ಅನ್ಯಕೋಮಿನ ಯುವಕನೊಂದಿಗೆ ಹಿಂದೂ ಯುವತಿ ಪರಾರಿ: ವಿದೇಶದಿಂದ ಬಂದ ತಂದೆ, ಮಗಳಿಗಾಗಿ ಕಣ್ಣೀರು – Kannada News | Mangaluru: Hindu Young girl Escaped With other religion boy Case: her father came from abroad, sheds tears for daughter
ಮಂಗಳೂರು, ಫೆಬ್ರವರಿ 11: 23 ವರ್ಷದ ವೈಶಾಲಿ ಮನೆಯಲ್ಲಿ ಎಲ್ಲರಿಗೂ ಮುದ್ದು ಮಗಳು. ಓದಿ ಒಳ್ಳೆಯ ಕೆಲಸಕ್ಕೆ ಸೇರಬೇಕು ಎನ್ನುವ ಆಸೆಗೆ ತಕ್ಕಂತೆ ಪೋಷಕರು (parents) ಆಕೆಯನ್ನು ಕ್ರಿಮಿನಾಲಜಿಯಲ್ಲಿ ಡಿಗ್ರಿ ಓದಿಸುತ್ತಿದ್ದರು. ಆದರೆ ಓದಿ ಕೆಲಸ ಹಿಡಿಯಬೇಕಾದ ಮಗಳು ಅನ್ಯಕೋಮಿಯ ಯುವಕನೊಂದಿಗೆ ಪರಾರಿಯಾಗಿದ್ದಾಳೆ. ಇತ್ತ ಪೋಷಕರು ಮಗಳೇ ವಾಪಾಸ್ ಮನೆಗೆ ಬಾ ಅಂತಾ ಕಣ್ಣೀರಿಟ್ಟಿದ್ದಾರೆ. ವೈಶಾಲಿ ಮಂಗಳೂರಿನ ಸುರತ್ಕಲ್ ಬಳಿಯ ಮುಕ್ಕಾದ ಕಾಲೇಜ್ ಒಂದರಲ್ಲಿ ಓದುತ್ತಿರುವ ಕ್ರಿಮಿನಾಲಜಿ ಪದವಿ ವಿದ್ಯಾರ್ಥಿನಿ. ಮೂಲತಃ ಕೇರಳದ ಕಾಸರಗೋಡು ಜಿಲ್ಲೆಯವರು. ಇನ್ನು…