Daily Devotional: ಯಾರು ಬೇಕಾದರೂ ಸನ್ಯಾಸಿ ಆಗಬಹುದಾ?
ಟಿವಿ9 ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ಯಾರು ಬೇಕಾದರೂ ಸನ್ಯಾಸಿ ಆಗಬಹುದಾ ಎಂದು ಡಾ.ಬಸವರಾಜ ಗುರೂಜಿ ವಿವರಿಸಿದ್ದಾರೆ. ಹಿಂದೂ ಸನಾತನ ಸಂಸ್ಕೃತಿಯಲ್ಲಿ ಸನ್ಯಾಸಿಯಾಗಲು ನಿರ್ದಿಷ್ಟ ವಿಧಿ ವಿಧಾನಗಳು ಮತ್ತು ಕಟ್ಟುಪಾಡುಗಳಿವೆ. ಸನ್ಯಾಸತ್ವವು ಕೇವಲ ಮಠಗಳಿಗೆ ಸೀಮಿತವಲ್ಲ. ಸನ್ಯಾಸಿಯಾಗಲು ಬಯಸುವ ವ್ಯಕ್ತಿಯು ಅರಿಷಡ್ವರ್ಗಗಳಾದ ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರಗಳನ್ನು ಜಯಿಸಿರಬೇಕು. ಒಬ್ಬ ಸನ್ಯಾಸಿಯು ಕುಟುಂಬ ಸಂಬಂಧಗಳಿಂದ ಮುಕ್ತನಾಗಿರಬೇಕು, ಸುಖ-ದುಃಖಗಳನ್ನು ಸಮತೋಲನದಲ್ಲಿ ಸ್ವೀಕರಿಸುವ ಸಮದೃಷ್ಟಿಯುಳ್ಳವನಾಗಿರಬೇಕು. ಆಹಾರದ ವ್ಯಾಮೋಹವಿಲ್ಲದೆ, ಸಿಕ್ಕಿದ್ದನ್ನು ಪ್ರಸಾದ ರೂಪದಲ್ಲಿ ಸ್ವೀಕರಿಸಬೇಕು. ಚಳಿ, ಮಳೆ, ಬಿಸಿಲಿಗೆ ಆತಂಕ…