ದಾಖಲೆ ಬರೆದ ಬೆಂಗಳೂರಿನ ಕೋರಮಂಗಲ ಆರ್ಟಿಓ ಕಚೇರಿ: ರಾಜ್ಯದಲ್ಲಿ ನಂ 1, ದೇಶದಲ್ಲಿ 3ನೇ ಸ್ಥಾನ
ಬೆಂಗಳೂರು, ಏಪ್ರಿಲ್ 03: ಸದಾ ಒಂದಿಲ್ಲೊಂದು ನೆಗೆಟಿವ್ ಸುದ್ದಿಯಲ್ಲಿರುವ ಬೆಂಗಳೂರಿನ ಸೆಂಟ್ರಲ್ ಆರ್ಟಿಓ (Koramangala RTO) ಕಚೇರಿ ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದೆ. ಆದರೆ ಈ ಬಾರಿ ಯಾವುದೇ ನೆಗೆಟಿವ್ ವಿಚಾರವಾಗಿ ಅಲ್ಲದೇ ಹೊಸ ದಾಖಲೆಯೊಂದನ್ನು ಬರೆದಿದೆ. ದೇಶದಲ್ಲೇ ಅತೀ ಹೆಚ್ಚು ಆದಾಯ ಗಳಿಸಿದ 3ನೇ ಅತಿದೊಡ್ಡ ಆರ್ಟಿಓ ಕಚೇರಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಒಂದಿಲ್ಲೊಂದು ಅಕ್ರಮ, ಹಗರಣ ಆರೋಪದಲ್ಲಿ ಸುದ್ದಿಯಾಗುವ ಬೆಂಗಳೂರಿನ ಸೆಂಟ್ರಲ್ ಕೋರಮಂಗಲ ಆರ್ಟಿಓ ಇದೀಗ ದೇಶದಲ್ಲೇ ಹೊಸ ದಾಖಲೆಯೊಂದನ್ನು ಬರೆದಿದ್ದು, ಈ ಬಾರಿ KA-01…