Category Archives: Blog

Your blog category

ಬಾಗಲಕೋಟೆ ಬೈ ಎಲೆಕ್ಷನ್: ಬಿಜೆಪಿ ಅಭ್ಯರ್ಥಿ ವಿರುದ್ಧ ಕರಪತ್ರ ಹಂಚಿಕೆ; ಇಬ್ಬರು ಪೊಲೀಸ್ ಆಫೀಸರ್ಸ್ ಎತ್ತಂಗಡಿ

ಬಾಗಲಕೋಟೆ ಬೈ ಎಲೆಕ್ಷನ್: ಬಿಜೆಪಿ ಅಭ್ಯರ್ಥಿ ವಿರುದ್ಧ ಕರಪತ್ರ ಹಂಚಿಕೆ; ಇಬ್ಬರು ಪೊಲೀಸ್ ಆಫೀಸರ್ಸ್ ಎತ್ತಂಗಡಿ

ಬಾಗಲಕೋಟೆ, ಏಪ್ರಿಲ್​ 05: ರಾಜ್ಯದಲ್ಲಿ ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ಕ್ಷೇತ್ರದ ಉಪಚುನಾವಣೆ (By-election) ಗೆಲ್ಲೋದಕ್ಕೆ ಬಿಜೆಪಿ ಮತ್ತು ಕಾಂಗ್ರೆಸ್ ತಂತ್ರ ಪ್ರತಿತಂತ್ರ ಹೂಡುತ್ತಿವೆ. ಈ ಮಧ್ಯೆ ನಿನ್ನೆ ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ವಿರುದ್ಧ NSUI ಘಟಕದಿಂದ ಕರಪತ್ರ ಹಂಚಿಕೆ ಆರೋಪ ಕೇಳಿಬಂದಿತ್ತು. ದೊಡ್ಡ ಹೈಡ್ರಾಮಾವೇ ನಡೆದಿತ್ತು. ಇದೀಗ ಚುನಾವಣಾ ಆಯೋಗದ ಮಾರ್ಗಸೂಚಿಯಂತೆ ಇಬ್ಬರು ಪೊಲೀಸ್ ಅಧಿಕಾರಿಗಳನ್ನು ಎತ್ತಂಗಡಿ ಮಾಡಲಾಗಿದೆ.

ಬಾಗಲಕೋಟೆಯಲ್ಲಿ ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ವಿರುದ್ಧ NSUI ಸಂಘಟನೆ ಅಪಪ್ರಚಾರ ಮಾಡಿದ ಆರೋಪ ಕೇಳಿಬಂದಿದೆ. ಕುಮಾರೇಶ್ವರ ಕ್ಯಾಂಪಸ್​​ನಲ್ಲಿ ಕರಪತ್ರ ಹಿಡಿದು ಬಂದಿದ್ದ 18 NSUI ಕಾರ್ಯಕರ್ತರು ಹಾಗೂ ಬಿಜೆಪಿಯ ಕಾರ್ಯಕರ್ತರ ನಡುವೆ ಗಲಾಟೆ ಉಂಟಾಗಿತ್ತು. ಬಳಿಕ ಐವರು NSUI ಕಾರ್ಯಕರ್ತರನ್ನು ಪೊಲೀಸರು ಠಾಣೆಗೆ ಕರೆ ತಂದಿದ್ದರು. ಬಾಗಲಕೋಟೆ ನವನಗರದ ಸಿಪಿಐ ಕಚೇರಿಯಲ್ಲಿ ಗದ್ದಲ ಉಂಟಾಗಿತ್ತು. ಠಾಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಮುಖಂಡರು ಜಮಾವಣೆಗೊಂಡು ಗೊಂದಲಮಯ ವಾತಾವರಣ ನಿರ್ಮಾಣವಾಗಿತ್ತು.

ಇದನ್ನೂ ಓದಿ: ಬಾಗಲಕೋಟೆ ಉಪಚುನಾವಣೆ: ಬಿಜೆಪಿ ಅಭ್ಯರ್ಥಿ ವಿರುದ್ಧ NSUI ಅಪಪ್ರಚಾರ ಆರೋಪ

ಇದೀಗ ಬಾಗಲಕೋಟೆ ಮಹಿಳಾ ಪೊಲೀಸ್ ಠಾಣೆ ಸಿಪಿಐ ವಿಜಯ ಮುರಗುಂಡಿ ಮತ್ತು ನವನಗರ ಪೊಲೀಸ್ ಠಾಣೆ ಪಿಎಸ್​ಐ ಅಶೋಕ ಚೌಹಾಣ್​​ರನ್ನು ಎತ್ತಂಗಡಿ ಮಾಡಿ ಡಿಜಿ & ಐಜಿಪಿ ಡಾ.ಎಂ.ಎ.ಸಲೀಂ ಆದೇಶ ಹೊರಡಿಸಿದ್ದಾರೆ. ಬೆಳಗಾವಿ ಉತ್ತರ ವಲಯ ಐಜಿಪಿ ಕಚೇರಿಗೆ PSI ಅಶೋಕ್​ರನ್ನ ವರ್ಗಾವಣೆ ಮಾಡಲಾಗಿದ್ದು, ವಿಜಯಪುರ ಮಹಿಳಾ ಠಾಣೆಗೆ ಸಿಪಿಐ ವಿಜಯ ಮುರಗುಂಡಿ ಅವರನ್ನ ವರ್ಗಾವಣೆ ಮಾಡಲಾಗಿದೆ.

ಬಾಗಲಕೋಟೆ ಡಿಸಿ ಭೇಟಿ ಮಾಡಿದ ಬಿಜೆಪಿ ನಾಯಕರು

ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಗಲಕೋಟೆ ಡಿಸಿ ಕಚೇರಿಗೆ ವಿಪಕ್ಷ ನಾಯಕ ಆರ್.ಅಶೋಕ ನೇತೃತ್ವದಲ್ಲಿ ಬಿಜೆಪಿ ನಾಯಕರು ಡಿಸಿ ಭೇಟಿ ಮಾಡಿದ್ದಾರೆ. ವಿದ್ಯಾರ್ಥಿಗಳಿಗೆ ಬೆದರಿಕೆ ಹಾಕಿದವರ ವಿರುದ್ಧ ಕ್ರಮಕೈಗೊಳ್ಳಿ ಹಾಗೂ ವಿದ್ಯಾರ್ಥಿಗಳಿಗೆ ರಕ್ಷಣೆ ನೀಡುವಂತೆ ಮನವಿ ಪತ್ರ ನೀಡಲಾಗಿದೆ. ವಿಪಕ್ಷ ನಾಯಕ ಅಶೋಕ್​​, ಸಂಸದ ಗೋವಿಂದ ಕಾರಜೋಳ, ರಾಜ್ಯಸಭಾ ಸದಸ್ಯ ನಾರಾಯಣಸ ಭಾಂಡಗೆ, MLC ಪೂಜಾರ
ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ್, ಅರುಣ ಶಹಾಪುರ ಭಾಗಿ ಆಗಿದ್ದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ರಶ್ಮಿಕಾ ಮಂದಣ್ಣ ಹುಟ್ಟುಹಬ್ಬ: ಸ್ಪೆಷಲ್ ವಿಡಿಯೋ ಹಂಚಿಕೊಂಡ ವಿಜಯ್ ದೇವರಕೊಂಡ

ದಕ್ಷಿಣ ಭಾರತದ ಖ್ಯಾತ ನಟಿ ರಶ್ಮಿಕಾ ಮಂದಣ್ಣ (Rashmika Mandanna) ಇಂದು (ಏಪ್ರಿಲ್ 5) 30ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಈ ಬಾರಿಯ ಹುಟ್ಟುಹಬ್ಬ ರಶ್ಮಿಕಾ ಪಾಲಿಗೆ ಅತ್ಯಂತ ವಿಶೇಷವಾಗಿದೆ. ಏಕೆಂದರೆ ನಟ ವಿಜಯ್ ದೇವರಕೊಂಡ ಅವರೊಂದಿಗೆ ವಿವಾಹವಾದ ನಂತರ ಆಚರಿಸಿಕೊಳ್ಳುತ್ತಿರುವ ಮೊದಲ ಜನ್ಮದಿನ ಇದಾಗಿದೆ. ಈ ದಿನದಂದು ಪತಿ ವಿಜಯ್ ದೇವರಕೊಂಡ (Vijay Deverakonda) ಅವರು ‘ರಣಬಾಲಿ’ ಸಿನಿಮಾದ ಮೇಕಿಂಗ್ ವಿಡಿಯೋ ಹಂಚಿಕೊಳ್ಳುವ ಮೂಲಕ ರಶ್ಮಿಕಾಗೆ ಶುಭ ಕೋರಿದ್ದಾರೆ. ಈ ಚಿತ್ರದಲ್ಲಿ ವಿಜಯ್ ಮತ್ತು ರಶ್ಮಿಕಾ ಜೋಡಿಯಾಗಿ ನಟಿಸುತ್ತಿದ್ದಾರೆ. ರಶ್ಮಿಕಾ ಅವರು ಜಯಮ್ಮ ಎಂಬ ಪಾತ್ರವನ್ನು ಮಾಡುತ್ತಿದ್ದಾರೆ. ಹಾಗಾಗಿ ಈ ವಿಡಿಯೋ ಹಂಚಿಕೊಂಡಿರುವ ವಿಜಯ್ ಅವರು, ‘ಐ ಲವ್ ಯೂ ಜಯಮ್ಮ’ ಎಂದು ಕ್ಯಾಪ್ಷನ್ ನೀಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಪೋಸ್ಟ್ ಸಖತ್ ವೈರಲ್ ಆಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಬಂಡೀಪುರ ಸಫಾರಿಗೆ ಹೋದ ಪ್ರವಾಸಿಗರಿಗೆ ಹುಲಿ ಫ್ಯಾಮಿಲಿ ದರ್ಶನ, ಅಪರೂಪದ ವಿಡಿಯೋ

ಚಾಮರಾಹನಗರ, (ಏಪ್ರಿಲ್ 05): ದೇಶದ ಜನಪ್ರಿಯ ಹುಲಿ (Tiger) ರಕ್ಷಿತಾರಣ್ಯಗಳಲ್ಲಿ ಒಂದಾದ ಚಾಮರಾಜನಗರ ಜಿಲ್ಲೆಯ (chamarajanagar)  ಗುಂಡ್ಲುಪೇಟೆ ತಾಲೂಕಿನ ಬಂಡೀಪುರದಲ್ಲಿ (bandipur national park)  ಹುಲಿಗಳ ದರ್ಶನವಾಗಿದೆ. ತಾಯಿಯೊಂದಿಗೆ ಚಿನ್ನಾಟ ಆಡುತ್ತಿರುವ ಹುಲಿ ಮರಿಗಳ ಅಪರೂಪದ ದೃಶ್ಯ ಪ್ರವಾಸಿಗ ಸೆರೆಹಿಡಿದಿದ್ದು, ಸದ್ಯ ವಿಡಿಯೋ ವೈರಲ್ ಆಗಿದೆ. ಮತ್ತೊಂದೆಡೆ ಮಳೆಯಲ್ಲೂ ಅಂಜದೆ ತ್ ವ್ಯಾಘ್ರ ಕುಳಿತು ಕ್ಯಾಮೆರಾಕ್ಕೆ ಪೋಸ್ ಕೊಟ್ಟಿದೆ. ಸಫಾರಿ ರೀ ಓಪನ್ ಆದ ಬಳಿಕ ಮೊದಲ ಬಾರಿಗೆ ವ್ಯಾಘ್ರನ ಕುಟುಂಬವನ್ನ ಕಣ್ತುಂಬಿಕೊಂಡು ಪ್ರವಾಸಿಗರು ಪುಳಕಿತರಾಗಿದ್ದಾರೆ.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಕಮಲ್ ಹಾಸನ್ ಮೇಲೆ ಭುಗಿಲೆದ್ದ ಆಕ್ರೋಶ: 50 ಸಾವಿರ ಮರಳಿಸುವಂತೆ ಒತ್ತಾಯ

ಕಮಲ್ ಹಾಸನ್ (Kamal Haasan) ಭಾರತದ ಸ್ಟಾರ್ ನಟ, ನಿರ್ದೇಶಕ ಮತ್ತು ನಿರ್ಮಾಪಕ ಆಗಿರುವ ಜೊತೆಗೆ ರಾಜಕಾರಣಿಯೂ ಹೌದು. ಇತ್ತೀಚೆಗಷ್ಟೆ ಅವರು ರಾಜ್ಯಸಭೆಗೆ ಸಹ ಆಯ್ಕೆ ಆಗಿದ್ದಾರೆ. ಕೆಲ ವರ್ಷಗಳ ಹಿಂದೆ ಕಮಲ್ ಹಾಸನ್ ಅವರು ‘ಮಕ್ಕಳ್ ನಿಧಿ ಮಯಂ’ ಹೆಸರಿನ ರಾಜಕೀಯ ಪಕ್ಷ ಸ್ಥಾಪಿಸಿದ್ದರು. ರಾಜ್ಯದಾದ್ಯಂತ ಸಂಚರಿಸಿ ಪಕ್ಷವನ್ನು ಬಲಗೊಳಿಸುವ ಪ್ರಯತ್ನ ಮಾಡಿದ್ದರು. ತಮಿಳುನಾಡಿನ ಬಲಿಷ್ಟ ಪಕ್ಷವಾದ ಡಿಎಂಕೆಗೆ ಸವಾಲೊಡ್ಡುವ ಪಕ್ಷ ಎಂದೇ ಆರಂಭದಲ್ಲಿ ಬಿಂಬಿತವಾಗಿತ್ತು. ಆದರೆ ಈ ಬಾರಿ ಕಮಲ್ ಹಾಸನ್ ಅವರ ಪಕ್ಷ ಚುನಾವಣೆ ಸ್ಪರ್ಧಿಸುತ್ತಲೇ ಇಲ್ಲ.

ಡಿಎಂಕೆ ಎದುರಾಳಿ ಎಂದೇ ಗುರುತಿಸಿಕೊಂಡಿದ್ದ ಕಮಲ್ ಹಾಸನ್ ಅವರು ಸ್ವತಃ ಡಿಎಂಕೆಯಿಂದ ಸೀಟು ಪಡೆದು ರಾಜ್ಯಸಭೆ ಪ್ರವೇಶಿಸಿದ್ದು, ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಪಕ್ಷ ಸ್ಪರ್ಧಿಸುವುದಿಲ್ಲ ಎಂದಿದ್ದಾರೆ. ಇದು ಪಕ್ಷದ ಕಾರ್ಯಕರ್ತರು ಮತ್ತು ಪದಾಧಿಕಾರಿಗಳ ಅಸಮಾಧಾನಕ್ಕೆ ಕಾರಣವಾಗಿದ್ದು, ಸ್ವಪಕ್ಷೀಯರಿಂದಲೇ ಕಮಲ್ ಹಾಸನ್ ತೀವ್ರ ಪ್ರತಿರೋಧ ಎದುರಿಸುತ್ತಿದ್ದಾರೆ.

ಚುನಾವಣೆಗೆ ಸ್ಪರ್ಧಿಸಲು ಅಭ್ಯರ್ಥಿಗಳಿಂದ ತಲಾ 50,000 ರೂಪಾಯಿ ಅರ್ಜಿ ಶುಲ್ಕವನ್ನ ‘ಮಕ್ಕಳ್ ನೀಧಿ ಮೈಯಂ’ ಪಕ್ಷ ಸಂಗ್ರಹಿಸಿತ್ತು, ಆದರೆ ಈಗ ಸ್ವತಃ ಕಮಲ್ ಹಾಸನ್ ಅವರೇ ಚುನಾವಣೆಗೆ ಹೋಗದಿರುವ ನಿರ್ಧಾರ ಮಾಡಿದ ಬಳಿಕ, ಆಕಾಂಕ್ಷಿ ಅಭ್ಯರ್ಥಿಗಳು ತೀವ್ರ ಅಸಮಾಧಾನ ಹೊರಹಾಕಿರುವುದು ಮಾತ್ರವೇ ಅಲ್ಲದೆ, ತಮ್ಮ ಹಣವನ್ನು ಮರಳಿ ನೀಡುವಂತೆ ಒತ್ತಾಯಿಸಿದ್ದಾರೆ.

ಇದನ್ನೂ ಓದಿ:ಫ್ಲಾಪ್ ಚಿತ್ರಕ್ಕೆ ಸೀಕ್ವೆಲ್ ಮಾಡಲು ಕಮಲ್ ಹಾಸನ್ ಉತ್ಸಾಹ; ಹಿಂದೆ ಸರಿದ ನಿರ್ಮಾಣ ಸಂಸ್ಥೆ

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಆಸಕ್ತಿ ಹೊಂದಿದ್ದ ಅಭ್ಯರ್ಥಿಗಳು ಅರ್ಜಿ ಶುಲ್ಕವಾಗಿ ತಲಾ 50,000 ರೂ.ಗಳನ್ನು ಪಕ್ಷಕ್ಕೆ ಪಾವತಿಸಿದ್ದರು. ಆದರೆ ಈಗ ಕಮಲ್ ಹಾಸನ್ ಅವರು ಚುನಾವಣಾ ಕಣದಿಂದ ಹಿಂದೆ ಸರಿಯಲು ನಿರ್ಧರಿಸಿರುವುದರಿಂದ, ಆಕಾಂಕ್ಷಿಗಳು ತಮ್ಮ ಹಣವನ್ನು ವಾಪಸ್ ಕೇಳುತ್ತಿದ್ದಾರೆ. ಅಭ್ಯರ್ಥಿಗಳ ಈ ಬೇಡಿಕೆಗೆ ಪ್ರತಿಕ್ರಿಯಿಸಿರುವ ಪಕ್ಷದ ಪದಾಧಿಕಾರಿಗಳು, ಪಾವತಿಸಿದ ಮೊತ್ತವನ್ನು ‘ಪಕ್ಷಕ್ಕೆ ನೀಡಿದ ದೇಣಿಗೆ’ ಎಂದು ಪರಿಗಣಿಸಲಾಗುತ್ತದೆ ಮತ್ತು ಈ ಸಮಯದಲ್ಲಿ ಅದನ್ನು ಮರುಪಾವತಿಸಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ. ಇದು ಇನ್ನಷ್ಟು ಅಸಮಾಧಾನಕ್ಕೆ ಕಾರಣವಾಗಿದೆ.

ಡಿಎಂಕೆ ನೇತೃತ್ವದ ಮೈತ್ರಿಕೂಟದ ಭಾಗವಾಗಿರುವ ಎಂಎನ್ಎಂ, ತನಗೆ ನೀಡಲಾದ ಸೀಟುಗಳ ಸಂಖ್ಯೆ ಕಡಿಮೆ ಇರುವುದು ಮತ್ತು ಡಿಎಂಕೆಯ ಚಿಹ್ನೆಯಡಿ ಸ್ಪರ್ಧಿಸುವಂತೆ ಬಂದ ಸಲಹೆಯನ್ನು ಒಪ್ಪದ ಕಾರಣ ಏಪ್ರಿಲ್ 23ರ ಚುನಾವಣೆಯಿಂದ ಹಿಂದೆ ಸರಿಯುವುದಾಗಿ ಘೋಷಿಸಿತ್ತು. ಕಮಲ್ ಹಾಸನ್ ಅವರು ತಮ್ಮ ಪಕ್ಷವು ಚುನಾವಣೆಯಲ್ಲಿ ಸ್ಪರ್ಧಿಸದಿದ್ದರೂ, ಡಿಎಂಕೆ ನೇತೃತ್ವದ ಮೈತ್ರಿಕೂಟದ ಅಭ್ಯರ್ಥಿಗಳಿಗೆ ಬೇಷರತ್ ಬೆಂಬಲ ನೀಡುವುದಾಗಿ ಘೋಷಿಸಿದ್ದಾರೆ. ಆದರೆ ಚುನಾವಣೆ ಕಣಕ್ಕಿಳಿಯಲು ಉತ್ಸುಕರಾಗಿದ್ದ ಅಭ್ಯರ್ಥಿಗಳಿಗೆ ಇದು ತೀವ್ರ ಅಸಮಾಧಾನ ಮೂಡಿಸಿದೆ. ಇದೀಗ ಸ್ವಪಾರ್ಟಿಯಲ್ಲೇ ಕಮಲ್ ವಿರುದ್ಧ ಆಕ್ರೋಶ ಭುಗಿಲೆದ್ದಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಜಿಡಿಪಿಯಲ್ಲಿ 4ನೇ ಸ್ಥಾನ, ತಲಾದಾಯದಲ್ಲಿ 126ನೇ ಸ್ಥಾನ; ಭಾರತದ ಆರ್ಥಿಕ ಅಂತರ ಎತ್ತಿತೋರಿಸಿದ ಸ್ಟೀವ್ ಹ್ಯಾಂಕ್

ನವದೆಹಲಿ, ಏಪ್ರಿಲ್ 5: ವಿಶ್ವದ ನಾಲ್ಕನೇ ಅತಿದೊಡ್ಡ ಆರ್ಥಿಕತೆ ಹೊಂದಿರುವ ಭಾರತ, ಜಿಡಿಪಿ ತಲಾದಾಯದಲ್ಲಿ (GDP Per Capita Income) ಬಹಳ ಹಿಂದುಳಿದಿದೆ. ಬಡವರು ಮತ್ತು ಕೆಳಮಧ್ಯಮ ವರ್ಗದವರ ಸಂಖ್ಯೆಯೇ ಅತಿಹೆಚ್ಚು ಇರುವುದು. ವಿಶ್ವಖ್ಯಾತ ಆರ್ಥಿಕ ತಜ್ಞ ಸ್ಟೀವ್ ಹ್ಯಾಂಕ್ (Steve Hanke) ಅವರು ಈ ವಿಚಾರವನ್ನು ಪ್ರಸ್ತಾಪಿಸಿ ಮಾಡಿದ ಟ್ವೀಟ್​ವೊಂದು ಚರ್ಚೆ ಹುಟ್ಟುಹಾಕಿದೆ.

ಭಾರತ ವಿಶ್ವದ ನಾಲ್ಕನೇ ಅತಿದೊಡ್ಡ ಜಿಡಿಪಿ ಹೊಂದಿದೆ. ಆದರೆ, ತಲಾದಾಯದಲ್ಲಿ 126ನೇ ಸ್ಥಾನದಲ್ಲಿದೆ ಎಂದಿರುವ ಅವರು 1980ರಲ್ಲಿ ಚೀನಾಗಿಂತಲೂ ಭಾರತದ ಜಿಡಿಪಿ ತಲಾದಾಯ ಹೆಚ್ಚು ಇದ್ದದ್ದು, ಈಗ ಅರ್ಧದಷ್ಟು ಇರುವ ಸಂಗತಿಯನ್ನು ಎತ್ತಿ ತೋರಿಸಿದ್ದಾರೆ.

ಇದನ್ನೂ ಓದಿ: ಟಾಟಾ ಟ್ರಸ್ಟ್ಸ್​ನ ಬಾಯ್ ಹಿರಾಬಾಯ್ ಟ್ರಸ್ಟ್​ನಿಂದ ಹೊರಬಿದ್ದ ವೇಣು ಶ್ರೀನಿವಾಸನ್

ಪ್ರೊಫೆಸರ್ ಸ್ಟೀವ್ ಹ್ಯಾಂಕ್ ಅವರ ಈ ಟ್ವೀಟ್​ಗೆ ಸಾಕಷ್ಟು ಪ್ರತಿಕ್ರಿಯೆಗಳು ಬಂದಿವೆ. ಭಾರತದ ಆರ್ಥಿಕತೆ ಈಗ ವೇಗವಾಗಿ ಬೆಳೆಯುತ್ತಿದೆಯಾದರೂ ಜನಸಂಖ್ಯೆ ಹೆಚ್ಚಿರುವ ಕಾರಣಕ್ಕೆ ಜಿಡಿಪಿ ತಲಾದಾಯ ಸಹಜವಾಗಿ ಕಡಿಮೆ ಇದೆ ಎಂದು ಹೆಚ್ಚಿನ ಮಂದಿ ವಾದಿಸಿದ್ದಾರೆ.

ಸ್ಟೀವ್ ಹ್ಯಾಂಕ್ ಅವರ ಟ್ವೀಟ್

2001ರಲ್ಲಿ ಭಾರತದ ಜಿಡಿಪಿ ತಲಾದಾಯ 450 ಡಾಲರ್ ಇತ್ತು. ಇವತ್ತು ಅದರು 2,700 ಡಾಲರ್​ಗಿಂತಲೂ ಹೆಚ್ಚಿದೆ. 25 ವರ್ಷದಲ್ಲಿ ಆರು ಪಟ್ಟು ಹೆಚ್ಚಿದೆ. ದೊಡ್ಡ ಗಾತ್ರದ ಆರ್ಥಿಕತೆಗಳು ಪದರಗಳಲ್ಲಿ ಬೆಳವಣಿಗೆ ಹೊಂದುತ್ತವೆ. ಮೊದಲು ಜಿಡಿಪಿ ಹಿಗ್ಗುತ್ತದೆ. ನಂತರ ಆದಾಯ ಹಂಚಿಕೆ ಬಹಳ ಕ್ರಮೇಣವಾಗಿ ಸುಧಾರಿಸುತ್ತಾ ಹೋಗುತ್ತದೆ ಎಂದು ಒಬ್ಬರು ಕಾಮೆಂಟಿಸಿದ್ದಾರೆ.

ಇದನ್ನೂ ಓದಿ: ಹಾರ್ಮುಜ್ ಜಲಸಂಧಿಯಲ್ಲಿ ಇರಾನ್​ನಿಂದ ಹೈಟೆಕ್ ಟೋಲ್​ಬೂತ್; ಯುಆನ್, ಕ್ರಿಪ್ಟೋದಲ್ಲಿ ಟೋಲ್ ಕಟ್ಟಿರಿ, ಸೀಕ್ರೆಟ್ ಕೋಡ್ ಪಡೆಯಿರಿ

ಭಾರತದ ತಲಾದಾಯವನ್ನು ನಾಮಿನಲ್ ಜಿಡಿಪಿ ಬದಲು ಪಿಪಿಪಿ ಆಧಾರದಲ್ಲಿ ಅಳೆಯುವುದು ಸೂಕ್ತ. ನಾಮಿನಲ್ ಜಿಡಿಪಿ ತಲಾದಾಯವನ್ನು ಡಾಲರ್ ಮೌಲ್ಯದ ಮೂಲಕ ಗಣಿಸಲಾಗುತ್ತದೆ. ಆದರೆ, ಪಿಪಿಪಿ ಮಾಡಲ್​ನಲ್ಲಿ ಜನರ ಜೀವನಮಟ್ಟವನ್ನು ಹೆಚ್ಚು ನಿಖರವಾಗಿ ಅಳೆಯಬಹುದು ಎಂಬುದು ಕೆಲವರ ವಾದ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

SRH vs LSG IPL 2026 Live Score: ಎಸ್​ಆರ್​ಎಚ್- ಲಕ್ನೋ ಮುಖಾಮುಖಿ – Kannada News | Sunrisers Hyderabad vs Lucknow Super Giants IPL 2026 Live Cricket Score SRH vs LSG Match on 5th April latest news in Kannada

ಐಪಿಎಲ್ 2026 ರಲ್ಲಿ ಇಂದು ಎರಡು ಪಂದ್ಯಗಳು ನಡೆಯಿವೆ. ಇದರಲ್ಲಿ ಮೊದಲ ಪಂದ್ಯ ಸನ್‌ರೈಸರ್ಸ್ ಹೈದರಾಬಾದ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ನಡುವೆ ನಡೆಯುತ್ತಿದೆ. ಎರಡೂ ತಂಡಗಳ ನಡುವಿನ ಪಂದ್ಯವನ್ನು ಸನ್‌ರೈಸರ್ಸ್‌ನ ತವರು ಮೈದಾನವಾದ ಹೈದರಾಬಾದ್‌ನಲ್ಲಿ ನಡೆಸಲಾಗುತ್ತಿದೆ. ಐಪಿಎಲ್ 2026 ರಲ್ಲಿ ಸನ್‌ರೈಸರ್ಸ್ ತಮ್ಮ ತವರು ಮೈದಾನದಲ್ಲಿ ಆಡುವ ಮೊದಲ ಪಂದ್ಯ ಇದು. ಅದೇ ಸಮಯದಲ್ಲಿ, ಲಕ್ನೋ ಸೂಪರ್ ಜೈಂಟ್ಸ್ ತಮ್ಮ ಮನೆಯ ಹೊರಗೆ ಆಡುವ ಮೊದಲ ಪಂದ್ಯ ಇದು.

Source link

ದೆಹಲಿಯಲ್ಲಿ ನಡೀತಿದೆ ನಕಲಿ ಔಷಧಿಗಳ ತಯಾರಿಸುವ ದಂಧೆ: ಡಿಸಿಪಿ ಆದಿತ್ಯ ಗೌತಮ್ ಹೇಳಿದ್ದೇನು?

ನವದೆಹಲಿ, ಏಪ್ರಿಲ್ 05: ದೆಹಲಿಯಲ್ಲಿ ನಕಲಿ ಔಷಧಿಗಳನ್ನು ತಯಾರಿಸುವ ದಂಧೆ ಬಗ್ಗೆ ಮಾಹಿತಿ ಸಿಕ್ಕಿದೆ ಎಂದು ಕ್ರೈಂ ಬ್ರಾಂಚ್ ಡಿಸಿಪಿ ಆದಿತ್ಯ ಗೌತಮ್ ಹೇಳಿದ್ದಾರೆ. ಸೈಬರ್ ಸೆಲ್‌ನ ಎಎಸ್‌ಐಗೆ ಶಹದಾರಾ ಮತ್ತು ಉತ್ತರ ಪ್ರದೇಶದ ಇತರ ಭಾಗಗಳಿಂದ ಮಾಹಿತಿ ಬಂದಿತ್ತು.ಆರೋಪಿಯಿಂದ ಆತನಿಂದ 1.20 ಲಕ್ಷಕ್ಕೂ ಹೆಚ್ಚು ನಕಲಿ ಔಷಧಿಗಳನ್ನು ವಶಪಡಿಸಿಕೊಳ್ಳಲಾಗಿದೆ.ಮಾಯಾಂಕ್ ಅಗರ್ವಾಲ್ ಮತ್ತು ಮೋಹಿತ್ ಶರ್ಮಾ ಸೇರಿದಂತೆ ಇನ್ನೂ ಮೂವರನ್ನು ಬಂಧಿಸಲಾಗಿದೆ. ನಾವು ಮುಜಫರ್ನಗರದಲ್ಲಿ ಸಂಪೂರ್ಣ ಕಾರ್ಖಾನೆಯನ್ನು ಭೇದಿಸಿದ್ದೇವೆ. ಈ ವ್ಯಕ್ತಿಗಳು 2011-12 ರಿಂದ ಈ ಕಾರ್ಯಾಚರಣೆಯನ್ನು ನಡೆಸುತ್ತಿದ್ದರು.ಒಟ್ಟು 6 ಜನರನ್ನು ಬಂಧಿಸಲಾಗಿದೆ ಎಂದುತಿಳಿಸಿದ್ದಾರೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

 

 

Source link

Weekly Horoscope: ಏಪ್ರಿಲ್ ತಿಂಗಳ ಮೊದಲ ವಾರ ಯಾವ ರಾಶಿಗೆ ಶುಭ? ಯಾರಿಗೆ ಅಶುಭ?

ಇದು 2026ರ ಏಪ್ರಿಲ್ ನ ಮೊದಲ ವಾರದಲ್ಲಿ ಸಾಲದ ಚಿಂತೆ, ನೆಂಟರ ಆಗಮನ, ಸಂಗಾತಿಯಿಂದ ಅಸಹಾಯಕತೆ, ಧಾರ್ಮಿಕ ನಂಬಿಕೆಗೆ ಹೆಚ್ಚು ಪ್ರಾಶಸ್ತ್ಯ ಸಿಗಲಿದೆ. ಸಿಗುವ ಗೌರವವನ್ನು ಕಾಳಜಿಯಿಂದ ಪಡೆಯುವ ಹೊಣೆಗಾರಿಕೆಯೂ ಈ ವಾರದ್ದು.

ಮೇಷ:

ಹೊಸ ಉದ್ಯೋಗ ಪ್ರಯತ್ನಕ್ಕೆ ಮನ್ನಣೆ ಸಿಗಲಿದೆ. ಕುಟುಂಬದಲ್ಲಿ ಶುಭ ಕಾರ್ಯದ ಚರ್ಚೆ ನಡೆಯಲಿದ್ದು, ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಹರಿಸುವುದು ಸೂಕ್ತ.

ವೃಷಭ:

ಭೂಮಿ ಅಥವಾ ವಾಹನ ಖರೀದಿ ಯೋಗವಿದೆ. ದೂರದ ಪ್ರಯಾಣದಿಂದ ಲಾಭವಾಗಲಿದೆ. ಸಂಗಾತಿಯೊಂದಿಗೆ ಮಧುರ ಬಾಂಧವ್ಯ ವೃದ್ಧಿಸಲಿದ್ದು, ಹಿರಿಯರ ಆಶೀರ್ವಾದ ಬೆನ್ನಿಗಿರುತ್ತದೆ.

ಮಿಥುನ:

ವ್ಯಾಪಾರದಲ್ಲಿ ಅನಿರೀಕ್ಷಿತ ಲಾಭ ಕಂಡುಬರಲಿದೆ. ಹಳೆಯ ಸಾಲಗಳಿಂದ ಮುಕ್ತಿ ಪಡೆಯುವ ಕಾಲವಿದು. ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸು ಸಿಗಲಿದೆ, ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳಿ.

ಕರ್ಕಾಟಕ:

ಕಚೇರಿಯಲ್ಲಿ ಸಹೋದ್ಯೋಗಿಗಳ ಸಹಕಾರ ಸಿಗಲಿದೆ. ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕಿ. ಮನೆಯಲ್ಲಿ ಸಣ್ಣಪುಟ್ಟ ಕಲಹಗಳು ಉಂಟಾಗಬಹುದು, ತಾಳ್ಮೆಯಿಂದ ವರ್ತಿಸುವುದು ಉನ್ನತ ಫಲ ನೀಡುತ್ತದೆ.

ಸಿಂಹ:

ಸಮಾಜದಲ್ಲಿ ಗೌರವ ಪ್ರತಿಷ್ಠೆಗಳು ಹೆಚ್ಚಾಗಲಿವೆ. ರಾಜಕೀಯ ವ್ಯಕ್ತಿಗಳಿಗೆ ಶುಭ ಕಾಲ. ಹೂಡಿಕೆಯಿಂದ ಲಾಭ ದೊರೆಯಲಿದೆ, ಆದರೆ ಆತುರದ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ.

ಕನ್ಯಾ:

ವೃತ್ತಿ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳು ಕಂಡುಬರುತ್ತವೆ. ಸಂಗಾತಿಯ ಸಲಹೆಯು ಸಂಕಷ್ಟದಿಂದ ಪಾರು ಮಾಡಲಿದೆ. ಬೆನ್ನು ನೋವಿನಂತಹ ಸಣ್ಣ ಸಮಸ್ಯೆಗಳು ಕಾಡಬಹುದು, ವಿಶ್ರಾಂತಿ ಅಗತ್ಯ.

ತುಲಾ:

ಶತ್ರುಗಳ ಮೇಲೆ ಜಯ ಸಾಧಿಸುವಿರಿ. ದೇವತಾ ಕಾರ್ಯಗಳಲ್ಲಿ ಆಸಕ್ತಿ ಮೂಡಲಿದೆ. ಸ್ಥಗಿತಗೊಂಡಿದ್ದ ಕಾಮಗಾರಿಗಳು ಪುನರಾರಂಭಗೊಳ್ಳಲಿವೆ. ಹಣಕಾಸಿನ ವ್ಯವಹಾರದಲ್ಲಿ ಜಾಗರೂಕತೆಯಿರಲಿ.

ವೃಶ್ಚಿಕ:

ಮಾನಸಿಕ ನೆಮ್ಮದಿಗಾಗಿ ಪ್ರವಾಸ ಕೈಗೊಳ್ಳುವಿರಿ. ಆಪ್ತ ಸ್ನೇಹಿತರಿಂದ ನೆರವು ಸಿಗಲಿದೆ. ಕೃಷಿ ಚಟುವಟಿಕೆಯಲ್ಲಿ ನಿರತರಾದವರಿಗೆ ಉತ್ತಮ ಆದಾಯವಿದೆ. ಮೌನದಿಂದ ಕೆಟ್ಟ ಪರಿಸ್ಥಿತಿಗಳನ್ನು ನಿಭಾಯಿಸಿ.

ಧನು:

ಹೊಸ ವ್ಯವಹಾರ ಆರಂಭಿಸಲು ಸಕಾಲವಿದು. ಅವಿವಾಹಿತರಿಗೆ ಕಂಕಣ ಭಾಗ್ಯ ಕೂಡಿ ಬರಲಿದೆ. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ ಕಂಡುಬಂದು ಮನಸ್ಸಿಗೆ ಹರ್ಷ ತರಲಿದೆ.

ಮಕರ:

ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯಲಿದೆ. ವಿನಾಕಾರಣ ಬೇರೆಯವರ ಜಗಳದಲ್ಲಿ ಭಾಗಿಯಾಗಬೇಡಿ. ಆಸ್ತಿ ವಿವಾದಗಳು ಸುಗಮವಾಗಿ ಬಗೆಹರಿಯುವ ಸಾಧ್ಯತೆಯಿದೆ. ತಾಯಿಯ ಆರೋಗ್ಯ ಸುಧಾರಿಸಲಿದೆ.

ಕುಂಭ:

ಸೃಜನಶೀಲ ಕೆಲಸಗಳಿಗೆ ಮನ್ನಣೆ ಸಿಗಲಿದೆ. ವಿದೇಶ ಪ್ರಯಾಣದ ಕನಸು ನನಸಾಗಬಹುದು. ಆರ್ಥಿಕ ಮುಗ್ಗಟ್ಟು ದೂರವಾಗಿ ಹೊಸ ಆದಾಯದ ಮೂಲಗಳು ಸೃಷ್ಟಿಯಾಗಲಿವೆ.

ಮೀನ:

ದೈಹಿಕ ವ್ಯಾಯಾಮದಿಂದ ಚೈತನ್ಯ ಸಿಗಲಿದೆ. ಕಳೆದುಹೋದ ವಸ್ತುಗಳು ಮರಳಿ ಪಡೆಯುವಿರಿ. ಪ್ರೇಮ ಜೀವನದಲ್ಲಿ ಯಶಸ್ಸು ಸಿಗಲಿದೆ. ಗುಪ್ತ ಶತ್ರುಗಳ ಬಗ್ಗೆ ಎಚ್ಚರವಿರಲಿ.

– ಲೋಹಿತ ಹೆಬ್ಬಾರ್ – 8762924271 (what’s app only)

Source link

ಭಾರತ-ಬಾಂಗ್ಲಾದೇಶ ಗಡಿಯಲ್ಲಿ ಹಾವುಗಳು, ಮೊಸಳೆಗಳ ಗಸ್ತು

ಕೋಲ್ಕತ್ತಾ, ಏಪ್ರಿಲ್ 05: ಭಾರತ-ಬಾಂಗ್ಲಾ ಗಡಿಯಲ್ಲಿ ಬಿಎಸ್​ಎಫ್ ಜವಾನರಲ್ಲ ಇನ್ನುಮುಂದೆ ಹಾವು(Snake)ಗಳು, ಮೊಸಳೆಗಳು ಗಸ್ತು ತಿರುಗಲಿವೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಗಡಿಯಲ್ಲಿ ಸಾಕಷ್ಟು ಕಡೆ ಬೇಲಿಗಳೇ ಇಲ್ಲದ ಕಾರಣ ಒಳನುಸುಳುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಇದನ್ನು ತಡೆಯಲು ಗಡಿಯಲ್ಲಿ ಹಾವುಗಳು ಮತ್ತು ಮೊಸಳಗೆಗಳನ್ನು ನಿಯೋಜಿಸಲು ಬಿಎಸ್​ಎಫ್​ ಮುಂದಾಗಿದೆ. ಗಡಿಯಲ್ಲಿ ಸುಮಾರು 175 ಕಿ.ಮೀ ಬೇಲಿ ಇಲ್ಲದ ಪ್ರದೇಶದುದ್ದಕ್ಕೂ ಸರೀಸೃಪಗಳನ್ನು ನಿಯೋಜಿಸಲಾಗುತ್ತದೆ.  4,096 ಕಿ.ಮೀ.ಗಳಲ್ಲಿ, 850 ಕಿ.ಮೀ. ಬೇಲಿಯಿಲ್ಲದೇ ಉಳಿದಿದೆ.ಆದರೆ ಸರ್ಕಾರದಿಂದ ಯಾವುದೇ ಅಂತಿಮ ನಿರ್ಧಾರವಾಗಿಲ್ಲ.

ಉನ್ನತ ಮಟ್ಟದ ಸಭೆಗಳ ನಂತರ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಬಾಂಗ್ಲಾದೇಶದೊಂದಿಗಿನ 175 ಕಿಲೋಮೀಟರ್‌ಗಳಷ್ಟು ಬೇಲಿಯಿಲ್ಲದ ನದಿಗಳು ಮತ್ತು ಜೌಗು ಪ್ರದೇಶಗಳಲ್ಲಿ ದಾಟುವಿಕೆಯನ್ನು ತಡೆಯಲು ಹಾವುಗಳು ಮತ್ತು ಮೊಸಳೆಗಳನ್ನು ನಿಯೋಜಿಸಬಹುದು ಎಂದು ಸಲಹೆ ನೀಡಿತ್ತು.

ಭಾರತ-ಬಾಂಗ್ಲಾದೇಶ ಗಡಿಯಲ್ಲಿ ಹಾವುಗಳು ಮತ್ತು ಮೊಸಳೆಗಳನ್ನು ನಿಯೋಜಿಸಲು ಬಿಎಸ್‌ಎಫ್ ಆಲೋಚಿಸಿದೆ. ಈ ಪ್ರಸ್ತಾವನೆಯನ್ನು ಅಂತಿಮಗೊಳಿಸಲಾಗಿದೆ. ಭಾರತ-ಬಾಂಗ್ಲಾದೇಶ ಗಡಿಯು 4,096 ಕಿಲೋಮೀಟರ್‌ಗಳವರೆಗೆ ವ್ಯಾಪಿಸಿದೆ.

ಮತ್ತಷ್ಟು ಓದಿ: ಕೋಲಾರ: ಸೆಷನ್ಸ್ ಕೋರ್ಟ್ ಒಳ ಸೇರಿಕೊಂಡಿದ್ದ ಹಾವು! ಆಮೇಲೇನಾಯ್ತು ನೋಡಿ

ಬಿಎಸ್‌ಎಫ್‌ನೊಳಗೆ ಈ ವಿಷಯವನ್ನು ಉನ್ನತ ಮಟ್ಟದಲ್ಲಿ ಚರ್ಚಿಸಲಾಗುತ್ತಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಫೆಬ್ರವರಿ 9 ರಂದು ಮಹಾನಿರ್ದೇಶಕ ಪ್ರವೀಣ್ ಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಪ್ರಸ್ತಾಪವನ್ನು ಮಾಡಲಾಯಿತು.

ಮಾರ್ಚ್ 20 ರಂದು ನವದೆಹಲಿಯ ಬಿಎಸ್‌ಎಫ್ ಪ್ರಧಾನ ಕಚೇರಿಯಲ್ಲಿ ನಡೆದ ಮತ್ತೊಂದು ಉನ್ನತ ಮಟ್ಟದ ಸಭೆಯಲ್ಲಿ ಈ ವಿಚಾರವನ್ನು ಮತ್ತೊಮ್ಮೆ ಚರ್ಚಿಸಲಾಗಿದೆ ಎಂದು ವರದಿಯಾಗಿದೆ. ಇದರ ನಂತರ, ಪೂರ್ವ ಮತ್ತು ಈಶಾನ್ಯ ವಲಯಗಳ ಗಡಿ ಮಟ್ಟದ ಅಧಿಕಾರಿಗಳಿಗೆ ಸಂದೇಶಗಳನ್ನು ಕಳುಹಿಸಲಾಯಿತು.

ಪ್ರಸ್ತಾವನೆಯನ್ನು ಕಾರ್ಯಾಚರಣೆಯ ದೃಷ್ಟಿಕೋನದಿಂದ ಪರೀಕ್ಷಿಸಲು ಮತ್ತು ನಿಗದಿತ ಸಮಯದೊಳಗೆ ಕ್ರಮ ಕೈಗೊಂಡ ವರದಿಯನ್ನು ಸಲ್ಲಿಸಲು ಅಧಿಕಾರಿಗಳಿಗೆ ಕೇಳಲಾಯಿತು.
ಭಾರತ-ಬಾಂಗ್ಲಾದೇಶ ಗಡಿಯು ಜನನಿಬಿಡ ಪ್ರದೇಶಗಳು, ಕಾಡುಗಳು, ಪರ್ವತಗಳು, ಜೌಗು ಪ್ರದೇಶಗಳು ಮತ್ತು ನದಿ ಪ್ರದೇಶಗಳನ್ನು ಒಳಗೊಂಡಂತೆ ವೈವಿಧ್ಯಮಯ ಮತ್ತು ಕಷ್ಟಕರವಾದ ಭೂಪ್ರದೇಶದ ಮೂಲಕ ಹಾದುಹೋಗುತ್ತದೆ.

ಈ ಪ್ರದೇಶಗಳಲ್ಲಿ ಒಳನುಸುಳುವಿಕೆ, ಕಳ್ಳಸಾಗಣೆ ಮತ್ತು ಇತರ ಕಾನೂನುಬಾಹಿರ ಚಟುವಟಿಕೆಗಳಿಗೆ ಗುರಿಯಾಗುತ್ತವೆ. ಇತ್ತೀಚಿನ ವರ್ಷಗಳಲ್ಲಿ ಬಿಎಸ್‌ಎಫ್ ತನ್ನ ಕಣ್ಗಾವಲು ಮೂಲಸೌಕರ್ಯವನ್ನು ಗಮನಾರ್ಹವಾಗಿ ಹೆಚ್ಚಿಸಿದೆ. ಯೋಧರು ಬಾಡಿ ಕ್ಯಾಮರಾಗಳನ್ನು ಬಳಸುತ್ತಿದ್ದಾರೆ.

ಈ ಪ್ರಸ್ತಾಪವನ್ನು ಎಷ್ಟೇ ಗಂಭೀರವಾಗಿ ಪರಿಗಣಿಸಿದರೂ, ಹಲವಾರು ಪ್ರಾಯೋಗಿಕ ಪ್ರಶ್ನೆಗಳಿಗೆ ಉತ್ತರಿಸಲಾಗಿಲ್ಲ. ಗಡಿಯಲ್ಲಿ ಯಾವ ಭಾಗದಲ್ಲಿ ಅವುಗಳನ್ನು ಬಿಡಲಾಗುತ್ತದೆ ಎನ್ನುವ ಕುರಿತು ಸ್ಪಷ್ಟನೆ ಸಿಕ್ಕಿಲ್ಲ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಬೆಂಕಿ ಬಿರುಗಾಳಿ ಬ್ಯಾಟಿಂಗ್​ಗೆ ಹಳೆಯ ದಾಖಲೆಯೇ ಧ್ವಂಸ..!

Source link