‘ಫೌಜಿ’ ಸೆಟ್ನಿಂದ ಪ್ರಭಾಸ್ ಫೋಟೋ ಲೀಕ್: ಅಭಿಮಾನಿಗಳಿಗೆ ಚಿತ್ರತಂಡದ ವಾರ್ನಿಂಗ್
ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ (Prabhas) ಹಾಗೂ ನಿರ್ದೇಶಕ ಹನು ರಾಘವಪುಡಿ ಕಾಂಬಿನೇಷನ್‌ನಲ್ಲಿ ಸಿದ್ಧವಾಗುತ್ತಿರುವ ‘ಫೌಜಿ’ (Fauzi) ಚಿತ್ರದ ಮೇಲೆ ಅಭಿಮಾನಿಗಳಿಗೆ ಭಾರಿ ನಿರೀಕ್ಷೆ ಇದೆ. ಇದು ಭರ್ಜರಿ ಆ್ಯಕ್ಷನ್ ಸಿನಿಮಾ ಆಗಿರಲಿದೆ. ಹಾಗಾಗಿ ಸಹಜವಾಗಿಯೇ ಹೈಪ್ ಹೆಚ್ಚಿದೆ. ಆದರೆ, ಇತ್ತೀಚೆಗೆ ಚಿತ್ರೀಕರಣದ ಸ್ಥಳದಿಂದ ಕೆಲವು ಫೋಟೋಗಳು ಲೀಕ್ ಆಗಿದ್ದು, ಚಿತ್ರತಂಡಕ್ಕೆ ತಲೆನೋವಾಗಿ ಪರಿಣಮಿಸಿದೆ. ಸೋಶಿಯಲ್ ಮೀಡಿಯಾದಲ್ಲಿ ಪ್ರಭಾಸ್ ಅವರ ಲುಕ್ ವೈರಲ್ ಆಗಿರುವುದರಿಂದ ‘ಫೌಜಿ’ ಚಿತ್ರತಂಡ ವಾರ್ನಿಂಗ್ ನೀಡಿದೆ. ಮೊದಲಿಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಪ್ರಭಾಸ್…