Category Archives: Blog

Your blog category

ಬೆಣ್ಣೆ ನಗರಿ ಹುಡುಗಿಗೆ ಮನಸೋತ ನ್ಯೂಜಿಲೆಂಡ್‌ ಯುವಕ! ಅಪ್ಪಟ ಹಿಂದೂ ಸಂಪ್ರದಾಯದಂತೆ ದಾವಣಗೆರೆಯಲ್ಲಿ ನಡೀತು ಅದ್ದೂರಿ ವಿವಾಹ – Kannada News | New Zealand man marries Davanagere girl: Embraces Hindu Rituals

ಕ್ಯಾಂಬೆಲ್, ನ್ಯೂಜಿಲೆಂಡ್‌ನ ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದು, ಹಿಂದೂ ಸಂಪ್ರದಾಯದಂತೆ ಮದುವೆಯಾಗಲು ಇಷ್ಟಪಟ್ಟಿದ್ದಾರೆ. ಮದುವೆಗೆ ಒಂದು ವಾರದಿಂದ ಪೂರ್ವತಯಾರಿ ಆಗಿದ್ದು, ಕುಟುಂಬಸ್ಥರು ಶೇರ್ವಾನಿ, ಸೀರೆ ಧರಿಸಿ ತಯಾರಾದರು. ಅರ್ಚನಾ, ಶಾಸ್ತ್ರ ಪೂಜೆಗಳು, ಅರುಂಧತಿ ನಕ್ಷತ್ರ ಮತ್ತು ಎಲ್ಲಾ ಸಂಪ್ರದಾಯಿಕ ವಿಧಿಗಳನ್ನು ಪಾಲಿಸಿ ಮದುವೆ ನಡೆದಿದೆ. ಪ್ರತಿ ಕ್ಷಣವೂ ಸಾಂಸ್ಕೃತಿಕ ವೈಭವ ಮತ್ತು ಪವಿತ್ರತೆಯನ್ನು ತೋರಿಸುತ್ತಿದೆ.

Source link

Hubli: ಬೆಂಕಿ ಜ್ವಾಲೆಗೆ 4 ಅಂಗಡಿಗಳು ಸುಟ್ಟು ಕರಕಲು; ಅಷ್ಟಕ್ಕೂ ಆಗಿದ್ದೇನು? – Kannada News | Four Shops Gutted in Massive Blaze at Hubballis Kundagola Cross

ಹುಬ್ಬಳ್ಳಿ, ಡಿಸೆಂಬರ್​​ 24: ಕುಂದಗೋಳ ಕ್ರಾಸ್‌ನಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದ್ದು, ನಾಲ್ಕು ಅಂಗಡಿಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿವೆ. ಮಾಹಿತಿಗಳ ಪ್ರಕಾರ, ಬೆಂಕಿಯು ಮೊದಲು ಒಂದು ಡಾಬಾದಲ್ಲಿ ಕಾಣಿಸಿಕೊಂಡಿದೆ. ನೋಡ ನೋಡುತ್ತಿದ್ದಂತೆಯೇ ಬೆಂಕಿ ಅಕ್ಕಪಕ್ಕದ ಅಂಗಡಿಗಳಿಗೂ ಹಬ್ಬಿದ ಪರಿಣಾಮ ನಾಲ್ಕು ಶಾಪ್​​ಗಳು ಅಗ್ನಿಗೆ ಆಹುತಿಯಾಗಿವೆ. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಭೇಟಿ ನೀಡಿದ್ದು, ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಇನ್ಸ್ಟಾಗ್ರಾಮ್​ನಲ್ಲಿ ಪರಿಚಯವಾದ ಯುವಕನಿಂದ ಯುವತಿಯ ಮೇಲೆ ಹಲ್ಲೆ; ಆರೋಪಿ ಅರೆಸ್ಟ್ – Kannada News | Instagram Love Ends in Street Attack: Bengaluru Man Assaults Woman, Arrested

ಇನ್ಸ್ಟಾಗ್ರಾಮ್​ನಲ್ಲಿ ಪರಿಚಯವಾದ ಯುವಕನಿಂದ ಯುವತಿಯ ಮೇಲೆ ಹಲ್ಲೆ; ಆರೋಪಿ ಅರೆಸ್ಟ್

ಬೆಂಗಳೂರು, ಡಿಸೆಂಬರ್ 24: ಇನ್ಸ್ಟಾಗ್ರಾಮ್ ಸಿಕ್ಕ ಯುವಕನೊಬ್ಬ ಪ್ರೀತಿ ವಿಚಾರವಾಗಿ ನಡು ರಸ್ತೆಯಲ್ಲೇ ಯುವತಿಯ ಮೇಲೆ ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನ (Bengaluru) ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಪಿ.ಜಿ ಬಳಿ ಕಾರಿನಲ್ಲಿ ಬಂದ ಯುವಕ, ಯುವತಿಗೆ ಹಲವು ಬಾರಿ ಥಳಿಸಿದ್ದು, ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮಾಹಿತಿ ಪಡೆದ ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ವಿಚಾರಣೆಗೊಳಪಡಿಸಿದ್ದಾರೆ.

ಪ್ರೀತ್ಸೆ ಪ್ರೀತ್ಸೆ ಎಂದು ಹಿಂದೆ ಬಿದ್ದಿದ್ದ ಯುವಕ

ಆರೋಪಿಯನ್ನು ನವೀನ್ ಕುಮಾರ್ ಎಂದು ಗುರುತಿಸಲಾಗಿದ್ದು, ಸಂತ್ರಸ್ತ ಯುವತಿಯೊಂದಿಗೆ 2024ರಲ್ಲಿ ಇನ್‌ಸ್ಟಾಗ್ರಾಂ ಮೂಲಕ ಪರಿಚಯವಾಗಿತ್ತು ಎನ್ನಲಾಗಿದೆ. ಪರಿಚಯದ ಬಳಿಕ ಇಬ್ಬರ ನಡುವೆ ಫೋನ್ ಕರೆ ಮತ್ತು ಮೆಸೇಜ್ ಮೂಲಕ ಸಂಪರ್ಕ ಮುಂದುವರಿದಿತ್ತು. ಆದರೆ ನವೀನ್ ಕುಮಾರ್ ಯುವತಿಯನ್ನು ಪ್ರೀತಿಸಬೇಕು ಎಂದು ಬಲವಂತ ಮಾಡುತ್ತಿದ್ದನೆಂಬ ಆರೋಪ ಕೇಳಿಬಂದಿದೆ. ಇದರಿಂದ ಇಬ್ಬರ ನಡುವೆ ಪ್ರೀತಿ ಹಾಗೂ ಹಣಕಾಸಿನ ವಿಚಾರವಾಗಿ ವೈಮನಸ್ಸು ಉಂಟಾಗಿತ್ತು ಎನ್ನಲಾಗಿದೆ.

ಸಿಸಿ ಟಿವಿ ದೃಶ್ಯ ಇಲ್ಲಿದೆ

ಇದನ್ನೂ ಓದಿ ಮಗಳನ್ನು ಮದುವೆ ಮಾಡಿಕೊಡಲಿಲ್ಲವೆಂದು ತಾಯಿಗೆ ಬೆಂಕಿ ಹಚ್ಚಿದ ಕಿರಾತಕ!

ಪರಾರಿಯಾಗಿದ್ದ ಆರೋಪಿಯ ಬಂಧನ

ಸೋಮವಾರ ಜ್ಞಾನಭಾರತಿಯಲ್ಲಿರುವ ಯುವತಿಯ ಪಿ.ಜಿ ಬಳಿ ಕಾರಿನಲ್ಲಿ ಬಂದ ನವೀನ್, ಹಾರನ್ ಹೊಡೆದು ಯುವತಿಯನ್ನು ಕರೆಯಲು ಯತ್ನಿಸಿದ್ದಾನೆ. ಈ ವೇಳೆ ಯುವತಿಯ ಸ್ನೇಹಿತೆ ಪೊಲೀಸರಿಗೆ ಕರೆ ಮಾಡುವುದಾಗಿ ಹೇಳಿದ್ದು, ಯುವತಿ ಹಿಂದಕ್ಕೆ ಸರಿಯಲು ಯತ್ನಿಸಿದ್ದಾಳೆ. ಆದರೆ ನವೀನ್ ಆಕೆಯ ವ್ಯಾನಿಟಿ ಬ್ಯಾಗ್ ಕಸಿದು ಅದರೊಳಗೆ ಹುಡುಕಾಟ ನಡೆಸಿ, ಯುವತಿಯ ಹಿಂದೆ ಓಡಿ ಹಿಡಿದು ಎಳೆದಾಡಿ ಹಲ್ಲೆ ನಡೆಸಿದ್ದಾನೆ. ಎರಡು ಬಾರಿಗೂ ಹೆಚ್ಚು ಹಲ್ಲೆ ನಡೆಸಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.

ಘಟನೆಯ ನಂತರ ಆರೋಪಿಯು ಸ್ಥಳದಿಂದ ಪರಾರಿಯಾಗಿದ್ದರೂ, ಜ್ಞಾನಭಾರತಿ ಪೊಲೀಸರು ತ್ವರಿತ ಕಾರ್ಯಾಚರಣೆ ನಡೆಸಿ ನವೀನ್ ಕುಮಾರ್‌ನನ್ನು ವಶಕ್ಕೆ ಪಡೆದಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.

ಪ್ರದೀಪ್, ಟಿವಿ9 ಬೆಂಗಳೂರು

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 12:48 pm, Wed, 24 December 25

Source link

ಮತ್ತೆ ಒಂದಾಗುತ್ತಿದೆ ಸ್ಟಾರ್ ಹೀರೋ-ಡೈರೆಕ್ಟರ್ ಜೋಡಿ, 1000 ಕೋಟಿ ಸಿನಿಮಾ – Kannada News | Trivikram Srinivas to join hands with Allu Arjun for big budget movie

ನಾಯಕ-ನಾಯಕಿ ಜೋಡಿಯಂತೆ ಸ್ಟಾರ್ ಹೀರೋ-ಡೈರೆಕ್ಟರ್ ಜೋಡಿಗಳು ಸಹ ಎಲ್ಲ ಚಿತ್ರರಂಗದಲ್ಲಿಯೂ ಇವೆ. ಈ ಜೋಡಿ ಒಟ್ಟಿಗೆ ಕೆಲಸ ಆರಂಭಿಸಿದರೆಂದರೆ ಸಾಕು ಸಿನಿಮಾ ಪ್ರೇಮಿಗಳಲ್ಲಿ ಕುತೂಹಲ, ನಿರೀಕ್ಷೆ ಗರಿಗೆದರುತ್ತದೆ. ಇಂಥಹಾ ಸೂಪರ್ ಹಿಟ್ ಆಕ್ಟರ್-ಡೈರೆಕ್ಟರ್ ಜೋಡಿಗಳಲ್ಲಿ ಅಲ್ಲು ಅರ್ಜುನ್ (Allu Arjun) ಮತ್ತು ತ್ರಿವಿಕ್ರಮ್ ಅವರದ್ದು ಸಹ ಒಂದು. ‘ಜುಲೈ’, ‘ಸನ್ ಆಫ್ ಸತ್ಯಮೂರ್ತಿ’, ‘ಅಲಾ ವೈಕುಂಟಪುರಂಲೊ’ ಅಂಥಹಾ ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ನೀಡಿರುವ ಈ ಜೋಡಿ ಇದೀಗ ಮತ್ತೆ ಒಂದಾಗುತ್ತಿದೆ. ಅದೂ 1000 ಕೋಟಿ ಬಜೆಟ್ ಸಿನಿಮಾ ಮೂಲಕ.

ಅಸಲಿಗೆ ‘ಪುಷ್ಪ 2’ ಸಿನಿಮಾದ ಬಳಿಕ ಅಲ್ಲು ಅರ್ಜುನ್ ಅವರು ತ್ರಿವಿಕ್ರಮ್ ನಿರ್ದೇಶನದ ಸಿನಿಮಾನಲ್ಲಿ ನಟಿಸಲಿದ್ದಾರೆ ಎನ್ನಲಾಗಿತ್ತು. ಆದರೆ ಅಲ್ಲು ಅರ್ಜುನ್ ತಮಿಳಿನ ನಿರ್ದೇಶಕ ಅಟ್ಲಿಗೆ ಓಕೆ ಹೇಳಿದರು. ಇತ್ತ ತ್ರಿವಿಕ್ರಮ್ ಅವರು ನಟ ವೆಂಕಟೇಶ್ ಜೊತೆಗೆ ಹಾಸ್ಯ ಪ್ರಧಾನ ಕೌಟುಂಬಿಕ ಸಿನಿಮಾ ನಿರ್ದೇಶನದಲ್ಲಿ ತೊಡಗಿಕೊಂಡರು. ಅದರ ಜೊತೆಗೆ ಜೂ ಎನ್​​ಟಿಆರ್ ಜೊತೆಗೆ ‘ಮುರುಗನ್’ ಸಿನಿಮಾ ಮಾಡಲಿದ್ದಾರೆ ಎಂದು ಸಹ ಸುದ್ದಿ ಆಯ್ತು. ಆದರೆ ಇದೀಗ ತ್ರಿವಿಕ್ರಮ್ ಮತ್ತೆ ಅಲ್ಲು ಅರ್ಜುನ್ ಜೊತೆಗೆ ಸಿನಿಮಾ ಮಾಡಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

ಇದನ್ನೂ ಓದಿ:ಜಾಹೀರಾತು ಚಿತ್ರೀಕರಣಕ್ಕೆ ಬಂದ ಅಲ್ಲು ಅರ್ಜುನ್; ಎಂಟ್ರಿ ಹೇಗಿತ್ತು ನೋಡಿ..

ಅಲ್ಲು ಅರ್ಜುನ್ ಜೊತೆಗೆ ಪೌರಾಣಿಕ ಕತೆಯೊಂದನ್ನು ಸಿನಿಮಾ ಮಾಡಲಿದ್ದಾರಂತೆ ತ್ರಿವಿಕ್ರಮ್. ಹರಿದಾಡುತ್ತಿರುವ ಸುದ್ದಿಗಳ ಪ್ರಕಾರ, ತ್ರಿವಿಕ್ರಮ್ ಅವರು ಜೂ ಎನ್​​ಟಿಆರ್ ಜೊತೆ ಮಾಡಲಿದ್ದ ಸಿನಿಮಾವನ್ನೇ ಈಗ ಅಲ್ಲು ಅರ್ಜುನ್ ಅವರಿಗಾಗಿ ಮಾಡುತ್ತಿದ್ದಾರಂತೆ. ಅಸಲಿಗೆ ಆ ಕತೆಯನ್ನು ಅಲ್ಲು ಅರ್ಜುನ್ ಅವರಿಗಾಗಿಯೇ ತ್ರಿವಿಕ್ರಮ್ ಬರೆದಿದ್ದರು, ಆದರೆ ಅಲ್ಲು ಅರ್ಜುನ್ ಹಾಗೂ ತ್ರಿವಿಕ್ರಮ್ ನಡುವೆ ಅಭಿಪ್ರಾಯ ಭೇದಗಳು ಉಂಟಾಗಿ, ಸಿನಿಮಾವನ್ನು ಜೂ ಎನ್​​ಟಿಆರ್ ಜೊತೆ ಮಾಡುವುದಕ್ಕೆ ತ್ರಿವಿಕ್ರಮ್ ಮುಂದಾಗಿದ್ದರು. ಆದರೆ ಈಗ ಮತ್ತೆ ಮನಸ್ಸು ಬದಲಿಸಿ ಅಲ್ಲು ಅರ್ಜುನ್ ಜೊತೆಗೇ ಸಿನಿಮಾ ಮಾಡಲು ತ್ರಿವಿಕ್ರಮ್ ಮುಂದಾಗಿದ್ದಾರೆ.

ಈ ಪೌರಾಣಿಕ ಸಿನಿಮಾ ದೇವರು ಮುರುಗನ್ ಅಥವಾ ಕಾರ್ತಿಕೇಯ ಕುರಿತಾಗಿದ್ದಾಗಿದೆ. ಮುರುಗನ್ ಅನ್ನು ‘ಯುದ್ಧಗಳ ದೇವರು’ (ಲಾರ್ಡ್ ಆಫ್ ವಾರ್) ಎಂದೂ ಸಹ ಕರೆಯಲಾಗುತ್ತದೆ. ಮುರುಗನ್ ಅವರ ಈ ಆಯಾಮವನ್ನು ಸಿನಿಮಾನಲ್ಲಿ ಬಲು ಅದ್ಧೂರಿಯಾಗಿ ತೋರಿಸುವ ಯೋಜನೆ ತ್ರಿವಿಕ್ರಮ್ ಅವರದ್ದು. ರಾಜಮೌಳಿ, ಸುಕುಮಾರ್ ಅವರ ಸಾಲಿಗೆ ಸೇರಬಹುದಾದ ಪ್ರತಿಭೆಯುಳ್ಳ ನಿರ್ದೇಶಕ ತ್ರಿವಿಕ್ರಮ್. ಕಮರ್ಶಿಯಲ್ ಸಿನಿಮಾಗಳಲ್ಲಿ ಫಿಲಾಸಫಿ ಸೇರಿಸುವುದು ಅವರ ಶೈಲಿ. ಈ ಸಿನಿಮಾ ಮೂಲಕ ತ್ರಿವಿಕ್ರಮ್​​ಗೆ ಸಹ ಪ್ಯಾನ್ ಇಂಡಿಯಾ ಪ್ರೀತಿ, ಗೌರವ ಸಿಗುತ್ತದೆಯೇ ಕಾದು ನೋಡಬೇಕಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ದೆಹಲಿಯಿಂದ್ಲೇ ರಾಜಣ್ಣಗೆ ಖಡಕ್ ತಿರುಗೇಟು ನೀಡಿದ ಡಿಕೆ ಶಿವಕುಮಾರ್: ಏನಂದ್ರು ನೋಡಿ – Kannada News | DK Shivakumar Hits Back at KN Rajanna from Delhi, Issues Strong Rebuttal

ನವದೆಹಲಿ, ಡಿಸೆಂಬರ್ 24: ದೆಹಲಿಯಲ್ಲಿರುವ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ಮುಖ್ಯಮಂತ್ರಿ ಆಪ್ತ ಕೆಎನ್ ರಾಜಣ್ಣಗೆ ಖಾರವಾಗಿ ತಿರುಗೇಟು ನೀಡಿದ್ದಾರೆ. ರಾಹುಲ್ ಗಾಂಧಿಗೆ ರಾಜಣ್ಣ ಸರಣಿ ಪತ್ರ ಬರೆದಿರುವ ವಿಚಾರವಾಗಿ ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಡಿಕೆ ಶಿವಕುಮಾರ್ ತೀಕ್ಷ್ಣವಾಗಿ ತಿರುಗೇಟು ನೀಡಿದ್ದಾರೆ. ಅಧ್ಯಕ್ಷರು ಸರಿಯಾಗಿ ಆಯ್ಕೆ ಮಾಡಿದ್ದರೆ ವಿಧಾನಸಭೆ ಚುನಾವಣೆಯಲ್ಲಿ ಇನ್ನೂ 12-13 ಸ್ಥಾನಗಳನ್ನು ಹೆಚ್ಚು ಗೆಲ್ಲಬಹುದಿತ್ತು ಎಂದು ಹೈಕಮಾಂಡ್​ಗೆ ಬರೆದ ಪತ್ರದಲ್ಲಿ ರಾಜಣ್ಣ ಉಲ್ಲೇಖಿಸಿದ್ದಾರಲ್ಲಾ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿ, ನನಗೆ ಇನ್ನೂ ಸ್ವಲ್ಪ ಅನುಭವ ಕಡಿಮೆ ಇದೆ. ತರಬೇತಿ ಪಡೆದುಕೊಂಡು ಬರುತ್ತೇನೆ ಎಂದರು. ರಾಜಣ್ಣರನ್ನು ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರನ್ನಾಗಿ ಮಾಡಿದ್ದು ಮಾಜಿ ಸಿಎಂ ಎಸ್ಎಂ ಕೃಷ್ಣ ಎಂಬ ಬಗ್ಗೆ ಪ್ರತಿಕ್ರಿಯಿಸಿ, ಬಹಳ ಸಂತೋಷ. ಕೃಷ್ಣ ಅವರು ಈಗ ಇಲ್ಲವಲ್ಲ, ದೇವರಲ್ಲಿ ಕೇಳಿಕೊಂಡು ಬರಬೇಕಷ್ಟೇ ಎಂದರು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Gold Rate Today Bangalore: ಬೆಳ್ಳಿ ಬೆಲೆ ಮತ್ತೆ ಹೊಸ ದಾಖಲೆ; ಚಿನ್ನವೂ ದುಬಾರಿ – Kannada News | Gold Price Today on 24th December 2025, Gold And Silver Rates In Bengaluru, Delhi, Mumbai | Latest News in Kannada

ಬೆಂಗಳೂರು, ಡಿಸೆಂಬರ್ 24: ಬೆಳ್ಳಿ ಬೆಲೆಯ ದಾಖಲೆ ಓಟ ಮುಂದುವರಿದಿದೆ. ಇಂದು ಬುಧವಾರ ಚಿನ್ನ ಮತ್ತು ಬೆಳ್ಳಿ, ಈ ಎರಡೂ ಲೋಹಗಳ ಬೆಲೆ ಹೆಚ್ಚಾಗಿದೆ. ಚಿನ್ನದ ಬೆಲೆ (Gold rate) ಗ್ರಾಮ್​ಗೆ 30 ರೂ ಸಾಧಾರಣ ಏರಿಕೆ ಕಂಡರೆ, ಬೆಳ್ಳಿ ಬೆಲೆ 10 ರೂ ಜಂಪ್ ಪಡೆದಿದೆ. ಚಿನ್ನಕ್ಕಿಂತಲೂ ಬೆಳ್ಳಿಗೆ ಬೇಡಿಕೆ ದಿನೇ ದಿನೇ ಹೆಚ್ಚಾಗುತ್ತಿದೆ. ಬೆಳ್ಳಿ ಬೆಲೆ ಮತ್ತೆ ಹೊಸ ದಾಖಲೆ ಪಡೆದಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,27,350 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,38,930 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 23,300 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,27,350 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 23,300 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 24,400 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಡಿಸೆಂಬರ್ 24ಕ್ಕೆ)

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,893 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 12,735 ರೂ
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 10,420 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 233 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,893 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 12,735 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 233 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 12,735 ರೂ
  • ಚೆನ್ನೈ: 12,800 ರೂ
  • ಮುಂಬೈ: 12,735 ರೂ
  • ದೆಹಲಿ: 12,750 ರೂ
  • ಕೋಲ್ಕತಾ: 12,735 ರೂ
  • ಕೇರಳ: 12,735 ರೂ
  • ಅಹ್ಮದಾಬಾದ್: 12,740 ರೂ
  • ಜೈಪುರ್: 12,750 ರೂ
  • ಲಕ್ನೋ: 12,750 ರೂ
  • ಭುವನೇಶ್ವರ್: 12,735 ರೂ

ಇದನ್ನೂ ಓದಿ: ಅಂತಿಮ ಡೆಡ್​ಲೈನ್; ಆಧಾರ್​ಗೆ ಲಿಂಕ್ ಆಗದ ಪ್ಯಾನ್ ಜನವರಿ 1ರಿಂದ ಡೆಡ್; ಹಣಕಾಸು ತೊಂದರೆಗಳೇನಾಗಬಹುದು?

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಮಲೇಷ್ಯಾ: 573 ರಿಂಗಿಟ್ (12,700 ರುಪಾಯಿ)
  • ದುಬೈ: 496.25 ಡಿರಾಮ್ (12,129 ರುಪಾಯಿ)
  • ಅಮೆರಿಕ: 138.50 ಡಾಲರ್ (12,433 ರುಪಾಯಿ)
  • ಸಿಂಗಾಪುರ: 179.90 ಸಿಂಗಾಪುರ್ ಡಾಲರ್ (12,590 ರುಪಾಯಿ)
  • ಕತಾರ್: 494 ಕತಾರಿ ರಿಯಾಲ್ (12,166 ರೂ)
  • ಸೌದಿ ಅರೇಬಿಯಾ: 504 ಸೌದಿ ರಿಯಾಲ್ (12,062 ರುಪಾಯಿ)
  • ಓಮನ್: 52.85 ಒಮಾನಿ ರಿಯಾಲ್ (12,323 ರುಪಾಯಿ)
  • ಕುವೇತ್: 40.64 ಕುವೇತಿ ದಿನಾರ್ (11,880 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 233 ರೂ
  • ಚೆನ್ನೈ: 244 ರೂ
  • ಮುಂಬೈ: 233 ರೂ
  • ದೆಹಲಿ: 233 ರೂ
  • ಕೋಲ್ಕತಾ: 233 ರೂ
  • ಕೇರಳ: 244 ರೂ
  • ಅಹ್ಮದಾಬಾದ್: 233 ರೂ
  • ಜೈಪುರ್: 233 ರೂ
  • ಲಕ್ನೋ: 233 ರೂ
  • ಭುವನೇಶ್ವರ್: 244 ರೂ
  • ಪುಣೆ: 233

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಸತತ 10 ವರ್ಷಗಳಿಂದ ಬಿರಿಯಾನಿಗೆ ಅಗ್ರಸ್ಥಾನ: ಸ್ವಿಗ್ಗಿಯಲ್ಲಿ 93 ಮಿಲಿಯನ್ ಬಿರಿಯಾನಿ ಆರ್ಡರ್ – Kannada News | India’s Favorite Food: Biryani Tops Swiggy Orders Again in 2025

2025 ಮುಗಿಯುತ್ತ ಬಂತು. 2026ನ್ನು ಸ್ವಾಗತಿಸಲು ಇನ್ನು 7 ದಿನ ಮಾತ್ರ ಬಾಕಿ ಇದೆ. ಇದಕ್ಕೂ ಮುನ್ನ ಭಾರತದಲ್ಲಿ 2025ರಲ್ಲಿ ಅತೀ ಹೆಚ್ಚು ಜನರು ಕೆಲವೊಂದು ವಿಷಯಗಳನ್ನು ಮೆಚ್ಚಿಕೊಂಡಿದ್ದಾರೆ. ಇನ್ನು ಕೆಲವೊಂದನ್ನು ತಿರಸ್ಕರಿಸಿದ್ದಾರೆ. 2025ರಲ್ಲಿ ಆಹಾರದ ವಿಷಯಕ್ಕೆ ಬಂದರೆ ಅತೀ ಹೆಚ್ಚು ಆರ್ಡರ್ ಮಾಡಿದ ಆಹಾರ ಯಾವುದು ಗೊತ್ತಾ? ಈ ಬಗ್ಗೆ ಸ್ವಿಗ್ಗಿ (Swiggy 2025 Report) ಒಂದು ವರದಿಯನ್ನು ನೀಡಿದೆ. ಈ ವರ್ಷ ಭಾರತೀಯರು ಸ್ವಿಗ್ಗಿ ಮೂಲಕ 93 ಮಿಲಿಯನ್ ಬಿರಿಯಾನಿಗಳನ್ನು ಆರ್ಡರ್ ಮಾಡಿದ್ದಾರೆ. ಹಾಗಾಗಿ ಆಹಾರ ವಿತರಣಾ ವೇದಿಕೆಯಲ್ಲಿ ಬಿರಿಯಾನಿ ಅತಿ ಹೆಚ್ಚು ಆರ್ಡರ್ ಮಾಡಲಾದ ವಸ್ತು ಎಂದು ಹೇಳಲಾಗಿದೆ. ಸ್ವಿಗ್ಗಿಯಲ್ಲಿ ಅತಿ ಹೆಚ್ಚು ಆರ್ಡರ್ ಮಾಡಲಾದ ಭಕ್ಷ್ಯಗಳ ಪಟ್ಟಿಯಲ್ಲಿ ಸತತ 10ನೇ ವರ್ಷ ಬಿರಿಯಾನಿ ಅಗ್ರಸ್ಥಾನದಲ್ಲಿದೆ.

ಸ್ವಿಗ್ಗಿಯ ವರ್ಷಾಂತ್ಯದ ವರದಿಯ ಪ್ರಕಾರ, “ಬಿರಿಯಾನಿ ಆಹಾರಗಳ ರಾಜ” ಎಂದು ಹೇಳಿದೆ. ಈ ಪರಿಮಳಯುಕ್ತ ಖಾದ್ಯವು ಇಂದಿಗೂ ತನ್ನ ರುಚಿ, ವಿಭಿನ್ನತೆಯಲ್ಲಿ ಹಿಡಿತವನ್ನು ಸಾಧಿಸಿಕೊಂಡಿದೆ ಎಂದು ಹೇಳಿದ್ದಾರೆ. ಭಾರತೀಯರು ಸ್ವಿಗ್ಗಿಯಲ್ಲಿ ಪ್ರತಿ 3.25 ಸೆಕೆಂಡ್‌ಗೆ ಒಂದು ಬಿರಿಯಾನಿ ಆರ್ಡರ್ ಮಾಡುತ್ತಿದ್ದರು . ಅಂದರೆ ಪ್ರತಿ ನಿಮಿಷಕ್ಕೆ 194 ಬಿರಿಯಾನಿಗಳು. ಇನ್ನು ಈ ಡೇಟಾವನ್ನು ಜೊಮಾಟೊದಂತಹ ಇತರ ಅಪ್ಲಿಕೇಶನ್‌ ಮತ್ತು ನೇರವಾಗಿ ರೆಸ್ಟೋರೆಂಟ್‌ಗಳಿಂದ ಮಾಡಿದ ಆರ್ಡರ್‌ಗಳನ್ನು ಗಣನೆಗೆ ತೆಗೆದುಕೊಂಡಿಲ್ಲ. ಸ್ವಿಗ್ಗಿ ವರದಿಯ ಪ್ರಕಾರ, 2025 ರಲ್ಲಿ 93 ಮಿಲಿಯನ್ ಬಿರಿಯಾನಿಗಳನ್ನು ಆರ್ಡರ್ ಮಾಡಲಾಗಿದೆ. ಚಿಕನ್ ಬಿರಿಯಾನಿ 57.7 ಮಿಲಿಯನ್ ಆರ್ಡರ್‌ ಮಾಡಲಾಗಿದ್ದು, ಇದನ್ನು ಅತ್ಯಂತ ಜನಪ್ರಿಯ ಬಿರಿಯಾನಿ ಎಂದು ಹೇಳಲಾಗಿದೆ. ಸ್ವಿಗ್ಗಿಯಲ್ಲಿ ಬಿರಿಯಾನಿ ಅತ್ಯಂತ ಜನಪ್ರಿಯ ಖಾದ್ಯವಾಗಿ ಒಂದು ದಶಕವನ್ನು ಪೂರ್ಣಗೊಳಿಸಿದೆ.

ಇದನ್ನೂ ಓದಿ: ಯಾವಾಗ ನೋಡಿದ್ರೂ ಪಿಜ್ಜಾ, ಬರ್ಗರ್ ತಿಂತಾನೇ ಇರ್ತೀರಾ? ಎಚ್ಚರ: ಇಲ್ಲೊಬ್ಬಳು ಬಾಲಕಿಗೆ ಏನಾಗಿದೆ ನೋಡಿ!

ಇನ್ನು ಬಿರಿಯಾನಿ ಜತೆಗೆ ಇತರ ಭಕ್ಷ್ಯಗಳು ಸಹ ಜನಪ್ರಿಯತೆಯಲ್ಲಿ ಏರಿಕೆ ಕಂಡಿದೆ. ಬರ್ಗರ್‌ 44.2 ಮಿಲಿಯನ್ ಆರ್ಡರ್‌ ಮಾಡುವ ಮೂಲಕ ಎರಡನೇ ಅತ್ಯಂತ ಜನಪ್ರಿಯ ಆಹಾರ ಎಂದು ಹೇಳಲಾಗಿದೆ. 2025 ರಲ್ಲಿ ಸ್ವಿಗ್ಗಿಯಲ್ಲಿ ಅತಿ ಹೆಚ್ಚು ಆರ್ಡರ್ ಮಾಡಲಾದ ಮೂರನೇ ಖಾದ್ಯ ಪಿಜ್ಜಾ ಆಗಿದ್ದು, 40.1 ಮಿಲಿಯನ್ ಆರ್ಡರ್‌ಗಳನ್ನು ಪಡೆದಿದೆ. ಸಸ್ಯಾಹಾರಿಯಲ್ಲಿ ದೋಸೆ 26.2 ಮಿಲಿಯನ್ ಆರ್ಡರ್‌ಗಳೊಂದಿಗೆ ಮತ್ತೊಂದು ನೆಚ್ಚಿನ ಖಾದ್ಯವಾಗಿದೆ. ಜನ ನಮ್ಮ ಕಂಪನಿಯನ್ನು ಮೆಚ್ಚಿಕೊಂಡಿದ್ದಾರೆ. ಜತೆಗೆ 2025ರಲ್ಲಿ ಇಷ್ಟೊಂದು ಆರ್ಡರ್​​ ಪಡೆಯುವ ಮೂಲಕ ಸ್ವಿಗ್ಗಿ ಆಹಾರ ವಿತರಣಾ ವೇದಿಕೆಯಲ್ಲಿ ದೊಡ್ಡ ಮಟ್ಟದ ಸಾಧನೆಯನ್ನು ಮಾಡಿದೆ ಎಂದು ಸ್ವಿಗ್ಗಿ ಮಾರ್ಕೆಟ್‌ಪ್ಲೇಸ್‌ನ ಸಿಇಒ ರೋಹಿತ್ ಕಪೂರ್ ಹೇಳಿದ್ದಾರೆ.

ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 2:11 pm, Wed, 24 December 25

Source link

14 ಸಿಕ್ಸ್, 7 ಫೋರ್: 33 ಎಸೆತಗಳಲ್ಲಿ ಮೂರಂಕಿ ಮೊತ್ತಗಳಿಸಿದ ಇಶಾನ್ ಕಿಶನ್ – Kannada News | Ishan Kishan smashes 33 ball hundred in Vijay Hazare

ದೇಶೀಯ ಟೂರ್ನಿಯಲ್ಲಿ ಇಶಾನ್ ಕಿಶನ್ (Ishan Kishan) ಸಿಡಿಲಬ್ಬರ ಮುಂದುವರೆದಿದೆ. ಇತ್ತೀಚೆಗಷ್ಟೇ ಸೈಯ್ಯದ್ ಮುಷ್ತಾಕ್ ಅಲಿ ಟೂರ್ನಿಯ ಫೈನಲ್ ಪಂದ್ಯದಲ್ಲಿ ಸೆಂಚುರಿ ಸಿಡಿಸಿದ್ದ ಇಶಾನ್ ಇದೀಗ ವಿಜಯ ಹಝಾರೆ ಟೂರ್ನಿಯ ಮೊದಲ ಪಂದ್ಯದಲ್ಲೇ ಸ್ಫೋಟಕ ಶತಕ ಬಾರಿಸಿದ್ದಾರೆ.

Source link

ಸಕಿಬುಲ್ ಸಿಡಿಲಬ್ಬರದ ಸೆಂಚುರಿ: ಏಕದಿನ ಪಂದ್ಯಲ್ಲಿ ಗರಿಷ್ಠ ಸ್ಕೋರ್ ವಿಶ್ವ ದಾಖಲೆ – Kannada News | Sakibul Gani Creates New Record in VHT

ರಾಂಚಿಯ ಜೆಎಸ್​ಸಿಎ ಸ್ಟೇಡಿಯಂನಲ್ಲಿ ನಡೆಯುತ್ತಿರುವ ವಿಜಯ ಹಝಾರೆ ಟೂರ್ನಿಯ ಪ್ಲೇಟ್ ಪಂದ್ಯದಲ್ಲಿ ಬಿಹಾರ ತಂಡವು ಬರೋಬ್ಬರಿ 574 ರನ್​ಗಳನ್ನು ಕಲೆಹಾಕಿದೆ. ಅರುಣಾಚಲ ವಿರುದ್ಧದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಬಿಹಾರ ಪರ ಆರಂಭಿಕನಾಗಿ ಕಣಕ್ಕಿಳಿದ ವೈಭವ್ ಸೂರ್ಯವಂಶಿ ಕೇವಲ 84 ಎಸೆತಗಳಲ್ಲಿ 15 ಸಿಕ್ಸ್ ಹಾಗೂ 16 ಫೋರ್​ಗಳೊಂದಿಗೆ ಬರೋಬ್ಬರಿ 190 ರನ್ ಕಲೆಹಾಕಿದರು.

ಈ ಭರ್ಜರಿ ಶತಕದೊಂದಿಗೆ ವಿಸ್ಫೋಟಕ ಆರಂಭ ಪಡೆದ ಬಿಹಾರ ಪರ ಅಂತಿಮ ಹಂತದಲ್ಲಿ ನಾಯಕ ಸಕಿಬುಲ್ ಗನಿ ಅಬ್ಬರಿಸಿದರು. ಅಂತಿಮ 10 ಓವರ್​ಗಳ ವೇಳೆ ಆರ್ಭಟಿಸಿದ ಸಕಿಬುಲ್ ಗನಿ ಕೇವಲ 32 ಎಸೆತಗಳಲ್ಲಿ ಸೆಂಚುರಿ ಪೂರೈಸಿದರು. ಈ ಮೂಲಕ ಲಿಸ್ಟ್ ಎ ಕ್ರಿಕೆಟ್​ನಲ್ಲಿ ಭಾರತದ ಪರ ಅತೀ ಕಡಿಮೆ ಎಸೆತಗಳಲ್ಲಿ ಸೆಂಚುರಿ ಸಿಡಿಸಿದ ದಾಖಲೆ ನಿರ್ಮಿಸಿದರು.

ಸಕಿಬುಲ್ ಗನಿ ಭರ್ಜರಿ ದಾಖಲೆ:

ಕೇವಲ 32 ಎಸೆತಗಳಲ್ಲಿ ಸೆಂಚುರಿ ಚಚ್ಚುವ ಮೂಲಕ ಏಕದಿನ ಪಂದ್ಯದಲ್ಲಿ ಅತೀ ವೇಗವಾಗಿ ಸೆಂಚುರಿ ಸಿಡಿಸಿದ ಭಾರತೀಯ ಬ್ಯಾಟರ್ ಎನಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಈ ದಾಖಲೆ ಅನ್​ಮೋಲ್ ಪ್ರೀತ್ ಸಿಂಗ್ ಹೆಸರಿನಲ್ಲಿತ್ತು. 2024 ರಲ್ಲಿ ಪಂಜಾಬ್ ಬ್ಯಾಟರ್ ವಿಜಯ ಹಝಾರೆ ಟೂರ್ನಿಯಲ್ಲಿ ಕೇವಲ 35 ಎಸೆತಗಳಲ್ಲಿ ಸೆಂಚುರಿ ಸಿಡಿಸಿದ್ದರು. ಈ ಮೂಲಕ ಏಕದಿನ ಕ್ರಿಕೆಟ್​ನಲ್ಲಿ ಅತೀ ವೇಗದ ಸೆಂಚುರಿ ಸಿಡಿಸಿದ ಭಾರತೀಯ ಬ್ಯಾಟರ್ ಎಂಬ ದಾಖಲೆ ನಿರ್ಮಿಸಿದ್ದರು.

ಇದೀಗ ಬಿಹಾರ ತಂಡದ ನಾಯಕ ಸಕಿಬುಲ್ ಗನಿ ಕೇವಲ 32 ಎಸೆತಗಳಲ್ಲಿ ಶತಕ ಬಾರಿಸಿ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಈ ಮೂಲಕ ಏಕದಿನ ಪಂದ್ಯದಲ್ಲಿ ಅತೀ ಕಡಿಮೆ ಎಸೆತಗಳಲ್ಲಿ ಸೆಂಚುರಿ ಸಿಡಿಸಿದ ಭಾರತೀಯ ಬ್ಯಾಟರ್ ಎನಿಸಿಕೊಂಡಿದ್ದಾರೆ.

ಬರೋಬ್ಬರಿ 574 ರನ್​ಗಳು:

ಸಕಿಬುಲ್ ಗನಿ ಹಾಗೂ ವೈಭವ್ ಸೂರ್ಯವಂಶಿ ಬಾರಿಸಿದ ವಿಸ್ಫೋಟಕ ಸೆಂಚುರಿಗಳ ನೆರವಿನೊಂದಿಗೆ ಬಿಹಾರ ತಂಡವು 50 ಓವರ್​ಗಳಲ್ಲಿ 6 ವಿಕೆಟ್ ಕಳೆದುಕೊಂಡು 574 ರನ್​ ಕಲೆಹಾಕಿದೆ. ಈ ಮೂಲಕ ಬಿಹಾರ ತಂಡವು ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಗರಿಷ್ಠ ಮೊತ್ತಗಳಿಸಿದ ವಿಶ್ವ ದಾಖಲೆ ದಾಖಲೆ ನಿರ್ಮಿಸಿದೆ.

ಅರುಣಾಚಲ ಪ್ರದೇಶ್ (ಪ್ಲೇಯಿಂಗ್ XI): ಕಮ್ಶಾ ಯಾಂಗ್ಫೋ (ನಾಯಕ), ಸೂರ್ಯಾಂಶ್ ಸಿಂಗ್, ಟೆಚಿ ನೇರಿ, ತಡಕಮಲ್ಲ ಮೋಹಿತ್, ನೀಲಂ ಓಬಿ, ನಬಮ್ ಟೆಂಪೋಲ್, ಆದಿತ್ಯ ವರ್ಮಾ, ಧೀರಜ್ ಆಂಟಿನ್, ಟೆಚಿ ಸಾನಿಯಾ, ಮಿಬೊಮ್ ಮೊಸು, ಟೆಚಿ ಡೋರಿಯಾ.

ಇದನ್ನೂ ಓದಿ: ಬರೋಬ್ಬರಿ 15 ಸಿಕ್ಸ್… ವಿಶ್ವ ದಾಖಲೆಯ ಶತಕ ಸಿಡಿಸಿದ ವೈಭವ್ ಸೂರ್ಯವಂಶಿ

ಬಿಹಾರ (ಪ್ಲೇಯಿಂಗ್ XI): ವೈಭವ್ ಸೂರ್ಯವಂಶಿ, ಸಕಿಬುಲ್ ಗನಿ (ನಾಯಕ), ಆಯುಷ್ ಲೋಹರುಕಾ (ವಿಕೆಟ್ ಕೀಪರ್), ಮಂಗಲ್ ಮಹರೂರ್, ಪಿಯೂಷ್ ಸಿಂಗ್, ಆಕಾಶ್ ರಾಜ್, ಬಿಪಿನ್ ಸೌರಭ್, ಸೂರಜ್ ಕಶ್ಯಪ್, ಹಿಮಾಂಶು ತಿವಾರಿ, ಸಬೀರ್ ಖಾನ್, ಬಾದಲ್ ಕನೌಜಿಯಾ.

Source link

Yearly Horoscope 2026: 2026 ತುಲಾ ರಾಶಿಗೆ ವೃತ್ತಿ ಮತ್ತು ಆರ್ಥಿಕ ಕ್ಷೇತ್ರದಲ್ಲಿ ಶುಭ ಫಲದ ವರ್ಷ – Kannada News | Libra Yearly Horoscope 2026: Astrological Predictions by Dr. Basavaraj Guruji

2026ರ ತುಲಾ ರಾಶಿಯ ವರ್ಷ ಭವಿಷ್ಯವನ್ನು ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿಯವರು ವಿಶ್ಲೇಷಿಸಿದ್ದಾರೆ. ಈ ರಾಶಿಯಲ್ಲಿ ಚಿತ್ತಾ ನಕ್ಷತ್ರದ 3 ಮತ್ತು 4ನೇ ಪಾದ, ಸ್ವಾತಿ ನಕ್ಷತ್ರದ 4ನೇ ಪಾದ, ವಿಶಾಖ ನಕ್ಷತ್ರದ 1, 2, ಮತ್ತು 3ನೇ ಪಾದಗಳು ಸೇರಿವೆ. ಜೂನ್ 2ರ ವರೆಗೆ ಗುರುಬಲ ಇದ್ದು, ನಂತರ ಗುರು ಭಾಗ್ಯ ಸ್ಥಾನದಿಂದ ಕರ್ಮ ಸ್ಥಾನಕ್ಕೆ (9ರಿಂದ 10ನೇ ಮನೆಗೆ) ಸಂಚಾರ ಮಾಡಲಿದೆ. ಶನಿ ಗ್ರಹ 6ನೇ ಮನೆಯಲ್ಲಿ, ರಾಹು 5ರಿಂದ 4ಕ್ಕೆ, ಕೇತು 11ರಿಂದ 10ಕ್ಕೆ ಸಂಚರಿಸಲಿವೆ.

ವೃತ್ತಿ ಮತ್ತು ಆರ್ಥಿಕ ಕ್ಷೇತ್ರಗಳಲ್ಲಿ ಶುಭ ಫಲಗಳು ಹೆಚ್ಚಾಗಲಿದ್ದು, ಕಲಾವಿದರು, ಸಾಹಿತಿಗಳು, ಪತ್ರಕರ್ತರು, ಸಿನಿಮಾ ನಟರು, ಶಿಕ್ಷಕರು, ಸರ್ಕಾರಿ ಮತ್ತು ಖಾಸಗಿ ನೌಕರರಿಗೆ ಪ್ರಗತಿ ನಿರೀಕ್ಷಿಸಲಾಗಿದೆ. ಮನೆ ಕಟ್ಟುವ, ಸೈಟ್ ವಿವಾದ ಬಗೆಹರಿಯುವ ಯೋಗವಿದೆ. ಉನ್ನತ ಶಿಕ್ಷಣ, ದೂರದ ಪ್ರಯಾಣ ಹಾಗೂ ಉತ್ತಮ ಜನಸಂಪರ್ಕ ಸಾಧ್ಯ. ಮಹಿಳೆಯರಿಗೆ ಹಣದ ಹರಿವು ಹೆಚ್ಚಾಗಿ, ತಂದೆ-ತಾಯಿಗಳ ಬೆಂಬಲ ಮತ್ತು ಪತಿ/ಸ್ವಂತ ಉದ್ಯೋಗದಲ್ಲಿ ಬಡ್ತಿ ಯೋಗವಿದೆ.

ಹಣಕಾಸಿನ ಹೂಡಿಕೆ ವಿಚಾರದಲ್ಲಿ ಜಾಗ್ರತೆ ಅಗತ್ಯ. ದುಶ್ಚಟಗಳಿಂದ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು. ಆತುರದ ನಿರ್ಧಾರಗಳು, ಕೋಪತಾಪಗಳಿಂದ ದೂರವಿರಿ. ವಾಹನ ಚಾಲನೆಯಲ್ಲಿ ಎರಡನೇ ಅರ್ಧಭಾಗದಲ್ಲಿ ಎಚ್ಚರಿಕೆ ವಹಿಸಬೇಕು. ದುಂದುವೆಚ್ಚ, ಶೇರ್ ಮಾರ್ಕೆಟ್‌ನಲ್ಲಿನ ಅತಿಯಾದ ಹೂಡಿಕೆಗಳಿಂದ ದೂರವಿರಲು ಸೂಚಿಸಲಾಗಿದೆ. ಮಕ್ಕಳ ಕಡೆಗೆ ಹೆಚ್ಚು ಗಮನ ನೀಡಬೇಕು. ದೇವಿ ಆರಾಧನೆ, ಗೋ ಸೇವೆ ಹಾಗೂ ಅನಾಥರಿಗೆ ಸಹಾಯ ಮಾಡುವುದು ಉತ್ತಮ ಪರಿಹಾರೋಪಾಯಗಳಾಗಿವೆ. ಗುಲಾಬಿ, ಕಪ್ಪು ಬಣ್ಣಗಳು, 6 ಮತ್ತು 2 ಅದೃಷ್ಟ ಸಂಖ್ಯೆಗಳು, ಪೂರ್ವ ಮತ್ತು ದಕ್ಷಿಣ ದಿಕ್ಕು ಪ್ರಯಾಣಕ್ಕೆ ಶುಭ. ಲಕ್ಷ್ಮೀನಾರಸಿಂಹ ಮಂತ್ರ ಕೇಳುವುದು ಮತ್ತು ದರ್ಶನ ಮಾಡುವುದು ಶುಭ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link