‘ರಾಮನ ಪಾತ್ರಕ್ಕೆ ರಣಬೀರ್ ಸೂಕ್ತ ಅಲ್ಲ’; ಲಕ್ಷ್ಮಣ ಪಾತ್ರಧಾರಿಯ ನೇರ ಹೇಳಿಕೆ
ಒಂದು ಸಿನಿಮಾ ಅಥವಾ ಸೀರಿಸ್ ಮಾಡಿ ಅದು ಗಮನಸೆಳೆದರೆ ಅದು ಬ್ರ್ಯಾಂಡ್ ಆಗಿ ಬಿಡುತ್ತದೆ. ನಂತರ ಅದೇ ರೀತಿಯ ಪ್ರಾಜೆಕ್ಟ್ ಮಾಡಿದರೆ ಜನರು ಬೇಡ ಬೇಡ ಎಂದರೂ ಅದನ್ನು ಮೂಲ ಸೃಷ್ಟಿಗೆ ಹೋಲಿಕೆ ಮಾಡಿಯೇ ಮಾಡುತ್ತಾರೆ. ಈಗ ‘ರಾಮಾಯಣ’ ಸಿನಿಮಾದ ಪರಿಸ್ಥಿತಿಯೂ ಹಾಗೆಯೇ ಆಗಿದೆ. ಈ ಮೊದಲು ದೂರದರ್ಶನದಲ್ಲಿ ‘ರಾಮಾಯಣ’ ಸೀರಿಯಲ್ ಪ್ರಸಾರ ಕಂಡಿತ್ತು. ಈಗ ನಿತೇಶ್ ತಿವಾರಿದ ನಿರ್ದೇಶನದ ಹೊಸ ರಾಮಾಯಣವನ್ನು ಅನೇಕರು ಆ ಧಾರಾವಾಹಿಗೆ ಹೋಲಿಕೆ ಮಾಡುತ್ತಿದ್ದಾರೆ. ವಿಎಫ್ಎಕ್ಸ್ ಬಗ್ಗೆಯೂ ಕೆಲವರು ಅಪಸ್ವರ ತೆಗೆದಿದ್ದಾರೆ….