ಐಶ್ವರ್ಯಾ ರೈ ಯಶಸ್ಸಿನ ಬಗ್ಗೆ ಅಸೂಯೆ ಪಟ್ಟಿದ್ದರೇ ಅಭಿಷೇಕ್ ಬಚ್ಚನ್?
ಅಭಿಷೇಕ್ ಬಚ್ಚನ್ (Abhishek Bachchan), ಬಾಲಿವುಡ್ನ ಆರಕ್ಕೇರದ ಮೂರಕ್ಕಿಳಿಯದ ನಟ. ಒಳ್ಳೆಯ ನಟರಾಗಿದ್ದರೂ ಸಹ ತಂದೆ ಹಾಗೂ ಪತ್ನಿಯ ಯಶಸ್ಸು ಮತ್ತು ಜನಪ್ರಿಯತೆಯ ಎದುರು ಮಂಕಾಗಿಬಿಟ್ಟರು. ಈಗಲೂ ಸಹ ಅಭಿಷೇಕ್ ಬಚ್ಚನ್ ಅವರು ಎಷ್ಟೇ ಒಳ್ಳೆಯ ನಟನೆ ಮಾಡಿದರೂ ತಂದೆಯೊಟ್ಟಿಗೆ ಹೋಲಿಸಿ ನೋಡಿ, ಅಭಿಷೇಕ್ ಅನ್ನು ಕಡೆಗಣಿಸುತ್ತಾರೆ ಪ್ರೇಕ್ಷಕರು. ಅಮಿತಾಬ್ ಬಚ್ಚನ್ ಮಗನಾಗಿದ್ದೇ ಅಭಿಷೇಕ್ಗೆ ಒಂದು ರೀತಿ ಶಾಪವೂ ಆಗಿಬಿಟ್ಟಿದೆ. ಇನ್ನು ಅವರ ಪತ್ನಿ ಐಶ್ವರ್ಯಾ ರೈಗೂ ಸಹ ದೊಡ್ಡ ಯಶಸ್ಸು, ಜನಪ್ರಿಯತೆ ಇದೆ. ಪತ್ನಿಯ ಜನಪ್ರಿಯತೆ…