Category Archives: Blog

Your blog category

Office Desk Vastu: ಕಚೇರಿಯ ಮೇಜಿನ ಮೇಲೆ ಈ ವಸ್ತುಗಳನ್ನು ಇಡಲೇಬೇಡಿ; ಇದು ನಿಮ್ಮ ಪ್ರಗತಿಗೆ ಅಡ್ಡಿ – Kannada News | Office Desk Vastu: Avoid These 5 Things for Success and Prosperity

ಪ್ರತಿಯೊಬ್ಬರೂ ತಮ್ಮ ಕೆಲಸದಲ್ಲಿ ಯಶಸ್ಸನ್ನು ಬಯಸುತ್ತಾರೆ, ಆದರೆ ಕೆಲವೊಮ್ಮೆ, ಕಠಿಣ ಪರಿಶ್ರಮದ ಹೊರತಾಗಿಯೂ, ಅಪೇಕ್ಷಿತ ಫಲಿತಾಂಶಗಳು ಅಥವಾ ಪ್ರಗತಿಯನ್ನು ಸಾಧಿಸಲಾಗುವುದಿಲ್ಲ, ಇದು ನಿರಾಶೆಗೆ ಕಾರಣವಾಗುತ್ತದೆ. ವಾಸ್ತು ಶಾಸ್ತ್ರವು ಕಚೇರಿ ಕೇವಲ ಕೆಲಸ ಮಾಡುವ ಸ್ಥಳವಲ್ಲ, ಆದರೆ ವ್ಯಕ್ತಿಯ ವೃತ್ತಿಪರ ಶಕ್ತಿ ಮತ್ತು ಉತ್ಪಾದಕತೆಯ ಕೇಂದ್ರವಾಗಿದೆ ಎಂದು ಹೇಳುತ್ತದೆ.

ವಾಸ್ತು ಶಾಸ್ತ್ರದ ಪ್ರಕಾರ, ಕೆಲವು ವಸ್ತುಗಳನ್ನು ಕಚೇರಿ ಮೇಜಿನ ಮೇಲೆ ಇಡುವುದರಿಂದ ಪ್ರಗತಿ, ಆರ್ಥಿಕ ಲಾಭ ಮತ್ತು ಮಾನಸಿಕ ಶಾಂತಿಯ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ, ವಾಸ್ತುವಿನ ಆಧಾರದ ಮೇಲೆ, ಯಾವ ವಸ್ತುಗಳನ್ನು ಕಚೇರಿ ಮೇಜಿನ ಮೇಲೆ ಇಡಬಾರದು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ನಿಮ್ಮ ಕಚೇರಿಯ ಮೇಜಿನ ಮೇಲೆ ಈ ವಸ್ತುಗಳನ್ನು ಇಡಬೇಡಿ:

ಉಳಿದ ಆಹಾರ:

ವಾಸ್ತು ಶಾಸ್ತ್ರದ ಪ್ರಕಾರ, ಬಳಸಿದ ಪಾತ್ರೆಗಳನ್ನು ಅಥವಾ ಉಳಿದ ಆಹಾರವನ್ನು ಕಚೇರಿ ಮೇಜಿನ ಮೇಲೆ ಎಂದಿಗೂ ಬಿಡಬಾರದು. ಹಾಗೆ ಮಾಡುವುದನ್ನು ವಾಸ್ತು ಮತ್ತು ನೈರ್ಮಲ್ಯದ ದೃಷ್ಟಿಕೋನದಿಂದ ಅನಾರೋಗ್ಯಕರವೆಂದು ಪರಿಗಣಿಸಲಾಗುತ್ತದೆ. ಬಳಸಿದ ಕಪ್‌, ತಟ್ಟೆಗಳು ಅಥವಾ ಉಳಿದ ಆಹಾರವನ್ನು ಮೇಜಿನ ಮೇಲೆ ಇಡುವುದರಿಂದ ನಕಾರಾತ್ಮಕತೆ ಹೆಚ್ಚಾಗುತ್ತದೆ, ಸುತ್ತಮುತ್ತಲಿನ ಶಕ್ತಿಯನ್ನು ಕಲುಷಿತಗೊಳಿಸುತ್ತದೆ ಮತ್ತು ಏಕಾಗ್ರತೆಗೆ ಅಡ್ಡಿಯಾಗುತ್ತದೆ ಮತ್ತು ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.

ಹಿಂಸಾತ್ಮಕ ಚಿತ್ರಗಳು:

ನಿಮ್ಮ ಕಚೇರಿಯ ಮೇಜಿನ ಮೇಲೆ ಹಿಂಸಾತ್ಮಕ ಚಿತ್ರಗಳು, ಕಾಡು ಪ್ರಾಣಿಗಳ ಆಕ್ರಮಣಕಾರಿ ಪ್ರತಿಮೆಗಳು ಅಥವಾ ಯಾವುದೇ ಯುದ್ಧ ಸಂಬಂಧಿತ ಪ್ರದರ್ಶನ ಸಾಮಗ್ರಿಗಳನ್ನು ಇಡುವುದನ್ನು ತಪ್ಪಿಸಿ. ಇದು ನಕಾರಾತ್ಮಕ ಆಲೋಚನೆಗಳಿಗೆ ಕಾರಣವಾಗಬಹುದು, ಒತ್ತಡವನ್ನು ಹೆಚ್ಚಿಸಬಹುದು ಮತ್ತು ಸಹೋದ್ಯೋಗಿಗಳೊಂದಿಗಿನ ಸಂಬಂಧವನ್ನು ಕೆಡಿಸಬಹುದು.

ಒಣಗಿದ ಹೂವುಗಳು:

ಒಣಗಿದ ಅಥವಾ ಒಣಗಿದ ಹೂವುಗಳು ಅಥವಾ ಸಸ್ಯಗಳನ್ನು ನಿಮ್ಮ ಕಚೇರಿಯ ಮೇಜಿನ ಮೇಲೆ ಎಂದಿಗೂ ಇಡಬೇಡಿ. ಒಣಗಿದ ಅಥವಾ ಒಣಗಿದ ಹೂವುಗಳು ಮತ್ತು ಸಸ್ಯಗಳನ್ನು ನಕಾರಾತ್ಮಕತೆ ಮತ್ತು ಸಾವಿನ ಸಂಕೇತವೆಂದು ಪರಿಗಣಿಸಲಾಗುತ್ತದೆ. ಹಾಗೆ ಮಾಡುವುದರಿಂದ ಶಕ್ತಿಯನ್ನು ಬರಿದುಮಾಡುತ್ತದೆ ಮತ್ತು ಹತಾಶೆಯನ್ನು ಸೃಷ್ಟಿಸುತ್ತದೆ.

ಇದನ್ನೂ ಓದಿ: ಮನಿ ಪ್ಲಾಂಟ್‌ನ ಬುಡದಲ್ಲಿ ಒಂದು ನಾಣ್ಯ ಹೂತಿಡಿ; ಪ್ರಯೋಜನ ಸಾಕಷ್ಟಿವೆ

ಹಳೆಯ ಮತ್ತು ಬಳಕೆಯಾಗದ ದಾಖಲೆಗಳು:

ನಿಮ್ಮ ಕಚೇರಿಯ ಮೇಜಿನ ಮೇಲೆ ಹಳೆಯ ಬಿಲ್‌ಗಳು, ತ್ಯಾಜ್ಯ ಕಾಗದ ಅಥವಾ ಬಳಕೆಯಾಗದ ದಾಖಲೆಗಳನ್ನು ಇಡಬೇಡಿ. ಅಂತಹ ವಸ್ತುಗಳು ವೃತ್ತಿಜೀವನದ ನಿಶ್ಚಲತೆಗೆ ಕಾರಣವಾಗಬಹುದು ಮತ್ತು ಹೊಸ ಅವಕಾಶಗಳನ್ನು ತಡೆಯಬಹುದು.

ಮುರಿದ ಅಥವಾ ಬಿರುಕು ಬಿಟ್ಟ ವಸ್ತುಗಳು:

ಮುರಿದ ಅಥವಾ ಹರಿದ ವಸ್ತುಗಳು ನಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತವೆ, ಆದ್ದರಿಂದ ಮುರಿದ ಪೆನ್ನು, ಶೋಪೀಸ್, ಮುರಿದ ಕಂಪ್ಯೂಟರ್ ಮೌಸ್ ಅಥವಾ ಯಾವುದೇ ಇತರ ಮುರಿದ ಅಥವಾ ಹರಿದ ವಸ್ತುವನ್ನು ಕಚೇರಿ ಮೇಜಿನ ಮೇಲೆ ಇಡಬಾರದು. ಇದು ಕೆಲಸದಲ್ಲಿ ಅಡೆತಡೆಗಳನ್ನು ಉಂಟುಮಾಡಬಹುದು ಮತ್ತು ಆರ್ಥಿಕ ನಷ್ಟಕ್ಕೂ ಕಾರಣವಾಗಬಹುದು.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 10:41 am, Thu, 25 December 25

Source link

ಟೀಯನ್ನು ಪದೇ ಪದೇ ಬಿಸಿ ಮಾಡಿ ಕುಡಿಯುವ ಒಂದು ಸಣ್ಣ ಅಭ್ಯಾಸ ಆರೋಗ್ಯದ ಮೇಲೆ ಬಹುದೊಡ್ಡ ಪರಿಣಾಮ ಬೀರಬಹುದು ಎಚ್ಚರ! – Kannada News | The Truth About Reheating Tea & Health Risks

ಬೆಳಿಗ್ಗೆ ಎದ್ದ ಕೂಡಲೇ ಬಿಸಿ ಬಿಸಿ ಚಹಾ (Tea) ಕುಡಿಯುವುದು ಹಲವರ ಅಭ್ಯಾಸ. ಚಹಾ ಕೇವಲ ಪಾನೀಯವಲ್ಲ, ಅದು ಒಂದು ಭಾವನೆ. ಆದರೆ ಈ ಚಹಾವೇ ಆರೋಗ್ಯಕ್ಕೆ ದೊಡ್ಡ ಬೆದರಿಕೆಯಾಗುತ್ತಿದೆ ಎಂದು ತಜ್ಞರು ಈಗ ಎಚ್ಚರಿಸುತ್ತಿದ್ದಾರೆ. ಹೌದು, ನಿರ್ದಿಷ್ಟವಾಗಿ ಹೇಳುವುದಾದರೆ, ಇತ್ತೀಚಿನ ಅಧ್ಯಯನಗಳು ಚಹಾ ತಯಾರಿಸಿದ 15 ರಿಂದ 20 ನಿಮಿಷಗಳ ಒಳಗೆ ಸೇವಿಸಬೇಕು. ಅದರ ನಂತರ ಚಹಾ ಕುಡಿಯುವುದರಿಂದ ಯಕೃತ್ತು ಮತ್ತು ಜೀರ್ಣಾಂಗ ವ್ಯವಸ್ಥೆಗೆ ಹಾನಿಯಾಗುತ್ತದೆ ಎಂದು ಹೇಳುತ್ತವೆ. ನೀವು ಕೂಡ ತಣ್ಣಗಾದ ಚಹಾವನ್ನು ಮತ್ತೆ ಬಿಸಿ ಮಾಡಿ ಕುಡಿಯುತ್ತೀರಾ… ಈ ಅಭ್ಯಾಸ ಆರೋಗ್ಯಕ್ಕೆ ಎಷ್ಟು ಅಪಾಯಕಾರಿ ಎಂದು ತಿಳಿದರೆ ನೀವೆಂದೂ ಈ ಕೆಲಸ ಮಾಡುವುದಿಲ್ಲ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಹಾಗಾದರೆ ಇದರಿಂದ ಆರೋಗ್ಯಕ್ಕೆ ಯಾವ ರೀತಿಯ ಸಮಸ್ಯೆಗಳಾಗುತ್ತದೆ, ಯಾಕೆ ಈ ಅಭ್ಯಾಸ ಒಳ್ಳೆಯದಲ್ಲ ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಸಾಮಾನ್ಯವಾಗಿ ಒಮ್ಮೆ ಚಹಾ ಮಾಡಿದ ನಂತರ ಉಳಿದದ್ದು ಬ್ಯಾಕ್ಟೀರಿಯಾಗಳಿಗೆ ಸಂತಾನೋತ್ಪತ್ತಿ ಮಾಡುವ ಸ್ಥಳವಾಗಬಹುದು ಎಂದು ಸಂಶೋಧಕರು ಎಚ್ಚರಿಸಿದ್ದಾರೆ. ಜಪಾನ್ ಮತ್ತು ಚೀನಾದಂತಹ ದೇಶಗಳಲ್ಲಿ, ಸಂಗ್ರಹಿಸಿದ ಚಹಾವನ್ನು ವಿಷದಷ್ಟೇ ಹಾನಿಕಾರಕವೆಂದು ಪರಿಗಣಿಸಲಾಗುತ್ತದೆ. ಹೌದು, ಜಪಾನಿನ ಜನ 24 ಗಂಟೆಗಳಿಗಿಂತ ಹೆಚ್ಚು ಕಾಲ ಸಂಗ್ರಹಿಸಿದ ಚಹಾ ಸೇವನೆ ಹಾವು ಕಡಿತಕ್ಕಿಂತ ಅಪಾಯಕಾರಿ ಎಂದು ಹೇಳುತ್ತಾರೆ. ಚೀನಾದಲ್ಲಿಯೂ ಸಂಗ್ರಹಿಸಿಟ್ಟ ಚಹಾವನ್ನು ಸೇವನೆ ಮಾಡುವುದಿಲ್ಲ.

ಹಾಲು ಬೆರೆಸಿದ ಚಹಾ ಒಳ್ಳೆಯದಲ್ಲ:

ಸಾಮಾನ್ಯವಾಗಿ ಹಾಲು ಬೇಗನೆ ಹಾಳಾಗುತ್ತದೆ. ಹಾಲಿನಿಂದ ಮಾಡಿದ ಚಹಾವನ್ನು ಕೋಣೆಯ ಉಷ್ಣಾಂಶದಲ್ಲಿ ಎರಡು ಗಂಟೆಗಳಿಗಿಂತ ಹೆಚ್ಚು ಕಾಲ ಇಡಬಾರದು. ಫ್ರಿಜ್‌ನಲ್ಲಿ ಇರಿಸಿದರೆ, ಅದನ್ನು ಒಂದರಿಂದ ಮೂರು ದಿನಗಳವರೆಗೆ ಸಂಗ್ರಹಿಸಬಹುದು, ಆದರೆ ಅದನ್ನು ಮತ್ತೆ ಬಿಸಿ ಮಾಡುವುದರಿಂದ ಪೋಷಕಾಂಶಗಳು ನಾಶವಾಗುತ್ತವೆ. ಅಷ್ಟೇ ಅಲ್ಲ, ಇದು ಆಮ್ಲೀಯತೆಯನ್ನು ಕೂಡ ಹೆಚ್ಚಿಸುತ್ತದೆ.

ಶುಂಠಿ ಚಹಾವನ್ನು ಮತ್ತೆ ಮತ್ತೆ ಬಿಸಿ ಮಾಡಿ ಕುಡಿಯಬಹುದೇ?

ಹಾಲಿಲ್ಲದೆ ಶುಂಠಿ ಚಹಾ ಸೇವನೆ ಮಾಡುವುದು ಸುರಕ್ಷಿತ. ಫ್ರಿಡ್ಜ್‌ನಲ್ಲಿ ಸಂಗ್ರಹಿಸಿಟ್ಟರೆ, ಅದು ಮೂರರಿಂದ ಐದು ದಿನಗಳವರೆಗೆ ಇರುತ್ತದೆ. ಆದರೆ ಅದನ್ನು ಕುಡಿಯುವ ಮೊದಲು ಚೆನ್ನಾಗಿ ಕುದಿಸಬೇಕು. ಚಹಾ ಬಣ್ಣ ಬದಲಾದರೆ ಅಥವಾ ವಾಸನೆ ಬಂದರೆ, ಅದನ್ನು ಕುಡಿಯಬಾರದು. ಆದರೆ ದಿನಕ್ಕೆ 4 ರಿಂದ 5 ಗ್ರಾಂ ಗಿಂತ ಹೆಚ್ಚು ಶುಂಠಿಯನ್ನು ಸೇವಿಸುವುದರಿಂದ ಕೆಲವರಲ್ಲಿ ಎದೆಯುರಿ ಉಂಟಾಗುತ್ತದೆ.

ಇದನ್ನೂ ಓದಿ: ಈ 7 ಆರೋಗ್ಯ ಸಮಸ್ಯೆ ಇರುವವರು ತಪ್ಪಿಯೂ ಖಾಲಿ ಹೊಟ್ಟೆಯಲ್ಲಿ ಟೀ ಕುಡಿಯಬಾರದು ಎಚ್ಚರ!

ಆಯುರ್ವೇದದಲ್ಲಿ ಹೇಳಿರುವುದೇನು?

ಸಂಗ್ರಹಿಸಿದ ಅಥವಾ ಮತ್ತೆ ಬಿಸಿ ಮಾಡಿದ ಚಹಾವು ದೇಹದಲ್ಲಿ ವಿಷವನ್ನು ಉತ್ಪಾದಿಸುತ್ತದೆ ಎಂದು ಆಯುರ್ವೇದದಲ್ಲಿ ಹೇಳಲಾಗಿದೆ. ಅಷ್ಟೇ ಅಲ್ಲ, ಇದು ಜೀರ್ಣಕ್ರಿಯೆಯನ್ನು ನಿಧಾನಗೊಳಿಸುತ್ತದೆ. ಚಹಾವನ್ನು ಪದೇ ಪದೇ ಕುದಿಸುವುದರಿಂದ ಅದರಲ್ಲಿರುವ ಪ್ರೋಟೀನ್‌ಗಳು ನಾಶವಾಗುತ್ತದೆ, ಹಾಗಾಗಿ ಆಮ್ಲೀಯತೆ ಮತ್ತು ಸುಡುವಿಕೆಯಂತಹ ಸಮಸ್ಯೆಗಳು ಉಂಟಾಗುತ್ತದೆ. ಹಾಗಾಗಿ ಚಹಾ ಕುಡಿಯುವ ಮನಸ್ಸಾದರೆ ಪ್ರತಿ ಬಾರಿಯೂ ತಾಜಾವಾಗಿ ಚಹಾ ತಯಾರಿಸಿ ಕುಡಿಯುವುದು ಬಹಳ ಆರೋಗ್ಯಕರ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Viral: ಕಾಂಡೋಮ್‌ಗಾಗಿ ಬರೋಬ್ಬರಿ 1 ಲಕ್ಷ ರೂ ಖರ್ಚು ಮಾಡಿದ ಚೆನ್ನೈ ವ್ಯಕ್ತಿ – Kannada News | Chennai man spends Rs 1 lakh on condoms: Instamart’s 2025 report reveals

ಇತ್ತೀಚೆಗಿನ ದಿನಗಳಲ್ಲಿ ಆನ್ಲೈನ್ ಶಾಪಿಂಗ್ (online shopping) ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಕುಳಿತಲ್ಲಿಂದಲೇ ತಮಗೆ ಬೇಕಾದ್ದನ್ನು ಆರ್ಡರ್ ಮಾಡುತ್ತಾರೆ. ಹೀಗಾಗಿ ಬ್ಲಿಂಕಿಟ್, ಜೆಪ್ಟೊ ಅಥವಾ ಸ್ವಿಗ್ಗಿಯ ಇನ್‌ಸ್ಟಾಮಾರ್ಟ್ ಹೀಗೆ ಹತ್ತಾರು ಅಪ್ಲಿಕೇಶನ್ ಗಳನ್ನು ಅವಲಂಬಿಸಿಕೊಂಡವರೇ ಹೆಚ್ಚು. ಹೀಗಿರುವಾಗ ಪ್ರತಿ ವರ್ಷದಂತೆ ಈ ವರ್ಷವ ಸ್ವಿಗ್ಗಿಯ ಕ್ವಿಕ್ ಕಾಮರ್ಸ್ ಪ್ಲಾಟ್‌ಫಾರ್ಮ್ ಆಗಿರುವ ಇನ್‌ಸ್ಟಾಮಾರ್ಟ್‌ನ (Instamarts) 2025ರ ವರದಿಯನ್ನು ಬಿಡುಗಡೆ ಮಾಡಿದೆ. ಆದರೆ ಚೆನ್ನೈನ ವ್ಯಕ್ತಿಯೊಬ್ಬ ಈ ಅಪ್ಲಿಕೇಶನ್ ಮೂಲಕ ಇಡೀ ವರ್ಷದಲ್ಲಿ ಕಾಂಡೋಮ್ ಗಾಗಿ ಒಂದು ಲಕ್ಷ ರೂ ಖರ್ಚು ಮಾಡಿದ್ದಾನೆಯಂತೆ.

ಭಾರಧ್ವಜ್ ರಂಗನ್ (bharadwaj rangan) ಹೆಸರಿನ ಖಾತೆಯಲ್ಲಿ ಇನ್‌ಸ್ಟಾಮಾರ್ಟ್ ವರದಿ ಕುರಿತಾದ ಪೋಸ್ಟ್ ಹಂಚಿಕೊಳ್ಳಲಾಗಿದೆ. 2025ರ ಇನ್‌ಸ್ಟಾಮಾರ್ಟ್‌ ವರದಿ ಪ್ರಕಾರ, ಚೆನ್ನೈನ ವ್ಯಕ್ತಿಯೂ ಇಡೀ ವರ್ಷದಲ್ಲಿ ಕಾಂಡೋಮ್‌ಗಳಿಗಾಗಿ 1,06,398 ರೂ.ಗಳನ್ನು ಖರ್ಚು ಮಾಡಿದ್ದಾನೆ.

ವೈರಲ್‌ ಪೋಸ್ಟ್‌ ಇಲ್ಲಿದೆ ನೋಡಿ

ಇದನ್ನೂ ಓದಿ:ಸತತ 10 ವರ್ಷಗಳಿಂದ ಬಿರಿಯಾನಿಗೆ ಅಗ್ರಸ್ಥಾನ: ಸ್ವಿಗ್ಗಿಯಲ್ಲಿ 93 ಮಿಲಿಯನ್ ಬಿರಿಯಾನಿ ಆರ್ಡರ್

ಅದಲ್ಲದೇ, ವರ್ಷ ಪೂರ್ತಿ 228 ವಿಭಿನ್ನ ಆರ್ಡರ್‌ಗಳನ್ನು ಮಾಡಿದ್ದಾನೆ ಎನ್ನುವ ಮಾಹಿತಿಯನ್ನು ಬಹಿರಂಗ ಪಡಿಸಿದೆ. ಅಂದರೆ, ಪ್ರತಿ ತಿಂಗಳು ಸರಾಸರಿ 19 ಆರ್ಡರ್‌ಗಳನ್ನು ಮಾಡಿದ್ದಾನೆ ಎನ್ನಲಾಗಿದೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಟಿ20 ಪಂದ್ಯದಲ್ಲಿ 50 ಎಸೆತಗಳಲ್ಲಿ 61 ರನ್ ಬಾರಿಸಿದ RCB ದಾಂಡಿಗ..! – Kannada News | Jordan Cox Smashes Slow Fifty in ILT20

ಟಿ20 ಕ್ರಿಕೆಟ್ ಅಂದರೆ ಹೊಡಿಬಡಿಯಾಟ… ಅದರಲ್ಲೂ ಕಡಿಮೆ ಮೊತ್ತದ ಟಾರ್ಗೆಟ್ ಸಿಕ್ಕರೆ ಬ್ಯಾಟರ್​ಗಳು ಅಬ್ಬರಿಸುವುದು ವಾಡಿಕೆ. ಆದರೆ ದುಬೈನಲ್ಲಿ ನಡೆದ ಇಂಟರ್​ನ್ಯಾಷನಲ್ ಲೀಗ್ ಟಿ20 ಪಂದ್ಯದಲ್ಲಿ ಸ್ಲೋ ಇನಿಂಗ್ಸ್ ಆಡಿದ ಜೋರ್ಡನ್ ಕಾಕ್ಸ್ ಸುದ್ದಿಯಾಗಿದ್ದಾರೆ.

ದುಬೈ ಇಂಟರ್​​ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಶಾರ್ಜಾ ವಾರಿಯರ್ಸ್ ಹಾಗೂ ದುಬೈ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ಮ್ಯಾಚ್​ನಲ್ಲಿ ಮೊದಲು ಬ್ಯಾಟ್ ಮಾಡಿದ ಶಾರ್ಜಾ ವಾರಿಯರ್ಸ್ ತಂಡವು 20 ಓವರ್​ಗಳಲ್ಲಿ 8 ವಿಕೆಟ್ ಕಳೆದುಕೊಂಡು 134 ರನ್​ಗಳಿಸಲಷ್ಟೇ ಶಕ್ತರಾಗಿದ್ದರು.

135 ರನ್​ಗಳ ಗುರಿ ಬೆನ್ನತ್ತಿದ ದುಬೈ ಕ್ಯಾಪಿಟಲ್ಸ್ ತಂಡಕ್ಕೆ ಶಯಾನ್ ಜಹಾಂಗೀರ್ ಉತ್ತಮ ಆರಂಭ ಒದಗಿಸಿದ್ದರು. 39 ಎಸೆತಗಳನ್ನು ಎದುರಿಸಿದ ಶಯಾನ್ 1 ಸಿಕ್ಸ್ ಹಾಗೂ 6 ಫೋರ್​ಗಳೊಂದಿಗೆ 51 ರನ್ ಬಾರಿಸಿದ್ದರು.

ಆದರೆ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಜೋರ್ಡನ್ ಕಾಕ್ಸ್ ನಿಧಾನಗತಿಯಲ್ಲಿ ಬ್ಯಾಟ್ ಬೀಸಿ ಅಚ್ಚರಿ ಮೂಡಿಸಿದರು. ಬರೋಬ್ಬರಿ 50 ಎಸೆತಗಳನ್ನು ಎದುರಿಸಿದ ಜೋರ್ಡನ್ 1 ಸಿಕ್ಸ್ ಹಾಗೂ 6 ಫೋರ್​ಗಳೊಂದಿಗೆ ಅಜೇಯ 61 ರನ್ ಕಲೆಹಾಕಿದರು.

ಕಾಕ್ಸ್ ಅವರ ಈ ನಿಧಾನಗತಿಯ ಬ್ಯಾಟಿಂಗ್ ಪರಿಣಾಮ 135 ರನ್​ಗಳ ಗುರಿ ತಲುಪಲು ದುಬೈ ಕ್ಯಾಪಿಟಲ್ಸ್ ತಂಡವು ಬರೋಬ್ಬರಿ 19.1 ಓವರ್​ಗಳನ್ನು ತೆಗೆದುಕೊಂಡಿತು. ಅಂದರೆ ಕೊನೆಯ ಓವರ್​ನಲ್ಲಿ 6 ವಿಕೆಟ್​ಗಳ ಜಯ ದಕ್ಕಿಸಿಕೊಂಡಿದ್ದರು.

ಅಂದಹಾಗೆ ಜೋರ್ಡನ್ ಕಾಕ್ಸ್ ಮುಂಬರುವ ಐಪಿಎಲ್​ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಕಣಕ್ಕಿಳಿಯಲಿದ್ದಾರೆ. ಈ ಬಾರಿಯ ಮಿಜಿ ಹರಾಜಿನ ಮೂಲಕ ಕಾಕ್ಸ್ ಅವರನ್ನು ಆರ್​ಸಿಬಿ 75 ಲಕ್ಷ ರೂ.ಗೆ ಖರೀದಿಸಿದೆ.

Source link

ಗಿಲ್ಲಿಯ ‘ದೊಡ್ಡವ್ವ..’ ಹಾಡು ಹೇಳಿದ ಅಶ್ವಿನಿ ತಾಯಿ

ಬಿಗ್ ಬಾಸ್ ಮನೆಯಲ್ಲಿ ಗಿಲ್ಲಿ ನಟ ಅವರು ಜನಪ್ರಿಯತೆ ಪಡೆದಿದ್ದಾರೆ. ಅವರು ಈ ಮೊದಲು ಅಶ್ವಿನಿ ಹಾಗೂ ಜಾನ್ವಿಗೆ ಬಳಕೆ ಮಾಡಿದ್ದ ‘ದೊಡ್ಡವ್ವ..’ ಡೈಲಾಗ್​​ನ ಹಾಡು ಮಾಡಲಾಯಿತು. ಈ ಹಾಡನ್ನು ಅಶ್ವಿನಿ ತಾಯಿ ಅವರು ಬಿಗ್ ಬಾಸ್ ಮನೆಯಲ್ಲೇ ಹಾಡಿದ್ದಾರೆ ಎಂದರೆ ನೀವು ನಂಬಲೇಬೇಕು. ಆ ಸಂದರ್ಭದ ವಿಡಿಯೋ ಇಲ್ಲಿದೆ ನೋಡಿ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Good Governance Day 2025: ಉತ್ತಮ ಆಡಳಿತ ದಿನವನ್ನು ಆಚರಿಸುವುದರ ಹಿಂದಿನ ಉದ್ದೇಶವೇನು? – Kannada News | Good Governance Day 2025: What is the purpose behind celebrating Good Governance Day on December 25?

ಉತ್ತಮ ಆಡಳಿತ (Good Governance) ಎಂದರೆ ಪಾರದರ್ಶಕತೆ, ಹೊಣೆಗಾರಿಕೆ, ಸಾರ್ವಜನಿಕ ಕಲ್ಯಾಣ ಮತ್ತು ಜವಾಬ್ದಾರಿಯುತವಾಗಿ, ಪರಿಣಾಮಕಾರಿಯಾಗಿ ಆಡಳಿತವನ್ನು ನಡೆಸುವುದಾಗಿದೆ. ಸರ್ಕಾರಿ ನೀತಿಗಳನ್ನು ಸಾಮಾನ್ಯ ನಾಗರಿಕರಿಗೆ ಪ್ರಾಮಾಣಿಕವಾಗಿ ತಲುಪಿಸಿದಾಗ, ಭ್ರಷ್ಟಾಚಾರವನ್ನು ನಿಗ್ರಹಿಸಿ ಪ್ರತಿಯೊಬ್ಬ ನಾಗರಿಕರಿಗೂ ಸಮಾನ ಅವಕಾಶಗಳನ್ನು ಒದಗಿಸಿದಾಗ ಮಾತ್ರ ನಿಜವಾದ ಅಭಿವೃದ್ಧಿ ಸಾಧ್ಯವಾಗುತ್ತದೆ. ಹಾಗಾಗಿ ಹಳ್ಳಿಯಿಂದ ದಿಲ್ಲಿಯವರೆಗೆ ಪ್ರತಿಯೊಂದು ಆಡಳಿತ ವರ್ಗಗಳು ಉತ್ತಮ ರೀತಿಯಲ್ಲಿ ಆಡಳಿತ ನಡೆಸಬೇಕು ಹಾಗೂ ಸರ್ಕಾರದ ಕರ್ತವ್ಯಗಳು ಮತ್ತು ಜವಾಬ್ದಾರಿಗಳ ಬಗ್ಗೆ ವಿದ್ಯಾರ್ಥಿಗಳು ಮತ್ತು ನಾಗರಿಕರಿಗೆ ಶಿಕ್ಷಣ ನೀಡಬೇಕು ಎಂಬ ಉದ್ದೇಶದಿಂದ ಡಿಸೆಂಬರ್‌ 25 ರಂದು ಉತ್ತಮ ಆಡಳಿತ ದಿನವನ್ನು ಆಚರಿಸಲಾಗುತ್ತದೆ. ಈ ದಿನ ಭಾರತದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಚಿಂತನೆಗಳು ಮತ್ತು ಆದರ್ಶಗಳಿಗೆ ಸಮರ್ಪಿತವಾಗಿದೆ.

ಉತ್ತಮ ಆಡಳಿತ ದಿನದ ಇತಿಹಾಸವೇನು?

ಭಾರತದ ಮಾಜಿ ಪ್ರಧಾನಿ, ಅಜಾತಶತ್ರು ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ಜಯಂತಿಯಂದು ಭಾರತದಲ್ಲಿ ‘ಉತ್ತಮ ಆಡಳಿತ ದಿನ’ವನ್ನು ಆಚರಿಸಲಾಗುತ್ತದೆ. ಈ ದಿನವನ್ನು ಸಂಪೂರ್ಣವಾಗಿ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಸಮರ್ಪಿಸಲಾಗಿದೆ. 2014 ರಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು ಅಟಲ್ ಬಿಹಾರಿ ವಾಜಪೇಯಿ ಅವರ ಗೌರವಾರ್ಥವಾಗಿ ಪ್ರತಿ ವರ್ಷ ಡಿಸೆಂಬರ್ 25 ರಂದು ‘ಉತ್ತಮ ಆಡಳಿತ ದಿನ’ವನ್ನು ಆಚರಿಸುವುದಾಗಿ ಘೋಷಿಸಿದರು. ಈ ದಿನದಂದು ಅಟಲ್ ಬಿಹಾರಿ ವಾಜಪೇಯಿ ಅವರ ಕೆಲಸವನ್ನು, ದೇಶದ ಅಭಿವೃದ್ಧಿಗೆ ಅವರು ನೀಡಿದ ಕೊಡುಗೆಗಳನ್ನು ಸ್ಮರಿಸಲಾಗುತ್ತದೆ.  ಸ್ಮರಿಸಲಾಗುತ್ತದೆ. ಅನೇಕ ಸ್ಥಳಗಳಲ್ಲಿ ವಿಚಾರ ಸಂಕಿರಣಗಳು ಮತ್ತು ಕಾರ್ಯಕ್ರಮಗಳನ್ನು ಸಹ ಆಯೋಜಿಸಲಾಗುತ್ತದೆ.

ಉತ್ತಮ ಆಡಳಿತ ದಿನದ ಆಚರಣೆಯ ಉದ್ದೇಶವೇನು?

ಅಟಲ್‌ ಬಿಹಾರಿ ವಾಜಪೇಯಿ ಅವರ ಜನ್ಮ ಜಯಂತಿಯ ಪ್ರಯುಕ್ತ ಭಾರತ ಸರ್ಕಾರವು 2014 ರಲ್ಲಿ ಉತ್ತಮ ಆಡಳಿತ ದಿನವನ್ನು ಪ್ರಾರಂಭಿಸಿತು. ಇದರ ಉದ್ದೇಶವೆಂದರೆ,

  • ಆಡಳಿತದಲ್ಲಿ ಪಾರದರ್ಶಕತೆ ಹೆಚ್ಚಳ
  • ಜನ ಕೇಂದ್ರಿತ ನೀತಿಗಳನ್ನು ರೂಪಿಸುವುದು
  • ಸರ್ಕಾರಿ ಕೆಲಸವನ್ನು ಜವಾಬ್ದಾರಿಯುತವಾಗಿಸುವುದು
  • ನಾಗರಿಕರಿಗೆ ತಮ್ಮ ಹಕ್ಕುಗಳ ಬಗ್ಗೆ ಅರಿವು ಮೂಡಿಸುವುದು, ಸರ್ಕಾರಿ ಸೇವೆಗಳ ಗುಣಮಟ್ಟವನ್ನು ಸುಧಾರಿಸುವುದು, ಇ-ಆಡಳಿತವನ್ನು ಉತ್ತೇಜಿಸುವುದು ಈ ದಿನದ ಮುಖ್ಯ ಉದ್ದೇಶವಾಗಿದೆ.

ಇದನ್ನೂ ಓದಿ: ಒಬ್ಬ ಜವಾಬ್ದಾರಿಯುತ ಗ್ರಾಹಕರಾಗಿ ನಿಮ್ಮ ಹಕ್ಕುಗಳೇನು, ತಿಳಿದುಕೊಳ್ಳಿ

ಅಟಲ್ ಬಿಹಾರಿ ವಾಜಪೇಯಿ ಒಬ್ಬ ಚೈತನ್ಯಶೀಲ ರಾಜಕಾರಣಿ:

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಡಿಸೆಂಬರ್ 25, 1924 ರಂದು ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ಜನಿಸಿದರು. ಅವರು ಮೂರು ಬಾರಿ ಭಾರತದ ಪ್ರಧಾನಿಯಾದರು.  ಸರ್ಕಾರದ ಕೆಲಸವು ಕೇವಲ ಆಡಳಿತ ನಡೆಸುವುದಲ್ಲ, ಸೇವೆ ಸಲ್ಲಿಸುವುದು ಎಂದು ನಂಬಿದ್ದ ಅವರು  ತಮ್ಮ ಅಧಿಕಾರಾವಧಿಯಲ್ಲಿ ದೇಶದ ಅಭಿವೃದ್ಧಿಗೆ ಸಾಕಷ್ಟು ಕೊಡುಗೆಗಳನ್ನು ನೀಡಿದರು, ಮಹತ್ವದ ಯೋಜನೆಗಳು ಮತ್ತು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿದರು. ಅಜಾತಶತ್ರು ಎಂದೇ ಹೆಸರುವಾಸಿಯಾದ ಅವರು ನಿಷ್ಕಳಂಕ ಚಾರಿತ್ರ್ಯದ, ಮೇರು ವ್ಯಕ್ತಿತ್ವದ ಮಹಾನ್‌ ಜನನಾಯಕ. ತಮ್ಮ ಅತ್ಯುತ್ತಮ ಆಡಳಿದಿಂದ ಅಚ್ಚಳಿಯ ಛಾಪು ಮೂಡಿಸಿದ್ದ ವಾಜಪೇಯಿ ಅವರ ಜನ್ಮ ಜಯಂತಿಯಂದು ಉತ್ತಮ ಆಡಳಿತ ದಿನವನ್ನು ಆಚರಣೆ ಮಾಡುವ  ಮೂಲಕ ಅವರಿಗೆ ವಿಶೇಷ ಗೌರವ ಸಲ್ಲಿಸಲಾಗುತ್ತಿದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಚಿತ್ರದುರ್ಗ ಬಸ್ ಅಪಘಾತ: ಪ್ರಧಾನಿ ಮೋದಿ ಸಂತಾಪ, 2 ಲಕ್ಷ ರೂ. ಪರಿಹಾರ ಘೋಷಣೆ – Kannada News | Chitradurga Bus Accident: PM Narendra Modi Expresses Condolences, Announces Rs 2 Lakh Ex Gratia

ಚಿತ್ರದುರ್ಗ ಬಸ್ ಅಪಘಾತ: ಪ್ರಧಾನಿ ಮೋದಿ ಸಂತಾಪ, 2 ಲಕ್ಷ ರೂ. ಪರಿಹಾರ ಘೋಷಣೆ

ನವದೆಹಲಿ, ಡಿಸೆಂಬರ್ 25: ಕರ್ನಾಟಕದ ಚಿತ್ರದುರ್ಗ (Chitradurga) ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಗೊರ್ಲತ್ತು ಕ್ರಾಸ್ ಬಳಿ ಸಂಭವಿಸಿದ ಭೀಕರ ಬಸ್ ಅಪಘಾದಲ್ಲಿ ಮೃತಪಟ್ಟವರ ಕುಟುಂಬದವರಿಗೆ ಕೇಂದ್ರ ಸರ್ಕಾರ 2 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದೆ. ಘಟನೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಸಂತಾಪ ಸೂಚಿಸಿದ್ದು, ಪ್ರಧಾನ ಮಂತ್ರಿಯವರ ರಾಷ್ಟ್ರೀಯ ಪರಿಹಾರ ನಿಧಿನಿಯಿಂದ ನೆರವು ನೀಡುವುದಾಗಿ ಘೋಷಿಸಿದ್ದಾರೆ. ಈ ಬಗ್ಗೆ ಪ್ರಧಾನಿ ಕಾರ್ಯಾಲಯ ಎಕ್ಸ್ ಮೂಲಕ ಮಾಹಿತಿ ಹಂಚಿಕೊಂಡಿದೆ.

‘ಕರ್ನಾಟಕದ ಚಿತ್ರದುರ್ಗ ಜಿಲ್ಲೆಯಲ್ಲಿ ಸಂಭವಿಸಿದ ಅಪಘಾತದಲ್ಲಿ ಜೀವಹಾನಿಯಾಗಿದೆ ಎಂದು ತಿಳಿದು ತೀವ್ರ ದುಃಖವಾಗಿದೆ. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡವರಿಗೆ ಸಂತಾಪ ಸೂಚಿಸುತ್ತೇನೆ. ಗಾಯಗೊಂಡವರು ಆದಷ್ಟು ಬೇಗ ಚೇತರಿಸಿಕೊಳ್ಳಲಿ’ ಎಂದು ಪ್ರಧಾನಿ ಕಾರ್ಯಾಲಯ ಎಕ್ಸ್ ಸಂದೇಶದಲ್ಲಿ ಉಲ್ಲೇಖಿಸಿದೆ.

‘ಮೃತರ ಸಂಬಂಧಿಕರಿಗೆ ಪ್ರಧಾನ ಮಂತ್ರಿಯವರ ರಾಷ್ಟ್ರೀಯ ಪರಿಹಾರ ನಿಧಿ (ಪಿಎಂಎನ್‌ಆರ್‌ಎಫ್‌)ಯಿಂದ 2 ಲಕ್ಷ ರೂ. ತಾತ್ಕಾಲಿಕ ಪರಿಹಾರ ನೀಡಲಾಗುವುದು. ಗಾಯಾಳುಗಳಿಗೆ 50,000 ರೂ. ನೀಡಲಾಗುವುದು’ ಎಂದು ಪ್ರಧಾನಿ ತಿಳಿಸಿದ್ದಾರೆ.

ಪ್ರಧಾನಿ ಕಾರ್ಯಾಲಯ ಎಕ್ಸ್ ಸಂದೇಶ

ಗೊರ್ಲತ್ತು ಕ್ರಾಸ್ ಬಳಿ ಮುಂಜಾವ 3 ಗಂಟೆ ಸುಮಾರಿಗೆ ಬೆಂಗಳೂರಿನಿಂದ ಗೋಕರ್ಣಕ್ಕೆ ತೆರಳುತ್ತಿದ್ದ ಬಸ್​ಗೆ ಎದುರು ಬದಿಯಿಂದ ಬರುತ್ತಿದ್ದ ಕಂಟೇನರ್ ಲಾರಿ ಡಿವೈಡ್ ಕ್ರಾಸ್ ಮಾಡಿ ಡಿಕ್ಕಿಯಾಗಿದೆ. ಪರಿಣಾಮವಾಗಿ ಬಸ್ ಅಪಘಾತಕ್ಕೀಡಾಗಿ ಬೆಂಕಿ ಹೊತ್ತಿ ಉರಿದು 9 ಮಂದಿ ಸಜೀವ ದಹನವಾಗಿದ್ದಾರೆ.

ಲಾರಿ ಚಾಲಕನ ನಿರ್ಲಕ್ಷ್ಯವೇ ಘಟನೆಗೆ ಮುಖ್ಯ ಕಾರಣ ಎನ್ನಲಾಗಿದೆ. 32 ಆಸನ ಸಾಮರ್ಥ್ಯದ ಬಸ್‌ನಲ್ಲಿ 29 ಮಂದಿ ಪ್ರಯಾಣಿಸುತ್ತಿದ್ದರು. ಬಸ್ ಚಾಲಕ ಹಾಗೂ ಕ್ಲೀನರ್ ಪಾರಾಗಿದ್ದಾರೆ. ಬಸ್ ಚಾಲಕನ ಸ್ಥಿತಿ ಗಂಭೀರವಾಗಿದೆ. ಗಾಯಾಳುಗಳನ್ನು ಚಿತ್ರದುರ್ಗ ಹಾಗೂ ತುಮಕೂರಿನ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಹೆಚ್​ಡಿ ಕುಮಾರಸ್ವಾಮಿ, ಡಿಕೆ ಶಿವಕುಮಾರ್ ಸಂತಾಪ

ಬಸ್ ದುರಂತದ ಬಗ್ಗೆ ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿ ಆಘಾತ ವ್ಯಕ್ತಪಡಿಸಿದ್ದಾರೆ. ಇನ್ನೂ ಹೆಚ್ಚಿನ ಸಾವು-ನೋವು ಆಗದಿರಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ಅವರು ಹೇಳಿದ್ದಾರೆ.

ದುರಂತದಲ್ಲಿ ಜೀವ ಚೆಲ್ಲಿದವರಿಗೆ ದೇವರು ಚಿರಶಾಂತಿ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ. ಗಾಯಾಳುಗಳು ಶೀಘ್ರವಾಗಿ ಚೇತರಿಸಿಕೊಳ್ಳಲಿ ಹಾಗೂ ಅವರ ಚಿಕಿತ್ಸೆಗೆ ರಾಜ್ಯ ಸರಕಾರ ಎಲ್ಲಾ ವ್ಯವಸ್ಥೆಗಳನ್ನು ಕೈಗೊಳ್ಳಲಿ. ಅಗಲಿದವರ ಕುಟುಂಬದವರಿಗೆ ನನ್ನ ತೀವ್ರ ಸಂತಾಪಗಳು ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ಇದನ್ನೂ ಓದಿ: ಮತ್ತೊಂದು ಘನಘೋರ ದುರಂತ: ಚಿತ್ರದುರ್ಗ ಹೆದ್ದಾರಿಯಲ್ಲಿ ಹೊತ್ತಿ ಉರಿದ ಖಾಸಗಿ ಬಸ್​​​​, 9 ಜನ ಸಜೀವ ದಹನ

ಕರ್ನಾಟಕ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸಹ ಘಟನೆಗೆ ಸಂತಾಪ ಸೂಚಿಸಿದ್ದಾರೆ. ಗಾಯಾಳುಗಳು ಶೀಘ್ರ ಗುಣಮುಖರಾಗಲಿ ಎಂದು ಆಶಿಸುತ್ತೇನೆ. ಇಂತಹ ದುರಂತಗಳು ಮರುಕಳಿಸದಿರಲಿ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.

Source link

ಚಿತ್ರದುರ್ಗ ಬಸ್ ಅಪಘಾತ: ಬಸ್ ಹೊತ್ತಿ ಉರಿದ ಭಯಾನಕ ಘಟನೆ ಬಗ್ಗೆ ವಿವರಿಸಿದ ಕ್ಲೀನರ್ – Kannada News | Chitradurga Bus Accident: Cleaner Recounts Horror as Bus Catches Fire After Crash

ಚಿತ್ರದುರ್ಗ, ಡಿಸೆಂಬರ್ 25: ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದ ಭೀಕರ ಬಸ್ ಅಪಘಾತದ ಭಯಾನಕ ಕ್ಷಣಗಳ ಬಗ್ಗೆ ಬಸ್ ಕ್ಲೀನರ್ ಸಾಧಿಕ್ ಮಾಹಿತಿ ನೀಡಿದ್ದಾರೆ. ಈ ದುರ್ಘಟನೆ ತಡರಾತ್ರಿ ಸುಮಾರು 1.30 ರಿಂದ 2 ಗಂಟೆಯ ನಡುವೆ ನಡೆದಿದೆ ಎಂದು ಅವರು ತಿಳಿಸಿದ್ದಾರೆ. ‘ರಾತ್ರಿ ನಾನು ಬಸ್‌ನಲ್ಲಿ ಮಲಗಿದ್ದೆ. ಅಷ್ಟರಲ್ಲಿ ಭಾರೀ ಡಿಕ್ಕಿ ಹೊಡೆದ ರಭಸಕ್ಕೆ ನಾನು ಬಸ್‌ನಿಂದ ಹೊರ ಬಿದ್ದೆ. ಏನಾಗಿದೆ ಎಂಬುದೇ ತಿಳಿಯದ ಸ್ಥಿತಿಯಲ್ಲಿ ಇದ್ದೆ. ನೋಡ ನೋಡುತ್ತಿದ್ದಂತೆ ಬಸ್ ಧಗಧಗನೆ ಹೊತ್ತಿ ಉರಿಯತೊಡಗಿತು’ ಎಂದು ಸಾಧಿಕ್ ಆತಂಕದಿಂದ ಹೇಳಿದ್ದಾರೆ.

ಅಪಘಾತ ಸಂಭವಿಸಿದ ತಕ್ಷಣ ಸ್ಥಳೀಯರು ಧಾವಿಸಿ ಬಂದು ನಮ್ಮ ಸಹಾಯಕ್ಕೆ ನಿಂತರು. ಆದರೆ ಅಪಘಾತವಾದ ಕ್ಷಣದಲ್ಲೇ ಎಲ್ಲರೂ ಶಾಕ್‌ಗೆ ಒಳಗಾಗಿದ್ದೆವು. ಏನಾಗಿದೆ, ಏನು ಮಾಡಬೇಕು ಎಂಬುದೇ ತಿಳಿಯದ ಪರಿಸ್ಥಿತಿ ನಿರ್ಮಾಣವಾಗಿತ್ತು ಎಂದು ಸಾಧಿಕ್ ವಿವರಿಸಿದ್ದಾರೆ. ಅಪಘಾತದ ವೇಳೆ ಬಸ್ ಚಾಲಕ ಕೂಡ ಹೊರ ಬಿದ್ದಿದ್ದು, ಆತನಿಗೆ ಕೈ ಹಾಗೂ ಕಾಲುಗಳಿಗೆ ಗಂಭೀರ ಗಾಯಗಳಾಗಿವೆ ಎಂದು ತಿಳಿಸಿದ್ದಾರೆ.

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಗೊರ್ಲತ್ತು ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ 48 ರಲ್ಲಿ ಸಂಭವಿಸಿದ ಅಪಘಾತದಲ್ಲಿ 9 ಮಂದಿ ಸಜೀವ ದಹನವಾಗಿದ್ದಾರೆ.

ವಿವರಗಳಿಗೆ ಓದಿ: ಮತ್ತೊಂದು ಘನಘೋರ ದುರಂತ: ಚಿತ್ರದುರ್ಗ ಹೆದ್ದಾರಿಯಲ್ಲಿ ಹೊತ್ತಿ ಉರಿದ ಖಾಸಗಿ ಬಸ್​​​​, 9ಕ್ಕೂ ಹೆಚ್ಚು ಜನ ಸಜೀವ ದಹನ

ಚಿತ್ರದುರ್ಗ ಭೀಕರ ಬಸ್ ಅಪಘಾತ: ಮೃತಪಟ್ಟ ಪ್ರಯಾಣಿಕರಲ್ಲಿ ಗೋಕರ್ಣದವರೇ ಹೆಚ್ಚು

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

VHT ಟೂರ್ನಿಯಲ್ಲಿ ಕಣಕ್ಕಿಳಿದ ವಿರಾಟ್, ರೋಹಿತ್​ಗೆ ಸಿಗುವ ವೇತನ ಎಷ್ಟು ಗೊತ್ತಾ? – Kannada News | How Much Will Virat Kohli, KL Rahul And Rohit Sharma Earn Per Match In Vijay Hazare Trophy?

ಬರೋಬ್ಬರಿ 15 ವರ್ಷಗಳ ಬಳಿಕ ವಿರಾಟ್ ಕೊಹ್ಲಿ ವಿಜಯ ಹಝಾರೆ ಟೂರ್ನಿಯಲ್ಲಿ ಕಣಕ್ಕಿಳಿದಿದ್ದಾರೆ. ಅತ್ತ 7 ವರ್ಷಗಳ ನಂತರ ರೋಹಿತ್ ಶರ್ಮಾ ಕೂಡ ದೇಶೀಯ ಅಂಗಳದಲ್ಲಿ ಏಕದಿನ ಪಂದ್ಯವಾಡಿದ್ದಾರೆ. ಇವರೊಂದಿಗೆ ರಿಷಭ್ ಪಂತ್, ಕೆಎಲ್ ರಾಹುಲ್, ಶುಭ್​ಮನ್ ಗಿಲ್ ಕೂಡ ದೇಶೀಯ ಟೂರ್ನಿಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಎಲ್ಲಾ ಆಟಗಾರರು ಪ್ರತಿ ಪಂದ್ಯಕ್ಕೆ ವೇತನವನ್ನು ಸಹ ಪಡೆಯಲಿದ್ದಾರೆ.

ಅಂದರೆ ವಿಜಯ ಹಝಾರೆ ಟೂರ್ನಿಯಲ್ಲಿ ಪ್ರತಿ ಮ್ಯಾಚ್​ಗಳಿಗೆ ಇಂತಿಷ್ಟು ಸಂಭಾವನೆ ನಿಗದಿ ಮಾಡಲಾಗಿದೆ. ಅತ್ತ ಟೀಮ್ ಇಂಡಿಯಾ ಪರ ಕಣಕ್ಕಿಳಿಯಲು ಲಕ್ಷಗಳ ರೂ.ನಲ್ಲಿ ವೇತನ ಪಡೆಯುವ ಸ್ಟಾರ್ ಆಟಗಾರರು ದೇಶೀಯ ಅಂಗಳದಲ್ಲಿ ಸಾವಿರಗಳ ರೂಪದಲ್ಲಿ ಸಂಭಾವನೆ ಪಡೆಯಲಿದ್ದಾರೆ.

ವೇತನ ಎಷ್ಟು?

ವಿಜಯ ಹಝಾರೆ ಟೂರ್ನಿಯಲ್ಲಿ ಮೂರು ವಿಭಾಗಗಳಾಗಿ ವೇತನ ನೀಡಲಾಗುತ್ತದೆ. ಅಂದರೆ ಇಲ್ಲಿ ಅನುಭವಿ ಆಟಗಾರರಿಗೆ ಹೆಚ್ಚಿನ ವೇತನ, ಉಳಿದವರಿಗೆ ಕಡಿಮೆ ವೇತನ ನಿಗದಿ ಮಾಡಲಾಗಿದೆ.

  • 1 ರಿಂದ 20 ಪಂದ್ಯಗಳನ್ನಾಡಿದ ಆಟಗಾರರಿಗೆ ಪ್ರತಿ ಪಂದ್ಯಕ್ಕೆ 40 ಸಾವಿರ ರೂ. ವೇತನ ನಿಗದಿ ಮಾಡಲಾಗಿದೆ.
  • 21 ರಿಂದ 40 ಮ್ಯಾಚ್​ಗಳನ್ನಾಡಿರುವ ಆಟಗಾರರು ಪ್ರತಿ ಪಂದ್ಯಕ್ಕೆ 50 ಸಾವಿರ ರೂ. ವೇತನ ಪಡೆಯಲಿದ್ದಾರೆ.
  • 41 ಕ್ಕಿಂತ ಹೆಚ್ಚಿನ ಪಂದ್ಯಗಳನ್ನಾಡಿರುವ ಆಟಗಾರರಿಗೆ ಪ್ರತಿ ಮ್ಯಾಚ್​ಗೆ 60 ಸಾವಿರ ರೂ. ವೇತನ ಸಿಗಲಿದೆ.

ಇದನ್ನೂ ಓದಿ: ಕರ್ನಾಟಕ ತಂಡದ ವಿಶ್ವ ದಾಖಲೆಯ ಚೇಸಿಂಗ್

ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ವೇತನ ಎಷ್ಟು?

ವಿಜಯ ಹಝಾರೆ ಟೂರ್ನಿಯು ಲಿಸ್ಟ್ ಎ ಕ್ರಿಕೆಟ್ ಟೂರ್ನಿ. ಹೀಗಾಗಿ ಲಿಸ್ಟ್ ಎ ಪಂದ್ಯಗಳ ಅನುಭವವನ್ನು ಇಲ್ಲಿ ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಹೀಗಾಗಿ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಸೇರಿದಂತೆ 41 ಕ್ಕಿಂತ ಹೆಚ್ಚಿನ ಏಕದಿನ ಪಂದ್ಯಗಳನ್ನಾಡಿರುವ ಆಟಗಾರರು ಪ್ರತಿ ಮ್ಯಾಚ್​ಗೆ 60 ಸಾವಿರ ರೂ. ವೇತನ ಪಡೆಯಲಿದ್ದಾರೆ.

  • ವಿರಾಟ್ ಕೊಹ್ಲಿ ಲಿಸ್ಟ್​ ಎ ಕ್ರಿಕೆಟ್​ನಲ್ಲಿ 343 ಪಂದ್ಯಗಳನ್ನಾಡಿದ್ದಾರೆ. ಹೀಗಾಗಿ ಅವರು ವಿಜಯ ಹಝಾರೆ ಟೂರ್ನಿಯ ಒಂದು ಪಂದ್ಯಕ್ಕೆ 60 ಸಾವಿರ ರೂ, ವೇತನ ಪಡೆಯಲಿದ್ದಾರೆ.
  • ರೋಹಿತ್ ಶರ್ಮಾ ಲಿಸ್ಟ್ ಎ ಕ್ರಿಕೆಟ್​ನಲ್ಲಿ 351 ಮ್ಯಾಚ್​ಗಳನ್ನಾಡಿರುವ ಕಾರಣ ಅವರಿಗೂ ವಿಜಯ ಹಝಾರೆ ಟೂರ್ನಿಯ ಪ್ರತಿ ಪಂದ್ಯಕ್ಕೆ 60 ಸಾವಿರ ರೂ. ನೀಡಲಾಗುತ್ತದೆ.
  • ಕೆಎಲ್ ರಾಹುಲ್ ಲಿಸ್ಟ್ ಎ ಕ್ರಿಕೆಟ್​ನಲ್ಲಿ 143 ಪಂದ್ಯಗಳನ್ನಾಡಿದ್ದಾರೆ. ಹೀಗಾಗಿ ಅವರು ಸಹ ಒಂದು ಮ್ಯಾಚ್​ಗೆ 60 ಸಾವಿರ ರೂ. ವೇತನ ಪಡೆಯಲಿದ್ದಾರೆ.
  • ಶುಭ್​ಮನ್ ಗಿಲ್ ಈವರೆಗೆ 69 ಲಿಸ್ಟ್ ಎ ಕ್ರಿಕೆಟ್​ನಲ್ಲಿ 69 ಪಂದ್ಯಗಳನ್ನಾಡಿದ್ದು, ಅದರಂತೆ ಪ್ರತಿ ಪಂದ್ಯಕ್ಕೆ 60 ಸಾವಿರ ರೂ. ವೇತನ ಗಿಟ್ಟಿಸಿಕೊಳ್ಳಲಿದ್ದಾರೆ.
  • ರಿಷಭ್ ಪಂತ್ 68 ಲಿಸ್ಟ್ ಎ ಪಂದ್ಯಗಳಲ್ಲಿ ಕಣಕ್ಕಿಳಿದಿದ್ದಾರೆ. ಹೀಗಾಗಿ ಅವರು ಸಹ ಪ್ರತಿ ಮ್ಯಾಚ್​ಗೆ 60 ಸಾವಿರ ರೂ. ವೇತನ ಪಡೆಯಲಿದ್ದಾರೆ.

Source link

‘ಮಾರ್ಕ್’; ‘45’ ಅಬ್ಬರದಲ್ಲಿ ‘ಡೆವಿಲ್​​’ಗೆ ಸಿಕ್ಕ ಚಿತ್ರಮಂದಿರಗಳು ಇಷ್ಟೇನಾ? – Kannada News | Devil Movie Screens Shrink: Mark and 45 Impact Kannada Film Collections

‘ದಿ ಡೆವಿಲ್’ ಸಿನಿಮಾ ಡಿಸೆಂಬರ್ 11ರಂದು ಅಬ್ಬರದಲ್ಲಿ ರಿಲೀಸ್ ಆಯಿತು. ಸಿನಿಮಾ ರಿಲೀಸ್ ಆಗಿ ಎರಡು ವಾರ ಕಳೆದಿದೆ. ಇಷ್ಟು ದಿನ ಸಿನಿಮಾಗೆ ಕನ್ನಡದಲ್ಲಿ ದೊಡ್ಡ ಸ್ಪರ್ಧೆ ಇರಲಿಲ್ಲ. ಆದರೆ, ಈಗ ಪರಿಸ್ಥಿತಿ ಬದಲಾಗಿ ಹೋಗಿದೆ. ಚಿತ್ರಕ್ಕೆ ಕನ್ನಡ ಚಿತ್ರಗಳಿಂದಲೇ ಸ್ಪರ್ಧೆ ಏರ್ಪಡುತ್ತಾ ಇವೆ. ಕನ್ನಡದಲ್ಲಿ ಇಂದು (ಡಿಸೆಂಬರ್ 25) ‘ಮಾರ್ಕ್’ (Mark Movie) ಹಾಗೂ ‘45’ ಸಿನಿಮಗಳು ರಿಲೀಸ್ ಆಗಿವೆ. ಇದರಿಂದ ‘ಡೆವಿಲ್’ ಚಿತ್ರಕ್ಕೆ ಸಾಕಷ್ಟು ಹಿನ್ನಡೆ ಉಂಟಾಗಿದೆ. ನೂರಾರು ಶೋಗಳನ್ನು ಈ ಚಿತ್ರಕ್ಕೆ ನೀಡಲಾಗಿತ್ತು. ಈಗ ಅದು ಗಣನೀಯವಾಗಿ ಇಳಿಕೆ ಕಂಡಿದೆ.

ಸುದೀಪ್ ನಟನೆಯ ‘ಮಾರ್ಕ್’ ಸಿನಿಮಾ ಬಗ್ಗೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಚಿತ್ರದಲ್ಲಿ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾದ ಟ್ರೇಲರ್ ಗಮನ ಸೆಳೆದಿದೆ. ಇನ್ನು, ‘45’ ಸಿನಿಮಾ ಕೂಡ ನಿರೀಕ್ಷೆ ಮೂಡಿಸಿದೆ. ಈ ಚಿತ್ರ ಸಾವು ಹಾಗೂ ಬದುಕಿನ ಕಥೆಯನ್ನು ಹೇಳಲಿದೆ. ಈ ಚಿತ್ರದಲ್ಲಿ ಉಪೇಂದ್ರ, ರಾಜ್ ಬಿ ಶೆಟ್ಟಿ ಹಾಗೂ ಶಿವಣ್ಣ ನಟಿಸಿದ್ದಾರೆ.

ಈ ಎರಡೂ ಚಿತ್ರಗಳ ಅಬ್ಬರದಿಂದ ‘ಡೆವಿಲ್’ ಚಿತ್ರಕ್ಕೆ ದೊಡ್ಡ ಹೊಡೆತ ಉಂಟಾಗಿದೆ. ಈ ಸಿನಿಮಾಗೆ ಸಿಕ್ಕ ಶೋಗಳ ಸಂಖ್ಯೆ ಕಡಿಮೆ ಆಗಿದೆ. ಈ ಸಿನಿಮಾಗೆ ಬೆಂಗಳೂರಿನಲ್ಲಿ ಸಿಕ್ಕಿರುವುದು ಕೇವಲ 28 ಶೋಗಳು. ಶೋಗಳ ಸಂಖ್ಯೆಯಲ್ಲಿ ಕುಸಿತ ಕಂಡಿರುವುದರಿಂದ ಸಿನಿಮಾ ಕಲೆಕ್ಷನ್ ಕೂಡ ತೀವ್ರ ಗತಿಯಲ್ಲಿ ಕುಸಿಯುವ ಸಾಧ್ಯತೆ ದಟ್ಟವಾಗಿದೆ. ಈಗಾಗಲೇ ಚಿತ್ರ 20-30 ಲಕ್ಷ ರೂಪಾಯಿ ಗಳಿಕೆ ಮಾಡುತ್ತಿದೆ. ಈಗ ಶೋ ಇಳಿಕೆ ಹಿನ್ನೆಲೆಯಲ್ಲಿ ಸಿನಿಮಾಗೆ ತೊಂದರೆ ಉಂಟಾಗಿದೆ.

ಇದನ್ನೂ ಓದಿ: ಈ ವಾರ ಅಖಾಡಕ್ಕೆ ‘ಮಾರ್ಕ್’, ‘45’: ಇನ್ನೂ ಕಡಿಮೆ ಆಗುತ್ತಾ ‘ದಿ ಡೆವಿಲ್’ ಕಲೆಕ್ಷನ್?

ಬಹುತೇಕ ಚಿತ್ರಮಂದಿರಗಳಿಂದ ‘ಡೆವಿಲ್’ ಸಿನಿಮಾವನ್ನು ತೆಗೆಯಲಾಗಿದೆ. ಸದ್ಯ ಮಾಗಡಿ ರಸ್ತೆಯಲ್ಲಿರುವ ವಿರೇಶ್ ಚಿತ್ರಮಂದಿರ ಹಾಗೂ ಬೆಂಗಳೂರಿನ ಗಾಂಧಿನಗರದಲ್ಲಿರುವ ಮುಖ್ಯ ಚಿತ್ರಮಂದಿರ ನರ್ತಕಿಯಲ್ಲಿ ನಾಲ್ಕು ಆಟಗಳನ್ನು ನೀಡಲಾಗಿದೆ. ಉಳಿದಂತೆ ಮಲ್ಟಿಪ್ಲೆಕ್ಸ್​​ಗಳಲ್ಲಿ ದಿನಕ್ಕೆ ಒಂದು ಅಥವಾ ಎರಡು ಆಟ ನೀಡಲಾಗಿದೆ.ಇದರ ಮಧ್ಯೆಯೂ ಕೆಲವು ಕಡೆಗಳಲ್ಲಿ ಸಿನಿಮಾ ಹೌಸ್​​ಫುಲ್ ಆಗುವ ಲಕ್ಷಣ ಕಾಣಿಸಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link