Category Archives: Blog

Your blog category

ಸಿಎಂ ಕುರ್ಚಿ ಕದನ: ಡಿಕೆಶಿ ಹಿಂದೆನೇ ದೆಹಲಿಗೆ ತೆರಳಿದ ಸ್ವಾಮೀಜಿ ಹೇಳಿದ್ದಿಷ್ಟು – Kannada News | Don’t We Have the Right to Express Our Opinion on Who Should Be CM: Pranavananda Swamiji

ದೆಹಲಿ, ಡಿಸೆಂಬರ್​​ 23: ವೋಟ್‌ಗೆ ನಾವು ಬೇಕು, ಸಿಎಂ ಯಾರಾಗಬೇಕು ಎನ್ನುವ ಅಭಿಪ್ರಾಯ ಹೇಳಬಾರ್ದಾ? ರಾಜಕೀಯ ವಿಷಯಗಳಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಭಾರತದ ಸಂವಿಧಾನ ಸ್ವಾಮೀಜಿಗಳಿಗೆ ಹಕ್ಕು ನೀಡಿದೆ ಎಂದು ಪ್ರಣವಾನಂದ ಸ್ವಾಮೀಜಿ ಹೇಳಿದ್ದಾರೆ. ದೆಹಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸ್ವಾಮೀಜಿ, ಡಿ.ಕೆ. ಶಿವಕುಮಾರ್ ಭಾರತೀಯ ಸಂಸ್ಕೃತಿಯನ್ನು ಮೈಗೂಡಿಸಿಕೊಂಡ ರಾಜಕಾರಣಿ. ಹೈಕಮಾಂಡ್ ನಾಯಕರನ್ನ ಭೇಟಿ ಮಾಡಿ ಡಿಕೆ ಶಿವಕುಮಾರ್​ರನ್ನು ಸಿಎಂ ಮಾಡುವಂತೆ ಒತ್ತಾಯಿಸಲಾಗುವುದು ಎಂದಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

ತೀವ್ರಗೊಂಡ ಕುರ್ಚಿ ಕಿತ್ತಾಟ: ಡಿಕೆಶಿ ದಿಲ್ಲಿಗೆ ಹೋಗುತ್ತಿದ್ದಂತೆಯೇ ಇತ್ತ ಅಹಿಂದ ಸಮಾವೇಶಕ್ಕೆ ಸಿದ್ಧತೆ – Kannada News | Power Tussle In Karnataka Congress: CM Siddaramaiah supporters plan Ahinda meet in Mysuru

ಮೈಸೂರು, (ಡಿಸೆಂಬರ್ 23): ಹೈಕಮಾಂಡ್.. ಹೈಕಮಾಂಡ್.. ಹೈಕಮಾಂಡ್.. ನಾಯಕತ್ವ ಬದಲಾವಣೆ ವಿಚಾರವಾಗಿ ರಾಜ್ಯ ಕಾಂಗ್ರೆಸ್ (Congress)​​ ನಾಯಕರಲ್ಲಿ ಯಾರನ್ನೇ ಕೇಳಿದರೂ ಸಹ ಎಲ್ಲರ ಬೆರಳು ನೇರವಾಗಿ ಹೈಕಮಾಂಡ್ ಕಡೆಗೆ ತಿರುಗುತ್ತೆ. ಆದ್ರೆ ಗೊಂದಲ ಬಗೆಹರಿಸಿಬೇಕಿದ್ದ ಹೈಕಮಾಂಡ್​ನ ಭಾಗವಾಗಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಗೊಂದಲ ಸೃಷ್ಟಿ ಮಾಡಿದ್ದು ಹೈಕಮಾಂಡ್ ಅಲ್ಲ.ಇಲ್ಲಿ ಲೋಕಲ್ ಆಗಿ ಏನ್ ಆಗಿದೆಯೋ ಇಲ್ಲೇ ಸೆಟಲ್ ಮಾಡಿಕೊಳ್ಳಿ ಎಂದಿದ್ದಾರೆ. ಇದರಿಂದ ಸಿದ್ದರಾಮಯ್ಯ (Siddaramaiah), ಡಿಕೆ ಶಿವಕುಮಾರ್ (DK Shivakumar) ಬಣಗಳಲ್ಲಿ ಗೊಂದಲ ಸೃಷ್ಟಿಸಿದೆ. ಹೇಗಾದರೂ ಮಾಡಿ ಸಿಎಂ ಆಗಲೇಬೇಕೆಂದು ಹಠಕ್ಕೆ ಬಿದ್ದಿರುವ ಡಿಸಿಎಂ ಡಿಕೆ ಶಿವಕುಮಾರ್ ಇಂದು (ಡಿಸೆಂಬರ್ 23) ದೆಹಲಿ ತೆರಳಿದ್ದು, ಅಲ್ಲಿ ಹೈಕಮಾಂಡ್ ನಾಯಕರನ್ನು ಭೇಟಿ ಮಾಡುವ ಸಾಧ್ಯತೆಗಳಿವೆ. ಆದ್ರೆ, ಇತ್ತ ಸಿದ್ದರಾಮಯ್ಯನವರ ಶಕ್ತಿ ಪ್ರದರ್ಶಿಸಲು ಅಹಿಂದ ಸಮಾವೇಶಕ್ಕೆ ಸಿದ್ಧತೆಗಳು ನಡೆದಿವೆ.

ಇದನ್ನೂ ನೋಡಿ: ಸಿಎಂ ಕುರ್ಚಿ ಕಿತ್ತಾಟ ತಾರಕಕ್ಕೆ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ

ಹೌದು..ಡಿಸಿಎಂ ಡಿಕೆ ಶಿವಕುಮಾರ್ ಸಿಎಂ ಆಗಲೇಬೇಕೆಂದು ಹಠಕ್ಕೆ ಬಿದ್ದಿದ್ದರಿಂದ ಇತ್ತ ಸಿದ್ದರಾಮಯ್ಯ ಪರವಾಗಿ ಅಹಿಂದ ಸಮಾವೇಶ ಮಾಡಲು ಸಿದ್ಧತೆಗಳು ನಡೆದಿವೆ. ಸಿದ್ದರಾಮಯ್ಯ ತವರು ಜಿಲ್ಲೆ ಮೈಸೂರಿನಲ್ಲಿ ಅಹಿಂದ ಸಮಾವೇಶ ಮಾಡಲು ತೀರ್ಮಾನಿಸಲಾಗಿದ್ದು, ಈ ಸಂಬಂಧ ಚರ್ಚಿಸಲು ನಾಳೆ (ಡಿಸೆಂಬರ್ 23) ಬೆಳಗ್ಗೆ 11.30ಕ್ಕೆ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆ ಪೂರ್ವಭಾವಿ ಸಭೆ ಕರೆದಿದೆ. ಹೀಗಾಗಿ ರಾಜ್ಯ ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ್ದು, ಸಮಾವೇಶ ಯಾವಾಗ ನಡೆಸಬೇಕೆನ್ನುವುದನ್ನು ನಾಳಿನ ಸಭೆಯಲ್ಲಿ ತೀರ್ಮಾನವಾಗಲಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಭಾರತ ಬಾಂಗ್ಲಾದೇಶದ ತಂಟೆಗೆ ಹೋದರೆ ನಾವು ಉತ್ತರ ನೀಡುತ್ತೇವೆ; ಪಾಕ್​​ನಿಂದ ಯುದ್ಧದ ಬೆದರಿಕೆ – Kannada News | If India dares to attack Bangladesh Pakistan leader Kamran Saeed Usmanis war threat

ನವದೆಹಲಿ, ಡಿಸೆಂಬರ್ 23: ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರ ಪಕ್ಷವಾದ ಪಾಕಿಸ್ತಾನ ಮುಸ್ಲಿಂ ಲೀಗ್ (ಪಿಎಂಎಲ್)ನ ಯುವ ವಿಭಾಗದ ನಾಯಕ ಕಮ್ರಾನ್ ಸಯೀದ್ ಉಸ್ಮಾನಿ ಇಂದು ಭಾರತಕ್ಕೆ ಬೆದರಿಕೆ ಹಾಕಿದ್ದು, ಬಾಂಗ್ಲಾದೇಶದ ಮೇಲೆ ಭಾರತದಿಂದ ಯಾವುದೇ ದಾಳಿ ನಡೆದರೆ ಪಾಕಿಸ್ತಾನದ ಸೈನ್ಯ ಮತ್ತು ಕ್ಷಿಪಣಿಗಳು ಅದಕ್ಕೆ ಪ್ರತಿಕ್ರಿಯಿಸುತ್ತವೆ ಎಂದು ಹೇಳಿದ್ದಾರೆ. ಅಲ್ಲದೆ, ಅವರು ಪಾಕಿಸ್ತಾನ (Pakistan) ಮತ್ತು ಬಾಂಗ್ಲಾದೇಶದ ನಡುವೆ ಮಿಲಿಟರಿ ಮೈತ್ರಿಗೆ ಕರೆ ನೀಡಿದ್ದಾರೆ.

ಈ ಬಗ್ಗೆ ವಿಡಿಯೋ ಹೇಳಿಕೆ ನೀಡಿರುವ ಪಾಕಿಸ್ತಾನದ ನಾಯಕ ಕಮ್ರಾನ್ ಸಯೀದ್ ಉಸ್ಮಾನಿ, ಬಾಂಗ್ಲಾದೇಶವನ್ನು ಭಾರತದ ಸೈದ್ಧಾಂತಿಕ ಪ್ರಾಬಲ್ಯಕ್ಕೆ ತಳ್ಳುವುದನ್ನು ಪಾಕಿಸ್ತಾನ ಒಪ್ಪುವುದಿಲ್ಲ. ಒಂದುವೇಳೆ ಭಾರತ ಬಾಂಗ್ಲಾದೇಶದ ಮೇಲೆ ದಾಳಿ ಮಾಡಿದರೆ ಅಥವಾ ಅದರ ಸ್ವಾಯತ್ತತೆಯ ಮೇಲೆ ದುಷ್ಟ ದೃಷ್ಟಿ ಬೀರಿದರೆ, ಪಾಕಿಸ್ತಾನ ಅದಕ್ಕೆ ಬಲವಾಗಿ ಪ್ರತಿಕ್ರಿಯಿಸುತ್ತದೆ ಎಂದು ಎಚ್ಚರಿಸಿದ್ದಾರೆ.

ಇದನ್ನೂ ಓದಿ: ಸ್ವಾತಂತ್ರ್ಯದ ಬಳಿಕ ಇದೇ ಮೊದಲ ಬಾರಿಗೆ ಪಾಕಿಸ್ತಾನದ ವಿಶ್ವವಿದ್ಯಾಲಯದಲ್ಲಿ ಸಂಸ್ಕೃತ ಕೋರ್ಸ್​!

“ಭಾರತವು ಬಾಂಗ್ಲಾದೇಶದ ಸ್ವಾಯತ್ತತೆಯ ಮೇಲೆ ದಾಳಿ ಮಾಡಿದರೆ, ಯಾರಾದರೂ ಬಾಂಗ್ಲಾದೇಶವನ್ನು ಕೆಟ್ಟ ಉದ್ದೇಶದಿಂದ ನೋಡಲು ಧೈರ್ಯ ಮಾಡಿದರೆ ಪಾಕಿಸ್ತಾನದ ಜನರು, ಪಾಕಿಸ್ತಾನಿ ಸಶಸ್ತ್ರ ಪಡೆಗಳು ಮತ್ತು ನಮ್ಮ ಕ್ಷಿಪಣಿಗಳು ಸುಮ್ಮನಿರುವುದಿಲ್ಲ, ನಾವು ಬಾಂಗ್ಲಾದೇಶದ ಸಹಾಯಕ್ಕೆ ರೆಡಿ ಇರುತ್ತೇವೆ ಎಂಬುದನ್ನು ನೆನಪಿಡಿ” ಎಂದು ಅವರು ಹೇಳಿದ್ದಾರೆ.

ಮತ್ತೊಂದು ವಿಡಿಯೋದಲ್ಲಿ, ಉಸ್ಮಾನಿ ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ನಡುವೆ ಔಪಚಾರಿಕ ಮಿಲಿಟರಿ ಮೈತ್ರಿಗೆ ಕರೆ ನೀಡುವ ಮೂಲಕ ಪಾಕಿಸ್ತಾನದ ಜೊತೆ ಕೈಜೋಡಿಸಲು ಬಾಂಗ್ಲಾದೇಶವನ್ನು ಆಹ್ವಾನಿಸಿದ್ದಾರೆ. ಭಾರತದ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಬಾಂಗ್ಲಾದೇಶಕ್ಕೆ ಕಾಟ ನೀಡುತ್ತಿದೆ ಎಂದು ಅವರು ಆರೋಪಿಸಿದ್ದಾರೆ. ಹಿಂದೂ ರಾಷ್ಟ್ರವನ್ನು ಸ್ಥಾಪಿಸಲು ಭಾರತವು ಅಖಂಡ ಭಾರತ ಸಿದ್ಧಾಂತದ ಅಡಿಯಲ್ಲಿ ಬಾಂಗ್ಲಾದೇಶವನ್ನು ಕೆಡವಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ: ಅಮೆರಿಕದಿಂದ ಪಾಕಿಸ್ತಾನಕ್ಕೆ ಮಿಲಿಟರಿ ಪ್ಯಾಕೇಜ್; ಪಾಕ್ ಅಂದ್ರೆ ಅಮೆರಿಕ, ಚೀನಾಗೆ ಯಾಕೆ ಪ್ರೀತಿ?

“ನಮ್ಮ ಪ್ರಸ್ತಾಪವೆಂದರೆ ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಮಿಲಿಟರಿ ಮೈತ್ರಿಯನ್ನು ರಚಿಸಬೇಕು. ಪಾಕಿಸ್ತಾನ ಬಾಂಗ್ಲಾದೇಶದಲ್ಲಿ ಮಿಲಿಟರಿ ನೆಲೆಯನ್ನು ಸ್ಥಾಪಿಸಬೇಕು ಮತ್ತು ಬಾಂಗ್ಲಾದೇಶ ಪಾಕಿಸ್ತಾನದಲ್ಲಿ ಮಿಲಿಟರಿ ನೆಲೆಯನ್ನು ಸ್ಥಾಪಿಸಬೇಕು. ಪಾಕಿಸ್ತಾನ-ಬಾಂಗ್ಲಾದೇಶ ಮಿಲಿಟರಿ ಪಾಲುದಾರಿಕೆಯು ಪ್ರಾದೇಶಿಕ ಶಕ್ತಿಯ ಚಲನಶೀಲತೆಯನ್ನು ಬದಲಾಯಿಸುತ್ತದೆ ಮತ್ತು ಜಾಗತಿಕವಾಗಿ ಎರಡೂ ದೇಶಗಳು ತಮ್ಮ ಶಕ್ತಿಯನ್ನು ಇನ್ನಷ್ಟು ಹೆಚ್ಚಿಸಿಕೊಳ್ಳಲು ಸಹಾಯವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಆದರೆ, ಬಾಂಗ್ಲಾದೇಶ ಪಾಕಿಸ್ತಾನದ ಈ ಆಫರ್​​ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ಬಿಸಿಸಿಐ ಐತಿಹಾಸಿಕ ನಿರ್ಧಾರ; ವರ್ಷಾಂತ್ಯದಲ್ಲಿ ಮಹಿಳಾ ಆಟಗಾರ್ತಿಯರಿಗೆ ಭರ್ಜರಿ ಗಿಫ್ಟ್ – Kannada News | BCCI Hikes Women’s Domestic Match Fees: Equal Pay for Cricketers

ಭಾರತ ಮಹಿಳಾ ಕ್ರಿಕೆಟ್ ತಂಡ ಇತ್ತೀಚೆಗಷ್ಟೇ ನಡೆದಿದ್ದ 2025 ರ ಏಕದಿನ ವಿಶ್ವಕಪ್​ ಫೈನಲ್​ನಲ್ಲಿ ದಕ್ಷಿಣ ಆಫ್ರಿಕಾವನ್ನು ಮಣಿಸಿ ಮೊಟ್ಟ ಮೊದಲ ಬಾರಿಗೆ ವಿಶ್ವಕಪ್ ಎತ್ತಿಹಿಡಿದಿತ್ತು. ಇದಾದ ಬಳಿಕ ಬಿಸಿಸಿಐ ಕೂಡ ಮಹಿಳಾ ತಂಡಕ್ಕೆ ಭಾರಿ ಮೊತ್ತದ ಬಹುಮಾನ ಘೋಷಿಸಿತ್ತು. ಇದೆಲ್ಲದರ ನಡುವೆ ಇದೀಗ ಬಿಸಿಸಿಐ ಭಾರತದ ಮಹಿಳಾ ಆಟಗಾರ್ತಿಯರಿಗೆ ಮಹತ್ವದ ಉಡುಗೊರೆಯನ್ನು ನೀಡಿದೆ. ಅದೆನೆಂದರೆ ಬಿಸಿಸಿಐ, ದೇಶೀಯ ಮಹಿಳಾ ಕ್ರಿಕೆಟ್ ಆಟಗಾರ್ತಿಯರ ಪಂದ್ಯ ಶುಲ್ಕದಲ್ಲಿ ಭಾರಿ ಹೆಚ್ಚಳ ಮಾಡಿದೆ. ಈಗ, ದೇಶೀಯ ಕ್ರಿಕೆಟ್‌ನಲ್ಲಿ ಮಹಿಳಾ ಆಟಗಾರ್ತಿಯರ ಪಂದ್ಯ ಶುಲ್ಕವು ಪುರುಷ ಆಟಗಾರರಿಗೆ ಸಮಾನವಾಗಿದೆ.

ಮಹಿಳಾ ಆಟಗಾರ್ತಿಯರಿಗೆ ಬಿಸಿಸಿಐ ಗಿಫ್ಟ್

ಮಹಿಳಾ ಕ್ರಿಕೆಟ್​ನ ಏಳಿಗೆಗೆ ಸಾಕಷ್ಟು ಶ್ರಮಿಸುತ್ತಿರುವ ಬಿಸಿಸಿಐ ಇದೀಗ, ಮಹಿಳಾ ಆಟಗಾರ್ತಿಯರು ಮತ್ತು ಪಂದ್ಯದ ಅಧಿಕಾರಿಗಳ ಪಂದ್ಯ ಶುಲ್ಕವನ್ನು ದ್ವಿಗುಣಗೊಳಿಸಿದ್ದು, ದೇಶೀಯ ಕ್ರಿಕೆಟ್‌ನಲ್ಲಿ ಸಮಾನ ಪಂದ್ಯ ಶುಲ್ಕವನ್ನು ನೀಡಲು ಮುಂದಾಗಿದೆ. ಇದರ ಪ್ರಕಾರ, ದೇಶೀಯ ಏಕದಿನ ಮತ್ತು ಬಹು-ದಿನ (ದೀರ್ಘ ಸ್ವರೂಪ) ಪಂದ್ಯಗಳಲ್ಲಿ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯುವ ಮಹಿಳಾ ಆಟಗಾರ್ತಿಯರು ದಿನಕ್ಕೆ 50,000 ರ ಪಂದ್ಯ ಶುಲ್ಕವನ್ನು ಪಡೆಯಲಿದ್ದಾರೆ. ಹಾಗೆಯೇ ಮೀಸಲು ಆಟಗಾರ್ತಿಯರು ಪ್ರತಿ ಪಂದ್ಯಕ್ಕೆ 25,000 ರೂ. ಪಂದ್ಯ ಶುಲ್ಕ ಪಡೆಯಲಿದ್ದಾರೆ. ಟಿ20 ಪಂದ್ಯಗಳ ಪ್ಲೇಯಿಂಗ್ 11 ನಲ್ಲಿರುವ ಆಟಗಾರ್ತಿಯರು 25,000 ರೂ. ವೇತನ ಪಡೆದರೆ, ಮೀಸಲು ಆಟಗಾರ್ತಿಯರು ಪ್ರತಿ ಪಂದ್ಯಕ್ಕೆ 12,500 ರೂ. ವೇತನ ಪಡೆಯಲಿದ್ದಾರೆ. ಈ ಹಿಂದೆ, ಹಿರಿಯ ಮಹಿಳಾ ಆಟಗಾರ್ತಿಯರು ಪ್ಲೇಯಿಂಗ್ 11ನಲ್ಲಿದ್ದರೆ, ಅವರಿಗೆ 20,000 ರೂ. ವೇತನ ಮತ್ತು ಮೀಸಲು ಆಟಗಾರ್ತಿಯರು ಪ್ರತಿ ಪಂದ್ಯಕ್ಕೆ 10,000 ರೂ. ವೇತನ ಪಡೆಯುತ್ತಿದ್ದರು.

ಜೂನಿಯರ್ ಮಟ್ಟದಲ್ಲೂ ಬದಲಾವಣೆ

ಜೂನಿಯರ್ ಮಟ್ಟದ ಪಂದ್ಯಾವಳಿಗಳಲ್ಲಿಯೂ ಸಮಾನತೆಯನ್ನು ಜಾರಿಗೆ ತರಲಾಗಿದೆ. ಬಹು-ದಿನ ಅಥವಾ ಏಕದಿನ ಪಂದ್ಯಗಳಲ್ಲಿ, ಪ್ಲೇಯಿಂಗ್ 11ನಲ್ಲಿರುವ ಆಟಗಾರ್ತಿಯರಿಗೆ ದಿನಕ್ಕೆ 25,000 ರೂ. ವೇತನ ಮತ್ತು ಮೀಸಲು ಆಟಗಾರ್ತಿಯರಿಗೆ 12,500 ರೂ. ವೇತನ ಸಿಗಲಿದೆ. ಹಾಗೆಯೇ ಟಿ20 ಪಂದ್ಯಗಳಲ್ಲಿ ಪ್ಲೇಯಿಂಗ್ 11ನಲ್ಲಿರುವ ಆಟಗಾರ್ತಿಯರಿಗೆ 12,500 ರೂ. ವೇತನ ಮತ್ತು ಮೀಸಲು ಆಟಗಾರ್ತಿಯರಿಗೆ 6,250 ವೇತನ ಸಿಗಲಿದೆ.

ಅಂಪೈರ್‌, ಪಂದ್ಯದ ಅಧಿಕಾರಿಗಳ ವೇತನ ಹೆಚ್ಚಳ

ಮತ್ತೊಂದೆಡೆ, ಅಂಪೈರ್‌ಗಳು ಮತ್ತು ಮ್ಯಾಚ್ ರೆಫರಿಗಳು ಸೇರಿದಂತೆ ಪಂದ್ಯದ ಅಧಿಕಾರಿಗಳ ವೇತನದಲ್ಲೂ ಹೆಚ್ಚಳವಾಗಿದೆ. ದೇಶೀಯ ಪಂದ್ಯಾವಳಿಗಳಲ್ಲಿ ಲೀಗ್ ಪಂದ್ಯಗಳಿಗೆ ಅಂಪೈರ್‌ಗಳು ಮತ್ತು ಮ್ಯಾಚ್ ರೆಫರಿಗಳಿಗೆ ದಿನಕ್ಕೆ 40,000 ರೂ. ವೇತನ ಸಿಗಲಿದೆ. ನಾಕೌಟ್ ಪಂದ್ಯಗಳಿಗೆ, ದೈನಂದಿನ ವೇತನ 50,000 ರಿಂದ 60,000 ರವರೆಗೆ ಇರಲಿದೆ. ಈ ಹೆಚ್ಚಳದ ಅಡಿಯಲ್ಲಿ, ರಣಜಿ ಟ್ರೋಫಿ ಲೀಗ್ ಪಂದ್ಯಗಳಲ್ಲಿ ಅಂಪೈರ್ ಮಾಡುವವರು ಈಗ ಪ್ರತಿ ಪಂದ್ಯಕ್ಕೆ ಸುಮಾರು 1.60 ಲಕ್ಷ ರೂ. ವೇತನ ಪಡೆಯುತ್ತಾರೆ. ಹಾಗೆಯೇ ನಾಕೌಟ್ ಪಂದ್ಯಗಳಲ್ಲಿ ಅಂಪೈರ್ ಮಾಡುವವರು ಪ್ರತಿ ಪಂದ್ಯಕ್ಕೆ 2.5 ಲಕ್ಷದಿಂದ 3 ಲಕ್ಷದವರೆಗೆ ವೇತನ ಪಡೆಯಲಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕಾಡಾನೆ ಓಡಿಸಲೂ ಬಂತು AI ಕ್ಯಾಮರಾ: ಹೇಗೆ ಕೆಲಸ ಮಾಡುತ್ತೆ ಗೊತ್ತಾ? – Kannada News | Here Is How AI Cameras Works for Drive Away Elephants Near Nagarahole Forest

ಮೈಸೂರು, (ಡಿಸೆಂಬರ್ 23): ಇತ್ತೀಚೆಗೆ ಮೈಸೂರು (Mysuru) ಜಿಲ್ಲೆಯಲ್ಲಿ ಮಾವನ-ಕಾಡು ಪ್ರಾಣಿ ಸಂಘರ್ಷ ಹೆಚ್ಚಾಗಿದೆ. ನಾಗರಹೊಳೆ ಅರಣ್ಯ ಪ್ರದೇಶದ ಗಡಿ ಭಾಗದಲ್ಲಿ ಕಾಡಾನೆ (Wild Elephant) ಹಾವಳಿ ಹೆಚ್ಚಾಗಿದ್ದು, ಹಲವು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಆದರೂ ಆನೆಗಳ ಉಪಟಳ ನಿಂತಿಲ್ಲ. ಇದರಿಂದ ಜನಸಾಮಾನ್ಯರು, ರೈತರು ಸಂಕಷ್ಟಕ್ಕೀಡಾಗಿದ್ದಾರೆ. ಹೀಗಾಗಿ ಅರಣ್ಯ ಇಲಾಖೆಯು, ಕಾಡಾನೆ ಹಾವಳಿ ತಡೆಯಲು ಒಂದು ವಿನೂತನ ವಿಧಾನವೊಂದನ್ನು ಕಂಡುಕೊಂಡಿದ್ದು, ಬಹುತೇಕ ಯಶಸ್ವಿಯಾಗಿದೆ. ಹೌದು.. ನಾಗರಹೊಳೆ ಅರಣ್ಯ ಗಡಿಗಳಲ್ಲಿ ಕಾಡಾನೆಗಳನ್ನು ಓಡಿಸಲು ಎಐ (ಕೃತಕ ಬುದ್ಧಿಮತ್ತೆ) ಆಧಾರಿತ ಕ್ಯಾಮರಾಗಳನ್ನು ಧ್ವನಿವರ್ಧಕಗಳ ಜತೆ ಪ್ರಾಯೋಗಿಕವಾಗಿ ಅಳವಡಿಸಲಾಗಿದೆ. ಈ ಕ್ಯಾಮರಾಗಳು ಕಾಡಾನೆಗಳು ಸುಮಾರು 150 ಮೀಟರ್ ದೂರದಲ್ಲಿದ್ದಾಗಲೇ ಅವುಗಳನ್ನು ಗುರುತಿಸಿ, ಜೋರಾಗಿ ಶಬ್ದಗಳನ್ನು ಮಾಡುವ ಮೂಲಕ ಅವುಗಳನ್ನು ಓಡಿಸುತ್ತಿವೆ. ಇನ್ನು ಈ ಎಐ ಹೇಗೆ ಕಾರ್ಯನಿರ್ವಹಿಸುತ್ತೆ ಎನ್ನುವುದನ್ನ ಮೈಸೂರು ಅರಣ್ಯ ವಲಯದ ಡಿಸಿಎಫ್ ಪರಮೇಶ್ ಅವರು ವಿವರಿಸಿದ್ದಾರೆ.

ಇದನ್ನೂ ಓದಿ: ಕಾಡಾನೆ ಓಡಿಸಲೂ ಬಂತು ಎಐ ಕ್ಯಾಮರಾ! ನಾಗರಹೊಳೆ ಕಾಡಂಚಿನಲ್ಲಿ ವಿನೂತನ ಪ್ರಯೋಗ, ವಿಚಿತ್ರ ಸದ್ದು ಕೇಳಿ ಓಡಿಹೋಗ್ತಿವೆ ಗಜಪಡೆ

Source link

High Court Recruitment 2025: ಕರ್ನಾಟಕ ಹೈಕೋರ್ಟ್​​ನಲ್ಲಿ ಉದ್ಯೋಗವಕಾಶ; ಸಂಶೋಧನಾ ಸಹಾಯಕ ಹುದ್ದೆಗೆ ನೇಮಕಾತಿ – Kannada News | Karnataka High Court Recruitment 2025: Apply for Law Research Assistant Posts

ಕರ್ನಾಟಕ ಹೈಕೋರ್ಟ್ ಅಧಿಕೃತ ಅಧಿಸೂಚನೆಯ ಮೂಲಕ ಕಾನೂನು ಸಂಶೋಧನಾ ಸಹಾಯಕ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಕರ್ನಾಟಕ ಸರ್ಕಾರದಡಿಯಲ್ಲಿ ಬೆಂಗಳೂರಿನಲ್ಲಿ ವೃತ್ತಿಜೀವನವನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಆಸಕ್ತ ಅಭ್ಯರ್ಥಿಗಳು ಡಿಸೆಂಬರ್ 31ರೊಳಗೆ ಅರ್ಜಿ ಸಲ್ಲಿಸತಕ್ಕದ್ದು.

ಕರ್ನಾಟಕ ಹೈಕೋರ್ಟ್ ಹುದ್ದೆಗಳ ಅಧಿಸೂಚನೆ:

  • ಹುದ್ದೆಗಳ ಸಂಖ್ಯೆ: 2
  • ಉದ್ಯೋಗ ಸ್ಥಳ: ಬೆಂಗಳೂರು
  • ಹುದ್ದೆಯ ಹೆಸರು: ಕಾನೂನು ಸಂಶೋಧನಾ ಸಹಾಯಕ

ಅರ್ಜಿ ಸಲ್ಲಿಸುವುದು ಹೇಗೆ?

ಅರ್ಹ ಅಭ್ಯರ್ಥಿಗಳು ತಮ್ಮ ಅರ್ಜಿಯನ್ನು ನಿಗದಿತ ನಮೂನೆಯಲ್ಲಿ ಇ-ಮೇಲ್ ಐಡಿ, officeofhmjtvg@gmail.com ಗೆ ಡಿಸೆಂಬರ್ 31 ರ ಮೊದಲು ಅಗತ್ಯವಿರುವ ಎಲ್ಲಾ ದಾಖಲೆಗಳೊಂದಿಗೆ ಕಳುಹಿಸಬಹುದು.

ಇದನ್ನೂ ಓದಿ: ಬ್ಯಾಂಕ್ ಆಫ್ ಇಂಡಿಯಾದಲ್ಲಿ 514 ಕ್ರೆಡಿಟ್ ಆಫೀಸರ್ ಹುದ್ದೆಗೆ ನೇಮಕಾತಿ

ಕರ್ನಾಟಕ ಹೈಕೋರ್ಟ್ ಅಧಿಸೂಚನೆ ಪ್ರಮುಖ ಲಿಂಕ್‌ಗಳು:

ಮತ್ತಷ್ಟು ಉದ್ಯೋಗಕ್ಕೆ ಸಂಬಂಧಿಸಿದ  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮೂತ್ರದ ಬಣ್ಣದಿಂದ ಕ್ಯಾನ್ಸರ್ ಪತ್ತೆ ಹಚ್ಚಬಹುದೇ? ಏನನ್ನುತ್ತಾರೆ ತಜ್ಞರು – Kannada News | Men’s Health Alert: What Urine Color Reveals

ಪ್ರಾಸ್ಟೇಟ್ ಕ್ಯಾನ್ಸರ್ ಬಗ್ಗೆ ಕೇಳಿರಬಹುದು. ಇದು ಒಂದು ರೀತಿಯ ವೃಷಣ ಕ್ಯಾನ್ಸರ್ (Cancer) ಹಿಂದೆ ಮಧ್ಯವಯಸ್ಕ ಪುರುಷರಲ್ಲಿ ಹೆಚ್ಚಾಗಿ ಕಂಡುಬರುತ್ತಿದ್ದ ಈ ವೃಷಣ ಕ್ಯಾನ್ಸರ್ ಇತ್ತೀಚಿನ ದಿನಗಳಲ್ಲಿ ಸಣ್ಣ ವಯಸ್ಸಿನವರ ಮೇಲೂ ಪರಿಣಾಮ ಬೀರುತ್ತಿದೆ. ಇತ್ತೀಚಿನ ಅಧ್ಯಯನದ ಪ್ರಕಾರ, ವೃಷಣ ಕ್ಯಾನ್ಸರ್ ಅಪಾಯ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಪುರುಷರ ವೃಷಣಗಳಲ್ಲಿ ಕಂಡುಬರುವ ಈ ಕ್ಯಾನ್ಸರ್ ಎಷ್ಟೇ ಜಾಗರೂಕರಾಗಿದ್ದರೂ ನಿಯಂತ್ರಿಸುವುದು ಸ್ವಲ್ಪ ಕಷ್ಟ. ಆದ್ದರಿಂದ, ರೋಗಲಕ್ಷಣಗಳನ್ನು ಮೊದಲೇ ಗುರುತಿಸುವುದು ಬಹಳ ಮುಖ್ಯ ಎಂದು ವೈದ್ಯರು ಹೇಳುತ್ತಾರೆ. ಹಾಗಾದರೆ ಇದರ ಲಕ್ಷಣಗಳು ಹೇಗಿರುತ್ತದೆ, ಹೊಟ್ಟೆಯ ಕೆಳಭಾಗದಲ್ಲಿ ನೋವು ಕಂಡುಬರುವುದಕ್ಕೆ ನಿಜವಾದ ಕಾರಣವೇನು ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಪ್ರಾಸ್ಟೇಟ್ ಕ್ಯಾನ್ಸರ್ ಲಕ್ಷಣಗಳು:

ಆರಂಭಿಕ ಹಂತದ ಪ್ರಾಸ್ಟೇಟ್ ಕ್ಯಾನ್ಸರ್ ಲಕ್ಷಣಗಳು ಅಷ್ಟು ಸ್ಪಷ್ಟವಾಗಿರುವುದಿಲ್ಲ. ಇದು ಕಾಣಿಸಿಕೊಳ್ಳುವ ಹೊತ್ತಿಗೆ, ರೋಗವು ಕೆಲವು ಹಂತಗಳನ್ನು ದಾಟಿರುತ್ತದೆ. ಈ ಹಂತಗಳಲ್ಲಿ, ಚಿಕಿತ್ಸೆ ಸ್ವಲ್ಪ ಕಷ್ಟಕರವಾಗುತ್ತದೆ. ಹಾಗಾಗಿ ನಿಮ್ಮ ಮೂತ್ರ ಗುಲಾಬಿ ಅಥವಾ ಕೆಂಪು ಬಣ್ಣದಲ್ಲಿ ಕಾಣಿಸಿಕೊಂಡರೆ, ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು. ರಕ್ತಸ್ರಾವದ ಜೊತೆಗೆ, ಮೂತ್ರ ವಿಸರ್ಜಿಸುವಾಗ ಸುಡುವ ಸಂವೇದನೆ ಅನುಭವಕ್ಕೆ ಬರುವುದನ್ನು ಕೂಡ ಪರೀಕ್ಷಿಸುವುದು ಮುಖ್ಯವಾಗುತ್ತದೆ.

ಸರಿಯಾಗಿ ಮೂತ್ರ ವಿಸರ್ಜಿಸಲು ಸಾಧ್ಯವಾಗದಿರುವುದಕ್ಕೆ ಕಾರಣವೇನು?

ಸಾಮಾನ್ಯವಾಗಿ ಕೆಲವರಲ್ಲಿ ಮೂತ್ರ ವಿಸರ್ಜಿಸಲು ಪ್ರಚೋದನೆಯಾಗುತ್ತದೆ, ಆದರೆ ಅದನ್ನು ಸರಿಯಾಗಿ ಹೊರಹಾಕಲು ಸಾಧ್ಯವಾಗುವುದಿಲ್ಲ. ಮೂತ್ರಕೋಶ ಖಾಲಿಯಾಗಿದ್ದಾಗ ಈ ರೀತಿ ಅನುಭವವಾಗುವುದು ದೊಡ್ಡ ಸಮಸ್ಯೆಯಲ್ಲ. ಆದರೆ ಮೂತ್ರಕೋಶದಿಂದ ಮೂತ್ರ ವಿಸರ್ಜಿಸಲು ಸಾಧ್ಯವಾಗದಿರುವುದನ್ನು ನಿರ್ಲಕ್ಷ್ಯ ಮಾಡಬಾರದು. ಏಕೆಂದರೆ ಮೂತ್ರವು ನಿಮ್ಮ ಮೂತ್ರನಾಳದ ಮೂಲಕ ಹಾದುಹೋಗುತ್ತದೆ. ಕ್ಯಾನ್ಸರ್ ಬೆಳವಣಿಗೆಯಾದಾಗ, ಮೂತ್ರನಾಳವು ಕಿರಿದಾಗುತ್ತದೆ, ಇದರಿಂದಾಗಿ ಮೂತ್ರವು ಮುಂದಕ್ಕೆ ಹರಿಯುವ ಬದಲು ಹಿಂದಕ್ಕೆ ಹರಿಯುತ್ತದೆ.

ಇದನ್ನೂ ಓದಿ: ಮೊಟ್ಟೆ ಸೇವನೆಯಿಂದ ಕ್ಯಾನ್ಸರ್​ ಬರಲ್ಲ: FSSAI ಸ್ಪಷ್ಟನೆ

ಹೊಟ್ಟೆಯ ಕೆಳಭಾಗದಲ್ಲಿ ನೋವು ಕಂಡುಬರುವುದಕ್ಕೆ ಕಾರಣವೇನು?

ಇದು ವೃಷಣ ಕ್ಯಾನ್ಸರ್‌ನ ಆರಂಭಿಕ ಲಕ್ಷಣಗಳಲ್ಲಿ ಒಂದಾಗಿದೆ. ಆಗಾಗ ಮೂತ್ರ ವಿಸರ್ಜನೆ ಮಾಡುವ ಸಮಯದಲ್ಲಿ ಅನೇಕರಲ್ಲಿ ಕೆಳ ಬೆನ್ನು, ಹೊಟ್ಟೆಯ ಕೆಳಭಾಗ ಮತ್ತು ತೊಡೆಸಂದು ಪ್ರದೇಶಗಳಲ್ಲಿ ನೋವು ಕಂಡುಬರುತ್ತದೆ. ಏಕೆಂದರೆ ಮೂತ್ರವು ಸಂಪೂರ್ಣವಾಗಿ ಹೊರಹಾಕಲ್ಪಡುವ ಬದಲು ಮೂತ್ರಕೋಶದಲ್ಲಿ ಉಳಿಯುವುದರಿಂದ ತೊಡೆಸಂದಿಯ ಸುತ್ತಲಿನ ಸ್ನಾಯುಗಳಲ್ಲಿ ನೋವು ಉಂಟಾಗುತ್ತದೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಗ್ರೇಟರ್ ಬೆಂಗಳೂರು ಕಂದಾಯ ಆಯುಕ್ತ ಮುನೀಶ್ ಮೌದ್ಗಿಲ್ ವಿರುದ್ಧ ಸಿಡಿದೆದ್ದ ನೌಕರರು – Kannada News | Greater Bengaluru Authority Employees Calls For Strike Against GBA Special Commissioner Munish Moudgil Alleging Harassment

ಬೆಂಗಳೂರು, (ಡಿಸೆಂಬರ್ 23): ಗ್ರೇಟರ್ ಬೆಂಗಳೂರು ಪ್ರಾಧಿಕಾರದ (Greater Bengaluru Authority) ಕಂದಾಯ ವಿಭಾಗದ ವಿಶೇಷ ಆಯುಕ್ತ ಮುನೀಶ್ ಮೌದ್ಗಿಲ್ (Munish Moudgil)​ ವಿರುದ್ಧ ನೌಕರರು ಹಾಗೂ ಅಧಿಕಾರಿಗಳ ಪಿತ್ತ ನೆತ್ತಿಗೇರಿದ್ದು, ಕಿರುಕುಳ ಹಾಗೂ ದುರುದ್ದೇಶಪೂರ್ವಕವಾಗಿ ಅಧಿಕಾರಿಗಳನ್ನು ಅಮಾನತು ಮಾಡುವ ಕೆಲಸಕ್ಕೆ ಹಿರಿಯ ಅಧಿಕಾರಿಗಳು ಮುಂದಾಗಿದ್ದಾರೆ ಎಂದು GBA ನೌಕರರು ಪ್ರತಿಭಟನೆಯ ಹಾದಿ ತುಳಿದಿದ್ದಾರೆ. GBA ದಕ್ಷಿಣ ವಲಯ ಉಪ ಆಯುಕ್ತ ಡಿ.ಕೆ.ಬಾಬು ಮತ್ತು ಕಂದಾಯ ಅಧಿಕಾರಿ ಶ್ರೀಮತಿ ವರಲಕ್ಷ್ಮಿ ರವರನ್ನು ಕಾನೂನು ಬಾಹಿರವಾಗಿ ಅಮಾನತ್ತು ಮಾಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿರುವುದನ್ನ ಖಂಡಿಸಿ ಜಿಬಿಎ-ಪಾಲಿಕೆಗಳ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ತುರ್ತು ಸಭೆ ಮತ್ತು ಮೇಣದ ದೀಪ ಹಚ್ಚುವ ಮೂಲಕ ಮೌನ ಪ್ರತಿಭಟನೆ ನಡೆಸಲಾಯಿತು. ಒಂದು ವೇಳೆ ನಮ್ಮ ಆಗ್ರಹಕ್ಕೆ GBA ಮಣಿಯದೇ ಇದ್ದರೆ ಹೋರಾಟ ತೀವ್ರಗೊಳಿಸಲು ಸಂಘ ನಿರ್ಧರಿಸಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಬೆಳ್ಳಂ ಬೆಳಿಗ್ಗೆ ಬಿರಿಯಾನಿ ತಿನ್ನಲು ಹೋದವರಿಗೆ ಭರ್ಜರಿ ಶಾಕ್​​: ಕಾಲೇಜು ವಿದ್ಯಾರ್ಥಿಗಳ ಅಡ್ಡಗಟ್ಟಿ ದರೋಡೆ – Kannada News | Gang Robs Students Returning After Eating Hoskote Biryani

ಬೆಂಗಳೂರು, ಡಿಸೆಂಬರ್​​ 23: ಹೊಸಕೋಟೆ ಬಿರಿಯಾನಿ ತಿನ್ನಲು ತೆರಳಿದ್ದ ಬೆಂಗಳೂರಿನ ಪ್ರತಿಷ್ಠಿತ ಕಾಲೇಜು ವಿದ್ಯಾರ್ಥಿಗಳನ್ನ ದರೋಡೆ ಮಾಡಿದ್ದಲ್ಲದೆ, ಒತ್ತೆಯಾಳಾಗಿ ಇಟ್ಟುಕೊಂಡು ಹೆಚ್ಚಿನ ಹಣಕ್ಕೆ ಬೇಡಿಕೆ ಇಟ್ಟಿರುವ ಘಟನೆ ನಡೆದಿದೆ. ಪ್ರಕರಣ ಸಂಬಂಧ ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಉಳಿದ ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.

ವಿದ್ಯಾರ್ಥಿಗಳ ಸ್ನೇಹಿತರಿಂದಲೂ ಹಣ ಪೀಕಿದ ದುಷ್ಕರ್ಮಿಗಳು

ಬಾಗಲೂರು ವ್ಯಾಪ್ತಿಯ ಪ್ರತಿಷ್ಟಿತ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ನಾಲ್ವರು ವಿದ್ಯಾರ್ಥಿಗಳು ಎರಡು ಪ್ರತ್ಯೇಕ ಬೈಕ್‌ಗಳಲ್ಲಿ ಭಾನುವಾರ ಮುಂಜಾನೆ ಹೊಸಕೋಟೆ ಬಿರಿಯಾನಿ ತಿನ್ನಲು ತೆರಳಿದ್ದರು. ಬಿರಿಯಾನಿ ತಿಂದು ವಾಪಾಸ್‌ ಬರುವಾಗ ಆರು ಗಂಟೆ ಸುಮಾರಿಗೆ ಮೇಡಹಳ್ಳಿ ಬಳಿ ಆರೇಳು ಮಂಂದಿ ದುಷ್ಕರ್ಮಿಗಳು ವಿದ್ಯಾರ್ಥಿಗಳನ್ನು ಅಡ್ಡಗಟ್ಟಿದ್ದಾರೆ. ಬಳಿಕ ವಿದ್ಯಾರ್ಥಿಗಳ ಎರಡು ಬೈಕ್‌ಗಳನ್ನು ಕಸಿದುಕೊಂಡು, ಮೊಬೈಲ್‌ಗಳನ್ನು ಕಿತ್ತಿಟ್ಟುಕೊಂಡು ಸುಲಿಗೆ ಮಾಡಿದ್ದಾರೆ. ವಿದ್ಯಾರ್ಥಿಗಳ ಮೊಬೈಲ್‌ನಲ್ಲಿದ್ದ 1,800 ರೂ. ಹಣವನ್ನು ಬೇರೆ ಬೇರೆ ಖಾತೆಗಳಿಗೆ ಯುಪಿಐ ಮುಖಾಂತರ ವರ್ಗಾವಣೆ ಮಾಡಿಸಿಕೊಂಡಿದ್ದಲ್ಲದೆ, ವಿದ್ಯಾರ್ಥಿಗಳನ್ನು ಸುಮಾರು 1 ಗಂಟೆ ಕಾಲ ಒತ್ತೆಯಾಳಗಿಸಿ ಇಟ್ಟುಕೊಂಡಿದ್ದಾರೆ. ಅವರ ಸ್ನೇಹಿತರಿಗೂ ಕರೆ ಮಾಡಿಸಿ ಹಣ ಪೀಕಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಪ್ರೇಯಸಿ ಮದ್ವೆ ಮಂಟಪಕ್ಕೆ ಬರುವಷ್ಟರಲ್ಲೇ ಬೇರೊಂದು ಯುವತಿಗೆ ತಾಳಿಕಟ್ಟಿದ್ದ ಪ್ರಿಯಕರ ಅರೆಸ್ಟ್

ಘಟನೆ ಬೆನ್ನಲ್ಲೇ ಎಚ್ಚೆತ್ತ ವಿದ್ಯಾರ್ಥಿಗಳ ಸ್ನೇಹಿತರು ಬಾಗಲೂರು ಪೊಲೀಸ್‌ ಠಾಣೆಗೆ ತೆರಳಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಖಾಕಿ ಕಾರ್ಯಾಚರಣೆ ನಡೆಸಿದ್ದು, ಪೊಲೀಸರು ಬರ್ತಿದಂತೆ ವಿದ್ಯಾರ್ಥಿಗಳನ್ನು ಬಿಟ್ಟು ಕಿಡಿಗೇಡಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಪ್ರಕರಣ ಸಂಬಂಧ ಕೆ.ಜಿ. ಹಳ್ಳಿಯ ಅರ್ಫಾತ್‌ ಅಹಮದ್‌ (24) ಎಂಬಾತನನ್ನು ಪೊಲೀಸರು ಬಂಧಿಸಿದ್ದು, ಉಳಿದ ಆರೋಪಿಗಳಿಗಾಗಿ ಶೋಧ ಮುಂದುವರಿಸಿದ್ದಾರೆ. ಸಂತ್ರಸ್ತ ವಿದ್ಯಾರ್ಥಿಗಳು ನೀಡಿದ ದೂರಿನ ಅನ್ವಯ ಆವಲಹಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಕ್ರಿಸ್ಮಸ್‌, ನ್ಯೂ ಇಯರ್‌ಗೆ ಟ್ರಿಪ್‌ ಹೋಗೋ ಪ್ಲಾನ್‌ ಇದ್ಯಾ? ಹಾಗಿದ್ರೆ ಈ ಸ್ಥಳಗಳಿಗೆ ಭೇಟಿ ನೀಡುವುದನ್ನು ತಪ್ಪಿಸಿ – Kannada News | If you are planning a trip during Christmas and New Year do not visit these places

ಕ್ರಿಸ್ಮಸ್‌ (Christmas), ನ್ಯೂ ಇಯರ್‌ ಹಾಲಿಡೇ ಸಂದರ್ಭದಲ್ಲಿ ಹೆಚ್ಚಿನವರು ಫ್ರೆಂಡ್ಸ್‌, ಫ್ಯಾಮಿಲಿ ಜೊತೆ ಎಲ್ಲಾದ್ರೂ ಟ್ರಿಪ್‌ ಹೋಗ್ತಾರೆ.  ಹೌದು ಕೆಲಸದ ಒತ್ತಡದಿಂದ ಸ್ವಲ್ಪ ಬ್ರೇಕ್‌ ತೆಗೆದುಕೊಂಡು ಕ್ರಿಸ್ಮಸ್‌ ಸಂಭ್ರಮವನ್ನು ಸವಿಯಲು, ನ್ಯೂ ಇಯರ್‌ ಪಾರ್ಟಿ ಎಂಜಾಯ್‌ ಮಾಡಲು ಫ್ರೆಂಡ್ಸ್‌, ಫ್ಯಾಮಿಲಿ ಜೊತೆ ಟ್ರಿಪ್‌ ಹೋಗ್ತಾರೆ. ಇದೇ ರೀತಿ ನೀವು ಕೂಡ ಈ ಬಾರಿ ಟ್ರಿಪ್‌ ಪ್ಲಾನ್‌ ಮಾಡಿದ್ದೀರಾ? ಹಾಗಿದ್ರೆ ನಿಮ್ಮ ಈ ಪ್ರವಾಸವನ್ನು ಸ್ಮರಣೀಯವಾಗಿರಿಸಲು, ಜನಸಂದಣಿ, ಟ್ರಾಫಿಕ್‌ ಜಾಮ್‌ ಇತ್ಯಾದಿ ಕಿರಿಕಿರಿಯನ್ನು ಹಾಗೂ ಜೇಬಿಗೆ ಕತ್ತರಿ ಬೀಳುವುದನ್ನು ತಪ್ಪಿಸಲು ಬಯಸಿದರೆ ಈ ಕೆಲವು ಸ್ಥಳಗಳಿಗೆ ಈ ಸಮಯದಲ್ಲಿ ಭೇಟಿ ನೀಡಲೇಬೇಡಿ. ಆ ಟೂರಿಸ್ಟ್‌ ಪ್ಲೇಸ್‌ ಯಾವುವು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

ಕ್ರಿಸ್‌ಮಸ್ ಮತ್ತು ಹೊಸ ವರ್ಷದಂದು ಸ್ಥಳಗಳಿಗೆ ಭೇಟಿ ನೀಡುವುದನ್ನು ತಪ್ಪಿಸಿ:

ಶಿಮ್ಲಾ ಮತ್ತು ಮನಾಲಿ: ಹೆಚ್ಚಿನ ಜನರು ಹೊಸ ವರ್ಷವನ್ನು ಆಚರಿಸಲು ಶಿಮ್ಲಾ ಮತ್ತು ಮನಾಲಿಗೆ ಹೋಗುತ್ತಾರೆ, ಆದರೆ ಈ ಸಮಯದಲ್ಲಿ ಈ ಗಿರಿಧಾಮಗಳಿಗೆ ಹೋಗುವುದನ್ನು ತಪ್ಪಿಸುವುದು ಉತ್ತಮ. ಏಕೆಂದರೆ ಈ ಸಮಯದಲ್ಲಿ ಹಿಮರಾಶಿಯ ಸೌಂದರ್ಯವನ್ನು ಸವಿಯಲು ಸಾಕಷ್ಟು ಪ್ರವಾಸಿಗರು ಈ ಸ್ಥಳಗಳಿಗೆ ಭೇಟಿ ನೀಡ್ತಾರೆ. ಪ್ರವಾಸಿಗರು ಹೆಚ್ಚಾದಂತೆ ಟ್ರಾಫಿಕ್‌ ಜಾಮ್‌, ಜನಸಂದಣಿ ಸಹ ಹೆಚ್ಚಾಗುತ್ತದೆ.  ಇದಲ್ಲದೆ, ಹೋಟೆಲ್‌ಗಳು ಹೆಚ್ಚಾಗಿ ಸಂಪೂರ್ಣವಾಗಿ ಬುಕ್ ಆಗಿರುತ್ತವೆ. ಜೊತೆಗೆ ಹೋಟೆಲ್‌ ಬೆಲೆಗಳೂ ಬೆಲೆ ದುಬಾರಿಯಾಗಿರುತ್ತದೆ.

ನೈನಿತಾಲ್ ಮತ್ತು ಮಸ್ಸೂರಿ: ಉತ್ತರಖಂಡದ ಫೇಮಸ್‌ ಪ್ರವಾಸಿ ತಾಣಗಳೆಂದರೆ ಅದು ನೈನಿತಾಲ್‌ ಮತ್ತು ಮಸ್ಸೂರಿ. ಕ್ರಿಸ್‌ಮಸ್‌ ರಜೆಯನ್ನು ಆನಂದಿಸಲು ಪ್ರವಾಸಿಗಳು ಈ ಸ್ಥಳಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಾರೆ. ನೀವು ಸಹ  ಹೊಸ ವರ್ಷವನ್ನು ಆಚರಿಸಲು ನೈನಿತಾಲ್ ಅಥವಾ ಮಸ್ಸೂರಿಗೆ ಪ್ರವಾಸವನ್ನು ಯೋಜಿಸುತ್ತಿದ್ದರೆ, ಅದನ್ನು ರದ್ದುಗೊಳಿಸಿ. ಈ ಗಿರಿಧಾಮಗಳು ತುಂಬಾ ಚಿಕ್ಕದಾಗಿದ್ದು, ಜನಸಂದಣಿಯ ಕಾರಣದಿಂದ ಕಿರಿಕಿರಿ ಉಂಟಾಗಬಹುದು. ಇದು ನಿಮ್ಮ ಪ್ರವಾಸದ ಖುಷಿಯನ್ನೇ ಹಾಳುಮಾಡಬಹುದು.

ಇದನ್ನೂ ಓದಿ: ಕ್ರಿಸ್ಮಸ್‌ ಹಬ್ಬಕ್ಕೆ ಮನೆಯಲ್ಲೇ ಬಲು ಸುಲಭವಾಗಿ ತಯಾರಿಸಿ ಆರೋಗ್ಯಕರ ಡ್ರೈಫ್ರೂಟ್‌ ಕೇಕ್‌

ಜೈಪುರ ಮತ್ತು ಉದಯಪುರ: ನೀವು ಕ್ರಿಸ್‌ಮಸ್ ಮತ್ತು ಹೊಸ ವರ್ಷವನ್ನು ಆಚರಿಸಲು ರಾಜಸ್ಥಾನದ ಜೈಪುರ ಮತ್ತು ಉದಯಪುರಕ್ಕೆ ಭೇಟಿ ನೀಡಲು ಯೋಜಿಸುತ್ತಿದ್ದರೆ, ಈ ಪ್ಲಾನ್‌ ಕ್ಯಾನ್ಸಲ್‌ ಮಾಡಿ. ಏಕೆಂದರೆ ಈ ಸಮಯದಲ್ಲಿ ಇಲ್ಲಿನ ಹೋಟೆಲ್‌ಗಳು ಮತ್ತು ರೆಸಾರ್ಟ್‌ಗಳು ಬೆಲೆಗಳು ದುಬಾರಿಯಾಗಿರುತ್ತವೆ. ಇದರಿಂದ ನಿಮ್ಮ ಜೇಬಿಗೆ ಕತ್ತರಿ ಬೀಳಬಹುದು.

ಗೋವಾ:  ಕ್ರಿಸ್ಮಸ್‌ ಮತ್ತು ಹೊಸ ವರ್ಷವನ್ನು ಸಂಭ್ರಮಿಸಲು ಹೆಚ್ಚಿನ ಜನರು ಗೋವಾ ಟ್ರಿಪ್‌ ಪ್ಲಾನ್‌ ಮಾಡ್ತಾರೆ. ಆದ್ರೆ ಈ ಪೀಕ್‌ ಸಮಯದಲ್ಲಿ ಈ ಸ್ಥಳಕ್ಕೆ ಹೋಗುವುದನ್ನು ಆದಷ್ಟು ತಪ್ಪಿಸಿ. ಏಕೆಂದರೆ ಈ ಟೈಮ್‌ನಲ್ಲಿ ಗೋವಾದಲ್ಲಿ ಹೋಟೆಲ್ ಮತ್ತು ಟ್ಯಾಕ್ಸಿ ದರಗಳು ಮೂರರಿಂದ ನಾಲ್ಕು ಪಟ್ಟು ಹೆಚ್ಚಾಗುತ್ತವೆ. ಜನಸಂದಣಿಯೂ ಸಾಕಷ್ಟು ಇರುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link