Category Archives: Blog

Your blog category

Vasthu Tips: ಓಡುವ ಕುದುರೆ ಪ್ರತಿಮೆ ಮನೆಯಲ್ಲಿ ಇಡುವ ಮುನ್ನ ಈ ವಿಷಯ ತಿಳಿದಿರಲಿ – Kannada News | Vastu Secrets: Running Horse Statue’s Power for Growth and Positive Vibes at Home

ವಾಸ್ತು ಶಾಸ್ತ್ರದ ಪ್ರಕಾರ, ನಮ್ಮ ಮನೆಯಲ್ಲಿರುವ ಪ್ರತಿಯೊಂದು ವಸ್ತುವು ನಮ್ಮ ಜೀವನದ ಮೇಲೆ ಧನಾತ್ಮಕ ಅಥವಾ ನಕಾರಾತ್ಮಕ ಪ್ರಭಾವವನ್ನು ಬೀರುತ್ತದೆ. ಆ ಪೈಕಿ ‘ಓಡುವ ಕುದುರೆಯ ಪ್ರತಿಮೆ’ಗೆ (Running Horse Statue) ವಾಸ್ತು ಪ್ರಪಂಚದಲ್ಲಿ ಅತ್ಯಂತ ಹೆಚ್ಚಿನ ಪ್ರಾಮುಖ್ಯತೆ ಇದೆ. ಇದನ್ನು ಪ್ರಗತಿ, ನಿರಂತರ ಬೆಳವಣಿಗೆ, ಆತ್ಮವಿಶ್ವಾಸ ಮತ್ತು ಸಕಾರಾತ್ಮಕತೆಯ ಸಂಕೇತವಾಗಿ ನೋಡಲಾಗುತ್ತದೆ. ಇದೇ ಕಾರಣಕ್ಕಾಗಿ, ಇತ್ತೀಚಿನ ದಿನಗಳಲ್ಲಿ ಅನೇಕ ಜನರು ತಮ್ಮ ವೃತ್ತಿಜೀವನದಲ್ಲಿ ಯಶಸ್ಸು ಕಾಣಲು ಇದನ್ನು ಮನೆಯಲ್ಲಿ ಅಥವಾ ಕಚೇರಿಯ ಮೇಜಿನ ಮೇಲೆ ಇಡಲು ಇಷ್ಟಪಡುತ್ತಾರೆ. ಈ ಪ್ರತಿಮೆಯನ್ನು ಇಡಬೇಕಾದ ಸರಿಯಾದ ದಿಕ್ಕು ಮತ್ತು ಅದರಿಂದ ಸಿಗುವ ಅದ್ಭುತ ಪ್ರಯೋಜನಗಳ ವಿವರ ಇಲ್ಲಿದೆ.

ಪ್ರತಿಮೆಯನ್ನು ಇಡಲು ಸರಿಯಾದ ದಿಕ್ಕು ಯಾವುದು?

ವಾಸ್ತು ಶಾಸ್ತ್ರದ ನಿಯಮಗಳ ಪ್ರಕಾರ, ಓಡುವ ಕುದುರೆಯ ಪ್ರತಿಮೆಯನ್ನು ಇಡಲು ದಕ್ಷಿಣ ದಿಕ್ಕು (South Direction) ಅತ್ಯಂತ ಶ್ರೇಷ್ಠ ಮತ್ತು ಶುಭವೆಂದು ಪರಿಗಣಿಸಲಾಗುತ್ತದೆ. ಮನೆಯ ಅಥವಾ ಕಚೇರಿಯ ದಕ್ಷಿಣ ಭಾಗದಲ್ಲಿ ಈ ವಿಗ್ರಹವನ್ನು ಸ್ಥಾಪಿಸುವುದರಿಂದ ಸಮಾಜದಲ್ಲಿ ಗೌರವ, ಕೀರ್ತಿ ಹೆಚ್ಚಾಗುವುದರ ಜೊತೆಗೆ ವ್ಯವಹಾರದಲ್ಲಿ ಅಪಾರ ಯಶಸ್ಸು ಲಭಿಸುತ್ತದೆ ಎಂಬ ಬಲವಾದ ನಂಬಿಕೆಯಿದೆ.

ನಿರಂತರ ಸ್ಫೂರ್ತಿ ಮತ್ತು ಕಠಿಣ ಪರಿಶ್ರಮದ ಸಂಕೇತ:

ನಿಮ್ಮ ಮನೆಯಲ್ಲಿ ಓಡುವ ಕುದುರೆಯ ಪ್ರತಿಮೆಯನ್ನು ಇಟ್ಟುಕೊಂಡರೆ, ಅದು ನಿಮ್ಮನ್ನು ಸದಾ ಜಾಗೃತರನ್ನಾಗಿಡುತ್ತದೆ ಮತ್ತು ನಿಮ್ಮ ಗುರಿಗಳತ್ತ ಮುನ್ನಡೆಯಲು ನಿರಂತರವಾಗಿ ತಳ್ಳುತ್ತದೆ. ದಿನವಿಡೀ ಓಡುವ ಕುದುರೆಯನ್ನು ನೋಡುವುದರಿಂದ, ಜೀವನದಲ್ಲಿ ಯಶಸ್ಸು ಸಾಧಿಸಲು ನಾವು ಸದಾ ಕಷ್ಟಪಟ್ಟು ಕೆಲಸ ಮಾಡಬೇಕು ಎಂಬ ಅಂಶ ನಮಗೆ ನೆನಪಾಗುತ್ತಿರುತ್ತದೆ. ಇದೇ ಕಾರಣಕ್ಕೆ ವಾಸ್ತು ಶಾಸ್ತ್ರದಲ್ಲಿ ಇದನ್ನು ಅತ್ಯುನ್ನತ ಯಶಸ್ಸಿನ ಸಂಕೇತವಾಗಿ ನೋಡಲಾಗುತ್ತದೆ.

ಆತ್ಮವಿಶ್ವಾಸ ಮತ್ತು ಧೈರ್ಯವನ್ನು ಹೆಚ್ಚಿಸುತ್ತದೆ:

ವಾಸ್ತು ಶಾಸ್ತ್ರದ ಪ್ರಕಾರ, ಕುದುರೆಯನ್ನು ಕೇವಲ ಪ್ರಾಣಿಯನ್ನಾಗಿ ನೋಡದೆ ಶಕ್ತಿ, ಧೈರ್ಯ, ವೇಗ ಮತ್ತು ಶೌರ್ಯದ ಸಾಕಾರ ರೂಪವೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ, ಕುದುರೆಯ ಪ್ರತಿಮೆಯನ್ನು ನಮ್ಮ ಆಸುಪಾಸಿನಲ್ಲಿ ಅಥವಾ ಕೆಲಸ ಮಾಡುವ ಜಾಗದಲ್ಲಿ ಇಟ್ಟುಕೊಳ್ಳುವುದರಿಂದ ನಮ್ಮೊಳಗಿನ ಆತ್ಮವಿಶ್ವಾಸ ಹಠಾತ್ತಾಗಿ ಹೆಚ್ಚಾಗುತ್ತದೆ. ಇದು ಮನಸ್ಸಿನಲ್ಲಿರುವ ನಕಾರಾತ್ಮಕ ಯೋಚನೆಗಳನ್ನು ದೂಡಿ, ಸಕಾರಾತ್ಮಕ ಚಿಂತನೆಗಳು ಮೂಡುವಂತೆ ಮಾಡುತ್ತದೆ.

ವೃತ್ತಿಜೀವನದಲ್ಲಿ ಅಪ್ರತಿಮ ಬೆಳವಣಿಗೆ:

ಈ ವಿಗ್ರಹವನ್ನು ನಿಮ್ಮ ಮನೆ ಅಥವಾ ಕಚೇರಿಯಲ್ಲಿ ಇಟ್ಟುಕೊಳ್ಳುವುದರಿಂದ ಉದ್ಯೋಗ ಮತ್ತು ವ್ಯಾಪಾರದಲ್ಲಿ ಎದುರಾಗುವ ಅಡೆತಡೆಗಳು ನಿವಾರಣೆಯಾಗಿ, ಯಾವುದೇ ಪ್ರಯತ್ನದಲ್ಲೂ ಸುಲಭವಾಗಿ ಯಶಸ್ಸು ಸಿಗುತ್ತದೆ ಎಂದು ವಾಸ್ತು ತಜ್ಞರು ನಂಬುತ್ತಾರೆ. ಇದರ ಧನಾತ್ಮಕ ಉಪಸ್ಥಿತಿಯು ಜೀವನದಲ್ಲಿ ನಿಂತುಹೋದ ಪ್ರಗತಿಯ ಹಾದಿಯನ್ನು ಮರಳಿ ತೆರೆಯುತ್ತದೆ ಮತ್ತು ಆರ್ಥಿಕ ಸುಧಾರಣೆಗೆ ಕಾರಣವಾಗುತ್ತದೆ.

ಇದನ್ನೂ ಓದಿ: ಫ್ಯಾಶನ್​​ಗಾಗಿ ವಜ್ರ ಧರಿಸುವ ಮುನ್ನ ಎಚ್ಚರ! ಈ ರಾಶಿಯವರು ವಜ್ರ ಧರಿಸಿದರೆ ಕಷ್ಟ ತಪ್ಪಿದ್ದಲ್ಲ!

ಮನೆಯ ವಾತಾವರಣದಲ್ಲಿ ಪಾಸಿಟಿವ್ ವೈಬ್ಸ್:

ವಾಸ್ತು ಪ್ರಕಾರ, ಓಡುವ ಕುದುರೆಯ ಪ್ರತಿಮೆಯು ಮನೆಯಲ್ಲಿ ಆವರಿಸಿರುವ ನಕಾರಾತ್ಮಕ ಶಕ್ತಿಯನ್ನು ಹೊರದಬ್ಬಿ, ಸಕಾರಾತ್ಮಕ ವಾತಾವರಣವನ್ನು ಕಾಪಾಡಿಕೊಳ್ಳಲು ಅದ್ಭುತವಾಗಿ ಸಹಾಯ ಮಾಡುತ್ತದೆ. ಇದು ಮನೆಗೆ ಉತ್ತಮ ಕಂಪನಗಳನ್ನು ತರುವ ಮೂಲಕ ಕುಟುಂಬದ ಸದಸ್ಯರ ನಡುವೆ ಸಾಮರಸ್ಯ ನೆಲೆಸುವಂತೆ ಮಾಡುತ್ತದೆ.

ಪ್ರತಿಮೆ ಇಡುವಾಗ ನೆನಪಿನಲ್ಲಿಡಬೇಕಾದ ಪ್ರಮುಖ ವಿಷಯಗಳು:

ಕುದುರೆ ಪ್ರತಿಮೆಯನ್ನು ಇಡುವಾಗ ಕೆಲವು ಮುನ್ನೆಚ್ಚರಿಕೆಗಳನ್ನು ವಹಿಸುವುದು ಅತ್ಯಗತ್ಯ. ನಿಮ್ಮ ಮನೆ ಅಥವಾ ಕಚೇರಿಯಲ್ಲಿ ಯಾವುದೇ ಕಾರಣಕ್ಕೂ ಮುರಿದ, ಬಿರುಕು ಬಿಟ್ಟ ಅಥವಾ ಹಾನಿಗೊಳಗಾದ ಕುದುರೆ ಪ್ರತಿಮೆಯನ್ನು ಇಡಲೇಬಾರದು, ಇದು ವಾಸ್ತು ದೋಷಕ್ಕೆ ಕಾರಣವಾಗುತ್ತದೆ. ಈ ಪ್ರತಿಮೆಯನ್ನು ಯಾವಾಗಲೂ ಧೂಳು ಹಿಡಿಯದಂತೆ ಸ್ವಚ್ಛವಾಗಿಟ್ಟುಕೊಳ್ಳಬೇಕು ಮತ್ತು ರೂಮಿಗೆ ಪ್ರವೇಶಿಸಿದ ತಕ್ಷಣ ಸುಲಭವಾಗಿ ಕಣ್ಣಿಗೆ ಕಾಣುವಂತಹ ಪ್ರಮುಖ ಸ್ಥಳದಲ್ಲಿ ಇಡುವುದು ಅತ್ಯಂತ ಸೂಕ್ತವಾಗಿದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕೆಂಪು ಸುಂದರಿಗೆ ಮತ್ತೆ ಡಿಮ್ಯಾಂಡ್! ಟೊಮೆಟೊ ಬೆಳೆದ ರೈತರಿಗೆ ಜಾಕ್‌ಪಾಟ್ – Kannada News | Tomato Price Hike Boosts Farmer Income as Demand Rises at APMC Markets

ಕೋಲಾರ, ಜೂನ್​ 14: ವಾತಾವರಣದಲ್ಲಿನ ಏರುಪೇರು, ಇರಾನ್-ಇಸ್ರೇಲ್ ಯುದ್ಧದ ಎಫೆಕ್ಟ್ ಸೇರಿದಂತೆ ಹಲವು ಕಾರಣಗಳಿಂದ ಬೇಡಿಕೆ ಕಳೆದುಕೊಂಡಿದ್ದ ‘ಕಿಚನ್ ಕ್ವೀನ್’ ಟೊಮೆಟೊಗೆ (Tomato) ಇದೀಗ ಮತ್ತೆ ಭರ್ಜರಿ ಬೇಡಿಕೆ ಬಂದಿದೆ. ಕೋಲಾರ (kolar) ಎಪಿಎಂಸಿ ಮಾರುಕಟ್ಟೆಯಲ್ಲಿ ಟೊಮೆಟೊ ಅಬ್ಬರ ಜೋರಾಗಿದ್ದು, ರೈತರ ಮುಖದಲ್ಲಿ ಮಂದಹಾಸ ಮೂಡಿಸಿದೆ.

ಮುಖ್ಯಾಂಶಗಳು

  • ಕೋಲಾರದಲ್ಲಿ ಮತ್ತೆ ಶುರುವಾಯ್ತು ಟೊಮೆಟೊ ಸೀಸನ್​​
  • 15 ಕೆಜಿ ಟೊಮೆಟೊಗೆ 500 ರಿಂದ 550 ರೂ.ಗೆ ಮಾರಾಟ
  • ರೈತರ ಮುಖದಲ್ಲಿ ಮಂದಹಾಸ

ಕಳೆದ ಒಂದು ವಾರದಿಂದ ಟೊಮೆಟೊ ಬೆಲೆ ಏರಿಕೆ

ಕಳೆದ ಎರಡು ಮೂರು ತಿಂಗಳಿಂದ ಟೊಮೆಟೊ ಬೆಲೆ ಕುಸಿದಿತ್ತು. ಇದರಿಂದ ರೈತರು ಕಂಗಾಲಾಗಿದ್ದರು. ಇರಾನ್ ಹಾಗೂ ಇಸ್ರೇಲ್ ನಡುವಿನ ಯುದ್ಧದ ಕಾರಣದಿಂದ ಸಿಲಿಂಡರ್ ಸಿಗದೆ ಹೋಟೆಲ್ ಉದ್ಯಮ ನೆಲಕಚ್ಚಿದ ಪರಿಣಾಮ ಟೊಮೆಟೊ ಬೆಲೆ ಕೂಡ ಕುಸಿದಿತ್ತು. ಅದರ ಜೊತೆಗೆ ಮಿತಿಮೀರಿದ ಬಿಸಿಲ ತಾಪಮಾನದಿಂದಾಗಿ ಟೊಮೆಟೊ ಬೆಳೆ ಹಾಳಾಗಿ ರೈತರು ಕಂಗಾಲಾಗಿದ್ದರು. ಆದರೆ ಈಗ ಟೊಮೆಟೊ ಸೀಸನ್ ಶುರುವಾಗಿದ್ದು, ಕೋಲಾರದ ಎಪಿಎಂಸಿ ಮಾರುಕಟ್ಟೆಯಲ್ಲಿ ಕಳೆದ ಒಂದು ವಾರದಿಂದ ಬೆಲೆ ಏರಿಕೆ ಕಂಡಿದೆ.

ಒಂದು ಮೂಟೆ ಟೊಮೆಟೊಗೆ 550 ರೂ.ಗೆ ಏರಿಕೆ

10ರಿಂದ 15 ರೂ ಬೆಲೆ ಇದ್ದ ಕೆಜಿ ಟೊಮೆಟೊ ಇದೀಗ 30 ರಿಂದ 40 ರೂ.ಗೆ ಏರಿಕೆಯಾಗಿದೆ. ಅಂದರೆ 150 ರಿಂದ 200 ರೂ ಇದ್ದ 15 ಕೆಜಿಯ ಒಂದು ಮೂಟೆ ಟೊಮೆಟೊ ಈಗ 500 ರಿಂದ 550 ರೂ.ಗೆ ಏರಿಕೆಯಾಗಿದೆ. ಪರಿಣಾಮ ಟೊಮೆಟೊ ಬೆಳೆದ ರೈತರು ಪುಲ್​ ಖುಷಿಯಾಗಿದ್ದಾರೆ.

ಇದನ್ನೂ ಓದಿ: ಕೋಲಾರದ ರೇಷ್ಮೆ ಬೆಳೆಗಾರರಿಗೆ ತಟ್ಟಿದ ಬಿಸಿಲ ಧಗೆ: ಗೂಡು ಕಟ್ಟದ ಹುಳುಗಳು; ತಾಪಮಾನ ನಿಯಂತ್ರಣಕ್ಕೆ ಹರಸಾಹಸ

ಹೊರ ರಾಜ್ಯಗಳಲ್ಲಿ ಸ್ಥಳೀಯವಾಗಿ ಟೊಮೆಟೊ ಸಿಗುತ್ತಿದ್ದ ಕಾರಣ ಬೆಲೆ ತೀವ್ರ ಕುಸಿತ ಕಂಡಿತ್ತು. ಆದರೆ ಈಗ ಹೊರ ರಾಜ್ಯಗಳಿಂದ ಟೊಮೆಟೊಗೆ ಹೆಚ್ಚಿನ ಬೇಡಿಕೆ ಬಂದಿದೆ. ದೆಹಲಿ, ನಾಸಿಕ್​, ಉತ್ತರ ಪ್ರದೇಶ, ಮಧ್ಯ ಪ್ರದೇಶ, ಗುಜರಾತ್​, ಹರಿಯಾಣ ಸೇರಿದಂತೆ ಬಹುತೇಕ ಎಲ್ಲಾ ರಾಜ್ಯಗಳಿಂದ ಟೊಮೆಟೊಗೆ ಬೇಡಿಕೆ ಹೆಚ್ಚಾಗಿದೆ. ಪ್ರತಿ ವರ್ಷ ಜೂನ್​ನಿಂದ ಸೆಪ್ಟೆಂಬರ್​ವರೆಗೂ ಕೋಲಾರದಲ್ಲಿ ಟೊಮೆಟೊ ಸುಗ್ಗಿ ಹಬ್ಬ ಶುರುವಾಗಲಿದೆ. ಕಾರಣ ಹೊರ ರಾಜ್ಯಗಳಲ್ಲಿ ಮಳೆಯ ಪರಿಣಾಮ ಸ್ಥಳೀಯವಾಗಿ ಟೊಮೆಟೊ ಬೆಳೆ ಇರುವುದಿಲ್ಲ. ಹಾಗಾಗಿ ದೇಶದ ಬಹುತೇಕ ಎಲ್ಲಾ ರಾಜ್ಯಗಳ ವ್ಯಾಪಾರಸ್ಥರು ಟೊಮೆಟೊ ಖರೀದಿಗೆ ಕೂಡ ಕೋಲಾರದ ಮಾರುಕಟ್ಟೆ ಕಡೆ ಮುಖ ಮಾಡುತ್ತಾರೆ, ಹಾಗಾಗಿ ಸಹಜವಾಗಿಯೇ ಇಲ್ಲಿ ಬೇಡಿಕೆ ಹೆಚ್ಚಾಗುತ್ತದೆ.

ಟೊಮೆಟೊ ಬೆಲೆ ಸಾವಿರ ಗಡಿದಾಟುವ ಸಾಧ್ಯತೆ

ಇನ್ನು ಮೊದಲೆಲ್ಲಾ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ರೈತರು ಬೆಳೆಯುವ ಟೊಮೆಟೊ ರಪ್ತಾಗುತ್ತಿತ್ತು. ಆದರೆ ಈಗ ದಕ್ಷಣ ಕರ್ನಾಟಕದ ಭಾಗದ ಎಲ್ಲಾ ಜಿಲ್ಲೆಯಲ್ಲಿ ರೈತರು ಟೊಮೆಟೊ ಬೆಳೆಯಲು ಆರಂಭಿಸಿದ್ದು, ಕೋಲಾರದ ಎಪಿಎಂಸಿ ಮಾರುಕಟ್ಟೆಯಲ್ಲಿ ಎಲ್ಲಾ ಜಿಲ್ಲೆಗಳಿಂದಲೂ ಟೊಮೆಟೊ ತಂದು ರೈತರು ಮಾರಾಟ ಮಾಡುತ್ತಿದ್ದಾರೆ. ಹಾಗಾಗಿ ಬೇಡಿಕೆಗೆ ತಕ್ಕಂತೆ ಉತ್ತಮ ಇಳುವರಿ ಕೂಡ ಬಂದರೆ ರೈತರಿಗೆ ಈ ಬಾರಿ ಟೊಮೆಟೊ ಸುಗ್ಗಿ ಅಂದರೆ ತಪ್ಪಾಗೋದಿಲ್ಲ. ಇನ್ನು ಎರಡು ಮೂರು ತಿಂಗಳು ಟೊಮೆಟೊಗೆ ಉತ್ತಮ ಬೆಲೆ ಇರಲಿದ್ದು, ಮುಂದಿನ ಒಂದು ತಿಂಗಳಲ್ಲಿ ಬೆಲೆ ಸಾವಿರ ಗಡಿದಾಟುವ ಸಾಧ್ಯತೆ ಕೂಡ ಇದೆ ಎನ್ನುತ್ತಾರೆ ಟೊಮೆಟೊ ವ್ಯಾಪಾರಿಯಾದ ಮುನಿರೆಡ್ಡಿ.

ಇದನ್ನೂ ಓದಿ: ಮನುಷ್ಯರಿಗಷ್ಟೇ ಅಲ್ಲ, ಇನ್ಮುಂದೆ ಬೆಳೆಗಳಿಗೂ ಬರಲಿದೆ ಕ್ಲಿನಿಕ್: ಕೋಲಾರ ಜಿಲ್ಲಾಡಳಿತದಿಂದ ಮಹತ್ವದ ಹೆಜ್ಜೆ!

ಒಟ್ಟಾರೆ ಟೊಮೆಟೊ ರೈತರಿಗೆ ಅದೃಷ್ಟದ ಬೆಳೆಯಾಗುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿವೆ. ಒಳ್ಳೆಯ ಬೆಲೆ ಬಂದರೆ ಅದೃಷ್ಟ, ಒಂದು ವೇಳೆ ಬೆಲೆ ಕೈಕೊಟ್ಟರೆ ಭಾರಿ ನಷ್ಟ ಎನ್ನುವಂತಾಗಿದೆ. ಇದೇ ಟ್ರೆಂಡ್ ಮುಂದುವರಿದರೆ ಮುಂದಿನ ಎರಡು ಮೂರು ತಿಂಗಳು ಟೊಮೆಟೊ ಬೆಳೆದ ರೈತರಿಗೆ ಬಂಪರ್ ಲಾಭ ಸಿಗೋದ್ರಲ್ಲಿ ಎರಡು ಮಾತಿಲ್ಲ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 3:59 pm, Sun, 14 June 26

Source link

ಸಂಗೀತ ಮಾಡುವಾಗ ಮೇಣದ ಬತ್ತಿ ಹಚ್ಚುವುದೇಕೆ ಎಆರ್ ರೆಹಮಾನ್ – Kannada News | Why AR Rahman light candle while composing music

ಭಾರತದ ನಂಬರ್ 1 ಸಂಗೀತ ನಿರ್ದೇಶಕ ಎಆರ್ ರೆಹಮಾನ್ (AR Rahman), ಹಲವು ದಶಕಗಳಿಂದಲೂ ಅವರು ನಂಬರ್ 1 ಸ್ಥಾನದಲ್ಲಿದ್ದಾರೆ. ಬಹಳ ವರ್ಸಟೈಲ್ ಸಂಗೀತ ನಿರ್​ದೇಶಕರಾಗಿರುವ ರೆಹಮಾನ್, ಭಾರತ ಕಂಡ ಈ ವರೆಗಿನ ಅತ್ಯುತ್ತಮ ಸಂಗೀತ ನಿರ್ದೇಶಕ ಎಂದು ಖುದ್ದು ಜಾವೇದ್ ಆಖ್ತರ್ ಬಣ್ಣಿಸಿದ್ದಾರೆ. ಅದಕ್ಕೆ ಕಾರಣವೇನು ಎಂದು ಸಹ ಅವರು ಸಂದರ್ಶನವೊಂದರಲ್ಲಿ ವಿವರಿಸಿದ್ದಾರೆ. ಅಂದಹಾಗೆ ಈ ವರೆಗೆ ಸಾವಿರಾರು ಅತ್ಯದ್ಭುತ ಹಾಡುಗಳನ್ನು ನೀಡಿರುವ ಎಆರ್ ರೆಹಮಾನ್, ಪ್ರತಿಬಾರಿ ಸಂಗೀತ ನೀಡುವಾಗಲೂ ಕೋಣೆಯಲ್ಲಿ ಮೇಣದಬತ್ತಿಯೊಂದನ್ನು ಹಚ್ಚುತ್ತಾರಂತೆ. ಇದಕ್ಕೆ ಕಾರಣವೇನು? ಇಲ್ಲಿದೆ ಮಾಹಿತಿ…

ಸಂಗೀತ ನಿರ್ದೇಶನದಲ್ಲಿ ಅತಿ ಹೆಚ್ಚು ತಂತ್ರಜ್ಞಾನ ಬಳಸಿದ ಮೊದಲ ಸಂಗೀತ ನಿರ್ದೇಶಕ ಎಆರ್ ರೆಹಮಾನ್. ರೆಹಮಾನ್ ಅವರ ಸ್ಟುಡಿಯೋನಲ್ಲಿ ಕಂಪ್ಯೂಟರ್‌ಗಳು, ಸಿಂಥಸೈಜರ್‌ಗಳು ಮತ್ತು ಅತ್ಯಾಧುನಿಕ ರೆಕಾರ್ಡಿಂಗ್ ಯಂತ್ರಗಳಿಂದ ತುಂಬಿರುತ್ತದೆ. ಈ ‘ಯಾಂತ್ರಿಕ’ ವಾತಾವರಣದಲ್ಲಿ ಸ್ವಲ್ಪ ‘ನೈಜ’ ಅಥವಾ ನೈಸರ್ಗಿಕ ಅಂಶ ಇರಲಿ ಎಂದು ಅವರು ಮೇಣದಬತ್ತಿಯನ್ನು ಬೆಳಗುತ್ತಾರಂತೆ ಎಆರ್ ರೆಹಮಾನ್. ಆ ಉರಿಯುವ ಜ್ಯೋತಿಯು ಯಂತ್ರಗಳ ಜಗತ್ತಿನ ಹೊರತಾದ ಜೀವಂತಿಕೆಯನ್ನು ನೆನಪಿಸುತ್ತದೆ ಎಂಬ ಕಾರಣಕ್ಕೆ ರೆಹಮಾನ್ ಅವರು ಮೇಣದ ಬತ್ತಿ ಉರಿಸುತ್ತಾರಂತೆ.

ಅಂದಹಾಗೆ ಈ ಮೇಣದ ಬತ್ತಿ ಉರಿಸಲು ಕೇವಲ ಒಂದು ಕಾರಣವಿಲ್ಲ ಬದಲಿಗೆ ಹಲವು ಕಾರಣಗಳಿವೆ. ರೆಹಮಾನ್ ಅವರಿಗೆ ತಮ್ಮ ಸ್ಟುಡಿಯೋ ಕೇವಲ ಕೆಲಸ ಮಾಡುವ ಜಾಗವಲ್ಲ, ಅದು ಒಂದು ರೀತಿಯ ಆರಾಧನಾ ತಾಣ ಮತ್ತು ಧ್ಯಾನ ಕೇಂದ್ರ. ಮೇಣದಬತ್ತಿಯ ಬೆಳಕು ಅಲ್ಲಿನ ವಾತಾವರಣವನ್ನು ಶಾಂತಗೊಳಿಸಿ, ಆಧ್ಯಾತ್ಮಿಕ ಕೇಂದ್ರೀಕೃತವಾಗಲು ಸಹಾಯ ಮಾಡುತ್ತದೆ. ಇಂತಹ ಮನಸ್ಥಿತಿಯಲ್ಲಿ ಸಂಗೀತ ಸಂಯೋಜನೆ ಮಾಡುವುದರಿಂದ ಅದಕ್ಕೆ ಒಂದು ವಿಶಿಷ್ಟ ಶಕ್ತಿ ಬರುತ್ತದೆ ಎಂಬುದು ಅವರ ನಂಬಿಕೆ.

ಇದನ್ನೂ ಓದಿ:ಎರಡು ಭಿನ್ನ ಆರ್ಕೆಸ್ಟ್ರಾ, ‘ರಾಮಾಯಣ’ಕ್ಕಾಗಿ ರೆಹಮಾನ್ ಸಾಹಸ ನೋಡಿ

ರೆಹಮಾನ್ ಅವರು ಹಗಲಿನ ಸಮಯದಲ್ಲಿ ಕೆಲಸ ಮಾಡುವುದಿಲ್ಲ. ರಾತ್ರಿಯ ಸಮಯದಲ್ಲಿ ಕೆಲಸ ಮಾಡಲು ಇಷ್ಟಪಡುತ್ತಾರೆ. ರಾತ್ರಿಯ ನಿಶ್ಯಬ್ಧತೆಯು ಸೃಜನಶೀಲತೆಗೆ ಹೆಚ್ಚು ಸಹಕಾರಿ. ಮೇಣದಬತ್ತಿಯ ಮಂದ ಬೆಳಕು ಆ ಶಾಂತ ವಾತಾವರಣವನ್ನು ಇನ್ನಷ್ಟು ಹೆಚ್ಚಿಸಿ, ಸಂಗೀತದ ಆಳವಾದ ಭಾವನೆಗಳೊಂದಿಗೆ ಸಂಪರ್ಕ ಸಾಧಿಸಲು ನೆರವಾಗುತ್ತದೆ ಎಂಬುದು ಅವರ ನಂಬಿಕೆ. ಕೆಲವೊಮ್ಮೆ ಅವರು ಈ ಮೇಣದಬತ್ತಿಯನ್ನು ಒಂದು ನಿರ್ದಿಷ್ಟ ಗುರಿಯ ಸಂಕೇತವಾಗಿ ಬಳಸುತ್ತಾರೆ. ಮೇಣದಬತ್ತಿ ಉರಿಯುವ ಅವಧಿಯೊಳಗೆ ಒಂದು ನಿರ್ದಿಷ್ಟ ಕೆಲಸವನ್ನು ಅಥವಾ ಸಂಗೀತದ ಭಾಗವನ್ನು ಪೂರ್ಣಗೊಳಿಸುವ ಗುರಿಯನ್ನು ಅವರು ಇಟ್ಟುಕೊಳ್ಳುತ್ತಾರೆ ಎಂದು ಆಶಾ ಭೋಂಸ್ಲೆ ಈ ಹಿಂದೆ ಹೇಳಿದ್ದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಮೋದಿ 5 ದಿನಗಳ ಐರೋಪ್ಯ ಪ್ರವಾಸದಲ್ಲಿ ‘ಭಾರತ್ ಇನ್ನೋವೇಟ್ಸ್’; ಹೂಡಿಕೆದಾರರೊಂದಿಗೆ ಪ್ರಧಾನಿ ಸಂವಾದ – Kannada News | Modi in Nice: Bharat Innovates 2026 Summit Unites Indian Startups & Global Investors

ನೀಸ್ (ಫ್ರಾನ್ಸ್), ಜೂನ್ 14: ಐದು ದಿನಗಳ ಐರೋಪ್ಯ ಪ್ರವಾಸದಲ್ಲಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಫ್ರಾನ್ಸ್​ನ ಎರಡನೇ ಅತಿದೊಡ್ಡ ನಗರಿ ನೀಸ್​ಗೆ ಆಗಮಿಸಿದ್ದಾರೆ. ಇಲ್ಲಿ ಅವರು ಹೂಡಿಕೆದಾರರನ್ನು ಭೇಟಿ ಮಾಡಿ ಸಂವಾದ ನಡೆಸಿದರು. ನೀಸ್ ನಗರದಲ್ಲಿ ನಡೆಯಲಿರುವ ‘ಭಾರತ್ ಇನ್ನೋವೇಟ್ಸ್ 2026’ (Bharat Innovates 2026) ಸಮಾವೇಶದ ಉದ್ಘಾಟನೆಗೂ ಮುನ್ನ, ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಜಾಗತಿಕ ಹೂಡಿಕೆದಾರರು ಹಾಗೂ ವೆಂಚರ್ ಕ್ಯಾಪಿಟಲಿಸ್ಟ್‌ಗಳೊಂದಿಗೆ ಉನ್ನತ ಮಟ್ಟದ ಸಂವಾದ ನಡೆಸಿದರು. ಭಾರತದ ಅತ್ಯಾಧುನಿಕ ತಂತ್ರಜ್ಞಾನ ಮತ್ತು ಸ್ಟಾರ್ಟ್‌ಅಪ್‌ ಸಾಮರ್ಥ್ಯವನ್ನು ಜಾಗತಿಕ ಮಟ್ಟದಲ್ಲಿ ಪ್ರದರ್ಶಿಸುವ ಮಹತ್ವದ ಸಮಾವೇಶ ಇದಾಗಿದೆ. ಪ್ರಧಾನಿ ನಡೆಸಿದ ಈ ಸಂವಾದದಲ್ಲಿ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಹಾಗೂ ಪ್ರಧಾನ ವೈಜ್ಞಾನಿಕ ಸಲಹೆಗಾರ ಅಜಯ್ ಕುಮಾರ್ ಸೂದ್ ಉಪಸ್ಥಿತರಿದ್ದರು.

ಪ್ರಮುಖ ಉದ್ಯಮಿಗಳ ಭಾಗವಹಿಸುವಿಕೆ

ಪ್ರಧಾನಿ ಮೋದಿ ಅವರೊಂದಿಗೆ ನಡೆದ ಈ ಸಂವಾದದಲ್ಲಿ ಓಯೋ ರೂಮ್ಸ್ (OYO Rooms) ಸಿಇಒ ರಿತೇಶ್ ಅಗರ್ವಾಲ್ ಮತ್ತು ಪ್ರಮುಖ ಭಾರತೀಯ ಉದ್ಯಮಿ ರೋನಿ ಸ್ಕ್ರೂವಾಲಾ ಸೇರಿದಂತೆ ಹಲವು ಜಾಗತಿಕ ಹೂಡಿಕೆದಾರರು ಹಾಗೂ ನಾವೀನ್ಯತೆ (Innovation) ವಲಯದ ಮುಖಂಡರು ಭಾಗವಹಿಸಿದ್ದರು. ಭಾರತ ಮತ್ತು ಫ್ರಾನ್ಸ್ ನಡುವೆ ಪ್ರಸ್ತುತ ನಡೆಯುತ್ತಿರುವ ‘ಇಂಡೋ-ಫ್ರೆಂಚ್ ನಾವೀನ್ಯತೆ ವರ್ಷ’ದ (India-France Year of Innovation) ಭಾಗವಾಗಿ ಈ ಸಮಾವೇಶ ಆಯೋಜನೆಗೊಂಡಿದ್ದು, ಎರಡೂ ದೇಶಗಳ ತಾಂತ್ರಿಕ ಪಾಲುದಾರಿಕೆಯಲ್ಲಿ ಇದು ಮಹತ್ವದ ಮೈಲಿಗಲ್ಲಾಗಿದೆ.

ಇದನ್ನೂ ಓದಿ: ಆಂತ್ರೋಪಿಕ್​ನ ಬಲಿಷ್ಠ ಎಐ ಮಾಡಲ್​ಗಳು ಅಮೆರಿಕನ್ನೇತರರಿಗೆ ಅಲಭ್ಯ; ಭಾರತಕ್ಕೆ ಇದು ಎಚ್ಚರಿಕೆಯ ಕರೆಗಂಟೆಯಾ?

ಸಮಾವೇಶದ ಅಜೆಂಡಾಗಳು

ಕೇಂದ್ರ ಶಿಕ್ಷಣ ಸಚಿವಾಲಯದ ಉಸ್ತುವಾರಿಯಲ್ಲಿ ಜೂನ್ 14 ರಿಂದ ಜೂನ್ 16 ರವರೆಗೆ ನಡೆಯಲಿರುವ ಈ ಮೂರು ದಿನಗಳ ಬೃಹತ್ ಸಮಾವೇಶದಲ್ಲಿ ಹಲವು ನಿರೀಕ್ಷೆಗಳು ಮತ್ತು ಕಾರ್ಯಕ್ರಮಗಳಿವೆ. ಭಾರತದ 120 ಕ್ಕೂ ಹೆಚ್ಚು ಮುಂಚೂಣಿಯ ‘ದೀಪ್-ಟೆಕ್’ (Deep-tech) ಸ್ಟಾರ್ಟ್‌ಅಪ್‌ಗಳು ತಮ್ಮ ತಂತ್ರಜ್ಞಾನವನ್ನು ಜಾಗತಿಕ ವೇದಿಕೆಯಲ್ಲಿ ಪ್ರದರ್ಶಿಸುತ್ತಿವೆ.

ಭಾರತದ ಪ್ರತಿಷ್ಠಿತ ಐಐಟಿಗಳು (IITs) ಸೇರಿದಂತೆ ಸುಮಾರು 15 ಕ್ಕೂ ಹೆಚ್ಚು ಉನ್ನತ ಶಿಕ್ಷಣ ಸಂಸ್ಥೆಗಳು ಭಾಗವಹಿಸಿವೆ. ಜಗತ್ತಿನ ವಿವಿಧ ದೇಶಗಳ 500 ಕ್ಕೂ ಹೆಚ್ಚು ಪ್ರಮುಖ ಹೂಡಿಕೆದಾರರು, ವೆಂಚರ್ ಕ್ಯಾಪಿಟಲ್ ಸಂಸ್ಥೆಗಳು ಹಾಗೂ ಜಾಗತಿಕ ಸಿಇಒಗಳು ಇದರಲ್ಲಿ ಪಾಲ್ಗೊಂಡಿದ್ದಾರೆ. ಸೆಮಿಕಂಡಕ್ಟರ್‌ಗಳು, ಅಡ್ವಾನ್ಸ್ಡ್ ಕಂಪ್ಯೂಟಿಂಗ್, ಬಾಹ್ಯಾಕಾಶ ತಂತ್ರಜ್ಞಾನ (Space Tech), ಬಯೋಟೆಕ್ನಾಲಜಿ, ಹೆಲ್ತ್‌ಕೇರ್ ಮತ್ತು ನವೀಕರಿಸಬಹುದಾದ ಇಂಧನ ಸೇರಿದಂತೆ 13 ಪ್ರಮುಖ ಭವಿಷ್ಯದ ತಂತ್ರಜ್ಞಾನ ವಲಯಗಳ ಮೇಲೆ ಈ ಸಮಾವೇಶ ಬೆಳಕು ಚೆಲ್ಲಲಿದೆ.

ಇದನ್ನೂ ಓದಿ: ವಿಶ್ವದಲ್ಲೇ ಅತಿದೊಡ್ಡ ರಸ್ತೆ ಜಾಲ ಹೊಂದಿದ ದೇಶವೆಂಬ ದಾಖಲೆ ಭಾರತಕ್ಕೆ

ಮ್ಯಾಕ್ರಾನ್ ಜೊತೆ ದ್ವಿಪಕ್ಷೀಯ ಮಾತುಕತೆ

ನಿನ್ನೆ ಶನಿವಾರವಷ್ಟೇ ಫ್ರಾನ್ಸ್‌ಗೆ ಆಗಮಿಸಿರುವ ಪ್ರಧಾನಿ ಮೋದಿ ಅವರು, ಭಾರತ್ ಇನ್ನೋವೇಟ್ಸ್ ಸಮಾವೇಶವನ್ನು ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರಾನ್ ಅವರೊಂದಿಗೆ ಜಂಟಿಯಾಗಿ ಉದ್ಘಾಟಿಸಲಿದ್ದಾರೆ. ತದನಂತರ ಉಭಯ ನಾಯಕರು ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದು, ಕಳೆದ ಫೆಬ್ರವರಿಯಲ್ಲಿ ನಡೆದ ಪ್ರಗತಿ ಪರಿಶೀಲನೆ ಹಾಗೂ ರಕ್ಷಣೆ, ಬಾಹ್ಯಾಕಾಶ ಮತ್ತು ಕೃತಕ ಬುದ್ಧಿಮತ್ತೆ (AI) ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಕಾರ್ಯತಂತ್ರದ ಸಹಕಾರವನ್ನು ಮತ್ತಷ್ಟು ವಿಸ್ತರಿಸುವ ಕುರಿತು ಚರ್ಚಿಸಲಿದ್ದಾರೆ.

ಐದು ದಿನಗಳ ಯುರೋಪ್ ಪ್ರವಾಸದ ಮೊದಲ ಹಂತವಾಗಿ ಫ್ರಾನ್ಸ್‌ಗೆ ಭೇಟಿ ನೀಡಿರುವ ಪ್ರಧಾನಿ ಮೋದಿ, ಇಲ್ಲಿನ ಕಾರ್ಯಕ್ರಮಗಳ ಬಳಿಕ ಸ್ಲೋವಾಕಿಯಾ ದೇಶಕ್ಕೆ ತೆರಳಲಿದ್ದಾರೆ. ತದನಂತರ ಜೂನ್ 16-17 ರಂದು ಎವಿಯನ್‌ನಲ್ಲಿ ನಡೆಯಲಿರುವ ಜಿ-7 (G7) ಶೃಂಗಸಭೆಯಲ್ಲಿ ಭಾಗವಹಿಸಲು ಮತ್ತೆ ಫ್ರಾನ್ಸ್‌ಗೆ ಮರಳಲಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಗ್ಯಾರಂಟಿ ಯೋಜನೆಗಳು ಸ್ಥಗಿತ ಅಂತೆ-ಕಂತೆಗಳಿಗೆ ತೆರೆ ಎಳೆದ ಡಿಕೆ ಶಿವಕುಮಾರ್, ಸಿಎಂ ಕೊಟ್ಟ ಸ್ಪಷ್ಟನೆಯಲ್ಲೇನಿದೆ? – Kannada News | Will Not Stop Guarantee Schemes Clarified By CM DK Shivakumar

ಬೆಂಗಳೂರು, (ಜೂನ್ 14): ರಾಜ್ಯ ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಯಲ್ಲಿ (Guarantee Scheme) ಆರ್ಥಿಕವಾಗಿ ಹೊರೆಯಾಗ್ತಿರೋದೇ ಗೃಹಲಕ್ಷ್ಮೀ ಯೋಜನೆ ಎನ್ನಲಾಗುತ್ತಿದೆ. ಕಳೆದ ಮೂರು ವರ್ಷದಲ್ಲಿ ಸುಮಾರು 120 ಕೋಟಿಯಷ್ಟು ಹಣ ಗೃಹಲಕ್ಷ್ಮೀ ಯೋಜನೆಯ ಒಂದೇ ಯೋಜನೆಗೆ ಭರಿಸಲಾಗಿದೆ. ಆದ್ರೆ, ಇದೀಗ ಅನರ್ಹರು ಯೋಜನೆ ಲಾಭ ಪಡೆಯುತ್ತಿದ್ದಾರೆ ಎಂದು ಪರಿಷ್ಕರಣೆಗೆ ಸರ್ಕಾರ ಮುಂದಾಗಿದೆ. ಇದನ್ನೇ ಅಸ್ತ್ರ ಮಾಡಿಕೊಂಡಿರುವ ವಿಪಕ್ಷದ ನಾಯಕರು, ಪರಿಷ್ಕಣೆ ಹೆಸರಿನಲ್ಲಿ ಗ್ಯಾರಂಟಿ ಯೋಜನೆ ರದ್ದು ಮಾಡುವ ಹುನ್ನಾರ ಮಾಡುತ್ತಿದೆ ಎನ್ನುವ ಆರೋಪ ಮಾಡುತ್ತಿದ್ದಾರೆ. ಹೀಗಾಗಿ ಇದಕ್ಕೆ ಸ್ವತಃ ಸಿಎಂ ಡಿಕೆ ಶಿವಕುಮಾರ್ (DK Shivakumar) ಮಾಧ್ಯಮ ಪ್ರಕಟಣೆ ಹೊರಡಿಸಿದ್ದು, ಗೃಹಲಕ್ಷ್ಮಿ, ಗೃಹಜ್ಯೋತಿ ಸೇರಿ ಯಾವುದೇ ಗ್ಯಾರಂಟಿ ನಿಲ್ಲುವುದಿಲ್ಲ. ಪ್ರತಿಪಕ್ಷಗಳ ವದಂತಿಗಳಿಗೆ ಕಿವಿಗೊಡಬೇಡಿ. ಗ್ಯಾರಂಟಿಗಳು ಕಾಂಗ್ರೆಸ್ ಸರ್ಕಾರದ ಹೆಮ್ಮೆಯ ಯೋಜನೆಗಳು. ನೂರಕ್ಕೆ ನೂರರಷ್ಟು ಗ್ಯಾರಂಟಿ ಯೋಜನೆ ಮುಂದುವರಿಯುತ್ತವೆ ಎಂದು ಸ್ಪಷ್ಟಪಡಿಸಿದ್ದಾರೆ.

ಮುಖ್ಯಾಂಶಗಳು

  • ಗ್ಯಾರಂಟಿ ಯೋಜನೆ ನಿಲ್ಲಿಸುತ್ತಾರೆಂದು ವಿಪಕ್ಷಗಳ ಆರೋಪ ವಿಚಾರ
  • ಮಾಧ್ಯಮ ಪ್ರಕಟಣೆ ಮೂಲಕ ಸಿಎಂ ಡಿ.ಕೆ.ಶಿವಕುಮಾರ್ ಸ್ಪಷ್ಟನೆ
  • ಗೃಹಲಕ್ಷ್ಮೀ, ಗೃಹಜ್ಯೋತಿ ಸೇರಿ ಯಾವುದೇ ಗ್ಯಾರಂಟಿ ನಿಲ್ಲುವುದಿಲ್ಲ
  • ಪ್ರತಿಪಕ್ಷಗಳ ವದಂತಿಗೆ ಕಿವಿಗೊಡಬೇಡಿ ಎಂದ ಸಿಎಂ ಡಿ.ಕೆ.ಶಿವಕುಮಾರ್​

ಗ್ಯಾರಂಟಿ ಯೋಜನೆ ನಿಲ್ಲಿಸುತ್ತಾರೆಂಬ ವಿಪಕ್ಷಗಳ ಆರೋಪಕ್ಕೆ ಮಾಧ್ಯಮ ಪ್ರಕಟಣೆ ಹೊರಡಿಸಿರವ ಡಿಕೆ ಶಿವಕುಮಾರ್, ‘ಗೃಹಲಕ್ಷ್ಮೀ‘ ಮತ್ತು ‘ಗೃಹಜ್ಯೋತಿ’ ಯೋಜನೆಗಳನ್ನು ನಿಲ್ಲಿಸುವುದಿಲ್ಲ. ವಿಪಕ್ಷ ಹಬ್ಬಿಸುತ್ತಿರುವ ಸುಳ್ಳು ಸುದ್ದಿಗೆ ಜನರು ಕಿವಿಗೊಡಬಾರದು. ಕೆಲವರು ಸತ್ತವರ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿ ಅಕೌಂಟ್ ತೆರೆದು ಯೋಜನೆಯ ಲಾಭ ಪಡೆಯುತ್ತಿದ್ದಾರೆ. ಹೀಗಾಗಿ ಗ್ಯಾರಂಟಿ ಯೋಜನೆ ಫಲಾನುಭವಿಗಳ ದೃಢೀಕರಣ ಮುಖ್ಯ. ಹೆಸರು, ವಿಳಾಸ, ಖಾತೆ ನಂಬರ್ ಖಚಿತಪಡಿಸಿಕೊಳ್ಳಲು ಮತ್ತೆ ಅರ್ಜಿ ಸಲ್ಲಿಸಲು ಹೇಳಲಾಗಿದೆ ಹೊರತು ಯೋಜನೆ ನಿಲ್ಲಿಸಲ್ಲ. ಗ್ಯಾರಂಟಿ ಯೋಜನೆಗಳು ನೂರಕ್ಕೆ ನೂರರಷ್ಟು ಮುಂದುವರಿಯುತ್ತೆ. ಯಾರೂ ಆತಂಕಪಡುವ ಅವಶ್ಯಕತೆ ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ: ಗೃಹಲಕ್ಷ್ಮಿ ಯೋಜನೆ ಪರಿಷ್ಕರಣೆ: ಸೌಲಭ್ಯ ಪಡೆಯಲು ಹೊಸ ಮಾನದಂಡಗಳೇನು? ಇಲ್ಲಿದೆ ಮಾಹಿತಿ

ಮಾಧ್ಯಮ ಪ್ರಕಟಣೆಯಲ್ಲೇನಿದೆ?

ಕಾಂಗ್ರೆಸ್ ಸರ್ಕಾರದ ಜನಪರ ಗ್ಯಾರಂಟಿ ಯೋಜನೆಗಳಾದ ಗೃಹಲಕ್ಷ್ಮಿ ಮತ್ತು ಗೃಹಜ್ಯೋತಿಯನ್ನು ಯಾವುದೇ ಕಾರಣಕ್ಕೂ ಸ್ಥಗಿತಗೊಳಿಸುವುದಿಲ್ಲ. ಈ ಯೋಜನೆಗಳನ್ನು ನಿಲ್ಲಿಸಲಾಗುತ್ತಿದೆ ಎಂಬ ವಿರೋಧ ಪಕ್ಷಗಳ ಸುಳ್ಳು ಪ್ರಚಾರ ಹಾಗೂ ವದಂತಿಗಳಿಗೆ ಸಾರ್ವಜನಿಕರು ಕಿವಿಗೊಡಬಾರದು. ಕೆಲವರು ಮೃತಪಟ್ಟವರ ಹೆಸರಿನಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಯೋಜನೆಗಳ ಲಾಭ ಪಡೆಯುತ್ತಿರುವುದು ಗಮನಕ್ಕೆ ಬಂದಿದೆ. ಹೀಗಾಗಿ ನಿಜವಾದ ಫಲಾನುಭವಿಗಳ ಹೆಸರು, ವಿಳಾಸ ಹಾಗೂ ಬ್ಯಾಂಕ್ ಖಾತೆ ವಿವರಗಳನ್ನು ದೃಢೀಕರಿಸಲು ಮರುಪರಿಶೀಲನೆ ಪ್ರಕ್ರಿಯೆ ಕೈಗೊಳ್ಳಲಾಗಿದೆ. ಇದು ಯೋಜನೆಗಳನ್ನು ನಿಲ್ಲಿಸುವ ಕ್ರಮವಲ್ಲ, ಬದಲಾಗಿ ಅರ್ಹ ಫಲಾನುಭವಿಗಳಿಗೆ ಯೋಜನೆಯ ಸೌಲಭ್ಯಗಳು ಸಮರ್ಪಕವಾಗಿ ತಲುಪುವಂತೆ ಮಾಡುವ ಕ್ರಮವಾಗಿದೆ. ಫಲಾನುಭವಿಗಳು ಯಾವುದೇ ಆತಂಕಪಡಬೇಕಾದ ಅಗತ್ಯವಿಲ್ಲ, ಎಲ್ಲಾ ಗ್ಯಾರಂಟಿ ಯೋಜನೆಗಳು ಎಂದಿನಂತೆ ಮುಂದುವರಿಯಲಿವೆ ಎಂದು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 3:37 pm, Sun, 14 June 26

Source link

ಖಾನ್ ಸರ್ ಕೋಚಿಂಗ್ ಕೇಂದ್ರದ ಪ್ರತಿಸ್ಪರ್ಧಿ, ಜ್ಞಾನಬಿಂದು ಅಕಾಡೆಮಿಯ ನಿರ್ದೇಶಕನ ಸಹೋದರ ನೇಪಾಳದಲ್ಲಿ ಶವವಾಗಿ ಪತ್ತೆ – Kannada News | Khan Sir Rival’s Brother Dead in Nepal: Prince Yadav’s Mysterious Death, Police Probe

ಕಠ್ಮಂಡು, ಜೂನ್ 14: ಖಾನ್​ ಸರ್(Khan Sir) ಅವರ ಕೋಚಿಂಗ್ ಕೇಂದ್ರದ ಪ್ರತಿಸ್ಪರ್ಧಿ ಜ್ಞಾನ ಬಿಂದು ಅಕಾಡೆಮಿ ನಿರ್ದೇಶಕ ರೋಶನ್ ಆನಂದ್ ಅವರ ಸಹೋದರ ಪ್ರಿನ್ಸ್ ಯಾದವ್, ನೇಪಾಳದ ಬಿರಾಟ್‌ನಗರದ ಹೋಟೆಲ್‌ನಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದಾರೆ. ನೇಪಾಳ ಪೊಲೀಸರು ತನಿಖೆ ಆರಂಭಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಐವರನ್ನು ಬಂಧಿಸಿದ್ದಾರೆ, ಅಧಿಕಾರಿಗಳು ಸಾವಿನ ನಿಖರವಾದ ಕಾರಣವನ್ನು ನಿರ್ಧರಿಸಲು ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದಾರೆ.

ಪ್ರಿನ್ಸ್ ಯಾದವ್ ನೇಪಾಳದ ಬಿರಾಟ್‌ನಗರದ ಹೋಟೆಲ್‌ನಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಬೆನ್ನಲ್ಲೇ ನೇಪಾಳ ಪೊಲೀಸರು ಅತ್ಯಂತ ಚುರುಕಿನ ತನಿಖೆ ಆರಂಭಿಸಿದ್ದಾರೆ. ಮೃತದೇಹವನ್ನು ವಿಧಿವಿಜ್ಞಾನ (Forensic) ಪರೀಕ್ಷೆಗೆ ಕಳುಹಿಸಲಾಗಿದ್ದು, ವೈಜ್ಞಾನಿಕ ವರದಿಗಳ ಆಧಾರದ ಮೇಲೆ ಸತ್ಯಾಸತ್ಯತೆಗಳನ್ನು ಶೀಘ್ರದಲ್ಲೇ ಬಯಲಿಗೆಳೆಯಲು ಅಧಿಕಾರಿಗಳು ಸಜ್ಜಾಗಿದ್ದಾರೆ.
ಪಾಟ್ನಾದಲ್ಲಿ ಖಾನ್ ಗ್ಲೋಬಲ್ ಸ್ಟಡೀಸ್ (ಕೆಜಿಎಸ್) ಮತ್ತು ಜ್ಞಾನ್ ಬಿಂದು ಅಕಾಡೆಮಿ ನಡುವಿನ ಪೈಪೋಟಿ ವಿಕೋಪಕ್ಕೆ ತಿರುಗುತ್ತಿದ್ದಂತೆಯೇ ಬಿಹಾರ ಪೊಲೀಸರು ಪರಿಸ್ಥಿತಿಯನ್ನು ಅದ್ಭುತವಾಗಿ ಹತೋಟಿಗೆ ತಂದಿದ್ದಾರೆ.

ಈ ತಿಂಗಳ ಆರಂಭದಲ್ಲಿ ನಡೆದ ಗಲಭೆ ಮತ್ತು ಜೂನ್ 2 ರ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಖಾನ್ ಸರ್ ಅವರ ವಿರುದ್ಧ ಎಫ್‌ಐಆರ್ ದಾಖಲಾದಾಗ, ಪಾಟ್ನಾ ನ್ಯಾಯಾಲಯವು ಅವರಿಗೆ ಬಂಧನದಿಂದ ಮಧ್ಯಂತರ ರಕ್ಷಣೆ ನೀಡಿದೆ. ಇದು ತನಿಖೆಯು ಯಾವುದೇ ಪಕ್ಷಪಾತವಿಲ್ಲದೆ, ಕಾನೂನುಬದ್ಧವಾಗಿ ನಡೆಯಲು ನ್ಯಾಯಾಂಗ ಒದಗಿಸಿದ ದೊಡ್ಡ ಶಕ್ತಿಯಾಗಿದೆ. ಖಾನ್ ಸರ್ ಕೂಡ ತನಿಖೆಗೆ ಸಂಪೂರ್ಣ ಸಹಕಾರ ನೀಡುತ್ತಿದ್ದು, ಸತ್ಯ ಹೊರಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮತ್ತಷ್ಟು ಓದಿ: Khan Sir: ಬಸ್ಸಿಗೆ ದುಡ್ಡಿಲ್ಲದೆ ಊರಿಗೆ ನಡೆದು ಹೋಗಿದ್ದ ಖಾನ್ ಸರ್, 107 ಕೋಟಿ ರೂ ತಿರಸ್ಕರಿಸಿದ ಕಥೆ

ಪ್ರಿನ್ಸ್ ಯಾದವ್ ಅವರ ಸಾವಿನ ಸುದ್ದಿ ಬಿಹಾರ ತಲುಪುತ್ತಿದ್ದಂತೆಯೇ, ಯಾವುದೇ ರೀತಿಯ ಅಹಿತಕರ ಘಟನೆಗಳು ಅಥವಾ ವಿದ್ಯಾರ್ಥಿಗಳ ನಡುವೆ ಘರ್ಷಣೆಗಳು ನಡೆಯದಂತೆ ಪಾಟ್ನಾ ಪೊಲೀಸರು ಮುನ್ನೆಚ್ಚರಿಕಾ ಕ್ರಮವಾಗಿ ಖಾನ್ ಸರ್ ಅವರ ನಿವಾಸ ಮತ್ತು ತರಬೇತಿ ಸಂಸ್ಥೆಗಳ ಸುತ್ತಮುತ್ತ ಭದ್ರತೆಯನ್ನು ನೂರು ಪಟ್ಟು ಹೆಚ್ಚಿಸಿದ್ದಾರೆ. ಪೊಲೀಸರ ಈ ಸಕಾಲಿಕ ಮುನ್ನೆಚ್ಚರಿಕೆಯಿಂದಾಗಿ ನಗರದಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಸಂಪೂರ್ಣವಾಗಿ ನಿಯಂತ್ರಣದಲ್ಲಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 2:41 pm, Sun, 14 June 26

Source link

T20 World Cup 2026: ಪಾಕಿಸ್ತಾನ ವಿರುದ್ಧದ ವಿಶ್ವಕಪ್‌ ಪಂದ್ಯಕ್ಕೆ ಭಾರತದ ಬಲಿಷ್ಠ ಪ್ಲೇಯಿಂಗ್ 11 – Kannada News | IND W vs PAK W T20 World Cup 2026: India’s Predicted Playing XI for Opener

2026 ರ ಮಹಿಳಾ ಟಿ20 ವಿಶ್ವಕಪ್‌ನ ಆರನೇ ಪಂದ್ಯದಲ್ಲಿ ಭಾರತ ಹಾಗೂ ಪಾಕಿಸ್ತಾನ ಮುಖಾಮುಖಿಯಾಗುತ್ತಿವೆ. ಬರ್ಮಿಂಗ್‌ಹ್ಯಾಮ್‌ನ ಎಡ್ಜ್‌ಬಾಸ್ಟನ್‌ನಲ್ಲಿ ನಡೆಯುತ್ತಿರುವ ಈ ಪಂದ್ಯ ಈ ಪಂದ್ಯಾವಳಿಯಲ್ಲಿ ಉಭಯ ತಂಡಗಳ ಮೊದಲ ಪಂದ್ಯವಾಗಿದೆ. ಹೀಗಾಗಿ ಎರಡು ತಂಡಗಳು ಗೆಲುವಿನೊಂದಿಗೆ ಟೂರ್ನಿ ಆರಂಭಿಸುವ ಇರಾದೆಯಲ್ಲಿವೆ. ಅದರಲ್ಲೂ ಪಾಕಿಸ್ತಾನದ ವಿರುದ್ಧ ಟಿ20 ಮಾದರಿಯಲ್ಲಿ ಮೇಲುಗೈ ಸಾಧಿಸಿರುವ ಟೀಂ ಇಂಡಿಯಾ ಈ ಪಂದ್ಯವನ್ನು ಗೆಲ್ಲುವ ಮೂಲಕ ತನ್ನ ಗೆಲುವಿನ ಸರಣಿಯನ್ನು ಮುಂದುವರೆಸಲು ನೋಡುತ್ತಿದೆ. ಹೀಗಾಗಿ ಪಾಕ್ ವಿರುದ್ಧ ಬಲಿಷ್ಠ ತಂಡವನ್ನು ಕಟ್ಟಿಕೊಂಡು ಕಣಕ್ಕಿಳಿಯುತ್ತಿದೆ. ಹಾಗಿದ್ದರೆ ಈ ಪಂದ್ಯಕ್ಕೆ ಭಾರತ ವನಿತಾ ಪಡೆಯ ಆಡುವ ಹನ್ನೊಂದರ ಬಳಗ ಹೇಗಿರಲಿದೆ? ಅದಕ್ಕೆಲ್ಲ ಉತ್ತರ ಇಲ್ಲಿದೆ.

ಬ್ಯಾಟಿಂಗ್ ವಿಭಾಗ ಹೇಗಿರಲಿದೆ?

ಆರಂಭಿಕರಾಗಿ ಎಂದಿನಂತೆ ಶಫಾಲಿ ವರ್ಮಾ ಮತ್ತು ಉಪನಾಯಕಿ ಸ್ಮೃತಿ ಮಂಧಾನ ಭಾರತದ ಇನ್ನಿಂಗ್ಸ್ ಆರಂಭಿಸಲಿದ್ದಾರೆ. ಜೆಮಿಮಾ ರೊಡ್ರಿಗಸ್ 3 ನೇ ಕ್ರಮಾಂಕದಲ್ಲಿ ಮತ್ತು ನಾಯಕಿ ಹರ್ಮನ್‌ಪ್ರೀತ್ ಕೌರ್ 4 ನೇ ಕ್ರಮಾಂಕದಲ್ಲಿ ಆಡುವ ನಿರೀಕ್ಷೆಯಿದೆ. ರಿಚಾ, ದೀಪ್ತಿ ಶರ್ಮಾ ಮತ್ತು ಶ್ರೇಯಾಂಕಾ ಪಾಟೀಲ್ ಇತರ ಮಧ್ಯಮ ಕ್ರಮಾಂಕದ ಆಯ್ಕೆಗಳಾಗಿದ್ದಾರೆ. ಭಾರತಿ ಫೂಲ್ಮಾಲಿಗೆ ಈ ಪಂದ್ಯದಲ್ಲಿ ಆಡುವ ಅವಕಾಶ ಸಿಗುವುದು ಅನುಮಾನ.

ಬೌಲಿಂಗ್ ವಿಭಾಗದಲ್ಲಿ ಯಾರ್ಯಾರು?

ಉಳಿದಂತೆ ಕ್ರಾಂತಿ ಗೌಡ್ ಮತ್ತು ರೇಣುಕಾ ಸಿಂಗ್ ಠಾಕೂರ್ ವೇಗದ ದಾಳಿಯನ್ನು ಮುನ್ನಡೆಸಲಿದ್ದಾರೆ. ಯುವ ವೇಗಿ ನಂದನಿ ಶರ್ಮಾ ಮೂರನೇ ವೇಗಿಯಾಗಿಯಾಗಿರಲಿದ್ದಾರೆ. ದೀಪ್ತಿ ಶರ್ಮಾ, ಶ್ರೀ ಚರಣಿ ಮತ್ತು ಶ್ರೇಯಂಕಾ ತಂಡದ ಸ್ಪಿನ್ ವಿಭಾಗದಲ್ಲಿ ಪ್ರಮುಖ ಪಾತ್ರ ವಹಿಸಬಹುದು. ನಾಲ್ಕನೇ ಸ್ಪಿನ್ನರ್ ಅಗತ್ಯವಿದ್ದರೆ ಶಫಾಲಿ ವರ್ಮಾ ಮತ್ತು ನಾಯಕಿ ಹರ್ಮನ್ಪ್ರೀತ್ ಕೌರ್ ಈ ಸ್ಥಾನವನ್ನು ತುಂಬಬಹುದು. ಆದ್ದರಿಂದ, ರಾಧಾ ಯಾದವ್ ಮತ್ತು ವೇಗಿ ಅರುಂಧತಿ ರೆಡ್ಡಿ ಬೆಂಚ್ ಕಾಯಬೇಕು.

ಭಾರತದ ಸಂಭಾವ್ಯ ಪ್ಲೇಯಿಂಗ್ 11: ಸ್ಮೃತಿ ಮಂಧಾನ, ಶಫಾಲಿ ವರ್ಮಾ, ಜೆಮಿಮಾ ರಾಡ್ರಿಗಸ್, ಹರ್ಮನ್‌ಪ್ರೀತ್ ಕೌರ್ (ನಾಯಕಿ), ರಿಚಾ ಘೋಷ್ (ವಿಕೆಟ್‌ಕೀಪರ್), ದೀಪ್ತಿ ಶರ್ಮಾ, ಶ್ರೇಯಾಂಕ ಪಾಟೀಲ್, ಶ್ರೀ ಚರಣಿ, ಕ್ರಾಂತಿ ಗೌಡ್, ನಂದಿನಿ ಶರ್ಮಾ, ರೇಣುಕಾ ಸಿಂಗ್ ಠಾಕೂರ್.

ಪಾಕಿಸ್ತಾನದ ಸಂಭಾವ್ಯ ಪ್ಲೇಯಿಂಗ್ 11: ಮುನಿಬಾ ಅಲಿ (ವಿಕೆಟ್ ಕೀಪರ್), ಗುಲ್ ಫಿರೋಜಾ, ಆಯೇಶಾ ಜಾಫರ್, ಅಲಿಯಾ ರಿಯಾಜ್, ಫಾತಿಮಾ ಸನಾ (ನಾಯಕಿ), ಸೈರಾ ಜಬೀನ್, ನತಾಲಿಯಾ ಪರ್ವೇಜ್, ತುಬಾ ಹಸನ್, ಸಾದಿಯಾ ಇಕ್ಬಾಲ್, ಡಯಾನಾ ಬೇಗ್, ನಶ್ರಾ ಸಂಧು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಮಂಜ್ಞುಮೆಲ್ ಬಾಯ್ಸ್’ ನಿರ್ದೇಶಕನ ಜೊತೆ ಕೈಜೋಡಿಸಲಿರುವ ಮೋಹನ್​ಲಾಲ್ – Kannada News | Mohan lal to act in Manjummel Boys movie director’s next movie

ಮಂಜ್ಞುಮೆಲ್ ಬಾಯ್ಸ್’ (manjummel boys) ಮಲಯಾಳಂ ಚಿತ್ರರಂಗದ ಬ್ಲಾಕ್ ಬಸ್ಟರ್ ಸಿನಿಮಾಗಳಲ್ಲಿ ಒಂದು. 2024 ರಲ್ಲಿ ಬಿಡುಗಡೆ ಆಗಿದ್ದ ಈ ಸಿನಿಮಾ, ಬಾಕ್ಸ್ ಆಫೀಸ್​ನಲ್ಲಿ ದೊಡ್ಡ ಹಿಟ್ ಆಗುವ ಜೊತೆಗೆ ವಿಮರ್ಶಕರಿಂದಲೂ ಮೆಚ್ಚುಗೆ ಗಳಿಸಿಕೊಂಡಿತ್ತು. ಆ ಸಿನಿಮಾವನ್ನು ಚಿದಂಬರಂ ನಿರ್ದೇಶನ ಮಾಡಿದ್ದರು. ‘ಮಂಜ್ಞುಮೆಲ್ ಬಾಯ್ಸ್’ ಸಿನಿಮಾ ಬಳಿಕ ಮತ್ತೊಂದು ಸಿನಿಮಾವನ್ನು ಚಿದಂಬರಂ ನಿರ್ದೇಶಿಸಿದರಾದರೂ ಅದು ಯಶಸ್ವಿ ಆಗಲಿಲ್ಲ. ಇದೀಗ ಈ ನಿರ್ದೇಶನ, ಮಲಯಾಳಂನ ಸ್ಟಾರ್ ನಟ ಮೋಹನ್​​ಲಾಲ್ ಜೊತೆಗೆ ಕೈ ಜೋಡಿಸಿದ್ದಾರೆ ಎನ್ನಲಾಗುತ್ತಿದೆ.

ಮೋಹನ್​​ಲಾನ್ ನಟಿಸಿರುವ ‘ದೃಶ್ಯಂ 3’ ಸಿನಿಮಾ ಕೆಲವೇ ದಿನಗಳ ಹಿಂದೆ ಬಿಡುಗಡೆ ಆಗಿದೆ. ಸಿನಿಮಾ ನಿರೀಕ್ಷತ ಮಟ್ಟದಲ್ಲಿ ಯಶಸ್ಸು ಗಳಿಸಿಲ್ಲ. ಅದರ ಹಿಂದೆ ಬಿಡುಗಡೆ ಆಗಿದ್ದ ಮೋಹನ್​​ಲಾಲ್ ನಟನೆಯ ‘ಪೇಟ್ರಿಯಾಟ್’ ಸಿನಿಮಾ, ಬಹುತಾರಾಗಣ ಇದ್ದ ಹೊರತಾಗಿಯೂ ಫ್ಲಾಪ್ ಎನಿಸಿಕೊಂಡಿದೆ. ಇದೀಗ ಮೋಹನ್​​ಲಾಲ್ ಅವರು ತಮ್ಮ ಮುಂದಿನ ಸಿನಿಮಾಕ್ಕಾಗಿ ಚಿದಂಬರಂ ಅವರ ಜೊತೆ ಸೇರಿದ್ದಾರೆ ಎನ್ನಲಾಗುತ್ತಿದೆ. ಚಿದಂಬರಂ ಅವರ ತಂದೆಯೇ ಈ ಸುದ್ದಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.

ಆದರೆ ಈ ಸುದ್ದಿಯನ್ನು ನಿರ್ದೇಶಕ ಚಿದಂಬರಂ ತಳ್ಳಿ ಹಾಕಿದ್ದಾರೆ. ನಿರ್ದೇಶಕರು ಹೇಳುವಂತೆ, ಅವರ ತಂದೆ ಬಹುಶಃ ಯಾವುದೋ ವದಂತಿಯನ್ನು ಕೇಳಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರಬಹುದು. ತಾವು ಮೋಹನ್‌ಲಾಲ್ ಅವರನ್ನು ಆಕಸ್ಮಿಕವಾಗಿ ಭೇಟಿಯಾಗಿದ್ದರೂ, ಅವರೊಂದಿಗೆ ಯಾವುದೇ ಸಿನಿಮಾದ ಬಗ್ಗೆ ಇಲ್ಲಿಯವರೆಗೆ ಮಾತುಕತೆ ನಡೆಸಿಲ್ಲ ಎಂದು ಅವರು ತಿಳಿಸಿದ್ದಾರೆ. ಒಂದು ವೇಳೆ ಮೋಹನ್‌ಲಾಲ್ ಅವರೊಂದಿಗೆ ಕೆಲಸ ಮಾಡುವ ಅವಕಾಶ ಸಿಕ್ಕರೆ, ಅದು ಮೋಹನ್‌ಲಾಲ್ ಅವರ ಸಿನಿಮಾಗಳಲ್ಲಿ ಪ್ರೇಕ್ಷಕರು ನಿರೀಕ್ಷಿಸುವಂತಹ ಎಲ್ಲಾ ಅಂಶಗಳನ್ನು ಒಳಗೊಂಡ ಒಂದು ಸಂಪೂರ್ಣ ಮನರಂಜನಾ ಚಿತ್ರವಾಗಿರುತ್ತದೆ ಎಂದು ‘ಮಂಜುಮ್ಮಲ್ ಬಾಯ್ಸ್’ ಖ್ಯಾತಿಯ ನಿರ್ದೇಶಕರು ಹೇಳಿದ್ದಾರೆ.

ಇದನ್ನೂ ಓದಿ:‘ಬಾಯ್ಸ್ ನೆವರ್ ಕಾಂಪ್ರಮೈಸ್’ ಸಿನಿಮಾದ ಟೀಸರ್ ಬಿಡುಗಡೆ; ಸಿಕ್ತು ಕಥೆಯ ಸುಳಿವು

ನಿರ್ದೇಶಕರು ತಮ್ಮ ಮುಂದಿನ ಸಿನಿಮಾ ‘ಬಾಲನ್: ದಿ ಬಾಯ್’ ಸಿನಿಮಾ ಮುಗಿಸಿದ್ದು ಕೆಲವೇ ದಿನಗಳಲ್ಲಿ ಸಿನಿಮಾ ಬಿಡುಗಡೆ ಆಗಲಿದೆ. ಇದೊಂದು ಭಾವನಾತ್ಮಕ ಥ್ರಿಲ್ಲರ್ ಕತೆಯನ್ನು ಒಳಗೊಂಡಿರುವ ಸಿನಿಮಾ ಆಗಿದೆ. ಕಷ್ಟದ ಬಾಲ್ಯ ಮತ್ತು ತಾಯಿಯ ಕಣ್ಮರೆಯ ನಂತರ ತನ್ನ ತಾಯಿಯನ್ನು ಹುಡುಕುತ್ತಿರುವ ಹದಿಹರೆಯದ ಹುಡುಗನ ಸುತ್ತ ಸುತ್ತುವ ಕತೆ ಇದಾಗಿದೆ. ಅವನು ತನ್ನ ಹಿಂದಿನ ಜೀವನದ ಸತ್ಯವನ್ನು ಹುಡುಕಲು ಪ್ರಯತ್ನಿಸುತ್ತಾನೆ. ಈ ಚಿತ್ರ ಜೂನ್ 19, 2026 ರಂದು ಬಿಡುಗಡೆಯಾಗಲಿದೆ. ಅದರ ಬಳಿಕ ಹಿಂದಿ ಸಿನಿಮಾ ಒಂದನ್ನು ಸಹ ಚಿದಂಬರಂ ನಿರ್ದೇಶಿಸಲಿದ್ದಾರೆ.

ಮೋಹನ್​​ಲಾಲ್ ಅವರು ಪ್ರಸ್ತುತ ತರುಣ್ ಮೂರ್ತಿ ನಿರ್ದೇಶನದ ‘ಅತಿಮನೋಹರಂ’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಮೀರಾ ಜಾಸ್ಮಿನ್ ನಾಯಕಿಯಾಗಿ ನಟಿಸುತ್ತಿದ್ದು, ಈ ವರ್ಷದ ಆಯುಧ ಪೂಜೆಯ ಸಮಯದಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಮುಂದಿನ ದಿನಗಳಲ್ಲಿ, ನಟ ವಿಷ್ಣು ಮೋಹನ್, ಪ್ರಿಯದರ್ಶನ್ ಮತ್ತು ದಿಲೀಪ್ ಪೋಥನ್ ಅವರ ನಿರ್ದೇಶನದ ಚಿತ್ರಗಳಲ್ಲಿ ನಟಿಸಲಿದ್ದಾರೆ. ಲಾಲೆಟ್ಟನ್ ಅವರು ಪೃಥ್ವಿರಾಜ್ ಸುಕುಮಾರನ್ ಅವರ ‘ಖಲೀಫಾ’, ರಜನಿಕಾಂತ್ ಅವರ ‘ಜೈಲರ್ 2’ ಮತ್ತು ತಮ್ಮ ಮಗಳು ವಿಸ್ಮಯ ಮೋಹನ್‌ಲಾಲ್ ಅವರ ಮೊದಲ ಚಿತ್ರ ‘ತುಡಕ್ಕಂ’ನಲ್ಲಿ ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಓಮನ್ ಕರಾವಳಿಯಲ್ಲಿ ಮುಳುಗುತ್ತಿದ್ದ ಹಡಗಿನಲ್ಲಿದ್ದ 14 ಭಾರತೀಯರನ್ನು ರಕ್ಷಿಸಿದ ಅಮೆರಿಕ ನೌಕಾಪಡೆ – Kannada News | US Navy, Indian Navy Rescue 14 Indians from Sinking Ship off Oman Coast

ಓಮನ್, ಜೂನ್ 14: ಮಧ್ಯಪ್ರಾಚ್ಯದಲ್ಲಿ ಪ್ರಾದೇಶಿಕ ಮತ್ತು ರಾಜತಾಂತ್ರಿಕ ಉದ್ವಿಗ್ನತೆಗಳಿದ್ದಾಗ್ಯೂ, ಓಮನ್ ಕರಾವಳಿಯಲ್ಲಿ ಮುಳುಗುತ್ತಿದ್ದ ಹಡಗಿನಲ್ಲಿದ್ದ 14 ಭಾರತೀಯರನ್ನು ಅಮೆರಿಕ ಹಾಗೂ ಭಾರತೀಯ ನೌಕಾಪಡೆ ರಕ್ಷಿಸಿದೆ. ಸಂಕಷ್ಟಕ್ಕೆ ಸಿಲುಕಿದ ಜೀವಗಳನ್ನು ರಕ್ಷಿಸುವ ವಿಷಯದಲ್ಲಿ ನೌಕಾಪಡೆಗಳು ತೋರಿರುವ ಅದ್ಭುತ ಮಾನವೀಯತೆ ಹಾಗೂ ಸಮನ್ವಯತೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೊಸ ಭರವಸೆಯನ್ನು ಮೂಡಿಸಿದೆ.  ಓಮನ್ ಕರಾವಳಿಯ ಅರಬ್ಬಿ ಸಮುದ್ರದಲ್ಲಿ ಮುಳುಗುವ ಹಂತ ತಲುಪಿದ್ದ ವಾಣಿಜ್ಯ ‘ಧೋ’ (Dhow) ಹಡಗಿನಲ್ಲಿದ್ದ 14 ಭಾರತೀಯ ಪ್ರಜೆಗಳನ್ನು ಅಮೆರಿಕ ಮತ್ತು ಭಾರತೀಯ ನೌಕಾಪಡೆಗಳು ಜಂಟಿ ಕಾರ್ಯಾಚರಣೆಯ ಮೂಲಕ ಅತ್ಯಂತ ಯಶಸ್ವಿಯಾಗಿ ರಕ್ಷಿಸಿವೆ.

ಜೂನ್ 14ರ ಭಾನುವಾರದಂದು ಒಮಾನ್‌ನ ರಾಸ್ ಅಲ್ ಹಡ್‌ನಿಂದ ಪೂರ್ವಕ್ಕೆ ಸುಮಾರು 80 ನಾಟಿಕಲ್ ಮೈಲುಗಳಷ್ಟು ದೂರದಲ್ಲಿ 14 ಭಾರತೀಯ ನಾವಿಕರಿದ್ದ ಹಡಗೊಂದು ತಾಂತ್ರಿಕ ದೋಷದಿಂದಾಗಿ ಮುಳುಗಲಾರಂಭಿಸಿತು. ಹಡಗು ಅಪಾಯದಲ್ಲಿದೆ ಎಂಬ ಮಾಹಿತಿ ಸಿಗುತ್ತಿದ್ದಂತೆಯೇ ಕಾರ್ಯಾಚರಣೆಗೆ ಇಳಿದ ಅಮೆರಿಕ ನೌಕಾಪಡೆಯು ತೀರದ ಅಧಿಕಾರಿಗಳಿಗೆ ಹಾಗೂ ಭಾರತೀಯ ನೌಕಾಪಡೆಗೆ ಸಂದೇಶ ರವಾನಿಸಿತು.

ಅಲ್ಲದೆ, ತಕ್ಷಣವೇ ಯುಎಸ್ ನೇವಿಯ ಪಿ-8 (P-8) ಕಡಲ ಗಸ್ತು ವಿಮಾನವು ಆಕಾಶ ಮಾರ್ಗದ ಮೂಲಕ ಘಟನಾ ಸ್ಥಳಕ್ಕೆ ತಲುಪಿ, ಮುಳುಗುತ್ತಿದ್ದ ಹಡಗಿನ ಬಳಿ ಜೀವಕೋಶದ ದೋಣಿಯನ್ನು (Life Raft) ಯಶಸ್ವಿಯಾಗಿ ಇಳಿಸಿತು. ಸಿಬ್ಬಂದಿ ಸುರಕ್ಷಿತವಾಗಿ ಅದಕ್ಕೆ ಸ್ಥಳಾಂತರಗೊಳ್ಳುವಂತೆ ನೋಡಿಕೊಳ್ಳುವ ಮೂಲಕ ಮೊದಲ ಹಂತದ ಯಶಸ್ಸು ಸಾಧಿಸಲಾಯಿತು.

ಅಮೆರಿಕ ನೌಕಾಪಡೆಯು ಕೇವಲ ವಿಮಾನದ ಮೂಲಕ ಸಹಾಯ ಮಾಡಿದ್ದಲ್ಲದೆ, ಅದೇ ಮಾರ್ಗದಲ್ಲಿ ಸಾಗುತ್ತಿದ್ದ ಸೇಂಟ್ ಕಿಟ್ಸ್ ಮತ್ತು ನೆವಿಸ್ ದೇಶದ ಧ್ವಜ ಹೊತ್ತ ‘ಎಂವಿ ಜಬಲ್ ಅಲಿ 9’ ಎಂಬ ಬೃಹತ್ ವ್ಯಾಪಾರಿ ಹಡಗಿನ ನೆರವನ್ನು ಕೋರಿತು. ಒಮಾನ್‌ನ ಸೋಹಾರ್‌ನಿಂದ ಮುಂಬೈಗೆ ಪ್ರಯಾಣಿಸುತ್ತಿದ್ದ ಈ ಹಡಗು ಈಗಾಗಲೇ ಸಮೀಪದಲ್ಲೇ ಇದ್ದುದರಿಂದ, ಯುಎಸ್ ನೇವಿ ಮತ್ತು ಭಾರತೀಯ ನೌಕಾಪಡೆಯ ಮಾರ್ಗದರ್ಶನದಲ್ಲಿ ತ್ವರಿತವಾಗಿ ತೊಂದರೆಗೀಡಾದ ಭಾರತೀಯರ ಬಳಿಗೆ ಸಾಗಿತು. ಎಲ್ಲಾ 14 ಭಾರತೀಯ ನಾವಿಕರನ್ನು ಸುರಕ್ಷಿತವಾಗಿ ಹಡಗಿಗೆ ಹತ್ತಿಸಿಕೊಳ್ಳುವಲ್ಲಿ ರಕ್ಷಣಾ ಪಡೆಗಳು ಯಶಸ್ವಿಯಾಗಿವೆ.

ಮತ್ತಷ್ಟು ಓದಿ: ಓಮನ್ ಕರಾವಳಿಯಲ್ಲಿ 24 ಭಾರತೀಯ ನಾವಿಕರಿದ್ದ ಹಡಗಿನಲ್ಲಿ ಬೆಂಕಿ ಅವಘಡ

ವಿಶ್ವದ ಅತ್ಯಂತ ಸೂಕ್ಷ್ಮ ಹಾಗೂ ಆಯಕಟ್ಟಿನ ಕಡಲ ಜಲಮಾರ್ಗವಾಗಿರುವ ಹಾರ್ಮುಜ್ ಜಲಸಂಧಿಯ ಸುತ್ತಮುತ್ತ ಇತ್ತೀಚಿನ ತಿಂಗಳುಗಳಲ್ಲಿ ರಾಜತಾಂತ್ರಿಕ ಉದ್ವಿಗ್ನತೆ ಹೆಚ್ಚಾಗಿದೆ. ಅಮೆರಿಕ ಮತ್ತು ಇರಾನ್ ನಡುವೆ ಶಾಂತಿ ಮಾತುಕತೆಗಳ ಪ್ರಗತಿ ನಡೆಯುತ್ತಿದ್ದರೂ, ಮಿಲಿಟರಿ ಚಟುವಟಿಕೆಗಳಿಂದಾಗಿ ಜಲಮಾರ್ಗದಲ್ಲಿ ಹಡಗುಗಳ ಸಂಚಾರಕ್ಕೆ ಕಠಿಣ ಸವಾಲುಗಳು ಎದುರಾಗಿದ್ದವು. ಇಂತಹ ದುರ್ಬಲ ಭದ್ರತಾ ವಾತಾವರಣದಲ್ಲೂ, ಭೌಗೋಳಿಕ ರಾಜಕೀಯವನ್ನು ಬದಿಗಿಟ್ಟು ಭಾರತೀಯ ನಾವಿಕರ ಜೀವ ರಕ್ಷಿಸಲು ಅಮೆರಿಕ, ಒಮಾನ್ ಮತ್ತು ಭಾರತದ ನೌಕಾ ಪಡೆಗಳು ತೋರಿದ ಜಾಗರೂಕತೆ ಅತ್ಯಂತ ಶ್ಲಾಘನೀಯವಾಗಿದೆ.

ಕಡಲ ಹೆದ್ದಾರಿಗಳಲ್ಲಿ ಸುರಕ್ಷತೆಯು ಇಡೀ ಜಗತ್ತಿಗೆ ಎಷ್ಟು ಮುಖ್ಯ ಎಂಬುದನ್ನು ಈ ಘಟನೆ ನೆನಪಿಸಿದೆ. ನೌಕಾಪಡೆಗಳ ಕಟ್ಟುನಿಟ್ಟಿನ ಕಣ್ಗಾವಲು ಮತ್ತು ಅತ್ಯಾಧುನಿಕ ತಂತ್ರಜ್ಞಾನದ ಸಕಾಲಿಕ ಬಳಕೆಯಿಂದಾಗಿ 14 ಭಾರತೀಯ ಕುಟುಂಬಗಳ ಭವಿಷ್ಯದ ದೀಪಗಳು ಸುರಕ್ಷಿತವಾಗಿ ತಾಯ್ನಾಡಿಗೆ ಮರಳುತ್ತಿರುವುದು ಇಡೀ ದೇಶಕ್ಕೆ ಸಂತಸ ತಂದಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಕಲಬುರಗಿಯಲ್ಲಿ ಮತ್ತೊಂದು ಸರ್ಕಾರಿ ಶಾಲೆಯ ಮೇಲ್ಛಾವಣಿ ಕುಸಿತ: ಭಾನುವಾರ ಹಿನ್ನೆಲೆ ತಪ್ಪಿದ ಅನಾಹುತ – Kannada News | Another Government School Roof Collapse: Sunday Prevented a Major Disaster

ಶಾಲೆಯ ಮೇಲ್ಛಾವಣಿ ಕುಸಿತImage Credit source: tv9 kannada

ಕಲಬುರಗಿ, ಜೂನ್​​ 14: ಎರಡು ದಿನದ ಹಿಂದಷ್ಟೇ ನಗರದ ಪಿಯು ಕಾಲೇಜು ಮೇಲ್ಛಾವಣಿ ಕುಸಿದು (roof collapse) ನಾಲ್ವರು ವಿದ್ಯಾರ್ಥಿನಿಯರು ಗಾಯಗೊಂಡಿದ್ದರು. ಆ ಘಟನೆ ಮಾಸುವ ಮುನ್ನವೇ ಇದೀಗ ಮತ್ತೊಂದು ಆಘಾತಕಾರಿ ಘಟನೆ ನಡೆದಿದೆ. ಆಳಂದ ತಾಲೂಕಿನ ಸಂಗೋಳಗಿ(ಸಿ) ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯ ಮೇಲ್ಛಾವಣಿ ಕುಸಿದಿದೆ. ಆದರೆ ಭಾನುವಾರ ಹಿನ್ನೆಲೆ ಭಾರೀ ಅನಾಹುತವೊಂದು ತಪ್ಪಿದೆ.

ಮುಖ್ಯಾಂಶಗಳು

  • ಮತ್ತೊಂದು ಸರ್ಕಾರಿ ಶಾಲೆಯ ಮೇಲ್ಛಾವಣಿ ಕುಸಿತ
  • ಒಂದು ಘಟನೆ ಮಾಸುವ ಮುನ್ನವೇ ಮತ್ತೊಂದು ಅನಾಹುತ
  • ಭಾನುವಾರ ಶಾಲೆಗೆ ರಜೆ ಹಿನ್ನೆಲೆ ತಪ್ಪಿದ ಅನಾಹುತ

ಏಕಾಏಕಿ ಕುಸಿದ ಕಾಲೇಜು ಮೇಲ್ಛಾವಣಿಯ ಪ್ಲಾಸ್ಟರ್ 

ಇನ್ನು ಎರಡು ದಿನದ ಹಿಂದಷ್ಟೇ ನಗರದಲ್ಲಿ ಪಿಯು ಕಾಲೇಜು ಮೇಲ್ಛಾವಣಿ ಒಂದು ಕುಸಿದಿತ್ತು. ಲೆಕ್ಷರರ್ ಪಾಠ ಮಾಡುತ್ತಿಗಾಗಲೇ ಮೇಲ್ಛಾವಣಿಯ ಪ್ಲಾಸ್ಟರ್​ ಏಕಾಏಕಿ ಕುಸಿದು ಬಿದ್ದಿತ್ತು. ಸಣ್ಣಪುಟ್ಟ ಗಾಯಗಳೊಂದಿಗೆ ವಿದ್ಯಾರ್ಥಿನಿಯರು ಅಪಾಯದಿಂದ ಪಾರಾಗಿದ್ದು, ಭಾರೀ ದುರಂತವೊಂದು ಕೂದಲೆಳೆ ಅಂತರದಲ್ಲಿ ಜಸ್ಟ್​ ಮಿಸ್​ ಆಗಿತ್ತು.

ವಿದ್ಯಾರ್ಥಿನಿಯರ ಮೇಲೆ ಬಿದ್ದ ಮೇಲ್ಛಾವಣಿ ಪ್ಲಾಸ್ಟರ್

ಕಲಬುರಗಿ ನಗರದ ಸರ್ಕಾರಿ ಕಾಲೇಜಿನಲ್ಲಿ ಈ ಅನಾಹುತ ನಡೆದಿತ್ತು. ಬೆಳಗ್ಗೆ ಎಂದಿನಂತೆ ಪಿಯುಸಿ ಪ್ರಥಮ ವರ್ಷ ವಾಣಿಜ್ಯ ವಿಭಾಗದ ಸುಮಾರು 80 ವಿದ್ಯಾರ್ಥಿನಿಯರು ತರಗತಿಗೆ ಬಂದಿದ್ದರು. ಪ್ರಾದ್ಯಾಪಕರೂ ಕ್ಲಾಸ್​ಗೆ ಎಂಟ್ರಿ ಕೊಟ್ಟು ಪಾಠ ಶುರುಮಾಡಿದ್ದರು. ಆದರೆ ಕೆಲವೇ ಕೆಲವು ಕ್ಷಣಗಳಲ್ಲಿ ಮೇಲ್ಛಾವಣಿ ಪ್ಲಾಸ್ಟರ್​ ದೊಪ್ಪೆಂದು ವಿದ್ಯಾರ್ಥಿನಿಯರ ಮೇಲೆ ಬಿದ್ದಿತ್ತು. ವಿದ್ಯಾರ್ಥಿನಿಯರಾದ ಪೂಜಾ, ಶೀತಲ್, ಸೃಷ್ಟಿ, ಸ್ನೇಹಾ ಹಾಗೂ ದಿವ್ಯಾ ಗಾಯಗೊಂಡಿದ್ದರು. ಇನ್ನು ಗಾಯಾಳುಗಳ ಆರೋಗ್ಯ ವಿಚಾರಿಸಿದ ಶಾಸಕ ಅಲ್ಲಮಪ್ರಭು ಪಾಟೀಲ, ಕೆಲಸ ನಿರ್ವಹಿಸಿದ ಏಜೆನ್ಸಿ ವಿರುದ್ಧ ಸರ್ಕಾರಕ್ಕೆ ಪತ್ರ ಬರೆಯುತ್ತೇನೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಪಾಠ ಕೇಳುವಾಗಲೇ ವಿದ್ಯಾರ್ಥಿನಿಯರ ಮೇಲೆ ಕುಸಿದ ಕಾಲೇಜು ಕಟ್ಟಡದ ಮೇಲ್ಛಾವಣಿಯ ಪ್ಲಾಸ್ಟರ್: ತಪ್ಪಿದ ಭಾರಿ ಅನಾಹುತ

ಅಂದಾಗೆ ಈ ಕಟ್ಟಡ ಕಟ್ಟಿ ಕೇವಲ 8 ವರ್ಷವಷ್ಟೇ ಆಗಿದೆ. ಕೆಲ ದಿನಗಳ ಹಿಂದೆಯೂ ಇದೇ ರೀತಿ ಮೇಲ್ಛಾವಣಿಯ ಪ್ಲಾಸ್ಟರ್ ಕುಸಿದು ಬಿದ್ದಿತ್ತು. ಕಾಲೇಜ್‌ನ ಬಹುತೇಕ ಕೊಠಡಿಗಳು ಹೀಗೆ ಬೀಳುವ ಹಂತ ತಲುಪಿದೆ. ವಿದ್ಯಾರ್ಥಿಗಳು ಜೀವ ಕೈಯಲ್ಲಿಡಿದು ಪಾಠ ಕೇಳುವ ಸ್ಥಿತಿ ಎದುರಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link