ಶರಣ್ಯ ನಾಪತ್ತೆ ಕೇಸ್: 24ಗಂಟೆ ಕಳೆದರೂ ಸಿಗದ ಸುಳಿವು; ಹರಕೆ ಹೊತ್ತ ಕುಡಿಯ ಜನಾಂಗ
ಕೊಡಗು, ಏಪ್ರಿಲ್ 03: ಚಾರಣಕ್ಕೆ ತೆರಳಿದ್ದ ಯುವತಿ ಶರಣ್ಯ (35) ನಾಪತ್ತೆ ಪ್ರಕರಣಕ್ಕೆ (Missing Case) ಸಂಬಂಧಿಸಿದಂತೆ 24 ಗಂಟೆ ಕಳೆದರು ಇನ್ನೂ ಪತ್ತೆಯಾಗಿಲ್ಲ. ಪೊಲೀಸ್ ಶ್ವಾನಕ್ಕೂ ಯಾವುದೇ ಸುಳಿವು ಸಿಕ್ಕಿಲ್ಲ. ಅರಣ್ಯ ಇಲಾಖೆಯ 60ಕ್ಕೂ ಅಧಿಕ ಸಿಬ್ಬಂದಿ ಸೇರಿದಂತೆ ಪೊಲೀಸರು ತಡಿಯಂಡ ಬೆಟ್ಟ ಪ್ರದೇಶದಲ್ಲಿ ವ್ಯಾಪಕ ಶೋಧ ನಡೆಸಿದ್ದಾರೆ. ದಾರಿ ತಪ್ಪುವಂತಹ ಮಾರ್ಗವಲ್ಲ ಎಂದು ಸ್ಥಳೀಯರು ಹೇಳುತ್ತಿದ್ದಾರೆ. ಸದ್ಯ ಪ್ರಕರಣ ಅರಣ್ಯ ಇಲಾಖೆ ಮತ್ತು ಪೊಲೀಸರಿಗೆ ತಲೆನೋವಾಗಿದೆ. ಕೇರಳದ ಕೋಯಿಕ್ಕೋಡ್ ನಿವಾಸಿ ಶರಣ್ಯ ನಿನ್ನೆ ಕೊಡಗು…