ಭಾರತಕ್ಕೆ ತೈಲ ಮತ್ತು ಅನಿಲ ಪೂರೈಕೆ ಹೆಚ್ಚಿಸಲು ಸಿದ್ಧ: ರಷ್ಯಾ ಅಭಯ
ನವದೆಹಲಿ, ಏಪ್ರಿಲ್ 3: ಪಶ್ಚಿಮ ಏಷ್ಯಾ ಬಿಕ್ಕಟ್ಟಿನಿಂದಾಗಿ ಗಲ್ಫ್ ರಾಷ್ಟ್ರಗಳಿಂದ ಭಾರತಕ್ಕೆ ತೈಲ ಮತ್ತು ಅನಿಲ ಪೂರೈಕೆ ಸ್ಥಗಿತಗೊಂಡಿದೆ. ಇದರಿಂದ ಭಾರತದ ಇಂಧನ ಕ್ಷೇತ್ರ ಒತ್ತಡಕ್ಕೆ ಸಿಲುಕಿದೆ. ರಷ್ಯಾದಿಂದ ಒಂದಷ್ಟು ತೈಲ ಪೂರೈಕೆಯಾಗುತ್ತಿರುವುದು ಸಮಾಧಾನದ ಸಂಗತಿ. ಆದರೆ, ಭಾರತದ ತೈಲ ಮತ್ತು ಅನಿಲದ ಅಗತ್ಯತೆ ಅಗಾಧವಾಗಿದೆ. ಹೀಗಾಗಿ, ಹೆಚ್ಚಿನ ಪ್ರಮಾಣದ ತೈಲ ಮತ್ತು ಅನಿಲವು ಭಾರತಕ್ಕೆ ನಿರಂತರವಾಗಿ ಸರಬರಾಜಾಗುವುದು ಅಗತ್ಯ. ಇದೇ ವೇಳೆ, ಭಾರತದ ನೆರವಿಗೆ ರಷ್ಯಾ ಮುಂದಾಗಿದೆ. ಭಾರತಕ್ಕೆ ತೈಲ ಮತ್ತು ಎಲ್ಎನ್ಜಿ (LNG) ಪೂರೈಕೆ…