Video: ಮೊದಲ ಬಾರಿಗೆ ಕ್ಯಾಬ್ ಬುಕ್ ಮಾಡಿದ ತಾಯಿ, ಗೆದ್ದಂತೆ ಸಂಭ್ರಮಿಸಿದ ಮಗಳು – Kannada News | Mother learns to book a cab under daughter’s guidance

ಹೆತ್ತವರು (parents) ತಮ್ಮ ಮಕ್ಕಳಿಗೆ ಜೀವನ ಅನುಭವಗಳನ್ನು ಹೇಳಿ ಕೊಡುತ್ತಾರೆ. ಮಕ್ಕಳ ಯಶಸ್ಸು, ಸಾಧನೆಯನ್ನು ಕಂಡು ಖುಷಿ ಪಡುತ್ತಾರೆ. ಆದರೆ ಈ ಮಕ್ಕಳು ಕೂಡ ತಮ್ಮ ತಾಯಿ ತಂದೆಗೆ ಸ್ಮಾರ್ಟ್ ಫೋನ್ ಹಾಗೂ ಕಂಪ್ಯೂಟರ್ ಬಳಕೆ ಹೇಗೆ ಮಾಡುವುದೆಂದು ಹೇಳಿ ಕೊಡುವುದನ್ನು ನೋಡಬಹುದು. ಇದೀಗ ಇದಕ್ಕೆ ಸಾಕ್ಷಿಯಾಗಿದೆ ಈ ದೃಶ್ಯ. ಮಹಿಳೆಯೊಬ್ಬಳು ತನ್ನ ಮಗಳ ಸಹಾಯದಿಂದ ಕ್ಯಾಬ್ ಬುಕ್ ಮಾಡುವುದು ಹೇಗೆಂದು ಕಲಿಯುತ್ತಿದ್ದಾಳೆ. ಈ ವಿಡಿಯೋ ಸದ್ಯ ವೈರಲ್ ಆಗಿದ್ದು , ಈ ದೃಶ್ಯ ನೆಟ್ಟಿಗರ ಹೃದಯ ಗೆದ್ದಿದೆ.

ಮಾಲಿನಿವ್ಲಾಗ್ಸ್ (malini_ki_duniya) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋಗೆ ಇತ್ತೀಚೆಗೆ ಅಮ್ಮ ತನಗಾಗಿ ಕ್ಯಾಬ್ ಬುಕ್ ಮಾಡುವುದು ಹೇಗೆಂದು ಕಲಿತರು. ಅಂದಿನಿಂದ ಅವರನ್ನು ತಡೆಯುವವರು ಯಾರಿಲ್ಲ ಎಂಬ ಶೀರ್ಷಿಕೆ ನೀಡಲಾಗಿದೆ. ಈ ವಿಡಿಯೋದಲ್ಲಿ ಮಹಿಳೆಯೊಬ್ಬಳು ಕ್ಯಾಬ್ ಬುಕಿಂಗ್ ಅಪ್ಲಿಕೇಶನ್ ನ್ಯಾವಿಗೇಟ್ ಮಾಡಲು ಪ್ರಯತ್ನಿಸುತ್ತಿದ್ದಾಳೆ. ಮಗಳು ಪ್ರತಿ ಹಂತದಲ್ಲೂ ತನ್ನ ತಾಯಿಗೆ ಮಾರ್ಗದರ್ಶನ ನೀಡುತ್ತಿರುವುದನ್ನು ನೀವು ನೋಡಬಹುದು.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ಮಗಳು ಕೆಲಸಕ್ಕೆ ಸೇರಿದ ಒಂದೇ ವಾರಕ್ಕೆ ಸರ್ಪ್ರೈಸ್ ಕೊಟ್ಟ ತಂದೆ, ಇದೇ ನೋಡಿ ತಂದೆ ಪ್ರೀತಿ

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಎಂತಹ ಅದ್ಭುತ ಕ್ಷಣ. ನನ್ನ ತಾಯಿ ಈಗಷ್ಟೇ ಕ್ಯೂಆರ್ ಕೋಡ್‌ಗಳನ್ನು ಬಳಸಿ ಹೇಗೆ ಪಾವತಿಸಬೇಕೆಂದು ಕಲಿತರು ಎಂದಿದ್ದಾರೆ. ಇನ್ನೊಬ್ಬರು, ನಿಮ್ಮ ಬಗ್ಗೆ ಹೆಮ್ಮೆ ಇದೆ ಎಂದು ಹೇಳಿದ್ದಾರೆ. ಮತ್ತೊಬ್ಬರು, ಹೊಸದ್ದನ್ನು ಕಲಿಯುವುದರಲ್ಲಿ ಇರುವ ಖುಷಿಯೇ ಬೇರೆ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *