Category Archives: Blog

Your blog category

ಭಾರತ ಮಾರಾಟಕ್ಕಿಲ್ಲ; ರಾಹುಲ್ ಗಾಂಧಿ ವಿರುದ್ಧ ಹಕ್ಕುಚ್ಯುತಿ ನೋಟಿಸ್ ನೀಡುವುದಾಗಿ ಕಿರಣ್ ರಿಜಿಜು ಎಚ್ಚರಿಕೆ – Kannada News | India Not For Sale Minister Kiren Rijiju Warns Of Privilege Notice against Rahul Gandhi over Lok Sabha Speech

ನವದೆಹಲಿ, ಫೆಬ್ರವರಿ 11: ಲೋಕಸಭಾ ಅಧಿವೇಶನದಲ್ಲಿ ಇಂದು (ಬುಧವಾರ) ಭಾಷಣದ ವೇಳೆ ಭಾರತ-ಯುಎಸ್ ವ್ಯಾಪಾರ ಒಪ್ಪಂದದ ಕುರಿತು ಕಾಂಗ್ರೆಸ್ ಸಂಸದ ಹಾಗೂ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ (Rahul Gandhi) ಮೋದಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದರು. ಈ ಹೇಳಿಕೆಗೆ ಸಂಬಂಧಿಸಿದಂತೆ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ನಡುವೆ ಮಾತಿನ ಚಕಮಕಿ ನಡೆಯಿತು.

ಅಮೆರಿಕದ ಒತ್ತಡಕ್ಕೆ ಮೋದಿ ಸರ್ಕಾರ ಶರಣಾಗಿದೆ. ಮೋದಿ ಸರ್ಕಾರ ಅಮೆರಿಕಕ್ಕೆ ಭಾರತ ಮಾತೆಯನ್ನು ಮಾರಾಟ ಮಾಡಿದ್ದಾರೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ. ಇದಕ್ಕೆ ಸರ್ಕಾರದ ಕಡೆಯಿಂದ ಮತ್ತು ಸ್ಪೀಕರ್ ಅವರಿಂದ ವಿರೋಧ ವ್ಯಕ್ತವಾಯಿತು. ಸದನದ ನಿಯಮಗಳನ್ನು ಉಲ್ಲಂಘಿಸಿದ್ದಕ್ಕೆ ಸದನದಲ್ಲಿ ಗದ್ದಲ ಭುಗಿಲೆದ್ದಿತು.

ಇದನ್ನೂ ಓದಿ: ಭಾರತ ಮಾತೆಯನ್ನು ಮಾರಲು ನಿಮಗೆ ನಾಚಿಕೆಯಾಗುವುದಿಲ್ಲವೇ? ಮೋದಿ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ಈ ವೇಳೆ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ ಕೇಂದ್ರ ಸಚಿವ ಕಿರಣ್ ರಿಜಿಜು, “ನೀವು ಯಾವುದೇ ಪುರಾವೆಗಳಿಲ್ಲದೆ ಆರೋಪಗಳನ್ನು ಹೊರಿಸುತ್ತಿದ್ದೀರಿ. ಅದು ಸ್ವೀಕಾರಾರ್ಹವಲ್ಲ. ನಿಮ್ಮ ಆರೋಪಗಳಿಗೆ ಸಾಕ್ಷಿ ನೀಡಿ. ಭಾರತ ಮಾರಾಟಕ್ಕಿಲ್ಲ. ಕಾಂಗ್ರೆಸ್ ಪಕ್ಷವು ದೇಶವನ್ನು ದುರ್ಬಲಗೊಳಿಸುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಭಾರತದ ಅತ್ಯಂತ ಬಲಿಷ್ಠ ಪ್ರಧಾನಿ. ಭಾರತ ಪ್ರಗತಿ ಹೊಂದುತ್ತಿರುವುದರಿಂದ ಕಾಂಗ್ರೆಸ್ ದುಃಖಿತವಾಗಿದೆ” ಎಂದು ಹೇಳಿದರು.

ಇದನ್ನೂ ಓದಿ: ಸಿಖ್ಖರಿಗೆ ಮಾಡಿದ ಅವಮಾನ; ರಾಹುಲ್ ಗಾಂಧಿಯ ದೇಶದ್ರೋಹಿ ಹೇಳಿಕೆಗೆ ಮೋದಿ ಆಕ್ರೋಶ

ಇದೇ ವೇಳೆ ಸ್ಪೀಕರ್ ಕುರ್ಚಿಯಲ್ಲಿ ಕುಳಿತಿದ್ದ ಜಗದಾಂಬಿಕಾ ಪಾಲ್ ರಾಹುಲ್ ಗಾಂಧಿಯವರ ಆರೋಪಗಳನ್ನು ಲೋಕಸಭೆಯ ದಾಖಲೆಯಲ್ಲಿ ಸೇರಿಸಲಾಗುವುದಿಲ್ಲ ಎಂದು ತೀರ್ಪು ನೀಡಿದರು.

ಅಧಿವೇಶನದ ಬಳಿಕ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸಚಿವ ಕಿರಣ್ ರಿಜಿಜು, ರಾಹುಲ್ ಗಾಂಧಿ ವಿರುದ್ಧ ಸರ್ಕಾರ ಹಕ್ಕುಚ್ಯುತಿ ನೋಟಿಸ್ ಸಲ್ಲಿಸಲಿದೆ. ಅವರು ಸದನವನ್ನು ದಾರಿ ತಪ್ಪಿಸಿದ್ದಾರೆ ಮತ್ತು ಆಧಾರರಹಿತ ಆರೋಪಗಳನ್ನು ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕಾಲೇಜಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಸಹಪಾಠಿಗಳ ಗಲಾಟೆ: ಮಂಗಳೂರಿನಲ್ಲಿ ಮತ್ತೆ ರಕ್ತಪಾತ – Kannada News | Mangaluru: A clash between students in over a trivial reason; Attack with a knife

ಆಸ್ಪತ್ರೆ‌ಗೆ ಭೇಟಿ ನೀಡಿದ ಪೊಲೀಸರುImage Credit source: tv9 kannada

ಮಂಗಳೂರು, ಫೆಬ್ರವರಿ 11: ವಿದ್ಯಾರ್ಥಿಗಳ (Students) ನಡುವೆ ಕ್ಷುಲ್ಲಕ ಕಾರಣಕ್ಕೆ ನಡೆದ ಗಲಾಟೆ (clash) ಕೊನೆಗೆ ಹಲ್ಲೆಯಲ್ಲಿ ಅಂತ್ಯವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲದ ಖಾಸಗಿ ಕಾಲೇಜಿನಲ್ಲಿ ಘಟನೆ ನಡೆದಿದ್ದು, ಹೇಮಂತ್ ಎಂಬ ವಿದ್ಯಾರ್ಥಿಯಿಂದ ಅಪ್ರಾಪ್ತ ವಿದ್ಯಾರ್ಥಿಗೆ ಚೂರಿಯಿಂದ ಹಲ್ಲೆ ಮಾಡಲಾಗಿದೆ. ಈ ವೇಳೆ ಗಲಾಟೆ ಬಿಡಿಸಲು ಬಂದ ಮತ್ತೊಬ್ಬ ವಿದ್ಯಾರ್ಥಿಗೂ ಗಾಯವಾಗಿದೆ. ಸದ್ಯ ಹೇಮಂತ್​​ನ್ನು ಪೊಲೀಸರು ವಶಕ್ಕೆ ಪಡೆದಿದ್ದು, ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಡೆದಿದ್ದೇನು?

ಕಾಲೇಜ್​ ವಿಚಾರವಾಗಿ ವಿದ್ಯಾರ್ಥಿಗಳ ನಡುವೆ ಗಲಾಟೆ ನಡೆದಿದೆ. ಈ ವೇಳೆ ಹೇಮಂತ್​​ ಅಪ್ರಾಪ್ತ ವಿದ್ಯಾರ್ಥಿಗೆ ಚೂರಿಯಿಂದ ಹಲ್ಲೆ ಮಾಡಿದ್ದಾರೆ. ಇನ್ನು ಗಲಾಟೆ ತಪ್ಪಿಸಲು ಬಂದ ಮತ್ತೊಬ್ಬ ವಿದ್ಯಾರ್ಥಿ ಮೇಲೂ ಹಲ್ಲೆ ಮಾಡಲಾಗಿದ್ದು ಗಾಯವಾಗಿದೆ.

ಇದನ್ನೂ ಓದಿ: ಶಾಸಕ ಸೇರಿ ಐವರಿಂದ ಕಿರುಕುಳ ಆರೋಪ: ಡೆತ್​​ನೋಟ್​​ ಬರೆದಿಟ್ಟು ನಾಪತ್ತೆಯಾಗಿದ್ದ ಅಧಿಕಾರಿ ಪತ್ತೆ

ಘಟನೆಯಲ್ಲಿ ಓರ್ವ ವಿದ್ಯಾರ್ಥಿ ಬೆನ್ನಿಗೆ ಗಾಯವಾಗಿದ್ದು, ಮತ್ತೋರ್ವನಿಗೆ ತೊಡೆ ಭಾಗದಲ್ಲಿ ಗಾಯವಾಗಿದೆ. ಸದ್ಯ ಗಾಯಗೊಂಡ ಇಬ್ಬರು ವಿದ್ಯಾರ್ಥಿಗಳಿಗೂ ವಿಟ್ಲ ಸಮುದಾಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಇನ್ನು ಆಸ್ಪತ್ರೆಗೆ ಬಂಟ್ವಾಳ ಡಿವೈಎಸ್​​ಪಿ ಭೇಟಿ ನೀಡಿದ್ದಾರೆ. ಘಟನೆ ತಿಳಿದು‌ ಸಮುದಾಯ ಆಸ್ಪತ್ರೆ‌ ಬಳಿ‌‌‌ ಸೇರಿದ ಜನರನ್ನು ಪೊಲೀಸರು ಚದುರಿಸಿದ್ದಾರೆ.

ಸೈಡ್ ಕೊಡಲಿಲ್ಲ ಎಂದು ಬಸ್​​ ಚಾಲಕನಿಗೆ ಬೈಕ್​ ಸವಾರನಿಂದ ಥಳಿತ 

ಸೈಡ್ ಕೊಡಲಿಲ್ಲ ಎಂಬ ಕಾರಣಕ್ಕೆ ಕೆಕೆಆರ್‌ಟಿಸಿ ಬಸ್ ಚಾಲಕನಿಗೆ ಬೈಕ್ ಸವಾರ ಹಿಗ್ಗಾಮುಗ್ಗಾ ಥಳಿಸಿದ ಘಟನೆ ಇತ್ತೀಚೆಗೆ ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಬೀರಿ ತಾಂಡಾಬಳಿ ನಡೆದಿತ್ತು. ಭಾಲ್ಕಿ ಬಸ್ ಡಿಪೋಗೆ ಸೇರಿದ ಬಸ್ ಚಾಲಕ ಚಂದ್ರಶೇಖರ್​​ ಸ್ವಾಮಿ ಮೇಲೆ ಹಲ್ಲೆ ಮಾಡಲಾಗಿದ್ದು, ಹಲ್ಲೆಗೊಳಗಾಗಿದ್ದ ಚಾಲಕನನ್ನು ಭಾಲ್ಕಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ಬಳಿ ಬೀದರ್ ಖಾಸಗಿ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ರವಾನಿಸಲಾಗಿತ್ತು.

ಇದನ್ನೂ ಓದಿ: ಹುಬ್ಬಳ್ಳಿ ಆಟೋ ಚಾಲಕನ ಖಾತೆಯಿಂದ ಕೋಟ್ಯಂತರ ರೂ ವಹಿವಾಟು​: ತನಿಖೆಯಲ್ಲಿ ಹಣದ ರಹಸ್ಯ ಬಯಲು

ಚಂದ್ರಶೇಖರ್ ಸ್ವಾಮಿಗೆ ಎದೆ, ತಲೆ ಭಾಗಕ್ಕೆ ಗಾಯವಾಗಿದ್ದು, ಸದ್ಯ ಚೇತರಿಕೆ ಕಾಣುತ್ತಿದ್ದಾರೆ. ಹಲ್ಲೆ ನಡೆಸಿ ಬೈಕ್ ಸವಾರ ಸ್ಥಳದಿಂದ ಪರಾರಿಯಾಗಿದ್ದು, ಘಟನಾ ಸ್ಥಳಕ್ಕೆ ಭಾಲ್ಕಿ ಗ್ರಾಮೀಣ ಪೊಲೀಸರು ಭೇಟಿ ಪರಿಶೀಲನೆ ಮಾಡಿದ್ದರು. ಭಾಲ್ಕಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಭಾರತ ಮಾತೆಯನ್ನು ಮಾರಲು ನಿಮಗೆ ನಾಚಿಕೆಯಾಗುವುದಿಲ್ಲವೇ? ಮೋದಿ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ – Kannada News | Sold Bharat Mata have you no shame Rahul Gandhi attacks Modi Government over US Trade deal

ನವದೆಹಲಿ, ಫೆಬ್ರವರಿ 11: ಅಮೆರಿಕದೊಂದಿಗಿನ ವ್ಯಾಪಾರ ಮತ್ತು ಸುಂಕ ಒಪ್ಪಂದದ ಬಗ್ಗೆ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಇಂದು ಲೋಕಸಭೆಯಲ್ಲಿ ಮೋದಿ ಸರ್ಕಾರವನ್ನು ಟೀಕಿಸಿದ್ದಾರೆ. ಕೃಷಿ ಮತ್ತು ಡೈರಿ ಮಾರುಕಟ್ಟೆಗಳನ್ನು ಅಮೆರಿಕದ ಕೃಷಿ ಉತ್ಪನ್ನಗಳಿಗೆ ತೆರೆಯಲು ಒಪ್ಪುವ ಮೂಲಕ ಕೇಂದ್ರ ಸರ್ಕಾರ “ಭಾರತ ಮಾತೆಯನ್ನು ಮಾರಾಟ ಮಾಡಿದೆ. ಇದಕ್ಕೆ ಮೋದಿ ಸರ್ಕಾರ ನಾಚಿಕೆಪಡಬೇಕು” ಎಂದು ರಾಹುಲ್ ಗಾಂಧಿ ಗುಡುಗಿದ್ದಾರೆ. ಯುಎಸ್ ಸುಂಕಗಳು 2025ರ ಮೊದಲು ಸರಾಸರಿ ಶೇ. 3 ಇದ್ದುದು ಈ ತಿಂಗಳ ಒಪ್ಪಂದದ ಅಡಿಯಲ್ಲಿ ಶೇ. 18ಕ್ಕೆ ಏರಿದೆ ಎಂದು ರಾಹುಲ್ ಗಾಂಧಿ (Rahul Gandhi) ಆರೋಪಿಸಿದ್ದಾರೆ.

ಅಮೆರಿಕದ ಸರಕುಗಳನ್ನು ಭಾರತದೊಳಗೆ ಪ್ರವೇಶಿಸಲು ಅನುಮತಿಸುವ ಮೂಲಕ ಭಾರತ-ಯುಎಸ್ ವ್ಯಾಪಾರ ಒಪ್ಪಂದವು ಕೋಟ್ಯಂತರ ರೈತರ, ವಿಶೇಷವಾಗಿ ಸಣ್ಣ ಅಥವಾ ಕನಿಷ್ಠ ಹಿಡುವಳಿಗಳನ್ನು ಹೊಂದಿರುವವರ ಜೀವನೋಪಾಯವನ್ನು ಅಪಾಯಕ್ಕೆ ಸಿಲುಕಿಸಿದೆ ಎಂದು ಲೋಕಸಭೆಯಲ್ಲಿ ರಾಹುಲ್ ಗಾಂಧಿ ಟೀಕಿಸಿದ್ದಾರೆ.

ಇದನ್ನೂ ಓದಿ: ಪ್ರಧಾನಿ ಮೋದಿ ರಾಜಿ ಮಾಡಿಕೊಂಡು ರಾಷ್ಟ್ರವನ್ನೇ ಮಾರಿದ್ದಾರೆ; ಅಮೆರಿಕ ವ್ಯಾಪಾರ ಒಪ್ಪಂದದ ಬಗ್ಗೆ ರಾಹುಲ್ ಗಾಂಧಿ ಆರೋಪ

“ನೀವು ಭಾರತವನ್ನು ಮಾರಾಟ ಮಾಡಿದ್ದೀರಿ. ಭಾರತವನ್ನು ಮಾರಾಟ ಮಾಡಲು ನಿಮಗೆ ನಾಚಿಕೆಯಾಗುವುದಿಲ್ಲವೇ? ಭಾರತದ ಇತಿಹಾಸದಲ್ಲಿ ಮೊದಲ ಬಾರಿಗೆ ನಮ್ಮ ರೈತರು ಬಿರುಗಾಳಿಯನ್ನು ಎದುರಿಸುತ್ತಿದ್ದಾರೆ. ನೀವು ನಮ್ಮ ಬಡ ರೈತರನ್ನು ಹತ್ತಿಕ್ಕಲು ಬಾಗಿಲು ತೆರೆದಿದ್ದೀರಿ. ಈ ಹಿಂದೆ ಯಾವುದೇ ಪ್ರಧಾನಿ ಎಂದಿಗೂ ಈ ರೀತಿ ಮಾಡಿಲ್ಲ” ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

“ಇದು ಸಂಪೂರ್ಣ ಶರಣಾಗತಿ. ದುರಂತವೆಂದರೆ ಇದು ಪ್ರಧಾನಿಯೊಬ್ಬರ ಶರಣಾಗತಿಯಲ್ಲ. ಅವರು 1.5 ಬಿಲಿಯನ್ ಭಾರತೀಯರ ಭವಿಷ್ಯವನ್ನು ಶರಣಾಗಿಸಿದ್ದಾರೆ” ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 6:09 pm, Wed, 11 February 26

Source link

ಕೊಲೆಸ್ಟ್ರಾಲ್ ಹೆಚ್ಚಾಗಿದೆ ಎಂಬುದನ್ನು ಚರ್ಮದ ಮೇಲೆ ಕಾಣಿಸಿಕೊಳ್ಳುವ ಈ ಲಕ್ಷಣದಿಂದ ಕಂಡುಹಿಡಿಯಬಹುದು – Kannada News | Cholesterol Deposits on Skin: Expert Explains

ಇತ್ತೀಚಿನ ದಿನಗಳಲ್ಲಿ ಜನರ ಆಹಾರ ಪದ್ಧತಿಯಲ್ಲಿ ಆಗುತ್ತಿರುವ ಬದಲಾವಣೆ, ದೈಹಿಕ ಚಟುವಟಿಕೆಯ ಕೊರತೆ ಮತ್ತು ಒತ್ತಡದ ಜೀವನಶೈಲಿಯಿಂದಾಗಿ, ಕೊಲೆಸ್ಟ್ರಾಲ್ ಮಟ್ಟದಲ್ಲಿ ವೇಗಗತಿಯಲ್ಲಿ ಏರಿಕೆ ಕಂಡುಬರುತ್ತಿದೆ. ನಿಮಗೆ ತಿಳಿದಿರಬಹುದು, ಕೊಲೆಸ್ಟ್ರಾಲ್ ದೇಹದಲ್ಲಿ ಇರುವ ಒಂದು ರೀತಿಯ ಕೊಬ್ಬು, ಇದು ಹಾರ್ಮೋನುಗಳನ್ನು ತಯಾರಿಕೆಗೆ ಮತ್ತು ಜೀವಕೋಶಗಳ ರಚನೆಗೆ ಅಗತ್ಯವಾಗಿರುತ್ತದೆ. ಆದರೆ ಅದು ಅಗತ್ಯ ಮಟ್ಟಕ್ಕಿಂತ ಹೆಚ್ಚಾದಾಗ, ಆರೋಗ್ಯಕ್ಕೆ ಅಪಾಯಕಾರಿಯಾಗುತ್ತದೆ. ಈ ರೀತಿ ಕೊಲೆಸ್ಟ್ರಾಲ್ ರಕ್ತನಾಳಗಳಲ್ಲಿ ಸಂಗ್ರಹಗೊಳ್ಳುತ್ತದೆ ಮತ್ತು ಅದರ ಪರಿಣಾಮಗಳನ್ನು ಚರ್ಮದ ಮೇಲೂ ಕಂಡುಬರುತ್ತದೆ. ಈ ರೀತಿ ಚರ್ಮದ ಮೇಲೆ ಗೋಚರಿಸುವ ಬದಲಾವಣೆಗಳು ದೇಹದಲ್ಲಿನ ಕೊಬ್ಬಿನ ಸಮತೋಲನಕ್ಕೆ ತೊಂದರೆಯಾಗಿದೆ ಎಂಬುದರ ಸಂಕೇತವಾಗಿರಬಹುದು. ರಕ್ತದಲ್ಲಿನ ಕೊಬ್ಬಿನ ಮಟ್ಟ ಹೆಚ್ಚಾದಾಗ, ಪೋಷಕಾಂಶ ಮತ್ತು ಆಮ್ಲಜನಕವು ಚರ್ಮದ ಕೋಶಗಳನ್ನು ಸರಿಯಾಗಿ ತಲುಪುವುದಿಲ್ಲ, ಇದು ಚರ್ಮದ ಹೊಳಪು ಕಡಿಮೆಯಾಗಲು ಕಾರಣವಾಗುತ್ತದೆ. ಆದ್ದರಿಂದ, ಚರ್ಮದಲ್ಲಿನ ಕಂಡುಬರುವ ಬದಲಾವಣೆಗಳನ್ನು (Skin Symptoms) ನಿರ್ಲಕ್ಷಿಸಬಾರದು. ಹಾಗಾದರೆ ದೇಹದಲ್ಲಿ ಕೊಲೆಸ್ಟ್ರಾಲ್ (High Cholesterol) ಮಟ್ಟ ಅಗತ್ಯಕ್ಕಿಂತ ಹೆಚ್ಚಾದಾಗ ಚರ್ಮದ ಮೇಲೆ ಯಾವ ರೀತಿಯ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಕೊಲೆಸ್ಟ್ರಾಲ್ ಹೆಚ್ಚಾದಾಗ ಚರ್ಮದ ಮೇಲೆ ಕಂಡುವರುವ ಲಕ್ಷಣಗಳು:

ರಾಜೀವ್ ಗಾಂಧಿ ಆಸ್ಪತ್ರೆಯ ಹೃದ್ರೋಗ ವಿಭಾಗದ ಡಾ. ಅಜಿತ್ ಜೈನ್ ಹೇಳುವ ಪ್ರಕಾರ, ದೇಹದಲ್ಲಿ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಾದಾಗ, ಚರ್ಮದ ಮೇಲೆ ಹಳದಿ ಅಥವಾ ಬಿಳಿ ಗಡ್ಡೆಗಳು ಕಾಣಿಸಿಕೊಳ್ಳಬಹುದು, ಇದನ್ನು ಕ್ಸಾಂಥೆಲಾಸ್ಮಾ ಎಂದು ಕರೆಯಲಾಗುತ್ತದೆ. ಇವು ಹೆಚ್ಚಾಗಿ ಕಣ್ಣು ಅಥವಾ ಕಣ್ಣುರೆಪ್ಪೆಗಳ ಸುತ್ತ, ಮೊಣಕೈ, ಮೊಣಕಾಲು ಅಥವಾ ಹಿಮ್ಮಡಿಯ ಮೇಲೆ ಕಾಣಿಸಿಕೊಳ್ಳುತ್ತವೆ. ಜೊತೆಗೆ ಕಣ್ಣುಗಳ ಅಂಚುಗಳಲ್ಲಿ ಹಳದಿ ಪದರ ಅಥವಾ ಕಲೆಗಳು ಕಂಡುಬರುವುದು ಕೂಡ ಹೆಚ್ಚಿನ ಕೊಲೆಸ್ಟ್ರಾಲ್ ಮಟ್ಟವನ್ನು ಸೂಚಿಸಬಹುದು. ಇನ್ನು ಕೆಲವರ ಚರ್ಮ ಒಣಗಿ ಮಂದವಾಗಿ ಕಾಣಿಸಬಹುದು. ಮತ್ತೆ ಕೆಲವರಲ್ಲಿ ಕೈ ಮತ್ತು ಪಾದಗಳಲ್ಲಿ ಜುಮ್ಮೆನಿಸುವಿಕೆ ಅಥವಾ ಬಣ್ಣ ಬದಲಾವಣೆಯಂತಹ ಲಕ್ಷಣ ಕೂಡ ಕಂಡುಬರಬಹುದು. ಕೆಲವೊಮ್ಮೆ ರಕ್ತ ಪರಿಚಲನೆ ಪರಿಣಾಮ ಬೀರುವುದರಿಂದ ಗಾಯಗಳು ಬೇಗನೆ ಗುಣವಾಗುವುದಿಲ್ಲ. ಈ ಎಲ್ಲಾ ಚಿಹ್ನೆಗಳು ದೇಹದ ಕೊಬ್ಬಿನ ಸಮತೋಲನವು ತೊಂದರೆಗೊಳಗಾಗಿದೆ ಎಂಬುದನ್ನು ಸೂಚಿಸುತ್ತವೆ. ಆದರೆ ಇದರ ಜೊತೆಗೆ ಪರೀಕ್ಷೆಯ ಅಗತ್ಯವಿರುತ್ತದೆ.

ಇದನ್ನೂ ಓದಿ: ಚಳಿಗಾಲದಲ್ಲಿ ಈ ಆಹಾರಗಳ ಸೇವನೆ ಮಾಡುವುದರಿಂದ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾಗಬಹುದು ಎಚ್ಚರ!

ಕೊಲೆಸ್ಟ್ರಾಲ್ ಹೆಚ್ಚಾಗದಂತೆ ತಡೆಯುವುದು ಹೇಗೆ?

ಸಾಮಾನ್ಯವಾಗಿ ಕೊಲೆಸ್ಟ್ರಾಲ್ ಅನ್ನು ನಿಯಂತ್ರಣದಲ್ಲಿಡಲು, ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳುವುದು ಬಹಳ ಮುಖ್ಯ. ಕರಿದ, ಹುರಿದ, ಎಣ್ಣೆಯುಕ್ತ ಮತ್ತು ಜಂಕ್ ಫುಡ್‌ಗಳ ಸೇವನೆ ಮಾಡುವುದನ್ನು ತಪ್ಪಿಸಿ. ನಿಯಮಿತವಾಗಿ ಹಸಿರು ತರಕಾರಿ, ಹಣ್ಣು, ಧಾನ್ಯ ಮತ್ತು ಫೈಬರ್ ಭರಿತ ಆಹಾರವನ್ನು ಸೇವಿಸಿ. ಪ್ರತಿನಿತ್ಯ ಯೋಗ, ನಡಿಗೆ ಅಥವಾ ಲಘು ವ್ಯಾಯಾಮವನ್ನು ಅಭ್ಯಾಸ ಮಾಡಿ. ತೂಕವನ್ನು ಒಂದೇ ರೀತಿ ಕಾಪಾಡಿಕೊಳ್ಳಿ ಮತ್ತು ಒತ್ತಡವನ್ನು ಕಡಿಮೆ ಮಾಡಲು ಪ್ರಯತ್ನಿಸಿ. ಧೂಮಪಾನ ಮತ್ತು ಮದ್ಯಪಾನವನ್ನು ತಪ್ಪಿಸಿ. ಸಾಕಷ್ಟು ನಿದ್ರೆ ಮಾಡಿ ಮತ್ತು ನಿಮ್ಮ ಕೊಲೆಸ್ಟ್ರಾಲ್ ಅನ್ನು ನಿಯತಕಾಲಿಕವಾಗಿ ಪರೀಕ್ಷಿಸಿ, ಇದರಿಂದ ಯಾವುದೇ ಸಮಸ್ಯೆಯನ್ನು ಸಮಯಕ್ಕೆ ಸರಿಯಾಗಿ ನಿಯಂತ್ರಿಸಬಹುದು.

ವೈದ್ಯರನ್ನು ಯಾವಾಗ ಭೇಟಿ ಮಾಡಬೇಕು?

ಚರ್ಮದ ಮೇಲೆ ಹಳದಿ ಕಲೆ ಅಥವಾ ಗಡ್ಡೆಗಳು ಇದ್ದಕ್ಕಿದ್ದಂತೆ ಕಾಣಿಸಿಕೊಂಡರೆ, ಚರ್ಮವು ನಿರಂತರವಾಗಿ ಒಣಗುತ್ತಿದ್ದರೆ ಅಥವಾ ಮಂದವಾಗಿದ್ದರೆ ಅಥವಾ ಗಾಯಗಳು ಬೇಗನೆ ಗುಣವಾಗದಿದ್ದರೆ, ವೈದ್ಯರನ್ನು ಸಂಪರ್ಕಿಸುವುದು ಮುಖ್ಯ. ಹೆಚ್ಚುವರಿಯಾಗಿ, ನಿಮ್ಮ ರಕ್ತ ಪರೀಕ್ಷೆಗಳಲ್ಲಿ ಹೆಚ್ಚಿನ ಮಟ್ಟದ ಕೊಲೆಸ್ಟ್ರಾಲ್ ಕಂಡುಬಂದರೆ ಅಥವಾ ಎದೆ ನೋವು, ಉಸಿರಾಟದ ತೊಂದರೆ ಅಥವಾ ಆಗಾಗ ತಲೆತಿರುಗುವಿಕೆ ಅನುಭವಕ್ಕೆ ಬಂದರೆ, ವಿಳಂಬ ಮಾಡಬೇಡಿ, ಕೂಡಲೇ ವೈದ್ಯರನ್ನು ಭೇಟಿ ಮಾಡಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕಮಲಾಕರ್ ಭಟ್-ಸುಚಿತ್ರಾ ರಂಗಿನಾಟಕ್ಕೆ ಅಮಾಯಕ ಬಲಿ: ಜೋಡಿ ಹಕ್ಕಿಗೆ ಕೋರ್ಟ್ ಶಾಕ್ – Kannada News | Siddapura Vasanth Naik Murder Case: Court extends astrologer kamalakara bhat And Suchitra judicial custody till february 21

ಕಾರವಾರ, (ಫೆಬ್ರವರಿ 11): ಸಿದ್ಧಾಪುರ ವಸಂತ್ ನಾಯ್ಕ್ ಕೊಲೆ ಪ್ರಕರಣಕ್ಕೆ (Siddapura Vasanth Naik Murder Case) ಸಂಬಂಧಿಸಿದಂತೆ ಆರೋಪಿಗಳಾದ ಕಮಲಾಕರ್ ಭಟ್ ಗುರೂಜಿ(astrologer kamalakara bhat )ಹಾಗೂ ಪ್ರೇಯಸಿ ಸುಚಿತ್ರಾಳಿಗೆ (Suchitra) ನ್ಯಾಯಾಂಗ ಬಂಧನ ವಿಸ್ತರಿಸಿ ಕೋರ್ಟ್ ಆದೇಶ ಹೊರಡಿಸಿದೆ. ಒಟ್ಟು 8 ಆರೋಪಿಗಳ ಪೈಕಿ ಮೂವರು ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ಹೀಗಾಗಿ ಇನ್ನುಳಿದ A1 ಸುಚಿತ್ರಾ ಆರೋಪಿ ಹಾಗೂ A3ಕಮಲಾಕರ ಭಟ್ ಕಮಲಾಕರ ಭಟ್ ಸೇರಿದಂತೆ 5 ಆರೋಪಿಗಳಿಗೆ ಫೆಬ್ರವರಿ 21ರವರೆಗೆ ನ್ಯಾಯಾಂಗ ಬಂಧನ ವಿಸ್ತರಿಸಿ ಸಿದ್ದಾಪುರ JMFC ನ್ಯಾಯಾಲಯದ ನ್ಯಾಯಾಧೀಶ ಉಮೇಶ್ ಎಂ.ಪಿ ಆದೇಶ ಹೊರಡಿಸಿದ್ದಾರೆ. ಇದರಿಂದ ಐಷಾರಾಮಿ ಜೀವನ ನಡೆಸುತ್ತಿದ್ದ  ಜೋಡಿ ಹಕ್ಕಿಗೆ ಜೈಲೇ ಗತಿ.

Source link

KMF SHIMUL Recruitment: ಕರ್ನಾಟಕದ ಹಾಲು ಒಕ್ಕೂಟದಲ್ಲಿ 194 ಹುದ್ದೆಗಳಿಗೆ ನೇಮಕಾತಿ; 10ರಿಂದ ಪದವೀಧರರವರೆಗೆ ಅರ್ಜಿ ಸಲ್ಲಿಸಲು ಅವಕಾಶ – Kannada News | KMF SHIMUL Jobs 2026: 194 Assistant Manager, Jr Technician Posts in Karnataka Milk Fed

ಕರ್ನಾಟಕದ ಹಾಲು ಒಕ್ಕೂಟದಲ್ಲಿ ನೇಮಕಾತಿ

ಕರ್ನಾಟಕ ಸರ್ಕಾರದ ಅಧೀನದಲ್ಲಿರುವ ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ಲಿಮಿಟೆಡ್ (KMF SHIMUL) ಉದ್ಯೋಗಾಕಾಂಕ್ಷಿಗಳಿಗೆ ಉತ್ತಮ ಅವಕಾಶ ಒದಗಿಸಿದೆ. ಅಧಿಕೃತ ಅಧಿಸೂಚನೆಯ ಮೂಲಕ ಸಹಾಯಕ ವ್ಯವಸ್ಥಾಪಕ ಹಾಗೂ ಜೂನಿಯರ್ ಟೆಕ್ನಿಷಿಯನ್ ಸೇರಿದಂತೆ ವಿವಿಧ ಹುದ್ದೆಗಳಿಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಸರ್ಕಾರಿ ಸಂಸ್ಥೆಯಲ್ಲಿ ಸ್ಥಿರ ಉದ್ಯೋಗ ಬಯಸುವವರಿಗೆ ಇದು ಉತ್ತಮ ಅವಕಾಶವಾಗಿದ್ದು, ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವನ್ನು ಫೆಬ್ರವರಿ 21 ರವರೆಗೆ ವಿಸ್ತರಿಸಲಾಗಿದೆ.

ಸಂಸ್ಥೆಯ ವಿವರಗಳು:

  • ಸಂಸ್ಥೆ: ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಹಾಲು ಒಕ್ಕೂಟ (KMF SHIMUL )
  • ಒಟ್ಟು ಹುದ್ದೆಗಳು: 194
  • ಉದ್ಯೋಗ ಸ್ಥಳ: ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ
  • ಹುದ್ದೆಗಳ ಹೆಸರು: ಸಹಾಯಕ ವ್ಯವಸ್ಥಾಪಕರು, ಜೂನಿಯರ್ ಟೆಕ್ನಿಷಿಯನ್

ಶೈಕ್ಷಣಿಕ ಅರ್ಹತೆ:

ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿ ಅಥವಾ ವಿಶ್ವವಿದ್ಯಾಲಯಗಳಿಂದ 10ನೇ ತರಗತಿ, ಪದವಿ, B.Sc, B.Com, BBA, BBM, BE/B.Tech, BVSc & AH, M.Sc, MBA ಈಅರ್ಹತೆಗಳಲ್ಲಿ ಯಾವುದಾದರೂ ಪೂರ್ಣಗೊಳಿಸಿರಬೇಕು.

ವಯಸ್ಸಿನ ಮಿತಿ:

  • ಕನಿಷ್ಠ ವಯಸ್ಸು: 18 ವರ್ಷ
  • ಗರಿಷ್ಠ ವಯಸ್ಸು: 35 ವರ್ಷ

ವಯಸ್ಸಿನ ಸಡಿಲಿಕೆ:

  • 2A/2B/3A/3B ಅಭ್ಯರ್ಥಿಗಳು – 3 ವರ್ಷ
  • SC/ST/ಪ್ರವರ್ಗ-I ಅಭ್ಯರ್ಥಿಗಳು – 5 ವರ್ಷ

ಅರ್ಜಿ ಶುಲ್ಕ:

  • SC/ST/ಪ್ರವರ್ಗ-I/PWD – 500ರೂ.
  • ಇತರರು – 1000 ರೂ.

ಅಭ್ಯರ್ಥಿಗಳ ಆಯ್ಕೆ ಕೆಳಗಿನ ಹಂತಗಳ ಮೂಲಕ ನಡೆಯಲಿದೆ:

  • ಲಿಖಿತ ಪರೀಕ್ಷೆ
  • ಅರ್ಹತಾ ಪಟ್ಟಿ (ಮೆರಿಟ್ ಲಿಸ್ಟ್)
  • ಮೌಖಿಕ ಸಂದರ್ಶನ

ಇದನ್ನೂ ಓದಿ: ಬಡ ಮಕ್ಕಳಿಗೆ ವಿದ್ಯಾ ದೇವತೆಯಾದ ಭಾರತೀಯ ಶಿಕ್ಷಕಿಗೆ ವಿಶ್ವ ಮನ್ನಣೆ: ‘ಜಾಗತಿಕ ಶಿಕ್ಷಕ ಪ್ರಶಸ್ತಿ’ ಪಡೆದ ರೂಬಲ್ ನಾಗಿ

ಅರ್ಜಿ ಸಲ್ಲಿಸುವ ವಿಧಾನ:

ಮೊದಲು KMF SHIMUL ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ, ಅರ್ಹತಾ ಮಾನದಂಡಗಳನ್ನು ಪರಿಶೀಲಿಸಬೇಕು. ನಂತರ ಆನ್‌ಲೈನಲ್ಲಿ ಅಧಿಕೃತ ವೆಬ್​ಸೈಟ್​​ ಮೂಲಕ ಅರ್ಜಿ ಸಲ್ಲಿಸಿ. ಆನ್‌ಲೈನ್ ಅರ್ಜಿ ನಮೂನೆಯಲ್ಲಿ ಎಲ್ಲಾ ವಿವರಗಳನ್ನು ಸರಿಯಾಗಿ ಭರ್ತಿ ಮಾಡಿ, ಅಗತ್ಯ ದಾಖಲೆಗಳ ಸ್ಕ್ಯಾನ್ ಪ್ರತಿಗಳು ಮತ್ತು ಇತ್ತೀಚಿನ ಛಾಯಾಚಿತ್ರವನ್ನು ಅಪ್‌ಲೋಡ್ ಮಾಡಿ. ಬಳಿಕ ವರ್ಗಾನುಸಾರ ಅರ್ಜಿ ಶುಲ್ಕ ಪಾವತಿಸಿ ‘Apply’ ಬಟನ್ ಕ್ಲಿಕ್ ಮಾಡಿ. ಕೊನೆಗೆ ಅರ್ಜಿ ಸಂಖ್ಯೆ ಅಥವಾ ರೆಫರೆನ್ಸ್ ಸಂಖ್ಯೆಯ ಪ್ರಿಂಟ್​ ಕಾಪಿ ಡೌನ್ಲೋಡ್​ ಮಾಡಿ ಇಟ್ಟುಕೊಳ್ಳಿ.

ಈ ನೇಮಕಾತಿ ಕರ್ನಾಟಕದ ಹಾಲು ಒಕ್ಕೂಟದಲ್ಲಿ ಕೆಲಸ ಮಾಡಲು ಬಯಸುವವರಿಗೆ ಉತ್ತಮ ಅವಕಾಶವಾಗಿದೆ. ಅರ್ಹ ಅಭ್ಯರ್ಥಿಗಳು ಕೊನೆಯ ದಿನಾಂಕದೊಳಗೆ ಅರ್ಜಿ ಸಲ್ಲಿಸಿ, ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ.

ಮತ್ತಷ್ಟು ಉದ್ಯೋಗಕ್ಕೆ ಸಂಬಂಧಿಸಿದ  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Video: ದೊಡ್ಡವ್ವ ದೊಡ್ಡವ್ವ ದ್ವಾಸೆ ಕೊಡು; ಯಕ್ಷಗಾನದಲ್ಲೂ ಗಿಲ್ಲಿ ಹಾಡಿನದ್ದೇ ಹವಾ – Kannada News | Ghilli actor Doddava Doddava Dosa Kodu song sung by Yakshagana artists

ಕರಾವಳಿ ಗಂಡು ಕಲೆ ಯಕ್ಷಗಾನ (Yakshagana) ಎಂದಾಗ ಎಲ್ಲರ ಕಿವಿ ನೆಟ್ಟಗಾಗುತ್ತದೆ. ಯಕ್ಷಗಾನ ವನ್ನು ನೋಡುವುದೇ ಕಣ್ಣಿಗೆ ಆನಂದ. ಪ್ರಸಂಗದಲ್ಲಿ ತಮಾಷೆಭರಿತವಾದ ಸಂಭಾಷಣೆಗಳು ಪ್ರೇಕ್ಷಕರನ್ನು ನಕ್ಕು ನಗಿಸುತ್ತವೆ. ಆದರೆ ಪೌರಾಣಿಕ ಪ್ರಸಂಗದ ನಡುವೆ ಪ್ರಸಕ್ತ ವಿದ್ಯಮಾನಗಳ ಕುರಿತ ಹಾಸ್ಯಮಯ ಸಂಭಾಷಣೆಗಳು ಸೇರಿಸುತ್ತಾರೆ. ಆದರೆ ಇದೀಗ ಯಕ್ಷಗಾನದಲ್ಲಿ ಬಿಗ್ ಬಾಸ್ ವಿನ್ನರ್ ಗಿಲ್ಲಿ (Bigg Boss Winner Gilli) ಹಾಡಿನ ಹವಾ ಜೋರಾಗಿದೆ. ಹೌದು, ಬಿಗ್ ಬಾಸ್ ಮನೆಯಲ್ಲಿದ್ದಾಗ ಗಿಲ್ಲಿ ನಟ ಹೇಳುತ್ತಿದ್ದ ದೊಡ್ಡವ್ವ ದೊಡ್ಡವ್ವ ದ್ವಾಸೆ ಕೊಡು ಹಾಡು ಹೇಳಿ ಕಲಾವಿದರು ಪ್ರೇಕ್ಷಕ ವರ್ಗವನ್ನು ರಂಜಿಸುವ ಪ್ರಯತ್ನ ಮಾಡಿದ್ದಾರೆ. ಈ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

ಯಕ್ಷ ಚರಿತ್ರೆ ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಕಲಾವಿದರು ವೇದಿಕೆಯ ಮೇಲೆ ದೊಡ್ಡವ್ವ ದೊಡ್ಡವ್ವ ದೋಸೆ ಕೊಡು, ಚಿಕ್ಕವ್ವ ಚಿಕ್ಕವ್ವ ಚಕ್ಲಿ ಕೊಡು ಎಂದು ಹೇಳಿದ್ದು, ಈ ತಮಾಷೆ ಭರಿತ ಸಂಭಾಷಣೆಯನ್ನು ನೀವಿಲ್ಲಿ ಕಾಣಬಹುದು.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ಪುಣ್ಯಕೋಟಿ ಗೋವಿನ ಹಾಡು ಕೇಳಿ ಬಿಕ್ಕಿ ಬಿಕ್ಕಿ ಅತ್ತ ಪುಟ್ಟ ಬಾಲಕ

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಕಂಡಿದ್ದು, ಒಬ್ಬ ಬಳಕೆದಾರ ಮಿತಿ ಮೀರಿದ ಹಾಸ್ಯ, ಇದು ಯಕ್ಷಗಾನಕ್ಕೆ ಅಗತ್ಯ ಇದೆಯೇ ಎಂದು ಕೇಳಿದ್ದಾರೆ. ಇನ್ನೊಬ್ಬರು, ಗಿಲ್ಲಿ ಸೂಪರ್ ಎಂದು ಹೇಳಿದರೆ, ಮತ್ತೊಬ್ಬರು, ನೆಗೆಟಿವ್ ಕಾಮೆಂಟ್ ಮಾಡುವವರು ಗಿಲ್ಲಿ ಹೇಟರ್ಸ್ ನೀವು ತಲೆ ಕೆಡಿಸಿಕೊಳ್ಳಬೇಡಿ ಅಷ್ಟಕ್ಕೂ ಆ ಹಾಡಲ್ಲಿ ಅಂತಹ ಕೆಟ್ಟ ಶಬ್ದ ಏನು ಇಲ್ಲ ಚನ್ನಾಗಿದೆ ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಹುಬ್ಬಳ್ಳಿ ಆಟೋ ಚಾಲಕನ ಖಾತೆಯಿಂದ ಕೋಟ್ಯಂತರ ರೂ ವಹಿವಾಟು​: ತನಿಖೆಯಲ್ಲಿ ಹಣದ ರಹಸ್ಯ ಬಯಲು – Kannada News | Hubballi: Crores in Transactions Found in Auto Driver’s Bank Account; Investigation Uncovers Source of Funds

ಆಟೋ ಚಾಲಕನ ಮನೆಯಲ್ಲಿ ಪೊಲೀಸ್ ತಪಾಸಣೆ, ಇರ್ಫಾನ್‌ Image Credit source: tv9 kannada

ಹುಬ್ಬಳ್ಳಿ, ಫೆಬ್ರವರಿ 11: ಆತ ಹೆಸರಿಗೆ ಬಡ ಆಟೋ ಚಾಲಕ, ಬ್ಯಾಂಕ್‌ ಖಾತೆಯಲ್ಲಿನ ಹಣ ವರ್ಗಾವಣೆಯಾಗಿದ್ದು, ಮಾತ್ರ ಲಕ್ಷ ಲಕ್ಷ ಹಣ. ಸೈಬರ್ ಅಪರಾಧಗಳ ಪ್ರಕರಣಗಳಿಗೆ (Cyber crime case)
ಸಂಬಂಧಿಸಿದಂತೆ ಆ ಅಕೌಂಟ್ ಬಳಕೆಯಾಗಿತ್ತು. ಈ ಬಗ್ಗೆ ಸ್ವಯಂ ದೂರು ದಾಖಲಿಸಿಕೊಂಡ ಹುಬ್ಬಳ್ಳಿ (Hubballi) ಸೆನ್ ಠಾಣೆಯ ಪೊಲೀಸರು ವಿಚಾರಣೆಯನ್ನು ತೀವ್ರಗೊಳಿಸಿದ್ದು, ಆ ಮೂಲಕ ಅನೇಕ ಅಂಶಗಳು ಹೊರಬರುತ್ತಿವೆ. ಮೂಲ ಅಕೌಂಟ್ ಮಾಲೀಕ, ತನ್ನ ಅಕೌಂಟ್​ನ್ನು ಮತ್ತೊಬ್ಬರಿಗೆ ನೀಡಿದ್ದು ತನಿಖೆಯಲ್ಲಿ ಬಯಲಾಗಿದೆ.

ಪ್ರಕರಣದ ಹಿನ್ನೆಲೆ 

ದೇಶದಲ್ಲಿ ಪ್ರತಿನಿತ್ಯ ಅನೇಕ ಕಡೆ ಸೈಬರ್ ಅಪರಾಧ ಪ್ರಕರಣಗಳು ವರದಿಯಾಗುತ್ತಿವೆ. ಹತ್ತಾರು ರೀತಿಯಿಂದ ಸೈಬರ್ ವಂಚಕರು ಜನರನ್ನು ವಂಚಿಸಿ ಲಕ್ಷದಿಂದ ಕೋಟಿ ಕೋಟಿವರಗೆ ಹಣ ಲಪಟಾಯಿಸುತ್ತಲೇ ಇದ್ದಾರೆ. ಇದೇ ರೀತಿಯ ಸೈಬರ್ ಅಪರಾಧಕ್ಕೆ ಹುಬ್ಬಳ್ಳಿಯ ಆಟೋ ಚಾಲಕನ ಅಕೌಂಟ್​ವೊಂದು ಬಳಕೆಯಾಗಿರುವುದು ಇತ್ತೀಚೆಗೆ ಗೊತ್ತಾಗಿತ್ತು.

ಇದನ್ನೂ ಓದಿ: ಹುಬ್ಬಳ್ಳಿ ಆಟೋ ಚಾಲಕನ ಖಾತೆಯಿಂದ ಕೋಟ್ಯಂತರ ರೂ ವರ್ಗಾವಣೆ: ಏನಿದು ಹಣದ ರಹಸ್ಯ?

ಒಂದೇ ಬ್ಯಾಂಕ್ ಖಾತೆಗೆ ಲಕ್ಷ ಲಕ್ಷ ಹಣ ಜಮೆಯಾಗಿರುವ ಪ್ರಕರಣವೊಂದರ ಬೆನ್ನು ಬಿದ್ದಿರುವ ಹುಬ್ಬಳ್ಳಿಯ ಸಿಇಎನ್ ಠಾಣೆ ಪೊಲೀಸರು ಕಳೆದ ಫೆಬ್ರವರಿ 2 ರಂದು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ರಾಜ್ಯ ಸೈಬರ್ ಕಮಾಂಡ್ ಘಟಕದ ಮಾಹಿತಿ ಆಧರಿಸಿ ಆಯುಕ್ತಾಲಯ ವ್ಯಾಪ್ತಿಯಲ್ಲಿ ಸಂಶಯಾಸ್ಪದ ಎನ್ನಿಸಿದ ಒಟ್ಟು 4,585 ಬ್ಯಾಂಕ್ ಖಾತೆಗಳ ಮಾಹಿತಿ ಪರಿಶೀಲಿಸಲಾಗಿದೆ. ಇದರಲ್ಲಿ ಒಟ್ಟು 69 ಬ್ಯಾಂಕ್ ಖಾತೆಗಳನ್ನು ಆರಂಭದಲ್ಲಿ ಪರಿಶೀಲನೆ ನಡೆಸಿದ್ದರು. ಅದರಲ್ಲಿ ಹುಬ್ಬಳ್ಳಿ ಗೋಪನಕೊಪ್ಪದ ನಿವಾಸಿ ಇರ್ಫಾನ್‌ ಅನ್ನೋ ವ್ಯಕ್ತಿಯ ಅಕೌಂಟ್​ನಿಂದ ಲಕ್ಷಾಂತರ ರೂ ಹಣ ಸೈಬರ್ ಅಪರಾಧ ಪ್ರಕರಣಗಳಿಂದ ಜಮೆ ಆಗಿರುವುದು ಬೆಳಕಿಗೆ ಬಂದಿತ್ತು.

80 ಲಕ್ಷಕ್ಕೂ ಅಧಿಕ ಹಣ ಜಮೆ

ಇರ್ಫಾನ್ ಹುಬ್ಬಳ್ಳಿಯ ಕೇಶ್ವಾಪುರದಲ್ಲಿರುವ ಬ್ಯಾಂಕ್ ಆಫ್ ಬರೋಡಾ ಶಾಖೆಯಲ್ಲಿ ಕುಕ್ಕಿಂಗ್ ವಿತ್ ಕೇಟರಿಂಗ್ ಹೆಸರಲ್ಲಿ ಚಾಲ್ತಿ ಖಾತೆಯನ್ನು ಆರಂಭಿಸಿದ್ದ. ಅದೇ ಅಕೌಂಟ್​ಗೆ ಲಕ್ಷಾಂತರ ರೂ ಹಣ ಜಮೆಯಾಗಿತ್ತು. ರಾಜ್ಯದ ನಾಲ್ಕು ಕಡೆ ಸೇರಿದಂತೆ ದೇಶದ ವಿವಿಧಡೆಯಿಂದ ಒಟ್ಟು ಹದಿನಾಲ್ಕು ಬಾರಿ ಈ ಅಕೌಂಟ್​ಗೆ ಸರಿಸುಮಾರು 80 ಲಕ್ಷಕ್ಕೂ ಅಧಿಕ ಹಣ ಜಮೆಯಾಗಿರುವುದು ಬೆಳಕಿಗೆ ಬಂದಿದೆ.

ಆಟೋ ಚಾಲಕನ ಅಕೌಂಟ್​ಗೆ ಸೈಬರ್ ಅಪರಾಧಗಳಿಂದ ಲಕ್ಷ ಲಕ್ಷ ಹಣ ಜಮೆಯಾಗಿದ್ದು, ಈಗಾಗಲೇ ನಗರದ ಗೋಪನಕೊಪ್ಪದಲ್ಲಿರುವ ಚಾಲಕ ಇರ್ಫಾನ್​​ನನ್ನು ಪೂರ್ವಾಪರ ಪರಿಶೀಲಿಸಿದ್ದು, ಬ್ಯಾಂಕ್‌ಗೆ ಸಂಬಂಧಿಸಿದ 16 ದಾಖಲೆಗಳನ್ನು ಜಪ್ತಿ ಮಾಡಲಾಗಿದೆ. ಇದರ ಮಧ್ಯೆ ಖಾಕಿ ಕೇಶ್ವಾಪುರದ ಅರುಣ ಜಮಖಂಡಿ ಎಂಬಾತನ ಮತ್ತೆಗೆ ಮುಂದಾಗಿದೆ. ಈತನ ಬ್ಯಾಂಕ್ ಖಾತೆಯನ್ನು ಅರುಣ ಜಮಖಂಡಿ ಪಡೆದಿದ್ದ ಎನ್ನುವ ಮಾಹಿತಿಯನ್ನು ಪೊಲೀಸರು ಕಲೆಹಾಕಿದ್ದಾರೆ.

ಸಂಬಂಧಿಗೆ ಬ್ಯಾಂಕ್ ಪಾಸ್ ಬುಕ್​​ ನೀಡಿರುವ ಆಟೋ ಚಾಲಕ

ಬಿಹಾರ, ದೆಹಲಿ ಹಾಗೂ ಬೆಂಗಳೂರು ನಗರ ವ್ಯಾಪ್ತಿಯ 4 ಕಡೆ ಇರ್ಫಾನ್ ಬ್ಯಾಂಕ್ ಖಾತೆಯಿಂದ ಹಣ ವರ್ಗಾಣೆಯಾಗಿದೆ. ಈ ಕುರಿತು ಫೆಬ್ರವರಿ 2ರಂದು ಸಿಇಎನ್ ಪೊಲೀಸರು ಸ್ವಯಂ ದೂರು ದಾಖಲಿಸಿಕೊಂಡಿದ್ದರು. ಸತತ ಒಂದು ವಾರದಿಂದ ಬೆನ್ನು ಬಿದ್ದ ಪೊಲೀಸರಿಗೆ ವಶದಲ್ಲಿರುವ ಇರ್ಫಾನ್ ತನ್ನ ಬ್ಯಾಂಕ್ ಖಾತೆ ಕುರಿತು ಇಂಚಿಂಚೂ ಮಾಹಿತಿ ಕೊಟ್ಟಿದ್ದಾನೆ. ಅಲ್ಲದೆ ತಾನು ತನ್ನ ಬ್ಯಾಂಕ್ ಪಾಸ್ ಬುಕ್​ನ್ನು ತನ್ನ ದೂರದ ಸಂಬಂಧಿ ಅರುಣ ಜಮಖಂಡಿಗೆ ಕೊಟ್ಟಿರುವುದನ್ನು ಒಪ್ಪಿಕೊಂಡಿದ್ದಾನೆ. ಹೀಗಾಗಿ ಹುಬ್ಬಳ್ಳಿಯ ಕೇಶ್ವಾಪುರ ನಿವಾಸಿಯಾಗಿರುವ ಅರುಣ್ ಜಮಖಂಡಿ ಪತ್ತೆಗೆ ಸೆನ್ ಠಾಣೆ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ. ಆತ ಗೋವಾ ಸೇರಿದಂತೆ ಅನೇಕ ಕಡೆ ಓಡಾಡುತ್ತಿದ್ದು ಆತನ ಬಂಧನಕ್ಕಾಗಿ ಬಲೆ ಬೀಸಿದ್ದಾರೆ.

ಇದನ್ನೂ ಓದಿ: ಓರ್ವ ವ್ಯಕ್ತಿ 19 ಖಾತೆಗಳ ಮೂಲಕ 11.48 ಕೋಟಿ ರೂ ವ್ಯವಹಾರ: ಪೊಲೀಸರ ರೋಚಕ ಕಾರ್ಯಚರಣೆ

ಸದ್ಯ ಅರುಣ ಜಮಖಂಡಿ ತಲೆಮರೆಸಿಕೊಂಡಿದ್ದು, ಆತನ ಮನೆಯನ್ನು ತಪಾಸಣೆ ಮಾಡಲಾಗಿದೆ. ಈತ ಎಷ್ಟು ಜನರ ಬ್ಯಾಂಕ್ ಪುಸ್ತಕಗಳನ್ನು ಪಡೆದಿದ್ದಾನೆ, ಎಷ್ಟು ಹಣ ವರ್ಗಾವಣೆಯಾಗಿದೆ, ಯಾರಿಗೆ ವರ್ಗಾವಣೆ ಮಾಡಿದ್ದಾನೆ ಎನ್ನುವುದರ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

T20 World Cup: ಆಸೀಸ್ ನಾಯಕ ಮಿಚೆಲ್ ಮಾರ್ಷ್​ಗೆ ಗಂಭೀರ ಗಾಯ; ಸ್ಟೀವ್ ಸ್ಮಿತ್​ಗೆ ಬುಲಾವ್

Source link

ಈ ತಿಂಗಳು ವೃಷಭ ರಾಶಿಯವರಿಗೆ ಯಾವ ಯಾವ ದಶೆ ಶುಭ ಮತ್ತು ಅಶುಭ? – Kannada News | Vrushabha Rashi February Horoscope: Good and Bad Planetary Effects on Your Life

ಫೆಬ್ರವರಿ ತಿಂಗಳಲ್ಲಿ ಗ್ರಹಗಳ ಸಂಚಾರವು ವಿಶೇಷವಾಗಿದ್ದು ಫಲವೂ ಅನುಕೂಲ ಮತ್ತು ಪ್ರತಿಕೂಲಗಳಿಂದ ಮಿಶ್ರಿತವಾಗಿರಲಿದೆ. ವೃಷಭ ರಾಶಿಯವರ ಜಾತಕದಲ್ಲಿ ಗ್ರಹಗಳ ಸಂಚಾರವು ಮಿಶ್ರಫಲಗಳನ್ನು ನೀಡುತ್ತವೆ. ಮುಖ್ಯವಾಗಿ ನಿಮ್ಮ ರಾಶ್ಯಧಿಪತಿ ಶುಕ್ರ ಮತ್ತು ಕರ್ಮಕಾರಕ ಶನಿ ಈ ತಿಂಗಳು ಪ್ರಮುಖ ಪಾತ್ರ ವಹಿಸುತ್ತಾರೆ. ಶನಿಯ ರಾಶಿಯಲ್ಲಿಯೇ ಶುಕ್ರ ಹಾಗೂ ಶುಕ್ರನ ಉಚ್ಚ ಸ್ಥಾನದಲ್ಲಿ ಶನಿ ಇರುವರು. ಹಾಗಾಗಿ ಹೊಸ ರೀತಿಯ ಅನುಭವಗಳು ನಿಮಗೆ ಆಗುವ ಸಾಧ್ಯತೆ ಇದೆ. ​ಯಾವ ಗ್ರಹಗಳು ನಿಮಗೆ ಶುಭ ಮತ್ತು ಯಾವುದು ಅಶುಭ ಎಂಬುದರ ವಿವರ ಇಲ್ಲಿದೆ.

ಶುಭ ಫಲ ಗ್ರಹಗಳು

​ಶುಕ್ರ :

ನಿಮ್ಮ ರಾಶ್ಯಾಧಿಪತಿಯಾದ ಶುಕ್ರನು ಈ ತಿಂಗಳು ನಿಮಗೆ ಅತ್ಯಂತ ಶುಭ ನೀಡಲಿದ್ದಾನೆ. ಇದು ನಿಮ್ಮ ವ್ಯಕ್ತಿತ್ವದಲ್ಲಿ ಮೆರುಗು ತರುತ್ತದೆ ಮತ್ತು ಸುಖ-ಸಂತೋಷಗಳನ್ನು ಹೆಚ್ಚಿಸುತ್ತದೆ. ಕಲಾತ್ಮಕ ಕ್ಷೇತ್ರಗಳಲ್ಲಿ ಇರುವವರಿಗೆ ಉತ್ತಮ ಲಾಭ ಸಿಗಲಿದೆ.

​ಶನಿ :

ಶನಿಯು ನಿಮ್ಮ ರಾಶಿಯಿಂದ ಹತ್ತನೇ ಮನೆಯಲ್ಲಿ ಇರುವುದರಿಂದ ಉದ್ಯೋಗದಲ್ಲಿ ಸ್ಥಿರತೆ ನೀಡುತ್ತಾನೆ. ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುವ ದಶೆ ಇದಾಗಿದೆ.

​ಬುಧ :

ಬುಧನ ಸಂಚಾರವು ನಿಮ್ಮ ವ್ಯಾಪಾರ ಮತ್ತು ಸಂವಹನ ಕೌಶಲ್ಯವನ್ನು ಹೆಚ್ಚಿಸುತ್ತದೆ. ಆರ್ಥಿಕವಾಗಿ ಹೊಸ ಮೂಲಗಳಿಂದ ಆದಾಯ ಬರಲು ಇದು ಸಹಕಾರಿ.

​ಅಶುಭ ಫಲ ಗ್ರಹಗಳು

​ಮಂಗಳ :

ಮಂಗಳನ ದಶೆ ಅಥವಾ ಸಂಚಾರವು ನಿಮ್ಮಲ್ಲಿ ಕೋಪ ಮತ್ತು ಆತುರವನ್ನು ಹೆಚ್ಚಿಸಬಹುದು. ಇದು ಕುಟುಂಬದ ಸದಸ್ಯರೊಂದಿಗೆ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳಿಗೆ ಕಾರಣವಾಗಬಹುದು. ವಾಹನ ಚಾಲನೆ ಮಾಡುವಾಗ ಎಚ್ಚರ ಅಗತ್ಯ.

​ರಾಹು :

ರಾಹು ಲಾಭ ಸ್ಥಾನದಲ್ಲಿದ್ದರೂ, ಅತಿಯಾದ ಆಸೆಯಿಂದಾಗಿ ತಪ್ಪು ಹೂಡಿಕೆ ಮಾಡುವಂತೆ ಪ್ರೇರೇಪಿಸಬಹುದು. ಅಡ್ಡ ದಾರಿಯಲ್ಲಿ ಹಣ ಗಳಿಸುವ ಆಲೋಚನೆಯಿಂದ ದೂರವಿರುವುದು ಒಳಿತು.

​ಸೂರ್ಯ :

ಸೂರ್ಯನ ಸಂಚಾರವು ವೃತ್ತಿ ಕ್ಷೇತ್ರದಲ್ಲಿ ಮೇಲಧಿಕಾರಿಗಳೊಂದಿಗೆ ಸ್ವಲ್ಪ ಘರ್ಷಣೆ ಉಂಟುಮಾಡುವ ಸಾಧ್ಯತೆ ಇರುತ್ತದೆ, ಆದ್ದರಿಂದ ಮಾತಿನ ಮೇಲೆ ನಿಗಾ ಇರಲಿ.

ಅಶುಭ, ಸಂಕಟ, ನೋವಿನ ಫಲಗಳನ್ನು ಕಡಿಮೆ ಮಾಡಿಕೊಳ್ಳಲು, ಪ್ರತಿ ಮಂಗಳವಾರ ಸುಬ್ರಹ್ಮಣ್ಯನ ದೇವಾಲಯಕ್ಕೆ ಹೋಗಿ ಯಥಾಶಕ್ತಿ ಸೇವೆ, ಆರಾಧನೆ ಮಾಡಿ ಅಥವಾ ಶನಿವಾರ ಹನುಮಾನ್ ಚಾಲೀಸಾ ಪಠಿಸಿ, ಹನುಮನ ಸೇವಾ ಕಾರ್ಯಗಳನ್ನು ಮಾಡಿ.

– ಲೋಹಿತ ಹೆಬ್ಬಾರ್

Source link