Category Archives: Blog

Your blog category

ಗ್ಯಾರಂಟಿ ಯೋಜನೆಗಳು ಸ್ಥಗಿತ ಅಂತೆ-ಕಂತೆಗಳಿಗೆ ತೆರೆ ಎಳೆದ ಡಿಕೆ ಶಿವಕುಮಾರ್, ಸಿಎಂ ಕೊಟ್ಟ ಸ್ಪಷ್ಟನೆಯಲ್ಲೇನಿದೆ? – Kannada News | Will Not Stop Guarantee Schemes Clarified By CM DK Shivakumar

ಬೆಂಗಳೂರು, (ಜೂನ್ 14): ರಾಜ್ಯ ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಯಲ್ಲಿ (Guarantee Scheme) ಆರ್ಥಿಕವಾಗಿ ಹೊರೆಯಾಗ್ತಿರೋದೇ ಗೃಹಲಕ್ಷ್ಮೀ ಯೋಜನೆ ಎನ್ನಲಾಗುತ್ತಿದೆ. ಕಳೆದ ಮೂರು ವರ್ಷದಲ್ಲಿ ಸುಮಾರು 120 ಕೋಟಿಯಷ್ಟು ಹಣ ಗೃಹಲಕ್ಷ್ಮೀ ಯೋಜನೆಯ ಒಂದೇ ಯೋಜನೆಗೆ ಭರಿಸಲಾಗಿದೆ. ಆದ್ರೆ, ಇದೀಗ ಅನರ್ಹರು ಯೋಜನೆ ಲಾಭ ಪಡೆಯುತ್ತಿದ್ದಾರೆ ಎಂದು ಪರಿಷ್ಕರಣೆಗೆ ಸರ್ಕಾರ ಮುಂದಾಗಿದೆ. ಇದನ್ನೇ ಅಸ್ತ್ರ ಮಾಡಿಕೊಂಡಿರುವ ವಿಪಕ್ಷದ ನಾಯಕರು, ಪರಿಷ್ಕಣೆ ಹೆಸರಿನಲ್ಲಿ ಗ್ಯಾರಂಟಿ ಯೋಜನೆ ರದ್ದು ಮಾಡುವ ಹುನ್ನಾರ ಮಾಡುತ್ತಿದೆ ಎನ್ನುವ ಆರೋಪ ಮಾಡುತ್ತಿದ್ದಾರೆ. ಹೀಗಾಗಿ ಇದಕ್ಕೆ ಸ್ವತಃ ಸಿಎಂ ಡಿಕೆ ಶಿವಕುಮಾರ್ (DK Shivakumar) ಮಾಧ್ಯಮ ಪ್ರಕಟಣೆ ಹೊರಡಿಸಿದ್ದು, ಗೃಹಲಕ್ಷ್ಮಿ, ಗೃಹಜ್ಯೋತಿ ಸೇರಿ ಯಾವುದೇ ಗ್ಯಾರಂಟಿ ನಿಲ್ಲುವುದಿಲ್ಲ. ಪ್ರತಿಪಕ್ಷಗಳ ವದಂತಿಗಳಿಗೆ ಕಿವಿಗೊಡಬೇಡಿ. ಗ್ಯಾರಂಟಿಗಳು ಕಾಂಗ್ರೆಸ್ ಸರ್ಕಾರದ ಹೆಮ್ಮೆಯ ಯೋಜನೆಗಳು. ನೂರಕ್ಕೆ ನೂರರಷ್ಟು ಗ್ಯಾರಂಟಿ ಯೋಜನೆ ಮುಂದುವರಿಯುತ್ತವೆ ಎಂದು ಸ್ಪಷ್ಟಪಡಿಸಿದ್ದಾರೆ.

ಮುಖ್ಯಾಂಶಗಳು

  • ಗ್ಯಾರಂಟಿ ಯೋಜನೆ ನಿಲ್ಲಿಸುತ್ತಾರೆಂದು ವಿಪಕ್ಷಗಳ ಆರೋಪ ವಿಚಾರ
  • ಮಾಧ್ಯಮ ಪ್ರಕಟಣೆ ಮೂಲಕ ಸಿಎಂ ಡಿ.ಕೆ.ಶಿವಕುಮಾರ್ ಸ್ಪಷ್ಟನೆ
  • ಗೃಹಲಕ್ಷ್ಮೀ, ಗೃಹಜ್ಯೋತಿ ಸೇರಿ ಯಾವುದೇ ಗ್ಯಾರಂಟಿ ನಿಲ್ಲುವುದಿಲ್ಲ
  • ಪ್ರತಿಪಕ್ಷಗಳ ವದಂತಿಗೆ ಕಿವಿಗೊಡಬೇಡಿ ಎಂದ ಸಿಎಂ ಡಿ.ಕೆ.ಶಿವಕುಮಾರ್​

ಗ್ಯಾರಂಟಿ ಯೋಜನೆ ನಿಲ್ಲಿಸುತ್ತಾರೆಂಬ ವಿಪಕ್ಷಗಳ ಆರೋಪಕ್ಕೆ ಮಾಧ್ಯಮ ಪ್ರಕಟಣೆ ಹೊರಡಿಸಿರವ ಡಿಕೆ ಶಿವಕುಮಾರ್, ‘ಗೃಹಲಕ್ಷ್ಮೀ‘ ಮತ್ತು ‘ಗೃಹಜ್ಯೋತಿ’ ಯೋಜನೆಗಳನ್ನು ನಿಲ್ಲಿಸುವುದಿಲ್ಲ. ವಿಪಕ್ಷ ಹಬ್ಬಿಸುತ್ತಿರುವ ಸುಳ್ಳು ಸುದ್ದಿಗೆ ಜನರು ಕಿವಿಗೊಡಬಾರದು. ಕೆಲವರು ಸತ್ತವರ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ ಅಕೌಂಟ್ ತೆರೆದು ಯೋಜನೆಯ ಲಾಭ ಪಡೆಯುತ್ತಿದ್ದಾರೆ. ಹೀಗಾಗಿ ಗ್ಯಾರಂಟಿ ಯೋಜನೆ ಫಲಾನುಭವಿಗಳ ದೃಢೀಕರಣ ಮುಖ್ಯ. ಹೆಸರು, ವಿಳಾಸ, ಖಾತೆ ನಂಬರ್ ಖಚಿತಪಡಿಸಿಕೊಳ್ಳಲು ಮತ್ತೆ ಅರ್ಜಿ ಸಲ್ಲಿಸಲು ಹೇಳಲಾಗಿದೆ ಹೊರತು ಯೋಜನೆ ನಿಲ್ಲಿಸಲ್ಲ. ಗ್ಯಾರಂಟಿ ಯೋಜನೆಗಳು ನೂರಕ್ಕೆ ನೂರರಷ್ಟು ಮುಂದುವರಿಯುತ್ತೆ. ಯಾರೂ ಆತಂಕಪಡುವ ಅವಶ್ಯಕತೆ ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ: ಗೃಹಲಕ್ಷ್ಮಿ ಯೋಜನೆ ಪರಿಷ್ಕರಣೆ: ಸೌಲಭ್ಯ ಪಡೆಯಲು ಹೊಸ ಮಾನದಂಡಗಳೇನು? ಇಲ್ಲಿದೆ ಮಾಹಿತಿ

ಮಾಧ್ಯಮ ಪ್ರಕಟಣೆಯಲ್ಲೇನಿದೆ?

ಕಾಂಗ್ರೆಸ್ ಸರ್ಕಾರದ ಜನಪರ ಗ್ಯಾರಂಟಿ ಯೋಜನೆಗಳಾದ ಗೃಹಲಕ್ಷ್ಮಿ ಮತ್ತು ಗೃಹಜ್ಯೋತಿಯನ್ನು ಯಾವುದೇ ಕಾರಣಕ್ಕೂ ಸ್ಥಗಿತಗೊಳಿಸುವುದಿಲ್ಲ. ಈ ಯೋಜನೆಗಳನ್ನು ನಿಲ್ಲಿಸಲಾಗುತ್ತಿದೆ ಎಂಬ ವಿರೋಧ ಪಕ್ಷಗಳ ಸುಳ್ಳು ಪ್ರಚಾರ ಹಾಗೂ ವದಂತಿಗಳಿಗೆ ಸಾರ್ವಜನಿಕರು ಕಿವಿಗೊಡಬಾರದು. ಕೆಲವರು ಮೃತಪಟ್ಟವರ ಹೆಸರಿನಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಯೋಜನೆಗಳ ಲಾಭ ಪಡೆಯುತ್ತಿರುವುದು ಗಮನಕ್ಕೆ ಬಂದಿದೆ. ಹೀಗಾಗಿ ನಿಜವಾದ ಫಲಾನುಭವಿಗಳ ಹೆಸರು, ವಿಳಾಸ ಹಾಗೂ ಬ್ಯಾಂಕ್ ಖಾತೆ ವಿವರಗಳನ್ನು ದೃಢೀಕರಿಸಲು ಮರುಪರಿಶೀಲನೆ ಪ್ರಕ್ರಿಯೆ ಕೈಗೊಳ್ಳಲಾಗಿದೆ. ಇದು ಯೋಜನೆಗಳನ್ನು ನಿಲ್ಲಿಸುವ ಕ್ರಮವಲ್ಲ, ಬದಲಾಗಿ ಅರ್ಹ ಫಲಾನುಭವಿಗಳಿಗೆ ಯೋಜನೆಯ ಸೌಲಭ್ಯಗಳು ಸಮರ್ಪಕವಾಗಿ ತಲುಪುವಂತೆ ಮಾಡುವ ಕ್ರಮವಾಗಿದೆ. ಫಲಾನುಭವಿಗಳು ಯಾವುದೇ ಆತಂಕಪಡಬೇಕಾದ ಅಗತ್ಯವಿಲ್ಲ, ಎಲ್ಲಾ ಗ್ಯಾರಂಟಿ ಯೋಜನೆಗಳು ಎಂದಿನಂತೆ ಮುಂದುವರಿಯಲಿವೆ ಎಂದು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 3:37 pm, Sun, 14 June 26

Source link

ಖಾನ್ ಸರ್ ಕೋಚಿಂಗ್ ಕೇಂದ್ರದ ಪ್ರತಿಸ್ಪರ್ಧಿ, ಜ್ಞಾನಬಿಂದು ಅಕಾಡೆಮಿಯ ನಿರ್ದೇಶಕನ ಸಹೋದರ ನೇಪಾಳದಲ್ಲಿ ಶವವಾಗಿ ಪತ್ತೆ – Kannada News | Khan Sir Rival’s Brother Dead in Nepal: Prince Yadav’s Mysterious Death, Police Probe

ಕಠ್ಮಂಡು, ಜೂನ್ 14: ಖಾನ್​ ಸರ್(Khan Sir) ಅವರ ಕೋಚಿಂಗ್ ಕೇಂದ್ರದ ಪ್ರತಿಸ್ಪರ್ಧಿ ಜ್ಞಾನ ಬಿಂದು ಅಕಾಡೆಮಿ ನಿರ್ದೇಶಕ ರೋಶನ್ ಆನಂದ್ ಅವರ ಸಹೋದರ ಪ್ರಿನ್ಸ್ ಯಾದವ್, ನೇಪಾಳದ ಬಿರಾಟ್‌ನಗರದ ಹೋಟೆಲ್‌ನಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದಾರೆ. ನೇಪಾಳ ಪೊಲೀಸರು ತನಿಖೆ ಆರಂಭಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಐವರನ್ನು ಬಂಧಿಸಿದ್ದಾರೆ, ಅಧಿಕಾರಿಗಳು ಸಾವಿನ ನಿಖರವಾದ ಕಾರಣವನ್ನು ನಿರ್ಧರಿಸಲು ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದಾರೆ.

ಪ್ರಿನ್ಸ್ ಯಾದವ್ ನೇಪಾಳದ ಬಿರಾಟ್‌ನಗರದ ಹೋಟೆಲ್‌ನಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಬೆನ್ನಲ್ಲೇ ನೇಪಾಳ ಪೊಲೀಸರು ಅತ್ಯಂತ ಚುರುಕಿನ ತನಿಖೆ ಆರಂಭಿಸಿದ್ದಾರೆ. ಮೃತದೇಹವನ್ನು ವಿಧಿವಿಜ್ಞಾನ (Forensic) ಪರೀಕ್ಷೆಗೆ ಕಳುಹಿಸಲಾಗಿದ್ದು, ವೈಜ್ಞಾನಿಕ ವರದಿಗಳ ಆಧಾರದ ಮೇಲೆ ಸತ್ಯಾಸತ್ಯತೆಗಳನ್ನು ಶೀಘ್ರದಲ್ಲೇ ಬಯಲಿಗೆಳೆಯಲು ಅಧಿಕಾರಿಗಳು ಸಜ್ಜಾಗಿದ್ದಾರೆ.
ಪಾಟ್ನಾದಲ್ಲಿ ಖಾನ್ ಗ್ಲೋಬಲ್ ಸ್ಟಡೀಸ್ (ಕೆಜಿಎಸ್) ಮತ್ತು ಜ್ಞಾನ್ ಬಿಂದು ಅಕಾಡೆಮಿ ನಡುವಿನ ಪೈಪೋಟಿ ವಿಕೋಪಕ್ಕೆ ತಿರುಗುತ್ತಿದ್ದಂತೆಯೇ ಬಿಹಾರ ಪೊಲೀಸರು ಪರಿಸ್ಥಿತಿಯನ್ನು ಅದ್ಭುತವಾಗಿ ಹತೋಟಿಗೆ ತಂದಿದ್ದಾರೆ.

ಈ ತಿಂಗಳ ಆರಂಭದಲ್ಲಿ ನಡೆದ ಗಲಭೆ ಮತ್ತು ಜೂನ್ 2 ರ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಖಾನ್ ಸರ್ ಅವರ ವಿರುದ್ಧ ಎಫ್‌ಐಆರ್ ದಾಖಲಾದಾಗ, ಪಾಟ್ನಾ ನ್ಯಾಯಾಲಯವು ಅವರಿಗೆ ಬಂಧನದಿಂದ ಮಧ್ಯಂತರ ರಕ್ಷಣೆ ನೀಡಿದೆ. ಇದು ತನಿಖೆಯು ಯಾವುದೇ ಪಕ್ಷಪಾತವಿಲ್ಲದೆ, ಕಾನೂನುಬದ್ಧವಾಗಿ ನಡೆಯಲು ನ್ಯಾಯಾಂಗ ಒದಗಿಸಿದ ದೊಡ್ಡ ಶಕ್ತಿಯಾಗಿದೆ. ಖಾನ್ ಸರ್ ಕೂಡ ತನಿಖೆಗೆ ಸಂಪೂರ್ಣ ಸಹಕಾರ ನೀಡುತ್ತಿದ್ದು, ಸತ್ಯ ಹೊರಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮತ್ತಷ್ಟು ಓದಿ: Khan Sir: ಬಸ್ಸಿಗೆ ದುಡ್ಡಿಲ್ಲದೆ ಊರಿಗೆ ನಡೆದು ಹೋಗಿದ್ದ ಖಾನ್ ಸರ್, 107 ಕೋಟಿ ರೂ ತಿರಸ್ಕರಿಸಿದ ಕಥೆ

ಪ್ರಿನ್ಸ್ ಯಾದವ್ ಅವರ ಸಾವಿನ ಸುದ್ದಿ ಬಿಹಾರ ತಲುಪುತ್ತಿದ್ದಂತೆಯೇ, ಯಾವುದೇ ರೀತಿಯ ಅಹಿತಕರ ಘಟನೆಗಳು ಅಥವಾ ವಿದ್ಯಾರ್ಥಿಗಳ ನಡುವೆ ಘರ್ಷಣೆಗಳು ನಡೆಯದಂತೆ ಪಾಟ್ನಾ ಪೊಲೀಸರು ಮುನ್ನೆಚ್ಚರಿಕಾ ಕ್ರಮವಾಗಿ ಖಾನ್ ಸರ್ ಅವರ ನಿವಾಸ ಮತ್ತು ತರಬೇತಿ ಸಂಸ್ಥೆಗಳ ಸುತ್ತಮುತ್ತ ಭದ್ರತೆಯನ್ನು ನೂರು ಪಟ್ಟು ಹೆಚ್ಚಿಸಿದ್ದಾರೆ. ಪೊಲೀಸರ ಈ ಸಕಾಲಿಕ ಮುನ್ನೆಚ್ಚರಿಕೆಯಿಂದಾಗಿ ನಗರದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಸಂಪೂರ್ಣವಾಗಿ ನಿಯಂತ್ರಣದಲ್ಲಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 2:41 pm, Sun, 14 June 26

Source link

T20 World Cup 2026: ಪಾಕಿಸ್ತಾನ ವಿರುದ್ಧದ ವಿಶ್ವಕಪ್‌ ಪಂದ್ಯಕ್ಕೆ ಭಾರತದ ಬಲಿಷ್ಠ ಪ್ಲೇಯಿಂಗ್ 11 – Kannada News | IND W vs PAK W T20 World Cup 2026: India’s Predicted Playing XI for Opener

2026 ರ ಮಹಿಳಾ ಟಿ20 ವಿಶ್ವಕಪ್‌ನ ಆರನೇ ಪಂದ್ಯದಲ್ಲಿ ಭಾರತ ಹಾಗೂ ಪಾಕಿಸ್ತಾನ ಮುಖಾಮುಖಿಯಾಗುತ್ತಿವೆ. ಬರ್ಮಿಂಗ್‌ಹ್ಯಾಮ್‌ನ ಎಡ್ಜ್‌ಬಾಸ್ಟನ್‌ನಲ್ಲಿ ನಡೆಯುತ್ತಿರುವ ಈ ಪಂದ್ಯ ಈ ಪಂದ್ಯಾವಳಿಯಲ್ಲಿ ಉಭಯ ತಂಡಗಳ ಮೊದಲ ಪಂದ್ಯವಾಗಿದೆ. ಹೀಗಾಗಿ ಎರಡು ತಂಡಗಳು ಗೆಲುವಿನೊಂದಿಗೆ ಟೂರ್ನಿ ಆರಂಭಿಸುವ ಇರಾದೆಯಲ್ಲಿವೆ. ಅದರಲ್ಲೂ ಪಾಕಿಸ್ತಾನದ ವಿರುದ್ಧ ಟಿ20 ಮಾದರಿಯಲ್ಲಿ ಮೇಲುಗೈ ಸಾಧಿಸಿರುವ ಟೀಂ ಇಂಡಿಯಾ ಈ ಪಂದ್ಯವನ್ನು ಗೆಲ್ಲುವ ಮೂಲಕ ತನ್ನ ಗೆಲುವಿನ ಸರಣಿಯನ್ನು ಮುಂದುವರೆಸಲು ನೋಡುತ್ತಿದೆ. ಹೀಗಾಗಿ ಪಾಕ್ ವಿರುದ್ಧ ಬಲಿಷ್ಠ ತಂಡವನ್ನು ಕಟ್ಟಿಕೊಂಡು ಕಣಕ್ಕಿಳಿಯುತ್ತಿದೆ. ಹಾಗಿದ್ದರೆ ಈ ಪಂದ್ಯಕ್ಕೆ ಭಾರತ ವನಿತಾ ಪಡೆಯ ಆಡುವ ಹನ್ನೊಂದರ ಬಳಗ ಹೇಗಿರಲಿದೆ? ಅದಕ್ಕೆಲ್ಲ ಉತ್ತರ ಇಲ್ಲಿದೆ.

ಬ್ಯಾಟಿಂಗ್ ವಿಭಾಗ ಹೇಗಿರಲಿದೆ?

ಆರಂಭಿಕರಾಗಿ ಎಂದಿನಂತೆ ಶಫಾಲಿ ವರ್ಮಾ ಮತ್ತು ಉಪನಾಯಕಿ ಸ್ಮೃತಿ ಮಂಧಾನ ಭಾರತದ ಇನ್ನಿಂಗ್ಸ್ ಆರಂಭಿಸಲಿದ್ದಾರೆ. ಜೆಮಿಮಾ ರೊಡ್ರಿಗಸ್ 3 ನೇ ಕ್ರಮಾಂಕದಲ್ಲಿ ಮತ್ತು ನಾಯಕಿ ಹರ್ಮನ್‌ಪ್ರೀತ್ ಕೌರ್ 4 ನೇ ಕ್ರಮಾಂಕದಲ್ಲಿ ಆಡುವ ನಿರೀಕ್ಷೆಯಿದೆ. ರಿಚಾ, ದೀಪ್ತಿ ಶರ್ಮಾ ಮತ್ತು ಶ್ರೇಯಾಂಕಾ ಪಾಟೀಲ್ ಇತರ ಮಧ್ಯಮ ಕ್ರಮಾಂಕದ ಆಯ್ಕೆಗಳಾಗಿದ್ದಾರೆ. ಭಾರತಿ ಫೂಲ್ಮಾಲಿಗೆ ಈ ಪಂದ್ಯದಲ್ಲಿ ಆಡುವ ಅವಕಾಶ ಸಿಗುವುದು ಅನುಮಾನ.

ಬೌಲಿಂಗ್ ವಿಭಾಗದಲ್ಲಿ ಯಾರ್ಯಾರು?

ಉಳಿದಂತೆ ಕ್ರಾಂತಿ ಗೌಡ್ ಮತ್ತು ರೇಣುಕಾ ಸಿಂಗ್ ಠಾಕೂರ್ ವೇಗದ ದಾಳಿಯನ್ನು ಮುನ್ನಡೆಸಲಿದ್ದಾರೆ. ಯುವ ವೇಗಿ ನಂದನಿ ಶರ್ಮಾ ಮೂರನೇ ವೇಗಿಯಾಗಿಯಾಗಿರಲಿದ್ದಾರೆ. ದೀಪ್ತಿ ಶರ್ಮಾ, ಶ್ರೀ ಚರಣಿ ಮತ್ತು ಶ್ರೇಯಂಕಾ ತಂಡದ ಸ್ಪಿನ್ ವಿಭಾಗದಲ್ಲಿ ಪ್ರಮುಖ ಪಾತ್ರ ವಹಿಸಬಹುದು. ನಾಲ್ಕನೇ ಸ್ಪಿನ್ನರ್ ಅಗತ್ಯವಿದ್ದರೆ ಶಫಾಲಿ ವರ್ಮಾ ಮತ್ತು ನಾಯಕಿ ಹರ್ಮನ್ಪ್ರೀತ್ ಕೌರ್ ಈ ಸ್ಥಾನವನ್ನು ತುಂಬಬಹುದು. ಆದ್ದರಿಂದ, ರಾಧಾ ಯಾದವ್ ಮತ್ತು ವೇಗಿ ಅರುಂಧತಿ ರೆಡ್ಡಿ ಬೆಂಚ್ ಕಾಯಬೇಕು.

ಭಾರತದ ಸಂಭಾವ್ಯ ಪ್ಲೇಯಿಂಗ್ 11: ಸ್ಮೃತಿ ಮಂಧಾನ, ಶಫಾಲಿ ವರ್ಮಾ, ಜೆಮಿಮಾ ರಾಡ್ರಿಗಸ್, ಹರ್ಮನ್‌ಪ್ರೀತ್ ಕೌರ್ (ನಾಯಕಿ), ರಿಚಾ ಘೋಷ್ (ವಿಕೆಟ್‌ಕೀಪರ್), ದೀಪ್ತಿ ಶರ್ಮಾ, ಶ್ರೇಯಾಂಕ ಪಾಟೀಲ್, ಶ್ರೀ ಚರಣಿ, ಕ್ರಾಂತಿ ಗೌಡ್, ನಂದಿನಿ ಶರ್ಮಾ, ರೇಣುಕಾ ಸಿಂಗ್ ಠಾಕೂರ್.

ಪಾಕಿಸ್ತಾನದ ಸಂಭಾವ್ಯ ಪ್ಲೇಯಿಂಗ್ 11: ಮುನಿಬಾ ಅಲಿ (ವಿಕೆಟ್ ಕೀಪರ್), ಗುಲ್ ಫಿರೋಜಾ, ಆಯೇಶಾ ಜಾಫರ್, ಅಲಿಯಾ ರಿಯಾಜ್, ಫಾತಿಮಾ ಸನಾ (ನಾಯಕಿ), ಸೈರಾ ಜಬೀನ್, ನತಾಲಿಯಾ ಪರ್ವೇಜ್, ತುಬಾ ಹಸನ್, ಸಾದಿಯಾ ಇಕ್ಬಾಲ್, ಡಯಾನಾ ಬೇಗ್, ನಶ್ರಾ ಸಂಧು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಮಂಜ್ಞುಮೆಲ್ ಬಾಯ್ಸ್’ ನಿರ್ದೇಶಕನ ಜೊತೆ ಕೈಜೋಡಿಸಲಿರುವ ಮೋಹನ್​ಲಾಲ್ – Kannada News | Mohan lal to act in Manjummel Boys movie director’s next movie

ಮಂಜ್ಞುಮೆಲ್ ಬಾಯ್ಸ್’ (manjummel boys) ಮಲಯಾಳಂ ಚಿತ್ರರಂಗದ ಬ್ಲಾಕ್ ಬಸ್ಟರ್ ಸಿನಿಮಾಗಳಲ್ಲಿ ಒಂದು. 2024 ರಲ್ಲಿ ಬಿಡುಗಡೆ ಆಗಿದ್ದ ಈ ಸಿನಿಮಾ, ಬಾಕ್ಸ್ ಆಫೀಸ್​ನಲ್ಲಿ ದೊಡ್ಡ ಹಿಟ್ ಆಗುವ ಜೊತೆಗೆ ವಿಮರ್ಶಕರಿಂದಲೂ ಮೆಚ್ಚುಗೆ ಗಳಿಸಿಕೊಂಡಿತ್ತು. ಆ ಸಿನಿಮಾವನ್ನು ಚಿದಂಬರಂ ನಿರ್ದೇಶನ ಮಾಡಿದ್ದರು. ‘ಮಂಜ್ಞುಮೆಲ್ ಬಾಯ್ಸ್’ ಸಿನಿಮಾ ಬಳಿಕ ಮತ್ತೊಂದು ಸಿನಿಮಾವನ್ನು ಚಿದಂಬರಂ ನಿರ್ದೇಶಿಸಿದರಾದರೂ ಅದು ಯಶಸ್ವಿ ಆಗಲಿಲ್ಲ. ಇದೀಗ ಈ ನಿರ್ದೇಶನ, ಮಲಯಾಳಂನ ಸ್ಟಾರ್ ನಟ ಮೋಹನ್​​ಲಾಲ್ ಜೊತೆಗೆ ಕೈ ಜೋಡಿಸಿದ್ದಾರೆ ಎನ್ನಲಾಗುತ್ತಿದೆ.

ಮೋಹನ್​​ಲಾನ್ ನಟಿಸಿರುವ ‘ದೃಶ್ಯಂ 3’ ಸಿನಿಮಾ ಕೆಲವೇ ದಿನಗಳ ಹಿಂದೆ ಬಿಡುಗಡೆ ಆಗಿದೆ. ಸಿನಿಮಾ ನಿರೀಕ್ಷತ ಮಟ್ಟದಲ್ಲಿ ಯಶಸ್ಸು ಗಳಿಸಿಲ್ಲ. ಅದರ ಹಿಂದೆ ಬಿಡುಗಡೆ ಆಗಿದ್ದ ಮೋಹನ್​​ಲಾಲ್ ನಟನೆಯ ‘ಪೇಟ್ರಿಯಾಟ್’ ಸಿನಿಮಾ, ಬಹುತಾರಾಗಣ ಇದ್ದ ಹೊರತಾಗಿಯೂ ಫ್ಲಾಪ್ ಎನಿಸಿಕೊಂಡಿದೆ. ಇದೀಗ ಮೋಹನ್​​ಲಾಲ್ ಅವರು ತಮ್ಮ ಮುಂದಿನ ಸಿನಿಮಾಕ್ಕಾಗಿ ಚಿದಂಬರಂ ಅವರ ಜೊತೆ ಸೇರಿದ್ದಾರೆ ಎನ್ನಲಾಗುತ್ತಿದೆ. ಚಿದಂಬರಂ ಅವರ ತಂದೆಯೇ ಈ ಸುದ್ದಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.

ಆದರೆ ಈ ಸುದ್ದಿಯನ್ನು ನಿರ್ದೇಶಕ ಚಿದಂಬರಂ ತಳ್ಳಿ ಹಾಕಿದ್ದಾರೆ. ನಿರ್ದೇಶಕರು ಹೇಳುವಂತೆ, ಅವರ ತಂದೆ ಬಹುಶಃ ಯಾವುದೋ ವದಂತಿಯನ್ನು ಕೇಳಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರಬಹುದು. ತಾವು ಮೋಹನ್‌ಲಾಲ್ ಅವರನ್ನು ಆಕಸ್ಮಿಕವಾಗಿ ಭೇಟಿಯಾಗಿದ್ದರೂ, ಅವರೊಂದಿಗೆ ಯಾವುದೇ ಸಿನಿಮಾದ ಬಗ್ಗೆ ಇಲ್ಲಿಯವರೆಗೆ ಮಾತುಕತೆ ನಡೆಸಿಲ್ಲ ಎಂದು ಅವರು ತಿಳಿಸಿದ್ದಾರೆ. ಒಂದು ವೇಳೆ ಮೋಹನ್‌ಲಾಲ್ ಅವರೊಂದಿಗೆ ಕೆಲಸ ಮಾಡುವ ಅವಕಾಶ ಸಿಕ್ಕರೆ, ಅದು ಮೋಹನ್‌ಲಾಲ್ ಅವರ ಸಿನಿಮಾಗಳಲ್ಲಿ ಪ್ರೇಕ್ಷಕರು ನಿರೀಕ್ಷಿಸುವಂತಹ ಎಲ್ಲಾ ಅಂಶಗಳನ್ನು ಒಳಗೊಂಡ ಒಂದು ಸಂಪೂರ್ಣ ಮನರಂಜನಾ ಚಿತ್ರವಾಗಿರುತ್ತದೆ ಎಂದು ‘ಮಂಜುಮ್ಮಲ್ ಬಾಯ್ಸ್’ ಖ್ಯಾತಿಯ ನಿರ್ದೇಶಕರು ಹೇಳಿದ್ದಾರೆ.

ಇದನ್ನೂ ಓದಿ:‘ಬಾಯ್ಸ್ ನೆವರ್ ಕಾಂಪ್ರಮೈಸ್’ ಸಿನಿಮಾದ ಟೀಸರ್ ಬಿಡುಗಡೆ; ಸಿಕ್ತು ಕಥೆಯ ಸುಳಿವು

ನಿರ್ದೇಶಕರು ತಮ್ಮ ಮುಂದಿನ ಸಿನಿಮಾ ‘ಬಾಲನ್: ದಿ ಬಾಯ್’ ಸಿನಿಮಾ ಮುಗಿಸಿದ್ದು ಕೆಲವೇ ದಿನಗಳಲ್ಲಿ ಸಿನಿಮಾ ಬಿಡುಗಡೆ ಆಗಲಿದೆ. ಇದೊಂದು ಭಾವನಾತ್ಮಕ ಥ್ರಿಲ್ಲರ್ ಕತೆಯನ್ನು ಒಳಗೊಂಡಿರುವ ಸಿನಿಮಾ ಆಗಿದೆ. ಕಷ್ಟದ ಬಾಲ್ಯ ಮತ್ತು ತಾಯಿಯ ಕಣ್ಮರೆಯ ನಂತರ ತನ್ನ ತಾಯಿಯನ್ನು ಹುಡುಕುತ್ತಿರುವ ಹದಿಹರೆಯದ ಹುಡುಗನ ಸುತ್ತ ಸುತ್ತುವ ಕತೆ ಇದಾಗಿದೆ. ಅವನು ತನ್ನ ಹಿಂದಿನ ಜೀವನದ ಸತ್ಯವನ್ನು ಹುಡುಕಲು ಪ್ರಯತ್ನಿಸುತ್ತಾನೆ. ಈ ಚಿತ್ರ ಜೂನ್ 19, 2026 ರಂದು ಬಿಡುಗಡೆಯಾಗಲಿದೆ. ಅದರ ಬಳಿಕ ಹಿಂದಿ ಸಿನಿಮಾ ಒಂದನ್ನು ಸಹ ಚಿದಂಬರಂ ನಿರ್ದೇಶಿಸಲಿದ್ದಾರೆ.

ಮೋಹನ್​​ಲಾಲ್ ಅವರು ಪ್ರಸ್ತುತ ತರುಣ್ ಮೂರ್ತಿ ನಿರ್ದೇಶನದ ‘ಅತಿಮನೋಹರಂ’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಮೀರಾ ಜಾಸ್ಮಿನ್ ನಾಯಕಿಯಾಗಿ ನಟಿಸುತ್ತಿದ್ದು, ಈ ವರ್ಷದ ಆಯುಧ ಪೂಜೆಯ ಸಮಯದಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಮುಂದಿನ ದಿನಗಳಲ್ಲಿ, ನಟ ವಿಷ್ಣು ಮೋಹನ್, ಪ್ರಿಯದರ್ಶನ್ ಮತ್ತು ದಿಲೀಪ್ ಪೋಥನ್ ಅವರ ನಿರ್ದೇಶನದ ಚಿತ್ರಗಳಲ್ಲಿ ನಟಿಸಲಿದ್ದಾರೆ. ಲಾಲೆಟ್ಟನ್ ಅವರು ಪೃಥ್ವಿರಾಜ್ ಸುಕುಮಾರನ್ ಅವರ ‘ಖಲೀಫಾ’, ರಜನಿಕಾಂತ್ ಅವರ ‘ಜೈಲರ್ 2’ ಮತ್ತು ತಮ್ಮ ಮಗಳು ವಿಸ್ಮಯ ಮೋಹನ್‌ಲಾಲ್ ಅವರ ಮೊದಲ ಚಿತ್ರ ‘ತುಡಕ್ಕಂ’ನಲ್ಲಿ ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಓಮನ್ ಕರಾವಳಿಯಲ್ಲಿ ಮುಳುಗುತ್ತಿದ್ದ ಹಡಗಿನಲ್ಲಿದ್ದ 14 ಭಾರತೀಯರನ್ನು ರಕ್ಷಿಸಿದ ಅಮೆರಿಕ ನೌಕಾಪಡೆ – Kannada News | US Navy, Indian Navy Rescue 14 Indians from Sinking Ship off Oman Coast

ಓಮನ್, ಜೂನ್ 14: ಮಧ್ಯಪ್ರಾಚ್ಯದಲ್ಲಿ ಪ್ರಾದೇಶಿಕ ಮತ್ತು ರಾಜತಾಂತ್ರಿಕ ಉದ್ವಿಗ್ನತೆಗಳಿದ್ದಾಗ್ಯೂ, ಓಮನ್ ಕರಾವಳಿಯಲ್ಲಿ ಮುಳುಗುತ್ತಿದ್ದ ಹಡಗಿನಲ್ಲಿದ್ದ 14 ಭಾರತೀಯರನ್ನು ಅಮೆರಿಕ ಹಾಗೂ ಭಾರತೀಯ ನೌಕಾಪಡೆ ರಕ್ಷಿಸಿದೆ. ಸಂಕಷ್ಟಕ್ಕೆ ಸಿಲುಕಿದ ಜೀವಗಳನ್ನು ರಕ್ಷಿಸುವ ವಿಷಯದಲ್ಲಿ ನೌಕಾಪಡೆಗಳು ತೋರಿರುವ ಅದ್ಭುತ ಮಾನವೀಯತೆ ಹಾಗೂ ಸಮನ್ವಯತೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೊಸ ಭರವಸೆಯನ್ನು ಮೂಡಿಸಿದೆ.  ಓಮನ್ ಕರಾವಳಿಯ ಅರಬ್ಬಿ ಸಮುದ್ರದಲ್ಲಿ ಮುಳುಗುವ ಹಂತ ತಲುಪಿದ್ದ ವಾಣಿಜ್ಯ ‘ಧೋ’ (Dhow) ಹಡಗಿನಲ್ಲಿದ್ದ 14 ಭಾರತೀಯ ಪ್ರಜೆಗಳನ್ನು ಅಮೆರಿಕ ಮತ್ತು ಭಾರತೀಯ ನೌಕಾಪಡೆಗಳು ಜಂಟಿ ಕಾರ್ಯಾಚರಣೆಯ ಮೂಲಕ ಅತ್ಯಂತ ಯಶಸ್ವಿಯಾಗಿ ರಕ್ಷಿಸಿವೆ.

ಜೂನ್ 14ರ ಭಾನುವಾರದಂದು ಒಮಾನ್‌ನ ರಾಸ್ ಅಲ್ ಹಡ್‌ನಿಂದ ಪೂರ್ವಕ್ಕೆ ಸುಮಾರು 80 ನಾಟಿಕಲ್ ಮೈಲುಗಳಷ್ಟು ದೂರದಲ್ಲಿ 14 ಭಾರತೀಯ ನಾವಿಕರಿದ್ದ ಹಡಗೊಂದು ತಾಂತ್ರಿಕ ದೋಷದಿಂದಾಗಿ ಮುಳುಗಲಾರಂಭಿಸಿತು. ಹಡಗು ಅಪಾಯದಲ್ಲಿದೆ ಎಂಬ ಮಾಹಿತಿ ಸಿಗುತ್ತಿದ್ದಂತೆಯೇ ಕಾರ್ಯಾಚರಣೆಗೆ ಇಳಿದ ಅಮೆರಿಕ ನೌಕಾಪಡೆಯು ತೀರದ ಅಧಿಕಾರಿಗಳಿಗೆ ಹಾಗೂ ಭಾರತೀಯ ನೌಕಾಪಡೆಗೆ ಸಂದೇಶ ರವಾನಿಸಿತು.

ಅಲ್ಲದೆ, ತಕ್ಷಣವೇ ಯುಎಸ್ ನೇವಿಯ ಪಿ-8 (P-8) ಕಡಲ ಗಸ್ತು ವಿಮಾನವು ಆಕಾಶ ಮಾರ್ಗದ ಮೂಲಕ ಘಟನಾ ಸ್ಥಳಕ್ಕೆ ತಲುಪಿ, ಮುಳುಗುತ್ತಿದ್ದ ಹಡಗಿನ ಬಳಿ ಜೀವಕೋಶದ ದೋಣಿಯನ್ನು (Life Raft) ಯಶಸ್ವಿಯಾಗಿ ಇಳಿಸಿತು. ಸಿಬ್ಬಂದಿ ಸುರಕ್ಷಿತವಾಗಿ ಅದಕ್ಕೆ ಸ್ಥಳಾಂತರಗೊಳ್ಳುವಂತೆ ನೋಡಿಕೊಳ್ಳುವ ಮೂಲಕ ಮೊದಲ ಹಂತದ ಯಶಸ್ಸು ಸಾಧಿಸಲಾಯಿತು.

ಅಮೆರಿಕ ನೌಕಾಪಡೆಯು ಕೇವಲ ವಿಮಾನದ ಮೂಲಕ ಸಹಾಯ ಮಾಡಿದ್ದಲ್ಲದೆ, ಅದೇ ಮಾರ್ಗದಲ್ಲಿ ಸಾಗುತ್ತಿದ್ದ ಸೇಂಟ್ ಕಿಟ್ಸ್ ಮತ್ತು ನೆವಿಸ್ ದೇಶದ ಧ್ವಜ ಹೊತ್ತ ‘ಎಂವಿ ಜಬಲ್ ಅಲಿ 9’ ಎಂಬ ಬೃಹತ್ ವ್ಯಾಪಾರಿ ಹಡಗಿನ ನೆರವನ್ನು ಕೋರಿತು. ಒಮಾನ್‌ನ ಸೋಹಾರ್‌ನಿಂದ ಮುಂಬೈಗೆ ಪ್ರಯಾಣಿಸುತ್ತಿದ್ದ ಈ ಹಡಗು ಈಗಾಗಲೇ ಸಮೀಪದಲ್ಲೇ ಇದ್ದುದರಿಂದ, ಯುಎಸ್ ನೇವಿ ಮತ್ತು ಭಾರತೀಯ ನೌಕಾಪಡೆಯ ಮಾರ್ಗದರ್ಶನದಲ್ಲಿ ತ್ವರಿತವಾಗಿ ತೊಂದರೆಗೀಡಾದ ಭಾರತೀಯರ ಬಳಿಗೆ ಸಾಗಿತು. ಎಲ್ಲಾ 14 ಭಾರತೀಯ ನಾವಿಕರನ್ನು ಸುರಕ್ಷಿತವಾಗಿ ಹಡಗಿಗೆ ಹತ್ತಿಸಿಕೊಳ್ಳುವಲ್ಲಿ ರಕ್ಷಣಾ ಪಡೆಗಳು ಯಶಸ್ವಿಯಾಗಿವೆ.

ಮತ್ತಷ್ಟು ಓದಿ: ಓಮನ್ ಕರಾವಳಿಯಲ್ಲಿ 24 ಭಾರತೀಯ ನಾವಿಕರಿದ್ದ ಹಡಗಿನಲ್ಲಿ ಬೆಂಕಿ ಅವಘಡ

ವಿಶ್ವದ ಅತ್ಯಂತ ಸೂಕ್ಷ್ಮ ಹಾಗೂ ಆಯಕಟ್ಟಿನ ಕಡಲ ಜಲಮಾರ್ಗವಾಗಿರುವ ಹಾರ್ಮುಜ್ ಜಲಸಂಧಿಯ ಸುತ್ತಮುತ್ತ ಇತ್ತೀಚಿನ ತಿಂಗಳುಗಳಲ್ಲಿ ರಾಜತಾಂತ್ರಿಕ ಉದ್ವಿಗ್ನತೆ ಹೆಚ್ಚಾಗಿದೆ. ಅಮೆರಿಕ ಮತ್ತು ಇರಾನ್ ನಡುವೆ ಶಾಂತಿ ಮಾತುಕತೆಗಳ ಪ್ರಗತಿ ನಡೆಯುತ್ತಿದ್ದರೂ, ಮಿಲಿಟರಿ ಚಟುವಟಿಕೆಗಳಿಂದಾಗಿ ಜಲಮಾರ್ಗದಲ್ಲಿ ಹಡಗುಗಳ ಸಂಚಾರಕ್ಕೆ ಕಠಿಣ ಸವಾಲುಗಳು ಎದುರಾಗಿದ್ದವು. ಇಂತಹ ದುರ್ಬಲ ಭದ್ರತಾ ವಾತಾವರಣದಲ್ಲೂ, ಭೌಗೋಳಿಕ ರಾಜಕೀಯವನ್ನು ಬದಿಗಿಟ್ಟು ಭಾರತೀಯ ನಾವಿಕರ ಜೀವ ರಕ್ಷಿಸಲು ಅಮೆರಿಕ, ಒಮಾನ್ ಮತ್ತು ಭಾರತದ ನೌಕಾ ಪಡೆಗಳು ತೋರಿದ ಜಾಗರೂಕತೆ ಅತ್ಯಂತ ಶ್ಲಾಘನೀಯವಾಗಿದೆ.

ಕಡಲ ಹೆದ್ದಾರಿಗಳಲ್ಲಿ ಸುರಕ್ಷತೆಯು ಇಡೀ ಜಗತ್ತಿಗೆ ಎಷ್ಟು ಮುಖ್ಯ ಎಂಬುದನ್ನು ಈ ಘಟನೆ ನೆನಪಿಸಿದೆ. ನೌಕಾಪಡೆಗಳ ಕಟ್ಟುನಿಟ್ಟಿನ ಕಣ್ಗಾವಲು ಮತ್ತು ಅತ್ಯಾಧುನಿಕ ತಂತ್ರಜ್ಞಾನದ ಸಕಾಲಿಕ ಬಳಕೆಯಿಂದಾಗಿ 14 ಭಾರತೀಯ ಕುಟುಂಬಗಳ ಭವಿಷ್ಯದ ದೀಪಗಳು ಸುರಕ್ಷಿತವಾಗಿ ತಾಯ್ನಾಡಿಗೆ ಮರಳುತ್ತಿರುವುದು ಇಡೀ ದೇಶಕ್ಕೆ ಸಂತಸ ತಂದಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಕಲಬುರಗಿಯಲ್ಲಿ ಮತ್ತೊಂದು ಸರ್ಕಾರಿ ಶಾಲೆಯ ಮೇಲ್ಛಾವಣಿ ಕುಸಿತ: ಭಾನುವಾರ ಹಿನ್ನೆಲೆ ತಪ್ಪಿದ ಅನಾಹುತ – Kannada News | Another Government School Roof Collapse: Sunday Prevented a Major Disaster

ಶಾಲೆಯ ಮೇಲ್ಛಾವಣಿ ಕುಸಿತImage Credit source: tv9 kannada

ಕಲಬುರಗಿ, ಜೂನ್​​ 14: ಎರಡು ದಿನದ ಹಿಂದಷ್ಟೇ ನಗರದ ಪಿಯು ಕಾಲೇಜು ಮೇಲ್ಛಾವಣಿ ಕುಸಿದು (roof collapse) ನಾಲ್ವರು ವಿದ್ಯಾರ್ಥಿನಿಯರು ಗಾಯಗೊಂಡಿದ್ದರು. ಆ ಘಟನೆ ಮಾಸುವ ಮುನ್ನವೇ ಇದೀಗ ಮತ್ತೊಂದು ಆಘಾತಕಾರಿ ಘಟನೆ ನಡೆದಿದೆ. ಆಳಂದ ತಾಲೂಕಿನ ಸಂಗೋಳಗಿ(ಸಿ) ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯ ಮೇಲ್ಛಾವಣಿ ಕುಸಿದಿದೆ. ಆದರೆ ಭಾನುವಾರ ಹಿನ್ನೆಲೆ ಭಾರೀ ಅನಾಹುತವೊಂದು ತಪ್ಪಿದೆ.

ಮುಖ್ಯಾಂಶಗಳು

  • ಮತ್ತೊಂದು ಸರ್ಕಾರಿ ಶಾಲೆಯ ಮೇಲ್ಛಾವಣಿ ಕುಸಿತ
  • ಒಂದು ಘಟನೆ ಮಾಸುವ ಮುನ್ನವೇ ಮತ್ತೊಂದು ಅನಾಹುತ
  • ಭಾನುವಾರ ಶಾಲೆಗೆ ರಜೆ ಹಿನ್ನೆಲೆ ತಪ್ಪಿದ ಅನಾಹುತ

ಏಕಾಏಕಿ ಕುಸಿದ ಕಾಲೇಜು ಮೇಲ್ಛಾವಣಿಯ ಪ್ಲಾಸ್ಟರ್ 

ಇನ್ನು ಎರಡು ದಿನದ ಹಿಂದಷ್ಟೇ ನಗರದಲ್ಲಿ ಪಿಯು ಕಾಲೇಜು ಮೇಲ್ಛಾವಣಿ ಒಂದು ಕುಸಿದಿತ್ತು. ಲೆಕ್ಷರರ್ ಪಾಠ ಮಾಡುತ್ತಿಗಾಗಲೇ ಮೇಲ್ಛಾವಣಿಯ ಪ್ಲಾಸ್ಟರ್​ ಏಕಾಏಕಿ ಕುಸಿದು ಬಿದ್ದಿತ್ತು. ಸಣ್ಣಪುಟ್ಟ ಗಾಯಗಳೊಂದಿಗೆ ವಿದ್ಯಾರ್ಥಿನಿಯರು ಅಪಾಯದಿಂದ ಪಾರಾಗಿದ್ದು, ಭಾರೀ ದುರಂತವೊಂದು ಕೂದಲೆಳೆ ಅಂತರದಲ್ಲಿ ಜಸ್ಟ್​ ಮಿಸ್​ ಆಗಿತ್ತು.

ವಿದ್ಯಾರ್ಥಿನಿಯರ ಮೇಲೆ ಬಿದ್ದ ಮೇಲ್ಛಾವಣಿ ಪ್ಲಾಸ್ಟರ್

ಕಲಬುರಗಿ ನಗರದ ಸರ್ಕಾರಿ ಕಾಲೇಜಿನಲ್ಲಿ ಈ ಅನಾಹುತ ನಡೆದಿತ್ತು. ಬೆಳಗ್ಗೆ ಎಂದಿನಂತೆ ಪಿಯುಸಿ ಪ್ರಥಮ ವರ್ಷ ವಾಣಿಜ್ಯ ವಿಭಾಗದ ಸುಮಾರು 80 ವಿದ್ಯಾರ್ಥಿನಿಯರು ತರಗತಿಗೆ ಬಂದಿದ್ದರು. ಪ್ರಾದ್ಯಾಪಕರೂ ಕ್ಲಾಸ್​ಗೆ ಎಂಟ್ರಿ ಕೊಟ್ಟು ಪಾಠ ಶುರುಮಾಡಿದ್ದರು. ಆದರೆ ಕೆಲವೇ ಕೆಲವು ಕ್ಷಣಗಳಲ್ಲಿ ಮೇಲ್ಛಾವಣಿ ಪ್ಲಾಸ್ಟರ್​ ದೊಪ್ಪೆಂದು ವಿದ್ಯಾರ್ಥಿನಿಯರ ಮೇಲೆ ಬಿದ್ದಿತ್ತು. ವಿದ್ಯಾರ್ಥಿನಿಯರಾದ ಪೂಜಾ, ಶೀತಲ್, ಸೃಷ್ಟಿ, ಸ್ನೇಹಾ ಹಾಗೂ ದಿವ್ಯಾ ಗಾಯಗೊಂಡಿದ್ದರು. ಇನ್ನು ಗಾಯಾಳುಗಳ ಆರೋಗ್ಯ ವಿಚಾರಿಸಿದ ಶಾಸಕ ಅಲ್ಲಮಪ್ರಭು ಪಾಟೀಲ, ಕೆಲಸ ನಿರ್ವಹಿಸಿದ ಏಜೆನ್ಸಿ ವಿರುದ್ಧ ಸರ್ಕಾರಕ್ಕೆ ಪತ್ರ ಬರೆಯುತ್ತೇನೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಪಾಠ ಕೇಳುವಾಗಲೇ ವಿದ್ಯಾರ್ಥಿನಿಯರ ಮೇಲೆ ಕುಸಿದ ಕಾಲೇಜು ಕಟ್ಟಡದ ಮೇಲ್ಛಾವಣಿಯ ಪ್ಲಾಸ್ಟರ್: ತಪ್ಪಿದ ಭಾರಿ ಅನಾಹುತ

ಅಂದಾಗೆ ಈ ಕಟ್ಟಡ ಕಟ್ಟಿ ಕೇವಲ 8 ವರ್ಷವಷ್ಟೇ ಆಗಿದೆ. ಕೆಲ ದಿನಗಳ ಹಿಂದೆಯೂ ಇದೇ ರೀತಿ ಮೇಲ್ಛಾವಣಿಯ ಪ್ಲಾಸ್ಟರ್ ಕುಸಿದು ಬಿದ್ದಿತ್ತು. ಕಾಲೇಜ್‌ನ ಬಹುತೇಕ ಕೊಠಡಿಗಳು ಹೀಗೆ ಬೀಳುವ ಹಂತ ತಲುಪಿದೆ. ವಿದ್ಯಾರ್ಥಿಗಳು ಜೀವ ಕೈಯಲ್ಲಿಡಿದು ಪಾಠ ಕೇಳುವ ಸ್ಥಿತಿ ಎದುರಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Hackathon 3.0: ಇಸ್ರೋ ವಿಜ್ಞಾನಿಗಳ ಜೊತೆ ಕೆಲಸ ಮಾಡಲು ವಿದ್ಯಾರ್ಥಿಗಳಿಗೆ ಸುವರ್ಣವಕಾಶ; ಉಚಿತ ಇಂಟರ್ನ್‌ಶಿಪ್! – Kannada News | ISRO’s Indian Space Hackathon 3.0: Solve Challenges, Get Mentorship and Internships

ಇಸ್ರೋ ಜಂಟಿ ಬಾಹ್ಯಾಕಾಶ ಹ್ಯಾಕಥಾನ್Image Credit source: Pinterest

ಬಾಹ್ಯಾಕಾಶ ತಂತ್ರಜ್ಞಾನ ಮತ್ತು ಸಂಶೋಧನೆಯಲ್ಲಿ ಆಸಕ್ತಿಯುಳ್ಳ ದೇಶದ ಯುವ ಪ್ರತಿಭೆಗಳಿಗಾಗಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು (ISRO) ಅತ್ಯಾಕರ್ಷಕ ಪ್ರಕಟಣೆಯೊಂದನ್ನು ಹೊರಡಿಸಿದೆ. ಇಸ್ರೋ ಸಂಸ್ಥೆಯು ‘ಭಾರತೀಯ ಬಾಹ್ಯಾಕಾಶ ಹ್ಯಾಕಥಾನ್’ (Indian Space Hackathon) ನ 3ನೇ ಆವೃತ್ತಿಯನ್ನು ಅಧಿಕೃತವಾಗಿ ಪ್ರಕಟಿಸಿದ್ದು, ರಾಷ್ಟ್ರೀಯ ಮಟ್ಟದ ಈ ನಾವೀನ್ಯತಾ ಸ್ಪರ್ಧೆಗೆ ದೇಶಾದ್ಯಂತದ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಭಾರತದ ಬಾಹ್ಯಾಕಾಶ ಮಹತ್ವಾಕಾಂಕ್ಷೆಗಳಿಗೆ ಸಂಬಂಧಿಸಿದ ನೈಜ ಜಗತ್ತಿನ ಕಠಿಣ ಸವಾಲುಗಳ ಮೇಲೆ ಕೆಲಸ ಮಾಡಲು ಯುವ ಸಂಶೋಧಕರಿಗೆ ಇದೊಂದು ಅಪರೂಪದ ವೇದಿಕೆಯಾಗಿದೆ.

ಇಸ್ರೋ ವಿಜ್ಞಾನಿಗಳಿಂದ ನೇರ ಮಾರ್ಗದರ್ಶನ ಮತ್ತು ಇಂಟರ್ನ್‌ಶಿಪ್:

ಈ ಹ್ಯಾಕಥಾನ್‌ನಲ್ಲಿ ಭಾಗವಹಿಸುವ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಲು ಇಸ್ರೋದ ಹಿರಿಯ ವಿಜ್ಞಾನಿಗಳು, ಸಂಶೋಧಕರು ಮತ್ತು ಬಾಹ್ಯಾಕಾಶ ಕ್ಷೇತ್ರದ ಅಗ್ರಗಣ್ಯ ತಜ್ಞರು ನೇರವಾಗಿ ಲಭ್ಯವಿರುತ್ತಾರೆ. ಅವರೊಂದಿಗೆ ಸಂವಾದ ನಡೆಸುವ ಮೂಲಕ ವಿದ್ಯಾರ್ಥಿಗಳು ತಮ್ಮ ಜ್ಞಾನವನ್ನು ವೃದ್ಧಿಸಿಕೊಳ್ಳಬಹುದು. ಅಷ್ಟೇ ಅಲ್ಲದೆ, ಈ ಸ್ಪರ್ಧೆಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಇಸ್ರೋ ಸಂಸ್ಥೆಯಲ್ಲೇ ಉಚಿತವಾಗಿ ಇಂಟರ್ನ್‌ಶಿಪ್ (Internship) ಮಾಡುವ ಸುವರ್ಣ ಅವಕಾಶವೂ ದೊರೆಯಲಿದೆ ಎಂದು ಇಸ್ರೋ ತಿಳಿಸಿದೆ.

ವಿದ್ಯಾರ್ಥಿಗಳ ಮುಂದಿರುವ 15 ಪ್ರಮುಖ ಬಾಹ್ಯಾಕಾಶ ಸವಾಲುಗಳು:

ಈ ಬಾರಿಯ ಹ್ಯಾಕಥಾನ್‌ನಲ್ಲಿ ಕೃತಕ ಬುದ್ಧಿಮತ್ತೆ (AI), ಕ್ಲೈಮೇಟ್ ಮಾಡೆಲಿಂಗ್, ಸ್ಯಾಟಲೈಟ್ ಇಮೇಜರಿ ಸೇರಿದಂತೆ ಅತ್ಯಾಧುನಿಕ ತಂತ್ರಜ್ಞಾನದ ವಿವಿಧ ಆಯಾಮಗಳನ್ನು ಒಳಗೊಂಡ ಒಟ್ಟು 15 ಸವಾಲುಗಳನ್ನು ನೀಡಲಾಗಿದೆ. ಇವುಗಳಲ್ಲಿ ಕೃತಕ ಬುದ್ಧಿಮತ್ತೆ (AI) ಮತ್ತು ಮಷೀನ್ ಲರ್ನಿಂಗ್ ತಂತ್ರಜ್ಞಾನ ಬಳಸಿ ನಗರ ಪ್ರದೇಶಗಳ ಉಷ್ಣತೆಯ (Urban Heat) ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದು ಮತ್ತು ಚಂದ್ರಯಾನ-2 ರ ದತ್ತಾಂಶವನ್ನು ಬಳಸಿಕೊಂಡು ಚಂದ್ರನ ದಕ್ಷಿಣ ಧ್ರುವದ ಸಮೀಪವಿರುವ ಭೂಗತ ಮಂಜುಗಡ್ಡೆಯನ್ನು ಪತ್ತೆ ಹಚ್ಚುವುದು ಪ್ರಮುಖವಾಗಿದೆ. ಇದರೊಂದಿಗೆ ಇಸ್ರೋದ ಹೆಮ್ಮೆಯ ‘ಆದಿತ್ಯ-ಎಲ್1’ ನೌಕೆಯಿಂದ ಪಡೆದ ಡೇಟಾ ಬಳಸಿ ಸೌರ ಜ್ವಾಲೆಗಳ ಮುನ್ಸೂಚನೆ ನೀಡುವುದು ಹಾಗೂ ಭಾರತದ ಒಟ್ಟಾರೆ ಹವಾಮಾನದ ಮೇಲೆ ಕೃತಕ ಬುದ್ಧಿಮತ್ತೆ ಆಧಾರಿತ ‘ಡಿಜಿಟಲ್ ಟ್ವಿನ್’ (Digital Twin) ಮಾದರಿಯನ್ನು ಅಭಿವೃದ್ಧಿಪಡಿಸುವುದು ಕೂಡ ಈ ಸವಾಲುಗಳಲ್ಲಿದೆ. ಇನ್ನುಳಿದಂತೆ ಕೃಷಿ ಕ್ಷೇತ್ರ, ಸ್ಯಾಟಲೈಟ್ ಕಾರ್ಯಾಚರಣೆ ಹಾಗೂ ವಾಯು ಗುಣಮಟ್ಟದ ಮೇಲ್ವಿಚಾರಣೆಯಂತಹ ಪ್ರಮುಖ ಕ್ಷೇತ್ರಗಳು ಈ ಸವಾಲುಗಳಲ್ಲಿ ಒಳಗೊಂಡಿವೆ.

ಹ್ಯಾಕಥಾನ್‌ನಲ್ಲಿ ಭಾಗವಹಿಸಲು ಅರ್ಹತೆಗಳು ಮತ್ತು ತಂಡದ ನಿಯಮಗಳು:

ಬಾಹ್ಯಾಕಾಶ ಕ್ಷೇತ್ರದಲ್ಲಿ ಸಾಧನೆ ಮಾಡಬೇಕೆಂಬ ಕನಸು ಹೊತ್ತಿರುವ ವಿವಿಧ ಹಂತದ ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಸದ್ಯ ಪದವಿ (UG), ಸ್ನಾತಕೋತ್ತರ ಪದವಿ (PG), ಪಿಎಚ್‌ಡಿ (PhD) ಓದುತ್ತಿರುವ ವಿದ್ಯಾರ್ಥಿಗಳು ಮತ್ತು ಸಂಶೋಧಕರು (Researchers) ಈ ಹ್ಯಾಕಥಾನ್‌ನಲ್ಲಿ ಭಾಗವಹಿಸಲು ಅರ್ಹರಾಗಿದ್ದಾರೆ. ಸ್ಪರ್ಧೆಯಲ್ಲಿ ಭಾಗವಹಿಸಲು ಪ್ರತಿ ತಂಡದಲ್ಲಿ ಕಡ್ಡಾಯವಾಗಿ ಮೂರಿಂದ ನಾಲ್ಕು ಸದಸ್ಯರು ಇರಬೇಕು. ಈ ತಂಡದಲ್ಲಿ ವಿಭಿನ್ನ ಕಾಲೇಜು ಅಥವಾ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು ಒಟ್ಟಾಗಿ ಸೇರಿ ಭಾಗವಹಿಸಲು ಅವಕಾಶವಿದೆ. ಅತ್ಯಂತ ಪ್ರಮುಖವಾದ ವಿಷಯವೆಂದರೆ ಈ ರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲು ಯಾವುದೇ ಪ್ರವೇಶ ಶುಲ್ಕ ಇರುವುದಿಲ್ಲ, ನೋಂದಣಿ ಪ್ರಕ್ರಿಯೆಯು ಸಂಪೂರ್ಣವಾಗಿ ಉಚಿತವಾಗಿದೆ.

ಇದನ್ನೂ ಓದಿ: ಲಿಖಿತ ಪರೀಕ್ಷೆಯಿಲ್ಲದೆ ಸಿಗಲಿದೆ ತಿಂಗಳಿಗೆ 2.25 ಲಕ್ಷ ರೂ. ಸಂಬಳದ ಉದ್ಯೋಗ! ಅರ್ಜಿ ಸಲ್ಲಿಸುವುದು ಹೇಗೆ?

ಪ್ರಮುಖ ದಿನಾಂಕಗಳು ಮತ್ತು ವೇಳಾಪಟ್ಟಿ:

ಈ ಹ್ಯಾಕಥಾನ್‌ನ ನೋಂದಣಿ ಪ್ರಕ್ರಿಯೆಯು ಈಗಾಗಲೇ ಜೂನ್ 10 ರಿಂದ ಆರಂಭವಾಗಿದ್ದು, ಜುಲೈ 1 ರವರೆಗೆ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ. ಇಸ್ರೋ ಸಂಸ್ಥೆಯು ಜೂನ್ 15 ಮತ್ತು 16 ರಂದು ಸವಾಲುಗಳ ವಿವರಣಾತ್ಮಕ ಸೆಷನ್ (Problem Statement Explainer Session) ಅನ್ನು ಆಯೋಜಿಸಲಿದೆ. ಸ್ಪರ್ಧೆಗೆ ಆಯ್ಕೆಯಾದ ತಂಡಗಳ ಅಂತಿಮ ಪಟ್ಟಿಯನ್ನು ಜುಲೈ 20 ರಂದು ಘೋಷಿಸಲಾಗುವುದು ಮತ್ತು ಜುಲೈ 21 ರಂದು ಇಂಡಕ್ಷನ್ ಸೆಷನ್ ನಡೆಯಲಿದೆ. ಇನ್ನು ಇಡೀ ದೇಶವೇ ಕುತೂಹಲದಿಂದ ಕಾಯುವ ಈ ಪ್ರತಿಷ್ಠಿತ ಹ್ಯಾಕಥಾನ್‌ನ ಮಹಾ ಮುಖಾಮುಖಿ (Grand Finale) ಆಗಸ್ಟ್ 6 ಮತ್ತು 7, 2026 ರಂದು ಜರುಗಲಿದೆ.

ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಜಾಗತಿಕ ಮಟ್ಟದ ಸಾಧನೆ ಮಾಡಲು ಬಯಸುವ ಭಾರತೀಯ ವಿದ್ಯಾರ್ಥಿಗಳಿಗೆ ತಮ್ಮ ನಾವೀನ್ಯತೆಯ ಆಲೋಚನೆಗಳನ್ನು ಇಸ್ರೋ ವಿಜ್ಞಾನಿಗಳ ಮುಂದೆ ಪ್ರದರ್ಶಿಸಲು ಇದೊಂದು ಅತ್ಯುತ್ತಮ ವೇದಿಕೆಯಾಗಿದೆ. ಅರ್ಹ ವಿದ್ಯಾರ್ಥಿಗಳು ಜುಲೈ 1 ರ ಒಳಗಾಗಿ ಇಸ್ರೋದ ಅಧಿಕೃತ ಪೋರ್ಟಲ್ ಮೂಲಕ ಉಚಿತವಾಗಿ ನೋಂದಾಯಿಸಿಕೊಳ್ಳಬಹುದು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಆಂತ್ರೋಪಿಕ್​ನ ಬಲಿಷ್ಠ ಎಐ ಮಾಡಲ್​ಗಳು ಅಮೆರಿಕನ್ನೇತರರಿಗೆ ಅಲಭ್ಯ; ಭಾರತಕ್ಕೆ ಇದು ಎಚ್ಚರಿಕೆಯ ಕರೆಗಂಟೆಯಾ? – Kannada News | Sovereign AI for India: Sridhar Vembu on US Anthropic Restrictions & Tech Nationalism Warning

ನವದೆಹಲಿ, ಜೂನ್ 14: ಅಮೆರಿಕದ ಪ್ರಮುಖ AI ಸಂಸ್ಥೆಯಾದ ‘ಆಂತ್ರೊಪಿಕ್’, ಭದ್ರತಾ ಕಾರಣಗಳನ್ನು ನೀಡಿ ತನ್ನ ಅತ್ಯಾಧುನಿಕ ‘ಫೇಬಲ್ 5’ (Fable 5) ಮತ್ತು ‘ಮೈಥೋಸ್ 5’ (Mythos 5) ಮಾಡೆಲ್‌ಗಳನ್ನು ಅಮೆರಿಕದ ಹೊರಗಿನವರು ಹಾಗೂ ಅಮೆರಿಕದಲ್ಲಿರುವ ವಿದೇಶಿ ಪ್ರಜೆಗಳು ಬಳಸದಂತೆ ನಿರ್ಬಂಧ ಹೇರಿದೆ. ಅಮೆರಿಕ ಸರ್ಕಾರದ ಆದೇಶದ ಮೇರೆಗೆ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಆಂತ್ರೊಪಿಕ್ ಹೇಳಿಕೊಂಡಿದೆ. ಈ ಬೆಳವಣಿಗೆ ಬಗ್ಗೆ ಕೆಲ ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ. ತಂತ್ರಜ್ಞಾನ ವಿಚಾರದಲ್ಲಿ ಜಾಗತೀಕರಣ ಸತ್ತಿದೆ ಎಂಬರ್ಥದಲ್ಲಿ ಭಾರತೀಯ ಉದ್ಯಮಿ ಶ್ರೀಧರ್ ವೆಂಬು (Sridhar Vembu) ಪ್ರತಿಕ್ರಿಯಿಸಿದ್ದಾರೆ. ಆಂತ್ರೊಪಿಕ್ ಕ್ರಮವು ಭಾರತದಂತಹ ದೇಶಗಳಿಗೆ ಒಂದು ದೊಡ್ಡ ಎಚ್ಚರಿಕೆ ಗಂಟೆಯಾಗಿದೆ ಎಂದಿದ್ದಾರೆ.

ಅಮೆರಿಕದ ವಾಣಿಜ್ಯ ಇಲಾಖೆಯ ಆದೇಶದ ಮೇರೆಗೆ, ಆಂತ್ರೊಪಿಕ್ ಕಂಪನಿಯು ತನ್ನ ಅತ್ಯಂತ ಶಕ್ತಿಶಾಲಿ AI ಮಾದರಿಗಳನ್ನು ವಿದೇಶಿಯರಿಗೆ ನಿಷೇಧಿಸಿದೆ. ಸಾರ್ವಜನಿಕರಿಗೆ ಲಭ್ಯವಾಗಿದ್ದ ಕ್ಲಾಡ್ ಫೇಬಲ್ 5 ಮತ್ತು ವಿಶೇಷ ಮಂದಿಗೆ ಸೀಮಿತವಾಗಿದ್ದ ಕ್ಲಾಡ್ ಮೈಥೋಸ್ 5 ಎಐ ಮಾಡಲ್​ಗಳೆರಡನ್ನೂ ಈಗ ನಿರ್ಬಂಧಿಸಲಾಗಿದೆ. ರಾಷ್ಟ್ರೀಯ ಭದ್ರತೆಯ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಕಂಪನಿ ಹೇಳಿದೆ. ಅಮೆರಿಕದಲ್ಲಿ ನೆಲೆಸಿರುವ ವಿದೇಶಿ ಪ್ರಜೆಗಳು (ಆಂತ್ರೊಪಿಕ್‌ನಲ್ಲಿ ಕೆಲಸ ಮಾಡುವವರು ಸೇರಿದಂತೆ) ಕೂಡ ಈ ತಂತ್ರಜ್ಞಾನವನ್ನು ಬಳಸುವಂತಿಲ್ಲ.

ಶ್ರೀಧರ್ ವೇಂಬು ಅವರ ಎಚ್ಚರಿಕೆ

ಈ ಬೆಳವಣಿಗೆಯ ನಂತರ ಸಾಮಾಜಿಕ ಜಾಲತಾಣ ‘ಎಕ್ಸ್’ (X) ನಲ್ಲಿ ಪೋಸ್ಟ್ ಮಾಡಿರುವ ಶ್ರೀಧರ್ ವೇಂಬು, ಕೆಲ ಪ್ರಮುಖ ಅಂಶಗಳನ್ನು ಒತ್ತಿ ಹೇಳಿದ್ದಾರೆ. “ಇಂದಿನ ಜಗತ್ತಿನಲ್ಲಿ ತಂತ್ರಜ್ಞಾನವು ಅತಿ ದೊಡ್ಡ ಶಕ್ತಿಯಾಗಿದೆ. ರಾಷ್ಟ್ರೀಯ ಭದ್ರತೆ ಮತ್ತು ಸಾರ್ವಭೌಮತ್ವವು ಈಗ ತಂತ್ರಜ್ಞಾನದ ಮೇಲೆ ಸಂಪೂರ್ಣವಾಗಿ ಅವಲಂಬಿತವಾಗಿದೆ. ಜಾಗತೀಕರಣ ಸತ್ತಿದೆ, ಭಾರತವು ತನ್ನದೇ ಆದ ಸ್ವತಂತ್ರ ಹಾದಿಯನ್ನು ಕಂಡುಕೊಳ್ಳಬೇಕು,” ಎಂದು ಅವರು ಕರೆ ನೀಡಿದ್ದಾರೆ.

ಭಾರತವು ವಿದೇಶಿ ತಂತ್ರಜ್ಞಾನಗಳ ಮೇಲೆ ಅವಲಂಬಿತವಾಗುವ ಬದಲು, ಸ್ವಂತದ AI ಸಾಮರ್ಥ್ಯವನ್ನು (Sovereign AI) ಬೆಳೆಸಿಕೊಳ್ಳುವುದು ತುರ್ತು ಅಗತ್ಯವಾಗಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.

ಇದನ್ನೂ ಓದಿ: ವಿಶ್ವದಲ್ಲೇ ಅತಿದೊಡ್ಡ ರಸ್ತೆ ಜಾಲ ಹೊಂದಿದ ದೇಶವೆಂಬ ದಾಖಲೆ ಭಾರತಕ್ಕೆ

ಭಾರತಕ್ಕೆ ಪರಿಹಾರವೇನು?

ಭಾರತವು ದೊಡ್ಡ ಪ್ರಮಾಣದ ಬಂಡವಾಳ ಬೇಕಾಗುವ ಮತ್ತು ಜಿಪಿಯು (GPU) ಕೊರತೆ ಎದುರಿಸುತ್ತಿರುವ ಬೃಹತ್ AI ಮಾಡೆಲ್‌ಗಳ ಹಿಂದೆಯೇ ಬಿದ್ದಿರಬಾರದು ಎಂದು ವೇಂಬು ಸಲಹೆ ನೀಡಿದ್ದಾರೆ. ಬದಲಾಗಿ ಭಾರತೀಯ ಸಂಸ್ಥೆಗಳು ಸಣ್ಣ ಗಾತ್ರದ, ದಕ್ಷತೆಯುಳ್ಳ ‘ಓಪನ್ ಸೋರ್ಸ್’ (Open Source) ಮಾದರಿಗಳನ್ನು ಅಳವಡಿಸಿಕೊಳ್ಳಬೇಕು ಎಂದು ಅವರು ಹೇಳಿದ್ದಾರೆ.

ಭಾರತ ಮತ್ತು ಚೀನಾದಲ್ಲಿ ಲಭ್ಯವಿರುವ ಓಪನ್ ಸೋರ್ಸ್ ಮಾದರಿಗಳನ್ನು ಬಳಸಿಕೊಂಡು ಸಂಶೋಧನೆ ಮತ್ತು ಅಭಿವೃದ್ಧಿಯನ್ನು ಹೆಚ್ಚಿಸಬೇಕು. ನಮಗೆ ಮಾರಾಟ ಮಾಡಲು ಇಷ್ಟಪಡದವರಿಗೆ ಏಕೆ ಹಣ ನೀಡಬೇಕು? ಎಂದು ಪ್ರಶ್ನಿಸಿರುವ ಅವರು, ಸ್ವದೇಶಿ ತಂತ್ರಜ್ಞಾನ ಅಭಿವೃದ್ಧಿಗೆ ಒತ್ತು ನೀಡುವಂತೆ ಸರ್ಕಾರಕ್ಕೆ ಪರೋಕ್ಷವಾಗಿ ಸೂಚಿಸಿದ್ದಾರೆ.

ಏನಿವು ಕ್ಲಾಡ್ ಫೇಬಲ್, ಮೈಥೋಸ್ ಎಐ ಮಾಡಲ್​ಗಳು?

ಕ್ಲಾಡ್​ನ ಜನರಲ್ ಎಐ ಮಾಡಲ್​ಗಳಲ್ಲಿ ಮೈಥೋಸ್ ಕ್ಲಾಸ್ ಮಾಡಲ್​ಗಳು ಪ್ರಮುಖವಾದುವು. ಸಾಫ್ಟ್​ವೇರ್ ಎಂಜಿನಿಯರಿಂಗ್, ವೈಜ್ಞಾನಿಕ ಸಂಶೋಧನೆ, ಸಂಕೀರ್ಣ ಸಮಸ್ಯೆ ಪರಿಹರಿಸುವುದು, ಜ್ಞಾನದ ಅಗತ್ಯ ಇರುವ ವರ್ಕ್​ಫ್ಲೋ ಇತ್ಯಾದಿ ಕಠಿಣ ಕಾರ್ಯಗಳಿಗೆ ಮೈಥೋಸ್ ಮಾಡಲ್​ಗಳು ಸೂಕ್ತವಾಗಿವೆ. ಆಂತ್ರೋಪಿಕ್​ನ ಕ್ಲಾಡ್ ಎಐ ಮಾಡಲ್​ಗಳಲ್ಲೇ ಅತ್ಯಂತ ಸಾಮರ್ಥ್ಯ ಇರುವ ಮಾಡಲ್​ಗಳು ಇವು. ಸಾಫ್ಟ್​ವೇರ್ ಡೆವಲಪರ್ಸ್, ಸಂಶೋಧಕರು ಮೊದಲಾದ ನುರಿತರಿಗೆ ಇವು ಸಹಾಯವಾಗುತ್ತವೆ.

ಇದನ್ನೂ ಓದಿ: ಎಚ್​ಎಎಲ್​ಗೆಯೇ ಚಳ್ಳೆಹಣ್ಣು ತಿನಿಸಲು ಯತ್ನಿಸಿದ ಹೈದರಾಬಾದ್ ಕಂಪನಿ; ತೇಜಸ್ ಯುದ್ಧವಿಮಾನದ ಬಿಡಿಭಾಗ ಪೂರೈಕೆಯಲ್ಲಿ ವಂಚನೆ; ದೂರು ದಾಖಲು

ಮೈಥೋಸ್ ದರ್ಜೆಯ ಎಐ ಮಾಡಲ್​ಗಳ ಪೈಕಿ ಫೇಬಲ್ 5 ಮಾತ್ರವೇ ಸಾರ್ವಜನಿಕರಿಗೆ ಲಭ್ಯವಾಗಿಸಿರುವುದು. ಇದು ಅತ್ಯಂತ ಶಕ್ತಿಶಾಲಿ ಮೈಥೋಸ್ ಕ್ಲಾಸ್ ಮಾಡಲ್. ಆದರೆ, ಕೆಲ ಸುರಕ್ಷತಾ ಫೀಚರ್​ಗಳಿವೆ. ಆದರೆ, ಮೈಥೋಸ್ 5 ಮಾಡಲ್​ನಲ್ಲಿ ಈ ನಿರ್ಬಂಧಗಳಿಲ್ಲ. ಆಯ್ದ ಗ್ರಾಹಕರಿಗೆ ಮಾತ್ರವೇ ಇದನ್ನು ನೀಡಲಾಗುತ್ತದೆ. ಈಗ ಅಮೆರಿಕ ಸರ್ಕಾರವು ಈ ಮೈಥೋಸ್ ಮಾಡಲ್​ಗಳನ್ನು ಹೊರ ದೇಶದವರು ದುರ್ಬಳಕೆ ಮಾಡಿಕೊಳ್ಳಬಹುದು ಎನ್ನುವ ಕಾರಣವೊಡ್ಡಿ ನಿರ್ಬಂಧ ಹಾಕಿದೆ.

ತಂತ್ರಜ್ಞಾನದ ಮೇಲಿನ ಹಿಡಿತ

ಈ ನಿರ್ಬಂಧಗಳು ಕೇವಲ ಸಾಫ್ಟ್‌ವೇರ್‌ಗೆ ಸೀಮಿತವಾಗಿಲ್ಲ; AI ತರಬೇತಿಗೆ ಅಗತ್ಯವಾದ ಉನ್ನತ ಮಟ್ಟದ ಜಿಪಿಯು (GPUs) ಚಿಪ್‌ಗಳ ರಫ್ತಿನ ಮೇಲೂ ಅಮೆರಿಕ ನಿಯಂತ್ರಣ ಹೊಂದಿದೆ. ಈ ಹಿನ್ನೆಲೆಯಲ್ಲಿ, ತಂತ್ರಜ್ಞಾನದ ವಿಷಯದಲ್ಲಿ ಸ್ವಾವಲಂಬನೆಯೇ ಮುಂದಿನ ದಿನಗಳಲ್ಲಿ ದೇಶದ ಭದ್ರತೆಗೆ ಕೀಲಿಕೈ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಚಿತ್ರರಂಗದಲ್ಲಿ ರಂಗಾಯಣ ರಘು ‘ಹೊಸ ಜೀವನ’; 400ನೇ ಸಿನಿಮಾ ಒಪ್ಪಿಕೊಂಡ ನಟ – Kannada News | Rangayana Raghu 400th Movie Hosa Jeevana title launched by Daali Dhananjay

ಕನ್ನಡ ಚಿತ್ರರಂಗದಲ್ಲಿ ನಟ ರಂಗಾಯಣ ರಘು (Rangayana Raghu) ಅವರು ತಮ್ಮದೇ ಛಾಪು ಮೂಡಿಸಿದ್ದಾರೆ. ಅವರ ನಟನೆ, ಡೈಲಾಗ್ ಡೆಲಿವರಿಗೆ ಅಭಿಮಾನಿಗಳು ಫುಲ್ ಮಾರ್ಕ್ಸ್ ನೀಡುತ್ತಾರೆ. ಸ್ಯಾಂಡಲ್​ವುಡ್​ನ ಬಹುಬೇಡಿಕೆಯ ನಟ ಅವರು. ಯಾವುದೇ ಪಾತ್ರ ಕೊಟ್ಟರೂ ಅದನ್ನು ಸಲೀಸಾಗಿ ನಿಭಾಯಿಸುವಂತಹ ಪ್ರತಿಭಾವಂತ ಕಲಾವಿದ ರಂಗಾಯಣ ರಘು. ಈಗ ಅವರು ತಮ್ಮ ವೃತ್ತಿಬದುಕಿನಲ್ಲಿ ‘ಹೊಸ ಜೀವನ’ (Hosa Jeevana) ಆರಂಭಿಸುತ್ತಿದ್ದಾರೆ. ಏನಿದು ಹೊಸ ಜೀವನ? ಮುಂದೆ ಓದಿ..

ಈವರೆಗೂ ರಂಗಾಯಣ ರಘು ಅವರು ನೂರಾರು ಪಾತ್ರಗಳನ್ನು ಮಾಡಿ ಸೈ ಎನಿಸಿಕೊಂಡಿದ್ದಾರೆ. ಇಷ್ಟು ವರ್ಷಗಳ ವೃತ್ತಿಜೀವನದಲ್ಲಿ ಅವರು ಬರೋಬ್ಬರಿ 399 ಸಿನಿಮಾಗಳಲ್ಲಿ ನಟಿಸಿದ್ದಾರೆ. ಈಗ ಅವರು 400ನೇ ಸಿನಿಮಾ ಒಪ್ಪಿಕೊಂಡಿದ್ದಾರೆ. ಈ ಮೈಲಿಗಲ್ಲಿನ ಸಿನಿಮಾ ಬಗ್ಗೆ ಮಾಹಿತಿ ಹೊರಬಿದ್ದಿದೆ. ಈ ಸಿನಿಮಾದ ಹೆಸರೇ ‘ಹೊಸ ಜೀವನ’ ಎಂಬುದು ವಿಶೇಷ.

ರಂಗಾಯಣ ರಘು ಅವರ 400ನೇ ಸಿನಿಮಾ ಎಂಬ ಕಾರಣದಿಂದಲೇ ‘ಹೊಸ ಜೀವನ’ ಕೌತುಕ ಮೂಡಿಸಿದೆ. ಈ ಆಕರ್ಷಕ ಶೀರ್ಷಿಕೆಯ ಸಿನಿಮಾಗೆ ಡಾಲಿ ಧನಂಜಯ ಅವರು ಸಾಥ್ ನೀಡಿದ್ದಾರೆ. ಡಾಲಿ ಧನಂಜಯ ಅವರು ‘ಹೊಸ ಜೀವನ’ ಸಿನಿಮಾದ ಟೈಟಲ್ ಲಾಂಚ್ ಮಾಡಿ ಇಡೀ ತಂಡಕ್ಕೆ ಶುಭಾಶಯ ತಿಳಿಸಿದ್ದಾರೆ. ಚಿತ್ರತಂಡದ ಬಗ್ಗೆ ವಿವರ ಸಿಕ್ಕಿದೆ. ಇದು ಸ್ನೇಹ, ಪ್ರೀತಿ, ಜೀವನದ ಹೋರಾಟ ಮತ್ತು ಮೌಲ್ಯಗಳ ಕಥೆ ಇರುವ ಸಿನಿಮಾ ಎಂದು ಚಿತ್ರತಂಡ ಹೇಳಿದೆ.

ಹಲವು ಕಿರುಚಿತ್ರಗಳನ್ನು ನಿರ್ದೇಶಿಸಿ ಅನುಭವ ಪಡೆದಿರುವ ಮೋಹನ್ ಕುಮಾರ್ ಹನುಮಯ್ಯ ಅವರು ‘ಹೊಸ ಜೀವನ’ ಸಿನಿಮಾ ಮೂಲಕ ಪೂರ್ಣ ಪ್ರಮಾಣದ ನಿರ್ದೇಶಕರಾಗಿ ಬಡ್ತಿ ಪಡೆದಿದ್ದಾರೆ. ಅವರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಈ ಸಿನಿಮಾದಲ್ಲಿ ‌ರಂಗಾಯಣ ರಘು ಮಾತ್ರವಲ್ಲದೇ ಪ್ರಭು ಮುಂಡ್ಕೂರ್, ಸ್ವಾತಿ ಮುಪ್ಪಾಲ, ಶಿವರಾಜ್ ಕೆ.ಆರ್. ಪೇಟೆ, ಅಚ್ಯುತ್ ಕುಮಾರ್, ಸುಹಾಸ್ ಅತ್ರೆಯಸ್, ಉದಯ್ ಆಚಾರ್, ಅಭಿ ಸಾಮ್ರಾಟ್ ಮುಂತಾದವರು ನಟಿಸುತ್ತಿದ್ದಾರೆ.

ಇದನ್ನೂ ಓದಿ: ಒರಿಜಿನಲ್ ರಂಗಾಯಣ ರಘುವಿಗೆ ಡುಪ್ಲಿಕೇಟ್ ರಂಗಾಯಣ ರಘು ಸಿಕ್ಕಾಗ

ಈ ಸಿನಿಮಾಗೆ ಜಿ.ಎಸ್. ಸಂಜೀವ್ ಪ್ರಸಾದ್ ಅವರು ಬಂಡವಾಳ ಹೂಡಿದ್ದಾರೆ. ಮೋಹನ್ ಕುಮಾರ್ ಹನುಮಯ್ಯ ಅವರು ನಿರ್ದೇಶನದ ಜೊತೆಗೆ ನಿರ್ಮಾಣದಲ್ಲೂ ಸಾಥ್ ನೀಡಿದ್ದಾರೆ. ‘ಅರ್ಜುನ್ ಪ್ರೊಡಕ್ಷನ್’ ಮತ್ತು ‘ಚಿರು ಪ್ರೊಡಕ್ಷನ್’ ಜಂಟಿಯಾಗಿ ‘ಹೊಸ ಜೀವನ’ ಸಿನಿಮಾವನ್ನು ನಿರ್ಮಾಣ ಮಾಡುತ್ತಿವೆ. ಸುಮುಖ ರಾವ್ ಅವರ ಸಂಗೀತ ನಿರ್ದೇಶನ, ಸುನಾದ್ ಗೌತಮ್ ಅವರ ಹಿನ್ನೆಲೆ ಸಂಗೀತ, ಶಶಿಧರ್ ಗೌಡ ಅವರ ಸಂಕಲನ, ರಾಜ್ ಕಾಂತ್ ಎಸ್. ಅವರ ಛಾಯಾಗ್ರಹಣ, ಪ್ರತಾಪ್ ಎಂ.ಆರ್. ಅವರ ಸಂಭಾಷಣೆ ಈ ಸಿನಿಮಾಗೆ ಇರಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಕುಮಾರಸ್ವಾಮಿಯ ವಿಡಿಯೋ ರಿಲೀಸ್ ಮಾಡಿದ ಕಾಂಗ್ರೆಸ್ ಶಾಸಕ, ವಿಡಿಯೋನಲ್ಲೇನಿದೆ? – Kannada News | Congress MLA HC Balakrishna Releases HD Kumaraswamy video about Bidadi Township

ಹುಟ್ಟೂರು ಯಲ್ಲಾಪುರ, ಬೆಳೆದೂರು ದಾಂಡೇಲಿಯ ದಟ್ಟ ಕಾಡುಗಳ ನಡುವೆ. ರವಿ ಬೆಳಗೆರೆ ಎಂಬ ಅಕ್ಷರ ರಾಕ್ಷಸನ ಕಟ್ಟಾಭಿಮಾನದಿಂದ ಹಾಳಾಗಿ, ಸೈನ್ಸ್ ನಲ್ಲಿ ಡಿಗ್ರಿ ಪಡೆದು ಜರ್ನಲಿಸಂಗೆ ಹಿಂಬದಿ ಕಿಟಕಿಯಿಂದ ನುಸುಳಿದ್ದು 2010 ರ ಅಕ್ಟೋಬರ್ ನಲ್ಲಿ. ಉಡುಪಿಯಲ್ಲಿ ಮೊದಲ ಪತ್ರಿಕೋದ್ಯಮ ಕರ್ತವ್ಯ ಪ್ರಾರಂಭಿಸಿದ್ದು 2010 ರಲ್ಲಿಯೇ. ಜನಶ್ರೀ ನ್ಯೂಸ್ ಮೊದಲು ಅನ್ನ ನೀಡಿದ ಸಂಸ್ಥೆ. ಉಡುಪಿ ಜಿಲ್ಲಾ ವರದಿಗಾರನಾಗಿ ಮೂರು ವರ್ಷ ಕೆಲಸ ಮಾಡಿ 2013 ರ ಅಂತ್ಯಕ್ಕೆ ಸಮಯ ನ್ಯೂಸ್ ಮೂಲಕ ಬೆಂಗಳೂರಿಗೆ ಎಂಟ್ರಿ. ಬಿಗ್ ೩, ಬೆಂಗಳೂರ್ ಲೈವ್, ಸಮಯ ಸಕಾಲ ಕಾರ್ಯಕ್ರಮದಲ್ಲಿ ವರದಿಗಾರಿಕೆ ಮಾಡಿದ ಖುಷಿ. 2014 ರ ಡಿಸೆಂಬರ್ ನಿಂದ ಟಿವಿ9 ನಲ್ಲಿ ಕೆಲಸ ಪ್ರಾರಂಭ. ಟಿವಿ9 ನಲ್ಲಿ ಮೊದಲು ಮೆಟ್ರೋ ರಿಪೋರ್ಟಿಂಗ್ ಮೂಲಕ ಬೆಂಗಳೂರು ಸುತ್ತುವ ಅರಿಯುವ ರಾಜಧಾನಿಯ ನಾಡಿಮಿಡಿತ ಹುಡುಕುವ ಅವಕಾಶ. ಮೆಟ್ರೋ ಬ್ಯೂರೋ ದಲ್ಲಿ ಶೈಕ್ಷಣಿಕ ಹಾಗೂ ಬಿಬಿಎಂಪಿ ವರದಿಗಾರಿಕೆ. ಚಪ್ಪಲಿಯಿಂದ ಹಿಡಿದು ಚಾದರ್ ತನಕ ಸ್ಟೋರಿ ಮಾಡಿದ ಅನುಭವ. ಮೆಟ್ರೋ ಟೀಂ ನಿಂದ ರಾಜಕೀಯ ವರದಿಗಾರಿಕೆಗೆ ಶಿಫ್ಟ್ ಆದ ತಕ್ಷಣ- ಮುಂದುವರಿದಿದೆ ನಿರಂತರ ಪಯಣ. ಕಥೆ, ಕಾದಂಬರಿ, ಕವನ, ಸಿನಿಮಾ, ಸುತ್ತಾಟ, ಆಗಾಗ ಕಿತ್ತಾಟ, ಸ್ನೇಹಿತರೊಂದಿಗೆ ಒಡನಾಟ ಇವೆಲ್ಲ ಮಾಮೂಲಿ ದಿನಚರಿ. ಇವತ್ತಿಗೂ ಬರವಣಿಗೆಯೊಂದೇ ಖುಷಿ ಕೊಡುವ ಖರ್ಜೂರ. ಸ್ಟಾಕ್ ಮಾರ್ಕೆಟ್ ನಲ್ಲಿ 2019 ರಿಂದ ಆ್ಯಕ್ಟಿವ್.

Read More

Source link