ರವಿ ಶ್ರೀವತ್ಸ ಅವರು ‘ಗ್ಯಾಂಗ್ಸ್ ಆಫ್ ಯುಕೆ’ (Gangs of UK) ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಈ ಚಿತ್ರದಲ್ಲಿ ಒರಟ ಪ್ರಶಾಂತ್, ಪದ್ಮಾ ವಾಸಂತಿ, ಪ್ರವೀಣ್, ಮುನಿ, ಸೋನು ಉಪಾಧ್ಯ, ಉಗ್ರಂ ರೆಡ್ಡಿ, ಸತ್ಯ, ಧಿಲ್ಲಾನ್, ಪ್ರಜ್ವಲ್ ಮಸ್ಕಿ, ನವೀನ್, ವಿಕಾಸ್, ಉಮೇಶ್, ಅಮೋಘ್ ಮುಂತಾದ ಕಲಾವಿದರು ನಟಿಸಿದ್ದಾರೆ. ಇತ್ತೀಚೆಗೆ ಈ ಸಿನಿಮಾದ ಸುದ್ದಿಗೋಷ್ಠಿ ನಡೆಯಿತು. ಚಿತ್ರದ ಟ್ರೇಲರ್ ಸಖತ್ ಮಾಸ್ ಆಗಿದೆ. ಏಪ್ರಿಲ್ 10ರಂದು ಬಿಡುಗಡೆ ಆಗಲಿರುವ ಈ ಸಿನಿಮಾದ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಚಿತ್ರತಂಡದವರು ಮಾತನಾಡಿದರು. ನಟ ಒರಟ ಪ್ರಶಾಂತ್ (Orata Prashanth) ಅವರ ವೃತ್ತಿಜೀವನದಲ್ಲಿ ಈ ಚಿತ್ರ ಭಿನ್ನವಾಗಿದೆ ಎಂಬುದು ಟ್ರೇಲರ್ ನೋಡಿದರೆ ತಿಳಿಯುತ್ತದೆ. ಉತ್ತರ ಕರ್ನಾಟಕ ಭಾಗದಲ್ಲಿ ನಡೆಯುವ ಕಥೆಯನ್ನು ಈ ಸಿನಿಮಾದಲ್ಲಿ ತೋರಿಸಲಾಗುತ್ತಿದೆ. ಈ ಸಿನಿಮಾದಿಂದ ಬೇರೊಂದು ಅಧ್ಯಾಯ ಆರಂಭ ಆಗಲಿದೆ ಎಂದು ಪ್ರಶಾಂತ್ ಹೇಳಿದ್ದಾರೆ.
‘ಧುರಂಧರ್’ ಮತ್ತು ‘ಧುರಂಧರ್: ದಿ ರಿವೆಂಜ್’ ಸಿನಿಮಾಗಳ ಭರ್ಜರಿ ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವ ನಟ ಅರ್ಜುನ್ ರಾಮ್ಪಾಲ್ (Arjun Rampal) ಈಗ ಒಟಿಟಿ ಮೂಲಕ ಅಬ್ಬರಿಸಲು ಸಿದ್ಧರಾಗಿದ್ದಾರೆ. ಖ್ಯಾತ ನಿರ್ದೇಶಕ ಹನ್ಸಲ್ ಮೆಹ್ತಾ ಅವರ ಸಾರಥ್ಯದಲ್ಲಿ ಮೂಡಿಬರುತ್ತಿರುವ ‘ಬಿಲಿಯನೇರ್’ (Billionaire) ವೆಬ್ ಸರಣಿಯಲ್ಲಿ ಅರ್ಜುನ್ ರಾಮ್ಪಾಲ್ ಅವರು ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ. ಈ ಪಾತ್ರದ ಬಗ್ಗೆ ಈಗ ಚಿತ್ರರಂಗದಲ್ಲಿ ಭಾರಿ ಕುತೂಹಲ ಮೂಡಿದೆ. ಯಾರಿದು ಬಿಲಿಯನೇರ್ ಎಂಬ ಪ್ರಶ್ನೆ ಉದ್ಭವ ಆಗಿದೆ.
ವಿಜಯ್ ಮಲ್ಯ ಅಥವಾ ಲಲಿತ್ ಮೋದಿ ರೀತಿ ಒಬ್ಬ ಪ್ರಭಾವಿ ಉದ್ಯಮಿಯ ಮಹತ್ವಾಕಾಂಕ್ಷೆ, ಅಧಿಕಾರದ ಹಪಾಹಪಿ ಮತ್ತು ಯಶಸ್ಸಿನ ಹಿಂದಿನ ಕರಾಳ ಮುಖವನ್ನು ಈ ಸರಣಿ ಅನಾವರಣಗೊಳಿಸಲಿದೆ. ಆದರೆ, ಈ ಕಥೆ ನಿಜ ಜೀವನದ ವ್ಯಕ್ತಿಗಳಿಂದ ಪ್ರೇರಿತವಾಗಿದೆಯೇ ಎಂಬ ಪ್ರಶ್ನೆ ಈಗ ಎಲ್ಲರನ್ನೂ ಕಾಡುತ್ತಿದೆ. ಆದ್ದರಿಂದ ‘ಬಿಲಿಯನೇರ್’ ವೆಬ್ ಸಿರೀಸ್ ಕೌತುಕ ಮೂಡಿಸಿದೆ.
‘ಕಿಂಗ್ ಆಫ್ ಗುಡ್ ಟೈಮ್ಸ್’ ಎಂದು ಕರೆಸಿಕೊಳ್ಳುತ್ತಿದ್ದ ವಿಜಯ್ ಮಲ್ಯ ಅವರ ವೈಭವೋಪೇತ ಜೀವನ ಶೈಲಿ ಮತ್ತು ನಂತರ ಎದುರಿಸಿದ ಕಾನೂನು ಸಂಕಷ್ಟಗಳಿಗೂ, ಈ ಸರಣಿಯ ಕಥೆಗೂ ಸಾಮ್ಯತೆ ಇರಬಹುದು ಎಂದು ವಿಶ್ಲೇಷಿಸಲಾಗುತ್ತಿದೆ. ಅದೇ ರೀತಿ, ಐಪಿಎಲ್ ಮೂಲಕ ಕ್ರಿಕೆಟ್ ಜಗತ್ತನ್ನೇ ಬದಲಿಸಿದ ಲಲಿತ್ ಮೋದಿ ಅವರ ಪಾತ್ರದ ಎಳೆಗಳು ಕೂಡ ಈ ಸರಣಿಯಲ್ಲಿ ಇರಲಿವೆ ಎಂಬ ಮಾತು ಕೇಳಿಬರುತ್ತಿದೆ. ಅಧಿಕಾರ, ರಾಜಕಾರಣ ಮತ್ತು ಉದ್ಯಮ ಲೋಕದ ಸಂಘರ್ಷಗಳು ಇವರ ಜೀವನಕ್ಕೆ ಹತ್ತಿರವಾಗಿವೆ ಎನ್ನಲಾಗುತ್ತಿದೆ.
ಈ ಹಿಂದೆ ‘ಸ್ಕ್ಯಾಮ್’ ವೆಬ್ ಸರಣಿಯ ಮೂಲಕ ನೈಜ ಘಟನೆಗಳನ್ನು ರೋಚಕವಾಗಿ ತೆರೆಮೇಲೆ ತಂದಿದ್ದ ಹನ್ಸಲ್ ಮೆಹ್ತಾ ಅವರು, ‘ಬಿಲಿಯನೇರ್’ ಸರಣಿಯಲ್ಲೂ ಅಂತಹದ್ದೇ ಮ್ಯಾಜಿಕ್ ಮಾಡಲಿದ್ದಾರೆ ಎಂಬ ನಿರೀಕ್ಷೆಯಿದೆ. ಮೂಲಗಳ ಪ್ರಕಾರ, ಇದು ಕೇವಲ ಒಬ್ಬ ವ್ಯಕ್ತಿಯ ಕಥೆಯಾಗಿರದೆ, ಹಲವು ಉದ್ಯಮಿಗಳ ಜೀವನದ ಘಟನೆಗಳನ್ನು ಸೇರಿಸಿ ಸಿದ್ಧಪಡಿಸಿದ ಕಾಲ್ಪನಿಕ ಕಥೆಯಾಗಿರುವ ಸಾಧ್ಯತೆಯಿದೆ.
ಅರ್ಜುನ್ ರಾಮ್ಪಾಲ್ ಅವರು ಈ ಸರಣಿಯಲ್ಲಿ ಅತ್ಯಂತ ಗಂಭೀರವಾದ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸದ್ಯಕ್ಕೆ ಚಿತ್ರತಂಡ ಕಥೆಯ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲವಾದರೂ, ಸೋಶಿಯಲ್ ಮೀಡಿಯಾದಲ್ಲಿ ‘ಬಿಲಿಯನೇರ್’ ಬಗ್ಗೆ ಈಗಾಗಲೇ ದೊಡ್ಡ ಮಟ್ಟದ ಚರ್ಚೆಗಳು ನಡೆಯುತ್ತಿವೆ. ಅರ್ಜುನ್ ರಾಮ್ಪಾಲ್ ಮತ್ತು ಹನ್ಸಲ್ ಮೆಹ್ತಾ ಅವರ ಈ ಕಾಂಬಿನೇಷನ್ ಆದ್ದರಿಂದ ನಿರೀಕ್ಷೆ ಹೆಚ್ಚಿದೆ.
ಚೆನ್ನೈ ಸೂಪರ್ ಕಿಂಗ್ಸ್‌ನ ತವರು ಮೈದಾನವಾದ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2026 ರ ಏಳನೇ ಪಂದ್ಯದಲ್ಲಿ, ಯುವ ಬ್ಯಾಟ್ಸ್‌ಮನ್ ಆಯುಷ್ ಮ್ಹಾತ್ರೆ ಪಂಜಾಬ್ ಕಿಂಗ್ಸ್ ವಿರುದ್ಧ ಅದ್ಭುತ ಪ್ರದರ್ಶನ ನೀಡಿದರು. ಈ ಪಂದ್ಯದಲ್ಲಿ ಆಯುಷ್ ಮ್ಹಾತ್ರೆ ಕೇವಲ 29 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಅರ್ಧಶತಕದ ಹಾದಿಯಲ್ಲಿ ಅವರು ನಾಲ್ಕು ಬೌಂಡರಿ ಮತ್ತು ನಾಲ್ಕು ಸಿಕ್ಸರ್‌ಗಳನ್ನು ಬಾರಿಸಿದರು. ಅಂತಿಮವಾಗಿ ಆಯುಷ್ 43 ಎಸೆತಗಳಲ್ಲಿ 6 ಬೌಂಡರಿ ಹಾಗೂ 5 ಸಿಕ್ಸರ್ ಸಹಿತ 73 ರನ್ ಬಾರಿಸಿ ಔಟಾದರು.
ಈ ಅದ್ಭುತ ಇನ್ನಿಂಗ್ಸ್‌ನೊಂದಿಗೆ, ಆಯುಷ್ ಮ್ಹಾತ್ರೆ, ಚೆಪಾಕ್ ಕ್ರೀಡಾಂಗಣದಲ್ಲಿ ಅರ್ಧಶತಕ ಬಾರಿಸಿದ ಅತ್ಯಂತ ಕಿರಿಯ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. 18 ವರ್ಷ 261 ದಿನಗಳಲ್ಲಿ ಈ ಸಾಧನೆ ಮಾಡಿದ ಆಯುಷ್, ಈ ಹಿಂದೆ 21 ವರ್ಷ 148 ದಿನಗಳಲ್ಲಿ ಈ ಸಾಧನೆ ಮಾಡಿದ್ದ ರೈನಾ ಅವರ ದಾಖಲೆಯನ್ನು ಮುರಿದರು.
ಇದರ ಜೊತೆಗೆ 19 ವರ್ಷಕ್ಕೂ ಮೊದಲೇ ಐಪಿಎಲ್‌ನಲ್ಲಿ ಅತಿ ಹೆಚ್ಚು 50+ ಸ್ಕೋರ್ ದಾಖಲಿಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿಗೆ ಇದೀಗ ಆಯುಷ್ ಸೇರಿದ್ದಾರೆ. ಆಯುಷ್ ಇಲ್ಲಿಯವರೆಗೆ ಎರಡು ಅರ್ಧಶತಕಗಳನ್ನು ಬಾರಿಸಿದ್ದಾರೆ. ಈ ಪಟ್ಟಿಯಲ್ಲಿ ವೈಭವ್ ಸೂರ್ಯವಂಶಿ ಅಗ್ರಸ್ಥಾನದಲ್ಲಿದ್ದು, ಇದುವರೆಗೆ ಮೂರು ಅರ್ಧಶತಕಗಳನ್ನು ಬಾರಿಸಿದ್ದಾರೆ.
ಐಪಿಎಲ್ 2025 ರ ನಂತರ ಪವರ್‌ಪ್ಲೇನಲ್ಲಿ ಕನಿಷ್ಠ 100 ಎಸೆತಗಳನ್ನು ಎದುರಿಸಿದ ಬ್ಯಾಟ್ಸ್‌ಮನ್‌ಗಳಲ್ಲಿ ಆಯುಷ್ ಮ್ಹಾತ್ರೆ ಅತ್ಯುತ್ತಮ ಸ್ಟ್ರೈಕ್ ರೇಟ್ ಹೊಂದಿದ್ದಾರೆ. 183.93 ಸ್ಟ್ರೈಕ್ ರೇಟ್‌ನೊಂದಿಗೆ, ಈ ಪಟ್ಟಿಯಲ್ಲಿ ಆಯುಷ್ ಅಗ್ರಸ್ಥಾನದಲ್ಲಿದ್ದಾರೆ. ಈ ಅವಧಿಯಲ್ಲಿ ಅವರ ಸರಾಸರಿ 34.33 ಆಗಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಕಲಬುರಗಿ, (ಏಪ್ರಿಲ್ 03): ದುಷ್ಕರ್ಮಿಗಳು ಫೈನಾನ್ಸ್ ಕಚೇರಿಗೆ ನುಗ್ಗಿ ಕರ್ನಾಟಕದ ಮಾಜಿ ಸಚಿವರೊಬ್ಬರ ಸಂಬಂಧಿಯನ್ನು ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಕಲಬುರಗಿ (Kalaburagi) ನಗರದ ಪಿ ಅಂಡ್ ಟಿ ಕಾಲೋನಿಯ ವೆಂಕಟೇಶ್ವರ ಕಾಂಪ್ಲೆಕ್ಸ್ ನಲ್ಲಿ ನಡೆದಿದೆ. ಅನೀಲ್ ರಾಠೋಡ್ (45)ಕೊಲೆಯಾದ ವ್ಯಕ್ತಿ. ಈ ಅನಿಲ್ ರಾಠೋಡ್, ಕಲಬುರಗಿಯ ಸಿದ್ದೇಶ್ವರ ಬಡಾವಣೆಯ ನಿವಾಸಿಯಾಗಿದ್ದು, ಪಿ ಆ್ಯಂಡ್ ಟಿ ಕಾಲೋನಿಯ ವೆಂಕಟೇಶ್ವರ್ ಕಾಂಪ್ಲೆಕ್ಸ್ನಲ್ಲಿ ಫೈನಾನ್ಸ್ ಇಟ್ಟುಕೊಂಡಿದ್ದ. ಮೇಲಾಗಿ ಮಾಜಿ ಸಚಿವ ರೇವು ನಾಯಕ್ ಬೆಳಮಗಿಯ ಸಂಬಂಧಿ. ಆದ್ರೆ, ನಿನ್ನೆ (ಏಪ್ರಿಲ್ 02) ರಾತ್ರಿ ತನ್ನ ಫೈನಾನ್ಸ್ನಲ್ಲಿ ಕುಳಿತಿದ್ದಾಗ, ಆಟೋದಲ್ಲಿ ಬಂದಿದ್ದ ಮೂವರು ದುಷ್ಕರ್ಮಿಗಳು ಹಣಕಾಸಿನ ವಿಚಾರಕ್ಕೆ ಗಲಾಟೆ ಮಾಡಿದ್ದಾರೆ. ಬಳಿಕ ಮೂವರೂ ಸೇರಿಕೊಂಡು ಮಾರಕಾಸ್ತ್ರಗಳಿಂದ ಅಟ್ಯಾಕ್ ಮಾಡಿ ಅನಿಲ್ನನ್ನ ಬರ್ಬರವಾಗಿ ಕೊಚ್ಚಿ ಕೊಂದು ಎಸ್ಕೇಪ್ ಆಗಿದ್ದಾರೆ. ಕೊಟ್ಟ ಹಣ ವಾಪಸ್ ಕೇಳಿದ್ದಕ್ಕೆ ಕೊಲೆ ಮಾಡಿದ್ದಾರೆ ಎಂದು ತಂದೆ ಆರೋಪಿಸಿದ್ದಾರೆ.
ಕಲಬುರಗಿಯ ಸಿದ್ದೇಶ್ವರ ಬಡವಾಣೆ ನಿವಾಸಿಯಾಗಿರೋ ಅನಿಲ್ ರಾಠೋಡ್, ಫೈನಾನ್ಸ್ ವ್ಯವಹಾರ ನಡೆದುಕೊಂಡು ಹೋಗುತ್ತಿದ್ದರು. ನಗರದ ಪಿ ಅಂಡ್ ಟಿ ಕಾಲೋನಿಯ ವೆಂಕಟೇಶ್ವರ ಕಾಂಪ್ಲೆಕ್ಸ್ ನಲ್ಲಿ ಫೈನಾನ್ಸ್ ಕಚೇರಿಗೆ ಕಳೆದ ರಾತ್ರಿ ಆಟೋದಲ್ಲಿ ಬಂದ ಮೂವರು ದುಷ್ಕರ್ಮಿಗಳು, ಕಚೇರಿಯಲ್ಲಿ ಕುಂತಿದ್ದ ಅನಿಲ್ ರಾಠೋಡ್ ಜೊತೆ ಜಗಳ ತೆಗೆದಿದ್ದಾರೆ. ಜಗಳ ವಿಕೋಪಕ್ಕೆ ಹೋಗಿದ್ದು, ಈ ವೇಳೆ ಮೂವರು ಸೇರಿಕೊಂಡು ಮಾರಕಾಸ್ತ್ರಗಳಿಂದ ಅನಿಲ್ ರಾಠೋಡ್‌ರನ್ನ ಮನಬಂದಂತೆ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.
ಇನ್ನೂ ಹಣಕಾಸಿನ ವಿಚಾರಕ್ಕೆ ನಮ್ಮ ಮಗನನ್ನ ಕೊಲೆ ಮಾಡಿರುವ ಅನುಮಾನ ಇದೆ. ಸಾಲ ಪಡೆದವರೇ ಕೊಲೆ ಮಾಡಿದ್ದಾರೆ ಎಂದು ಮೃತನ ಪೋಷಕರು ಹೇಳಿದ್ದಾರೆ. ಇನ್ನೂ ಅನಿಲ್‌ಗೆ ಜೀವ ಬೆದರಿಕೆ ಇತ್ತು. ಈ ಬಗ್ಗೆ ನಮ್ಮ ಬಳಿಯು ಸಹ ಆತ ಹೇಳಿಕೊಂಡಿದ್ದ. ಆದರೆ ಈ ರೀತಿಯಾಗಿ ಕೊಲೆ ಮಾಡುತ್ತಾರೆ ಎಂದು ನಾವು ಊಹಿಸಿರಲಿಲ್ಲ ಎಂದು ಕುಟುಂಬಸ್ಥರು ಕಣ್ಣೀರಿಟ್ಟಿದ್ದಾರೆ.
ಇನ್ನೂ ದುಷ್ಕರ್ಮಿಗಳು ಏಕಾಏಕಿ ಮಾರಕಾಸ್ತ್ರಗಳಿಂದ ಅಟ್ಯಾಕ್ ಮಾಡುತ್ತಿದ್ದಂತೆಯೇ ಅನಿಲ್ ರಾಠೋಡ್ ಓಡಿಹೋಗಲು ಯತ್ನಿಸಿದ್ದು, ಈ ವೇಳೆ ಫೈನಾನ್ಸ್ ಕಚೇರಿ ಬಾಗಿಲು ಮುಂದೆಯೇ ಕೊಚ್ಚಿ ಹಾಕಿದ್ದಾರೆ. ಇನ್ನೂ ಘಟನೆ ಸುದ್ದಿ ತಿಳಿಯುತ್ತಿದ್ದಂತೆಯೇ ಕಲಬುರಗಿ ನಗರ ಪೊಲೀಸ್ ಆಯುಕ್ತ ಡಾ ಶರಣಪ್ಪ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಮತ್ತು ಶ್ವಾನದಳ, ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಹಂತಕರ ಬಂಧನಕ್ಕೆ ನಗರ ಪೊಲೀಸ್ ಆಯುಕ್ತರು ಮೂರು ವಿಶೇಷ ತಂಡಗಳನ್ನ ರಚಿಸಿದ್ದಾರೆ.
ರೇವುನಾಯಕ್ ಬೆಳಮಗಿ ಹೇಳಿದ್ದೇನು?
ಇನ್ನೂ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಾಜಿ ಸಚಿವ ರೇವುನಾಯಕ್ ಬೆಳಮಗಿ, ಕೆಲ ವರ್ಷಗಳ ಹಿಂದೆ ನಮ್ಮ ಸಂಬಂಧಿಯನ್ನ ಕಟ್ಟಡ ಮೇಲಿಂದ ತಳ್ಳಿ ಹತ್ಯೆ ಮಾಡಲಾಗಿತ್ತು. ಇದೀಗ ದುಷ್ಕರ್ಮಿಗಳು ಫೈನಾನ್ಸ್‌ಗೆ ನುಗ್ಗಿ ನಮ್ಮ ಅಳಿಯನನ್ನೇ ಹತ್ಯೆ ಮಾಡಿದ್ದು, ಕೂಡಲೇ ಪೊಲೀಸರು ಹಂತಕರನ್ನ ಬಂಧಿಸಬೇಕೆಂದು ಆಗ್ರಹಿಸಿದ್ದಾರೆ. ಸದ್ಯ ಈ ಬಗ್ಗೆ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಬಳಿಕವಷ್ಟೇ ಮಾಜಿ ಸಚಿವರ ಅಳಿಯನ ಹತ್ಯೆಗೆ ನಿಖರ ಕಾರಣ ತಿಳಿದು ಬರಲಿದೆ.
ಒಟ್ಟಿನಲ್ಲಿ ಕಲಬುರಗಿಯಲ್ಲಿ ಮೇಲಿಂದ ಮೇಲೆ ನಡೆಯುತ್ತಿರುವ ಕೊಲೆಗಳಿಂದ ಸಾರ್ವಜನಿಕರು ಅಕ್ಷರಶಃ ಬೆಚ್ಚಿಬಿದ್ದಿದ್ದಾರೆ.
ಪುದುಚೇರಿ, ಏಪ್ರಿಲ್ 3: ಏಪ್ರಿಲ್ 9ರಂದು ನಡೆಯಲಿರುವ ವಿಧಾನಸಭಾ ಚುನಾವಣೆಗೂ (Assembly Elections 2026) ಮುನ್ನ ಎನ್ಡಿಎ (NDA)ಗೆ ಬೆಂಬಲ ಕೋರಿ ಪ್ರಧಾನಿ ನರೇಂದ್ರ ಮೋದಿ ಇಂದು ಪುದುಚೇರಿಯಲ್ಲಿ ಬೃಹತ್ ರೋಡ್ ಶೋ ನಡೆಸಿದರು. ಪ್ರಧಾನಿ ಮೋದಿಯೊಂದಿಗೆ ಮುಖ್ಯಮಂತ್ರಿ ಎನ್. ರಂಗಸಾಮಿ ಮತ್ತು ಕೇಂದ್ರಾಡಳಿತ ಪ್ರದೇಶದ ಗೃಹ ಸಚಿವ ಎ ನಮಶ್ಶಿವಾಯಂ ಕೂಡ ಭಾಗವಹಿಸಿದ್ದರು. ಸುಮಾರು 2 ಕಿಲೋಮೀಟರ್ ದೂರ ಭವ್ಯ ರೋಡ್ ಶೋ ನಡೆಯಿತು.
ಭಾರತೀಯ ಜನತಾ ಪಕ್ಷ (BJP) ಮತ್ತು ಅಖಿಲ ಭಾರತ ಎನ್ಆರ್ ಕಾಂಗ್ರೆಸ್ (AINRC) ಧ್ವಜಗಳನ್ನು ಬೀಸುತ್ತಾ ಜನರು ರೋಡ್ ಶೋ ನೋಡಲು ಜಮಾಯಿಸಿದ್ದರು. ಪ್ರಧಾನಿ ಮೋದಿ ಪುದುಚೇರಿಗೆ ಆಗಮಿಸಿದಾಗ ಬಿಜೆಪಿ ಬೆಂಬಲಿಗರಿಂದ ಅದ್ದೂರಿ ಸ್ವಾಗತ ದೊರೆಯಿತು. ಅನೇಕರು ‘ಜೈ ಶ್ರೀ ರಾಮ್’ ಮತ್ತು ‘ಭಾರತ್ ಮಾತಾ ಕಿ ಜೈ’ ಮುಂತಾದ ಘೋಷಣೆಗಳನ್ನು ಕೂಗಿದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಬಳ್ಳಾರಿ, ಏಪ್ರಿಲ್ 03: ಕರ್ತವ್ಯ ನಿರತ ಅಧಿಕಾರಿ ಮೇಲೆ ಪಾಲಿಕೆ ಸದಸ್ಯನಿಂದ ಹಲ್ಲೆ ಮಾಡಿರುವಂತಹ ಘಟನೆ ನಗರದಲ್ಲಿ ನಡೆದಿದೆ. ಫುಟ್ಪಾತ್ ಮೇಲೆ ಇದ್ದ ಶೆಡ್ ತೆರವು ವಿಳಂಬ ಹಿನ್ನೆಲೆ ಬಳ್ಳಾರಿ ಪಾಲಿಕೆಯ 39ನೇ ವಾರ್ಡ್ನ ಕಾಂಗ್ರೆಸ್ ಸದಸ್ಯ ವಿ. ಕುಬೇರ, ಪಾಲಿಕೆಯ ಎಇಇ ವೀರೇಶ್ ಮೇಲೆ ಹಲ್ಲೆ ಮಾಡಿದ್ದಾರೆ. ಇನ್ನು ಈ ಬಗ್ಗೆ ಕಮಿಷನರ್ ಮಾತನಾಡಿದ್ದು, ಸಾರ್ವಜನಿಕ ಪ್ರತಿನಿಧಿಗಳು ಗೌರವ ಕಾಪಾಡಿಕೊಳ್ಳದೆ ಇಂತಹ ಅಮಾನವೀಯ ಕೃತ್ಯ ನಡೆಸಿರುವುದು ಖಂಡನೀಯ ಎಂದಿದ್ದಾರೆ. ಘಟನೆ ಕುರಿತು ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಲಾಗುವುದು ಎಂದಿದ್ದಾರೆ.
ಶೀಘ್ರದಲ್ಲೇ ಬಿಡುಗಡೆ ಆಗಲಿರುವ ‘ಮೃತ್ಯದೇವತೆ’ (Mruthyu Devathe) ಸಿನಿಮಾದಲ್ಲಿ ಸಾರಿಕಾ, ವಿನಯಾ ಪ್ರಸಾದ್, ನವೀನ್ ಮಹದೇವ, ಹಿಮಶ್ರೀ, ಡಯಾನಾ, ಸೂರ್ಯ, ಪವನ್, ವರ್ಷಿತಾ, ಮಾಹಿನ್ ಕುಬೇರ ಮುಂತಾದವರು ನಟಿಸಿದ್ದಾರೆ. ಚಿತ್ರಕ್ಕೆ ಅನಿರುದ್ಧ್ ಛಾಯಾಗ್ರಹಣ, ಶಿವಪ್ರಸಾದ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಇತ್ತೀಚೆಗೆ ಈ ಸಿನಿಮಾದ ಹಾಡುಗಳ ಬಿಡುಗಡೆ ಕಾರ್ಯಕ್ರಮ ನಡೆಯಿತು. ‘ಮೃತ್ಯದೇವತೆ’ ಚಿತ್ರಕ್ಕೆ ನವೀನ್ ಮಹದೇವ ಅವರು ನಿರ್ದೇಶನ ಮಾಡಿದ್ದಾರೆ. ಅವರೇ ಕಥೆ-ಚಿತ್ರಕಥೆ ಬರೆದು ಮುಖ್ಯ ಪಾತ್ರದಲ್ಲೂ ನಟಿಸಿದ್ದಾರೆ.
ರಘು ಅವರ ನೃತ್ಯ ನಿರ್ದೇಶನ, ಅಲ್ಟಿಮೇಟ್ ಶಿವು ಮತ್ತು ಚಿಟ್ಟ ಜಾಧವ್ ಅವರ ಸಾಹಸ ನಿರ್ದೇಶನ ಈ ಸಿನಿಮಾಗಿದೆ. ವಿಕ್ರಮಾದಿತ್ಯ ಅವರು ಸಂಕಲನದ ಜವಾಬ್ದಾರಿ ನಿಭಾಯಿಸಿದ್ದಾರೆ. ಈ ಸಿನಿಮಾವನ್ನು ನವೀನ್ ಮಹದೇವ್ ಅವರ ಪತ್ನಿ ಸರಸ್ವತಿ ಅವರು ‘ವರ್ಷಿತಾ ಪ್ರೊಡಕ್ಷನ್ಸ್’ ಮೂಲಕ ನಿರ್ಮಾಣ ಮಾಡಿದ್ದಾರೆ. ಚಿತ್ರದ ಕೆಲಸಗಳು ಪೂರ್ಣವಾಗಿ ಮುಗಿದಿದೆ. ಸೆನ್ಸಾರ್ ಪ್ರಕ್ರಿಯೆ ಬಾಕಿ ಇದೆ.
‘ಮೃತ್ಯದೇವತೆ’ ಸಿನಿಮಾದ ‘ಕಾಳಿ’ ಮತ್ತು ‘ಮಹದೇವ’ ಹಾಡುಗಳ ಜೊತೆ ಟ್ರೇಲರ್ ಸಹ ಬಿಡುಗಡೆ ಆಗಿದೆ. ಕೆ. ರಮೇಶ್ ಅವರು ಟ್ರೇಲರ್ ಬಿಡುಗಡೆ ಮಾಡಿದರೆ, ಶ್ರೀನಿವಾಸ್ ಅವರು ‘ಮಹಾದೇವ’ ಹಾಡನ್ನು ರಿಲೀಸ್ ಮಾಡಿದರು. ಹಿರಿಯ ನಟಿ ವಿನಯಾ ಪ್ರಸಾದ್ ಅವರು ‘ಕಾಳಿ’ ಹಾಡಿನ ಮೇಕಿಂಗ್ ವೀಡಿಯೋ ಬಿಡುಗಡೆ ಮಾಡಿ ಶುಭ ಹಾರೈಸಿದರು.
ಈ ವೇಳೆ ನಿರ್ದೇಶಕ ನವೀನ್ ಮಹಾದೇವ್ ಅವರು ಮಾತನಾಡಿದರು. ‘ಹೆಣ್ಮಕ್ಕಳು ಬುದ್ಧಿವಂತರಾದರೂ, ಓದಿಕೊಂಡಿದ್ದರೂ ಕೆಲವೊಮ್ಮೆ ಗೊತ್ತಿಲ್ಲದೆ ಯಾವುದೋ ಬಲೆಗೆ ಬೀಳುತ್ತಾರೆ. ಅದನ್ನು ಈ ಚಿತ್ರದಲ್ಲಿ ಹೇಳುವ ಪ್ರಯತ್ನ ಮಾಡಿದ್ದೇನೆ. ತೊಂದರೆ ಅತಿರೇಕಕ್ಕೆ ಹೋದಾಗ ಹುಡುಗಿ ಮೃತ್ಯದೇವತೆ ಅವತಾರ ತಾಳುತ್ತಾಳೆ. ಅದೇ ಈ ಚಿತ್ರದ ಕಥಾವಸ್ತು. ಡಾ. ರಾಜ್ಕುಮಾರ್ ಹುಟ್ಟುಹಬ್ಬದ ಪ್ರಯುಕ್ತ ಬಿಡುಗಡೆ ಮಾಡುವ ಯೋಚನೆ ಇದೆ’ ಎಂದು ಅವರು ಹೇಳಿದರು.
ಇದನ್ನೂ ಓದಿ:
ನಟಿ ಸಾರಿಕಾ ಅವರು ಈ ಚಿತ್ರದಲ್ಲಿ ಆರತಿ ಎಂಬ ಪಾತ್ರ ಮಾಡಿದ್ದಾರೆ. ಮೊದಲ ಬಾರಿಗೆ ಫೈಟಿಂಗ್ ಮಾಡಿರುವ ಖುಷಿ ಅವರಿಗೆ ಇದೆ. ವಿನಯಾ ಪ್ರಸಾದ್ ಜೊತೆ ಕೆಲಸ ಮಾಡಿ ಬಹಳಷ್ಟು ಕಲಿತಿರುವುದಾಗಿ ಅವರು ಹೇಳಿದ್ದಾರೆ. ಚಿತ್ರತಂಡದ ಶ್ರಮ ಮತ್ತು ಒಗ್ಗಟ್ಟನ್ನು ವಿನಯಾ ಪ್ರಸಾದ್ ಅವರು ಹೊಗಳಿದರು. ಈ ಸಿನಿಮಾದಲ್ಲಿ ನಟಿ ಹಿಮಶ್ರೀ ಅವರು ಮೇಕಪ್ ಇಲ್ಲದೇ ಅಭಿನಯಿಸಿದ್ದಾರೆ. ಹಳ್ಳಿ ಹುಡುಗಿಯ ಪಾತ್ರವನ್ನು ಅವರು ನಿಭಾಯಿಸಿದ್ದಾರೆ.
ರಾಜಸ್ಥಾನ್ ರಾಯಲ್ಸ್ ವಿರುದ್ಧದ ತನ್ನ ಮೊದಲ ಪಂದ್ಯವನ್ನು ಹೀನಾಯವಾಗಿ ಸೋತಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಇಂದು ತನ್ನ ತವರು ಮೈದಾನವಾದ ಎಂಎ ಚಿದಂಬರಂ ಮೈದಾನದಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಎದುರಿಸಿದೆ. ಈ ಪಂದ್ಯದಲ್ಲಿ ಟಾಸ್ ಸೋತ ಸಿಎಸ್ಕೆ ಮೊದಲು ಬ್ಯಾಟಿಂಗ್ ಮಾಡುತ್ತಿದೆ. ಆದಾಗ್ಯೂ ತಂಡಕ್ಕೆ ಉತ್ತಮ ಆರಂಭ ಸಿಕ್ಕಿಲ್ಲ.
ಎಂದಿನಂತೆ ಈ ಪಂದ್ಯದಲ್ಲೂ ಸಂಜು ಸ್ಯಾಮ್ಸನ್ ಹಾಗೂ ರುತುರಾಜ್ ಗಾಯಕ್ವಾಡ್ ಸಿಎಸ್ಕೆ ಪರ ಇನ್ನಿಂಗ್ಸ್ ಆರಂಭಿಸಿದರು. ರಾಜಸ್ಥಾನ್ ವಿರುದ್ಧದ ಪಂದ್ಯದಲ್ಲಿ 7 ಎಸೆತಗಳನ್ನು ಎದುರಿಸಿ ಕೇವಲ 6 ರನ್ಗಳಿಗೆ ಔಟಾಗಿದ್ದ ಸಂಜು, ಈ ಪಂದ್ಯದಲ್ಲಿ ಅಬ್ಬರಿಸಲಿ ಎಂದು ಅಭಿಮಾನಿಗಳು ಆಶಿಸಿದ್ದರು. ಆದರೆ ಈ ಪಂದ್ಯದಲ್ಲೂ ಸಂಜು ಪ್ರದರ್ಶನ ಸಪ್ಪೆಯಾಗಿತ್ತು.
ಈ ಪಂದ್ಯದಲ್ಲೂ 7 ಎಸೆತಗಳನ್ನು ಎದುರಿಸಿದ ಸಂಜು, ಕಳೆದ ಪಂದ್ಯಕ್ಕಿಂತ ಒಂದು ರನ್ ಹೆಚ್ಚಿಗೆ ಬಾರಿಸಿ ಅಂದರೆ 7 ರನ್ ಬಾರಿಸಿ ವಿಕೆಟ್ ಕೀಪರ್ಗೆ ಕ್ಯಾಚಿತ್ತು ಔಟಾದರು. ಸಂಜು ಅವರ ಇನ್ನಿಂಗ್ಸ್ನಲ್ಲಿ ಕೇವಲ 1 ಬೌಂಡರಿ ಮಾತ್ರ ಸೇರಿತ್ತು. ಸಂಜು ಬೇಗನೇ ಔಟಾದ ಕಾರಣ ಸಿಎಸ್ಕೆ ತಂಡ 14 ರನ್ಗಳಿಗೆ ತನ್ನ ಮೊದಲ ವಿಕೆಟ್ ಕಳೆದುಕೊಂಡಿತು.
ಸಂಜು ಸ್ಯಾಮ್ಸನ್ ಅವರ ವಿಕೆಟ್ ಬೇಗನೇ ಪತನವಾದರೂ ಆ ಬಳಿಕ ಜೊತೆಯಾಗಿರುವ ನಾಯಕ ರುತುರಾಜ್ ಹಾಗೂ ಯುವ ಬ್ಯಾಟ್ಸ್‌ಮನ್ ಆಯುಷ್ ಮ್ಹಾತ್ರೆ ತಂಡವನ್ನು ಶತಕದ ಗಡಿ ದಾಟಿಸಿದ್ದಾರೆ. ಇವರಿಬ್ಬರ ಜೊತೆಯಾಟದಿಂದಾಗಿ ಸಿಎಸ್ಕೆ ಕೇವಲ 10 ಓವರ್ಗಳಲ್ಲಿ 100 ರನ್ ಕಲೆಹಾಕಿದೆ.
ಸಿಎಸ್ಕೆ ಪರ ಅಬ್ಬರದ ಇನ್ನಿಂಗ್ಸ್ ಆಡಿರುವ ಆಯುಷ್ ಮ್ಹಾತ್ರೆ ತಮ್ಮ ಐಪಿಎಲ್ ವೃತ್ತಿಜೀವನದ ಎರಡನೇ ಅರ್ಧಶತಕವನ್ನು ಸಹ ಪೂರೈಸಿದ್ದಾರೆ. ಕ್ರೀಸ್ಗೆ ಬಂದಾಗಿನಿಂದ ಅಬ್ಬರದ ಇನ್ನಿಂಗ್ಸ್ ಆಡಿರುವ ಆಯುಷ್ ಕೇವಲ 29 ಎಸೆತಗಳಲ್ಲಿ ತಮ್ಮ ಅರ್ಧಶತಕ ಪೂರೈಸಿದರು. ಆಯುಷ್ ತಮ್ಮ ಇನ್ನಿಂಗ್ಸ್ನಲ್ಲಿ ಇದುವರೆಗೆ 5 ಸಿಕ್ಸರ್ ಹಾಗೂ 4 ಬೌಂಡರಿಗಳನ್ನು ಬಾರಿಸಿದ್ದಾರೆ.
ಜೈಪುರ, ಏಪ್ರಿಲ್ 3: ರಾಜಸ್ಥಾನದ ಜೈಪುರದ ಹಲವಾರು ಭಾಗಗಳಲ್ಲಿ ಭಾರೀ ಮಳೆ (Rain Updates) ಮತ್ತು ಆಲಿಕಲ್ಲು ಮಳೆಯಾಗಿದ್ದು, ಹಠಾತ್ ಹವಾಮಾನ ವೈಪರೀತ್ಯ ಉಂಟಾಗಿದೆ. ಭಾರತೀಯ ಹವಾಮಾನ ಇಲಾಖೆಯು ಈ ಪ್ರದೇಶದಲ್ಲಿ ಗುಡುಗು, ಮಿಂಚು ಮತ್ತು ಬಿರುಗಾಳಿಗಳ ಎಚ್ಚರಿಕೆಯನ್ನು ಹಳದಿ ಅಲರ್ಟ್ ನೀಡಿದೆ. ಮುಂದಿನ 2 ದಿನಗಳವರೆಗೆ ಬಿರುಗಾಳಿ ಮತ್ತು ಮಳೆಯ ಎಚ್ಚರಿಕೆಯನ್ನು ನೀಡಲಾಗಿದೆ. ಮುಂದಿನ 2 ದಿನಗಳವರೆಗೆ ರಾಜ್ಯದ ಹೆಚ್ಚಿನ ಜಿಲ್ಲೆಗಳಲ್ಲಿ ಬಲವಾದ ಗಾಳಿ, ಮಳೆ ಮತ್ತು ಆಲಿಕಲ್ಲು ಮಳೆಯಾಗುವ ಸಾಧ್ಯತೆಯಿದೆ. ಹವಾಮಾನ ಇಲಾಖೆ ಇಂದು 7 ಜಿಲ್ಲೆಗಳಲ್ಲಿ ಗುಡುಗು ಮತ್ತು ಮಳೆಯ ಎಚ್ಚರಿಕೆಯನ್ನು ನೀಡಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ನಿಮಗೆ ತಿಳಿದಿರಬಹುದು, ಪ್ಲೇಟ್‌ಲೆಟ್‌ಗಳು (Low Platelet) ನಮ್ಮ ದೇಹದ ರಕ್ತದಲ್ಲಿ ಇರುವ ಸಣ್ಣ ಕೋಶಗಳಾಗಿದ್ದು, ರಕ್ತಸ್ರಾವವನ್ನು ತಡೆಯುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ದೇಹದಲ್ಲಿ ಗಾಯವಾದಾಗ, ಈ ಪ್ಲೇಟ್‌ಲೆಟ್‌ಗಳು ಆ ಸ್ಥಳದಲ್ಲಿ ಸೇರಿ ರಕ್ತದ ಗಡ್ಡೆ (clot) ರೂಪಿಸಿ ರಕ್ತಸ್ರಾವವನ್ನು ನಿಲ್ಲಿಸುತ್ತವೆ. ಸಾಮಾನ್ಯವಾಗಿ ಆರೋಗ್ಯವಂತ ವ್ಯಕ್ತಿಯ ದೇಹದಲ್ಲಿ ಪ್ಲೇಟ್‌ಲೆಟ್‌ಗಳ ಸಂಖ್ಯೆ ಪ್ರತಿ ಮೈಕ್ರೋಲೀಟರ್ ರಕ್ತದಲ್ಲಿ 1.5 ಲಕ್ಷದಿಂದ 4.5 ಲಕ್ಷದವರೆಗೆ ಇರುತ್ತದೆ. ಇದು 1.5 ಲಕ್ಷಕ್ಕಿಂತ ಕಡಿಮೆಯಾದರೆ ಅದು ಅಪಾಯದ ಸೂಚನೆ. 50 ಸಾವಿರಕ್ಕಿಂತ ಕಡಿಮೆಯಾದರೆ ಗಂಭೀರ ಎಂದು ಪರಿಗಣಿಸಲಾಗುತ್ತದೆ. 20 ಸಾವಿರಕ್ಕಿಂತ ಕಡಿಮೆಯಾದರೆ ಒಳಾಂಗಿಕ ರಕ್ತಸ್ರಾವದ ಅಪಾಯ ಹೆಚ್ಚುತ್ತದೆ, ಇದು ಜೀವಕ್ಕೆ ಅಪಾಯಕಾರಿಯೂ ಆಗಬಹುದು. ದೀರ್ಘಕಾಲ ಪ್ಲೇಟ್‌ಲೆಟ್‌ಗಳ ಕೊರತೆ ಇದ್ದರೆ ಸಣ್ಣ ಗಾಯವೂ ದೊಡ್ಡ ಸಮಸ್ಯೆಯಾಗಬಹುದು. ಆದರೆ ನಿಮಗೆ ಈ ರೀತಿ ಆಗುವುದಕ್ಕೆ ಕಾರಣವೇನು, ಪ್ಲೇಟ್‌ಲೆಟ್‌ಗಳ ಕೊರತೆಯಾದಾಗ ಕಂಡುಬರುವ ಲಕ್ಷಣಗಳು ಹೇಗಿರುತ್ತವೆ ಎಂಬುದು ತಿಳಿದಿದೆಯೇ, ಈ ಬಗ್ಗೆ ಸಂಪೂರ್ಣ ಮಾಹಿತಿ ಸ್ಟೋರಿಯಲ್ಲಿದೆ.
ಪ್ಲೇಟ್‌ಲೆಟ್ ಕಡಿಮೆಯಾಗಲು ಕಾರಣವಾಗುವ ರೋಗಗಳು:
ವೈರಲ್ ಸೋಂಕುಗಳಾದ ಡೆಂಗ್ಯೂ, ಚಿಕನ್‌ಗುನ್‌ಯಾ ಮತ್ತು ಮಲೇರಿಯಾ
ಟೈಫಾಯ್ಡ್ ಮತ್ತು ವೈರಲ್ ಜ್ವರ
ಲೀವರ್ ಸಮಸ್ಯೆಗಳು ಅದರಲ್ಲಿಯೂ ಸಿರೋಸಿಸ್ ಸಮಸ್ಯೆ
ಬೋನ್ ಮ್ಯಾರೋ ಸಮಸ್ಯೆಗಳು
ಕ್ಯಾನ್ಸರ್ ಮತ್ತು ಕೀಮೋಥೆರಪಿ
ಆಟೋಇಮ್ಯೂನ್ ರೋಗಗಳು
ಈ ರೋಗಗಳಲ್ಲಿ ಸಮಯಕ್ಕೆ ಸರಿಯಾಗಿ ಪರೀಕ್ಷೆ ಮತ್ತು ಚಿಕಿತ್ಸೆ ಪಡೆಯುವುದು ಅತ್ಯಂತ ಮುಖ್ಯ.
ಪ್ಲೇಟ್‌ಲೆಟ್‌ಗಳ ಕೊರತೆಯಾದಾಗ ಕಂಡುಬರುವ ಲಕ್ಷಣಗಳು:
ಬೇಗ ಗಾಯವಾಗುವುದು
ರಕ್ತಸ್ರಾವ ಬೇಗ ನಿಲ್ಲದಿರುವುದು
ಚರ್ಮದ ಮೇಲೆ ಕೆಂಪು ಅಥವಾ ನೇರಳೆ ಚುಕ್ಕೆಗಳು ಕಂಡುಬರುವುದು
ಮೂಗು ಅಥವಾ ಹಲ್ಲಿನ ಮಸೂರಿನಿಂದ ರಕ್ತಸ್ರಾವ
ಮಹಿಳೆಯರಲ್ಲಿ ಪೀರಿಯಡ್ಸ್ ಸಮಯದಲ್ಲಿ ಹೆಚ್ಚು ರಕ್ತಸ್ರಾವ
ದಣಿವು, ದುರ್ಬಲತೆ ಮತ್ತು ತಲೆಸುತ್ತು
ಈ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಅಗತ್ಯ.
ಪೌಷ್ಟಿಕ ಆಹಾರ ಸೇವಿಸಿ (ಹಸಿರು ತರಕಾರಿಗಳು, ಹಣ್ಣುಗಳು, ಪ್ರೋಟೀನ್)
ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯಿರಿ
ಜ್ವರ ಅಥವಾ ದುರ್ಬಲತೆಯನ್ನು ನಿರ್ಲಕ್ಷಿಸಬೇಡಿ
ವೈದ್ಯರ ಸಲಹೆಯಿಲ್ಲದೆ ಔಷಧಿ ಸೇವಿಸಬೇಡಿ
ಒಟ್ಟಿನಲ್ಲಿ, ಪ್ಲೇಟ್‌ಲೆಟ್‌ಗಳ ಪ್ರಮಾಣ ದೇಹದ ಆರೋಗ್ಯಕ್ಕೆ ಬಹಳ ಮುಖ್ಯ. ಯಾವುದೇ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ, ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಪಡೆಯುವುದು ಅತ್ಯಗತ್ಯ.