Category Archives: Blog

Your blog category

ಅದೇನ್ ಧೈರ್ಯ ಗುರು! ಜಡ್ಜ್​​​ ಸಹಿ ನಕಲು ಮಾಡಿ ಕೋಟ್ಯಂತರ ರೂ ಜಮೀನು ಗುಳುಂ – Kannada News | Anekal Land Fraud: Judge Signature Forged to Grab Property

ಆನೇಕಲ್​, ಡಿಸೆಂಬರ್​ 22: ನಕಲಿ ದಾಖಲೆ ಸೃಷ್ಟಿಸಿ ಜಮೀನು (land) ಕಬಳಿಕೆ ಮಾಡುವವರನ್ನು ನೋಡಿದ್ದೇವೆ. ಆದರೆ ಇಲ್ಲಿ ಒಂದು ಹೆಜ್ಜೆ ಮುಂದೆ ಹೋದ ಆಸಾಮಿಗಳು ನ್ಯಾಯಾಧೀಶರ ಸಹಿಯನ್ನೇ ನಕಲು (Forged) ಮಾಡಿ ವಂಚನೆ ಮಾಡಿದ್ದಾರೆ. ಪತಿಯನ್ನ ಕಳೆದುಕೊಂಡಿದ್ದ ಮಹಿಳೆಯ ಅಮಾಯಕತನವನ್ನೇ ದುರಪಯೋಗ ಪಡಿಸಿಕೊಂಡ ಭೂಗಳ್ಳರು ಕೋಟ್ಯಂತರ ರೂ ಬೆಲೆಬಾಳುವ ಜಾಗವನ್ನ ಗುಳುಂ ಮಾಡಿದ್ದಾರೆ ಎನ್ನುವ ಗಂಭೀರ ಆರೋಪ ಕೇಳಿಬಂದಿದೆ.

ನಕಲಿ ಸಹಿ ಸೃಷ್ಟಿಸಿ ಜಾಗ ಕಬಳಿಕೆ 

ಸಿಲಿಕಾನ್ ಸಿಟಿ ಬೆಂಗಳೂರು ನಗರ ಬೆಳೆಯುತ್ತ ಹೋದಂತೆ ಒಂದೊಂದು ಅಡಿಗೂ ಕೂಡ ಚಿನ್ನದ ಬೆಲೆ ಬಂದಿದೆ‌. ಇದನ್ನೇ ಬಂಡವಾಳ ಮಾಡಿಕೊಂಡ ಭೂಗಳ್ಳರು ಜಮೀನು ಕಬಳಿಸುವುದಕ್ಕೆ ಮುಂದಾಗ್ತಾರೆ. ಅದೇ ರೀತಿ ಆನೇಕಲ್ ತಾಲ್ಲೂಕಿನ ಚಿಂತಲಮಡಿವಾಳ ಗ್ರಾಮದ ಸರ್ವೆ ನಂಬರ್ 43/2 ರ 28.8 ಗುಂಟೆ ಜಮೀನಿನ ಪೈಕಿ 14 ಗುಂಟೆ ಜಾಗವನ್ನ ನಕಲಿ ಸಹಿ ಮತ್ತು ನಕಲಿ ದಾಖಲೆಗಳನ್ನ ಸೃಷ್ಟಿಸಿ ಕಬಳಿಕೆ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: 150 ಕೋಟಿ ರೂ ಮೌಲ್ಯದ ಸರ್ಕಾರಿ ಭೂಮಿ ದಾಖಲೆ ಫೋರ್ಜರಿ: ಅಧಿಕಾರಿಗಳ ವಿರುದ್ಧ FIR ದಾಖಲಾದ್ರೂ ಕ್ರಮವಿಲ್ಲ

ಮೃತ ವೆಂಕಟಸ್ವಾಮಿ ಎಂಬುವವವರ ಹೆಸರಿನಲ್ಲಿದ್ದ ಜಮೀನನ್ನ ಪತ್ನಿ ಜ್ಯೋತಮ್ಮರ ಹೆಸರಿಗೆ ಮಾಡಿಸಿ ಕೊಡುತ್ತೇವೆಂದು ನಂಬಿಸಿದ ಸಂಬಂಧಿ ಮುನಿರಾಜರಾಘವ ಅಲಿಯಾಸ್​ ಮುರಾರಿ ಮುನೇಶ್ವರ್ ರಾವ್ ಅ್ಯಂಡ್​ ಗ್ಯಾಂಗ್ ವಂಚಿಸಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ನ್ಯಾಯಾಧೀಶರ 3 ಸೈನ್, ಜೊತೆಗೆ ಜಮೀನು ಮಾಲೀಕ ಜ್ಯೋತಮ್ಮ, ಆಕೆಯ ಮಕ್ಕಳ ಒಟ್ಟು 16 ಸೈನ್​ಗಳನ್ನ ನಕಲು ಮಾಡಿ ಕೋರ್ಟ್ ಡಿಕ್ರಿ ಬಳಸಿ ಅತ್ತಿಬೆಲೆಯಲ್ಲಿ ರಿಜಿಸ್ಟರ್ ಮಾಡಿ ತದನಂತರ ಜಮೀಮಿನಿನ ಖಾತೆ ಮಾಡಿಸಿಕೊಂಡಿದ್ದಾರೆ. ಬಳಿಕ ಪಡುಗೋಲಸ ಶಿವಪ್ರಸಾದ್ ಎಂಬಾತನಿಕೆ ಜಮೀನು ಮಾರಾಟ ಮಾಡಲಾಗಿದೆ. ಈ ವಿಚಾರ ಜ್ಯೋತಮ್ಮ ಕುಟುಂಬಕ್ಕೆ ತಿಳಿದ ಕೂಡಲೇ ಆನೇಕಲ್ ಪೊಲೀಸ್ ಠಾಣೆಯಲ್ಲಿ ಮುನಿರಾಜ್ ರಾಘವ, ಆಂಜಿನಪ್ಪ, ಅರುಣಾಕ್ಷಿ, ಪವಿತ್ರ, ಪೂಜಶ್ರೀ, ಸುಶ್ಮಿತ ಈ ಆರು ಜನರ ವಿರುದ್ದ ಪ್ರಕರಣ ದಾಖಲಿಸಿದ್ದಾರೆ.

ಇನ್ನು ಜ್ಯೋತಮ್ಮ ಸಂಬಂಧಿಯೇ ಆದ ಮುನಿರಾಜರಾಘವ ತಾನು ಮಂಗಳೂರಿನ ಇಸ್ಕಾನ್ ಟೆಂಪಲ್​ನಲ್ಲಿ ದೀಕ್ಷೆ ಪಡೆದಿದ್ದೇನೆ. ನಾನೊಬ್ಬ ದೇವ ಮಾನವ ಎಂದೆಲ್ಲಾ ಹೇಳಿ ನಿಮ್ಮ ಪತಿಯ ಹೆಸರಿನಲ್ಲಿರುವ  ಜಮೀನನ್ನ ನಿಮ್ಮ ಹೆಸರಿಗೆ ಮಾಡಿಕೊಡುತ್ತೇನೆಂದು ವಂಚಿಸಿದ್ದಾರೆ.

ಕಣ್ಣೀರು ಹಾಕಿ ಗೋಳಾಡಿದ ಮಹಿಳೆ

ಜಮೀನಿನಲ್ಲಿದ್ದ ಜ್ಯೋತಮ್ಮ ಪತಿ ವೆಂಕಟಸ್ವಾಮಿ ಸೇರಿದಂತೆ ಪೂರ್ವಿಕರ ಸಮಾಧಿಗಳನ್ನ ಜೆಸಿಬಿಗಳ ಮೂಲಕ ಧ್ವಂಸ ಮಾಡಲಾಗಿದೆ. ಜಮೀನು ಕಬಳಿಸಲು ನ್ಯಾಯಾಧೀಶರ ಸಹಿಯನ್ನೇ ನಕಲು ಮಾಡಿ ನ್ಯಾಯಾಂಗ ವಂಚನೆ ಎಸಗಲಾಗಿದೆ. ನಮ್ಮ ಜಮೀನು ನಮಗೆ ಕೊಡಿಸಿ, ಆ ಜಮೀನಿನಲ್ಲಿ ನನ್ನ ಪತಿಯ ಸಮಾಧಿ ಇದೆ ಎಂದು ಜ್ಯೋತಮ್ಮ ಕಣ್ಣೀರು ಹಾಕಿ ಗೋಳಾಡಿದ್ದಾರೆ. ವಂಚನೆ ಎಸಗಿದ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಅನ್ನಭಾಗ್ಯ ಅಕ್ಕಿ ಕಾಳಸಂತೆಯಲ್ಲಿ ಮಾರಾಟ: ಕಾಂಗ್ರೆಸ್ ಮುಖಂಡನ ವಿರುದ್ಧ ಪ್ರಕರಣ ದಾಖಲು

ಇನ್ನು ನಕಲಿ ದಾಖಲೆ ಸೃಷ್ಟಿಸಿ ಬೆಲೆ ಬಾಳುವ ಜಮೀನನ್ನ ಲಪಟಾಯಿಸುವ ಭೂಗಳ್ಳರು ಹೆಚ್ಚಾಗುತ್ತಿದ್ದಾರೆ. ಅದೇ ರೀತಿ ಆನೇಕಲ್ ತಾಲೂಕಿನಲ್ಲಿ ನ್ಯಾಯಾಧೀಶರ ಸಹಿಯನ್ನೇ ನಕಲು ಮಾಡಿ ವಂಚನೆ ಮಾಡಿರುವ ಗಂಭೀರ ಆರೋಪ ಕೇಳಿಬಂದಿದೆ‌. ಜಮೀನು ಕಳೆದುಕೊಂಡ ಕುಟುಂಬ ಕಣ್ಣೀರಿನಲ್ಲಿ ಕೈತೊಳೆಯುವಂತಾಗಿದ್ದು, ವಂಚನೆ ಎಸಗಿದ ಆರೋಪಿಗಳಿಗೆ ಕಠಿಣ ಶಿಕ್ಷೆಗೆ ಆಗ್ರಹಿಸಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಬೆಂಗಳೂರು ಟನಲ್ ರಸ್ತೆ ಟೆಂಡರ್ ಅದಾನಿ ಗ್ರೂಪ್ ಪಾಲು, ಧರ್ಮ ಸಂಕಟಕ್ಕೆ ಸಿಲುಕಿದ ಸಿದ್ದರಾಮಯ್ಯ ಸರ್ಕಾರ – Kannada News | Adani Group Emerges Lowest Bidder For Bengaluru Tunnel Road As Cost Gap And Policy Debate Intensify

ಬೆಂಗಳೂರು, (ಡಿಸೆಂಬರ್ 22): ಬೆಂಗಳೂರು ಟನಲ್ ಮಾರ್ಗದ (bengaluru tunnel road) ಟೆಂಡರ್ ಅದಾನಿ ಗ್ರೂಪ್​​ (Adani Group) ಪಾಲಾಗುವ ಸಾಧ್ಯತೆಗಳಿವೆ. ಕಾರಣ ಟೆಂಡರ್ ಸಲ್ಲಿಸಿರುವ ಕಂಪನಿಗಳ ಪೈಕಿ ಅದಾನಿ ಗ್ರೂಪ್ ಅತೀ ಕಡಿಮೆ ಬಿಡ್ ಮಾಡಿದೆ. ಬೆಂಗಳೂರು ಟನಲ್ ರಸ್ತೆ ಟೆಂಡರ್ ನಲ್ಲಿ ಅತೀ ಕಡಿಮೆ ಅಂದರೆ 22,267 ಕೋಟಿ ರೂಪಾಯಿಗೆ ಬಿಡ್ ಮಾಡಿದೆ. (ಗ್ರೇಟರ್ ಬೆಂಗಳೂರು ಅಥಾರಿಟಿ(GBA) 17,698 ಕೋಟಿಗೆ ಬಿಡ್ ಸೀಮಿತ ಮಾಡಿತ್ತು. ಆದ್ರೆ, ಜಿಬಿಎ ಕೋಟ್ ಮಾಡಿದ್ದಕ್ಕಿಂತ ಶೇ. 24ರಷ್ಟು ಹೆಚ್ಚಿನ ಮೊತ್ತ ಬಿಡ್ ಮಾಡಿದರೂ, ಬಿಡ್ ಮಾಡಿದವರ ಪೈಕಿ ಅತ್ಯಂತ ಕಡಿಮೆ‌ ಮೊತ್ತಕ್ಕೆ ಅದಾನಿ ಗ್ರೂಪ್ ಬಿಡ್ ಮಾಡಿದೆ. ಹೀಗಾಗಿ ಅಂದಾಜಿಗಿಂತ ಹೆಚ್ಚು ಹಣಕ್ಕೆ ಅದಾನಿ ಗ್ರೂಪ್ಸ್ ಗೆ ಕಾಂಗ್ರೆಸ್ ಸರ್ಕಾರ ಟೆಂಡರ್ ಫೈನಲ್ ಮಾಡುತ್ತಾ ಎನ್ನವುದೇ ಇದೀಗ ದೊಡ್ಡ ಪ್ರಶ್ನೆಯಾಗಿದೆ ಯಾಕಂದ್ರೆ. ರಾಷ್ಟ್ರಮಟ್ಟದಲ್ಲಿ ಅದಾನಿಯನ್ನು ರಾಹುಲ್ ಗಾಂಧಿ ಆದಿಯಾಗಿ ಕಾಂಗ್ರೆಸ್ ನಾಯಕರು ಟೀಕಿಸುತ್ತಲೇ ಬಂದಿದ್ದಾರೆ. ಹೀಗಾಗಿ ಇತ್ತ ಸಿದ್ದರಾಮಯ್ಯ ಸರ್ಕಾರ ಧರ್ಮ ಸಂಕಟಕ್ಕೆ ಸಿಲುಕಿದೆ.

ಬೆಂಗಳೂರು ಟನಲ್ ಮಾರ್ಗ ಟೆಂಡರ್ ಅದಾನಿ ಪಾಲಾಗುತ್ತಾ?

ಬೆಂಗಳೂರು ಟನಲ್ ರಸ್ತೆ ಟೆಂಡರ್ ನಲ್ಲಿ ಅತೀ ಕಡಿಮೆ ಮೊತ್ತ ಬಿಡ್ ಮಾಡಿರುವ ಅದಾನಿ ಗ್ರೂಪ್ಸ್, 22,267 ಕೋಟಿ ರೂಪಾಯಿಗೆ ಬಿಡ್ ಮಾಡಿದೆ. ಆದರೆ ಜಿಬಿಎ 17,698 ಕೋಟಿಗೆ ಬಿಡ್ ಸೀಮಿತ ಮಾಡಿತ್ತು. ಜಿಬಿಎ ಕೋಟ್ ಮಾಡಿದ್ದಕ್ಕಿಂತ 24% ಹೆಚ್ಚಿನ ಮೊತ್ತ ಬಿಡ್ ಮಾಡಿದರೂ, ಬಿಡ್ ಮಾಡಿದವರ ಪೈಕಿ ಅತ್ಯಂತ ಕಡಿಮೆ‌ ಮೊತ್ತಕ್ಕೆ ಅದಾನಿ ಗ್ರೂಪ್ ಬಿಡ್ ಮಾಡಿದೆ. ಅಂತಿಮ ಹಂತಕ್ಕೆ ಒಟ್ಟು ನಾಲ್ಕು ಕಂಪನಿಗಳು ಪೈಪೋಟಿ ನಡೆಸಿತ್ತು. ಈ ಪೈಕಿ ದಿಲೀಪ್ ಬಿಲ್ಡ್ ಕಾನ್ ಮತ್ತು ರೈಲ್ವೆ ವಿಕಾಸ‌ ನಿಗಮ ಲಿಮಿಟೆಡ್. ಆದ್ರೆ,ಕೆಲ ಕಂಪನಿಗಳು ತಾಂತ್ರಿಕ ಕಾರಣಗಳಿಂದ ತಿರಸ್ಕರಿಸಲ್ಪಟ್ಟವು. ಕೊನೆಯದಾಗಿ ಅದಾನಿ ಗ್ರೂಪ್ ಹಾಗೂ ಹೈದರಾಬಾದ್ ಮೂಲದ ವಿಶ್ವಸಮುದ್ರ ಕಂಪೆನಿ ಅಖಾಡದಲ್ಲಿದೆ.

ಇದನ್ನೂ ನೋಡಿ: ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ

ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದೇನು?

ಹೈದರಾಬಾದಿನ ವಿಶ್ವ ಸಮುದ್ರ ಗ್ರೂಪ್ಸ್ 25,474 ಕೋಟಿ ರೂ.ಗೆ ಬಿಡ್ ಮಾಡಿದೆ. ಸರ್ಕಾರದ ಅಂದಾಜಿಗಿಂತ 7776 ಕೋಟಿ ರೂ ಹೆಚ್ಚು ಮೊತ್ತಕ್ಕೆ ವಿಶ್ವಸಮುದ್ರ ಕಂಪನಿ ಬಿಡ್ ಮಾಡಿದೆ.‌ ಹೀಗಾಗಿ ಲೀಗಲಿ ಬಿಡ್ ಪಡೆಯಲು ಮೊದಲ ಆಯ್ಕೆ ಅದಾನಿ ಗ್ರೂಪ್ ಆಗಿರಲಿದೆ. ಆದರೆ ಅದಾನಿ ಗ್ರೂಪ್ ಗೆ ರಾಜ್ಯ ಸರ್ಕಾರ ಬಿಡ್ ಅಂತಿಮ ಮಾಡುತ್ತಾ ಎನ್ನುವುದೇ ಈಗಿರುವ ಯಕ್ಷ ಪ್ರಶ್ನೆ. ಈ ಬಗ್ಗೆ ಮಾತನಾಡಿದ ಡಿಸಿಎಂ, ಯಾರೇ ಬಿಡ್ ಮಾಡಲಿ ಸರ್ಕಾರ ಏನು ಘೋಷಣೆ ಮಾಡಿದೆಯೋ ಅಷ್ಟೇ ಕೊಡೋದು.ಅದಾನಿ ಆಗಲಿ, ನಾನು ಆಗಲಿ, ನೀನು ಆಗಲಿ ಯಾರೇ ಹಾಕಿದ್ರು ಸರ್ಕಾರ ಹೇಳಿರೋ ಅಷ್ಟೇ ಮಾಡೋದು.20 ಸಾವಿರ ಬಿಡ್ ಮಾಡಲಿ, ಎಷ್ಟಾದ್ರು ಬಿಡ್ ಮಾಡಲಿ.ಸರ್ಕಾರ ಘೋಷಣೆ ಮಾಡಿರೋದು ಅಷ್ಟೇ ಕೊಡೋದು ಉಳಿದದ್ದು ಅವರು ವೆಚ್ಚ ಭರಿಸಿಕೊಳ್ಳಬೇಕು ಅಷ್ಟೇ ಎಂದರು.

ಧರ್ಮ ಸಂಕಷ್ಟದಲ್ಲಿ ರಾಜ್ಯ ಸರ್ಕಾರ

ರಾಷ್ಟ್ರ ಮಟ್ಟದಲ್ಲಿ ರಾಹುಲ್ ಗಾಂಧಿ ಹಿಡಿದು ಅವರ ಪಕ್ಷದ ಕಾರ್ಯಕರ್ತರೂ ಸಹ ಅದಾನಿಯನ್ನು ಟೀಕೆ ಮಾಡುತ್ತಲೇ ಬಂದಿದ್ದಾರೆ. ಮೋದಿ ಸರ್ಕಾರ, ಅದಾನಿ ಗ್ರೂಪ್ ಗೆ​​ ಹೆಚ್ಚೆಚ್ಚು ಟೆಂಡರ್ ನೀಡುತ್ತದೆ. ಅಲ್ಲದೇ ಅದಾನಿಗೆ ರಕ್ಷಣೆಗೆ ಮೋದಿ ನಿಂತಿದ್ದಾರೆ. ಅದಾನಿ ಬಿಜೆಪಿಯ ಎಲೆಕ್ಷನ್ ಫಂಡರ್ ಹೀಗೆ ನಾನಾ ರೀತಿಯಲ್ಲಿ ಅದಾನಿ ವಿರುದ್ಧ ಕಾಂಗ್ರೆಸ್‌ ನಾಯಕರು ಬಹಿರಂಗವಾಗಿ ಟೀಕಿಸಿದ್ದಾರೆ. ಆದರೆ ಇದೀಗ ಇತ್ತ ರಾಜ್ಯದ ಕಾಂಗ್ರೆಸ್ ಸರ್ಕಾರವೇ ಅದೇ ಅದಾನಿ ಗ್ರೂಪ್‌ಗೆ ಸಾವಿರಾರು ಕೋಟಿ ಮೊತ್ತದ ಟೆಂಡರ್ ನೀಡುವ ಅನಿವಾರ್ಯತೆ ಎದುರಾಗಿದೆ. ಒಂದು ಕಡೆ ಅಂದಾಜು ಮೊತ್ತಕ್ಕೆ ಹೆಚ್ಚಿಗೆ ಬಿಡ್ ಮಾಡಿದೆ. ಇನ್ನೊಂದೆಡೆ ಟೀಕಿಸುವ ನಾವೇ ಟೆಂಡರ್ ಕೊಟ್ರೆ ಹೇಗೆ ಎನ್ನುವ ಧರ್ಮ ಸಂಕಟದಲ್ಲಿ ಸಿದ್ದರಾಮಯ್ಯ ಸರ್ಕಾರ ಸಿಲುಕಿದೆ.

ಬೆಂಗಳೂರಿನ ಟ್ರಾಫಿಕ್ ಸಮಸ್ಯೆಗೆ ಮುಕ್ತಿ ನೀಡಲು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ರೂಪಿಸಿರುವ ಕನಸಿನ ಯೋಜನೆ ‘ಟನಲ್ ರಸ್ತೆ’ ಈಗ ಹೊಸ ರಾಜಕೀಯ ಚರ್ಚೆಗೆ ಕಾರಣವಾಗಿದೆ. ಸದಾ ರಾಷ್ಟ್ರಮಟ್ಟದಲ್ಲಿ ಅದಾನಿ ವಿರುದ್ಧ ವಾಗ್ದಾಳಿ ನಡೆಸುವ ಕಾಂಗ್ರೆಸ್, ಇದೀಗ ಅದೇ ಅದಾನಿ ಸಮೂಹಕ್ಕೆ ಟೆಂಡರ್ ನೀಡುವ ಅನಿವಾರ್ಯತೆಗೆ ಸಿಲುಕಿದೆಯೇ ಎಂಬ ಪ್ರಶ್ನೆ ಎದ್ದಿದ್ದು, ಸಿದ್ದರಾಮಯ್ಯ ಸರ್ಕಾರ, ಈಗ ಅದಾನಿ ಗ್ರೂಪ್ಸ್ ಗೆ ಟೆಂಡರ್ ಕೊಡುತ್ತಾ? ಅಥವಾ ಟನಲ್ ರಸ್ತೆ‌ ವಿರೋಧಿಸುತ್ತಿರುವ ಬಿಜೆಪಿ ಈಗ ಅದಾನಿ ಗ್ರೂಪ್ಸ್ ವಿರುದ್ಧ ದನಿ ಎತ್ತುತ್ತಾ? ಹೀಗೆ ಬೆಂಗಳೂರು ಟನಲ್ ರಸ್ತೆ ಟೆಂಡರ್ ಕುತೂಹಲಕ್ಕೆ ಕಾರಣವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 9:33 pm, Mon, 22 December 25

Source link

ಏಷ್ಯಾಕಪ್ ಫೈನಲ್​ನಲ್ಲಿ ಭಾರತವನ್ನು ಸೋಲಿಸಿದ ಪಾಕ್ ತಂಡಕ್ಕೆ ಕೋಟಿ ಕೋಟಿ ಬಹುಮಾನ

Source link

ಆಪರೇಷನ್ ಸಿಂಧೂರ್ ವೇಳೆ ಭಾರತದಿಂದ ದೇವರೇ ನಮ್ಮನ್ನು ಕಾಪಾಡಿದ; ಪಾಕ್ ಸೇನಾ ಮುಖ್ಯಸ್ಥ ಹೇಳಿದ್ದೇನು? – Kannada News | We felt it; Asim Munir says divine help saved Pakistan from India during Operation Sindoor

ನವದೆಹಲಿ, ಡಿಸೆಂಬರ್ 22: ಕಾಶ್ಮೀರದ ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಭಾರತ ಅದಕ್ಕೆ ಪ್ರತೀಕಾರವಾಗಿ ಆಪರೇಷನ್ ಸಿಂಧೂರ್ (Operation Sindoor) ಕಾರ್ಯಾಚರಣೆ ಆರಂಭಿಸಿತ್ತು. ಆ ದಾಳಿಯ ವೇಳೆ ಪಾಕಿಸ್ತಾನಕ್ಕೆ ದೇವರೇ ಸಹಾಯ ಮಾಡಿದ್ದನಂತೆ. ಈ ರೀತಿಯ ಹೇಳಿಕೆಯನ್ನು ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ನೀಡಿದ್ದಾರೆ. ಉರ್ದು ಭಾಷೆಯಲ್ಲಿ ಮಾತನಾಡಿರುವ ಅಸಿಮ್ ಮುನೀರ್ ಅವರ ಭಾಷಣದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಆದರೆ, ಯಾವಾಗ ಅವರು ಈ ಹೇಳಿಕೆ ನೀಡಿದ್ದು ಎಂಬ ದಿನಾಂಕ ಗೊತ್ತಾಗಿಲ್ಲ.

ಈ ವಿಡಿಯೋದಲ್ಲಿ ಉರ್ದು ಭಾಷೆಯಲ್ಲಿ ಮಾತನಾಡುತ್ತಾ, ಅಸಿಮ್ ಮುನೀರ್ “ಅಲ್ಲಾಹ್ ನಿಮಗೆ ಸಹಾಯ ಮಾಡಿದರೆ ಯಾರೂ ನಿಮ್ಮನ್ನು ಸೋಲಿಸಲು ಸಾಧ್ಯವಿಲ್ಲ” ಎಂಬ ಕುರಾನ್ ಪದ್ಯವನ್ನು ಉಲ್ಲೇಖಿಸಿದ್ದಾರೆ. ಭಾರತದ ಯುದ್ಧದ ಸಮಯದಲ್ಲಿ ಪಾಕಿಸ್ತಾನಕ್ಕೆ ದೈವಿಕ ಬೆಂಬಲ ಸಿಕ್ಕಿತ್ತು. ದೇವರು ನಮ್ಮ ಜೊತೆಗೇ ಇದ್ದ. ಅಲ್ಲಾಹ್ ನಮ್ಮ ಪರವಾಗಿ ಇದ್ದ ಅನುಭೂತಿಯನ್ನು ನಾವು ಅನುಭವಿಸಿದ್ದೆವು ಎಂದು ಹೇಳಿದ್ದಾರೆ.

ಇದನ್ನೂ ಓದಿ: ಭಾರತಕ್ಕೆ ಮತ್ತೊಮ್ಮೆ ಪರಮಾಣು ಬೆದರಿಕೆ ಹಾಕಿದ ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸಿಮ್ ಮುನೀರ್

26 ನಾಗರಿಕರ ಸಾವಿಗೆ ಕಾರಣವಾದ ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಭಾರತ ಮೇ ಆರಂಭದಲ್ಲಿ ಆಪರೇಷನ್ ಸಿಂಧೂರ್ ಅನ್ನು ಪ್ರಾರಂಭಿಸಿತು. ಈ ಕಾರ್ಯಾಚರಣೆಯ ಸಮಯದಲ್ಲಿ ಭಾರತೀಯ ವಾಯುಪಡೆಯು ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿನ (ಪಿಒಕೆ) ಅನೇಕ ಭಯೋತ್ಪಾದಕ ಶಿಬಿರಗಳ ಮೇಲೆ ದಾಳಿ ಮಾಡಿತು. ಇದರಲ್ಲಿ ಪಂಜಾಬ್ ಪ್ರಾಂತ್ಯದ ಬಹಾವಲ್ಪುರ್ ಮತ್ತು ಮುರಿಯ್ಕೆಯಲ್ಲಿನ ಗುರಿಗಳು ಹಾಗೂ ಪಿಒಕೆಯ ಮುಜಫರಾಬಾದ್ ಮತ್ತು ಕೋಟ್ಲಿ ಕೂಡ ಸೇರಿವೆ.

ಇದನ್ನೂ ಓದಿ: ಆಪರೇಷನ್ ಸಿಂಧೂರ್‌ ವೇಳೆ ಪಾಕಿಸ್ತಾನದ 5 ಯುದ್ಧ ವಿಮಾನ ಪತನ; ಐಎಎಫ್ ಮುಖ್ಯಸ್ಥ ಮಹತ್ವದ ಮಾಹಿತಿ

ಈ ಕಾರ್ಯಾಚರಣೆಯು ಹಲವಾರು ಪಾಕಿಸ್ತಾನಿ ವಾಯು ನೆಲೆಗಳಲ್ಲಿನ ರನ್‌ವೇಗಳನ್ನು ಹಾನಿಗೊಳಿಸಿತು ಮತ್ತು ವಾಯು ರಕ್ಷಣಾ ಸ್ವತ್ತುಗಳನ್ನು ತಟಸ್ಥಗೊಳಿಸಿತು. ಈ ಕಾರ್ಯಾಚರಣೆಯು ಸುಮಾರು 30 ನಿಮಿಷ ನಡೆಯಿತು. ಕೊನೆಗೆ ಮೇ 10ರಂದು ಕದನವಿರಾಮ ಘೋಷಿಸಲಾಗಿತ್ತು. ಈ ದಾಳಿಯಲ್ಲಿ ಭಾರತ ತನ್ನ ಗುರಿಯನ್ನು ಮುಟ್ಟಿದೆ ಮತ್ತು ಅನೇಕ ಉಗ್ರರ ನೆಲೆಗಳನ್ನು ಧ್ವಂಸ ಮಾಡಲಾಗಿದೆ ಎಂದು ಭಾರತೀಯ ವಾಯುಪಡೆ ಹೇಳಿಕೊಂಡಿದೆ. ಆದರೆ, ಪಾಕಿಸ್ತಾನ ಮಾತ್ರ ಇನ್ನೂ ತನ್ನ ದೇಶಕ್ಕೆ ಯಾವುದೇ ಹಾನಿಯಾಗಿಲ್ಲ ಎಂದು ಹೇಳಿಕೊಳ್ಳುವುದನ್ನು ನಿಲ್ಲಿಸಿಲ್ಲ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ಸೈಬರ್ ವಂಚನೆ: ಸುದೀಪ್ ಅಭಿಮಾನಿಗೆ ನಕಲಿ ATS ಬೆದರಿಕೆ, ಲಕ್ಷಾಂತರ ರೂ. ದೋಚಿದ ಸೈಬರ್ ಕಳ್ಳರು – Kannada News | Cyber ​​fraud: Fake ATS threat to Sudeep’s fan, cyber thieves rob lakhs of rupees

ಬೆಂಗಳೂರು, ಡಿ.22: ದಿನೇ ದಿನೇ ಸೈಬರ್ (Cybercrime) ಚೋರರ ಕಾಟ ಹೆಚ್ಚಾಗುತ್ತಿದೆ. ಸಾಮಾನ್ಯ ಜನರಿಂದ ಹಿಡಿದು ಸೆಲೆಬ್ರಿಟಿಗಳವರೆಗೆ ಇವರ ವಂಚನೆಗೆ ಬಲಿಯಾಗುತ್ತಿದ್ದಾರೆ. ಕೋಟಿ ಕೋಟಿ ಹಣವನ್ನು ದೋಚುತ್ತಿದ್ದಾರೆ. ಕಳೆದ ಎರಡು ವರ್ಷಗಳಲ್ಲಿ ಇವರ ಹಾವಳಿ ಹೆಚ್ಚಾಗಿದೆ. ಇತ್ತೀಚಿಗೆ ಇಂತಹ ಮೋಸಕ್ಕೆ ಉಪೇಂದ್ರ ದಂಪತಿಗಳು ಕೂಡ ಒಳಗಾಗಿದ್ದರು. ಪೊಲೀಸ್​​​​, ಎನ್​​​ಐಎ ಹೀಗೆ ಸರ್ಕಾರಿ ಅಧಿಕಾರಿಗಳ ಸೋಗಿನಲ್ಲಿ  ಸೈಬರ್​​​ ಅರೆಸ್ಟ್​​ ಮಾಡಿ ಲಕ್ಷ ಲಕ್ಷ ಹಣ ದೋಚಿರುವ ಅದೆಷ್ಟೊ ಘಟನೆಗಳು ವರದಿಯಾಗಿದೆ. ಇದರ ಬಗ್ಗೆ ದಿನನಿತ್ಯ ಒಂದಲ್ಲ ಒಂದು ಸುದ್ದಿಯಾಗುತ್ತಿದ್ದರೂ ಜನ ಮತ್ತೆ ಮತ್ತೆ ಮೋಸ ಹೋಗುತ್ತಿದ್ದಾರೆ. ಸರ್ಕಾರ ಹಾಗೂ ಪೊಲೀಸ್​​ ಇಲಾಖೆಯೂ ಕೂಡ ಜನರಿಗೆ ಎಚ್ಚರಿಕೆಯನ್ನು ನೀಡುತ್ತ ಬಂದಿದೆ. ಇದೀಗ ಈ ವಂಚಕರು ಸುದೀಪ್ ಅಭಿಮಾನಿಯೊಬ್ಬರಿಗೆ ‘ATS'(ಭಯೋತ್ಪಾದನಾ ನಿಗ್ರಹ ದಳ) ಹೆಸರಿನಲ್ಲಿ ಬೆದರಿಕೆ ಹಾಕಿರುವ ಘಟನೆ ಬೆಳಕಿಗೆ ಬಂದಿದೆ.

ದೆಹಲಿ ಬಾಂಬ್ ಸ್ಪೋಟದಲ್ಲಿ ನಿಮ್ಮ ಕೈವಾಡ ಇದೆ. ನಿಮ್ಮ ಮೊಬೈಲ್ ನಂಬರ್ ಕೂಡ ಬಳಕೆಯಾಗಿದೆ ಎಂದು ಬೆದರಿಕೆ ಹಾಕಿದ್ದಾರೆ. ಒಂದು ವೇಳೆ ಈ ಆರೋಪದಿಂದ ನಿಮಗೆ ಮುಕ್ತಿ ಬೇಕೆಂದರೆ ನಾವು ಹೇಳಿದಂತೆ ಕೇಳಬೇಕು. ನಾವು ಹೇಳಿದಂತೆ ಕೇಳಿದ್ರೆ ಮಾತ್ರ ನಿಮಗೆ ಸರ್ಟಿಫಿಕೇಟ್​​ ಆಫ್ ಇನ್ವಸೇನಟ್​ (Certificate of Innocence) ನೀಡುತ್ತೇವೆ ಎಂದು ಹೇಳಿದ್ದಾರೆ. ಈ ಬೆದರಿಕೆಗೆ ಭಯಗೊಂಡ ಕಿಚ್ಚ ಅಭಿಮಾನಿ ಶರಣ್ ಆರ್ ಮುಕುಂದ್ ಹಣ ಕಳೆದುಕೊಂಡಿದ್ದಾರೆ.

ಈ ವಂಚನೆ ಬಗ್ಗೆ ವಿಸ್ತಾರವಾಗಿ ಕಿಚ್ಚ ಅಭಿಮಾನಿ ಶರಣ್ ಆರ್ ಮುಕುಂದ್
ಹಂಚಿಕೊಂಡಿದ್ದಾರೆ. “ನನಗೆ ಒಬ್ಬ ವ್ಯಕ್ತಿ ಕಾಲ್ ಮಾಡಿ, ನಾವು ಎಟಿಎಸ್ ನಿಂದ ಕರೆ ಮಾಡುತ್ತಿದ್ದೇವೆ. ದೆಹಲಿ ರೆಡ್ ಫೋರ್ಟ್ ಬ್ಲಾಸ್ಟ್ ನಲ್ಲಿ ನಿಮ್ಮ ಕೈವಾಡವಿದೆ ಎಂದು ಹೇಳಿದ್ರು, ನನಗೂ ಸ್ವಲ್ಪ ಹೆದರಿಕೆ ಆಯಿತು. ಇಲ್ಲ ಸರ್​​ ನಾನು ಯಾವುದೇ ತಪ್ಪು ಮಾಡಿಲ್ಲ ಎಂದು ಹೇಳಿದೆ. ಆದರೆ ಅವರು ನಿಮ್ಮ ಕೈವಾಡ ಇದೆ ಎಂಬ ಸಾಕ್ಷಿ ಸಿಕ್ಕಿದೆ. ನಮ್ಮ ಎನ್ ಐ ಎ ಟೀಂ ಸದ್ಯದಲ್ಲೆ ಕಾಲ್ ಮಾಡುತ್ತದೆ ಎಂದು  +91 9620122894, +91 6262656645 ನಿಂದ ವೀಡಿಯೋ ಕರೆ ಮಾಡಿದ್ದಾರೆ. ಅದರಲ್ಲಿ ಒಬ್ಬ ವ್ಯಕ್ತಿ, ನಾನು ಗೌರವ್ ಎನ್ ಐ ಎ ಆಫೀಸರ್, ನಿಮ್ಮ ವಿಡಿಯೋ ಹೇಳಿಕೆಬೇಕು ಎಂದು ನನ್ನ ವೈಯಕ್ತಿಕ ದಾಖಲೆಗಳನ್ನು ಕೇಳಿದ್ದಾರೆ. ಜತೆಗೆ ನನ್ನ ಬ್ಯಾಂಕ್​​​​ ಅಕೌಂಟ್ ಡೀಟೇಲ್ಸ್ ಕೂಡ ಕೇಳಿದ್ದರೆ, ನಾವು ಹೇಳುವರೆಗೆ ಕಾಲ್​​​ ಕಟ್​​ ಮಾಡಬೇಡಿ ಎಂದು ಹೇಳಿದ್ದಾರೆ.

ಸ್ವಲ್ಪ ಹೊತ್ತಿನ ನಂತರ ತುಂಬಾ ಮೃದುವಾಗಿ ಮಾತನಾಡಲು ಶುರು ಮಾಡಿದ್ದಾರೆ, ನಿಮ್ಮ ಮೇಲಿನ ಆರೋಪ ಹೋಗಬೇಕೆಂದರೆ, ನಿಮಗೆ ಸರ್ಟಿಫಿಕೇಟ್​​ ಆಫ್ ಇನ್ವಸೇನಟ್​ ಬೇಕೆಂದರೆ ಸ್ವಲ್ಪ ಹಣ ಪೇ ಮಾಡಬೇಕು. ಅದು ಗವರ್ನಮೆಂಟ್ ಫೀಸ್​​ ಎಂದು ಹೇಳಿದ್ದಾರೆ. ಈ ತನಿಖೆ ಮುಗಿದ ನಂತರ ವಾಪಾಸ್ ಮಾಡುತ್ತೇವೆ ಎಂದು ಹೇಳಿದ್ದಾರೆ. ಶರಣ್ ಆರ್ ಮುಕುಂದ್ ಅವರು ವಂಚಕರಿಗೆ ಹಂತ ಹಂತವಾಗಿ ಹಣವನ್ನು ವರ್ಗಾವಣೆ ಮಾಡಿದ್ದಾರೆ. ಹೀಗೆ 5.53 ಲಕ್ಷ ರೂ.ವರೆಗೆ ಹಣವನ್ನು ವಂಚಕರಿಗೆ ಕಳುಹಿಸಿದ್ದಾರೆ. ಕೊನೆಗೆ ಶರಣ್ ಆರ್ ಮುಕುಂದ್ ಅವರಿಗೆ ಈ ಬಗ್ಗೆ ಅನುಮಾನ ಬಂದು 1930ಗೆ ಕರೆ ಮಾಡಿ‌ ವಿಚಾರ ತಿಳಿಸಿದ್ದಾರೆ. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸೌತ್ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಕುಂಬಳ ಕಾಯಿ ಕಳ್ಳ ಅಂದ್ರೆ..; ಸುದೀಪ್ ಹೇಳಿಕೆಯ ಅಸಲಿ ಅರ್ಥ ಹೇಳಿದ ಚಕ್ರವರ್ತಿ

ದೇಣಿಗೆ ಕೊಡಿಸುವ ನೆಪದಲ್ಲಿ ವಂಚನೆ

ಬಾಗಲಕೋಟೆ ‌ಜಿಲ್ಲೆಯ ಜಮಖಂಡಿ ಮೂಲದ ಜಯಭಾರತ ಮಾತೆ ನಗರ ಹಾಗೂ ಗ್ರಾಮೀಣ ಸೇವಾಸಂಸ್ಥೆ. ಬಾಗಲಕೋಟೆ, ವಿಜಯಪುರ, ಬೆಳಗಾವಿ, ಗದಗ ಜಿಲ್ಲೆಯಲ್ಲಿ ವೃದ್ದಾಶ್ರಮ ಹಾಗೂ ನಿರ್ಗತಿಕ ಕೇಂದ್ರಗಳನ್ನು ‌ಈ ಸಂಸ್ಥೆ ನಡೆಸುತ್ತದೆ. ಇದಕ್ಕಾಗಿ ವಿವಿಧ ದಾನಿಗಳಿಂದ ಸಹಾಯ‌ ನಿರೀಕ್ಷಿಸಿದ್ದರು. ಕಂಪನಿಗಳಿಂದ ಸಿಎಸ್​​ಆರ್ ಫಂಡ್​ನಿಂದ ಹಣ ನೆರವು ಕೋರಿದ್ದರು. ಈ ಬಗ್ಗೆ ಸಾಮಾಜಿಕ‌ ಜಾಲತಾಣದಲ್ಲೂ ‌ಮನವಿ‌ ಮಾಡಿದ್ದರು.ಇದನ್ನು ಗಮನಿಸಿದ ಅಸ್ಸಾಂನ ಸುರ್ಜಿತ್ ಮತ್ತು ಸಿದ್ದಾರ್ಥ ಹಾಗೂ ಪಶ್ಚಿಮ ಬಂಗಾಳದ ಮಾನಷ್ ಗೋಷ್ ಜಯ ಭಾರತ ಮಾತೆ NGO ಕಾರ್ಯದರ್ಶಿ ಶಶಾಂಕ್‌ ಒಳವಾಡೆಯವರನ್ನು ಸಂಪರ್ಕಿಸಿದ್ದಾರೆ. ನಾವು ಫಂಡ್​ ಕೊಡುತ್ತೇವೆ. ವಿವಿಧ ಕಂಪನಿಗಳಿಂದಲೂ ಫಂಡ್‌ ಕೊಡಿಸುತ್ತೇವೆ ಅಂತ ನಂಬಿಸಿದ್ದಾರೆ.

ವರದಿ: ವಿಕಾಸ್, ಟಿವಿ9 ಬೆಂಗಳೂರು

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 2:33 pm, Mon, 22 December 25

Source link

ಡಿಕೆ ಶಿವಕುಮಾರ್ ಸಿಎಂ ಆಗ್ತಾರೆ: ದಿನಾಂಕವನ್ನೂ ಹೇಳಿದ ಖ್ಯಾತ ಜ್ಯೋತಿಷಿ! – Kannada News | DK Shivakumar Will Be the Next CM before january 15th And Satish Jarkiholi KPCC President Predicted By Bagalkot astrologer Ullas

ಬಾಗಲಕೋಟೆ, (ಡಿಸೆಂಬರ್ 22): ಕರ್ನಾಟಕ ಕಾಂಗ್ರೆಸ್​ನಲ್ಲಿನ (Karnataka Congress) ಗೊಂದಲ ಒಂದೆರಡಲ್ಲ. ಸಿಎಂ ಕುರ್ಚಿ ಆಗ ಬದಲಾಗುತ್ತೆ, ಈಗ ಬದಲಾಗುತ್ತೆ ಎಂಬ ಚರ್ಚೆಗಳು ದಿನ ಕಳೆದಂತೆ ಜೋರಾಗುತ್ತಲೇ ಇವೆ. ಬ್ರೇಕ್ ಫಾಸ್ಟ್​​ ಮೂಲಕ ಬಗೆಹರಿಯಿತು ಎನ್ನುವಷ್ಟರಲ್ಲೇ ಚಳಿಗಾಲದ ಅಧಿವೇಶನ ಮುಗಿಯುತ್ತಿದ್ದಂತೆಯೇ ಸಿಎಂ ಕುರ್ಚಿ ಕುದನ ಶುರುವಾಗಿದೆ. ಅದರಲ್ಲೂ ಡಿಕೆ ಶಿವಕುಮಾರ್ (DK Shivakumar) ಮತ್ತೆ ಆ್ಯಕ್ಟೀವ್ ಆಗಿದ್ದು, ನಾನಾ ತಂತ್ರಗಳನ್ನು ಹೆಣೆಯುತ್ತಿದ್ದಾರೆ. ಈ ಎಲ್ಲಾ ರಾಜಕೀಯ ಬೆಳವಣಿಗೆಗಳ ನಂತರ ಬಾಗಲಕೋಟೆಯ ಜ್ಯೋತಿಷಿಯೊಬ್ಬರು ಡಿಕೆ ಶಿವಕುಮಾರ್ ಸಿಎಂ ಆಗಲಿದ್ದಾರೆ ಎನ್ನುವ ಸ್ಫೋಟಕ ಭವಿಷ್ಯ ನುಡಿದಿದ್ದಾರೆ.

ಹೌದು..ಬಬಲೇಶ್ವರ ಜ್ಯೋತಿಷಿ‌ ಮನೆತನದ ಬಾಗಲಕೋಟೆಯ ‌ಖ್ಯಾತ ಜ್ಯೋತಿಷಿ‌ ಉಲ್ಲಾಸ್​ ಜೋಶಿ ಎನ್ನುವರು ಜನವರಿಗೆ 15ರೊಳಗೆ ಡಿಕೆ ಶಿವಕುಮಾರ್ ಮುಖ್ಯಮಮತ್ರಿ ಆಗುತ್ತಾರೆ. ಇದರ ಜೊತೆಗೆ ಸಚಿವ ಸತೀಶ್ ಜಾರಕಿಹೊಳಿ ಅವರು ಕೆಪಿಸಿಸಿ ಅಧ್ಯಕ್ಷರಾಗುತ್ತಾರೆ ಎಂದು ಭವಿಷ್ಯ ನುಡಿದಿದ್ದಾರೆ.

ರಾಘವೇಂದ್ರ ಸ್ವಾಮಿಗಳೇ ನನ್ನ ನಾಲಿಗೆಯಿಂದ ನುಡಿಸುತ್ತಾರೆ. ನಾನು ಮೊದಲಿಗೆ ಜಪಮಣಿ ಪಠಿಸುತ್ತಾ ರಾಘವೇಂದ್ರಸ್ವಾಮಿಗೆ ಪ್ರಶ್ನೆ ಹಾಕುತ್ತೇನೆ. ಅದಕ್ಕೆ ರಾಘವೇಂದ್ರ ಸ್ವಾಮಿಗಳು ಉತ್ತರಿಸೋದನ್ನೇ ಭವಿಷ್ಯ ಹೇಳುತ್ತೇನೆ. ಈವರೆಗೂ ಅನೇಕ‌ ಜನರಿಗೆ ಭವಿಷ್ಯ ಹೇಳಿದ್ದೇನೆ, ಒಂದು ಸುಳ್ಳಾಗಿಲ್ಲ. ಯಾರೊಬ್ಬರೂ ಸುಳ್ಳಾಗಿದೆ ಅಂತ ಬಂದಿಲ್ಲ ಎಂದ ಹೇಳಿದ್ದಾರೆ. ಹೀಗಾಗಿ ಈ ಭವಿಷ್ಯ ಎಷ್ಟು ನಿಜವಾಗುತ್ತೆ ಎನ್ನುವುದನ್ನು ಕಾದುನೋಡಬೇಕಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ! – Kannada News | Vadodara Young Boy survived a horrifying accident on Nandesari Bridge watch viral video

ವಡೋದರಾ, ಡಿಸೆಂಬರ್ 22: ವಡೋದರಾದಲ್ಲೊಂದು ಪವಾಡದಂತಹ ಘಟನೆ ನಡೆದಿದೆ. 20 ವರ್ಷದ ಸಿದ್ಧರಾಜ್ ಸಿಂಗ್ ಮಹೀದ ಅವರು ನಾಂದೇಸರಿ ಸೇತುವೆಯ ಮೇಲೆ ಹೋಗುತ್ತಿದ್ದಾಗ ಕಾರೊಂದು ಅವರ ಸ್ಕೂಟಿಗೆ ಡಿಕ್ಕಿ ಹೊಡೆದಿತ್ತು. ಆದರೆ, ಅದೃಷ್ಟವಶಾತ್ ಈ ಭೀಕರ ಅಪಘಾತದಿಂದ (Accident) ಅವರು ಬದುಕುಳಿದಿದ್ದಾರೆ. ಅವರು ಸೇತುವೆಯಿಂದ ಕೆಳಗೆ ಬೀಳುವಾಗ ಅವರ ಶರ್ಟ್​ ಲೈಟ್ ಕಂಬಕ್ಕೆ ಸಿಕ್ಕಿಹಾಕಿಕೊಂಡಿತ್ತು. ಇದರಿಂದಾಗಿ ಅವರು 20 ಅಡಿ ಎತ್ತರದಲ್ಲಿ ನೇತಾಡುತ್ತಿದ್ದರು. ಇದನ್ನು ನೋಡಿದ ಸ್ಥಳೀಯರು ತಕ್ಷಣ ಅವರನ್ನು ಮೇಲಕ್ಕೆ ಎಳೆದುಕೊಂಡು ಕಾಪಾಡಿದ್ದಾರೆ. ಬೈಕ್ ಸೇತುವೆಯಿಂದ ನೀರಿಗೆ ಬಿದ್ದರೂ ಆ ಯುವಕನ ಆಯುಷ್ಯ ಗಟ್ಟಿ ಇದ್ದುದರಿಂದ ಯಾವುದೇ ಗಾಯಗಳೂ ಆಗದೆ ಅವರು ಬದುಕುಳಿದಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

7 ತಿಂಗಳ ಗರ್ಭಿಣಿ ಹತ್ಯೆ ಪ್ರಕರಣ: ಜಾತಿ ರಾಕ್ಷಸರಿಗೆ ಶಿಕ್ಷೆ ಆಗಲೇಬೇಕು – Kannada News | Dalit Outcry: Hubballi Father Murders 7 Month Pregnant Daughter, Justice for Manya

ಹುಬ್ಬಳ್ಳಿ, ಡಿ.22: ಹುಬ್ಬಳ್ಳಿಯಲ್ಲಿ ನಡೆದ ಭೀಕರ ಘಟನೆಯು ರಾಜ್ಯಾದ್ಯಂತ ಆಕ್ರೋಶಕ್ಕೆ ಕಾರಣವಾಗಿದೆ. ತಂದೆಯೊಬ್ಬ ತನ್ನ 7 ತಿಂಗಳ ಗರ್ಭಿಣಿ ಮಗಳನ್ನು ಕೊಚ್ಚಿ ಕೊಂದಿರುವ ಘಟನೆಯೊಂದು ನಡೆದಿದೆ. ಇದು ಮರ್ಯಾದಾ ಹತ್ಯೆಯಾಗಿದೆ ಎಂದು ಆರೋಪಿಸಲಾಗಿದೆ. ಈ ಘಟನೆ ಜಾತಿ ಆಧಾರಿತ ಮದುವೆಗೆ ಸಂಬಂಧಿಸಿದೆ ಎಂದು ಹೇಳಲಾಗುತ್ತಿದೆ. ಹತ್ಯೆಯಾಗಿರುವ ಮಹಿಳೆಯನ್ನು ಮಾನ್ಯಾ ಎಂದು ಗುರುತಿಸಲಾಗಿದ್ದು, ಇದೀಗ ಆಂಬ್ಯುಲೆನ್ಸ್‌ನಲ್ಲಿ ಆಕೆಯ ದೇಹವನ್ನು ಸಾಗಿಸುವಾಗ ದಲಿತ ಸಂಘಟನೆಗಳ ಕಾರ್ಯಕರ್ತರು ರೊಚ್ಚಿಗೆದ್ದು ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನಾಕಾರರು ಧಿಕ್ಕಾರ, ಧಿಕ್ಕಾರ, ಬೇಕು ಬೇಕು ನ್ಯಾಯ ಬೇಕು, ಜಸ್ಟಿಸ್ ಫಾರ್ ಮಾನ್ಯಾ ಎಂಬ ಘೋಷಣೆಗಳನ್ನು ಕೂಗಿದ್ದಾರೆ. ಮರ್ಯಾದಾ ಹತ್ಯೆಗೆ ಕಾರಣರಾದವರನ್ನು ಬಂಧಿಸುವಂತೆ ಮತ್ತು ದಲಿತರ ಮೇಲಿನ ದೌರ್ಜನ್ಯವನ್ನು ನಿಲ್ಲಿಸುವಂತೆ ಒತ್ತಾಯಿಸಿದ್ದಾರೆ. ದಲಿತ ವಿರೋಧಿಗಳಿಗೆ, ಜಾತಿವಾದಿಗಳಿಗೆ ಮತ್ತು ಜಾತಿ ರಾಕ್ಷಸರಿಗೆ ಧಿಕ್ಕಾರ ಎಂದು ಘೋಷಣೆಗಳನ್ನು ಕೂಗುವ ಮೂಲಕ ಘಟನೆಯ ಬಗ್ಗೆ ತಮ್ಮ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. 7 ತಿಂಗಳ ಗರ್ಭಿಣಿಯ ಹತ್ಯೆಯನ್ನು ಖಂಡಿಸಿ, ಕೊಲೆಗಾರರಿಗೆ ಕಠಿಣ ಶಿಕ್ಷೆ ಆಗಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಟೀಂ ಇಂಡಿಯಾ ಸ್ಟಾರ್ ಜೆಮಿಮಾ ರೊಡ್ರಿಗಸ್‌ಗೆ ಒಲಿದ ನಾಯಕತ್ವ ಪಟ್ಟ

Source link

ಗಿಲ್ಲಿ ಮೇಲೆ ರಕ್ಷಿತಾ ಶೆಟ್ಟಿಗೆ ಲವ್ ಇದ್ಯಾ? ಅಸಲಿ ವಿಷಯ ತೆರೆದಿಟ್ಟ ರಜತ್ – Kannada News | Rajath Kishan says Rakshitha Shetty called Gilli Nata bro in Bigg Boss Kannada Season 12

ಬಿಗ್ ಬಾಸ್ ಮನೆಯಲ್ಲಿ ಗಿಲ್ಲಿ ನಟ (Gilli Nata) ಅವರು ಸಖತ್ ಹೈಲೈಟ್ ಆಗುತ್ತಿದ್ದಾರೆ. ಅವರ ಜೊತೆ ಕಾವ್ಯಾ ಶೈವ ಮತ್ತು ಸ್ಪಂದನಾ ಅವರು ಇದ್ದಾಗ ರಕ್ಷಿತಾ ಶೆಟ್ಟಿ (Rakshitha Shetty) ಸಹಿಸಿಕೊಳ್ಳುವುದಿಲ್ಲ ಎನಿಸುತ್ತದೆ. ಗಿಲ್ಲಿ ಮೇಲೆ ಅವರಿಗೆ ಪೊಸೆಸಿವ್​ನೆಸ್ ಇರಬಹುದು ಎಂಬ ಅನುಮಾನ ಕೂಡ ಮೂಡುತ್ತದೆ. ಆ ಬಗ್ಗೆ ರಜತ್ ಅವರಿಗೆ ಪ್ರಶ್ನೆ ಕೇಳಲಾಯಿತು. ಇಷ್ಟು ದಿನ ಅತಿಥಿಯಾಗಿ ಬಿಗ್ ಬಾಸ್ ಮನೆಯಲ್ಲಿ ಇದ್ದ ರಜತ್ (Rajath Kishan) ಅವರು ಈಗ ಹೊರಗೆ ಬಂದಿದ್ದಾರೆ. ಟಿವಿ9 ಜೊತೆ ಮಾತನಾಡಿ ಅವರು ಅಸಲಿ ವಿಷಯ ತೆರೆದಿಟ್ಟಿದ್ದಾರೆ. ‘ಗಿಲ್ಲಿಯನ್ನು ರಕ್ಷಿತಾ ಇಷ್ಟಪಡುತ್ತಿಲ್ಲ. ಅವವನ್ನು ಬ್ರೋ ಅಂತ ಅವಳು ಕರೆಯುತ್ತಾಳೆ. ನಾನು ಅದನ್ನು ನೋಡಿದ್ದೇನೆ. ಪೊಸೆಸಿವ್ ಆಗುವ ಅವಶ್ಯಕತೆ ಇಲ್ಲ. ರಕ್ಷಿತಾ ತುಂಬಾ ಮುಗ್ಧೆ. ಅವಳು ತುಂಬಾ ಒಳ್ಳೆಯ ಹುಡುಗಿ. ಅವಳು ಗೆದ್ದರೆ ನಾನೇ ಪಟಾಕಿ ಹೊಡೆಯುತ್ತೇನೆ. ಕೋಪ ಬಂದರೆ ಅವಳು ಮನುಷ್ಯಳೇ ಅಲ್ಲ. ಕಾವ್ಯ ಮತ್ತು ಸ್ಪಂದನಾ ಎಲ್ಲೋ ಟ್ರಿಗರ್ ಮಾಡುತ್ತಾರೆ’ ಎಂದು ರಜತ್ ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link