೆ. ಮತ್ತೊಂದೆಡೆ, ಅನಧಿಕೃತವಾಗಿಯೂ ಸಾವಿರಕ್ಕೂ ಹೆಚ್ಚು ಸಣ್ಣಪುಟ್ಟ ಘಟಕಗಳು ಕಾರ್ಯಾಚರಿಸುತ್ತಿವೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿಕ್ಲಿಕ್ ಮಾಡಿ
ಮುಂಬೈ: ಭಾರತದ ಗಣ್ಯ ಉದ್ಯಮಿಯಾದ ಮುಕೇಶ್ ಅಂಬಾನಿ ಅವರ ಮಗ ಅನಂತ್ ಅಂಬಾನಿ (Anant Ambani) ಅವರು ಕೇರಳದ ಕಣ್ಣೂರು ಜಿಲ್ಲೆಯ ತಳಿಪರಂಬದಲ್ಲಿರುವ ಐತಿಹಾಸಿಕ ರಾಜರಾಜೇಶ್ವರ ದೇವಸ್ಥಾನಕ್ಕೆ (Rajarajeshwara temple) ಕಳೆದ ವಾರ (ಏಪ್ರಿಲ್ 2) ಭೇಟಿ ನೀಡಿದರು. ಸಾಕಷ್ಟು ಸಂಖ್ಯೆಯಲ್ಲಿ ದೇವಸ್ಥಾನದ ಭಕ್ತರು ಮತ್ತು ಅವರ ಹಿತೈಷಿಗಳು ಗುರುವಾರ ಸಂಜೆ 8 ಗಂಟೆಗೆ ಅವರ ಭೇಟಿಗೆ ಸಾಕ್ಷಿಯಾಗಿದ್ದರು.
ಮುಕೇಶ್ ಅಂಬಾನಿಯವರ ಕಿರಿಯ ಮಗನಾದ ಅನಂತ್ ಅಂಬಾನಿ ಅವರು ದೇವಸ್ಥಾನದಲ್ಲಿ ವಿವಿಧ ಸೇವೆಗಳನ್ನು ಸಲ್ಲಿಸಿದರು. ಪೊನ್ನುಂಕುಡಂ, ಪಟ್ಟಂ, ಥಾಲಿ, ನೆಯ್ಯಾಮೃತು ಮೊದಲಾದವನ್ನು ದೇವರಿಗೆ ಅರ್ಪಿಸಿದರು. ಅಶ್ವಮೇಧ ನಮಸ್ಕಾರ ಮಾಡಿದರು. ಮಂದಿರದ ಜೀರ್ಣೋದ್ಧಾರಕ್ಕಾಗಿ 3 ಕೋಟಿ ರೂ ಮೊತ್ತದ ಚೆಕ್ ಅನ್ನೂ ನೀಡಿದರು.
ಅನಂತ್ ಅಂಬಾನಿಯಿಂದ ಅಶ್ವಮೇಧ ನಮಸ್ಕಾರ
ಈ ಐತಿಹಾಸಿಕ ದೇವಸ್ಥಾನದ ಪಾರಂಪರಿಕ ರಚನೆಗಳನ್ನು ಸಂರಕ್ಷಿಸುವ ಬದ್ಧತೆಯನ್ನು ಅನಂತ್ ಅಂಬಾನಿ ನೀಡಿದರು. ದೇವಸ್ಥಾನದ ಪೂರ್ವಭಾಗದ ಗೋಪುರವು ಬಹಳ ಮಹತ್ವದ್ದಾಗಿದೆ. ಇದು ದೇವಸ್ಥಾನದಷ್ಟೇ ಹಳೆಯದು ಎಂದು ನಂಬಲಾಗಿದೆ. ಈ ಗೋಪುರಂಗೆ ಶತಮಾನಗಳ ಹಿಂದೆ ಒಂದಷ್ಟು ಹಾನಿಯಾಗಿದೆ. ಎರಡು ಶತಮಾನಗಳಿಗೂ ಹೆಚ್ಚು ಕಾಲ ಇದು ದುರಸ್ತಿ ಕಾಣದೇ ಹಾಗೇ ಉಳಿದಿದೆ. ಕಳೆದ ಎರಡೂವರೆ ದಶಕಗಳಿಂದ ದೇವಸ್ಥಾನದ ಅಧಿಕಾರಿಗಳು ಈ ಗೋಪುರ ಪುನಃಸ್ಥಾಪನೆಗೆ ನಿರಂತರ ಪ್ರಯತ್ನ ಮಾಡುತ್ತಾ ಬಂದಿದ್ದಾರೆ. ಆದರೆ, ಹಣಕಾಸು ಸಂಪನ್ಮೂಲ ಕೊರತೆಯಿಂದಾಗಿ ಈ ಕಾರ್ಯ ಪೂರ್ಣವಾಗಲು ಸಾಧ್ಯವಾಗಿಲ್ಲ. ದೇವಸ್ಥಾನದ ಸನ್ನಿಧಿಗೆ ಬಂದಿದ್ದ ಅನಂತ್ ಅಂಬಾನಿ ಅವರಿಗೆ ಈ ವಿಚಾರ ತಿಳಿಯಿತು. ಗೋಪುರ ಪುನಃಸ್ಥಾಪನೆಗೆ ಹಣಕಾಸು ನೆರವು ಒದಗಿಸುವುದಾಗಿ ಅವರು ಭರವಸೆ ನೀಡಿದರು. ಅನಂತ್ ಅವರ ಈ ಬದ್ಧತೆಯ ಪ್ರದರ್ಶನಕ್ಕೆ ಅಲ್ಲಿದ್ದ ಭಕ್ತರು ಮತ್ತು ಜನರು ಸಂತಸಗೊಂಡರು.
ಕೇರಳದ ಕಣ್ಣೂರಿನ ರಾಜರಾಜೇಶ್ವರ ದೇವಸ್ಥಾನದಲ್ಲಿ ಅನಂತ್ ಅಂಬಾನಿ
ದೇವಸ್ಥಾನಕ್ಕೆ ಅವರು ನೀಡಿರುವ ಮತ್ತು ನೀಡಲಿರುವ ಕೊಡುಗೆಯ ಒಟ್ಟು ಮೊತ್ತ 12 ಕೋಟಿ ರೂ ಆಗಿದೆ. ಪೂರ್ವಭಾಗದ ಗೋಪುರದ ಪುನಃಸ್ಥಾಪನೆ, ಪಾರ್ಕಿಂಗ್ ಸ್ಥಳದ ಅಭಿವೃದ್ಧಿ ಸೇರಿದಂತೆ ದೇವಸ್ಥಾನದ ಸಮಗ್ರ ಅಭಿವೃದ್ಧಿಗೆ ಇದು ಸಹಾಯವಾಗುವ ನಿರೀಕ್ಷೆ ಇದೆ.
ರಾಜರಾಜೇಶ್ವರ ದೇವಸ್ಥಾನದಲ್ಲಿ ಅನಂತ್ ಅಂಬಾನಿಗೆ ಸಿಕ್ಕ ಸ್ವಾಗತ
ಅನಂತ್ ಅಂಬಾನಿ ಹಾಗೂ ಅವರ ಆಪ್ತರು ದೇವಸ್ಥಾನಕ್ಕೆ ಭೇಟಿ ನೀಡಿದಾಗ ಅವರನ್ನು ದೇವಸ್ಥಾನದ ಅಧಿಕಾರಿಗಳು ಹಾಗೂ ಅರ್ಚಕರು ಸಾಂಪ್ರದಾಯಿಕ ವಿಧಾನಗಳ ಮೂಲಕ ಸ್ವಾಗತ ಮಾಡಿದರು. ಟಿಟಿಕೆ ದೇವಸ್ವಾಮ್ ಅಧ್ಯಕ್ಷ ಟಿ.ಪಿ. ವಿನೋದ್ ಕುಮಾರ್, ಎಕ್ಸಿಕ್ಯೂಟಿವ್ ಆಫೀಸರ್ ಕೆ.ಪಿ. ವಿನಯನ್, ಮುಖ್ಯ ಅರ್ಚಕ ಇ.ಪಿ. ಕುಬೇರನ್ ನಂಬೂದಿರಿ ಮತ್ತು ದೇವಸ್ವೋಮ್ ಟ್ರಸ್ಟೀಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ನವದೆಹಲಿ, ಏಪ್ರಿಲ್ 07: ಶಬರಿಮಲೆ(Sabarimala) ಅಯ್ಯಪ್ಪ ದೇಗುಲಕ್ಕೆ ಎಲ್ಲಾ ವಯೋಮಾನದ ಮಹಿಳೆಯರ ಪ್ರವೇಶಕ್ಕೆ ಸಂಬಂಧಿಸಿದ 2018ರ ತೀರ್ಪಿನ ಮರುಪರಿಶೀಲನಾ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಏಪ್ರಿಲ್ 7 ರಿಂದ ಆರಂಭಿಸಿದೆ. 9 ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠವು ಈ ಸಂವೇದನಾಶೀಲ ಪ್ರಕರಣವನ್ನು ಪರಿಶೀಲಿಸುತ್ತಿದೆ. 10-50 ವರ್ಷದ ಮಹಿಳೆಯರ ಪ್ರವೇಶಕ್ಕೆ ಅವಕಾಶ ನೀಡಿದ್ದ ಹಿಂದಿನ ತೀರ್ಪನ್ನು ಭಕ್ತರು ಮತ್ತು ಕೇರಳ ಸರ್ಕಾರ ವಿರೋಧಿಸಿದ್ದು, ಈ ಬಾರಿಯ ವಿಚಾರಣೆಯಲ್ಲಿ ಧಾರ್ಮಿಕ ಆಚರಣೆ ಮತ್ತು ಸಂವಿಧಾನಿಕ ಹಕ್ಕುಗಳ ಸಮತೋಲನದ ಕುರಿತು ಚರ್ಚೆ ನಡೆಯಲಿದೆ.
ಕೇರಳದ ಶಬರಿಮಲೆ ದೇವಸ್ಥಾನಕ್ಕೆ ಮುಟ್ಟಾದ ಹೆಣ್ಣುಮಕ್ಕಳ ಪ್ರವೇಶಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಮಂಗಳವಾರ ಪ್ರಾರಂಭಿಸಿದೆ. 2018 ರ ತೀರ್ಪಿನ ವಿರುದ್ಧ ಸಲ್ಲಿಸಲಾದ ಪರಿಶೀಲನಾ ಅರ್ಜಿಗಳನ್ನು ಪರಿಗಣಿಸಲು ನ್ಯಾಯಾಲಯವು ಔಪಚಾರಿಕವಾಗಿ ಒಂಬತ್ತು ನ್ಯಾಯಮೂರ್ತಿಗಳ ಸಂವಿಧಾನ ಪೀಠವನ್ನು ರಚಿಸಿತು. ಏಪ್ರಿಲ್ 7-9 ವರೆಗೆ ಅರ್ಜಿ ಪರ, 14-16 ವರೆಗೆ ವಿರೋಧಿಸಿ ವಾದ, ಮತ್ತು ಏಪ್ರಿಲ್ 22ರೊಳಗೆ ಅಂತಿಮ ಸಲ್ಲಿಕೆ ಮುಗಿಸಲು ನಿರ್ಧರಿಸಲಾಗಿದೆ.
2018 ಸೆಪ್ಟೆಂಬರ್ ನಲ್ಲಿ ಶಬರಿಮಲೆ ಪ್ರವೇಶಕ್ಕೆ ಸುಪ್ರೀಂನ ಐದು ನ್ಯಾಯಾಧೀಶರ ಪೀಠವು ತೀರ್ಪು ನೀಡಿತ್ತು. ಆದರೆ ಇವರಲ್ಲಿ ಇಂದೂ ಮಲ್ಹೋತ್ರಾ ಪ್ರವೇಶಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಅಕ್ಟೋಬರ್ ನಲ್ಲಿ ಮಹಿಳೆಯರ ಪ್ರವೇಶ ವಿರೋಧಿಸಿ ಕೆಲ ಹಿಂದೂ ಪರ ಸಂಘಟನೆಗಳು ಭಾರೀ ಪ್ರತಿಭಟನೆ ನಡೆಸಿದ್ದವು. ಹೀಗಾಗಿ ತೀರ್ಪು ಮರುಪರಿಶೀಲಿಸುವಂತೆ ಸಲ್ಲಿಕೆ ಮಾಡಿದ್ದ ಅರ್ಜಿಯನ್ನು ಕೋರ್ಟ್ ಕೈಗೆತ್ತಿಕೊಂಡಿದೆ.
ಇದರೊಂದಿಗೆ ದರ್ಗಾ ಅಥವಾ ಮಸೀದಿಗಳಿಗೆ ಮುಸ್ಲಿಂ ಮಹಿಳೆಯರ ಪ್ರವೇಶ, ಪಾರ್ಸಿ ಅಲ್ಲದವರನ್ನ ವಿವಾಹವಾಗಿದ್ದರೆ ಅಗ್ನಿ ದೇವಾಲಯಗಳಿಗೆ ಪಾರ್ಸಿ ಮಹಿಳೆಯರ ಪ್ರವೇಶ, ದಾವೂದಿ ಬೊಹ್ರಾ ಸಮುದಾಯದವರಲ್ಲಿ ಬಹಿಷ್ಕಾರ ಮತ್ತು ಸ್ತ್ರೀ ಜನನಾಂಗ ಛೇದನದ ಪದ್ಧತಿಗಳ ಸಿಂಧುತ್ವಕ್ಕೆ ಸಂಬಂಧಿಸಿದ ಅರ್ಜಿಗಳನ್ನು ಪಟ್ಟಿ ಮಾಡಲಾಗಿದೆ.
ಇನ್ನೂ ಶಬರಿಮಲೆ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶಕ್ಕೆ ಕೇರಳ ಸರ್ಕಾರ ಬೆಂಬಲ ನೀಡಿದೆ. ಆದರೆ ನಿರ್ಬಂಧವನ್ನ ಕೇಂದ್ರ ಸರ್ಕಾರ ಬೆಂಬಲಿಸಿದೆ. ಶಬರಿಮಲೆ ದೇವಸ್ಥಾನಕ್ಕೆ ಮಹಿಳೆಯರಿಗೆ ಪ್ರವೇಶ ಕಲ್ಪಿಸುವ ತೀರ್ಪನ್ನು ಬೆಂಬಲಿಸುವ ಪಕ್ಷಗಳು ಏಪ್ರಿಲ್ 7 ರಿಂದ ಏಪ್ರಿಲ್ 9 ರ ವರೆಗೆ ಹಾಗೂ ವಿರೋಧಿಸುವ ಪಕ್ಷಗಳು ಏಪ್ರಿಲ್ 14 ರಿಂದ ಏಪ್ರಿಲ್ 16 ರ ವರೆಗೆ ವಾದ ಮಂಡಿಸಲು ದಿನಾಂಕ ನಿಗದಿಪಡಿಸಲಾಗಿದೆ. ಏಪ್ರಿಲ್ 21 ರಂದು ಮರುಪ್ರಶ್ನೆ ಸಲ್ಲಿಕೆಗಳು ನಡೆಯಲಿದ್ದು, ಏಪ್ರಿಲ್ 22 ರಂದು ವಿಚಾರಣೆ ಮುಕ್ತಾಯಗೊಳ್ಳುವ ನಿರೀಕ್ಷೆಯಿದೆ.
ಒಂಬತ್ತು ನ್ಯಾಯಾಧೀಶರ ಪೀಠದಲ್ಲಿ ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನ, ಎಂ.ಎಂ. ಸುಂದರೇಶ್, ಅಹ್ಸನುದ್ದೀನ್ ಅಮಾನುಲ್ಲಾ, ಅರವಿಂದ್ ಕುಮಾರ್, ಎ.ಜಿ. ಮಸಿಹ್, ಪ್ರಸನ್ನ ಬಿ. ವರಾಳೆ, ಆರ್. ಮಹಾದೇವನ್ ಮತ್ತು ಜೋಯ್ಮಲ್ಯ ಬಾಗ್ಚಿ ಕೂಡ ಇದ್ದಾರೆ. ಶಬರಿಮಲೆ ಪ್ರಕರಣದ ಜೊತೆಗೆ, ಸುಪ್ರೀಂ ಕೋರ್ಟ್ 25 ನೇ ವಿಧಿಯ ಅಡಿಯಲ್ಲಿ ಧಾರ್ಮಿಕ ಸ್ವಾತಂತ್ರ್ಯದ ವ್ಯಾಪ್ತಿಗೆ ಸಂಬಂಧಿಸಿದ ವಿಶಾಲವಾದ ಸಾಂವಿಧಾನಿಕ ಪ್ರಶ್ನೆಗಳನ್ನು ಸಹ ಪರಿಗಣಿಸುವ ನಿರೀಕ್ಷೆಯಿದೆ.
ಇದಕ್ಕೂ ಮೊದಲು, ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ನೇತೃತ್ವದ ಪೀಠವು ವಿಚಾರಣೆಗೆ ವಿವರವಾದ ವೇಳಾಪಟ್ಟಿಯನ್ನು ನಿಗದಿಪಡಿಸಿತ್ತು. ಇದೀಗ ಸಿಪಿಎಂ ರಾಜ್ಯ ಘಟಕವು ಶಬರಿಮಲೆ ಸಂಪ್ರದಾಯದ ಪರವಾಗಿ ನಿರ್ಣಯ ಕೈಗೊಂಡ ಹಿನ್ನೆಲೆಯಲ್ಲಿ ಕೇರಳ ಸರ್ಕಾರದ ನಿಲುವು ಬದಲಾಗಿದೆ.
ಪ್ರೇಮ್ ನಿರ್ದೇಶಿಸಿ, ಧ್ರುವ ಸರ್ಜಾ (Dhruva Sarja) ನಟಿಸಿರುವ ‘ಕೆಡಿ’ ಸಿನಿಮಾದ ಹಾಡೊಂದು ಭಾರಿ ವಿವಾದ ಸೃಷ್ಟಿಸಿತ್ತು. ‘ಸೆರಗ ಸರ್ಸೆ’ ಹಾಡಿನ ಸಾಹಿತ್ಯ ಮತ್ತು ಚಿತ್ರೀಕರಣಕ್ಕೆ ಸಂಬಂಧಿಸಿದಂತೆ ತೀವ್ರ ವಿವಾದ ಉಂಟಾಗಿದ್ದು, ಈ ವಿಷಯ ಲೋಕಸಭೆಯಲ್ಲಿ ಸಹ ಚರ್ಚೆ ಆಗಿತ್ತು. ಹಾಡು ಅಶ್ಲೀಲವಾಗಿದೆ ಎಂಬ ಕಾರಣಕ್ಕೆ ರಾಷ್ಟ್ರೀಯ ಮಹಿಳಾ ಆಯೋಗವು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ನಿರ್ದೇಶಕ ಮತ್ತು ಹಾಡಿನ ಮೂಲ ಸಾಹಿತ್ಯ ಬರೆದಿರುವ ಪ್ರೇಮ್, ಹಾಡಿನಲ್ಲಿ ನಟಿಸಿರುವ ನೋರಾ ಫತೇಹಿ, ಸಂಜಯ್ ದತ್ ಹಾಗೂ ಹಾಡಿನ ಹಿಂದಿ ಸಾಹಿತ್ಯ ಬರೆದಿರುವ ರಖೀಬ್ ಆಲಂ ನೊಟೀಸ್ ಜಾರಿ ಮಾಡಿತ್ತು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಮಹಿಳಾ ಆಯೋಗ ಇದೀಗ ಮತ್ತೊಮ್ಮೆ ನೊಟೀಸ್ ನೀಡಿದೆ.
ಈ ಹಿಂದೆ ನೀಡಿದ್ದ ನೋಟೀಸಿನ ಅನ್ವಯ ನೋರಾ ಫತೇಹಿ ಏಪ್ರಿಲ್ 6 ರಂದು ವಿಚಾರಣೆಗೆ ಹಾಜರಾಗಬೇಕಿತ್ತು. ಆದರೆ ನೋರಾ ಪರವಾಗಿ ಅವರ ವಕೀಲರು ಹಾಜರಾಗಿದ್ದರು, ಇದನ್ನು ಒಪ್ಪದ ಮಹಿಳಾ ಆಯೋಗ ಖುದ್ದಾಗಿ ನಟಿಯೇ ಹಾಜರಾಗೇಕು ಎಂದಿದೆ. ಇದೀಗ ಮತ್ತೊಮ್ಮೆ ನೋರಾ ಫತೇಹಿಗೆ ನೊಟೀಸ್ ಹೊರಡಿಸಿದ್ದು, ಏಪ್ರಿಲ್ 27 ಕ್ಕೆ ವಿಚಾರಣೆ ನಿಗದಿಪಡಿಸಲಾಗಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಸಂಜಯ್ ದತ್ ಅವರಿಗೆ ಏಪ್ರಿಲ್ 8 ರಂದು ಆಯೋಗದ ಮುಂದೆ ಹಾಜರಾಗುವಂತೆ ಸೂಚಿಸಲಾಗಿದೆ. ಈ ಕುರಿತು ಮತ್ತೊಂದು ಸಮನ್ಸ್ ಸಹ ಹೊರಡಿಸಲಾಗಿದೆ.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರ್ದೇಶಕ ಪ್ರೇಮ್, ನಿರ್ಮಾಪಕ ಕೆವಿಎನ್ ವೆಂಕಟೇಶ್ ಹಾಗೂ ಹಿಂದಿ ಆವೃತ್ತಿ ಬರೆದಿರುವ ರಖೀಬ್ ಆಲಂ ಅವರಿಗೂ ಸಹ ರಾಷ್ಟ್ರೀಯ ಮಹಿಳಾ ಆಯೋಗ ನೊಟೀಸ್ ನೀಡಿತ್ತು. ಈ ಬಗ್ಗೆ ಲಿಖಿತ ಕ್ಷಮಾಪಣೆ ಸಲ್ಲಿಸಿರುವ ಇವರುಗಳು ಮೂರು ತಿಂಗಳು ಮಹಿಳಾ ಸಬಲೀಕರಣಕ್ಕಾಗಿ ಕೆಲಸ ಮಾಡುವುದಾಗಿಯೂ ಹೇಳಿದ್ದಾರೆ. ನಿರ್ದೇಶಕ ಪ್ರೇಮ್ ಈ ಬಗ್ಗೆ ವಿಡಿಯೋ ಮೂಲಕವು ಕ್ಷಮೆ ಕೇಳಿದ್ದರು. ತಾವು ಹಾಡನ್ನು ಹಿಂಪಡೆದು ಸಾಹಿತ್ಯವನ್ನು ಮತ್ತೆ ರಚಿಸಿ ಹಾಡನ್ನು ಬಿಡುಗಡೆ ಮಾಡುವುದಾಗಿ ಹೇಳಿದ್ದರು. ಅಲ್ಲದೆ, ತಾವು ಆ ಹಾಡನ್ನು ಎಣ್ಣೆ ಬಾಟಲಿಗೆ ಹೋಲಿಕೆಯಾಗಿ ಬರೆದಿರುವುದಾಗಿ ಸ್ಪಷ್ಟನೆ ನೀಡಿದ್ದರು. ಹಾಡಿನಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮೆ ಇರಲಿ ಎಂದು ಸಹ ಹೇಳಿದ್ದರು.
‘ಕೆಡಿ’ ಸಿನಿಮಾವು ಬಹುತಾರಾಗಣದ ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದು, ಸಿನಿಮಾದ ಧ್ರುವ ಸರ್ಜಾ ನಾಯಕನಾಗಿ ನಟಿಸಿದ್ದಾರೆ. ನಾಯಕಿಯಾಗಿ ರೀಷ್ಮಾ ನಾಣಯ್ಯ ನಟಿಸಿದ್ದಾರೆ. ಸಂಜಯ್ ದತ್, ಶಿಲ್ಪಾ ಶೆಟ್ಟಿ, ಜೀಸು ಸೇನ್ಗುಪ್ತ, ರವಿಚಂದ್ರನ್, ರಮೇಶ್, ಅಭಿಲಾಶ್ ಇನ್ನೂ ಹಲವರು ಈ ಸಿನಿಮಾನಲ್ಲಿ ನಟಿಸಿದ್ದಾರೆ. ಸಿನಿಮಾ ಏಪ್ರಿಲ್ 30ಕ್ಕೆ ಬಿಡುಗಡೆ ಆಗಲಿದೆ.
ಕಲಬುರಗಿ, ಏಪ್ರಿಲ್ 07: ಕಮಲಾಪುರ ತಾಲೂಕಿನ ಕಲ್ಮೂಡ ಗ್ರಾಮದ ಬಳಿ ಅರೆಬೆಂದ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆ ಪ್ರಕರಣದ ರಹಸ್ಯ ಕೊನೆಗೂ ಬಯಲಾಗಿದೆ. ಕೊಲೆಯಾದ ಮಹಿಳೆ ಶಾಲಾ ಶಿಕ್ಷಕಿ (Teacher) ಜ್ಯೋತಿ ಕಪಾಳೆ ಹಿರೇಮಠ(57) ಎಂಬುದು ಗೊತ್ತಾಗಿದ್ದು, ಕೊಟ್ಟ ಹಣ (Money) ವಾಪಸ್ ಕೇಳಿದ್ದಕ್ಕೆ ಪರಿಚಯಸ್ಥ ವ್ಯಕ್ತಿಯೇ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಂದು ಶಿಕ್ಷಕಿಯ ಮೃತ ದೇಹವನ್ನು ಸುಟ್ಟು ಹಾಕಿರೋದು ಹೊತ್ತಾಗಿದೆ. ಪ್ರಕರಣ ಸಂಬಂಧ ಆರೋಪಿ ಆನಂದ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ವಂದರಖೇಡ ಗ್ರಾಮದಲ್ಲಿ ಶಿಕ್ಷಕಿಯಾಗಿ ಜ್ಯೋತಿ ಕಪಾಳೆ ಹಿರೇಮಠ ಕೆಲಸ ಮಾಡುತ್ತಿದ್ದರು. ಹೀಗಾಗಿ ಬೀದರ್ನಲ್ಲಿಯೇ ಮನೆ ಮಾಡಿಕೊಂಡು ಶಾಲೆಗೆ ಹೋಗಿ ಬರುತ್ತಿದ್ದರು. ಆದರೆ ವಾರಕೊಮ್ಮೆ ಕಲಬುರಗಿಗೆ ಬಂದು ವಾಪಸ್ ತೆರಳುವ ಅಭ್ಯಾಸ ಅವರಿಗೆ ಇತ್ತು. ಹೀಗೆ ಬಂದವರು ಕಲಬುರಗಿಯಿಂದ ಬೀದರ್ಗೆ ತೆರಳುವಾಗ ಆರೋಪಿ ಕೊಲೆಗೈದಿದ್ದಾನೆ. ಶಿಕ್ಷಕಿ ಜ್ಯೋತಿಗೆ ಪರಿಚಯಸ್ಥನಾಗಿದ್ದ ಆರೊಪಿ, ಅವರಿಂದ 14 ಲಕ್ಷ ಹಣ ಪಡೆದಿದ್ದ. ಕೊಟ್ಟ ಈ ಹಣವನ್ನು ಜ್ಯೋತಿ ವಾಪಸ್ ಕೇಳಿರುವುದೇ ಕೊಲೆಗೆ ಕಾರಣವಾಗಿದೆ.
ಕಮಲಾಪುರ ತಾಲೂಕಿನ ಕಲ್ಮೂಡ ಗ್ರಾಮದಲ್ಲಿ ಮಹಿಳೆಯೋರ್ವರ ಶವ ಸುಟ್ಟ ಸ್ಥಿತಿಯಲ್ಲಿ ಪತ್ತೆ ಹಿನ್ನೆಲೆ ಬೇರೆಡೆ ಕೊಲೆ ಮಾಡಿ ಶವ ತಂದು ಹಾಕಿರುವ ಶಂಕೆ ವ್ಯಕ್ತವಾಗಿತ್ತು. ಇಡೀ ದೇಹ ಸುಟ್ಟು ಕೇವಲ ಕಾಲು ಮಾತ್ರ ಉಳಿದ ಸ್ಥಿತಿಯಲ್ಲಿ ಮೃತದೇಹ ಕಂಡುಬಂದಿತ್ತು. ಈ ಹಿನ್ನೆಲೆ ಸ್ಥಳಕ್ಕೆ ಎಸ್ಪಿ, ಶ್ವಾನದಳ, ಬೆರಳಚ್ಚು ತಜ್ಞರ ತಂಡ ಕೂಡ ಭೇಟಿ ನೀಡಿ ಪರಿಶೀಲನೆ ನಡೆಸಿತ್ತು. ಘಟನೆ ಸಂಬಂಧ ಕಮಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿತ್ತು. ಅಪರಿಚಿತ ಶವ ಪತ್ತೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಬಳಿಕ ತನಿಖೆಗಿಳಿದಾಗ ಕೊಲೆ ಹಿಂದಿನ ಸತ್ಯ ಬಯಲಾಗಿದೆ. ಸದ್ಯ ಆರೋಪಿ ಆನಂದ್ನನ್ನು ಪೊಲೀಸರು ಬಂಧಿಸಿದ್ದಾರೆ.
ಬಿಜ್ನೋರ್, ಏಪ್ರಿಲ್ 07: ಇದ್ದಕ್ಕಿದ್ದಂತೆ ಗಂಡ ನಾಪತ್ತೆಯಾಗಿದ್ದ, ಕುಟುಂಬದವರು ಮಹಿಳೆಯನ್ನು ಮೈದುನನಿಗೆ ಕೊಟ್ಟು ಮದುವೆ(Marriage) ಮಾಡಿದ್ದರು. ಈಗ 25 ವರ್ಷಗಳ ಬಳಿಕ ಮೊದಲ ಪತಿ ಮನೆಗೆ ಮರಳಿರುವ ಘಟನೆ ಉತ್ತರ ಪ್ರದೇಶದ ಬಿಜ್ನೋರ್ನಲ್ಲಿ ನಡೆದಿದೆ.25 ವರ್ಷಗಳಿಂದ ಕಾಣೆಯಾಗಿದ್ದ ವ್ಯಕ್ತಿಯನ್ನು ಪೊಲೀಸರು ಅವರ ಕುಟುಂಬದೊಂದಿಗೆ ಮತ್ತೆ ಸೇರಿಸಿದ್ದಾರೆ.
ಪಂಜಾಬ್ ನಿವಾಸಿಯಾದ ಈ ವ್ಯಕ್ತಿ ನಹ್ತೌರ್ ಮಾರುಕಟ್ಟೆಯಲ್ಲಿ ಪತ್ತೆಯಾದಾಗಿದ್ದಾರೆ. ಮೂರು ದಿನಗಳ ಹಿಂದೆ, ನಹ್ತೌರ್‌ನ ನಯಾ ಬಜಾರ್‌ನಲ್ಲಿ ಹರಿದ ಬಟ್ಟೆ ಮತ್ತು ಉದ್ದನೆಯ ಗಡ್ಡವನ್ನು ಬಿಟ್ಟಿದ್ದ ಮಧ್ಯ ವಯಸ್ಕ ವ್ಯಕ್ತಿಯೊಬ್ಬರು ಅಲೆದಾಡುತ್ತಿರುವುದನ್ನು ಸ್ಥಳೀಯರು ನೋಡಿ ಪೊಲೀಸರಿಗೆ ಮಾಹಿತಿ ನೀಡಿದರು.
ಸ್ಟೇಷನ್ ಹೌಸ್ ಆಫೀಸರ್ ರವೀಂದ್ರ ಪ್ರತಾಪ್ ಸಿಂಗ್ ಆ ವ್ಯಕ್ತಿಯನ್ನು ಪ್ರಶ್ನಿಸಿದಾಗ ಮ್ಮ ಹೆಸರು ಹನ್ಸಾ ಸಿಂಗ್ ಮತ್ತು ಅವರ ಮನೆ ವಿಳಾಸವನ್ನು ಪಂಜಾಬ್‌ನ ಕಪುರ್ತಲಾ ಜಿಲ್ಲೆಯ ಶಿವದಯಾಳ್ ವಾಲಾ ಗ್ರಾಮ ಎಂದು ನೀಡಿದ್ದರು.
ಪೋಲೀಸರು ಪಂಜಾಬ್ ಪೊಲೀಸರನ್ನು ಸಂಪರ್ಕಿಸಿದ್ದರು, 72 ಗಂಟೆಗಳಲ್ಲಿ, ಹನ್ಸಾ ಸಿಂಗ್ ಅವರ ಸಹೋದರ ಮತ್ತು ಗ್ರಾಮದ ಮುಖ್ಯಸ್ಥ ನಹ್ತೌರ್‌ಗೆ ಬಂದಿದ್ದರು.
ಸಹೋದರನಿಗೆ ಸಹ ಅವರನ್ನು ಗುರುತಿಸಲು ಸಾಧ್ಯವಾಗಲಿಲ್ಲ, ಆದರೆ ಹನ್ಸಾ ತನ್ನ ಬಾಲ್ಯದ ನೆನಪುಗಳು ಮತ್ತು ಹೆಸರುಗಳನ್ನು ಹೇಳಿದಾಗ, ಎಲ್ಲರೂ ಕಣ್ಣೀರು ಹಾಕಿದ್ದಾರೆ.ಹಂಸಾ ಸಿಂಗ್ ಚೇತರಿಸಿಕೊಂಡಿರುವುದು ಅಷ್ಟೇ ಸಂತೋಷವನ್ನು ತಂದಿದೆ, ಅಷ್ಟೇ ಗೊಂದಲವನ್ನೂ ತಂದಿದೆ. ಮದುವೆಯಾದ ಕೇವಲ ಎರಡು ವರ್ಷಗಳ ನಂತರ ಹಂಸಾ ಕಾಣೆಯಾದರು.
ಕುಟುಂಬವು ಮೂರು ವರ್ಷಗಳ ಕಾಲ ಕಾಯುತ್ತಿತ್ತು ಮತ್ತು ನಂತರ ಹಂಸಾ ಸತ್ತಿದ್ದಾರೆಂದು ಭಾವಿಸಿತ್ತು.ಅವರ ಪತ್ನಿ ವಿಮಲಾ ದೇವಿಯನ್ನು ಅವರ ಕಿರಿಯ ಸಹೋದರ ಸುಖ ಸಿಂಗ್‌ಗೆ ಮದುವೆ ಮಾಡಿಕೊಟ್ಟರು. ಕಳೆದ 22 ವರ್ಷಗಳಿಂದ, ವಿಮಲಾ ತನ್ನ ಈಗಿನ ಪತಿ ಸುಖ ಸಿಂಗ್ ಜೊತೆ ವಾಸಿಸುತ್ತಿದ್ದಾರೆ. ಅವರಿಗೆ ಮೂವರು ಮಕ್ಕಳು ಮತ್ತು ವಿವಾಹಿತ ಮಗಳಿದ್ದಾರೆ. ಹಂಸಾ ಸಿಂಗ್ ಈಗ ತನ್ನ ಕುಟುಂಬದೊಂದಿಗೆ ಪಂಜಾಬ್‌ಗೆ ತೆರಳಿದ್ದಾರೆ.