ವಿದೇಶದಲ್ಲಿ ವಿಜಯ್ ಅದ್ಧೂರಿ ಆಡಿಯೋ ಲಾಂಚ್: ಕಠಿಣ ನಿಯಮ ಹೇರಿದ ಪೊಲೀಸರು – Kannada News | Jana Nayagan movie audio launch in Malesia police set some rules

ದಳಪತಿ ವಿಜಯ್ (Thalapathy Vijay), ರಾಜಕೀಯ ಮತ್ತು ಸಿನಿಮಾ ಎರಡರಲ್ಲೂ ಜೊತೆ ಜೊತೆಯಾಗಿ ಸಾಗುತ್ತಿದ್ದಾರೆ. ಆದರೆ ತಾವು ಸಿನಿಮಾ ಪಯಣವನ್ನು ಮುಗಿಸುವುದಾಗಿ ಈಗಾಗಲೇ ಘೋಷಣೆ ಮಾಡಿದ್ದಾರೆ. ಈಗ ಚಿತ್ರೀಕರಣಗೊಳ್ಳುತ್ತಿರುವ ‘ಜನ ನಾಯಗನ್’ ಅವರ ಕೊನೆಯ ಸಿನಿಮಾ ಆಗಲಿದೆಯಂತೆ. ‘ಜನ ನಾಯಗನ್’ ಸಿನಿಮಾ ಸಂಕ್ರಾಂತಿಗೆ ಬಿಡುಗಡೆ ಆಗಲಿದೆ. ಸಿನಿಮಾದ ಅದ್ಧೂರಿ ಪ್ರಚಾರಕ್ಕೆ ವಿಜಯ್ ಚಾಲನೆ ನೀಡಲಿದ್ದು, ಸಿನಿಮಾದ ಆಡಿಯೋ ಲಾಂಚ್ ಇವೆಂಟ್ ಅನ್ನು ವಿದೇಶದಲ್ಲಿ ಆಯೋಜಿಸಲಾಗುತ್ತಿದೆ. ಆದರೆ ಕೆಲವು ನಿಯಮಗಳನ್ನು ಅಲ್ಲಿನ ಸ್ಥಳೀಯ ಪೊಲೀಸರು ಹೇರಿದ್ದಾರೆ. ನೆರೆಯ ರಾಷ್ಟ್ರವಾದ…

Read More

ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಎಚ್ಚರಿಕೆ ಕೊಟ್ಟ ಕೈ ಶಾಸಕನ ವಿಡಿಯೋ ವೈರಲ್ – Kannada News | People will Slap with Slipper: Magadi Congress MLA Balakrishna Warns to tahsildar

ರಾಮನಗರ, (ಡಿಸೆಂಬರ್ 25): ಮಾಗಡಿ (Magadi) ಕಾಂಗ್ರೆಸ್ ಶಾಸಕ ಶಾಸಕ ಹೆಚ್​​​ಸಿ ಬಾಲಕೃಷ್ಣ (MLA HC Balakrishna) ಅವರು ತಹಶೀಲ್ದಾರ್ ವಿರುದ್ಧ ನಾಲಿಗೆ ಹರಿಬಿಟ್ಟಿದ್ದಾರೆ.ಮಾಗಡಿ ತಾಲೂಕು ಪಂಚಾಯಿತಿಯಲ್ಲಿಂದು ಜನರ ಕುಂದುಕೊರತೆ ಆಲಿಸುವ ಸಭೆಯಲ್ಲಿ ತಹಶೀಲ್ದಾರ್ ಡಿ.ಪಿ.ಶರತ್ ಕುಮಾರ್ ಆಕ್ರೋಶಗೊಂಡಿದ್ದು, ಸರಿಯಾಗಿ ಕೆಲಸಮಾಡಿ. ಇಲ್ಲವಾದರೆ ಚಪ್ಪಲಿಯಲ್ಲಿ ಹೊಡೆಸುವೆ ಎಂದು ಬಾಯಿಗೆ ಬಂದಂತೆ ಬೈದಿದ್ದಾರೆ. ಯಾವ ಅಧಿಕಾರಿ ಸರಿಯಾಗಿ ಕೆಲಸ ಮಾಡಲ್ಲ ಹೆಸರು ಬರೆಯಿರಿ. ತಿಂಗಳಿಗೆ ಒಮ್ಮೆ ಕಂಪ್ಲೆಂಟ್ ಬಾಕ್ಸ್ ಓಪನ್ ಮಾಡೋಣ. ನಾನು ಉಪ ವಿಭಾಗಾಧಿಕಾರಿ ಕರೆಸುತ್ತೇನೆ. ಆಗ…

Read More

Optical Illusion: ಈ ಚಿತ್ರದಲ್ಲಿರುವ ಅಣಬೆಯನ್ನು 30 ಸೆಕೆಂಡುಗಳಲ್ಲಿ ಗುರುತಿಸಬಲ್ಲಿರಾ – Kannada News | Optical Illusion: Let’s find the hidden mushroom in this picture

ಆಪ್ಟಿಕಲ್‌ ಇಲ್ಯೂಷನ್‌ ಚಿತ್ರImage Credit source: Social Media ಪ್ರತಿನಿತ್ಯ ಸೋಶಿಯಲ್ ಮೀಡಿಯಾದಲ್ಲಿ ಆಪ್ಟಿಕಲ್‌ ಇಲ್ಯೂಷನ್‌ (optical illusion) ಸೇರಿದಂತೆ ಇನ್ನಿತ್ತರ ಟ್ರಿಕ್ಕಿ ಒಗಟಿನ ಚಿತ್ರಗಳು ವೈರಲ್ ಆಗುತ್ತಿರುತ್ತವೆ. ಈ ಒಗಟಿನ ಚಿತ್ರಗಳು ನೋಡುವುದಕ್ಕೆ ಸುಲಭವಾಗಿ ಕಂಡರೂ ಉತ್ತರ ಕಂಡು ಕೊಳ್ಳುವುದು ಸುಲಭವಲ್ಲ. ನೀವು ಈ ಹಿಂದೆ ಇಂತಹ ಒಗಟುಗಳನ್ನು ಬಿಡಿಸುವಲ್ಲಿ ವಿಫಲರಾಗಿದ್ದೀರಾ. ಇದೀಗ ನಿಮ್ಮ ಬುದ್ಧಿವಂತಿಕೆಯನ್ನು ಪರೀಕ್ಷಿಸುವ ಮತ್ತೊಂದು ಆಪ್ಟಿಕಲ್‌ ಇಲ್ಯೂಷನ್ ಚಿತ್ರವೊಂದಿದೆ. ಈ ಚಿತ್ರದಲ್ಲಿ ಜಾಣತನದಿಂದ ಮರೆಮಾಡಲಾಗಿರುವ ಅಣಬೆಯನ್ನು ಮೂವತ್ತು ಸೆಕೆಂಡುಗಳೊಳಗೆ ಪತ್ತೆ ಹಚ್ಚಬೇಕು….

Read More

ಇದು ಬಾಂಗ್ಲಾದೇಶದ 2ನೇ ವಿಮೋಚನೆ: 2024ರ ದಂಗೆಯನ್ನು ಹೊಗಳಿದ ಬಿಎನ್​ಪಿ ನಾಯಕ ತಾರಿಖ್ ರಹಮಾನ್ – Kannada News | Ex Bangla PM Khaleda Zia’s son Tarique Rahman describes 2024 uprising as liberation

ಬಾಂಗ್ಲಾ ಹಂಗಾಮಿ ಪಿಎಂ ಜೊತೆ ತಾರಿಖ್ ರಹಮಾನ್ ಢಾಕಾ, ಡಿಸೆಂಬರ್ 25: ಹದಿನೇಳು ವರ್ಷದ ಹಿಂದೆ ಕಾನೂನು ಕುಣಿಕೆಯಿಂದ ತಪ್ಪಿಸಿಕೊಂಡು ಬಾಂಗ್ಲಾದೇಶ ಬಿಟ್ಟು ಹೊರದೇಶಕ್ಕೆ ಹೋಗಿದ್ದ ತಾರಿಖ್ ರಹಮಾನ್ ಇದೀಗ ತವರಿಗೆ ವಾಪಸ್ ಬಂದಿದ್ದು, ಚುನಾವಣೆಗೆ ರಹಕಹಳೆಗಳನ್ನು ಮೊಳಗಿಸುತ್ತಿದ್ದಾರೆ. 2024ರಲ್ಲಿ ಶೇಖ್ ಹಸೀನಾ (Sheikh Hasina) ಸರ್ಕಾರ ಪತನಗೊಳ್ಳಲು ಕಾರಣವಾದ ವಿದ್ಯಾರ್ಥಿ ನೇತೃತ್ವದ ಹೋರಾಟ ಹಾಗೂ ದಂಗೆಗಳನ್ನು ತಾರಿಖ್ ರಹಮಾನ್ (Tarique Rahman) ಹೊಗಳಿದ್ಧಾರೆ. ಮಾಜಿ ಬಾಂಗ್ಲಾ ಪ್ರಧಾನಿ ಖಾಲಿದಾ ಜಿಯಾ (Khaleda Zia) ಅವರ ಮಗನಾದ…

Read More

ಬಿಡುಗಡೆ ಸಿದ್ಧವಾಗಿದೆ ಹೊಸಬರ ಸೈಕಲಾಜಿಕಲ್‌ ಥ್ರಿಲ್ಲರ್‌ ಸಿನಿಮಾ ‘ವಿಕಲ್ಪ’ – Kannada News | Psychological thriller Kannada movie Vikalpa getting ready for release

ಹೊಸಬರ ತಂಡದ ‘ವಿಕಲ್ಪ’ ಸಿನಿಮಾ (Vikalpa Movie) ಬಿಡುಗಡೆಗೆ ಸಜ್ಜಾಗುತ್ತಿದೆ. ಸೈಕಲಾಜಿಕಲ್‌ ಥ್ರಿಲ್ಲರ್‌ ಕಥಾಹಂದರ ಈ ಸಿನಿಮಾದಲ್ಲಿ ಇದೆ. ಮನುಷ್ಯನ ಮನಸ್ಸಿನ ಸುಪ್ತ ಭಾವನೆಗಳು, ತುಮುಲ ತಲ್ಲಣಗಳನ್ನು ಈ ಸಿನಿಮಾದ ಮೂಲಕ ತೆರೆಮೇಲೆ ತರುತ್ತಿದ್ದಾರೆ ಯುವ ನಟ, ನಿರ್ದೇಶಕ ಪೃಥ್ವಿರಾಜ್‌ ಪಾಟೀಲ್‌. ಕನ್ನಡ ಚಿತ್ರರಂಗದಲ್ಲಿ ಸೈಕಲಾಜಿಕಲ್‌ ಥ್ರಿಲ್ಲರ್‌ (Psychological Thriller) ಸಿನಿಮಾಗಳ ಸಂಖ್ಯೆ ಕಡಿಮೆ. ಅಂಥ ವಿರಳ ಸಿನಿಮಾಗಳ ಸಾಲಿಗೆ ‘ವಿಕಲ್ಪ’ ಸಿನಿಮಾ ಕೂಡ ಸೇರುತ್ತಿದೆ. ‘ವಿಕಲ್ಪ’ ಎಂದರೆ ವಾಸ್ತವ ಹಾಗೂ ಕಲ್ಪನೆಗಳ ನಡುವಿನ ಒಂದು ಸ್ಥಿತಿ…

Read More

ಚಿತ್ರದುರ್ಗ ಬಳಿ ಬಸ್​​ ದುರಂತ: ಮಕ್ಕಳು ನಾಪತ್ತೆ, ಕರುಳು ಹಿಂಡುವಂತಿದೆ ಪೋಷಕರ ಗೋಳಾಟ – Kannada News | Chitradurga Bus Tragedy: Parents Agony Over Missing Daughters Navya and Manasa

ಚಿತ್ರದುರ್ಗ, ಡಿಸೆಂಬರ್​​ 25: ಹಿರಿಯೂರು ತಾಲೂಕಿನ ಗೊರ್ಲತ್ತು ಕ್ರಾಸ್ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಖಾಸಗಿ ಸ್ಲೀಪರ್​​ ಬಸ್​​ ಹೊತ್ತಿ ಉರಿದ ಪರಿಣಾಮ ಐವರು ಸಜೀವ ದಹನವಾಗಿದ್ದಾರೆ. ಬೆಂಗಳೂರಿನಿಂದ ಗೋಕರ್ಣಕ್ಕೆ ಹೊರಟಿದ್ದ ಬಸ್​​ಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಸಂಪೂರ್ಣವಾಗಿ ಸುಟ್ಟುಕರಕಲಾಗಿದೆ. ಘಟನೆ ಬಳಿಕ ಮೂವರು ನಾಪತ್ತೆಯಾಗಿದ್ದು, ಆ ಪೈಕಿ ಈಗ ಒಬ್ಬರ ಪತ್ತೆಯಾಗಿದೆ. ಉಳಿದ ಇಬ್ಬರು ಯುವತಿಯರು ಇನ್ನೂ ಮಿಸ್ಸಿಂಗ್​​ ಹಿನ್ನೆಲೆಅವರ ಪೋಷಕರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ಘಟನಾ ಸ್ಥಳಕ್ಕೆ ಆಗಮಿಸಿ, ತಮ್ಮ ಮಕ್ಕಳನ್ನು…

Read More

ಹುಬ್ಬಳ್ಳಿ ಮರ್ಯಾದೆ ಹತ್ಯೆ: ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಕೆಂಡಾಮಂಡಲ

ಹುಬ್ಬಳ್ಳಿ, (ಡಿಸೆಂಬರ್ 25): ಹುಬ್ಬಳ್ಳಿ ತಾಲೂಕಿನ ಇನಾಂವೀರಾಪುರದಲ್ಲಿ ಗರ್ಭಿಣಿ ಪುತ್ರಿ ಮಾನ್ಯಗಳನ್ನು ತಂದೆಯೇ ಕೊಚ್ಚಿ ಕೊಂದಿದ್ದಾನೆ. ದಲಿತ ಹುಡುಗನ ಮದುವೆಯಾಗಿದ್ದಕ್ಕೆ ಈ ಮರ್ಯಾದೆ ಹತ್ಯೆ ನಡೆದಿದೆ. ಇನ್ನು ಹತ್ಯೆ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದ್ದು, ತಂದೆಯ ಕೃತ್ಯಕ್ಕೆ ಆಕ್ರೋಗಳು ವ್ಯಕ್ತವಾಗುತ್ತಿವೆ. ಇನ್ನು ಕೆಲವರು ಹೆತ್ತು ಹೊತ್ತು ಬೆಳೆಸಿದ ಮಗಳು ಈ ರೀತಿ ಮಾರ್ಯದೆ ತೆಗೆದಿದ್ದು ಎಷ್ಟು ಸರಿ ಎಂದು ಕೊಲೆಯನ್ನು ಸಮರ್ಥಿಸಿಕೊಂಡಿದ್ದಾರೆ. ಇನ್ನು ಈ ಬಗ್ಗೆ ಶ್ರೀರಾಮಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಪ್ರತಿಕ್ರಿಯಿಸಿದ್ದು, ಮರ್ಯಾದೆ ಹತ್ಯೆಯನ್ನು ಘಟನೆಯನ್ನು…

Read More

BOI Recruitment 2025: ಬ್ಯಾಂಕ್ ಆಫ್ ಇಂಡಿಯಾದಲ್ಲಿ 400 ಅಪ್ರೆಂಟಿಸ್ ನೇಮಕಾತಿ; ಪದವೀಧರರು ಅರ್ಹರು – Kannada News | Bank of India Apprentice Recruitment 2025: 400 Posts, Apply Online by Jan 10!

ಬ್ಯಾಂಕ್ ಆಫ್ ಇಂಡಿಯಾ ಅಪ್ರೆಂಟಿಸ್‌ ಹುದ್ದೆಗಳ ಹುದ್ದೆಗಳಿಗೆ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಅರ್ಜಿ ಸಲ್ಲಿಸುವ ಪ್ರಕ್ರಿಯೆ ಇಂದಿನಿಂದ ಅಂದರೆ ಡಿಸೆಂಬರ್ 25 ರಿಂದ ಪ್ರಾರಂಭವಾಗಿದೆ. ಬ್ಯಾಂಕ್ 400 ಅಪ್ರೆಂಟಿಸ್ ಹುದ್ದೆಗಳನ್ನು ಪ್ರಕಟಿಸಿದೆ. ಆಸಕ್ತ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ bankofindia.bank.in ಗೆ ಭೇಟಿ ನೀಡುವ ಮೂಲಕ ನಿಗದಿತ ದಿನಾಂಕದೊಳಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಜಿ ನಮೂನೆಗಳನ್ನು ಸಲ್ಲಿಸಲು ಕೊನೆಯ ದಿನಾಂಕ ಜನವರಿ 10 ಎಂದು ನಿಗದಿಪಡಿಸಲಾಗಿದೆ. ಯಾರು ಅರ್ಜಿ ಸಲ್ಲಿಸಬಹುದು? ಅಪ್ರೆಂಟಿಸ್ ಹುದ್ದೆಗೆ ಅರ್ಜಿ ಸಲ್ಲಿಸುವ ಅರ್ಜಿದಾರರು ಮಾನ್ಯತೆ…

Read More

ಮಾಡದ ತಪ್ಪಿಗೆ ಸುಟ್ಟು ಕರಕಲಾದ ಸೀಬರ್ಡ್ ಬಸ್ಸಿನ ಕೊನೆಯ ದೃಶ್ಯ – Kannada News | Last Video of Bengaluru To gokarna seabird bus Before Accident at Chitradruga

ಚಿತ್ರದುರ್ಗ, (ಡಿಸೆಂಬರ್ 25): ಬೆಂಗಳೂರಿನಿಂದ ಗೋಕರ್ಣಕ್ಕೆ ಹೊರಟಿದ್ದ ಸೀಬರ್ಡ್ ಸ್ಲೀಪರ್ ಕೋಚ್ ಬಸ್​ ಹಿರಿಯೂರಿನ ಗೊರ್ಲತ್ತು ಬಳಿ ದುರಂತಕ್ಕೀಡಾಗಿದೆ. ಟ್ಯಾಂಕರ್ ಬಂದು ಬಸ್​ ಗೆ ಡಿಕ್ಕಿ ಹೊಡೆದಿದ್ದು, ಇದರ ರಭಸಕ್ಕೆ ಇಡೀ ಬಸ್ ಸುಟ್ಟು ಕರಕಲಾಗಿದೆ. ಇನ್ನು ಬಸ್​​ನಲ್ಲಿದ್ದ ಕೆಲ ಪ್ರಯಾಣಿಕರು ಸಹ ಸುಟ್ಟು ಕರಕಲಾಗಿದ್ದಾರೆ. ಒಬ್ಬೊಬ್ಬರದ್ದು ಒಂದೊಂದು ಕಥೆ ಕೇಳಿದ್ರೆ ಕರುಳು ಚುರುಕ್​ ಎನ್ನುತ್ತೆ. ಕೆಲವರು ಬ್ಯಾಚ್ಯುಲರ್ ಪಾರ್ಟಿಗೆ ತೆರಳುತ್ತಿದ್ದ, ಇನ್ನು ಕೆಲವರು ಗೋಕರ್ಣಕ್ಕೆ ಪ್ರವಾಸಕ್ಕೆ ತೆರಳುತ್ತಿದ್ದರು. ಆದ್ರೆ, ವಿಧಿ ಅವರನ್ನ ಬಲಿ ಪಡೆದುಕೊಂಡಿದೆ. ಇನ್ನು…

Read More

Chitradurga Bus Accident: ಮದುವೆಗೂ ಮುನ್ನ ಮಸಣ ಸೇರಿದ ಯುವತಿ; ತಾಯಿ-ಮಗಳು ಅಗ್ನಿಗೆ ಆಹುತಿ – Kannada News | Chitradurga Bus Tragedy: Five Passengers, Including a Child and the Lorry Driver Died

ಚಿತ್ರದುರ್ಗ, ಡಿಸೆಂಬರ್​​ 25: ಹಿರಿಯೂರು ತಾಲೂಕಿನ ಗೊರ್ಲತ್ತು ಕ್ರಾಸ್ ಬಳಿ ಖಾಸಗಿ ಸ್ಲೀಪರ್​​ ಬಸ್​​ ಮತ್ತು ಲಾರಿ ನಡುವೆ ನಡೆದ ಭೀಕರ ಅಪಘಾತದಲ್ಲಿ ಒಟ್ಟು 6 ಜನ ಸಜೀವ ದಹನವಾಗಿದ್ದಾರೆ. ಲಾರಿ ಚಾಲಕ ಸೇರಿ ಬಸ್​​ನಲ್ಲಿದ್ದ 5 ಮಂದಿ ಪ್ರಾಣ ಕಳೆದುಕೊಂಡಿದ್ದು, ಹಲವರ ಸ್ಥಿತಿ ಗಂಭೀರವಾಗಿದೆ. ಬಸ್​​​ನಲ್ಲಿ ಚಾಲಕ ಮತ್ತು ನಿರ್ವಾಹಕ ಸೇರಿ ಒಟ್ಟು 33 ಮಂದಿ ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ. ಚಿತ್ರದುರ್ಗ, ಶಿರಾ, ಹಿರಿಯೂರು ಸೇರಿ ವಿವಿಧ ಆಸ್ಪತ್ರೆಗಳಲ್ಲಿ ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ತಾಯಿ ಮಗು ದಾರುಣ…

Read More