Headlines

ರಿಹ್ಯಾಬ್‌ನಿಂದ ತಪ್ಪಿಸಿಕೊಂಡ ಯುವಕರಿಂದ ಆಟೋ ಚಾಲಕನ ದರೋಡೆ; ಮದ್ಯ ಮತ್ತು ಸಿಗರೆಟ್​​ಗಾಗಿ ಕೃತ್ಯ!

ಬೆಂಗಳೂರು, ಏಪ್ರಿಲ್ 05: ನಗರದ ಹೊರವಲಯದಲ್ಲಿ ಮಾದಕ ವಸ್ತುಗಳ ವ್ಯಸನಕ್ಕೆ ಒಳಗಾಗಿದ್ದ ಇಬ್ಬರು ಯುವಕರು ಅಪರಾಧ (Crime) ಕೃತ್ಯಕ್ಕೆ ಮುಂದಾದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. 21 ವರ್ಷದ ಯುವಕ ಹಾಗೂ 17 ವರ್ಷದ ಅಪ್ರಾಪ್ತ ಸಹಚರನು ಸುಮಾರು ಒಂದು ತಿಂಗಳ ಹಿಂದೆ ಪುನರ್ವಸತಿ ಕೇಂದ್ರದಿಂದ ತಪ್ಪಿಸಿಕೊಂಡು, ವ್ಯಸನದ ಬೇಸರದಿಂದ ದರೋಡೆ ಮಾಡಲು ಮುಂದಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಆನ್​ಲೈನ್​ನಲ್ಲಿ ಆಟೋ ಬುಕ್ ಮಾಡಿ, ಗಂಟೆಗಳ ಕಾಲ ಅಲೆದಾಟ ಈ ಪ್ರಕರಣವು ಮಾರ್ಚ್ 5ರಂದು ಬಾಗಲೂರು ಪೊಲೀಸ್…

Read More

ಪ್ರೇಮಿಯ ಕೈಯಲ್ಲಿ ಗಂಡನ ಹತ್ಯೆ ಮಾಡಿಸಿದ ಮಹಿಳೆ, ಕೈಯಲ್ಲಿದ್ದ ಹಚ್ಚೆಯಿಂದ ಪ್ರಕರಣ ಭೇದಿಸಿದ ಪೊಲೀಸರು

ಆಗ್ರಾ, ಏಪ್ರಿಲ್ 05: ಮಹಿಳೆಯೊಬ್ಬಳು ಪ್ರೇಮಿಯ ಜತೆ ಸೇರಿ ಗಂಡನನ್ನು ಹತ್ಯೆ(Murder) ಮಾಡಿರುವ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದಿದೆ. ಏಪ್ರಿಲ್ 1 ರ ರಾತ್ರಿ ಆಗ್ರಾದ ಸೈಯಾನ್ ಪ್ರದೇಶದಲ್ಲಿ ಅರ್ಧ ಸುಟ್ಟ ಶವ ಪತ್ತೆಯಾಗಿತ್ತು, ಸ್ಥಳೀಯರಲ್ಲಿ ಆತಂಕ ಸೃಷ್ಟಿಯಾಗಿತ್ತು.ಮುಖ ಗುರುತಿಸಲಾಗದಷ್ಟು ಸುಟ್ಟು ಹೋಗಿದ್ದರಿಂದ ಶವವನ್ನು ಗುರುತಿಸುವುದು ಒಂದು ಸವಾಲಾಗಿತ್ತು, ಆದರೆ ಮುಂಗೈ ಮೇಲಿನ ಹಚ್ಚೆ ಉಳಿದುಕೊಂಡಿತ್ತು ಬಳಿಕ ಆತ ಲೋಕೇಂದ್ರನ ಶವ ಎಂದು ತಿಳಿದುಬಂದಿತ್ತು. ಲೋಕೇಂದ್ರ ಅವರ ಸಹೋದರ ಪೊಲೀಸರಿಗೆ ನಾಪತ್ತೆಯಾದವರ ದೂರು ದಾಖಲಿಸಿದ್ದರು, ಲೋಕೇಂದ್ರ…

Read More

Vivo T5 Pro: ಭಾರತಕ್ಕೆ ಬರುತ್ತಿದೆ 9020mAh ಬ್ಯಾಟರಿಯ ಹೊಸ ಸ್ಮಾರ್ಟ್​ಫೋನ್: ಫಸ್ಟ್ ಲುಕ್ ಫುಲ್ ವೈರಲ್

ಬೆಂಗಳೂರು (ಏ. 05): ಇಂದು ಅಧಿಕ ಬ್ಯಾಟರಿ ಹೊಂದಿರುವ ಸ್ಮಾರ್ಟ್​ಫೋನ್​ಗಳ ಬೇಡಿಕೆ ಹೆಚ್ಚುತ್ತಿದೆ. ಇದನ್ನ ಗಮನದಲ್ಲಿಟ್ಟುಕೊಂಡು ಅನೇಕ ಮೊಬೈಲ್ ಬ್ರ್ಯಾಂಡ್ ಬಿಗ್ ಬ್ಯಾಟರಿ ಬ್ಯಾಕಪ್​ನ ಫೋನನ್ನು ಅನಾವರಣ ಮಾಡುತ್ತಿದೆ. ಈ ಸಾಲಿನಲ್ಲಿ ಪ್ರಸಿದ್ಧ ವಿವೋ (Vivo) ಕಂಪನಿ ಒಂದು ಹೆಜ್ಜೆ ಮುಂದೆ ಹೋಗಿದ್ದು, ಶೀಘ್ರದಲ್ಲೇ ಭಾರತದಲ್ಲಿ 9020mAh ಬ್ಯಾಟರಿ ಹೊಂದಿರುವ ಫೋನ್ ಅನ್ನು ಬಿಡುಗಡೆ ಮಾಡಲಿದ್ದೇವೆ ಎಂದು ಹೇಳಿದೆ. ಚೀನಾದ ಬ್ರ್ಯಾಂಡ್ ಈ ಫೋನ್ ಅನ್ನು ಅಧಿಕೃತವಾಗಿ ಟೀಸರ್ ಮಾಡಿದೆ. ಫೋನ್‌ನ ಕೆಲವು ವೈಶಿಷ್ಟ್ಯಗಳು ಸಹ ಸೋರಿಕೆಯಾಗಿವೆ….

Read More

Suryakumar Yadav: ನಮ್ಮ ಸೋಲಿಗೆ ಇದುವೇ ಅಸಲಿ ಕಾರಣ..!

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನ 8ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ತಂಡ ಭರ್ಜರಿ ಜಯ ಸಾಧಿಸಿದೆ. ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವು 20 ಓವರ್​ಗಳಲ್ಲಿ 162 ರನ್ ಕಲೆಹಾಕಿದ್ದರು. ಈ ಗುರಿಯನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡವು 18.1 ಓವರ್​ಗಳಲ್ಲಿ ಚೇಸ್ ಮಾಡಿ 6 ವಿಕೆಟ್​ಗಳ ಜಯ ಸಾಧಿಸಿದೆ. ಈ ಸೋಲಿನ ಬಳಿಕ ಮಾತನಾಡಿದ ಮುಂಬೈ ಇಂಡಿಯನ್ಸ್​ ತಂಡದ ಹಂಗಾಮಿ…

Read More

‘ಧುರಂಧರ್’, ‘ಕೇರಳ ಸ್ಟೋರಿ’ ಸುಳ್ಳು ಎಂದವರ ವಿರುದ್ಧ ನರೇಂದ್ರ ಮೋದಿ ಗರಂ

ರಣವೀರ್ ಸಿಂಗ್ ನಟನೆಯ ‘ಧುರಂಧರ್’ ಮತ್ತು ‘ಧುರಂಧರ್ 2’ (Dhurandhar 2) ಸಿನಿಮಾಗಳು ಸಾವಿರಾರು ಕೋಟಿ ರೂಪಾಯಿ ಕಮಾಯಿ ಮಾಡಿವೆ. ಈ ಸಿನಿಮಾಗಳ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಪರ-ವಿರೋಧದ ಚರ್ಚೆ ಆಗಿದೆ. ಅನೇಕರು ಈ ಸಿನಿಮಾಗಳನ್ನು ‘ಪ್ರೊಪಗಾಂಡ’ ಎಂದು ಟೀಕಿಸಿದ್ದಾರೆ. ಈ ಸಿನಿಮಾಗಳ ಬಗ್ಗೆ ಈಗ ನರೇಂದ್ರ ಮೋದಿ (Narendra Modi) ಕೂಡ ಮಾತನಾಡಿದ್ದಾರೆ. ಕೇರಳದಲ್ಲಿ ಮಾತನಾಡುವಾಗ ‘ಧುರಂಧರ್’, ‘ದಿ ಕೇರಳ ಸ್ಟೋರಿ’, ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾಗಳನ್ನು ಅವರು ಪ್ರಸ್ತಾಪಿಸಿದ್ದಾರೆ. ‘ಕೇರಳ ಸ್ಟೋರಿ ಬಂತು….

Read More

ಶತ್ರುಗಳ ನೆಲದಲ್ಲಿ ಬಿದ್ದಿದ್ದ ತನ್ನ ಪೈಲಟ್​ನನ್ನು ಅಮೆರಿಕ ರಕ್ಷಿಸಿಕೊಂಡಿದ್ದು ಹೇಗೆ?

ಟೆಹ್ರಾನ್, ಏಪ್ರಿಲ್ 05: ಇರಾನ್(Iran) ಸೇನೆಯು ಅಮೆರಿಕದ ಯುದ್ಧ ವಿಮಾನವನ್ನು ಹೊಡೆದುರುಳಿಸಿತ್ತು. ಈ ಘಟನೆಯಲ್ಲಿ ಮಿಲಿಟರಿ ವಿಮಾನದ ಪೈಲಟ್ ನಾಪತ್ತೆಯಾಗಿದ್ದರು. ಒಂದೆಡೆ ಅಮೆರಿಕ ಮತ್ತೊಂದೆಡೆ ಇರಾನ್ ಎರಡೂ ಕಡೆಯವರು ಪೈಲಟ್​ಗಾಗಿ ಹುಡುಕಾಡುತ್ತಿದ್ದರು. ಆದರೆ ಅಮೆರಿಕವು ತನ್ನ ಪೈಲಟ್ ಅನ್ನು ರಕ್ಷಿಸುವಲ್ಲಿ ವಿಫಲವಾಗಿವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಹೇಳಿದ್ದಾರೆ. ಹಾಗಾದರೆ ರಕ್ಷಣಾ ಕಾರ್ಯಾಚರಣೆ ಹೇಗೆ ನಡೆಯುತು ಎನ್ನುವ ಕುತೂಹಲ ಎಲ್ಲರಲ್ಲಿರಬಹುದು ಅದಕ್ಕೆ ಉತ್ತರ ಇಲ್ಲಿದೆ.ಅಮೆರಿಕ ಇರಾನ್ ಮೇಲೆ 13,000 ಕ್ಕೂ ಹೆಚ್ಚು ದಾಳಿಗಳನ್ನು ನಡೆಸಿದೆ, ಇದರಲ್ಲಿ…

Read More

Gold Rates: ಆಭರಣ ಚಿನ್ನದ ಬೆಲೆ 13,835 ರೂ; ಇಲ್ಲಿದೆ ದರಪಟ್ಟಿ

ಬೆಂಗಳೂರು, ಏಪ್ರಿಲ್ 5: ಸಾಕಷ್ಟು ಪ್ರಕ್ಷುಬ್ಧತೆಯನ್ನು ಹೊಂದಿರುವ ಚಿನ್ನ ಮತ್ತು ಬೆಳ್ಳಿ ಬೆಲೆಗಳು ವಾರಾಂತ್ಯದಲ್ಲಿ ಶಾಂತಗೊಂಡಿವೆ. ಈ ವಾರ ಚಿನ್ನದ ಬೆಲೆಯಲ್ಲಿ (Gold Rates) ಗ್ರಾಮ್​ಗೆ 260 ರೂ ಏರಿಕೆಯಾಗಿದೆ. ವಿದೇಶಗಳಲ್ಲಿ ಕೆಲವೆಡೆ ಚಿನ್ನದ ಬೆಲೆಯಲ್ಲಿ ಅಲ್ಪ ಏರಿಕೆ ಆಗಿದೆ. ಉಳಿದಂತೆ ಯಥಾಸ್ಥಿತಿಯಲ್ಲಿವೆ. ಬೆಳ್ಳಿ ಬೆಲೆಗಳಲ್ಲೂ (Silver Rates) ಯಾವ ಬದಲಾವಣೆ ಆಗಿಲ್ಲ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,38,350 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,50,930…

Read More

National Maritime day 2026: ಏಪ್ರಿಲ್‌ 5ರಂದೇ ರಾಷ್ಟ್ರೀಯ ಕಡಲ ದಿನವನ್ನು ಆಚರಿಸುವುದು ಏಕೆ?

ಬಹುತೇಕ ದೇಶಗಳು ಅಗತ್ಯ ಸರಕುಗಳನ್ನು ಆಮದು ಹಾಗೂ ರಫ್ತು ಮಾಡಿಕೊಳ್ಳಲು ಸಮುದ್ರಯಾನಯನ್ನೇ ಅವಲಂಬಿಸಿದೆ. ಸಮುದ್ರಯಾನವು ಅಂತಾರಾಷ್ಟ್ರೀಯ ವ್ಯಾಪಾರದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಪ್ರಾಚೀನ ಕಾಲದಿಂದಲೂ, ನಮ್ಮ ದಕ್ಷಿಣದ ರಾಜ್ಯಗಳು, ಪೂರ್ವ ಏಷ್ಯಾ ಹಾಗೂ ಆಫ್ರಿಕಾದ ದೇಶಗಳೊಂದಿಗೆ ವ್ಯಾಪಾರ ಸಂಬಂಧಗಳನ್ನು ಹೊಂದಿವೆ. ಈ ಎಲ್ಲಾ ಕಾರಣಕ್ಕಾಗಿ ಭಾರತ ಆರ್ಥಿಕತೆಗೆ ಸಮುದ್ರಯಾನದ ಕೊಡುಗೆ ಅಗಾಧವಾದದ್ದು. ಹೀಗಾಗಿ ದೇಶದ ಆರ್ಥಿಕತೆಗೆ ಈ ನೌಕಾಯಾನದ ಕೊಡುಗೆ ಹಾಗೂ ಈ ಕಡಲ ವ್ಯಾಪಾರದ ಮಹತ್ವವನ್ನು ತಿಳಿಸುವ ನಿಟ್ಟಿನಲ್ಲಿ ಈ ಒಂದು ದಿನವನ್ನು ಮೀಸಲಿಡಲಾಗಿದೆ. ಅದುವೇ…

Read More

Vasthu Tips: ಮನೆಯ ಈ ದಿಕ್ಕಿನಲ್ಲಿ ಎಂದಿಗೂ ಕಸ ರಾಶಿ ಹಾಕಬೇಡಿ; ಕಷ್ಟ ತಪ್ಪಿದ್ದಲ್ಲ!

ಪುರಾಣಗಳು ಲಕ್ಷ್ಮಿ ದೇವಿಯು ಸ್ವಚ್ಛ ಮತ್ತು ಕ್ರಮಬದ್ಧವಾದ ಮನೆಯಲ್ಲಿ ವಾಸಿಸುತ್ತಾಳೆ ಎಂದು ಹೇಳುತ್ತವೆ. ಅನಗತ್ಯ ವಸ್ತುಗಳಿಂದ ತುಂಬಿದ ಮನೆಯು ನಕಾರಾತ್ಮಕತೆಯನ್ನು ಹೆಚ್ಚಿಸುತ್ತದೆ ಮತ್ತು ಆದಾಯವು ಸ್ಥಿರವಾಗಿರುವುದಿಲ್ಲ. ಈ ಗೊಂದಲವು ಅನಗತ್ಯ ಖರ್ಚುಗಳು ಮತ್ತು ಸಾಲಕ್ಕೆ ಸಿಲುಕುವಂತಹ ಆರ್ಥಿಕ ತೊಂದರೆಗಳಿಗೆ ಕಾರಣವಾಗುತ್ತದೆ. ಹಳೆಯ ಪೀಠೋಪಕರಣಗಳು ಮತ್ತು ಮುರಿದ ವಸ್ತುಗಳ ಮೇಲೆ ಧೂಳು, ಕೊಳಕು ಮತ್ತು ಬ್ಯಾಕ್ಟೀರಿಯಾಗಳು ಬೇಗನೆ ಸಂಗ್ರಹವಾಗುತ್ತವೆ. ವಾಸ್ತು ಪ್ರಕಾರ, ಮನೆ ಹೆಚ್ಚು ವಿಶಾಲ ಮತ್ತು ಗಾಳಿಯಾಡುತ್ತಿದ್ದರೆ, ಆರೋಗ್ಯವು ಉತ್ತಮವಾಗಿರುತ್ತದೆ. ಹಳೆಯ ಪೀಠೋಪಕರಣಗಳು ಮನೆಯಲ್ಲಿನ ಗಾಳಿಯನ್ನು ಕಲುಷಿತಗೊಳಿಸಬಹುದು,…

Read More

RCB vs CSK: ಗೆಲ್ಲೋರು ಯಾರು? ಹೀಗಿದೆ ಲೆಕ್ಕಾಚಾರ

IPL 2026: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-19ರ ಹೈವೋಲ್ಟೇಜ್ ಪಂದ್ಯಕ್ಕೆ ವೇದಿಕೆ ಸಿದ್ಧವಾಗಿದೆ. ಇಂದು (ಏ.5) ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿರುವ ಐಪಿಎಲ್​ನ 11ನೇ ಪಂದ್ಯದಲ್ಲಿ ಬದ್ಧವೈರಿಗಳಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಚೆನ್ನೈ ಸೂಪರ್ ಕಿಂಗ್ಸ್ (CSK) ಮುಖಾಮುಖಿಯಾಗಲಿದೆ. ಸೌತ್ ಡರ್ಬಿ ಪಂದ್ಯ ಎಂದೇ ಬಿಂಬಿತವಾಗಿರುವ ಈ ಮ್ಯಾಚ್​ನಲ್ಲಿ ಗೆಲ್ಲೋರು ಯಾರು ಎಂಬುದೇ ಈಗ ಕುತೂಹಲ. ಈ ಕುತೂಹಲವನ್ನು ತಣ್ಣಿಸುವಂತಹ ಲೆಕ್ಕಾಚಾರ ಇಲ್ಲಿದೆ… ಗೆಲುವಿನ ಮುನ್ಸೂಚನೆ: ಯಾರ ಕೈ ಮೇಲು? ಪ್ರಸ್ತುತ ಫಾರ್ಮ್ ಮತ್ತು…

Read More