12,000 ಕೋಟಿ ರೂ ವೆಚ್ಚದಲ್ಲಿ ಡೆಲ್ಲಿ ಮೆಟ್ರೋ ವಿಸ್ತರಣೆ; ಬರಲಿವೆ 13 ಹೊಸ ನಿಲ್ದಾಣಗಳು; ಸಂಪುಟ ಅನುಮೋದನೆ – Kannada News | Union cabinet approves for Delhi Metro expansion at cost of Rs 12,000 crore
ನವದೆಹಲಿ, ಡಿಸೆಂಬರ್ 24: ಡೆಲ್ಲಿ ಮೆಟ್ರೋ ಜಾಲ (Delhi Metro) ಮತ್ತಷ್ಟು ವಿಸ್ತರಣೆಯಾಗಲಿದೆ. 12,015 ಕೋಟಿ ರೂ ವೆಚ್ಚದಲ್ಲಿ ಮೆಟ್ರೋ ವಿಸ್ತರಣೆಯ ಯೋಜನೆಗೆ ಕೇಂದ್ರ ಸಂಪುಟ ಬುಧವಾರ ಅನುಮೋದನೆ ನೀಡಿದೆ. ಕೇಂದ್ರ ಸಚಿವ ಎ ವೈಷ್ಣವ್ ಅವರು ಈ ವಿಚಾರವನ್ನು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಡೆಲ್ಲಿ ಮೆಟ್ರೋ ಫೇಸ್-5 (ಎ) ಪ್ರಾಜೆಕ್ಟ್ ಅಡಿಯಲ್ಲಿ ಮೂರು ಹೊಸ ಕಾರಿಡಾರ್ ಮೊದಲಾದವರು ನಿರ್ಮಾಣವಾಗಲಿವೆ. ಈ ಮೂರು ಕಾರಿಡಾರ್ಗಳ ಒಟ್ಟು ಉದ್ದ 16.076 ಕಿಮೀ ಆಗಿರಲಿದೆ. ಪ್ರಸ್ತಾಪವಾಗಿರುವ ಯೋಜನೆಯಲ್ಲಿ 16 ಕಿಮೀ ಜಾಲ…